ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು
ಫೆಬ್ರವರಿ 6-12
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
it-1 643 ¶4-5
ವಿಚ್ಛೇದನ
ಸಾಂಕೇತಿಕ ವಿಚ್ಛೇದನ. ಬೈಬಲಿನಲ್ಲಿ ವಿವಾಹ ಸಂಬಂಧವನ್ನು ಸಾಂಕೇತಿಕವಾಗಿ ಉಪಯೋಗಿಸಲಾಗಿದೆ. (ಯೆಶಾ 54:1, 5, 6; 62:1-6) ಹಾಗೆಯೇ, ವಿಚ್ಛೇದನವನ್ನು ಅಥವಾ ಹೆಂಡತಿಯನ್ನು ತ್ಯಜಿಸುವುದನ್ನು ಸಹ ಸಾಂಕೇತಿಕವಾಗಿ ಉಪಯೋಗಿಸಲಾಗಿದೆ.—ಯೆರೆ 3:8.
ಕ್ರಿ.ಪೂ. 607ರಲ್ಲಿ ಯೆಹೂದ ರಾಜ್ಯ ಕೆಡವಲ್ಪಟ್ಟು ಯೆರೂಸಲೇಮ್ ನಾಶವಾಯಿತು. ಅಲ್ಲಿನ ನಿವಾಸಿಗಳನ್ನು ಸೆರೆವಾಸಿಗಳಾಗಿ ಬಾಬೆಲಿಗೆ ಒಯ್ಯಲಾಯಿತು. ಇದಕ್ಕೂ ಅನೇಕ ವರ್ಷಗಳ ಮುಂಚೆಯೇ ಯೆಹೋವನು ಸೆರೆವಾಸಿಗಳಾಗಲಿದ್ದ ಯೆಹೂದ್ಯರಿಗೆ ಪ್ರವಾದನಾತ್ಮಕವಾಗಿ, “ನಾನು ನಿಮ್ಮ ತಾಯಿಯನ್ನು ತ್ಯಜಿಸಿದ ತ್ಯಾಗಪತ್ರವು ಎಲ್ಲಿ?” ಎಂದಿದ್ದನು. (ಯೆಶಾ 50:1) ಅವರ ತಾಯಿ ಅಥವಾ ಇಡೀ ಜನಾಂಗವನ್ನು ನ್ಯಾಯವಾದ ಕಾರಣಕ್ಕಾಗಿ ತ್ಯಜಿಸಲಾಗಿತ್ತು. ಇಲ್ಲಿ ಯೆಹೋವನು ತನ್ನ ಒಡಂಬಡಿಕೆಯನ್ನು ಮುರಿದು ವಿಚ್ಛೇದನ ಕೊಡಲು ಯೋಜಿಸಲಿಲ್ಲ. ಬದಲಿಗೆ ಅವಳು ಅಥವಾ ತಾಯಿಯೇ ಧರ್ಮಶಾಸ್ತ್ರದ ಒಡಂಬಡಿಕೆಗೆ ವಿರುದ್ಧವಾಗಿ ನಡೆದಿದ್ದರಿಂದ ಆಕೆಯನ್ನು ತ್ಯಜಿಸಲಾಯಿತು. ಆದರೆ ಉಳಿದ ಇಸ್ರಾಯೇಲ್ಯರು ಪಶ್ಚಾತ್ತಾಪಪಟ್ಟು ಯೆಹೋವನೊಂದಿಗೆ ಸಾಂಕೇತಿಕ ಗಂಡನ ಸಂಬಂಧವನ್ನು ಸ್ವದೇಶದಲ್ಲಿ ಪುನಃಸ್ಥಾಪಿಸುವಂತೆ ಪ್ರಾರ್ಥಿಸಿದರು. ಮೊದಲೇ ಪ್ರವಾದಿಸಿದಂತೆ ಯೆಹೋವನು ತನ್ನ ಹೆಸರಿಗೋಸ್ಕರ ತನ್ನ ಜನರನ್ನು 70 ವರ್ಷಗಳ ಸೆರೆವಾಸದ ಮಕ್ತಾಯದಲ್ಲಿ ಅಂದರೆ ಕ್ರಿ.ಪೂ. 537ರಲ್ಲಿ ಸ್ವದೇಶಕ್ಕೆ ಕರೆದುಕೊಂಡು ಬಂದನು.—ಕೀರ್ತ 137:1-9; ವಿವಾಹ ಎಂಬಲ್ಲಿ ನೋಡಿ.