ಬೈಬಲಿನಲ್ಲಿರುವ ರತ್ನಗಳು | 1 ಕೊರಿಂಥ 10-13
ಯೆಹೋವನು ನಂಬಿದವರ ಕೈಬಿಡಲ್ಲ
ನಮಗೆ ಕಷ್ಟಗಳು ಬರುವಾಗ ಅದನ್ನು ತೆಗೆದುಹಾಕುವ ಶಕ್ತಿ ಯೆಹೋವನಿಗಿದೆ. ಆದರೆ ಹೆಚ್ಚಾಗಿ ಆತನು ನಮಗೆ “ತಪ್ಪಿಸಿಕೊಳ್ಳುವ ಮಾರ್ಗವನ್ನು” ತೆರೆಯುತ್ತಾನೆ. ಅಂದರೆ ಕಷ್ಟಗಳನ್ನು ತಾಳಿಕೊಳ್ಳಲು ನಮಗೆ ಏನು ಬೇಕೋ ಅದನ್ನು ಸಮಯಕ್ಕೆ ಸರಿಯಾಗಿ ಕೊಡುತ್ತಾನೆ.
ಆತನು ನಮಗೆ ತನ್ನ ವಾಕ್ಯ, ಪವಿತ್ರಾತ್ಮ ಮತ್ತು ಆಧ್ಯಾತ್ಮಿಕ ಆಹಾರ ಕೊಟ್ಟು ಸರಿಯಾಗಿ ಯೋಚಿಸಲು ಮತ್ತು ಪ್ರೋತ್ಸಾಹ-ಸಾಂತ್ವನ ಪಡೆಯಲು ಸಹಾಯ ಮಾಡುತ್ತಾನೆ.—ಮತ್ತಾ 24:45; ಯೋಹಾ 14:16; ರೋಮ 15:4
ಆತನು ನಮಗೆ ತನ್ನ ಪವಿತ್ರಾತ್ಮ ಕೊಡುತ್ತಾನೆ. ನಾವು ಬೈಬಲಲ್ಲಿರುವ ಕಥೆಗಳನ್ನು ಮತ್ತು ತತ್ವಗಳನ್ನು ನೆನಪಲ್ಲಿಟ್ಟು ಸರಿಯಾದ ತೀರ್ಮಾನಗಳನ್ನು ತಗೊಳ್ಳಲು ಇದು ಸಹಾಯ ಮಾಡುತ್ತದೆ.—ಯೋಹಾ 14:26
ಆತನು ನಮಗೆ ದೇವದೂತರ ಸಹಾಯ ಕೊಡುತ್ತಾನೆ.—ಇಬ್ರಿ 1:14
ಆತನು ತನ್ನ ಆರಾಧಕರ ಮೂಲಕವೂ ಸಹಾಯ ಮಾಡುತ್ತಾನೆ.—ಕೊಲೊ 4:11