ನಮ್ಮ ಕ್ರೈಸ್ತ ಜೀವನ
ಯಾವುದು ನಿಜ ಪ್ರೀತಿ?
ವಿವಾಹಬಂಧ ಒಂದು ಗಂಡು ಮತ್ತು ಒಂದು ಹೆಣ್ಣಿನ ಮಧ್ಯೆ ಶಾಶ್ವತ ಬಂಧ ಆಗಿರಬೇಕೆಂದು ಯೆಹೋವನು ಏರ್ಪಡಿಸಿದನು. (ಆದಿ 2:22-24) ಲೈಂಗಿಕ ಅನೈತಿಕತೆ ನಡೆದರೆ ಮಾತ್ರ ವಿಚ್ಛೇದನ ಕೊಡುವ ಆಯ್ಕೆ ಇದೆ. (ಮಲಾ 2:16; ಮತ್ತಾ 19:9) ನಮ್ಮ ಮದುವೆ ಜೀವನ ಸಂತೋಷವಾಗಿರಬೇಕೆಂದು ಯೆಹೋವನು ಬಯಸುತ್ತಾನೆ. ಆದ್ದರಿಂದ ಬಾಳಸಂಗಾತಿಯನ್ನು ವಿವೇಕದಿಂದ ಆರಿಸಿ, ಮುಂದೆ ಸಂತೋಷಕರ ಮದುವೆ ಜೀವನ ನಡೆಸಲು ಕ್ರೈಸ್ತರಿಗೆ ಸಹಾಯ ಮಾಡುವ ತತ್ವಗಳನ್ನು ಆತನು ಕೊಟ್ಟಿದ್ದಾನೆ.—ಪ್ರಸಂ 5:4-6.
ಯಾವುದು ನಿಜ ಪ್ರೀತಿ? ವಿಡಿಯೋವನ್ನು ಮೊದಲೇ ನೋಡಿ ಬನ್ನಿ. ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿ:
ಫ್ರಾಂಕ್ ಮತ್ತು ಲಿಲ್ಲಿ ತಮ್ಮ ಮಗಳಾದ ಜೆನಿಯನ್ನು ತಿದ್ದಲು ಹೇಳಿದ ಮಾತು ವಿವೇಕ ಮತ್ತು ಪ್ರೀತಿಯಿಂದ ಕೂಡಿದ್ದಾಗಿತ್ತು ಎಂದು ಯಾಕೆ ಹೇಳಬಹುದು?
ನೀವು ಮದುವೆಯಾಗಬೇಕೆಂದಿರುವ ವ್ಯಕ್ತಿಯನ್ನು ಬದಲಾಯಿಸಬಲ್ಲಿರಿ ಎಂದು ನೆನಸುವುದು ಏಕೆ ಮೂರ್ಖತನವಾಗಿದೆ?
ಪೌಲ್ ಮತ್ತು ಪ್ರೆಸಿಲ್ಲಾ ಜೆನಿಗೆ ಯಾವ ಬುದ್ಧಿವಾದ ಕೊಟ್ಟರು?
ಜ್ಯಾಕ್ ಮತ್ತು ಮೊನಿಕಾರ ಮದುವೆ ಜೀವನದಲ್ಲಿ ಸಮಸ್ಯೆಗಳು ಯಾಕೆ ಬಂದವು?
ಜಾನ್ ಮತ್ತು ಜೆನಿ ಯಾವ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು?
ಒಬ್ಬರನ್ನು ಮದುವೆಯಾಗುವ ಮುಂಚೆಯೇ ಅವರ ‘ಹೃದಯದ ಗುಪ್ತ ವ್ಯಕ್ತಿಯನ್ನು’ ಯಾಕೆ ತಿಳಿದುಕೊಳ್ಳಬೇಕು? (1ಪೇತ್ರ 3:4)
ಯಾವುದನ್ನು ನಿಜ ಪ್ರೀತಿ ಎನ್ನಬಹುದು? (1ಕೊರಿಂ 13:4-8)