ನಿಮಗೆ ಗೊತ್ತಿತ್ತಾ?
ಯೆಹೋವ ಇಸ್ರಾಯೇಲ್ಯರಿಗೆ ಪಾರಿವಾಳ ಅಥವಾ ಕಾಡುಪಾರಿವಾಳನ ಬಲಿ ಕೊಡಬಹುದು ಅಂತ ಯಾಕೆ ಹೇಳಿದನು?
ಬಲಿ ಕೊಡುವಾಗ ಪಾರಿವಾಳ ಅಥವಾ ಕಾಡುಪಾರಿವಾಳನ ಬಲಿ ಕೊಡಬಹುದು ಅಂತ ಯೆಹೋವ ನಿಯಮ ಪುಸ್ತಕದಲ್ಲಿ ಬರೆಸಿದ್ದನು. ಇಸ್ರಾಯೇಲ್ಯರು ಇವೆರಡರಲ್ಲಿ ಯಾವುದನ್ನ ಕೊಟ್ರೂ ಯೆಹೋವ ಅದನ್ನ ಒಪ್ಪಿಕೊಳ್ಳುತ್ತಿದ್ದನು. (ಯಾಜ. 1:14; 12:8; 14:30) ಯೆಹೋವ ಈ ನಿಯಮ ಕೊಟ್ಟಿದ್ರಿಂದ ಇಸ್ರಾಯೇಲ್ಯರಿಗೆ ಬಲಿ ಕೊಡೋಕೆ ಸುಲಭ ಆಯ್ತು. ಯಾಕಂದ್ರೆ ಕಾಡುಪಾರಿವಾಳಗಳು ಯಾವಾಗಲೂ ಸಿಗ್ತಿರಲಿಲ್ಲ. ಯಾಕೆ?
ಕಾಡುಪಾರಿವಾಳ
ಕಾಡುಪಾರಿವಾಳಗಳು ವಲಸೆ ಹೋಗೋ ಪಕ್ಷಿಗಳು. ಅವು ಬೇಸಿಗೆಯಲ್ಲಿ ಮಾತ್ರ ಇಸ್ರಾಯೇಲಿನಲ್ಲಿ ಇರುತ್ತಿದ್ದವು. ಆದ್ರೆ ಚಳಿಗಾಲದಲ್ಲಿ ಅಂದ್ರೆ ಅಕ್ಟೋಬರ್ನಲ್ಲಿ ಬೇರೆ ದೇಶಕ್ಕೆ ವಲಸೆ ಹೋಗ್ತಿದ್ದವು. ವಸಂತ ಕಾಲಕ್ಕೆ ವಾಪಸ್ ಬರುತ್ತಿದ್ದವು. (ಪರಮ. 2:11, 12; ಯೆರೆ. 8:7) ಹಾಗಾಗಿ ಚಳಿಗಾಲದಲ್ಲಿ ಬಲಿ ಕೊಡೋಕೆ ಇಸ್ರಾಯೇಲ್ಯರಿಗೆ ಈ ಕಾಡುಪಾರಿವಾಳಗಳು ಸಿಗುತ್ತಿರಲಿಲ್ಲ.
ಪಾರಿವಾಳ
ಆದ್ರೆ ಪಾರಿವಾಳಗಳು ವಲಸೆ ಹೋಗುತ್ತಿರಲಿಲ್ಲ. ಅವು ಇಡೀ ವರ್ಷ ಇಸ್ರಾಯೇಲ್ಯರಿಗೆ ಸಿಗುತ್ತಿತ್ತು. ಅಷ್ಟೇ ಅಲ್ಲ, ಪಾರಿವಾಳಗಳನ್ನು ಮನೆಯಲ್ಲಿ ಸಾಕುತ್ತಿದ್ದರು. (ಯೋಹಾನ 2:14, 16 ಹೋಲಿಸಿ.) ಬೈಬಲ್ ಕಾಲದಲ್ಲಿದ್ದ ಸಸ್ಯಗಳು ಮತ್ತು ಪ್ರಾಣಿಗಳು (ಇಂಗ್ಲಿಷ್) ಅನ್ನೋ ಪುಸ್ತಕ ಹೀಗೆ ಹೇಳುತ್ತೆ: “ಪ್ಯಾಲಸ್ತೀನ್ನಲ್ಲಿದ್ದ ಹಳ್ಳಿಗಳಲ್ಲಿ ಮತ್ತು ಪಟ್ಟಣಗಳಲ್ಲಿ ಪಾರಿವಾಳಗಳನ್ನು ಸಾಕುತ್ತಿದ್ದರು. ಅದಕ್ಕಂತಾನೇ ಅವರ ಮನೆಯ ಗೋಡೆ ಕೊರೆದು ಗೂಡು ಮಾಡ್ತಿದ್ರು.”—ಯೆಶಾಯ 60:8 ಹೋಲಿಸಿ.
ಗೂಡಲ್ಲಿರೋ ಪಾರಿವಾಳ
ಇಸ್ರಾಯೇಲ್ಯರಿಗೆ ಯಾವುದನ್ನ ಬೇಕಾದ್ರೂ ಬಲಿ ಕೊಡಬಹುದು ಅಂತ ಯೆಹೋವ ಹೇಳಿದಾಗ ಆತನಿಗೆ ಅವರ ಮೇಲೆ ಎಷ್ಟು ಪ್ರೀತಿಯಿದೆ ಅಂತ ಗೊತ್ತಾಗುತ್ತೆ. ಇಡೀ ವರ್ಷ ಪಾರಿವಾಳಗಳು ಸಿಕ್ತಿದ್ರಿಂದ ಬಲಿ ಕೊಡೋಕೆ ಇಸ್ರಾಯೇಲ್ಯರಿಗೆ ಕಷ್ಟ ಆಗ್ತಿರಲಿಲ್ಲ.