ಬೈಬಲಿನಲ್ಲಿರುವ ರತ್ನಗಳು | 1 ಪೇತ್ರ 3-5
“ಎಲ್ಲವುಗಳ ಅಂತ್ಯವು ಸಮೀಪಿಸಿದೆ”
ಈ ಲೋಕ ಎಂದೂ ನೋಡಿರದಂಥ ಮಹಾಸಂಕಟವನ್ನು ನಾವು ಇನ್ನೇನು ಎದುರಿಸಲಿದ್ದೇವೆ. ನಾವು ನಮ್ಮ ನಂಬಿಗಸ್ತಿಕೆಯನ್ನು ಈಗ ಮತ್ತು ಭವಿಷ್ಯದಲ್ಲಿ ಹೇಗೆ ಕಾಪಾಡಿಕೊಳ್ಳಬಹುದು?
ಎಡಬಿಡದೆ ಪ್ರಾರ್ಥಿಸಿ, ಅದಕ್ಕಾಗಿ ಪ್ರಾರ್ಥನೆಯ ಎಲ್ಲಾ ವಿಧಾನಗಳನ್ನು ಬಳಸಿ
ನಿಮ್ಮ ಕ್ರೈಸ್ತ ಸಹೋದರ ಸಹೋದರಿಯರ ಮೇಲೆ ಆಳವಾದ ಪ್ರೀತಿಯನ್ನು ಬೆಳೆಸಿಕೊಳ್ಳಿ. ನಿಮ್ಮ ಬಾಂಧವ್ಯವನ್ನು ಬಲಗೊಳಿಸಲು ಪ್ರಯತ್ನಿಸುತ್ತಾ ಇರಿ
ಅತಿಥಿಸತ್ಕಾರ ತೋರಿಸಿ
ನಿಮ್ಮನ್ನೇ ಕೇಳಿಕೊಳ್ಳಿ, ‘ನಾನು ಪ್ರಾಯೋಗಿಕವಾಗಿ ಯಾವೆಲ್ಲಾ ವಿಧಗಳಲ್ಲಿ, ಇಲ್ಲಿನ ಮತ್ತು ಲೋಕವ್ಯಾಪಕ ಸಹೋದರ ಸಹೋದರಿಯರಿಗೆ ಆಳವಾದ ಪ್ರೀತಿ ಮತ್ತು ಅತಿಥಿ ಸತ್ಕಾರ ತೋರಿಸಬಹುದು?’