ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb25 ಸೆಪ್ಟೆಂಬರ್‌ ಪು. 8-9
  • ಸೆಪ್ಟೆಂಬರ್‌ 29–ಅಕ್ಟೋಬರ್‌ 5

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೆಪ್ಟೆಂಬರ್‌ 29–ಅಕ್ಟೋಬರ್‌ 5
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2025
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2025
mwb25 ಸೆಪ್ಟೆಂಬರ್‌ ಪು. 8-9

ಸೆಪ್ಟೆಂಬರ್‌ 29–ಅಕ್ಟೋಬರ್‌ 5

ಪ್ರಸಂಗಿ 3-4

ಗೀತೆ 86 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

ಗಂಡ ಹೆಂಡತಿ ಇಬ್ರೂ ಖುಷಿಯಾಗಿ ಬೈಬಲ್‌ ಓದ್ತಿದ್ದಾರೆ.

ನೀವೂ ಒಟ್ಟಿಗೆ ಸಮಯ ಕಳೀರಿ, ಯೆಹೋವನಿಗೂ ಸಮಯ ಕೊಡಿ

1. ಮೂರು ಎಳೆಗಳಿರೋ ಹಗ್ಗನ ಗಟ್ಟಿಮಾಡ್ಕೊಳ್ಳಿ

(10 ನಿ.)

ನಿಮ್ಮ ಸಂಗಾತಿ ಜೊತೆ ಮಾತಾಡೋಕೆ ಸಮಯ ಮಾಡ್ಕೊಳ್ಳಿ (ಪ್ರಸಂ 3:1; ijwhf ಲೇಖನ 10 ¶2-8)

ಒಟ್ಟಿಗೆ ಕೆಲಸ ಮಾಡಿ (ಪ್ರಸಂ 4:9; w23.05 23-24 ¶12-14)

ಇಬ್ರೂ ಯೆಹೋವ ದೇವರಿಗೆ ಹತ್ರ ಆಗ್ತಾ ಇರಿ (ಪ್ರಸಂ 4:12; w23.05 21 ¶3)


ನಿಮ್ಮನ್ನೇ ಕೇಳಿಕೊಳ್ಳಿ, ‘ನಾನು ನನ್ನ ಸಂಗಾತಿಯಿಂದ ತುಂಬ ದಿನ ದೂರ ಇದ್ರೆ, ಅವ್ರನ್ನ ಬಿಟ್ಟು ಒಬ್ಬನೇ ರಜೆ ತಗೊಂಡು ಸುತ್ತಾಡೋಕೆ ಹೋದ್ರೆ ಅಥವಾ ಕೆಲಸಕ್ಕೋಸ್ಕರ ಬೇರೆ ಕಡೆ ಇದ್ರೆ ಅದ್ರಿಂದ ನನ್‌ ಮದುವೆ ಜೀವನಕ್ಕೆ ಏನೆಲ್ಲಾ ತೊಂದ್ರೆ ಆಗಬಹುದು?’

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಪ್ರಸಂ 3:8—ಪ್ರೀತಿಸದೇ ಇರೋಕೆ ಒಂದು ಸಮಯ ಇದೆ ಅಂದ್ರೆ ಅದು ಯಾವಾಗ? (it-E “ಪ್ರೀತಿ” ¶39)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

(4 ನಿ.) ಪ್ರಸಂ 4:1-16 (th ಪಾಠ 2)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(3 ನಿ.) ಮನೆ-ಮನೆ ಸೇವೆ. ಕಾವಲಿನಬುರುಜು ನಂ. 1 2025ನ್ನ ಬಳಸಿ ಮಾತು ಶುರು ಮಾಡಿ. ಮನೆಯವರು ಬೇರೆ ವಿಷ್ಯದ ಬಗ್ಗೆ ಮಾತಾಡಿದಾಗ ಅದಕ್ಕೆ ತಕ್ಕ ಹಾಗೆ ಹೊಂದಿಸ್ಕೊಳ್ಳಿ. (lmd ಪಾಠ 2 ಪಾಯಿಂಟ್‌ 5)

5. ಮತ್ತೆ ಭೇಟಿ ಮಾಡಿ

(4 ನಿ.) ಅನೌಪಚಾರಿಕ ಸಾಕ್ಷಿ. ಕಾವಲಿನಬುರುಜು ನಂ. 1, 2025ರ ಪತ್ರಿಕೆಯನ್ನ ತಗೊಂಡಿರೋ ವ್ಯಕ್ತಿಗೆ ಬೈಬಲ್‌ ಸ್ಟಡಿ ಬಗ್ಗೆ ಹೇಳಿ. (lmd ಪಾಠ 9 ಪಾಯಿಂಟ್‌ 4)

6. ಭಾಷಣ

(5 ನಿ.) lmd ಪರಿಶಿಷ್ಟ ಎ ಪಾಯಿಂಟ್‌ 12—ವಿಷ್ಯ: ದೇವರು ಭೇದಭಾವ ಮಾಡಲ್ಲ. (th ಪಾಠ 19)

ನಮ್ಮ ಕ್ರೈಸ್ತ ಜೀವನ

ಗೀತೆ 132

7. ಮದುವೆ ಜೀವನದಲ್ಲಿ ಸಮಸ್ಯೆಗಳು ಬಂದಾಗ ಯೆಹೋವನ ಸಹಾಯ ಪಡ್ಕೊಳ್ಳೋಕೆ ಮರಿಬೇಡಿ

(15 ನಿ.) ಚರ್ಚೆ.

ಗಂಡ-ಹೆಂಡ್ತಿ ಖುಷಿಯಾಗಿರೋಕೆ ಏನು ಬೇಕೋ ಅದನ್ನೆಲ್ಲ ಯೆಹೋವ ಕೊಟ್ಟಿದ್ದಾನೆ. ಆದ್ರೂ ಅವ್ರಿಗೆ ಕೆಲವೊಮ್ಮೆ ಸಮಸ್ಯೆಗಳು ಬರುತ್ತೆ. (1ಕೊರಿಂ 7:28) ಆ ಸಮಸ್ಯೆಗಳನ್ನ ಆದಷ್ಟು ಬೇಗ ಸರಿಮಾಡ್ಕೊಂಡಿಲ್ಲಾಂದ್ರೆ ಅವರು ಜೀವನದಲ್ಲಿ ಖುಷಿ ಕಳ್ಕೊಂಡುಬಿಡ್ತಾರೆ, ಅವ್ರ ಜೀವನ ಸರಿಹೋಗುತ್ತೆ ಅನ್ನೋ ನಂಬಿಕೆನೇ ಹೋಗಿಬಿಡುತ್ತೆ. ನಿಮಗೂ ಈ ತರ ಆಗ್ತಿದ್ರೆ ಏನು ಮಾಡಬಹುದು?

ಯಾವುದು ನಿಜ ಪ್ರೀತಿ? ಅನ್ನೋ ವಿಡಿಯೋದಲ್ಲಿ ಒಂದು ದಂಪತಿಗೆ ತಮ್ಮ ಮದುವೆ ಜೀವನದಲ್ಲಿ ತುಂಬ ಸಮಸ್ಯೆಗಳು ಬಂತು. ಆಗ ಆ ಹುಡುಗಿ ಯೆಹೋವ ದೇವರನ್ನೇ ಮರೆತು ಇನ್ನೇನು ತಪ್ಪಾದ ತೀರ್ಮಾನ ತಗೊಬೇಕು ಅಂತಿದ್ದಾಗ ಅವಳ ಅಪ್ಪ ಅವಳಿಗೆ ಯಾವ ಬುದ್ಧಿವಾದ ಕೊಟ್ರು ಅಂತ ನಿಮಗೆ ನೆನಪಿದ್ಯಾ?

ಯಾವುದು ನಿಜ ಪ್ರೀತಿ?—ತುಣುಕು ಅನ್ನೋ ಡ್ರಾಮಾದ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆ ಕೇಳಿ:

  • ಮದುವೆ ಜೀವನದಲ್ಲಿ ಸಮಸ್ಯೆಗಳು ಬಂದಾಗ ನಾವ್ಯಾಕೆ ಯೆಹೋವ ಕೊಡೋ ಸಲಹೆನ ಪಾಲಿಸಬೇಕು?—ಯೆಶಾ 48:17; ಮತ್ತಾ 19:6

ನಿಮ್ಮ ಮದುವೆ ಜೀವನದಲ್ಲಿ ದೊಡ್ಡದೊಡ್ಡ ಸಮಸ್ಯೆಗಳು ಬಂದಾಗ ಯೆಹೋವನಿಂದ ದೂರ ಹೋಗಬೇಡಿ. ಪ್ರಾರ್ಥನೆ ಮಾಡ್ತಾ, ಕೂಟಗಳಿಗೆ ಹೋಗ್ತಾ, ಬೈಬಲ್‌ ಓದ್ತಾ, ಸಿಹಿಸುದ್ದಿ ಸಾರುತ್ತಾ ಆತನಿಗೆ ಹತ್ರ ಆಗಿ. ಸಮಸ್ಯೆನ ಬಗೆಹರಿಸೋಕೆ ಬೈಬಲ್‌ ಸಲಹೆಗಳನ್ನ ಪಾಲಿಸಿ. ಆ ಸಮಸ್ಯೆ ಬಗ್ಗೆ ಪ್ರಕಾಶನಗಳಲ್ಲಿ ಹುಡುಕಿ, ಆಗ ಯೆಹೋವನ ತರ ಯೋಚ್ನೆ ಮಾಡೋಕೆ ನಿಮಗಾಗುತ್ತೆ. ಹೀಗೆ ಮಾಡಿದ್ರೆ ಸಮಸ್ಯೆನ ಬಗೆಹರಿಸೋಕೆ ಯೆಹೋವನ ಸಹಾಯ ನಮಗೆ ಬೇಕು ಅಂತ ತೋರಿಸಿಕೊಟ್ಟ ಹಾಗಿರುತ್ತೆ ಮತ್ತು ಯೆಹೋವನ ಆಶೀರ್ವಾದನೂ ಸಿಗುತ್ತೆ.—ಜ್ಞಾನೋ 10:22; ಯೆಶಾ 41:10

“ಸುಳ್ಳು ಶಾಂತಿಯಿಂದ ದೂರ ಇರಿ!—ಡ್ಯಾರೆಲ್‌ ಮತ್ತು ಡೆಬೋರ ಫ್ರೈಸಿಂಗರ್‌” ವಿಡಿಯೋದ ಒಂದು ದೃಶ್ಯ. ಸಹೋದರಿ ಪ್ರೈಸಿಂಗರ್‌ ಚಿಕ್ಕವರಾಗಿದ್ದಾಗ ಒಂದು ಚಿತ್ರವನ್ನ ನೋಡ್ತಾ ಇರೋ ಪುನರಭಿನಯ.

ಸುಳ್ಳು ಶಾಂತಿಯಿಂದ ದೂರ ಇರಿ!—ಡ್ಯಾರೆಲ್‌ ಮತ್ತು ಡೆಬೋರ ಫ್ರೈಸಿಂಗರ್‌ ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆ ಕೇಳಿ:

  • ಮದುವೆ ಜೀವನದಲ್ಲಿ ದೊಡ್ಡದೊಡ್ಡ ಸಮಸ್ಯೆಗಳು ಬಂದಾಗ ಏನು ಮಾಡಬೇಕು ಅಂತ ಸಹೋದರ ಡ್ಯಾರೆಲ್‌ ಮತ್ತು ಸಹೋದರಿ ಡೆಬೋರ ಫ್ರೈಸಿಂಗರ್‌ರಿಂದ ಕಲಿತ್ರಿ?

8. ಸಭಾ ಬೈಬಲ್‌ ಅಧ್ಯಯನ

(30 ನಿ.) lfb ಪಾಠ 22, ಭಾಗ 5ರ ಪರಿಚಯ ಮತ್ತು ಪಾಠ 23

ಸಮಾಪ್ತಿ ಮಾತುಗಳು (3 ನಿ.) | ಗೀತೆ 49 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ