ನಮ್ಮ ಕ್ರೈಸ್ತ ಜೀವನ
ನಾನು ಯಾವಾಗ ಸಹಾಯಕ ಪಯನೀಯರ್ ಸೇವೆ ಮಾಡಬಹುದು?
ಯೆಹೋವನ ಜನರು ಸ್ವಇಚ್ಛೆಯಿಂದ ಅರ್ಪಣೆಗಳನ್ನು ಅರ್ಪಿಸುತ್ತಾರೆ ಎಂದು ಯೆಹೆಜ್ಕೇಲನ ದೇವಾಲಯದ ದರ್ಶನದಿಂದ ಗೊತ್ತಾಗುತ್ತದೆ. ನಾವು ವೈಯಕ್ತಿಕವಾಗಿ ಹೇಗೆ ಸ್ತೋತ್ರಯಜ್ಞಗಳನ್ನು ಅರ್ಪಿಸಬಹುದು?—ಇಬ್ರಿ 13:15, 16.
ಇದನ್ನು ಮಾಡುವ ಒಂದು ಅತ್ಯುತ್ತಮ ವಿಧ ಸಹಾಯಕ ಪಯನೀಯರ್ ಸೇವೆ ಮಾಡುವುದೇ ಆಗಿದೆ. 2018 ರ ಸೇವಾ ವರ್ಷದಲ್ಲಿ, ಐದು ಶನಿವಾರಗಳು ಅಥವಾ ಐದು ಭಾನುವಾರಗಳಿರುವ ಅನೇಕ ತಿಂಗಳುಗಳಿವೆ. ಯಾರು ಪೂರ್ಣ ಸಮಯದ ಉದ್ಯೋಗವನ್ನು ಮಾಡುತ್ತಾರೋ ಮತ್ತು ಹೆಚ್ಚಾಗಿ ವಾರಾಂತ್ಯಗಳಲ್ಲಿ ಸೇವೆಯಲ್ಲಿ ಭಾಗವಹಿಸುತ್ತಾರೋ ಅವರಿಗೆ ಇದು ತುಂಬ ಸಹಾಯಮಾಡುತ್ತದೆ. ಜೊತೆಗೆ, ಪ್ರಚಾರಕರು ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಮತ್ತು ಸರ್ಕಿಟ್ ಮೇಲ್ವಿಚಾರಕರ ಭೇಟಿಯ ಸಮಯದಲ್ಲಿ 30 ಅಥವಾ 50 ತಾಸು ಸೇವೆ ಮಾಡಲು ಆಯ್ಕೆ ಮಾಡಬಹುದು.
ಸಹಾಯಕ ಪಯನೀಯರ್ ಸೇವೆ ಮಾಡಲು ನಮ್ಮ ಪರಿಸ್ಥಿತಿ ಅನುಮತಿಸದಿರುವಲ್ಲಿ ಏನು ಮಾಡಬಹುದು? ಶುಶ್ರೂಷೆಯ ಗುಣಮಟ್ಟವನ್ನು ಉತ್ತಮಗೊಳಿಸಲು ಮತ್ತು ಅದರ ಪ್ರಮಾಣವನ್ನು ಹೆಚ್ಚಿಸಲು ಪ್ರಯತ್ನಿಸಿ. ನಾವು ಯಾವುದೇ ಸನ್ನಿವೇಶದಲ್ಲಿರಲಿ, ಯೆಹೋವನ ಮೇಲಿನ ಪ್ರೀತಿಯಿಂದ ಉತ್ತೇಜಿಸಲ್ಪಟ್ಟು 2018 ರ ಸೇವಾ ವರ್ಷದಲ್ಲಿ ನಾವು ಆತನಿಗೆ ಕೈಲಾದದರಲ್ಲೇ ಅತ್ಯುತ್ತಮವಾದದ್ದನ್ನು ಕೊಡೋಣ.—ಹೋಶೇ 14:2.
ಸಬೀನಾ ಹರ್ನಾಂಡಿಸ್‌ಳ ಹುರುಪನ್ನು ನಾನು ಹೇಗೆ ಅನುಕರಿಸಬಹುದು?
ಯೆಹೋವನು ನನ್ನ ಜೊತೆ ಇದ್ದರೆ ಏನು ಬೇಕಾದ್ರೂ ಮಾಡಬಲ್ಲೆ ಎಂಬ ವಿಡಿಯೋ ನೋಡಿ. ನಂತರ, ಈ ಪ್ರಶ್ನೆಗಳನ್ನು ಉತ್ತರಿಸಿ:
ಯೆಹೋವನ ಸೇವೆಯನ್ನು ಹೆಚ್ಚು ಮಾಡಲು ಸಬೀನಾಳನ್ನು ಯಾವುದು ಉತ್ತೇಜಿಸಿತು?
ಸಬೀನಾಳ ಮಾದರಿ ನಿಮ್ಮನ್ನು ಹೇಗೆ ಉತ್ತೇಜಿಸಿತು?
2018 ರ ಸೇವಾ ವರ್ಷದ ಯಾವ ತಿಂಗಳಿನಲ್ಲಿ (ತಿಂಗಳುಗಳಲ್ಲಿ) ಸಹಾಯಕ ಪಯನೀಯರ್ ಸೇವೆ ಮಾಡಲು ನಿಮ್ಮಿಂದ ಸಾಧ್ಯ?