ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಅಕ್ಟೋಬರ್‌ ಪು. 5
  • ಒಳ್ಳೇ ನಡತೆ ಮತ್ತು ಆಳವಾದ ಗೌರವ ತೋರಿಸುತ್ತಾ ಹೃದಯಗಳನ್ನು ಗೆಲ್ಲಿರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಒಳ್ಳೇ ನಡತೆ ಮತ್ತು ಆಳವಾದ ಗೌರವ ತೋರಿಸುತ್ತಾ ಹೃದಯಗಳನ್ನು ಗೆಲ್ಲಿರಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಅನುರೂಪ ಮಾಹಿತಿ
  • ನಿಮ್ಮ ಸಂಗಾತಿಗೆ ಗೌರವ ತೋರಿಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ಸುಖೀ ಸಂಸಾರಕ್ಕಾಗಿ ಸೃಷ್ಟಿಕರ್ತನೆಡೆಗೆ ನೋಡಿ
    ಸುಖೀ ಸಂಸಾರ ಸಾಧ್ಯ!
  • ಬಾಳುವ-ಬಾಂಧವ್ಯದ-ಬೆನ್ನೆಲುಬು-ನಿಷ್ಠೆ
    ಸುಖೀ ಸಂಸಾರ ಸಾಧ್ಯ!
  • ಸಂಬಂಧಿಕರೊಂದಿಗೆ ಸಮಾಧಾನದಿಂದಿರಿ
    ಸುಖೀ ಸಂಸಾರ ಸಾಧ್ಯ!
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಅಕ್ಟೋಬರ್‌ ಪು. 5

ನಮ್ಮ ಕ್ರೈಸ್ತ ಜೀವನ

ಒಳ್ಳೇ ನಡತೆ ಮತ್ತು ಆಳವಾದ ಗೌರವ ತೋರಿಸುತ್ತಾ ಹೃದಯಗಳನ್ನು ಗೆಲ್ಲಿರಿ

ತಮ್ಮ ಒಳ್ಳೇ ಕ್ರೈಸ್ತ ನಡತೆಯಿಂದಾಗಿ ಅನೇಕ ಸಹೋದರಿಯರು, ತಮ್ಮ ಗಂಡಂದಿರು ಸತ್ಯಕ್ಕೆ ಬರಲು ಸಹಾಯ ಮಾಡಿದ್ದಾರೆ. ಆದರೆ ಇದನ್ನು ಮಾಡುವುದು ಅಷ್ಟು ಸುಲಭವಲ್ಲ. ಅದಕ್ಕಾಗಿ, ತುಂಬ ವರ್ಷಗಳು ಕಷ್ಟಪಡಬೇಕಾಗುತ್ತೆ, ತುಂಬ ವಿಷಯಗಳನ್ನು ತಾಳಿಕೊಳ್ಳಬೇಕಾಗುತ್ತೆ. (1ಪೇತ್ರ 2:21-23; 3:1, 2) ನಿಮ್ಮ ಗಂಡ ನಿಮಗೆ ತುಂಬ ಕಷ್ಟ ಕೊಡುತ್ತಿದ್ದರೆ, ಒಳ್ಳೇತನದಿಂದ ಕೆಟ್ಟತನವನ್ನು ಜಯಿಸುವುದನ್ನು ಮುಂದುವರಿಸಿ. (ರೋಮ 12:21) ನಿಮ್ಮ ಮಾತಿಗಿಂತ, ನಿಮ್ಮ ಈ ಮಾದರಿ ಅವರ ಮೇಲೆ ಒಳ್ಳೇ ಪ್ರಭಾವ ಬೀರಬಹುದು.

ವಿಷಯಗಳನ್ನು ನಿಮ್ಮ ಸಂಗಾತಿಯ ಸ್ಥಾನದಲ್ಲಿ ನಿಂತು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. (ಫಿಲಿ 2:3, 4) ಪರಾನುಭೂತಿ, ಅನುಕಂಪ ಮತ್ತು ಗೌರವ ತೋರಿಸಿ. ನಿಮ್ಮ ಜವಾಬ್ದಾರಿಗಳನ್ನು ಪೂರೈಸಲು ನಿಮ್ಮಿಂದಾಗುವ ಎಲ್ಲವನ್ನೂ ಮಾಡಿ. ಅವರ ಮಾತಿಗೆ ಯಾವಾಗಲೂ ಕಿವಿಗೊಡಿ. (ಯಾಕೋ 1:19) ತಾಳ್ಮೆ ತೋರಿಸಿ ಮತ್ತು ನೀವು ಅವರನ್ನು ತುಂಬ ಪ್ರೀತಿಸುತ್ತೀರಿ ಅನ್ನೋ ಭರವಸೆ ಅವರಲ್ಲಿ ಮೂಡಿಸಿ. ನಿಮ್ಮ ಸಂಗಾತಿ ನಿಮ್ಮನ್ನು ಗೌರವಿಸದಿದ್ದರೂ ಇದನ್ನು ಮಾಡಿ. ಯೆಹೋವನು ನಿಮ್ಮ ಈ ಪ್ರಯತ್ನವನ್ನು ನೋಡಿ ಖಂಡಿತ ಮೆಚ್ಚುತ್ತಾನೆ.—1ಪೇತ್ರ 2:19, 20.

ತಾಳಿಕೊಂಡು ಹೋಗಲು ಯೆಹೋವನು ಬಲ ಕೊಟ್ಟನು ಎಂಬ ವಿಡಿಯೋ ನೋಡಿ. ನಂತರ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ಮದುವೆ ಆದ ಹೊಸದರಲ್ಲಿ ಗ್ರೇಸ್‌ ಲೀ ಅವರ ಜೀವನ ಹೇಗಿತ್ತು?

  • ಬೈಬಲ್‌ ಸತ್ಯದ ಕಡೆಗೆ ಅವರನ್ನು ಯಾವುದು ಆಕರ್ಷಿಸಿತು?

  • ದೀಕ್ಷಾಸ್ನಾನ ಆದಮೇಲೆ ಬಂದ ಕಷ್ಟಗಳನ್ನು ಸಹೋದರಿ ಲೀ ಅವರು ಹೇಗೆ ತಾಳಿಕೊಂಡರು?

  • ಸಹೋದರಿ ಲೀ ಯಾವ ವಿಷಯದ ಬಗ್ಗೆ ಪ್ರಾರ್ಥಿಸಿದರು?

  • ಒಳ್ಳೇ ನಡತೆ ಮತ್ತು ಆಳವಾದ ಗೌರವದಿಂದ ಯಾವ ಆಶೀರ್ವಾದಗಳು ಅವರಿಗೆ ಸಿಕ್ಕಿತು?

ಚಿತ್ರಗಳು: ‘ತಾಳಿಕೊಂಡು ಹೋಗಲು ಯೆಹೋವನು ಬಲ ಕೊಟ್ಟನು’ ಎಂಬ ವಿಡಿಯೋಯಿಂದ ಸಹೋದರಿ ಗ್ರೇಸ್‌ ಲೀ ಅವರ ಪ್ರಗತಿ ತೋರಿಸುವ ದೃಶ್ಯಗಳು. 1. ಗ್ರೇಸ್‌ ಲೀ ಒಂದು ಓಣಿಯಲ್ಲಿ ಅಳುತ್ತಿದ್ದಾರೆ. 2. ಒಬ್ಬ ಸಹೋದರಿ, ಗ್ರೇಸ್‌ ಲೀ ಅವರಿಗೆ ಬೈಬಲನ್ನು ಕಲಿಸುತ್ತಿದ್ದಾರೆ. 3. ಗ್ರೇಸ್‌ ಮತ್ತು ಅವರ ಮಕ್ಕಳು ಕೂಟಕ್ಕೆ ಹೋಗಲು ತಮ್ಮ ಹೋಟೆಲಿಂದ ಹೊರಟಿದ್ದಾರೆ. 4. ಗ್ರೇಸ್‌ ಮತ್ತು ಅವಳ ಕುಟುಂಬದ ಒಂಬತ್ತು ಸದಸ್ಯರು ರಾಜ್ಯ ಸಭಾಗೃಹದಲ್ಲಿ

ಒಳ್ಳೇ ನಡತೆ ಮತ್ತು ಆಳವಾದ ಗೌರವಕ್ಕೆ ತುಂಬ ಶಕ್ತಿ ಇದೆ!

ನಿಮ್ಮ ಸಂಗಾತಿ ದೀಕ್ಷಾಸ್ನಾನ ಪಡೆದುಕೊಂಡಿದ್ದಾರೆ, ಆದರೆ ಆಧ್ಯಾತ್ಮಿಕವಾಗಿ ಯಾವುದೇ ಪ್ರಗತಿ ಮಾಡುತ್ತಿಲ್ಲ ಎಂದು ನೆನಸಿ. ಆಗ, ನೀವು ಒಳ್ಳೇ ನಡತೆ ಮತ್ತು ಆಳವಾದ ಗೌರವ ತೋರಿಸಿದರೆ ಅವರಿಗೆ ಪ್ರಗತಿ ಮಾಡಲು ಸಹಾಯ ಆಗುತ್ತೆ. ನಿಮ್ಮ ಸಂಗಾತಿಯನ್ನು ಪ್ರೋತ್ಸಾಹಿಸಿ “ಒಳ್ಳೇ ನಡತೆಯಿಂದ” ಎಂಬ ವಿಡಿಯೋ ನೋಡಿ.

ಸತ್ಯದಲ್ಲಿ ನಿಷ್ಕ್ರಿಯನಾಗಿರುವ ತನ್ನ ಗಂಡನನ್ನು ಒಬ್ಬ ಸಹೋದರಿ ನೋಡುತ್ತಿದ್ದಾರೆ
    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ