ಬೈಬಲಿನಲ್ಲಿರುವ ರತ್ನಗಳು | ಯಾಕೋಬ 3-5
ದೈವಿಕ ವಿವೇಕ ತೋರಿಸಿ
ಯೆಹೋವನ ವಿವೇಕ ಪ್ರಾಯೋಗಿಕವಾದದ್ದು. ಉದಾಹರಣೆಗೆ ಅದು ನಮಗೆ, ನಮ್ಮ ಸಹೋದರರೊಂದಿಗೆ ಪುನಃ ಶಾಂತಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತೆ. ನಮ್ಮಲ್ಲಿ ನಿಜವಾಗಿಯೂ ದೈವಿಕ ವಿವೇಕ ಇದೆ ಎಂದು ನಾವು ನಡಕೊಳ್ಳುವ ರೀತಿಯಿಂದ ಗೊತ್ತಾಗುತ್ತೆ.
ನಿಮ್ಮನ್ನೇ ಕೇಳಿಕೊಳ್ಳಿ: ‘ಕೆಳಗೆ ಕೊಡಲಾಗಿರುವ ದೈವಿಕ ವಿವೇಕದ ಯಾವ ಅಂಶವನ್ನು ನಾನು ಇತ್ತೀಚಿಗೆ ತೋರಿಸಿದ್ದೇನೆ? ಇವುಗಳಲ್ಲಿ ಕೆಲವನ್ನು ಇನ್ನೂ ಚೆನ್ನಾಗಿ ತೋರಿಸಲು ನಾನೇನು ಮಾಡಬಹುದು?’
ಶುದ್ಧತೆ
ಶಾಂತಿ
ನ್ಯಾಯ
ವಿಧೇಯತೆ ತೋರಿಸಲು ಸಿದ್ಧ ಮನಸ್ಸು
ಕರುಣೆ ಮತ್ತು ಒಳ್ಳೇ ಫಲಗಳು
ನಿಷ್ಪಕ್ಷಪಾತ
ನಿಷ್ಕಪಟತನ