ನಮ್ಮ ಕ್ರೈಸ್ತ ಜೀವನ
ಸತ್ಯ ಕ್ರೈಸ್ತರ ಗುರುತು ಪ್ರೀತಿ—ಅಮೂಲ್ಯವಾದ ಐಕ್ಯತೆಯನ್ನು ಕಾಪಾಡಿ
ಯಾಕೆ ಪ್ರಾಮುಖ್ಯ: ತನ್ನ ಶಿಷ್ಯರು “ಐಕ್ಯದಲ್ಲಿ ಪರಿಪೂರ್ಣರಾಗಿರಲಿ” ಎಂದು ಯೇಸು, ಸಾಯುವುದಕ್ಕೆ ಹಿಂದಿನ ರಾತ್ರಿ ಪ್ರಾರ್ಥಿಸಿದನು. (ಯೋಹಾ 17:23) ನಾವು ಐಕ್ಯವಾಗಿರಬೇಕೆಂದರೆ ಪ್ರೀತಿಯಿಂದ ನಡೆದುಕೊಳ್ಳಬೇಕು ಮತ್ತು ‘ಅನ್ಯಾಯದ ಲೆಕ್ಕವನ್ನು ಇಟ್ಟುಕೊಳ್ಳಬಾರದು.’—1ಕೊರಿಂ 13:5.
ಹೇಗೆ ಮಾಡುವುದು:
ಇತರರಲ್ಲಿರುವ ಒಳ್ಳೇದನ್ನೇ ನೋಡುವ ಮೂಲಕ ಯೆಹೋವನನ್ನು ಅನುಕರಿಸಿ
ಉದಾರವಾಗಿ ಕ್ಷಮಿಸಿ
ಒಂದು ಮನಸ್ತಾಪವನ್ನು ಬಗೆಹರಿಸಿದ ನಂತರ ಮತ್ತೆ ಅದರ ಬಗ್ಗೆ ಮಾತಾಡಬೇಡಿ.—ಜ್ಞಾನೋ 17:9
‘ನಿಮ್ಮ ಮಧ್ಯೆ ಪ್ರೀತಿಯಿರಲಿ’—ಅನ್ಯಾಯದ ಲೆಕ್ಕವನ್ನು ಇಟ್ಟುಕೊಳ್ಳಬೇಡಿ ಎಂಬ ವಿಡಿಯೋ ನೋಡಿ ಮತ್ತು ನಂತರ ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿ:
ಈ ವಿಡಿಯೋವಿನ ಮೊದಲ ಭಾಗದಲ್ಲಿ ಹೆಲೆನ್ ‘ಅನ್ಯಾಯದ ಲೆಕ್ಕವನ್ನು ಇಟ್ಟುಕೊಂಡಿದ್ದಳೆಂದು’ ಹೇಗೆ ಗೊತ್ತಾಗುತ್ತದೆ?
ಎರಡನೇ ಭಾಗದಲ್ಲಿ ಹೆಲೆನ್ ಹೇಗೆ ತನ್ನ ಮನಸ್ಸಿನಲ್ಲಿ ಬಂದ ತಪ್ಪಾದ ಯೋಚನೆಯನ್ನು ಹೊಡೆದೋಡಿಸಿ ಯೋಚಿಸುವ ರೀತಿಯನ್ನು ಸರಿಪಡಿಸಿಕೊಂಡಳು?
ಹೆಲೆನ್ ಹೇಗೆ ಸಭೆಯ ಐಕ್ಯತೆ ಕಾಪಾಡಿದಳು?
ನಾವು ಅನ್ಯಾಯದ ಲೆಕ್ಕವನ್ನಿಡುವುದಾದರೆ ಯಾರಿಗೆ ಹೆಚ್ಚು ಹಾನಿ ಮಾಡುತ್ತೇವೆ?