ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w21 ಜೂನ್‌ ಪು. 31
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ಅನುರೂಪ ಮಾಹಿತಿ
  • ಕ್ರಿಸ್ತನ ಧರ್ಮಶಾಸ್ತ್ರ
    ಕಾವಲಿನಬುರುಜು—1996
  • ಈ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯಿರಿ
    2017-2018ರ ಕಾರ್ಯಕ್ರಮ—ಶಾಖಾ ಕಛೇರಿ ಪ್ರತಿನಿಧಿಯೊಂದಿಗೆ
  • ಆದಿ ಕ್ರೈಸ್ತರು ಮತ್ತು ಮೋಶೆಯ ಧರ್ಮಶಾಸ್ತ್ರ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ಕ್ರಿಸ್ತನಿಗೆ ಪೂರ್ವದ ಧರ್ಮಶಾಸ್ತ್ರ
    ಕಾವಲಿನಬುರುಜು—1996
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
w21 ಜೂನ್‌ ಪು. 31

ವಾಚಕರಿಂದ ಪ್ರಶ್ನೆಗಳು

ಅಪೊಸ್ತಲ ಪೌಲ “ನಾನು ನಿಯಮ ಪುಸ್ತಕದ ಪಾಲಿಗೆ ಸತ್ತು ಹೋದೆ” ಅಂತ ಯಾಕೆ ಹೇಳಿದ?—ಗಲಾ. 2:19.

ಅಪೊಸ್ತಲ ಪೌಲ.

“ನಾನು ನಿಯಮ ಪುಸ್ತಕದ ಪಾಲಿಗೆ ಸತ್ತು ಹೋದೆ. ಆದ್ರೆ ಹಾಗೆ ಸತ್ತಿದ್ರಿಂದ ದೇವರ ಪಾಲಿಗೆ ಬದುಕಿದೆ” ಅಂತ ಪೌಲ ಬರೆದನು.—ಗಲಾ. 2:19.

ರೋಮಿನ ಗಲಾತ್ಯ ಪ್ರಾಂತ್ಯದಲ್ಲಿದ್ದ ಸಭೆಗಳಿಗೆ ಪೌಲ ಬರೆದ ಪತ್ರದಲ್ಲಿರೋ ಮುಖ್ಯ ವಿಷಯಕ್ಕೂ ಈ ವಿಷಯಕ್ಕೂ ಸಂಬಂಧ ಇತ್ತು. ಯಾಕಂದ್ರೆ ಅಲ್ಲಿದ್ದ ಗಂಡಸರು ಕ್ರೈಸ್ತರಿಗೆ ರಕ್ಷಣೆ ಪಡೀಬೇಕಂದ್ರೆ ಮೋಶೆಯ ನಿಯಮ ಪುಸ್ತಕದಲ್ಲಿರೋ ನಿಯಮಗಳನ್ನೆಲ್ಲಾ ಪಾಲಿಸಬೇಕು, ಅದ್ರಲ್ಲೂ ಸುನ್ನತಿ ಮಾಡಿಸಿಕೊಳ್ಳಲೇಬೇಕು ಅಂತೆಲ್ಲಾ ಸುಳ್ಳು ಹೇಳಿಕೊಡ್ತಿದ್ರು. ಆದ್ರೆ ಕ್ರೈಸ್ತರು ಈಗಲೂ ಸುನ್ನತಿ ಮಾಡಿಸಿಕೊಳ್ಳಲೇಬೇಕು ಅಂತ ದೇವರು ಹೇಳ್ತಿಲ್ಲ ಅನ್ನೋದು ಪೌಲನಿಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಪೌಲ ಬಲವಾದ ಆಧಾರಗಳನ್ನ ಕೊಟ್ಟು ಆ ಬೋಧನೆಗಳೆಲ್ಲಾ ಸುಳ್ಳು ಅಂತ ಸಾಬೀತು ಮಾಡಿದ ಮತ್ತು ಯೇಸು ಕ್ರಿಸ್ತನ ಬಿಡುಗಡೆ ಬೆಲೆಯ ಮೇಲೆ ಸಹೋದರ ಸಹೋದರಿಯರ ನಂಬಿಕೆಯನ್ನ ಬಲಪಡಿಸಿದ.—ಗಲಾ. 2:4; 5:2.

ಪೌಲ ಯಾಕೆ “ನಾನು ನಿಯಮ ಪುಸ್ತಕದ ಪಾಲಿಗೆ ಸತ್ತು ಹೋದೆ” ಅಂತ ಹೇಳಿದ? ಒಬ್ಬ ವ್ಯಕ್ತಿ ಸತ್ತುಹೋದ ಮೇಲೆ ಅವನಿಗೆ ಏನೂ ಗೊತ್ತಿರಲ್ಲ. ಅವನ ಸುತ್ತಮುತ್ತ ಇರೋ ಯಾವ ವಿಷಯನೂ ಅವನನ್ನ ಏನೂ ಮಾಡೋಕೆ ಆಗಲ್ಲ ಅಂತ ಬೈಬಲ್‌ ಹೇಳುತ್ತೆ. (ಪ್ರಸಂ. 9:5) ಅದೇ ತರ ನಿಯಮ ಪುಸ್ತಕದ ಕೆಳಗೆ ಇಲ್ಲದೆ ಇದ್ದಿದ್ರಿಂದ ಪೌಲ ಆ ನಿಯಮ ಪುಸ್ತಕದ ಪಾಲಿಗೆ ಸತ್ತು ಹೋದ. ಆದ್ರೆ ಯೇಸು ಕ್ರಿಸ್ತನ ಬಿಡುಗಡೆ ಬೆಲೆಯ ಮೇಲೆ ಅವನಿಗೆ ನಂಬಿಕೆ ಇತ್ತು. ಅದಕ್ಕೇ ‘ನಾನು ದೇವರ ಪಾಲಿಗೆ ಬದುಕಿದವನಾದೆ’ ಅಂತ ಹೇಳಿದ.

ಅವನು ಈ ಮಾತನ್ನ ಹೇಳೋ ಮುಂಚೆ “ಒಬ್ಬನು ನಿಯಮ ಪುಸ್ತಕ ಹೇಳೋದನ್ನ ಪಾಲಿಸಿದ ತಕ್ಷಣ ದೇವರು ಅವನನ್ನ ನೀತಿವಂತನಾಗಿ ನೋಡಲ್ಲ, ಯೇಸು ಕ್ರಿಸ್ತನಲ್ಲಿ ನಂಬಿಕೆ ಇಟ್ರೆ ಮಾತ್ರ ನೀತಿವಂತನಾಗಿ ನೋಡ್ತಾನೆ” ಅಂತ ಹೇಳಿದ. (ಗಲಾ. 2:16) ಆದ್ರೂ ನಿಯಮ ಪುಸ್ತಕಕ್ಕೆ ಒಂದು ಉದ್ದೇಶ ಇತ್ತು. ಅದ್ರ ಬಗ್ಗೆ ಪೌಲ ಹೀಗೆ ಹೇಳಿದ: “ಯಾರಿಗೆ ಮಾತು ಕೊಟ್ಟಿದ್ನೋ ಆ ಸಂತಾನ ಬರೋ ತನಕ ಜನ್ರ ಪಾಪಗಳನ್ನ ತೋರಿಸೋಕೆ ದೇವರು ನಿಯಮ ಪುಸ್ತಕ ಕೊಟ್ಟನು.” (ಗಲಾ. 3:19) ಮನುಷ್ಯರು ಪಾಪಿಗಳು ಅವರಿಂದ ನಿಯಮ ಪುಸ್ತಕವನ್ನ ಸಂಪೂರ್ಣವಾಗಿ ಚಾಚೂತಪ್ಪದೆ ಪಾಲಿಸೋಕೆ ಆಗಲ್ಲ, ರಕ್ಷಣೆ ಪಡಿಯೋಕೆ ಒಂದು ಪರಿಪೂರ್ಣವಾದ ಬಲಿಯ ಅವಶ್ಯಕತೆ ಇದೆ, ಆ ಬಲಿ ಆ ಸಂತಾನ ಯೇಸು ಕ್ರಿಸ್ತನೇ ಅಂತ ನಿಯಮ ಪುಸ್ತಕ ತೋರಿಸಿ ಕೊಡ್ತು. ಹಾಗಾಗಿ ಒಬ್ಬ ವ್ಯಕ್ತಿ ಯೇಸು ಮೇಲೆ ನಂಬಿಕೆ ಇಟ್ರೆ ಮಾತ್ರ ದೇವರ ದೃಷ್ಟಿಯಲ್ಲಿ ನೀತಿವಂತ ಆಗ್ತಾನೆ. (ಗಲಾ. 3:24) ಅಪೊಸ್ತಲ ಪೌಲನನ್ನ ದೇವರು ನೀತಿವಂತನಾಗಿ ನೋಡಿದ್ರು. ಯಾಕಂದ್ರೆ ನಿಯಮ ಪುಸ್ತಕದ ಸಹಾಯದಿಂದ ಪೌಲ ಯೇಸುವನ್ನ ಮೆಸ್ಸೀಯ ಅಂತ ಒಪ್ಪಿಕೊಂಡು ಅವನ ಮೇಲೆ ನಂಬಿಕೆ ಇಟ್ಟ. ಹೀಗೆ ಅವನು ‘ದೇವರ ಪಾಲಿಗೆ ಬದುಕಿದವನಾದ’ ಮತ್ತು ‘ನಿಯಮ ಪುಸ್ತಕದ ಪಾಲಿಗೆ ಸತ್ತು ಹೋದ.’ ಅವನ ಮೇಲೆ ದೇವರಿಗೆ ಅಧಿಕಾರ ಇತ್ತು ಮತ್ತು ನಿಯಮ ಪುಸ್ತಕಕ್ಕೆ ಅವನ ಮೇಲೆ ಇದ್ದ ಅಧಿಕಾರ ಹೋಯ್ತು.

ಪೌಲ ರೋಮನ್ನರಿಗೆ ಬರೆದ ಪತ್ರದಲ್ಲೂ ಇದೇ ತರದ ವಿಷಯವನ್ನ ಹೇಳಿದ: “ನನ್ನ ಸಹೋದರರೇ, ಕ್ರಿಸ್ತನ ದೇಹ ನಿಮ್ಮನ್ನ ನಿಯಮಗಳಿಂದ ಬಿಡುಗಡೆ ಮಾಡಿದೆ . . . ಆದ್ರೆ ನಾವು ನಿಯಮದ ಪಾಲಿಗೆ ಸತ್ತಿರೋದ್ರಿಂದ ಈಗ ನಮಗೆ ನಿಯಮಗಳಿಂದ ಬಿಡುಗಡೆ ಆಗಿದೆ.” (ರೋಮ. 7:4, 6) ಈ ವಚನದಿಂದ ಮತ್ತು ಗಲಾತ್ಯ 2:19ರಿಂದ ನಮಗೇನು ಗೊತ್ತಾಗುತ್ತೆ? ಪೌಲ ಇಲ್ಲಿ ಸಾಯೋದ್ರ ಬಗ್ಗೆ ಮಾತಾಡ್ತಿಲ್ಲ ನಿಯಮ ಪುಸ್ತಕದಿಂದ ಬಿಡುಗಡೆ ಆಗೋದ್ರ ಬಗ್ಗೆ ಮಾತಾಡ್ತಿದ್ದಾನೆ. ಹಾಗಾಗಿ ಪೌಲನಾಗಲಿ ಬೇರೆ ಯಾರೇ ಆಗಲಿ ಯೇಸು ಕ್ರಿಸ್ತನ ಬಿಡುಗಡೆ ಬೆಲೆ ಮೇಲೆ ನಂಬಿಕೆ ಇಟ್ಟ ಮೇಲೆ ನಿಯಮ ಪುಸ್ತಕವನ್ನ ಪಾಲಿಸೋ ಅವಶ್ಯಕತೆ ಇರಲಿಲ್ಲ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ