ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಜನವರಿ ಪು. 11
  • ಮಕ್ಕಳೇ, ಮನಸ್ಸಲ್ಲಿರೋದನ್ನ ಅಪ್ಪ-ಅಮ್ಮ ಹತ್ರ ಹೇಳಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಕ್ಕಳೇ, ಮನಸ್ಸಲ್ಲಿರೋದನ್ನ ಅಪ್ಪ-ಅಮ್ಮ ಹತ್ರ ಹೇಳಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ‘ನಿಮ್ಮ ತಂದೆತಾಯಿಯನ್ನು ಸನ್ಮಾನಿಸಿ’
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಕುಟುಂಬದ ಖುಷಿಗೆ ನೀವೇನು ಮಾಡಬಹುದು?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಹೆತ್ತವರೇ, ಯೆಹೋವನನ್ನು ಪ್ರೀತಿಸೋಕೆ ಮಕ್ಕಳಿಗೆ ಸಹಾಯ ಮಾಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ಸುಖ ಸಂಸಾರ ಸಾಧ್ಯ!—ಭಾಗ 2
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಜನವರಿ ಪು. 11

ನಮ್ಮ ಕ್ರೈಸ್ತ ಜೀವನ

ಮಕ್ಕಳೇ, ಮನಸ್ಸಲ್ಲಿರೋದನ್ನ ಅಪ್ಪ-ಅಮ್ಮ ಹತ್ರ ಹೇಳಿ

ನೀವು ಅಪ್ಪ-ಅಮ್ಮ ಹತ್ರ ಯಾಕೆ ಮನಸ್ಸು ಬಿಚ್ಚಿ ಮಾತಾಡಬೇಕು? (ಜ್ಞಾನೋ 23:26) ಯಾಕಂದ್ರೆ ನಿಮ್ಮನ್ನ ಚೆನ್ನಾಗಿ ನೋಡಿಕೊಳ್ಳೋ ಜವಾಬ್ದಾರಿನ ಮತ್ತು ಸರಿಯಾದ ದಾರಿ ತೋರಿಸೋ ಕೆಲಸನ ಯೆಹೋವ ನಿಮ್ಮ ಹೆತ್ತವರಿಗೆ ಕೊಟ್ಟಿದ್ದಾನೆ. (ಕೀರ್ತ 127:3, 4) ನೀವು ಅಪ್ಪ-ಅಮ್ಮ ಹತ್ರ ಏನೂ ಹೇಳಿಕೊಳ್ಳದೆ ಇದ್ರೆ ಅವರು ಹೇಗೆ ಸಹಾಯ ಮಾಡಕ್ಕಾಗುತ್ತೆ? ಅವರ ಅನುಭವದಿಂದ ನೀವು ಕಲಿಯೋದಾದ್ರೂ ಹೇಗೆ? ಅದಕ್ಕೇ ಮನಸ್ಸಲ್ಲಿರೋದನ್ನ ಅವರ ಹತ್ರ ಹೇಳ್ಕೊಬೇಕು. ಹಾಗಂತ ಎಲ್ಲಾ ವಿಷಯಗಳನ್ನ ಹೇಳಬೇಕು ಅಂತೇನಿಲ್ಲ. ಆದ್ರೆ ಅವರ ಹತ್ರ ಹೇಳಲೇಬೇಕಾದ ವಿಷಯಗಳನ್ನ ಮುಚ್ಚಿಡಬಾರದು.—ಜ್ಞಾನೋ 3:32.

ಸರಿಯಾದ ಸಮಯ ನೋಡಿ ಅಪ್ಪ-ಅಮ್ಮ ಹತ್ರ ಮಾತಾಡಿ. ನಿಮಗೆ ಮಾತಾಡೋಕೆ ಕಷ್ಟವಾದ್ರೆ ನಿಮ್ಮ ಮನಸ್ಸಲ್ಲಿ ಇರೋದನ್ನೆಲ್ಲ ಒಂದು ಪೇಪರಲ್ಲಿ ಬರೆದು ಕೊಡಿ. ನಿಮಗೆ ಇಷ್ಟ ಇಲ್ಲದೇ ಇರೋ ಒಂದು ವಿಷಯದ ಬಗ್ಗೆ ಅವರು ಮಾತಾಡೋಕೆ ಬಂದ್ರೆ ತಪ್ಪಿಸಿಕೊಳ್ಳೋಕೆ ನೋಡಬೇಡಿ. ಅವರು ನಿಮಗೆ ಸಹಾಯ ಮಾಡೋಕೆ ಬರುತ್ತಿದ್ದಾರೆ. ಅವರು ನಿಮ್ಮ ದೋಸ್ತ್‌ಗಳು, ದುಶ್ಮನ್‌ಗಳಲ್ಲ. ನೀವು ಮನಸ್ಸುಬಿಚ್ಚಿ ಮಾತಾಡಿದ್ರೆ ಈಗಲೂ ಮುಂದಕ್ಕೂ ನಿಮ್ಮ ಜೀವನ ಚೆನ್ನಾಗಿರುತ್ತೆ!—ಜ್ಞಾನೋ 4:10-12.

ನನ್ನ ಹದಿವಯಸ್ಸಿನ ಜೀವನ—ಹೆತ್ತವರ ಜೊತೆ ಮಾತಾಡೋದು ಹೇಗೆ? ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • “ನನ್ನ ಹದಿವಯಸ್ಸಿನ ಜೀವನ—ಹೆತ್ತವರ ಜೊತೆ ಮಾತಾಡೋದು ಹೇಗೆ?” ಅನ್ನೋ ವಿಡಿಯೋದಲ್ಲಿರೋ ಒಂದು ದೃಶ್ಯ. ಒಬ್ಬ ಯುವ ಹುಡುಗಿಯ ಅಮ್ಮ ಅವಳ ಹತ್ರ ಮಾತಾಡ್ತಿದ್ರೂ ಅದನ್ನ ಕೇಳಿಸಿಕೊಳ್ಳದೇ ಹೆಡ್‌ಫೋನ್‌ ಹಾಕಿಕೊಂಡು ಕಂಪ್ಯೂಟರ್‌ ನೋಡ್ತಿದ್ದಾಳೆ.

    ಎಸ್ತರ್‌ ಮತ್ತು ಪಾರ್ತಿಕ್‌ ತಮ್ಮ ಬಗ್ಗೆ ಏನು ಹೇಳಿದ್ರು?

  • “ನನ್ನ ಹದಿವಯಸ್ಸಿನ ಜೀವನ—ಹೆತ್ತವರ ಜೊತೆ ಮಾತಾಡೋದು ಹೇಗೆ?” ಅನ್ನೋ ವಿಡಿಯೋದಲ್ಲಿರೋ ಒಂದು ದೃಶ್ಯ. ಒಬ್ಬ ಯುವ ಹುಡುಗಿ ಫೋನಿನಲ್ಲಿ ಏನನ್ನೋ ತೋರಿಸ್ತಾ ತನ್ನ ಅಮ್ಮ ಜೊತೆ ಮಾತಾಡ್ತಿದ್ದಾಳೆ.

    ಯೇಸುವಿಂದ ನೀವೇನು ಕಲಿತ್ರಿ?

  • “ನನ್ನ ಹದಿವಯಸ್ಸಿನ ಜೀವನ—ಹೆತ್ತವರ ಜೊತೆ ಮಾತಾಡೋದು ಹೇಗೆ?” ಅನ್ನೋ ವಿಡಿಯೋದಲ್ಲಿರೋ ಒಂದು ದೃಶ್ಯ. ಒಬ್ಬ ತಾಯಿ ಮನೆಕೆಲಸವನ್ನ ಬದಿಗಿಟ್ಟು ತನ್ನ ಮಗನ ಜೊತೆ ಆಟ ಆಡೋಕೆ ಸಮಯ ಕೊಡ್ತಿದ್ದಾಳೆ.

    ನಿಮ್ಮ ಅಪ್ಪ-ಅಮ್ಮ ನಿಮ್ಮನ್ನ ಹೇಗೆಲ್ಲಾ ನೋಡಿಕೊಂಡಿದ್ದಾರೆ?

  • “ನನ್ನ ಹದಿವಯಸ್ಸಿನ ಜೀವನ—ಹೆತ್ತವರ ಜೊತೆ ಮಾತಾಡೋದು ಹೇಗೆ?” ಅನ್ನೋ ವಿಡಿಯೋದಲ್ಲಿರೋ ಒಂದು ದೃಶ್ಯ. ಬಾಸ್ಕೆಟ್‌ಬಾಲ್‌ ಆಟಗಾರರು ಎಲ್ಲೆಲ್ಲಿ ನಿಂತ್ಕೊಬೇಕು ಅಂತ ಕೋಚ್‌, ಚಿತ್ರ ಬಿಡಿಸಿ ತೋರಿಸಿಕೊಡ್ತಿದ್ದಾರೆ.

    ನೀವು ಚೆನ್ನಾಗಿರಬೇಕು ಅನ್ನೋದೇ ಅಪ್ಪ-ಅಮ್ಮನ ಆಸೆ

    ಯಾವ ಬೈಬಲ್‌ ತತ್ವಗಳು ನಿಮ್ಮ ಅಪ್ಪ-ಅಮ್ಮ ಹತ್ರ ಮಾತಾಡೋಕೆ ಪ್ರೋತ್ಸಾಹ ಕೊಡುತ್ತೆ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ