ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp20 ನಂ. 3 ಪು. 12
  • ಆಶೀರ್ವಾದ ಪಡೆಯಲು ಪ್ರೀತಿ ತೋರಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆಶೀರ್ವಾದ ಪಡೆಯಲು ಪ್ರೀತಿ ತೋರಿಸಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2020
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಪವಿತ್ರ ಗ್ರಂಥದಲ್ಲಿ ದೇವರು ಏನು ಹೇಳ್ತಾನೆ ನೋಡಿ
  • ನೆರೆಯವರನ್ನು ಪ್ರೀತಿಸೋದು ಅಂದ್ರೆ ಏನು?
  • “ಪ್ರೀತಿಯಲ್ಲಿ ನಡೆದುಕೊಳ್ಳಿರಿ”
    ಯೆಹೋವನ ಸಮೀಪಕ್ಕೆ ಬನ್ನಿರಿ
  • ಪ್ರೀತಿ (ಅಗಾಪೆ)—ಅದೇನಲ್ಲ ಮತ್ತು ಅದೇನಾಗಿದೆ
    ಕಾವಲಿನಬುರುಜು—1993
  • ಪ್ರೀತಿ ಅಮೂಲ್ಯವಾದ ಗುಣ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ಸಹೋದರ ಸಹೋದರಿಯರ ಮೇಲಿರೋ ಪ್ರೀತಿ ಜಾಸ್ತಿ ಮಾಡ್ಕೊಳ್ಳಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2020
wp20 ನಂ. 3 ಪು. 12
ಯೇಸು ಹೇಳಿದ ಕಥೆಯಲ್ಲಿದ್ದ ಸಮಾರ್ಯದ ವ್ಯಕ್ತಿ, ಕಳ್ಳರು ಚೆನ್ನಾಗಿ ಹೊಡೆದು ದಾರಿಯ ಬದಿಯಲ್ಲಿ ಬಿಟ್ಟು ಹೋಗಿದ್ದ ಒಬ್ಬ ವ್ಯಕ್ತಿಯ ಗಾಯಕ್ಕೆ ಔಷಧಿ ಹಚ್ಚುತ್ತಿದ್ದಾನೆ.

ಬೇರೆಯವರ ಮೇಲೆ ಪ್ರೀತಿ ಇದ್ದರೆ ಬರೀ ನಮ್ಮ ಒಳಿತನ್ನೇ ನೋಡಲ್ಲ ಬೇರೆಯವರಿಗೂ ಒಳ್ಳೇದು ಮಾಡ್ತೀವಿ

ಆಶೀರ್ವಾದ ಪಡೆಯಲು ಪ್ರೀತಿ ತೋರಿಸಿ

ಮನುಷ್ಯರು ಅಂದಮೇಲೆ ನಾವೆಲ್ಲರೂ ಒಂದೇ ಕುಟುಂಬದವರು. ಹಾಗಾಗಿ ಒಬ್ಬರಿಗೊಬ್ಬರು ಪ್ರೀತಿ ತೋರಿಸಬೇಕು, ಗೌರವ ಕೊಡಬೇಕು. ಆದ್ರೆ ಇವತ್ತು ಜನರಲ್ಲಿ ಪ್ರೀತಿ ಅನ್ನೋದು ಕಣ್ಮರೆಯಾಗಿದೆ. ಇದನ್ನ ದೇವರು ಇಷ್ಟಪಡ್ತಾನಾ?

ಪವಿತ್ರ ಗ್ರಂಥದಲ್ಲಿ ದೇವರು ಏನು ಹೇಳ್ತಾನೆ ನೋಡಿ

“ನಿಮ್ಮ ನೆರೆಯವರನ್ನು ನಿಮ್ಮಂತೆಯೇ ಪ್ರೀತಿಸಬೇಕು.”—ಯಾಜಕಕಾಂಡ 19:18.

“ನಿಮ್ಮ ವೈರಿಗಳನ್ನು ಪ್ರೀತಿಸುತ್ತಾ ಇರಿ.”—ಮತ್ತಾಯ 5:44.

ನೆರೆಯವರನ್ನು ಪ್ರೀತಿಸೋದು ಅಂದ್ರೆ ಏನು?

ಪವಿತ್ರ ಗ್ರಂಥದ 1 ಕೊರಿಂಥ 13:4-7 ರಲ್ಲಿ ಪ್ರೀತಿ ಬಗ್ಗೆ ದೇವರು ಏನು ತಿಳಿಸಿದ್ದಾನೆ ನೋಡಿ:

‘ಪ್ರೀತಿ ತಾಳ್ಮೆಯುಳ್ಳದ್ದು, ದಯೆಯುಳ್ಳದ್ದೂ ಆಗಿದೆ.’

ಯೋಚಿಸಿ: ನೀವು ತಪ್ಪು ಮಾಡಿದಾಗಲೂ ಬೇರೆಯವರು ನಿಮ್ಮ ಹತ್ರ ದಯೆ ತಾಳ್ಮೆಯಿಂದ ನಡಕೊಂಡ್ರೆ ನಿಮಗೆ ಹೇಗನ್ಸುತ್ತೆ?

‘ಪ್ರೀತಿ ಹೊಟ್ಟೆಕಿಚ್ಚು ಪಡೋದಿಲ್ಲ.’

ಯೋಚಿಸಿ: ಬೇರೆಯವರು ನಿಮ್ಮ ಬಗ್ಗೆ ಅನುಮಾನ ಅಥವಾ ಹೊಟ್ಟೆಕಿಚ್ಚು ಪಡುತ್ತಾ ಇದ್ದರೆ ನಿಮಗೆ ಹೇಗನ್ಸುತ್ತೆ?

ಪ್ರೀತಿ “ಸ್ವಹಿತವನ್ನು ಹುಡುಕುವುದಿಲ್ಲ.”

ಯೋಚಿಸಿ: ಬೇರೆಯವರು ತಾವು ಹೇಳಿದ್ದೇ ಸರಿ ಅಂತ ಅಂದುಕೊಳ್ಳದೆ ನಿಮ್ಮ ಮಾತನ್ನೂ ಕೇಳಿದಾಗ ನಿಮಗೆ ಹೇಗನ್ಸುತ್ತೆ?

ಪ್ರೀತಿ “ಅನ್ಯಾಯದ ಲೆಕ್ಕವನ್ನು ಇಟ್ಟುಕೊಳ್ಳುವುದಿಲ್ಲ.”

ಯೋಚಿಸಿ: ಜನರು ತಪ್ಪು ಮಾಡಿ ಅದನ್ನ ತಿದ್ದುಕೊಂಡಾಗ ದೇವರು ಅವರನ್ನ ಕ್ಷಮಿಸುತ್ತಾನೆ. ‘ಆತನು ಯಾವಾಗಲೂ ತಪ್ಪುಹುಡುಕುವವನಲ್ಲ; ಕೋಪಿಸುವವನಲ್ಲ.’ (ಕೀರ್ತನೆ 103:9) ನಾವು ಕೆಲವೊಮ್ಮೆ ಬೇರೆಯವರಿಗೆ ನೋವು ಆಗೋ ಹಾಗೆ ನಡ್ಕೊಂಡಿರುತ್ತೀವಿ. ಆದ್ರೂ ಅವರು ನಮ್ಮನ್ನ ಕ್ಷಮಿಸಿದಾಗ ಎಷ್ಟು ಖುಷಿ ಆಗುತ್ತೆ ಅಲ್ವಾ? ಹಾಗಾಗಿ ನಮಗೂ ಯಾರಾದ್ರೂ ನೋವು ಮಾಡಿದ್ರೆ ಅವರನ್ನ ಕ್ಷಮಿಸಲು ಯಾವಾಗಲೂ ಸಿದ್ಧರಾಗಿರಬೇಕು.—ಕೀರ್ತನೆ 86:5.

ಪ್ರೀತಿ “ಅನೀತಿಯನ್ನು ಕಂಡು ಹರ್ಷಿಸುವುದಿಲ್ಲ.”

ಯೋಚಿಸಿ: ನೀವು ಕಷ್ಟದಲ್ಲಿ ಇದ್ದಾಗ ಬೇರೆಯವರು ಅದನ್ನ ನೋಡಿ ಖುಷಿಪಟ್ಟರೆ ಹೇಗನ್ಸುತ್ತೆ? ಬೇಜಾರಾಗುತ್ತೆ ಅಲ್ವಾ? ಹಾಗಾಗಿ ಬೇರೆಯವರು ಕಷ್ಟದಲ್ಲಿ ಇದ್ದಾಗ, ಒಂದು ವೇಳೆ ಅವರು ನಮಗೆ ನೋವು ಮಾಡಿದ್ರೂನೂ ಅವರನ್ನ ನೋಡಿ ಖುಷಿಪಡಬಾರದು.

ದೇವರಿಂದ ಆಶೀರ್ವಾದ ಪಡೆಯಲು ಭೇದ-ಭಾವ ಮಾಡದೆ ಎಲ್ಲರಿಗೂ ಪ್ರೀತಿ ತೋರಿಸಬೇಕು. ಆ ತರ ಪ್ರೀತಿ ತೋರಿಸೋ ಒಂದು ವಿಧ ಬೇರೆಯವರಿಗೆ ಸಹಾಯ ಮಾಡೋದು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ