ನಮ್ಮ ಕ್ರೈಸ್ತ ಜೀವನ
‘ಯೆಹೋವನಿಗೋಸ್ಕರ ಕಾಣಿಕೆಯನ್ನರ್ಪಿಸಿ’
‘ಯೆಹೋವನಿಗೋಸ್ಕರ ಕಾಣಿಕೆಯನ್ನು’ ನಾವು ಹೇಗೆ ಕೊಡಬಲ್ಲೆವು? (1ಪೂರ್ವ 29:5, 9, 14) ಸ್ಥಳೀಯವಾಗಿ ಮತ್ತು ಲೋಕವ್ಯಾಪಕವಾಗಿ ನಡೆಯುತ್ತಿರುವ ಕೆಲಸವನ್ನು ಬೆಂಬಲಿಸಲಿಕ್ಕಾಗಿ ಸ್ವಯಂಪ್ರೇರಿತ ದಾನಗಳನ್ನು ನೀಡಬಹುದಾದ ಕೆಲವು ವಿಧಗಳನ್ನು ಕೆಳಗೆ ತಿಳಿಸಲಾಗಿದೆ.
ದಾನಗಳನ್ನು ಆನ್‌ಲೈನ್ ಮೂಲಕ ಕೊಡಬಹುದು ಅಥವಾ ಕಾಣಿಕೆ ಪೆಟ್ಟಿಗೆಗಳಲ್ಲಿ ಹಾಕಬಹುದು:
ಲೋಕವ್ಯಾಪಕ ಕೆಲಸಕ್ಕಾಗಿ
ಶಾಖಾ ಕಛೇರಿಗಳ ಮತ್ತು ಪ್ರಾದೇಶಿಕ ಭಾಷಾಂತರ ಕಛೇರಿಗಳ ನಿರ್ಮಾಣ, ಹಾಗೂ ಖರ್ಚಿಗಾಗಿ
ದೇವಪ್ರಭುತ್ವಾತ್ಮಕ ಶಾಲೆಗಳಿಗಾಗಿ
ವಿಪತ್ತು ಪರಿಹಾರಕ್ಕಾಗಿ
ಮುದ್ರಣ, ವಿಡಿಯೋಗಳ ತಯಾರಿಕೆ, ಡಿಜಿಟಲ್ ಪಬ್ಲಿಷಿಂಗ್
ಸ್ಥಳೀಯ ಸಭೆಯ ಖರ್ಚುಗಳಿಗಾಗಿ
ರಾಜ್ಯ ಸಭಾಗೃಹದ ಬಳಕೆಗಾಗಿ ಪಾವತಿಸಬೇಕಾದ ಬಿಲ್ಲುಗಳು, ದುರಸ್ತಿ ಕೆಲಸಕ್ಕಾಗಿರುವ ಖರ್ಚುಗಳು ಇತ್ಯಾದಿ
ಸಭೆಯು ಠರಾವುಗಳ ಮೂಲಕ ಈ ಕೆಳಗಿನ ಕೆಲಸಗಳಿಗಾಗಿ ಶಾಖಾ ಕಛೇರಿಗೆ ಕಳುಹಿಸುತ್ತೇವೆಂದು ನಿರ್ಣಯಿಸಿರುವ ಕಾಣಿಕೆಗಳು:
ಲೋಕವ್ಯಾಪಕವಾಗಿ ರಾಜ್ಯ ಸಭಾಗೃಹ ಮತ್ತು ಸಮ್ಮೇಳನಾ ಹಾಲ್‌ಗಳ ನಿರ್ಮಾಣಕ್ಕಾಗಿ
ಲೋಕವ್ಯಾಪಕ ನೆರವಿನ ಏರ್ಪಾಡಿಗೆ
ಇನ್ನಿತರ ಲೋಕವ್ಯಾಪಕ ಚಟುವಟಿಕೆಗಳಿಗೆ
ಅಧಿವೇಶನಗಳು ಮತ್ತು ಸಮ್ಮೇಳನಗಳಿಗಾಗಿ
ಪ್ರಾದೇಶಿಕ ಅಧಿವೇಶನಗಳಲ್ಲಿ ಸಿಗುವ ಕಾಣಿಕೆಗಳನ್ನು ಲೋಕವ್ಯಾಪಕ ಕೆಲಸಕ್ಕಾಗಿ ಬಳಸಲಾಗುತ್ತದೆ. ಪ್ರಾದೇಶಿಕ, ವಿಶೇಷ ಮತ್ತು ಅಂತಾರಾಷ್ಟ್ರೀಯ ಅಧಿವೇಶನಗಳು ಲೋಕವ್ಯಾಪಕ ಕೆಲಸಕ್ಕಾಗಿ ಹಾಕಿದ ಕಾಣಿಕೆಗಳಿಂದ ನಡೆಸಲ್ಪಡುತ್ತವೆ.
ಸರ್ಕಿಟ್ ಸಮ್ಮೇಳನಗಳಲ್ಲಿ ಸಿಕ್ಕಿದ ಕಾಣಿಕೆಗಳನ್ನು ಕಟ್ಟಡದ ಬಾಡಿಗೆ ಪಾವತಿಸಲು, ಸಮ್ಮೇಳನವನ್ನು ನಡೆಸಲು, ಹಾಲ್‌ಅನ್ನು ಸುಸ್ಥಿತಿಯಲ್ಲಿಡಲು ಮತ್ತು ಸರ್ಕಿಟ್‌ಗೆ ಸಂಬಂಧಿಸಿದ ಇತರ ಖರ್ಚುಗಳನ್ನು ಪೂರೈಸಲು ಬಳಸಲಾಗುತ್ತದೆ. ಹೆಚ್ಚಿಗೆ ಉಳಿದ ಹಣವನ್ನು ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಕೆಲಸಕ್ಕಾಗಿ ಕಾಣಿಕೆ ನೀಡಲು ಸರ್ಕಿಟ್ ನಿರ್ಧರಿಸಬಹುದು.