ಬೈಬಲಿನಲ್ಲಿರುವ ರತ್ನಗಳು | ಅ. ಕಾರ್ಯಗಳು 6-8
ಹೊಸದಾಗಿ ಸ್ಥಾಪಿತವಾದ ಕ್ರೈಸ್ತ ಸಭೆಯು ಪರೀಕ್ಷಿಸಲ್ಪಟ್ಟಿತು
ಯೆರೂಸಲೇಮಿಗೆ ಬಂದು ದೀಕ್ಷಾಸ್ನಾನ ಪಡೆದುಕೊಂಡ ಗ್ರೀಕ್ ಭಾಷೆಯನ್ನಾಡುವ ವಿಧವೆಯರು ಅಲ್ಲಿ ಉಳುಕೊಂಡಿದ್ದಾಗ ಅವರನ್ನು ಅಲಕ್ಷಿಸಲಾಯಿತು. ಈ ರೀತಿ ಅನ್ಯಾಯವಾಗಿದ್ದರಿಂದ ಅವರು ಎಡವಿದರಾ ಅಥವಾ ಯೆಹೋವನು ಅದನ್ನು ಸರಿಪಡಿಸುತ್ತಾನೆಂದು ತಾಳ್ಮೆ ತೋರಿಸಿದರಾ?
ಸ್ತೆಫನನಿಗೆ ಕಲ್ಲೆಸೆದ ನಂತರ ಯೆರೂಸಲೇಮಿನಲ್ಲಿದ್ದ ಕ್ರೈಸ್ತರ ಮೇಲೆ ಮಹಾ ಹಿಂಸೆಯು ಆರಂಭವಾಯಿತು. ಇದರಿಂದ ಅಲ್ಲಿದ್ದ ಕ್ರೈಸ್ತರು ಯೂದಾಯದಲ್ಲಿ ಮತ್ತು ಸಮಾರ್ಯದಲ್ಲಿ ಚೆದರಿ ಹೋಗಬೇಕಾಯಿತು. ಆಗ ಅವರು ಸೇವೆಯಲ್ಲಿ ಹುರುಪನ್ನು ಕಳೆದುಕೊಂಡರಾ?
ಹೊಸದಾಗಿ ಸ್ಥಾಪಿತವಾದ ಕ್ರೈಸ್ತ ಸಭೆಯು ಯೆಹೋವನ ಸಹಾಯದಿಂದ ತಾಳಿಕೊಳ್ಳುತ್ತಾ ಮತ್ತು ಅಭಿವೃದ್ಧಿಹೊಂದುತ್ತಾ ಹೋಯಿತು.—ಅಕಾ 6:7; 8:4.
ನಿಮ್ಮನ್ನೇ ಕೇಳಿಕೊಳ್ಳಿ, ‘ನನಗೆ ಬಂದಿರುವ ಪರೀಕ್ಷೆಗಳನ್ನು ನಾನು ಹೇಗೆ ಎದುರಿಸುತ್ತಿದ್ದೇನೆ?’