ಬೈಬಲಿನಲ್ಲಿರುವ ರತ್ನಗಳು | ಪ್ರಲಾಪಗಳು 1-5
ಕಾಯುವ ಮನೋಭಾವ ತಾಳಿಕೊಳ್ಳಲು ಸಹಾಯ ಮಾಡುತ್ತದೆ
ತೀವ್ರ ಕಷ್ಟದ ಮಧ್ಯದಲ್ಲೂ ಒಳ್ಳೇ ಮನೋಭಾವದಿಂದ ತಾಳಿಕೊಳ್ಳಲು ಯೆರೆಮೀಯನಿಗೆ ಯಾವುದು ಸಹಾಯ ಮಾಡಿತು?
ಯೆಹೋವನು ತನ್ನ ಜನರಲ್ಲಿ ಯಾರು ಪಶ್ಚಾತ್ತಾಪಪಡುತ್ತಾರೋ ಅವರ ಕಡೆಗೆ ‘ಬಾಗುತ್ತಾನೆ’ ಮತ್ತು ಅವರನ್ನು ದುಃಖಕರ ಪರಿಸ್ಥಿತಿಯಿಂದ ಹೊರತರುತ್ತಾನೆ ಎಂಬ ನಂಬಿಕೆ ಯೆರೆಮೀಯನಿಗಿತ್ತು
ಯೆರೆಮೀಯನು ‘ಯೌವನದಲ್ಲೇ ನೊಗಹೊರಲು’ ಕಲಿತುಕೊಂಡಿದ್ದನು. ಯೌವನದಲ್ಲೇ ನಂಬಿಕೆಯ ಪರೀಕ್ಷೆಗಳನ್ನು ತಾಳಿಕೊಳ್ಳುವುದು ಒಳ್ಳೇದು. ಇದು ಒಬ್ಬನು ಮುಂದೆ ತನ್ನ ಜೀವನದಲ್ಲಿ ಬರಬಹುದಾದ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಲು ಸಿದ್ಧಮಾಡುತ್ತದೆ