ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 42-43
ಯೋಸೇಫ ತೋರಿಸಿದ ಸ್ವನಿಯಂತ್ರಣ
ಎಷ್ಟೋ ವರ್ಷಗಳು ಆದ ಮೇಲೆ ಅಣ್ಣಂದಿರನ್ನು ಅಕಸ್ಮಾತಾಗಿ ನೋಡಿದಾಗ ಯೋಸೇಫನಿಗೆ ಹೇಗೆ ಅನಿಸಿರಬಹುದು ಅಂತ ಯೋಚಿಸಿ. ಅವನು ತಕ್ಷಣ ‘ನಾನೇ ನಿಮ್ಮ ತಮ್ಮ ಯೋಸೇಫ’ ಅಂತ ಹೇಳಬಹುದಿತ್ತು. ಖುಷೀಲಿ ಅವರನ್ನು ಬಿಗಿಯಾಗಿ ಅಪ್ಪಿಕೊಳ್ಳಬಹುದಿತ್ತು ಅಥವಾ ಅವರ ಮೇಲೆ ಸೇಡು ತೀರಿಸಿಕೊಳ್ಳಬಹುದಿತ್ತು. ಆದರೆ ಅವನು ತನ್ನ ಭಾವನೆಗಳನ್ನ ಹತೋಟಿಯಲ್ಲಿ ಇಟ್ಟುಕೊಂಡ. ಕುಟುಂಬ ಸದಸ್ಯರಿಂದ ಅಥವಾ ಬೇರೆಯವರಿಂದ ಅನ್ಯಾಯ ಆಗಿದ್ದರೆ ನೀವೇನು ಮಾಡ್ತೀರಾ? ಅಂಥ ಸಮಯದಲ್ಲಿ ಸ್ವನಿಯಂತ್ರಣ ತೋರಿಸೋದು ಎಷ್ಟು ಮುಖ್ಯ ಅಂತ ಯೋಸೇಫನ ಮಾದರಿಯಿಂದ ಗೊತ್ತಾಗುತ್ತೆ. ಅಷ್ಟೇ ಅಲ್ಲ ದುಡುಕಿ ನಡೆದುಕೊಳ್ಳದೇ ಸಮಾಧಾನದಿಂದ ಇರೋದು ಹೇಗೆ ಅಂತನೂ ಕಲೀಬಹುದು.
ಇಂಥ ಸನ್ನಿವೇಶಗಳು ನಿಮಗೆ ಬಂದಾಗ ಯೋಸೇಫನನ್ನು ಹೇಗೆ ಅನುಕರಿಸುತ್ತೀರಾ?