ಮೇ 5-11
ಜ್ಞಾನೋಕ್ತಿ 12
ಗೀತೆ 101 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)
1. ಕಷ್ಟಪಟ್ಟು ಕೆಲ್ಸ ಮಾಡಿದ್ರೆ ಒಳ್ಳೇ ಪ್ರತಿಫಲ ಸಿಗುತ್ತೆ
(10 ನಿ.)
ಕೆಲಸಕ್ಕೆ ಬಾರದ ವಿಷ್ಯಗಳಿಗಾಗಿ ಸಮಯ ವ್ಯರ್ಥ ಮಾಡಬೇಡಿ (ಜ್ಞಾನೋ 12:11)
ಕಷ್ಟಪಟ್ಟು ಶ್ರದ್ಧೆಯಿಂದ ಕೆಲ್ಸ ಮಾಡಿ (ಜ್ಞಾನೋ 12:24; w16.06 30-31 ¶6)
ಕಷ್ಟಪಟ್ಟು ಕೆಲ್ಸ ಮಾಡಿದ್ರೆ ಒಳ್ಳೇ ಪ್ರತಿಫಲ ಸಿಗುತ್ತೆ (ಜ್ಞಾನೋ 12:14)
ಕಿವಿಮಾತು: ನಾವು ಕಷ್ಟಪಟ್ಟು ಕೆಲ್ಸ ಮಾಡಿದ್ರೆ ಅದ್ರಿಂದ ಬೇರೆವ್ರಿಗೆ ಪ್ರಯೋಜನ ಆಗುತ್ತೆ ಅಂತ ತಿಳ್ಕೊಳ್ಳೋದ್ರಿಂದ ನಮಗೆ ತೃಪ್ತಿ ಸಿಗುತ್ತೆ.—ಅಕಾ 20:35; mwbr16.11 3 ¶4-6.
2. ಬೈಬಲಿನಲ್ಲಿರುವ ರತ್ನಗಳು
(10 ನಿ.)
ಜ್ಞಾನೋ 12:16—ಒಬ್ಬ ವ್ಯಕ್ತಿಗೆ ಸಮಸ್ಯೆಗಳು ಬಂದಾಗ ಸಹಿಸಿಕೊಳ್ಳೋಕೆ ಈ ವಚನದಲ್ಲಿರೋ ತತ್ವ ಹೇಗೆ ಸಹಾಯ ಮಾಡುತ್ತೆ? (ijwyp ಲೇಖನ 95 ¶10-11)
ಈ ವಾರದ ಬೈಬಲ್ ಅಧ್ಯಾಯಗಳಿಂದ ನೀವೇನು ಕಲಿತ್ರಿ?
3. ಬೈಬಲ್ ಓದುವಿಕೆ
(4 ನಿ.) ಜ್ಞಾನೋ 12:1-20 (th ಪಾಠ 5)
4. ಸಂಭಾಷಣೆ ಶುರುಮಾಡಿ
(2 ನಿ.) ಮನೆ-ಮನೆ ಸೇವೆ. (lmd ಪಾಠ 1 ಪಾಯಿಂಟ್ 4)
5. ಸಂಭಾಷಣೆ ಶುರುಮಾಡಿ
(3 ನಿ.) ಮನೆ-ಮನೆ ಸೇವೆ. ಬೈಬಲ್ ಸ್ಟಡಿ ಬಗ್ಗೆ ಹೇಳಿ. (lmd ಪಾಠ 5 ಪಾಯಿಂಟ್ 4)
6. ಮತ್ತೆ ಭೇಟಿ ಮಾಡಿ
(3 ನಿ.) ಅನೌಪಚಾರಿಕ ಸಾಕ್ಷಿ. ಮಕ್ಕಳಿರೋ ವ್ಯಕ್ತಿಗೆ ನಮ್ಮ ವೆಬ್‌ಸೈಟ್ ತೋರಿಸಿ. (lmd ಪಾಠ 9 ಪಾಯಿಂಟ್ 3)
7. ನಿಮ್ಮ ನಂಬಿಕೆ ಬಗ್ಗೆ ಹೇಳಿ
(3 ನಿ.) ಅಭಿನಯ. ijwfq ಲೇಖನ 3—ವಿಷ್ಯ: ನಿಮ್ಮ ಧರ್ಮನೇ ಸತ್ಯ ಧರ್ಮ ಅಂತ ನೀವು ನಂಬ್ತೀರಾ? (lmd ಪಾಠ 4 ಪಾಯಿಂಟ್ 3)
ಗೀತೆ 21
8. ಯೆಹೋವನ ಸಹಾಯದಿಂದ ಹಣಕಾಸಿನ ಸಮಸ್ಯೆ ನಿಭಾಯಿಸಿ
(15 ನಿ.) ಚರ್ಚೆ.
ನಿಮಗೆ ಕೆಲ್ಸ ಇಲ್ಲದೇ ಇರಬಹುದು ಅಥವಾ ಇರೋ ಕೆಲ್ಸ ಹೋಗಿಬಿಡುತ್ತೇನೋ ಅನ್ನೋ ಆತಂಕ ಕಾಡ್ತಿರಬಹುದು. ಅಷ್ಟೇ ಅಲ್ಲ, ಇರೋ ದುಡ್ಡಲ್ಲಿ ಜೀವನ ನಡೆಸೋಕೆ ಕಷ್ಟ ಆಗ್ತಿರಬಹುದು ಅಥವಾ ವಯಸ್ಸಾದ ಮೇಲೆ ಏನು ಮಾಡೋದು ಅನ್ನೋ ಚಿಂತೆ ಕಾಡ್ತಿರಬಹುದು. ಈ ತರ ಚಿಂತೆ ಆಗೋದು ಸಹಜ. ಯಾಕಂದ್ರೆ ಈ ಲೋಕದ ಆರ್ಥಿಕ ಪರಿಸ್ಥಿತಿ ಯಾವಾಗ ಬೇಕಾದ್ರೂ ತಲೆ ಕೆಳಗಾಗಬಹುದು. ಆದ್ರೆ ಒಂದು ವಿಷ್ಯ ನೆನಪಿಡಿ, ನಮ್ಗೆ ಹಣಕಾಸಿನ ಸಮಸ್ಯೆ ಬಂದ್ರೂ ನಾವು ಯೆಹೋವ ದೇವರ ಸೇವೆಗೆ ಮೊದಲ ಸ್ಥಾನ ಕೊಡೋದಾದ್ರೆ ಆತನು ಖಂಡಿತ ನಮ್ಮ ಅಗತ್ಯಗಳನ್ನ ನೋಡ್ಕೊತೀನಿ ಅಂತ ಮಾತು ಕೊಟ್ಟಿದ್ದಾನೆ.—ಕೀರ್ತ 46:1-3; 127:2; ಮತ್ತಾ 6:31-33.
ಯೆಹೋವ ಯಾವತ್ತೂ ನಮ್ಮ ಕೈ ಬಿಡಲ್ಲ ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆ ಕೇಳಿ:
ಸಹೋದರ ಆಲ್ವರೇಡೊರವರ ಅನುಭವದಿಂದ ನೀವೇನು ಕಲಿತ್ರಿ?
1 ತಿಮೊತಿ 5:8 ಓದಿ. ಆಮೇಲೆ ಈ ಪ್ರಶ್ನೆ ಕೇಳಿ:
ಯೆಹೋವ ತನ್ನ ಆರಾಧಕರ ಅಗತ್ಯಗಳನ್ನ ಪೂರೈಸ್ತಾನೆ ಅನ್ನೋ ನಿಮ್ಮ ಭರವಸೆಯನ್ನ ಈ ವಚನ ಹೇಗೆ ಜಾಸ್ತಿ ಮಾಡುತ್ತೆ?
ಹಣಕಾಸಿನ ಸಮಸ್ಯೆ ಬಂದಾಗ ಅದನ್ನ ನಿಭಾಯಿಸೋಕೆ ಸಹಾಯ ಮಾಡೋ ಕೆಲವು ಬೈಬಲ್ ತತ್ವಗಳು ಹೀಗಿವೆ:
ಸರಳವಾದ ಜೀವನ ನಡೆಸಿ. ಸುಮ್‌ಸುಮ್ನೆ ಸಾಲ ಮಾಡಬೇಡಿ, ಅನಾವಶ್ಯಕವಾಗಿ ಖರ್ಚು ಮಾಡಬೇಡಿ.—ಮತ್ತಾ 6:22
ಶಿಕ್ಷಣ ಮತ್ತು ಕೆಲ್ಸಕ್ಕೆ ಸಂಬಂಧ ಪಟ್ಟ ನಿರ್ಧಾರ ಮಾಡೋವಾಗ ಯೆಹೋವ ದೇವರ ಸೇವೆಗೆ ಮೊದಲನೇ ಸ್ಥಾನ ಕೊಡೋಕೆ ಆಗುತ್ತಾ ಅಂತ ಯೋಚ್ನೆ ಮಾಡಿ.—ಫಿಲಿ 1:9-11
ದೀನರಾಗಿರಿ ಮತ್ತು ಹೊಂದಿಸಿಕೊಳ್ಳಿ. ನೀವು ಕೆಲ್ಸ ಕಳ್ಕೊಂಡಿದ್ರೆ ಬೇರೆ ಯಾವ ಕೆಲ್ಸ ಸಿಕ್ಕಿದ್ರೂ ಮಾಡಿ. ಅದು ಚಿಕ್ಕಪುಟ್ಟ ಕೆಲ್ಸ ಆಗಿದ್ರೂ ಪರವಾಗಿಲ್ಲ. ಇದ್ರಿಂದ ನಿಮ್ಮ ಕುಟುಂಬಕ್ಕೆ ಸಹಾಯ ಆಗುತ್ತೆ.—ಜ್ಞಾನೋ 14:23
ನಿಮ್ಮ ಹತ್ರ ಜಾಸ್ತಿ ಇಲ್ಲಾಂದ್ರೂ ಇರೋದನ್ನ ಬೇರೆವ್ರ ಜೊತೆ ಹಂಚಿಕೊಳ್ಳಿ.—ಇಬ್ರಿ 13:16
9. ಸಭಾ ಬೈಬಲ್ ಅಧ್ಯಯನ
(30 ನಿ.) bt ಅಧ್ಯಾಯ 26 ¶1-8, ಪುಟ 204, 208ರಲ್ಲಿರೋ ಚೌಕಗಳು