ದೈವಿಕ ಬೋಧನೆಯ ಮೂಲಕ ಐಕ್ಯರು—ನಿಜವಾದ ಸಹೋದರ ಐಕ್ಯದ ಒಂದು ನೋಟ
ಒಬ್ಬ ಸರ್ಕಿಟ್ ಮೇಲ್ವಿಚಾರಕನು, ಇನ್ನೂ ಸಭಾ ಕೂಟಗಳಿಗೆ ಹಾಜರಾಗಲು ಆರಂಭಿಸಿರದ ಒಬ್ಬ ಮಹಿಳೆಯೊಂದಿಗೆ ನಡೆಸಲ್ಪಡುವ ಒಂದು ಬೈಬಲ್ ಅಧ್ಯಯನಕ್ಕೆ ಹೋದನು. ದೈವಿಕ ಬೋಧನೆಯ ಮೂಲಕ ಐಕ್ಯರು (ಇಂಗ್ಲಿಷ್) ಎಂಬ ವಿಡಿಯೋವನ್ನು ನೋಡಲು ಬರುವಂತೆ ಅವನು ಆ ಮಹಿಳೆಯನ್ನು ಆಮಂತ್ರಿಸಿದನು. ಆ ವಾರ ಅವಳು ಒಂದು ಕೂಟಕ್ಕೆ ಹಾಜರಾದಳು ಮತ್ತು ತಾನು ಅಲ್ಲಿ ಬಂದು ತುಂಬ ಸಂತೋಷಪಟ್ಟೆ ಎಂದು ಹೇಳಿದಳು. ಈ ವಿಡಿಯೋದಿಂದ ಇಷ್ಟು ಕ್ಷಿಪ್ರವಾದ ಫಲಿತಾಂಶವು ಏಕೆ ಬಂತು? ಹಿಂಸಾತ್ಮಕ ಮತ್ತು ದ್ವೇಷಭರಿತ ಲೋಕದ ಮಧ್ಯೆ ನಮ್ಮ ಅತ್ಯಮೂಲ್ಯವಾದ ಸಹೋದರ ಐಕ್ಯದ ವರ್ಣನೆಯಿಂದ ಅವಳು ಪ್ರಭಾವಿತಳಾದಳು.—ಯೋಹಾ. 13:35.
ಲೋಕದಾದ್ಯಂತ ಯೆಹೋವನ ಸಾಕ್ಷಿಗಳಿಂದ ಅನುಭವಿಸಲ್ಪಡುವ ಶಾಂತಿ ಮತ್ತು ಪ್ರೀತಿಯನ್ನು ನೋಡಲು ಮತ್ತು ಗ್ರಹಿಸಲು ಈ ವಿಡಿಯೋವನ್ನು ನೋಡಿರಿ. ನಂತರ ಈ ಪ್ರಶ್ನೆಗಳ ಕುರಿತು ಮನನಮಾಡಿ:
(1) “ದೈವಿಕ ಬೋಧನೆ” ಎಂಬ ಮುಖ್ಯವಿಷಯವು ಏಕೆ 1993-94ರ ಅಧಿವೇಶನಗಳಿಗೆ ಸೂಕ್ತವಾದ ಮುಖ್ಯವಿಷಯವಾಗಿತ್ತು?—ಮೀಕ 4:2.
(2) ಕೆಲವು ಕುಟುಂಬಗಳಿಗೆ ಬೈಬಲ್ ಸತ್ಯವು ಏನನ್ನು ಅರ್ಥೈಸಿದೆ? ನಿಮ್ಮ ಕುಟುಂಬಕ್ಕೆ ಏನನ್ನು ಅರ್ಥೈಸಿದೆ?
(3) ಯೆಹೋವನಿಂದ ಬೋಧಿಸಲ್ಪಡುವುದು ಏಕೆ ಪ್ರಾಮುಖ್ಯವಾದದ್ದಾಗಿದೆ?—ಕೀರ್ತ. 143:10.
(4) ದೊಡ್ಡ ಅಂತಾರಾಷ್ಟ್ರೀಯ ಅಧಿವೇಶನಗಳನ್ನು ಏರ್ಪಡಿಸುವುದರಲ್ಲಿ ಯಾವ ರೀತಿಯ ಪಂಥಾಹ್ವಾನಗಳನ್ನು ಎದುರಿಸಬೇಕಾಗಿರುತ್ತದೆ?
(5) ನೀವು ಹಾಜರಾಗಿರುವ ಕ್ರಿಸ್ತೀಯ ಅಧಿವೇಶನಗಳಲ್ಲಿ ಕೀರ್ತನೆ 133:1 ಮತ್ತು ಮತ್ತಾಯ 5:3 ನಿಜವಾಗಿ ಕಂಡುಬಂದಿರುವುದನ್ನು ನೀವು ಹೇಗೆ ನೋಡಿದ್ದೀರಿ?
(6) ದೈವಿಕ ಬೋಧನೆಯ ಶಕ್ತಿಯುತ ಪರಿಣಾಮಗಳ ಯಾವ ಪ್ರತ್ಯಕ್ಷ ರುಜುವಾತುಗಳಿವೆ?—ಪ್ರಕ. 7:9.
(7) ಸತ್ಯ ಕ್ರೈಸ್ತರ ನಡುವೆ ಹಿಂದೆಂದೂ ನಡೆದಿರದಷ್ಟು ಅತಿ ದೊಡ್ಡ ದಾಖಲಿತ ಸಾಮುದಾಯಿಕ ದೀಕ್ಷಾಸ್ನಾನವು ಯಾವುದಾಗಿತ್ತು?
(8) ಮೀಕ, ಪೇತ್ರ ಮತ್ತು ಯೇಸುವಿನ ಯಾವ ಮಾತುಗಳು ಯೆಹೋವನ ಸಾಕ್ಷಿಗಳ ಮಧ್ಯೆ ನೆರವೇರುತ್ತಿವೆ?
(9) ಒಂದು ಸಂತೋಷಭರಿತ, ಐಕ್ಯ ಮಾನವ ಕುಟುಂಬವು ಕೇವಲ ಕನಸಾಗಿರುವುದಿಲ್ಲ ಎಂಬುದನ್ನು ಯಾವುದು ನಿಮಗೆ ರುಜುಪಡಿಸುತ್ತದೆ?
(10) ಈ ವಿಡಿಯೋವನ್ನು ನೀವು ಯಾರಿಗೆ ತೋರಿಸಲಿರುವಿರಿ ಮತ್ತು ಏಕೆ?
ಈ ವಿಡಿಯೋವನ್ನು ನೋಡಿದ ನಂತರ, ಒಬ್ಬ ಸಹೋದರಿಯು ಸುಂದರವಾಗಿ ಸಂಕ್ಷೇಪಿಸಿ ಹೇಳಿದ್ದು: “ಲೋಕವ್ಯಾಪಕವಾಗಿ ಅನೇಕ ಕ್ರೈಸ್ತ ಸಹೋದರ ಸಹೋದರಿಯರು ಈ ಕ್ಷಣವೂ ಯೆಹೋವನನ್ನು ನಿಷ್ಠಾವಂತರಾಗಿ ಸೇವಿಸುತ್ತಿದ್ದಾರೆ ಎಂಬುದನ್ನು ಹೆಚ್ಚಾಗಿ ಮನಸ್ಸಿನಲ್ಲಿಟ್ಟುಕೊಳ್ಳಲು ಈ ವಿಡಿಯೋ ನನಗೆ ಸಹಾಯಮಾಡುವುದು. . . . ನಮ್ಮ ಸಹೋದರ ಐಕ್ಯವು ಎಷ್ಟು ಅತ್ಯಮೂಲ್ಯವಾದದ್ದಾಗಿದೆ!”—ಎಫೆ. 4:3.