ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp23 ನಂ. 1 ಪು. 14-15
  • ಮಾನಸಿಕ ಆರೋಗ್ಯದ ಸಮಸ್ಯೆ ಇರೋರಿಗೆ ಸಹಾಯ ಮಾಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾನಸಿಕ ಆರೋಗ್ಯದ ಸಮಸ್ಯೆ ಇರೋರಿಗೆ ಸಹಾಯ ಮಾಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2023
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಇದರ ಅರ್ಥ ಏನು
  • ಇದು ಹೇಗೆ ಸಹಾಯ ಮಾಡುತ್ತೆ
  • ಬೆಂಬಲವಾಗಿ ನಿಲ್ಲಿ
  • ಕಾಯಿಲೆಬಿದ್ದ ಮಿತ್ರರೊಬ್ಬರಿಗೆ ಹೇಗೆ ಸಹಾಯಮಾಡುವಿರಿ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ನನ್ನ ಫ್ರೆಂಡ್‌ನ ತಪ್ಪನ್ನು ತಿಳಿಸಬೇಕೋ?
    ಎಚ್ಚರ!—2009
  • ಆರೋಗ್ಯ ಸಮಸ್ಯೆ ನಿಭಾಯಿಸೋದು ಹೇಗೆ?
    ಇತರ ವಿಷಯಗಳು
  • ನನ್ನ ಗೆಳತಿಯು ನನ್ನ ಮನಸ್ಸನ್ನು ನೋಯಿಸಿದ್ದೇಕೆ?
    ಎಚ್ಚರ!—2000
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2023
wp23 ನಂ. 1 ಪು. 14-15
ಹೆಂಡತಿ ತನ್ನ ಮನಸ್ಸಲ್ಲಿರೋ ದುಃಖವನ್ನ ಹೇಳ್ತಿದ್ದಾಗ ಗಂಡ ತಾಳ್ಮೆಯಿಂದ ಕೇಳ್ತಿದ್ದಾನೆ.

ಮಾನಸಿಕ ಆರೋಗ್ಯದ ಸಮಸ್ಯೆ ಇರೋರಿಗೆ ಸಹಾಯ ಮಾಡಿ

ಬೈಬಲ್‌ ಹೀಗೆ ಹೇಳುತ್ತೆ: “ನಿಜವಾದ ಸ್ನೇಹಿತ ಎಲ್ಲ ಸಮಯದಲ್ಲೂ ಪ್ರೀತಿಸ್ತಾನೆ. ಕಷ್ಟಕಾಲದಲ್ಲಿ ಅವನು ನಿಮ್ಮ ಸಹೋದರನಾಗ್ತಾನೆ.”—ಜ್ಞಾನೋಕ್ತಿ 17:17.

ಇದರ ಅರ್ಥ ಏನು

ನಮ್ಮ ಸ್ನೇಹಿತರಲ್ಲಿ ಯಾರಿಗಾದ್ರೂ ಮಾನಸಿಕ ಆರೋಗ್ಯದ ಸಮಸ್ಯೆ ಇದೆ ಅಂತ ಗೊತ್ತಾದಾಗ ಅವ್ರಿಗೆ ಹೇಗೆ ಸಹಾಯ ಮಾಡಬೇಕು ಅಂತ ನಮಗೆ ಗೊತ್ತಾಗಲ್ಲ. ಆದ್ರೆ ಅವ್ರ ಮೇಲೆ ನಮಗೆ ಕಾಳಜಿ ಇದೆ, ನಾವು ಅವ್ರ ಬಗ್ಗೆ ಯೋಚಿಸ್ತೀವಿ ಅಂತ ತೋರಿಸ್ಕೊಡಬಹುದು.

ಇದು ಹೇಗೆ ಸಹಾಯ ಮಾಡುತ್ತೆ

“ಕೇಳಿಸ್ಕೊಳ್ಳೋದನ್ನ ಜಾಸ್ತಿ ಮಾಡಿ.”—ಯಾಕೋಬ 1:19.

ನಿಮ್ಮ ಸ್ನೇಹಿತ ಮಾತಾಡುವಾಗ ಚೆನ್ನಾಗಿ ಕೇಳಿಸಿಕೊಳ್ಳಬೇಕು. ಅದೇ ನೀವು ಅವ್ರಿಗೆ ಮಾಡೋ ದೊಡ್ಡ ಸಹಾಯ. ಅವರು ಹೇಳಿದ್ದಕ್ಕೆಲ್ಲ ವಾಪಸ್‌ ಏನಾದ್ರು ಹೇಳಲೇಬೇಕು ಅಂತೇನಿಲ್ಲ. ಅನುಕಂಪದಿಂದ ಅವರು ಹೇಳೋದನ್ನ ಕೇಳಿಸಿಕೊಂಡ್ರೆ ಸಾಕು. ‘ಇವ್ರೇನು ಹೀಗೆಲ್ಲಾ ಮಾತಾಡ್ತಾರೆ,’ ‘ಛೇ, ಹೀಗೆಲ್ಲಾ ಹೇಳೋದು, ಯೋಚಿಸೋದು ತುಂಬ ತಪ್ಪು’ ಅಂತ ಅಂದ್ಕೊಬೇಡಿ. ಎಷ್ಟೋ ಸಲ, ಹಿಂದೆ ಮುಂದೆ ಯೋಚಿಸದೆ ಏನೋ ಹೇಳಿ, ಆಮೇಲೆ ‘ನಾನು ಹೀಗೆ ಹೇಳ್ಬಾರದಿತ್ತು’ ಅಂತ ನಿಮ್ಮ ಸ್ನೇಹಿತರಿಗೆ ಅನಿಸ್ಬಹುದು.—ಯೋಬ 6:2, 3.

“ಸಂತೈಸೋ ತರ ಮಾತಾಡಿ.”—1 ಥೆಸಲೊನೀಕ 5:14.

ನಿಮ್ಮ ಸ್ನೇಹಿತನಿಗೆ ಆತಂಕ ಇರಬಹುದು ಅಥವಾ ನಾನು ಯಾವುದಕ್ಕೂ ಯೋಗ್ಯತೆ ಇಲ್ಲದವನು ಅನ್ನೋ ಭಾವನೆ ಕಾಡ್ತಾ ಇರಬಹುದು. ಹಾಗಾಗಿ ಅವ್ರತ್ರ ಮಾತಾಡ್ವಾಗ ‘ನೀನು ಯಾವುದಕ್ಕೂ ಚಿಂತೆ ಮಾಡ್ಬೇಡ,’ ‘ನಿಂಗೇನು ಅನಿಸುತ್ತೋ ಅದನ್ನ ನನತ್ರ ಮನಸ್ಸು ಬಿಚ್ಚಿ ಹೇಳು,’ ‘ನಿನ್ನ ಜೊತೆ ನಾನಿದ್ದೀನಿ, ನಿನ್ನ ಬಗ್ಗೆ ನಾನು ಚಿಂತಿಸ್ತೀನಿ’ ಅಂತ ಧೈರ್ಯ ತುಂಬೋ ಹಾಗೆ ಮಾತಾಡಿ.

“ನಿಜವಾದ ಸ್ನೇಹಿತ ಎಲ್ಲ ಸಮಯದಲ್ಲೂ ಪ್ರೀತಿಸ್ತಾನೆ.”—ಜ್ಞಾನೋಕ್ತಿ 17:17.

ಅವ್ರಿಗೆ ಬೇಕಾದ ಸಹಾಯ ಮಾಡಿ. ಅವ್ರಿಗೆ ಏನು ಸಹಾಯ ಬೇಕು ಅಂತ ನೀವೇ ಯೋಚಿಸ್ತಾ ಕೂರೋ ಬದಲು ಅವ್ರ ಹತ್ರನೇ ಕೇಳಿ. ಒಂದುವೇಳೆ ನಿಮ್ಮ ಸ್ನೇಹಿತನಿಗೆ ಸಹಾಯ ಬೇಕು ಅಂತ ಹೇಳೋಕೆ ಮುಜುಗರ ಆಗ್ತಿದ್ರೆ, ಅವ್ರ ಜೊತೆ ಸಮಯ ಕಳೆಯೋಕೆ ಪ್ಲಾನ್‌ ಮಾಡಿ. ಉದಾಹರಣೆಗೆ, ಇಬ್ರೂ ವಾಕಿಂಗ್‌ ಹೋಗಿ, ಒಟ್ಟಿಗೆ ಶಾಪಿಂಗ್‌ ಮಾಡಿ, ಮನೆ ಕ್ಲೀನ್‌ ಮಾಡಿ.—ಗಲಾತ್ಯ 6:2.

“ತಾಳ್ಮೆಯಿಂದ ಇರಿ.”—1 ಥೆಸಲೊನೀಕ 5:14.

ಕೆಲವೊಮ್ಮೆ ನಿಮ್ಮ ಸ್ನೇಹಿತನಿಗೆ ಮಾತಾಡೋಕೆ ಇಷ್ಟ ಆಗದೆ ಇರಬಹುದು. ಆಗ ಅವ್ರೇನೇ ಹೇಳಿದ್ರು ನೀವು ತಾಳ್ಮೆಯಿಂದ ಕೇಳಿಸ್ಕೊಳ್ತೀರ ಅಂತ ಅವ್ರಿಗೆ ಹೇಳಿ. ಅವ್ರಿಗೆ ಇರೋ ಆರೋಗ್ಯದ ಸಮಸ್ಯೆಯಿಂದ ಅವರು ಹೇಳೋ ಕೆಲವು ವಿಷ್ಯಗಳು ನಿಮಗೆ ನೋವು ತರಬಹುದು. ನೀವಿಬ್ರು ಸೇರಿ ಮಾಡಿರೋ ಪ್ಲಾನ್‌ನ ಅವರು ಕ್ಯಾನ್ಸಲ್‌ ಮಾಡಬಹುದು ಅಥವಾ ಯಾವಾಗ್ಲೂ ಕಿರಿಕಿರಿಯಾಗೋ ತರ ನಡ್ಕೊಬಹುದು. ಏನೇ ಆದ್ರೂ ನೀವು ತಾಳ್ಮೆಯಿಂದ ಅವ್ರನ್ನ ಅರ್ಥ ಮಾಡ್ಕೊಳ್ಳೋಕೆ ಪ್ರಯತ್ನ ಮಾಡಿ ಮತ್ತು ನಿಮ್ಮಿಂದ ಆದಷ್ಟು ಸಹಾಯ ಮಾಡ್ತಾ ಇರಿ.—ಜ್ಞಾನೋಕ್ತಿ 18:24.

ಬೆಂಬಲವಾಗಿ ನಿಲ್ಲಿ

“ನನ್ನ ಫ್ರೆಂಡ್‌, ನನ್ನ ಹತ್ರ ಯಾವಾಗ ಬೇಕಾದ್ರೂ ಏನು ಬೇಕಾದ್ರೂ ಬಂದು ಹೇಳಬಹುದು. ನಾನು ಯಾವಾಗ್ಲೂ ರೆಡಿ ಇರ್ತೀನಿ. ಯಾಕಂದ್ರೆ ಅವಳ ಸಮಸ್ಯೆಗೆ ಪರಿಹಾರ ನನ್ನ ಹತ್ರ ಇಲ್ಲ. ಕಡಿಮೆಪಕ್ಷ ಅವಳು ಏನು ಹೇಳ್ತಾಳೋ ಅದನ್ನ ಕೇಳಿಸ್ಕೊಳ್ಳೋಕೆ ನಾನು ಪ್ರಯತ್ನ ಮಾಡ್ತೀನಿ. ಎಷ್ಟೋ ಸಲ ಅವಳಿಗೂ ಅದೇ ಬೇಕಾಗಿರುತ್ತೆ.”—ಫರಾ,a ಇವ್ರ ಸ್ನೇಹಿತೆಗೆ ತಿನ್ನುವ ಸಮಸ್ಯೆ, ಆತಂಕದ ಸಮಸ್ಯೆ ಮತ್ತು ಖಿನ್ನತೆ ಇದೆ.

ವಯಸ್ಸಾದ ಸ್ತ್ರೀಯ ಕೈಯನ್ನ ಅನುಕಂಪದಿಂದ ಸ್ತ್ರೀಯೊಬ್ಬರು ಹಿಡಿದಿದ್ದಾರೆ.

“ನನ್ನ ಫ್ರೆಂಡ್‌, ನನ್ನ ಹತ್ರ ಯಾವಾಗ್ಲೂ ಚೆನ್ನಾಗಿ ಮಾತಾಡ್ತಾಳೆ. ಒಂದು ದಿನ ಮನೆಗೆ ಊಟಕ್ಕೆ ಕರೆದಿದ್ದಳು. ತುಂಬಾ ಚೆನ್ನಾಗಿ ಅಡುಗೆ ಮಾಡಿದ್ಳು. ಈ ತರ ಒಳ್ಳೇ ವಾತಾವರಣ ಇದ್ದಿದ್ರಿಂದ ನನ್ನ ಭಾವನೆಗಳನ್ನ ಹೇಳಿಕೊಳ್ಳೋಕೆ ಆಯ್ತು. ಹೀಗೆ ಮಾಡಿದ್ರಿಂದ ನನಗೆ ತುಂಬ ಸಹಾಯ ಸಿಕ್ಕಿದೆ.”—ಹೇಮಾ, ಇವ್ರಿಗೆ ಖಿನ್ನತೆ ಇದೆ.

“ತಾಳ್ಮೆ ಅನ್ನೋದು ತುಂಬಾ ಮುಖ್ಯ. ಕೆಲವು ಸಲ ನನ್ನ ಹೆಂಡತಿ ನನಗೆ ಬೇಜಾರಾಗೋ ತರ ಏನಾದ್ರೂ ಮಾಡಿದಾಗ ನಾನು ಒಂದು ವಿಷ್ಯವನ್ನ ನೆನಪಲ್ಲಿ ಇಟ್ಕೊಳ್ತೀನಿ. ಅದೇನಂದ್ರೆ, ಅವಳು ಹಾಗೆ ಮಾಡಿದ್ದು ಅವಳ ಆರೋಗ್ಯದ ಸಮಸ್ಯೆಯಿಂದ ಅಷ್ಟೇ, ಅದು ಅವಳ ಸ್ವಭಾವ ಅಲ್ಲ. ಇದನ್ನ ಯಾವಾಗ್ಲೂ ಮನಸ್ಸಲ್ಲಿ ಇಟ್ಕೊಳ್ಳೋದ್ರಿಂದ ಅವಳ ಜೊತೆ ಕೋಪ ಮಾಡ್ಕೊಳ್ಳದೆ ಪ್ರೀತಿಯಿಂದ ನಡ್ಕೊಳ್ಳೋಕೆ ಆಗಿದೆ.”—ಜಯಂತ್‌, ಇವ್ರ ಹೆಂಡತಿಗೆ ಖಿನ್ನತೆ ಇದೆ.

“ಕೆಲವು ಸಲ ಆತಂಕ ನನ್ನನ್ನ ಮುತ್ಕೊಂಡಾಗ ನನ್ನ ಹೆಂಡತಿಯಿಂದ ಸಿಗೋ ಬೆಂಬಲ ಮತ್ತು ಸಾಂತ್ವನವನ್ನ ನಾನು ಯಾವತ್ತೂ ಮರೆಯಕ್ಕಾಗಲ್ಲ. ಕೆಲವು ವಿಷ್ಯಗಳನ್ನ ಮಾಡೋಕೆ ನನ್ನ ಹೆಂಡತಿಗೆ ತುಂಬಾ ಇಷ್ಟ ಇರುತ್ತೆ. ಆದ್ರೆ ನನಗೆ ಇಷ್ಟ ಇರಲ್ಲ. ಆಗ ಅವಳು ‘ಅದನ್ನ ಮಾಡು’ ಅಂತ ನನಗೆ ಯಾವತ್ತೂ ಒತ್ತಾಯ ಮಾಡಲ್ಲ. ಹೀಗೆ ಅವಳು ನನಗೋಸ್ಕರ ತುಂಬ ತ್ಯಾಗ ಮಾಡ್ತಾಳೆ, ಧಾರಾಳ ಮನಸ್ಸು ತೋರಿಸ್ತಾಳೆ. ಅದಕ್ಕೆ ನಾನು ಅವಳನ್ನ ತುಂಬಾ ಪ್ರೀತಿಸ್ತೀನಿ.”—ಅಮಿತ್‌, ಇವ್ರಿಗೆ ಆತಂಕದ ಸಮಸ್ಯೆ ಇದೆ.

a ಕೆಲವು ಹೆಸರುಗಳನ್ನ ಬದಲಾಯಿಸಲಾಗಿದೆ.

ಹೆಚ್ಚಿನ ಸಹಾಯಕ್ಕಾಗಿ:

ಎಚ್ಚರ!16.01 ಪುಟ 10-11ರಲ್ಲಿರೋ “ಆಪ್ತರು ಅಸ್ವಸ್ಥರಾದಾಗ” ಅನ್ನೋ ಲೇಖನವನ್ನ jw.orgನಲ್ಲಿ ಓದಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ