ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb25 ನವೆಂಬರ್‌ ಪು. 4-5
  • ನವೆಂಬರ್‌ 10-16

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನವೆಂಬರ್‌ 10-16
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2025
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2025
mwb25 ನವೆಂಬರ್‌ ಪು. 4-5

ನವೆಂಬರ್‌ 10-16

ಪರಮ ಗೀತ 3–5

ಗೀತೆ 28 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ಒಳಗಿನ ಸೌಂದರ್ಯಕ್ಕೆ ಬೆಲೆ ಜಾಸ್ತಿ!

(10 ನಿ.)

ಶೂಲಮಿನ ಹುಡುಗಿಯ ಮಾತು ಅವಳ ಒಳಗಿನ ಸೌಂದರ್ಯನ ಎತ್ತಿ ತೋರಿಸ್ತಿತ್ತು (ಪರಮ 4:3, 11; w15 1/15 30 ¶8)

ಅವಳ ನೈತಿಕ ಶುದ್ಧತೆನ ಒಂದು ಸುಂದರ ತೋಟಕ್ಕೆ ಹೋಲಿಸಲಾಗಿದೆ (ಪರಮ 4:12; w00 11/1 11 ¶17)

ನೋಡೋಕೆ ಹೇಗಿದ್ದೀವಿ ಅನ್ನೋದಕ್ಕಿಂತ ಒಳ್ಳೆ ಗುಣಗಳಿರೋದು ಮುಖ್ಯ, ಇದನ್ನ ನಾವೆಲ್ರೂ ಬೆಳೆಸ್ಕೊಬಹುದು (g04 12/22 9 ¶2-5)

ಚಿತ್ರ: 1. ನೋವಲ್ಲಿರೋ ಒಬ್ಬ ಯುವ ಸಹೋದರಿನ ಇನ್ನೊಬ್ಬ ಸಹೋದರಿ ಸಮಾಧಾನ ಮಾಡ್ತಿದ್ದಾರೆ. 2. ವಯಸ್ಸಾದ ಸಹೋದರನ ಜೊತೆ ಒಬ್ಬ ಯುವ ಸಹೋದರ ಖುಷಿ-ಖುಷಿಯಾಗಿ ಸೇವೆ ಮಾಡ್ತಿದ್ದಾನೆ ಮತ್ತು ಅವ್ರಿಗೆ ನಡೆಯೋಕೆ ಸಹಾಯ ಮಾಡ್ತಿದ್ದಾನೆ.

ನಿಮ್ಮನ್ನೇ ಕೇಳಿಕೊಳ್ಳಿ, ‘ಬೇರೆಯವ್ರಲ್ಲಿರೋ ಯಾವ ಒಳ್ಳೆ ಗುಣಗಳು ನಂಗೆ ತುಂಬ ಇಷ್ಟ?’

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಪರಮ 3:5—‘ಯೆರೂಸಲೇಮಿನ ಹೆಣ್ಣುಮಕ್ಕಳಿಗೆ, ಕಾಡಿನ ಜಿಂಕೆ ಮತ್ತು ಹರಿಣಿಗಳ ಮೇಲೆ ಆಣೆಯಿಡಿ’ ಅಂತ ಯಾಕೆ ಹೇಳಲಾಗಿದೆ? (w06 12/1 4 ¶5)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

(4 ನಿ.) ಪರಮ 4:1-16 (th ಪಾಠ 2)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(3 ನಿ.) ಮನೆ-ಮನೆ ಸೇವೆ. ಬೈಬಲ್‌ ಸ್ಟಡಿ ಬಗ್ಗೆ ನೇರವಾಗಿ ಹೇಳಿ. (lmd ಪಾಠ 6 ಪಾಯಿಂಟ್‌ 4)

5. ಸಂಭಾಷಣೆ ಶುರುಮಾಡಿ

(4 ನಿ.) ಅನೌಪಚಾರಿಕ ಸಾಕ್ಷಿ. ತನ್ನ ಸ್ವಂತ ಭಾಷೆಯಲ್ಲಿರೋ ಮಾಹಿತಿನ jw.orgನಲ್ಲಿ ಹೇಗೆ ಹುಡುಕೋದು ಅಂತ ವ್ಯಕ್ತಿಗೆ ತೋರಿಸಿ. (lmd ಪಾಠ 4 ಪಾಯಿಂಟ್‌ 3)

6. ಭಾಷಣ

(5 ನಿ.) ijwbq ಲೇಖನ 131—ವಿಷ್ಯ: ಮೇಕಪ್‌ ಮತ್ತು ಆಭರಣಗಳನ್ನ ಹಾಕೊಳ್ಳೋದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ? (th ಪಾಠ 1)

ನಮ್ಮ ಕ್ರೈಸ್ತ ಜೀವನ

ಗೀತೆ 49

7. ಸತ್ಯದಲ್ಲಿ ಇರುವವ್ರನ್ನ ಮಾತ್ರ ಮದುವೆ ಆಗಿ (ಆದಿ 28:2)

(8 ನಿ.)

ವಿಡಿಯೋ ಹಾಕಿ.

8. ನೀವೊಬ್ಬ ಒಳ್ಳೆ ಸಂಗಾತಿ ಆಗೋಕೆ ಆಗುತ್ತಾ?

(7 ನಿ.) ಚರ್ಚೆ.

ನೀವು ಮದುವೆ ಆಗೋಕೆ ಯಾರನ್ನಾದ್ರೂ ಹುಡುಕ್ತಿದ್ದೀರಾ? ನೀವು ಅವ್ರಿಗೆ ಒಳ್ಳೆ ಸಂಗಾತಿ ಆಗ್ತೀರಾ ಅಂತ ನಿಮ್ಮನ್ನೂ ಯಾರಾದ್ರೂ ಗಮನಿಸ್ತಿರಬಹುದು. ‘ಯೆಹೋವನಿಗೆ ಇಷ್ಟ ಆಗೋ ಒಳ್ಳೆ ಗುಣಗಳು ನಿಮ್ಮಲ್ಲಿದೆ’ ಅಂತ ಅವ್ರಿಗೆ ಗ್ಯಾರಂಟಿ ಅನಿಸುತ್ತಾ? ಕೆಲವೊಬ್ರು ಯೆಹೋವನಿಗೆ ಇಷ್ಟ ಆಗೋ ತರ ಜೀವನ ಮಾಡ್ತಿದ್ದೀನಿ ಅಂತ ಬರೀ ತೋರಿಸ್ಕೊತ್ತಾರೆ. ಆದ್ರೆ ನಿಧಾನವಾಗಿ ಅವ್ರ ನಿಜ ಗುಣಗಳೇನು ಅಂತ ಗೊತ್ತಾಗುತ್ತೆ.

ಒಬ್ಬ ಸಹೋದರಿ ವಯಸ್ಸಾಗಿರೋ ಒಬ್ಬ ಸ್ತ್ರೀಗೆ ಬಸ್‌ನಲ್ಲಿ ತನ್ನ ಸೀಟ್‌ ಬಿಟ್ಕೊಡ್ತಿದ್ದಾಳೆ.
ಕೆಲಸ ಮುಗಿಸಿ ಹೋಗ್ವಾಗ ತನ್ನ ಜೊತೆ ಕೆಲಸ ಮಾಡೋ ವ್ಯಕ್ತಿಗೆ ನಮ್ಮ ಸಹೋದರ ಟ್ರ್ಯಾಕ್ಟ್‌ ಕೊಟ್ಟು ಸಿಹಿಸುದ್ದಿ ಸಾರ್ತಿದ್ದಾನೆ.
ಇಬ್ರು ಸಹೋದರಿಯರು ಮತ್ತು ಇಬ್ರು ಸಹೋದರರು ಸಿಹಿಸುದ್ದಿ ಸಾರ್ತಿದ್ದಾರೆ. ಸಹೋದರಿಯರು ಎಲ್ಲಿ ಸಾರಬೇಕು ಅಂತ ಒಬ್ಬ ಸಹೋದರ ಹೇಳ್ತಿದ್ದಾನೆ.

ಯೆಹೋವನಿಗೆ ಇಷ್ಟ ಆಗೋ ತರ ಜೀವಿಸೋ ವ್ಯಕ್ತಿ ಈ ಕೆಳಗೆ ಕೊಟ್ಟಿರೋ ಗುಣಗಳನ್ನ ತೋರಿಸ್ತಾನೆ. ಈ ಗುಣಗಳಿರಬೇಕು ಅಂತ ಯಾವ ವಚನ ಹೇಳುತ್ತೆ ಅಂತ ಬರೆಯಿರಿ:

  • ಯೆಹೋವನ ಮೇಲೆ ಪ್ರೀತಿ ಮತ್ತು ನಂಬಿಕೆ

  • ಕುಟುಂಬಕ್ಕೆ ಒಳ್ಳೆ ಯಜಮಾನ ಅಥವಾ ಗೌರವ ಕೊಡೋ ಹೆಂಡತಿ

  • ಸ್ವಾರ್ಥ ಇಲ್ಲದ ನಿಜ ಪ್ರೀತಿ

  • ಒಳ್ಳೆ ತೀರ್ಮಾನ ಮಾಡೋದು, ತೂಗಿ ನೋಡೋದು ಮತ್ತು ಹಠ ಮಾಡದೆ ಬಿಟ್ಕೊಡೋದು

  • ದುಡಿಯೋದು ಮತ್ತು ಕಷ್ಟಪಟ್ಟು ಕೆಲಸ ಮಾಡೋದು

9. ಸಭಾ ಬೈಬಲ್‌ ಅಧ್ಯಯನ

(30 ನಿ.) lfb ಪಾಠ 34-35

ಸಮಾಪ್ತಿ ಮಾತುಗಳು (3 ನಿ.) | ಗೀತೆ 88 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ