ನಮ್ಮ ಕ್ರೈಸ್ತ ಜೀವನ
ಪಯನೀಯರ್ ಸೇವೆ ಮಾಡಿ ಯೆಹೋವನನ್ನು ಕೊಂಡಾಡಿ
ಇಸ್ರಾಯೇಲ್ಯರಿಗೆ ಯೆಹೋವನನ್ನು ಕೊಂಡಾಡಲು ತುಂಬ ಕಾರಣಗಳಿದ್ದವು. ಉದಾಹರಣೆಗೆ, ಯೆಹೋವನು ಅವರನ್ನ ಈಜಿಪ್ಟಿನಿಂದ ಬಿಡಿಸಿ ಹೊರಗೆ ಕರಕೊಂಡು ಬಂದಿದ್ದನು, ಫರೋಹನ ಸೈನ್ಯದಿಂದ ಕಾಪಾಡಿದ್ದನು! (ವಿಮೋ 15:1, 2) ಇಂದು ಸಹ ಯೆಹೋವನು ತನ್ನ ಜನರಿಗೆ ಬೇರೆ ಬೇರೆ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾನೆ. ನಾವು ಹೇಗೆ ಯೆಹೋವನಿಗೆ ಕೃತಜ್ಞತೆ ತೋರಿಸಬಹುದು?—ಕೀರ್ತ 116:12.
ಒಂದು ವಿಧ ನಾವು ಆಗ್ಸಿಲರಿ ಅಥವಾ ರೆಗ್ಯುಲರ್ ಪಯನೀಯರಿಂಗ್ ಮಾಡಬಹುದು. ಇದನ್ನ ಮಾಡಲು ಬೇಕಾದ ಮನಸ್ಸಿಗಾಗಿ ಮತ್ತು ಶಕ್ತಿಗಾಗಿ ಯೆಹೋವನ ಹತ್ತಿರ ಪ್ರಾರ್ಥಿಸಿ. (ಫಿಲಿ 2:13) ತುಂಬ ಜನ ಮೊದಲು ಆಗ್ಸಿಲರಿ ಪಯನೀಯರಿಂಗ್ ಮಾಡ್ತಾರೆ. ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಅಥವಾ ಸಂಚರಣಾ ಮೇಲ್ವಿಚಾರಕರ ಭೇಟಿಯ ಸಮಯದಲ್ಲಿ 30 ತಾಸು ಮಾಡಬೇಕಾ ಅಥವಾ 50 ತಾಸು ಮಾಡಬೇಕಾ ಅನ್ನೋ ಆಯ್ಕೆ ನಿಮಗೇ ಬಿಟ್ಟಿದ್ದು. ಬೆಳಗಿಂದ ಸಂಜೆ ವರೆಗೂ ಕೆಲ್ಸ ಮಾಡೋರು ಮತ್ತು ಆರೋಗ್ಯದ ಸಮಸ್ಯೆ ಇರೋರು ಸಹ ರೆಗ್ಯುಲರ್ ಪಯನೀಯರ್ ಸೇವೆ ಮಾಡಲು ಸಾಧ್ಯವಾಗಿದೆ. (ಕೂಟದ ಕೈಪಿಡಿ16.07 ಪುಟ 8) ಸೇವೆ ಮಾಡಿ ಯೆಹೋವನನ್ನು ಸ್ತುತಿಸಿ ಕೊಂಡಾಡಲು ನಾವು ಎಲ್ಲಾ ಪ್ರಯತ್ನ ಹಾಕಬೇಕು. ಯೆಹೋವನು ಅದಕ್ಕೆ ಅರ್ಹನಾ ಗಿದ್ದಾನೆ.—1ಪೂರ್ವ 16:25.
ಮಂಗೋಲಿಯದ ಮೂರು ಸೋದರಿಯರು ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:
ಈ ಮೂರು ಸಹೋದರಿಯರು ಪಯನೀಯರ್ ಆಗಲು ಯಾವೆಲ್ಲ ಸಮಸ್ಯೆಗಳನ್ನ ಎದುರಿಸಬೇಕಾಯ್ತು?
ಪಯನೀಯರ್ ಸೇವೆಯಿಂದ ಅವರಿಗೆ ಯಾವೆಲ್ಲ ಆಶೀರ್ವಾದಗಳು ಸಿಕ್ತು?
ರೆಗ್ಯುಲರ್ ಪಯನೀಯರಿಂಗ್ ಮಾಡಿದ್ರಿಂದ ಯೆಹೋವನ ಸೇವೆ ಹೆಚ್ಚು ಮಾಡುವ ಯಾವ ಅವಕಾಶಗಳು ಅವರಿಗೆ ಸಿಕ್ತು?
ಅವರ ಈ ಮಾದರಿ ಬೇರೆಯವರಿಗೆ ಹೇಗೆ ಸಹಾಯ ಮಾಡ್ತು?