ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 18-19
“ಸರ್ವಲೋಕಕ್ಕೆ ನ್ಯಾಯತೀರಿಸುವವನು” ಸೊದೋಮ್ ಮತ್ತು ಗೊಮೋರವನ್ನು ನಾಶಮಾಡುತ್ತಾನೆ
ಸೊದೋಮ್ ಮತ್ತು ಗೊಮೋರವನ್ನು ಯೆಹೋವನು ನಾಶ ಮಾಡಿದ ವಿಷಯದಿಂದ ನಾವೇನು ಕಲಿಯಬಹುದು?
ಯೆಹೋವನು ಕೆಟ್ಟ ವಿಷಯಗಳನ್ನು ದೀರ್ಘಕಾಲದ ತನಕ ಸಹಿಸೋದಿಲ್ಲ
ಮುಂದೆ ದೇವರು ನ್ಯಾಯ ತೀರಿಸುವಾಗ ನಾವು ರಕ್ಷಣೆ ಹೊಂದಬೇಕಾದರೆ, ದೇವರ ಮಾತಿಗೆ ಕಿವಿಗೊಟ್ಟು ಆತನ ಇಷ್ಟದಂತೆ ನಡಿಬೇಕು.—ಲೂಕ 17:28-30
ನಿಮ್ಮನ್ನೇ ಕೇಳಿಕೊಳ್ಳಿ: ‘ಈ ದುಷ್ಟಲೋಕದ ನಾಚಿಕೆಗೆಟ್ಟ ಭಂಡ ನಡತೆ ನೋಡಿದಾಗ ನನಗೆ ವೇದನೆ ಆಗುತ್ತಾ?’ (2ಪೇತ್ರ 2:7) ‘ಯೆಹೋವನ ಇಷ್ಟದಂತೆ ನಡೆಯುವುದೇ ತುಂಬ ಮುಖ್ಯ ಅಂತ ನನ್ನ ಜೀವನ ರೀತಿ ತೋರಿಸುತ್ತಾ?’