ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 40-41
ಯೋಸೇಫನ ಕಷ್ಟಗಳಿಗೆ ಯೆಹೋವನ ಸಹಾಯದಿಂದ ಮುಕ್ತಿ
ಯೆಹೋವನು ಕಷ್ಟಗಳನ್ನು ತೆಗೆಯುವ ತನಕ ಯೋಸೇಫ ಒಬ್ಬ ಗುಲಾಮನಾಗಿ ಮತ್ತು ಸೆರೆಯಾಳಾಗಿ ಸುಮಾರು 13 ವರ್ಷ ತುಂಬ ಕಷ್ಟಪಟ್ಟ. ಆದರೆ ತನಗೆ ಹೀಗಾಯ್ತಲ್ಲ ಅಂತ ಯೋಸೇಫ ಕೊರಗಲಿಲ್ಲ. ಬದಲಿಗೆ ಕಷ್ಟದ ಸಮಯದಲ್ಲೂ ಒಳ್ಳೇ ವಿಷಯಗಳನ್ನ ಕಲಿತ. (ಕೀರ್ತ 105:17-19) ಯೆಹೋವನು ತನ್ನ ಕೈಯನ್ನು ಇಲ್ಲಿವರೆಗೂ ಯಾವತ್ತೂ ಬಿಟ್ಟಿಲ್ಲ ಅಂತ ಅವನಿಗೆ ಚೆನ್ನಾಗಿ ಗೊತ್ತಿತ್ತು. ಈ ಸಮಯನಾ ಯೋಸೇಫ ಹೇಗೆ ಚೆನ್ನಾಗಿ ಉಪಯೋಗಿಸಿಕೊಂಡ?
ಕಷ್ಟಪಟ್ಟು, ನಿಷ್ಠೆಯಿಂದ ಕೆಲಸ ಮಾಡಿದ. ಅವನ ಈ ಪ್ರಯತ್ನ ನೋಡಿ ಯೆಹೋವನು ಆಶೀರ್ವದಿಸಿದನು.—ಆದಿ 39:21, 22
ತನಗೆ ಈ ಗತಿ ತಂದವರ ವಿರುದ್ಧ ಸಂಚು ಮಾಡೋ ಬದಲು ಬೇರೆಯವರಿಗೆ ಸಹಾಯ ಮಾಡಿದ.—ಆದಿ 40:5-7
ಯೋಸೇಫನ ಈ ಉದಾಹರಣೆ ಕಷ್ಟಗಳನ್ನು ತಾಳಿಕೊಳ್ಳಲು ನನಗೆ ಹೇಗೆ ಸಹಾಯ ಮಾಡುತ್ತೆ?
ಯೆಹೋವನು ಎಲ್ಲಾ ಕಷ್ಟಗಳನ್ನು ತೆಗೆಯುವ ತನಕ ಈಗಿರೋ ಸಮಯನಾ ನಾನು ಹೇಗೆ ಚೆನ್ನಾಗಿ ಉಪಯೋಗಿಸಬಹುದು?