ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp22 ನಂ. 1 ಪು. 8-9
  • 2 | ಸೇಡು ತೀರಿಸಬೇಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • 2 | ಸೇಡು ತೀರಿಸಬೇಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2022
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಬೈಬಲ್‌ ಕಲಿಸೋದು:
  • ಅರ್ಥ ಏನು?
  • ನೀವೇನು ಮಾಡಬಹುದು?
  • ಸೇಡು ತೀರಿಸೋದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಯಾರಾದರೂ ನಿಮ್ಮ ಮನನೋಯಿಸಿದಾಗ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ಪ್ರತೀಕಾರವು ತಪ್ಪೋ?
    ಕಾವಲಿನಬುರುಜು—1992
  • ದ್ವೇಷವನ್ನು ಜಯಿಸಲು ನಮ್ಮಿಂದಾಗುತ್ತೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2022
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2022
wp22 ನಂ. 1 ಪು. 8-9
ಕೋಪಗೊಂಡ ಇಬ್ಬರು ಗಂಡಸರು ಒಂದು ಮರದ ಕೊಂಬೆಗಳ ಮೇಲೆ ಎದುರುಬದುರಾಗಿ ಕೂತಿದ್ದಾರೆ. ತಾವು ಕೂತಿರೋ ಕೊಂಬೆಗಳನ್ನೇ ಅವರು ಕೊಯ್ಯುತ್ತಿದ್ದಾರೆ.

ದ್ವೇಷದ ಸರಪಳಿಯನ್ನು ಮುರಿಯೋದು ಹೇಗೆ?

2 | ಸೇಡು ತೀರಿಸಬೇಡಿ

ಬೈಬಲ್‌ ಕಲಿಸೋದು:

“ಯಾರಾದ್ರೂ ನಿಮಗೆ ಕೆಟ್ಟದು ಮಾಡಿದ್ರೆ ನೀವೂ ಅವ್ರಿಗೆ ಕೆಟ್ಟದು ಮಾಡಬೇಡಿ . . . ಸಾಧ್ಯವಾದ್ರೆ ಎಲ್ರ ಜೊತೆ ಶಾಂತಿಯಿಂದ ಇರೋಕೆ ನಿಮ್ಮಿಂದ ಆಗೋದನ್ನೆಲ್ಲ ಮಾಡಿ . . . ಸೇಡು ತೀರಿಸಬೇಡಿ . . . ‘“ಸೇಡು ತೀರಿಸೋದು ನನ್ನ ಕೆಲಸ, ನಾನೇ ಸರಿಯಾದ ಪ್ರತಿಫಲ ಕೊಡ್ತೀನಿ” ಅಂತ ಯೆಹೋವ ಹೇಳ್ತಾನೆ’ ಅಂತ ಬರೆದಿದೆ.”—ರೋಮನ್ನರಿಗೆ 12:17-19.

ಅರ್ಥ ಏನು?

ಯಾರಾದ್ರು ನಮಗೆ ಕೆಟ್ಟದು ಮಾಡಿದ್ರೆ ಅವರ ಮೇಲೆ ಕೋಪ ಬರೋದು ಸಹಜ. ಆದ್ರೆ ಅವರ ಮೇಲೆ ಸೇಡು ತೀರಿಸಬಾರದು ಅಂತ ದೇವರು ಬಯಸುತ್ತಾನೆ. ಅದಕ್ಕೆ ಬದಲು ನಮಗಾಗಿರೋ ಅನ್ಯಾಯವನ್ನ ದೇವರು ಸರಿ ಮಾಡೋ ತನಕ ಕಾಯಬೇಕು ಅಂತ ಆತನು ಇಷ್ಟಪಡುತ್ತಾನೆ.—ಕೀರ್ತನೆ 37:7, 10.

ನೀವೇನು ಮಾಡಬಹುದು?

ಮನುಷ್ಯರಲ್ಲಿ ಕುಂದು ಕೊರತೆಗಳು ಇರೋದ್ರಿಂದ ಅವರು ಸೇಡು ತೀರಿಸುವಾಗ ದ್ವೇಷ ಅನ್ನೋ ಸರಪಳಿಯ ಕೊಂಡಿಗಳು ಒಂದೊಂದಾಗಿ ಸೇರಿಕೊಳ್ಳುತ್ತಾ ಹೋಗುತ್ತೆ. ಹಾಗಾಗಿ ಯಾರಾದ್ರು ನಿಮಗೆ ಹಾನಿ ಮಾಡಿದ್ರೆ ಏಟಿಗೆ ತಿರುಗೇಟು ಕೊಡೋಕೆ ಹೋಗಬೇಡಿ. ಮೊದಲು ನಿಮ್ಮ ಭಾವನೆಗಳನ್ನು ನಿಯಂತ್ರಿಸಿ, ಸಮಾಧಾನವಾಗಿ ಇರೋಕೆ ಪ್ರಯತ್ನಿಸಿ. ಇನ್ನು ಕೆಲವೊಮ್ಮೆ, ನಡೆದ ವಿಷಯಗಳನ್ನ ಮನಸ್ಸಿಗೆ ತಗೊಳ್ಳದೆ ಇರೋದೇ ಒಳ್ಳೇದು. (ಜ್ಞಾನೋಕ್ತಿ 19:11) ಕೆಲವು ವಿಷಯಗಳನ್ನ ನಾವು ಅಧಿಕಾರಿಗಳಿಗೆ ಹೇಳಬೇಕಾಗುತ್ತೆ. ನೀವು ಯಾವುದಾದ್ರು ಅಪರಾಧಕ್ಕೆ ಬಲಿಯಾಗಿದ್ದರೆ, ಆ ವಿಷಯವನ್ನ ಪೊಲೀಸರಿಗೆ ಅಥವಾ ಬೇರೆ ಅಧಿಕಾರಿಗಳಿಗೆ ವರದಿಸಬಹುದು.

ಸೇಡು ಒಂದು ತಿರುಗು ಬಾಣ

ಸಮಸ್ಯೆಯನ್ನ ಸಮಾಧಾನವಾಗಿ ಬಗೆಹರಿಸೋಕೆ ಆಗದೆ ಇದ್ರೆ ಏನು ಮಾಡೋದು? ಅಥವಾ ಸಮಸ್ಯೆಯನ್ನ ಬಗೆಹರಿಸೋಕೆ ನಿಮ್ಮಿಂದಾದ ಎಲ್ಲಾ ಪ್ರಯತ್ನ ಮಾಡಿನೂ ಪ್ರಯೋಜನ ಆಗಿಲ್ಲಾಂದ್ರೆ ಏನ್‌ ಮಾಡೋದು? ಆಗ ಸೇಡು ತೀರಿಸಿಕೊಳ್ಳೋಕೆ ಹೋಗಬೇಡಿ. ಹಾಗೆ ಮಾಡಿದ್ರೆ ಪರಿಸ್ಥಿತಿ ಇನ್ನು ಹದಗೆಡುತ್ತೆ. ಅದರ ಬದಲು ದ್ವೇಷದ ಜ್ವಾಲೆ ನಂದಿಸಿ. ಆ ಸಮಸ್ಯೆಯನ್ನ ದೇವರು ಸರಿ ಮಾಡ್ತಾನೆ ಅನ್ನೋ ಭರವಸೆ ಇಡಿ. ಬೈಬಲ್‌ ಹೇಳೋದು: “ಆತನ ಮೇಲೆ ಭರವಸೆ ಇಡು, ಆತನೇ ನಿನ್ನ ಪರವಾಗಿ ಹೆಜ್ಜೆ ತಗೊತಾನೆ.”—ಕೀರ್ತನೆ 37:3-5.

ನಿಜ ಅನುಭವ—ಏಡ್ರಿಯನ್‌

ಸೇಡಿನ ಕಿಡಿ ಆರಿಸಿದರು

ಏಡ್ರಿಯನ್‌.

ಹದಿವಯಸ್ಸಿನಲ್ಲೇ ಏಡ್ರಿಯನ್‌ ಸೇಡು ತೀರಿಸುವ ವ್ಯಕ್ತಿ ಆಗಿದ್ರು. ಇದರ ಬಗ್ಗೆ ಅವರು ಹೇಳಿದ್ದು: “ನಮ್ಮ ಹೊಡೆದಾಟದಲ್ಲಿ ಗುಂಡು ಹಾರಿಸೋದು ಸಾಮಾನ್ಯವಾಗಿತ್ತು. ಹಾಗಾಗಿ ನಾನು ಎಷ್ಟೋ ಸಲ ರಕ್ತದ ಮಡಿಲಲ್ಲೇ ಮಲಗುತ್ತಿದ್ದೆ. ನಾನು ಸತ್ತು ಹೋದೆ ಅಂತ ನೆನಸಿ ತುಂಬ ಸಲ ನನ್ನನ್ನ ಬೀದಿಯಲ್ಲೇ ಬಿಟ್ಟು ಹೋಗಿದ್ದಾರೆ.”

ಏಡ್ರಿಯನ್‌ 16 ವರ್ಷವಿದ್ದಾಗ ಬೈಬಲನ್ನ ಕಲಿಯೋಕೆ ಶುರುಮಾಡಿದ್ರು. ಅವರು ಹೇಳಿದ್ದು: “ನಾನು ಬೈಬಲ್‌ ಕಲಿಯುತ್ತಾ ಹೋದಹಾಗೆ ಬದಲಾವಣೆ ಮಾಡಬೇಕು ಅಂತ ಗೊತ್ತಾಯ್ತು.” ಅದಕ್ಕೆ ದ್ವೇಷ ಮತ್ತು ಹಿಂಸೆ ಮಾಡೋದನ್ನ ನಿಲ್ಲಿಸಬೇಕು ಅಂತ ಅವರು ಅರ್ಥ ಮಾಡ್ಕೊಂಡ್ರು. ರೋಮನ್ನರಿಗೆ 12:17-19ರಲ್ಲಿ ಸೇಡು ತೀರಿಸ್ಕೋಬಾರದು ಅಂತ ಹೇಳಿದ ವಿಷಯ ಅವರಿಗೆ ತುಂಬ ಇಷ್ಟವಾಯ್ತು. ಅವರು ಹೇಳಿದ್ದು: “ನನಗಾದ ಅನ್ಯಾಯವನ್ನ ಯೆಹೋವ ದೇವರು ಇವತ್ತಲ್ಲ ನಾಳೆ ಸರಿ ಮಾಡ್ತಾನೆ ಅನ್ನೋ ನಂಬಿಕೆ ಇಟ್ಟೆ. ಹೋಗ್ತಾಹೋಗ್ತಾ ನನ್ನಲ್ಲಿದ್ದ ಕ್ರೂರ ಮನೋಭಾವ ಕಣ್ಮರೆಯಾಯ್ತು.”

ಒಂದಿನ ಸಂಜೆ ಏಡ್ರಿಯನ್‌ನ ಹಳೆಯ ವಿರೋಧಿ ಗ್ಯಾಂಗಿನ ಲೀಡರ್‌ ಅವನ ಹತ್ರ ಬಂದು “ತಾಕತ್ತಿದ್ರೆ ಹೊಡಿ ಬಾರೋ!” ಅಂತ ಕಿರುಚಿದ. ಏಡ್ರಿಯನ್‌ ಹೇಳಿದ್ದು: “ಅದನ್ನ ಕೇಳಿ ನನ್ನ ರಕ್ತ ಕುದಿತಿತ್ತು.” ಆದ್ರೆ ಏಡ್ರಿಯನ್‌ ಅವನ ಜೊತೆ ಹೊಡೆದಾಟ ಮಾಡೋ ಬದ್ಲು, ಯೆಹೋವನಿಗೆ ಒಂದು ಚಿಕ್ಕ ಪ್ರಾರ್ಥನೆ ಮಾಡಿ ಅಲ್ಲಿಂದ ಹೋದ್ರು.

ಏಡ್ರಿಯನ್‌ ಹೇಳಿದ್ದು: “ಮಾರನೇ ದಿನಾನೇ ಆ ಲೀಡರನ್ನ ಮತ್ತೆ ನೋಡ್ದೆ. ಅವನನ್ನ ನೋಡಿ ನನ್ನ ಮೈಯೆಲ್ಲಾ ಉರಿಯೋಕೆ ಶುರುವಾಯ್ತು. ಆದ್ರೆ ಆಗ್ಲೂ ನನ್ನ ಮನಸ್ಸಲ್ಲಿ ಯೆಹೋವ ದೇವರ ಹತ್ರ ‘ನನ್ನ ಕೋಪ ನಿಯಂತ್ರಿಸೋಕೆ ಸಹಾಯ ಮಾಡಪ್ಪ’ ಅಂತ ಬೇಡಿಕೊಂಡೆ. ಇದ್ದಕ್ಕಿದ್ದಂತೆ ಅವನು ನನ್ನ ಹತ್ರ ಬಂದು: ‘ನಿನ್ನೆ ನಾನು ಹೇಳಿದನ್ನ ಮರೆತು ಬಿಡು. ನಿಜ ಹೇಳಬೇಕಂದ್ರೆ ನನಗೆ ನಿನ್ನ ತರ ಆಗಬೇಕು ಅಂತ ಆಸೆ. ನನಗೂ ಬೈಬಲ್‌ ಕಲಿಬೇಕು’ ಅಂತ ಹೇಳಿದ. ಅದನ್ನ ಕೇಳಿದಾಗ ನನ್ನ ಕೋಪ ನಿಯಂತ್ರಿಸಿದ್ದು ಒಳ್ಳೆದಾಯ್ತು ಅಂತ ಅನಿಸಿತು. ಆಮೇಲೆ ನಾವಿಬ್ರು ಒಟ್ಟಿಗೆ ಬೈಬಲ್‌ ಕಲಿತ್ವಿ.”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ