Rui Almeida Fotografia/Moment via Getty Images
ಸದಾ ಎಚ್ಚರವಾಗಿರಿ!
ರಾಜಕೀಯ ಗಲಭೆ—ಇದ್ರ ಬಗ್ಗೆ ಬೈಬಲ್ ಏನು ಹೇಳುತ್ತೆ?
ಅಧಿಕಾರಿಗಳ ಮೇಲೆ ದಾಳಿ ಮಾಡೋದು, ಹಿಂಸೆ ಮಾಡೋದು ಹೆಚ್ಚಾಗ್ತಾನೇ ಇದೆ.
ಇತ್ತೀಚೆಗೆ ಯಾಕಿಷ್ಟು ರಾಜಕೀಯ ಗಲಭೆ ನಡೀತಿದೆ? ಇದಕ್ಕೆಲ್ಲ ಯಾವಾಗಾದ್ರೂ ಕೊನೆ ಇದ್ಯಾ? ಬೈಬಲ್ ಇದ್ರ ಬಗ್ಗೆ ಏನು ಹೇಳುತ್ತೆ?
ರಾಜಕೀಯ ಬಿರುಕಿನ ಬಗ್ಗೆ ಭವಿಷ್ಯವಾಣಿ
ನಾವು ಈಗ ಬದುಕುತ್ತಿರೋ ಕಾಲನ ಬೈಬಲ್ ‘ಕೊನೇ ದಿನಗಳು’ ಅಂತ ಕರೆಯುತ್ತೆ. ಆಗ ಜನ ಕೆಟ್ಟೋಗ್ತಾರೆ. ಮಾತೆತ್ತಿದ್ರೆ ಹಿಂಸೆ ಅಂತಾರೆ, ಸಮಾಧಾನ ಆಗೋಕೆ ರೆಡಿ ಇರಲ್ಲ ಅಂತ ಬೈಬಲ್ ಮೊದ್ಲೇ ಹೇಳಿತ್ತು.
“ಕೊನೇ ದಿನಗಳಲ್ಲಿ ಪರಿಸ್ಥಿತಿ ತುಂಬ ಹದಗೆಡುತ್ತೆ, ತುಂಬ ಕಷ್ಟ ಪಡಬೇಕಾಗುತ್ತೆ. ಯಾಕಂದ್ರೆ . . . ಮಾಡಿದ ಉಪಕಾರ ಮರೆತುಬಿಡುವವರು, ನಂಬಿಕೆದ್ರೋಹ ಮಾಡುವವರು . . . ಯಾವುದಕ್ಕೂ ಒಪ್ಪದವರು . . . ಉಗ್ರರು . . . ಮಿತ್ರದ್ರೋಹಿಗಳು, ಹಠಮಾರಿಗಳು, ಜಂಬದಿಂದ ಉಬ್ಬಿದವರು . . . ಇರ್ತಾರೆ.”—2 ತಿಮೊತಿ 3:1-5.
ಈ ಕೊನೇ ದಿನಗಳಲ್ಲಿ ಜನ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡ್ತಾರೆ ಮತ್ತು ರಾಜಕೀಯ ಗಲಭೆಗಳು ಹೆಚ್ಚಾಗುತ್ತೆ ಅಂತಾನೂ ಬೈಬಲ್ ಮೊದ್ಲೇ ಹೇಳಿತ್ತು. (ಲೂಕ 21:9) ಆದ್ರೆ ಇವೆಲ್ಲ ಹೀಗೇ ಯಾವಾಗ್ಲೂ ಇರಲ್ಲ. ಪರಿಸ್ಥಿತಿ ಬೇಗ ಬದಲಾಗುತ್ತೆ.
ರಾಜಕೀಯ ಗಲಭೆ ಇಲ್ಲದ ಸಮಯ ಬರುತ್ತೆ
ದೇವರು ಮನುಷ್ಯರ ಎಲ್ಲ ಸರ್ಕಾರಗಳನ್ನ ತೆಗೆದು ಹಾಕಿ, ತನ್ನ ಸರ್ಕಾರವನ್ನ ಈ ಭೂಮಿಗೆ ಆತನೇ ತರ್ತಾನೆ. ದೇವರು ಸ್ವರ್ಗದಿಂದ ಆಡಳಿತ ಮಾಡ್ತಾನೆ ಅಂತ ಬೈಬಲ್ ಹೇಳುತ್ತೆ.
“ಆ ರಾಜರ ಕಾಲದಲ್ಲಿ ಸ್ವರ್ಗದ ದೇವರು ಒಂದು ಆಡಳಿತ ತರ್ತಾನೆ . . . ಅದು ಈ ಎಲ್ಲ ಸಾಮ್ರಾಜ್ಯಗಳನ್ನ ನಜ್ಜುಗುಜ್ಜು ಮಾಡಿ ನಾಶ ಮಾಡುತ್ತೆ. ಆ ಆಡಳಿತ ಸದಾಕಾಲ ಇರುತ್ತೆ.”—ದಾನಿಯೇಲ 2:44.
ದೇವರ ಆಳ್ವಿಕೆ ಇಡೀ ಭೂಮಿಯ ಜನ್ರನ್ನ ಒಂದುಮಾಡುತ್ತೆ. ಎಲ್ಲಾ ಜನ್ರ ಮಧ್ಯೆ ಶಾಂತಿ ತುಂಬಿ ತುಳುಕೋ ತರ ನೋಡ್ಕೊಳ್ಳುತ್ತೆ.
ದೇವರ ಆಳ್ವಿಕೆಯ ರಾಜನಾದ ಯೇಸು ಕ್ರಿಸ್ತನನ್ನ “ಸಮಾಧಾನದ ಪ್ರಭು” ಅಂತ ಬೈಬಲ್ ಕರೆಯುತ್ತೆ. ಆತನ ಆಡಳಿತದಲ್ಲಿ “ಶಾಂತಿಗೆ ಅಂತ್ಯ ಇರಲ್ಲ.”—ಯೆಶಾಯ 9:6, 7.
ಈಗಾಗ್ಲೇ ಈ ಸರ್ಕಾರದ ಪ್ರಜೆಗಳು ಶಾಂತಿಯಿಂದ ಹೇಗೆ ಬದುಕೋದು ಅಂತ ಕಲೀತಾ ಇದ್ದಾರೆ. ಇದ್ರಿಂದ “ಅವರು ತಮ್ಮ ಕತ್ತಿಗಳನ್ನ ಬಡಿದು ನೇಗಿಲ ಗುಳಗಳಾಗಿ ಮಾಡ್ತಾರೆ, ತಮ್ಮ ಈಟಿಗಳನ್ನ ಬಡಿದು ಕುಡುಗೋಲುಗಳಾಗಿ ಮಾಡ್ತಾರೆ. ಜನಾಂಗ ಜನಾಂಗಕ್ಕೆ ವಿರುದ್ಧ ಕತ್ತಿ ಎತ್ತಲ್ಲ, ಇನ್ನು ಯಾವತ್ತೂ ಅವರು ಯುದ್ಧ ಮಾಡೋಕೆ ಕಲಿಯಲ್ಲ” ಅಂತ ಬೈಬಲ್ ಹೇಳುತ್ತೆ.—ಯೆಶಾಯ 2:3, 4.
ಜಾಸ್ತಿ ತಿಳ್ಕೊಳ್ಳೋಕೆ “ದೇವರ ಸರ್ಕಾರ ಭೂಮಿಯಲ್ಲಿ ಯಾವ ಸುಧಾರಣೆ ತರುತ್ತೆ?” ಅನ್ನೋ ಲೇಖನ ಓದಿ ಮತ್ತು ದೇವರ ರಾಜ್ಯ ಅಂದರೇನು? ಅನ್ನೋ ವಿಡಿಯೋ ನೋಡಿ.