ನಮ್ಮ ಕ್ರೈಸ್ತ ಜೀವನ
ನೀವು ತೋರಿಸಿದ ಪ್ರೀತಿಯನ್ನು ಯೆಹೋವನು ಮರೆಯುವುದಿಲ್ಲ
ನೀವು ತೋರಿಸಿದ ಪ್ರೀತಿಯನ್ನು ಯೆಹೋವನು ಮರೆಯುವುದಿಲ್ಲ ಎಂಬ ವಿಡಿಯೋ ನೋಡಿ. ನಂತರ, ಈ ಪ್ರಶ್ನೆಗಳನ್ನು ಕೇಳಿ:
ವಯಸ್ಸಾಗುತ್ತಾ ಹೋದಂತೆ ಯಾವ ಸವಾಲುಗಳು ಬರುತ್ತವೆ?
ವೃದ್ಧರಲ್ಲಿ ಸಾಮಾನ್ಯವಾಗಿ ಯಾವ ಉತ್ತಮ ಗುಣ ಇರುತ್ತದೆ?
ನಿಮಗೆ ವಯಸ್ಸಾಗಿರುವುದಾದರೆ, ಯಾಜಕಕಾಂಡ 19:32 ಮತ್ತು ಜ್ಞಾನೋಕ್ತಿ 16:31 ನಿಮ್ಮನ್ನು ಹೇಗೆ ಉತ್ತೇಜಿಸುತ್ತದೆ?
ವೃದ್ಧರು ಮಾಡುವ ಅಲ್ಪ ಸೇವೆಯನ್ನು ಯೆಹೋವನು ಹೇಗೆ ವೀಕ್ಷಿಸುತ್ತಾನೆ?
ನಮಗೆ ವಯಸ್ಸಾದರೂ ನಾವೇನು ಮಾಡಬೇಕೆಂದು ಯೆಹೋವನು ಬಯಸುತ್ತಾನೆ?
ವೃದ್ಧರು ಯುವ ಜನರನ್ನು ಹೇಗೆ ಉತ್ತೇಜಿಸಬಹುದು?
ಇತ್ತೀಚೆಗೆ ಯಾರಾದರೂ ವೃದ್ಧ ಸಹೋದರ ಇಲ್ಲವೆ ಸಹೋದರಿ ನಿಮ್ಮನ್ನು ಹೇಗೆ ಪ್ರೋತ್ಸಾಹಿಸಿದರು?