ನಮ್ಮ ಕ್ರೈಸ್ತ ಜೀವನ
ಆರಾಧನಾ ಸ್ಥಳಗಳನ್ನು ಸುಸ್ಥಿತಿಯಲ್ಲಿಡಿ
ನಮ್ಮ ರಾಜ್ಯ ಸಭಾಗೃಹಗಳು ಸಾಮಾನ್ಯ ಕಟ್ಟಡಗಳಲ್ಲ; ಅವು ಯೆಹೋವನಿಗೆ ಸಮರ್ಪಿಸಲಾದ ನಮ್ಮ ಆರಾಧನಾ ಸ್ಥಳಗಳಾಗಿವೆ. ನಮ್ಮಲ್ಲಿ ಪ್ರತಿಯೊಬ್ಬರು ರಾಜ್ಯ ಸಭಾಗೃಹವನ್ನು ಸುಸ್ಥಿತಿಯಲ್ಲಿಡಲು ಹೇಗೆ ಸಹಾಯ ಮಾಡಬಹುದು? ಆರಾಧನಾ ಸ್ಥಳಗಳನ್ನು ಸುಸ್ಥಿತಿಯಲ್ಲಿಡಿ ಎಂಬ ವಿಡಿಯೋ ನೋಡಿದ ನಂತರ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿ:
ರಾಜ್ಯ ಸಭಾಗೃಹಗಳ ಉದ್ದೇಶವೇನು?
ರಾಜ್ಯ ಸಭಾಗೃಹವನ್ನು ಶುಚಿಯಾಗಿ, ಸುಸ್ಥಿತಿಯಲ್ಲಿಡುವುದು ಯಾಕೆ ಪ್ರಾಮುಖ್ಯ?
ರಾಜ್ಯ ಸಭಾಗೃಹವನ್ನು ಯಾರು ಸುಸ್ಥಿತಿಯಲ್ಲಿಡುತ್ತಾರೆ?
ಸುರಕ್ಷತೆ ಏಕೆ ಪ್ರಾಮುಖ್ಯ? ಸುರಕ್ಷತೆಗಾಗಿ ಮಾಡಿದ ಯಾವೆಲ್ಲ ವಿಷಯಗಳನ್ನು ನೀವು ಈ ವಿಡಿಯೋದಲ್ಲಿ ಗಮನಿಸಿದಿರಿ?
ನಮ್ಮ ಕಾಣಿಕೆಗಳ ಮೂಲಕ ನಾವು ಹೇಗೆ ಯೆಹೋವನಿಗೆ ಮಹಿಮೆ ತರಬಹುದು?