ನಮ್ಮ ಕ್ರೈಸ್ತ ಜೀವನ
ಚೆನ್ನಾಗಿ ಉತ್ತರ ಕೊಡುವುದು ಹೇಗೆ?
ಚೆನ್ನಾಗಿ ತಯಾರಿಸಿದ ಉತ್ತರಗಳು ಸಭೆಯಲ್ಲಿರುವವರ ಭಕ್ತಿವೃದ್ಧಿ ಮಾಡುತ್ತವೆ. (ರೋಮ 14:19) ಉತ್ತರ ಕೊಡುವವರಿಗೂ ಇದರಿಂದ ಪ್ರಯೋಜನ ಇದೆ. (ಜ್ಞಾನೋ 15:23, 28) ಆದ್ದರಿಂದ ಪ್ರತಿ ಕೂಟದಲ್ಲಿ ಕಡಿಮೆಪಕ್ಷ ಒಂದು ಉತ್ತರವಾದರೂ ಕೊಡಲು ಪ್ರಯತ್ನಿಸಬೇಕು. ನಾವು ಕೈ ಎತ್ತಿದಾಗೆಲ್ಲಾ ಉತ್ತರ ಹೇಳುವ ಅವಕಾಶ ಸಿಗುವುದಿಲ್ಲ. ಆದ್ದರಿಂದ ಅನೇಕ ಉತ್ತರಗಳನ್ನು ತಯಾರಿಸುವುದು ಒಳ್ಳೇದು.
ಉತ್ತರ ಹೇಗಿರಬೇಕು?
ಸರಳವಾಗಿ, ಸ್ಪಷ್ಟವಾಗಿ ಮತ್ತು ಚುಟುಕಾಗಿ ಇರಬೇಕು. ಸಾಧ್ಯವಾದಾಗೆಲ್ಲ, 30 ಸೆಕೆಂಡುಗಳಲ್ಲೇ ಉತ್ತರ ಕೊಡಬೇಕು
ಸ್ವಂತ ಮಾತಿನಲ್ಲಿ ಇರಬೇಕು
ಈಗಾಗಲೇ ಬಂದ ಉತ್ತರವನ್ನು ಪುನಃ ಹೇಳಬಾರದು
ಪ್ರಶ್ನೆಗೆ ಮೊದಲ ಉತ್ತರ ಹೇಳುವ ಅವಕಾಶ ಸಿಕ್ಕಿದಾಗ . . .
ಸರಳವಾಗಿ ಮತ್ತು ನೇರವಾಗಿ ಉತ್ತರ ಕೊಡಿ
ನಂತರ, ಅದೇ ಪ್ರಶ್ನೆಗೆ ಉತ್ತರ ಕೊಡುವಾಗ . . .
ಕೊಡಲಾಗಿರುವ ವಚನ ಚರ್ಚಿಸುತ್ತಿರುವ ವಿಷಯಕ್ಕೆ ಹೇಗೆ ಸಂಬಂಧಪಟ್ಟಿದೆ ಅಂತ ತಿಳಿಸಿ
ನಮ್ಮ ಜೀವನದಲ್ಲಿ ಹೇಗೆ ಅನ್ವಯಿಸಬಹುದು ಅಂತ ತಿಳಿಸಿ
ಆ ವಿಷಯವನ್ನು ಎಲ್ಲೆಲ್ಲಾ ಉಪಯೋಗಿಸಬಹುದು ಅಂತ ವಿವರಿಸಿ
ಮುಖ್ಯ ಅಂಶವನ್ನು ಒತ್ತಿಹೇಳುವಂಥ ಅನುಭವವನ್ನು ಚುಟುಕಾಗಿ ಹೇಳಿ