ಧರ್ಮದ ಭವಿಷ್ಯ ಅದರ ಗತಕಾಲದ ನೋಟದಲ್ಲಿ
ಭಾಗ 15: ಸಾ.ಶ.1095-1453 ಖಡ್ಗನ್ನು ಬಳಸುವುದು
“ಮನುಷ್ಯರು ಧರ್ಮಕ್ಕಾಗಿ ಕಚ್ಚಾಡುವರು, ಅದಕ್ಕಾಗಿ ಬರೆಯುವರು, ಅದಕ್ಕಾಗಿ ಕಾದಾಡುವರು, ಅದಕ್ಕಾಗಿ ಸಾಯುವರು; ಅದಕ್ಕಾಗಿ ಜೀವಿಸುವ ಬದಲು ಏನನ್ನಾದರೂ ಮಾಡುವರು.”—ಚಾರ್ಲ್ಸ್ ಕೆಲಬ್ ಕೊಲ್ಟನ್, 19ನೆಯ ಶತಮಾನದ ಇಂಗ್ಲಿಷ್ ವೈದಿಕನು.
ಕ್ರೈಸ್ತತ್ವವು ಅದರ ಆರಂಭದ ವರ್ಷಗಳಲ್ಲಿ ಅವರ ಧರ್ಮಕ್ಕಾಗಿ ಜೀವಿಸಿದ್ದ ವಿಶ್ವಾಸಿಗಳಿಂದ ಆಶೀರ್ವದಿಸಲ್ಪಟ್ಟಿತ್ತು. ಅವರ ನಂಬಿಕೆಯ ಪರವಾಗಿ, ಅವರು ಉತ್ಸುಕತೆಯಿಂದ “ಪವಿತ್ರಾತ್ಮನ ಕತ್ತಿ ಅಂದರೆ ದೇವರ ವಾಕ್ಯ”ವನ್ನು ಕೈಗೆತ್ತಿಗೊಂಡಿದ್ದರು. (ಎಫೆಸ 6:17) ಆದರೆ ನಂತರ, 1095ರ ಮತ್ತು 1453ರ ಉದಾಹರಿಸಲ್ಪಟ್ಟಿರುವ ಘಟನೆಗಳಿಗನುಸಾರ, ನಾಮಮಾತ್ರದ ಕ್ರೈಸ್ತರು, ನಿಜ ಕ್ರೈಸ್ತತ್ವಕ್ಕನುಸಾರ ಜೀವಿಸದೆ, ಬೇರೆ ವಿಧದ ಕತ್ತಿಗಳನ್ನು ಬಳಸಲು ತೊಡಗಿದರು.
ಆರನೆಯ ಶತಮಾನದೊಳಗೆ, ಪಾಶ್ಚಿಮಾತ್ಯ ರೋಮನ್ ಸಾಮ್ರಾಜ್ಯವು ಗತಿಸಿಹೋಗಿತ್ತು. ಅದರ ಸ್ಥಾನದಲ್ಲಿ ಪೌರಾತ್ಯ ಬದಲೀಯಾಗಿ, ಕಾನ್ಸ್ಟೆಂಟಿನೋಪಲ್ ರಾಜಧಾನಿಯಾಗಿದ್ದ ಬೈಜಿಂಟೀನ್ ಸಾಮ್ರಾಜ್ಯವು ಬಂತು. ಆದರೆ ಅವರವರ ಚರ್ಚುಗಳು ಅತಿಯಾಗಿ ಅಲುಗಾಡಿಸಲ್ಪಡುವ ಸಂಬಂಧಗಳಿಂದ ಬಾಧಿತವಾಗಿತ್ತು, ಆಗ ಅವರಿಬ್ಬರ ಸಮಾನ ಶತ್ರುವೊಬ್ಬನಿಂದ, ತೀವ್ರವಾಗಿ ಹಬ್ಬುತ್ತಿರುವ ಇಸ್ಲಾಮಿಕ್ ಪ್ರಭುತ್ವದಿಂದ, ಬೆದರಿಕೆಗೊಡ್ಡಲ್ಪಟ್ಟಿತು.
ಏಳನೆಯ ಶತಮಾನದಲ್ಲಿ ಮುಸ್ಲಿಮರು ಐಗುಪ್ತವನ್ನು ಮತ್ತು ಉತ್ತರ ಆಫ್ರಿಕದಲ್ಲಿದ್ದ ಬೈಜಿಂಟೀನ್ ಸಾಮ್ರಾಜ್ಯದ ಇತರ ಭಾಗಗಳನ್ನು ವಶಪಡಿಸಿ ಕೊಂಡಾಗಲೇ, ಅಷ್ಟು ಬೇಗನೆ ಪೌರಾತ್ಯ ಚರ್ಚು ಇದನ್ನು ಅರಿತುಕೊಂಡಿತು.
ಒಂದು ಶತಮಾನಕ್ಕಿಂತಲೂ ಕಡಿಮೆ ಸಮಯದಲ್ಲಿ, ಪಾಶ್ಚಿಮಾತ್ಯ ಚರ್ಚು, ಸ್ಪೆಯ್ನ್ ಮೂಲಕ ಫ್ರಾನ್ಸಿಗೆ, ಪ್ಯಾರಿಸಿನಿಂದ ಕೇವಲ ನೂರು ಮೈಲುಗಳೊಳಗೆ ಇಸ್ಲಾಮ್ ಬರುವುದನ್ನು ಕಂಡಾಗ ಗಾಬರಿಗೊಂಡಿತು. ಅನೇಕ ಸ್ಪಾನಿಷ್ ಕಥೊಲಿಕರು ಇಸ್ಲಾಮ್ಗೆ ಮತಾಂತರಗೊಂಡರು, ಇತರರು ಮುಸ್ಲಿಮ್ ಕ್ರಮವಿಧಾನಗಳನ್ನು ಮತ್ತು ಮುಸ್ಲಿಮ್ ಸಂಸ್ಕೃತಿಯನ್ನು ಆಲಿಂಗಿಸಿದರು. ಅರ್ಲೀ ಇಸ್ಲಾಮ್ ಪುಸ್ತಕದಲ್ಲಿ ಹೇಳುವುದು, “ಅದರ ನಷ್ಟದಿಂದ ಕೆರಳಿಸಲ್ಪಟ್ಟು, ಪ್ರತೀಕಾರದ ಜ್ವಾಲೆಗಳನ್ನು ಉದ್ರೇಕಿಸಲು ತನ್ನ ಸ್ಪಾನಿಷ್ ಮಕ್ಕಳಲ್ಲಿ ಚರ್ಚು ಎಡೆಬಿಡದೆ ಕಾರ್ಯವೆಸಗಿತು.”
ಹಲವಾರು ಶತಮಾನಗಳ ನಂತರ, ಸ್ಪಾನಿಷ್ ಕಥೊಲಿಕರು ತಮ್ಮ ದೇಶದ ಅಧಿಕ ಭಾಗವನ್ನು ಪುನಃ ಪಡೆದಾದ ನಂತರ, “ಅವರು ತಮ್ಮ ಮುಸ್ಲಿಮ್ ಪ್ರಜೆಗಳ ಕಡೆಗೆ ತಿರುಗಿ, ಕರುಣಾರಹಿತರಾಗಿ ಅವರನ್ನು ಹಿಂಸಿಸಲು ತೊಡಗಿದರು. ಅವರ ವಿಶ್ವಾಸವನ್ನು ನಿರಾಕರಿಸಲು ಅವರಿಗೆ ಬಲಾತ್ಕರಿಸಲಾಯಿತು, ದೇಶದಿಂದ ಹೊರಗೆ ಓಡಿಸಲಾಯಿತು ಮತ್ತು ಸ್ಪಾನಿಷ್-ಮುಸ್ಲಿಮ್ ಸಂಸ್ಕೃತಿಯ ಪ್ರತಿಯೊಂದು ಲಕ್ಷಣವನ್ನು ಕಿತ್ತೆಸೆಯಲು ಕಠಿಣತಮ ಹೆಜ್ಜೆಗಳನ್ನು ತೆಗೆದು ಕೊಳ್ಳಲಾಯಿತು.”
ಖಡ್ಗಗಳ ಧಾರೆಗಳಲ್ಲಿ
1095ರಲ್ಲಿ ಪೋಪ್ ಉರ್ಬಾನ್ನು ಅಕ್ಷರಶಃ ಖಡ್ಗವನ್ನು ತೆಗೆದು ಕೊಳ್ಳುವಂತೆ ಯುರೋಪಿನ ಕ್ರೈಸ್ತರಿಗೆ ಕರೆಕೊಟ್ಟನು. ಮಧ್ಯಪೂರ್ವದಲ್ಲಿರುವ ಪವಿತ್ರ ಪ್ರದೇಶಗಳ ಏಕಸ್ವಾಮ್ಯ ಹಕ್ಕುಗಳು ಕ್ರೈಸ್ತ ಧರ್ಮಗಳಿಗೆ ಮಾತ್ರವಿರುವುದರಿಂದ, ಅಲ್ಲಿಂದ ಇಸ್ಲಾಮ್ನ್ನು ಅಧಿಕಾರಚ್ಯುತಿಗೊಳಿಸಬೇಕು ಅವರ ವಾದ.
“ನ್ಯಾಯಬದ್ಧ” ಯುದ್ಧದ ಕಲ್ಪನೆಯು ಹೊಸತೇನೂ ಅಲ್ಲ. ಉದಾಹರಣೆಗೆ ಸ್ಪೆಯ್ನ್ ಮತ್ತು ಸಿಸಿಲಿಯಲ್ಲಿನ ಮುಸ್ಲಿಮರ ವಿರುದ್ಧದ ಹೋರಾಟದಲ್ಲಿ ಇದನ್ನು ಆಹ್ವಾನಿಸಲಾಯಿತು. ಉರ್ಬಾನನ ವಿನಂತಿಯ ಕಡಿಮೆಪಕ್ಷ ಒಂದು ದಶಕದ ಮೊದಲು, ಪ್ರಿನ್ಸ್ಟನ್ ದೇವತಾಶಾಸ್ತ್ರದ ಸೆಮಿನೆರಿಯ ಕಾರ್ಲ್ಪ್ರೇಡ್ ಫೊಇಹ್ಲಿಕ್ ಹೇಳುವುದು, ಪೋಪ್ ಗ್ರೆಗರಿ VII “ದೇವರ ಎಲ್ಲಾ ಶತ್ರುಗಳ ವಿರುದ್ಧ ಹೋರಾಡಲು ಮಿಲಿಶಿಯ ಕ್ರಿಸ್ತಿ ಒಂದನ್ನು ಮನಸ್ಸಿನಲ್ಲಿ ರೂಪಿಸಿಕೊಂಡಿದ್ದನು ಮತ್ತು ಪೂರ್ವಕ್ಕೆ ಒಂದು ಸೇನೆಯನ್ನು ಕಳುಹಿಸುವುದರ ಕುರಿತು ಯೋಚಿಸಿದ್ದನು.”
ಉರ್ಬಾನ್ನ ಕೃತ್ಯವು ಬೈಜಿಂಟೀನನ ಸಾಮ್ರಾಜ್ಞ ಅಲೆಕ್ಸಿಯುಸ್ನ ಸಹಾಯಕ್ಕಾಗಿ ಮಾಡಿದ ವಿನಂತಿಗೆ ಆಂಶಿಕ ಪ್ರತಿವರ್ತನೆಯಾಗಿತ್ತು. ಆದರೆ ಕ್ರೈಸ್ತ ಧರ್ಮರಾಜ್ಯಗಳ ಪೌರಾತ್ಯ ಮತ್ತು ಪಾಶ್ಚಿಮಾತ್ಯ ಭಾಗಗಳ ಸಂಬಂಧವು ಪ್ರಗತಿಗೊಳ್ಳುತ್ತದೋ ಎಂದು ಭಾಸವಾಗುತ್ತಿದ್ದುದರಿಂದ, ಕಾದಾಡುವ ಸಹೋದರಿ ಚರ್ಚುಗಳನ್ನು ಐಕ್ಯಗೊಳಿಸಲು ಇದೊಂದು ಸಾಧ್ಯತೆಯಾಗಬಹುದೆಂಬ ಯೋಚನೆಯಿಂದಲೂ ಪೋಪ್ನ ಪ್ರೇರಿಸಲ್ಪಟ್ಟಿರಬಹುದು. ಏನೇ ಇದ್ದರೂ, ಅವನು ಕ್ಲೆರ್ಮೊಂಟ್ನ ಕೌನ್ಸಿಲ್ನ್ನು ಕರೆಯಿಸಿದನು, ಈ “ಪವಿತ್ರ” ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಇಚ್ಛಿಸುವ ಒಬ್ಬನಿಗೆ ಸಮಗ್ರ ಪಾಪ ಕ್ಷಮೆ (ದಂಡನೆಗೆ ಅರ್ಹವಾದ ಎಲ್ಲಾ ಪಾಪಗಳಿಂದ ಮುಕ್ತಿ) ನೀಡಲ್ಪಡುತ್ತದೆಂದು ಘೋಷಿಸಿದನು. ಇದಕ್ಕೆ ಪ್ರತಿವರ್ತನೆಯು ಸಕಾರಾತ್ಮಕವಾಗಿತ್ತು. “ಡ್ಯುಸ್ ವೊಲ್ಟ್” (“ದೇವರ ಇಚ್ಛೆ ಅದು”) ಎಂಬುದು ಪೂರ್ವ ಪಶ್ಚಿಮದ ಒಟ್ಟುಗೂಡಿಸುವ ಕೂಗಾಯಿತು.
ಅನಂತರ ಎರಡು ಶತಮಾನಗಳಷ್ಟು ಅವರಿಸಿರುವ ಮಿಲಿಟರಿ ಸಾಹಸಗಳ ಸರಣಿಯೊಂದು ಆರಂಭಿಸಿತು. (ಪುಟ 26ರಲ್ಲಿರುವ ಬಾಕ್ಷ್ನ್ನು ನೋಡಿರಿ. ಮೊದಲು ಮುಸ್ಲಿಮರು, ಬಂದಂತಹ ಆಕ್ರಮಣಗಾರರು ಬೈಜಿಂಟೀನರು ಎಂದೆಣಿಸಿದರು. ಆದರೆ ಅವರ ನಿಜ ಮೂಲವನ್ನು ತಿಳಿದ ಮೇಲೆ ಅವರನ್ನು ಫ್ರಾಂಕ್ಸ್ ಎಂದು ಕರೆದರು, ಜರ್ಮನ್ ಜನರೆಂದು ಫ್ರಾನ್ಸಿನಲ್ಲಿ ಹೆಸರು ಬಂತು. ಈ ಯುರೋಪಿನ “ಅನಾಗರಿಕ”ರ ಪಂಥಾಹ್ವಾನವನ್ನು ಎದುರಿಸಲು, ಮುಸ್ಲಿಮರಲ್ಲಿ ಒಂದು ಜಿಹಾದ್, ಒಂದು ಪವಿತ್ರ ಯುದ್ಧ ಯಾ ಹೋರಾಟಕ್ಕಾಗಿ ಭಾವಾವೇಶವು ಬೆಳೆಯಿತು.
ಬ್ರಿಟಿಷ್ ಫ್ರೊಫೆಸರ್ ಡೆಸ್ಮಂಡ್ ಸ್ಟುವರ್ಟ್ ನಿರ್ದೇಶಿಸಿದ್ದು: “ಪ್ರತಿಯೊಬ್ಬ ವಿದ್ವಾಂಸ ಯಾ ವರ್ತಕನು, ಆಚರಣೆಯಿಂದ ಮತ್ತು ಉದಾಹರಣೆಯಿಂದ ಇಸ್ಲಾಮಿಕ್ ನಾಗರಿಕತೆಯ ಬೀಜಗಳನ್ನು ಬಿತ್ತಿದರ್ದಿಂದ, ಇಸ್ಲಾಮ್ನ ಕರೆಯ ಹೋರಾಟಕ್ಕಾಗಿ ಒಬ್ಬ ಸೈನಿಕನು ಅಲ್ಲಿದ್ದನು.” 12ನೆಯ ಶತಮಾನದ ಕಡೆಯ ಭಾಗದೊಳಗೆ, ಉತ್ತರ ಸಿರಿಯಾ ಮತ್ತು ಮೇಲಿನ ಮೆಸೊಪೊಟೆಮಿಯದಲ್ಲಿ ಮುಸ್ಲಿಮರನ್ನು ಐಕ್ಯಗೊಳಿಸುವ ಮೂಲಕ ಒಂದು ಕಾರ್ಯಸಾಧಕ ಮಿಲಿಟರಿ ಶಕ್ತಿಯನ್ನು ಮುಸ್ಲಿಮ್ ಮುಂದಾಳು ನೂರಿದ್ದೀನ್ನು ಕಟ್ಟಿದನು. ಆದುದರಿಂದ “ಕ್ರಿಸ್ತನ ಧರ್ಮವನ್ನು ವಿಸ್ತರಿಸಲು ಮಧ್ಯಯುಗದ ಕ್ರೈಸ್ತರು ಶಸ್ತ್ರಗಳನ್ನು ತೆಗೆದು ಕೊಂಡಂತೆಯೇ,” ಸ್ಟುವರ್ಟ್ ಮುಂದುವರಿಯುವುದು, “ಪ್ರವಾದಿಯ ಧರ್ಮವನ್ನು ವಿಸ್ತರಿಸಲು ಮುಸ್ಲಿಮ್ರು ಶಸ್ತ್ರಗಳನ್ನು ತೆಗೆದು ಕೊಂಡರು.”
ಧರ್ಮದ ಕಾರಣಗಳನ್ನು ವರ್ಧಿಸುವುದೇ ಯಾವಾಗಲೂ ಒಂದು ಪ್ರೇರಕ ಶಕ್ತಿಯಾಗಿರಲಿಲ್ಲ. ದ ಬರ್ತ್ ಆಫ್ ಯುರೋಪ್ ಪುಸ್ತಕವು ಗಮನಿಸುವುದೇನಂದರೆ ಹೆಚ್ಚಿನ ಯುರೋಪಿಯನರಿಗೆ, ಕ್ರುಸೇಡುಗಳು “ಹೆಸರು ಗಳಿಸಲು, ಇಲ್ಲವೆ ವಸ್ತುಗಳನ್ನು ದೋಚಲು, ಇಲ್ಲವೆ ಹೊಸ ಆಸ್ತಿಗಳನ್ನು ಪಡೆಯಲು ಇಲ್ಲವೆ ಇಡೀ ದೇಶಗಳನ್ನು ಆಳಲು ಯಾ ನೀರಸವಾದದಿಂದ ಪಾರಾಗಿ ಮಹಿಮೆಯ ಸಾಹಸಕೃತ್ಯ ತೊಡಗಲು ಒಂದು ತಡೆಯಲಸಾಧ್ಯವಾದ ಒಂದು ಅವಕಾಶದೋಪಾದಿ ವೀಕ್ಷಿಸಿದರು.” ಪೂರ್ವ ಮೆಡಿಟೆರಿಯನ್ ದೇಶಗಳಲ್ಲಿ ವ್ಯಾಪಾರದ ಮಳಿಗೆಗಳನ್ನು ತೆರೆಯುವ ಒಂದು ಸಂದರ್ಭವನ್ನು ಇಟೆಲಿಯ ವರ್ತಕರು ಕಂಡರು. ಆದರೆ ಹೇತುವು ಏನಾಗಿದ್ದರೂ, ಎಲ್ಲರೂ ತಮ್ಮ ಧರ್ಮಕ್ಕಾಗಿ—ಅದು ಕ್ರೈಸ್ತ ಧರ್ಮರಾಜ್ಯಗಳ ಒಂದು “ನ್ಯಾಯಬದ್ಧ” ಯುದ್ಧವಾಗಿರಲಿ ಯಾ ಒಂದು ಮುಸ್ಲಿಮ್ ಜಿಹಾದ್ ಆಗಿರಲಿ—ಸಾಯಲು ಸಿದ್ಧರಾಗಿದ್ದರು.
ಖಡ್ಗವು ಅನಿರೀಕ್ಷಿತ ಫಲಿತಾಂಶಗಳನ್ನು ತರುತ್ತದೆ
“ಪೂರ್ವದಲ್ಲಿರುವ ಮುಸ್ಲಿಮರ ವಿರುದ್ಧ ಕ್ರುಸೇಡುಗಳು ನಡಿಸಲ್ಪಟ್ಟಿರುವುದಾದರೂ, ಕ್ರುಸೇಡರುಗಳ ಉತ್ಸಾಹವು ಕ್ರುಸೇಡರುಗಳನ್ನು ಭರ್ತಿಮಾಡಿದ ದೇಶಗಳಲ್ಲಿ, ಅಂದರೆ ಅದು ಯುರೋಪಿನಲ್ಲಿ ಜೀವಿಸುತ್ತಿದ್ದ ಯೆಹೂದ್ಯರ ವಿರುದ್ಧ ಪ್ರದರ್ಶಿಸಲಾಯಿತು. ಕ್ರುಸೇಡರುಗಳಲ್ಲಿ ಒಂದು ಜನಸಾಮಾನ್ಯ ಮುಖ್ಯೋದ್ದೇಶವು ಯೇಸುವಿನ ಮರಣಕ್ಕಾಗಿ ಯೆಹೂದ್ಯರ ಮೇಲೆ ಪ್ರತೀಕಾರ ತೀರಿಸುವುದು ಮತ್ತು ಯೆಹೂದ್ಯರು ಅವರು ಮೊದಲ ಆಹುತಿಗಳಾದರು. 1096ರಲ್ಲಿ ಯೆಹೂದ್ಯರಿಗೆ ಹಿಂಸೆಯು ಮೊದಲಾಗಿ ರೊವೆನ್ನಲ್ಲಿ, ಅದನ್ನು ಹಿಂಬಾಲಿಸಿ ವರ್ಮ್ಸ್, ಮೈನ್ಜ್ ಮತ್ತು ಕೊಲೊನ್ನಲ್ಲಿ ಸಾಮೂಹಿಕ ನರಹತ್ಯೆಯು ಶೀಘ್ರವಾಗಿ ನಡಿಸಲ್ಪಟ್ಟಿತು,” ಎಂದು ದ ಎನ್ಸೈಕ್ಲೊಪೀಡಿಯ ಆಫ್ ರಿಲಿಜನ್ ಹೇಳುತ್ತದೆ. ಇದು ನಾಜೀ ಜರ್ಮನಿಯ ದಿನಗಳಲ್ಲಿ ಸೆಮೆಟಿಕ್ ಆತ್ಮದ ವಿರುದ್ಧ ನಡೆದ ಕರಾಳತೆಯ ಒಂದು ಮುನ್ಸೂಚಕವಾಗಿತ್ತು ಎಂದನ್ನಬಹುದು.
ಪೂರ್ವದ ಪೆಟ್ರಿಯಾರ್ಕ್ ಮೈಕೆಲ್ ಸೆರುಲಾರಿಯುಸ್ ಮತ್ತು ಪಶ್ಚಿಮದ ಕಾರ್ಡಿನಲ್ ಹುಮ್ಬರ್ಟ್ ಪರಸ್ಪರ ಒಬ್ಬರು ಇನ್ನೊಬ್ಬರನ್ನು ಬಹಿಷ್ಕಾರಮಾಡಿಕೊಂಡಾಗ, 1054ರಿಂದ ಬೆಳೆಯುತ್ತಿದ್ದ ಪೂರ್ವ-ಪಶ್ಚಿಮ ಬಿಗುಪನ್ನು ಕೂಡಾ ಇನ್ನಷ್ಟು ಹೆಚ್ಚಿಸಿತು. ಅವರು ವಶಮಾಡಿಕೊಂಡ ನಗರಗಳ ಮೇಲೆ ಕ್ರುಸೇಡರುಗಳು ಗ್ರೀಕ್ ವೈದಿಕರ ಬದಲು ಲ್ಯಾಟಿನ್ ಬಿಷಪರುಗಳ ನೇಮಕ ಮಾಡಿದಾಗ, ಪೂರ್ವ-ಪಶ್ಚಿಮ ಬಿರುಕು ಸಾಮಾನ್ಯ ಜನತೆಯನ್ನು ಕೂಡಾ ಸ್ಪರ್ಶಿಸಿತು.
ಕಾಂಟರ್ಬರಿಯ ಮೊದಲ ಆಂಗ್ಲಿಕನ್ ಕ್ಯಾನನ್ನ ಹರ್ಬರ್ಟ್ ವಡ್ಡಮ್ಸ್ರಿಗನುಸಾರ, ಪೋಪ್ ಇನ್ನೊಸಿಂಟ್ III “ಇಬ್ಬಗೆಯ ಆಟವನ್ನು ಆಡಿದ್ದರಿಂದ” ಎರಡು ಚರ್ಚುಗಳ ನಡುವಿನ ಒಡೆತವು ನಾಲ್ಕನೆಯ ಕ್ರುಸೇಡಿನ ಸಮಯದಲ್ಲಿ ಪೂರ್ಣಗೊಂಡಿತು. ಒಂದು ಪಕ್ಕದಲ್ಲಿ ಕಾನ್ಸ್ಟೆಂಟಿನೋಪಲ್ನ ಸೂರೆಮಾಡಿದ್ದಕ್ಕಾಗಿ ಕೋಪಿಷ್ಠನಾದನು. (ಪುಟ 26ರ ಬಾಕ್ಸ್ನ್ನು ನೋಡಿರಿ.) ಅವನು ಬರೆದದ್ದು: “ಲ್ಯಾಟಿನರು ಒಂದು ದುಷ್ಟತನದ ಮಾದರಿಯನ್ನಿಟ್ಟು, ಈಗಾಗಲೇ ಪಿಶಾಚನ ಕೆಲಸಗಳನ್ನು ಮಾಡಿರುವುದಾದರೆ, ಅಪೊಸ್ತಲೀಕ ಮಾದರಿಯ ದೇವಭಕ್ತಿಗೆ ಗ್ರೀಕರ ಚರ್ಚುಗಳು ಹಿಂತೆರಳುತ್ತವೆಂದು ನಿರೀಕ್ಷಿಸುವುದಾದರೂ ಹೇಗೆ ಮತ್ತು ಅವರು ಒಳ್ಳೆಯ ಕಾರಣಗಳಿಗಾಗಿ ಅವರನ್ನು ನಾಯಿಗಳಿಗಿಂತಲೂ ಕಡೆಯಾಗಿ ದ್ವೇಷಿಸುವರು.” ಇನ್ನೊಂದು ಪಕ್ಕದಲ್ಲಿ ಅವನು ಪರಿಸ್ಥಿತಿಯ ಪ್ರಯೋಜನವನ್ನು ಕೂಡಲೇ ಪಡೆದು ಕೊಂಡು, ಅಲ್ಲಿ ಪಾಶ್ಚಿಮಾತ್ಯ ಪೆಟ್ರಿಯಾರ್ಕನ ಕೆಳಗಡೆ ಒಂದು ಲ್ಯಾಟಿನ್ ರಾಜ್ಯವನ್ನು ಸ್ಥಾಪಿಸಿದನು.
ಎರಡು ಶತಮಾನಗಳ ನಿರಂತರ ಕಾದಾಟದ ನಂತರ, ಬೈಜಿಂಟೀನ್ ಸಾಮ್ರಾಜ್ಯವು ಎಷ್ಟೊಂದು ಬಲಹೀನವಾಯಿತೆಂದರೆ, ಒಟ್ಟೊಮನ್ ಟುರ್ಕನ ಧಾಳಿಗೆ ಪ್ರತಿಯಾಗಿ ನಿಲ್ಲಶಕ್ತರಾಗದೆ, ಮೇ 29, 1453ರಲ್ಲಿ ಕೊನೆಯಲ್ಲಿ ಕಾನ್ಸ್ಟೆಂಟಿನೋಪಲ್ ಅವನಿಂದ ವಶ ಮಾಡಲ್ಪಟ್ಟಿತು. ಸಾಮ್ರಾಜ್ಯವು ಇಸ್ಲಾಮಿಕ್ ಖಡ್ಗದಿಂದ ಮಾತ್ರವಲ್ಲ, ಸಾಮ್ರಾಜ್ಯದ ಸಹೋದರಿ ಚರ್ಚ್ ಆದ ರೋಮಿನ ಕೈಯಲ್ಲಿದ್ದ ಖಡ್ಗದಿಂದಲೂ ಕೂಡಾ ಚೂರುಗೊಳಿಸಲ್ಪಟ್ಟಿತು. ವಿಭಾಗಿತ ಕ್ರೈಸ್ತ ಧರ್ಮರಾಜ್ಯಗಳು ಯುರೋಪಿನಲ್ಲಿ ಇಸ್ಲಾಮ್ ಬರಲು ಒಂದು ಅನುಕೂಲಕರ ತಳಹದಿಯನ್ನು ಕೊಟ್ಟಿತು.
ರಾಜಕೀಯ ಮತ್ತು ಹಿಂಸೆಯ ಖಡ್ಗಗಳು
ಧಾರ್ಮಿಕ ಮತ್ತು ರಾಜಕೀಯ ಮುಂದಾಳುತನದ ಪೋಪರ ಸ್ಥಾನವನ್ನು ಕ್ರುಸೇಡುಗಳು ಬಲಗೊಳಿಸಿದವು. ಅವರು “ಯುರೋಪಿನ ರಾಯಭಾರ ತಂತ್ರದಲ್ಲಿ ಪೋಪರುಗಳಿಗೆ ಒಂದು ಹತೋಟಿಯ ಶಕ್ತಿಯನ್ನು ಕೊಟ್ಟಿತು,” ಎಂದು ಇತಿಹಾಸಗಾರ ಜೋನ್ ಎಚ್. ಮಂಡಿ. ಬಲುಬೇಗನೆ “ಚರ್ಚು ಯೂರೋಪಿನಲ್ಲಿ ಅತಿ ದೊಡ್ಡ ಸರಕಾರವಾಗಿತ್ತು. . . . ಬೇರೆ ಯಾವುದೇ ಪಾಶ್ಚಿಮಾತ್ಯ ಸರಕಾರಕ್ಕೆ ಇರುವುದಕ್ಕಿಂತಲೂ ಅಧಿಕ ರಾಜಕೀಯ ಶಕ್ತಿಯನ್ನು ಅದು ಪಡೆದಿತ್ತು.”
ಪಾಶ್ಚಿಮಾತ್ಯ ರೋಮನ್ ಸಾಮ್ರಾಜ್ಯವು ಕುಸಿದು ಬಿದ್ದನಂತರ ಅಧಿಕಾರಕ್ಕೆ ಏರಲು ಸಾಧ್ಯವಾಯಿತು. ಪಶ್ಚಿಮದಲ್ಲಿ ಏಕೀಕೃತಮಾಡುವ ಒಂದೇ ಶಕ್ತಿಯಾಗಿ ಚರ್ಚು ಮಾತ್ರ ಉಳಿಯಿತು ಮತ್ತು ಒಬ್ಬನೇ ಬಲಾಢ್ಯ ಅಧಿಪತಿಯಾದ ಬೈಜಿಂಟೀನ್ ಚಕ್ರವರ್ತಿಯ ಕೆಳಗೆ ಆ ಸಮಯದಲ್ಲಿ ಪೌರಾತ್ಯ ಚರ್ಚು ಇದ್ದುದರಿಂದ, ಅದಕ್ಕಿಂತಲೂ ಹೆಚ್ಚಿನ ಕ್ರಿಯಾತ್ಮಕ ರಾಜಕೀಯ ಪಾತ್ರವನ್ನು ಸಮಾಜದಲ್ಲಿ ಪಾಶ್ಚಿಮಾತ್ಯ ಚರ್ಚಿಗೆ ಆಡಲು ಸಾಧ್ಯವಾಯಿತು. ಪಾಶ್ಚಿಮಾತ್ಯ ಚರ್ಚಿಗೆ ಇದ್ದ ಈ ರಾಜಕೀಯ ಉತ್ಕೃಷ್ಟತೆಯು ಪೌರಾತ್ಯ ಚರ್ಚು ನಿರಾಕರಿಸಿದ ವಿಚಾರವಾದ, ಪೋಪರ ಹುದ್ದೆಯ ಅಗ್ರಗಣ್ಯತೆಯ ಅವರ ವಾದಕ್ಕೆ ಪುಷ್ಟೀಕರಣವನ್ನಿತಿತ್ತು. ಗೌರವಕ್ಕೆ ಪೋಪ್ ಯೋಗ್ಯನು ಎಂದು ಅನುಮತಿಸುವಾಗ, ಬೋಧನೆಯಲ್ಲಿ ಯಾ ಅಧಿಕಾರವ್ಯಾಪ್ತಿಯಲ್ಲಿ ಪೋಪರಿಗೆ ಅಂತಿಮ ಅಧಿಕಾರವಿದೆ ಎಂದು ಪೌರಾತ್ಯ ಚರ್ಚು ಒಪ್ಪಲಿಲ್ಲ.
ರಾಜಕೀಯ ಶಕ್ತಿಯಿಂದ ಮತ್ತು ತಪ್ಪಾಗಿ ನಿರ್ದೇಶಿಸಲ್ಪಟ್ಟ ಧಾರ್ಮಿಕ ಮನವರಿಕೆಯಿಂದ ಪ್ರಚೋದಿಸಲ್ಪಟ್ಟು, ರೋಮನ್ ಕಥೊಲಿಕ್ ಚರ್ಚು ವಿರೋಧವನ್ನು ಅಳಿಸಿಹಾಕಲು ಖಡ್ಗವನ್ನು ಬಳಸಿತು. ಮತಪಾಷಂಡಿಗಳನ್ನು ಬೇಟೆಯಾಡುವುದು ಅದರ ವ್ಯವಹಾರವಾಯಿತು. ಜೆಕೊಸ್ಲೊವಕಿಯದ ಪ್ರಾಗ್ನ ಕಾರ್ಲ್ಸ್ ವಿಶ್ವವಿದ್ಯಾಲಯದ ಇತಿಹಾಸ ಪ್ರಾಚಾರ್ಯರುಗಳಾದ ಮಿರೊಸ್ಲವ್ ಮತ್ತು ಅನ್ನಾ ಸ್ಕೈಬೊವರು, ಮಠೀಯ ನ್ಯಾಯಸ್ಥಾನಗಳು (ಇನ್ಕ್ವಿಸಿಷನ್), ಪಾಷಂಡ ವಾದದೊಂದಿಗೆ ವ್ಯವಹರಿಸಲು ರೂಪಿಸಲ್ಪಟ್ಟ ವಿಶೇಷ ನ್ಯಾಯಸ್ಥಾನಗಳು, ಹೇಗೆ ಕಾರ್ಯ ನಿರ್ವಹಿಸಿದವು ಎಂದು ವರ್ಣಿಸುತ್ತಾರೆ: “ಸಾಮಾನ್ಯ ಪದ್ಧತಿಗೆ ವಿರುದ್ಧವಾಗಿ, ವಿಷಯಗಳನ್ನು ತಿಳಿಸುವವರ . . . ಹೆಸರುಗಳನ್ನು ಪ್ರಕಟಿಸಲ್ಪಡುತ್ತಿರಲಿಲ್ಲ.” ಪೋಪ್ ಇನ್ನೊಸೆಂಟ್ IV 1,252ರಲ್ಲಿ “ಎಡ್ ಎಕ್ಷಿರ್ಪಂಡಾ” ಎಂಬ ಒಂದು ಮತಶಾಸನ(ಬುಲ್)ವನ್ನು ಹೊರಡಿಸಿದನು, ಇದು ಹಿಂಸಿಸುವುದನ್ನು ಅನುಮತಿಸುತ್ತದೆ. “13ನೆಯ ಶತಕದೊಳಗೆ, ಮತಪಾಷಂಡಿಗಳನ್ನು ಮರಣ ವಿಧಿಸುವ ಕ್ರಮವು ವಧಾಸ್ಥಂಭದ ಮೇಲೆ ಸುಡುವುದರ ಮೂಲಕವಾಗಿತ್ತು. . . . ಈ ಮೂಲಕ ದಂಡನೆಯನ್ನು ಜ್ಯಾರಿಗೊಳಿಸುವುದರ ಮೂಲಕ ಚರ್ಚು ರಕ್ತ ಸುರಿಸುವುದರ ದೋಷಿಯಲ್ಲ ಎಂದು ಆ ಗುರುತುಗಳಲ್ಲಿತ್ತು.”
ಮಠೀಯ ನ್ಯಾಯವಿಚಾರಕರು ಸಾವಿರಾರು ಮಂದಿಯನ್ನು ದಂಡಿಸಿದರು. ಇತರ ಸಾವಿರಾರು ಮಂದಿಯನ್ನು ವಧಾಕಂಬದ ಮೇಲೆ ಸುಡಲಾಯಿತು, ಇದು ಇತಿಹಾಸಗಾರ ವಿಲ್ ಡುರಾಂಟ್ ಹೀಗೆ ಹೇಳಲು ನಡಿಸಿತು: “ಇತಿಹಾಸಗಾರನು ಅಂಗೀಕಾರಾರ್ಹವಾದ ಎಲ್ಲವನ್ನು ಎಣಿಕೆಗೆ ತೆಗೆದುಕೊಂಡ ಮೇಲೆ ಮತ್ತು ಕ್ರೈಸ್ತನೊಬ್ಬನಿಗೆ ಅನುಮತಿಸಿದ ಮೇಲೆ, ನಾವು ಮಠೀಯ ನ್ಯಾಯಸ್ಥಾನಗಳನ್ನು . . . ಮಾನವ ಕುಲದ ದಾಖಲೆಗಳಲ್ಲಿ ಅತಿ ಕಡುಕಪ್ಪಾದ ಚುಕ್ಕೆಗಳೆಂಬ ವರ್ಗಕ್ಕೆ ಸೇರಿಸಬೇಕು, ಯಾವುದೇ ಪ್ರಾಣಿಗೂ ಅಪರಿಚಿತವಾಗಿರುವ ಒಂದು ಕ್ರೌರ್ಯತೆಯನ್ನು ಪ್ರಕಟಿಸುತ್ತದೆ.”
ಮಠೀಯ ನ್ಯಾಯಸ್ಥಾನಗಳ ಘಟನೆಗಳು 17ನೆಯ ಶತಮಾನದಫ್ರೆಂಚ್ ತತ್ವಜ್ಞಾನಿ ಮತ್ತು ವಿಜ್ಞಾನಿ ಬ್ಲೇಸ್ ಪಾಸ್ಕಲ್ರ ಹೇಳಿದ್ದ ಮಾತುಗಳನ್ನು ನೆನಪಿಗೆ ತರುತ್ತವೆ: “ಮನುಷ್ಯರು ಕೆಟ್ಟದ್ದನ್ನು ಅಷ್ಟೊಂದು ಪೂರ್ಣವಾಗಿ ಮತ್ತು ಆನಂದಕರವಾಗಿ ಒಂದು ಧಾರ್ಮಿಕ ಮನವರಿಕೆಯಿಂದ ಮಾಡುವಷ್ಟನ್ನು, ಬೇರೆ ಯಾವಾಗಲೂ ಅವರು ಎಂದೂ ಮಾಡುವುದಿಲ್ಲ.” ಸತ್ಯವಾಗಿಯೇ, ಹೇಬೇಲನನ್ನು ಕಾಯಿನನು ಹೊಡೆದು ಕೊಂದಂದಿನಿಂದ, ಭಿನ್ನವಾದ ಧಾರ್ಮಿಕ ಅಭಿಪ್ರಾಯಗಳಿರುವ ವ್ಯಕ್ತಿಗಳ ವಿರುದ್ಧ ಖಡ್ಗನ್ನು ತಿರುಗಿಸುವುದು ಸುಳ್ಳು ಧರ್ಮದ ಒಂದು ಗುಣಲಕ್ಷಣವಾಗಿದೆ.—ಆದಿಕಾಂಡ 4:8.
ಅನೈಕ್ಯತೆಯ ಖಡ್ಗದಿಂದ ಪ್ರತ್ಯೇಕಿಸಲ್ಪಡುವುದು
ರಾಷ್ಟ್ರೀಯ ಭಿನ್ನಾಭಿಪ್ರಾಯ ಮತ್ತು ರಾಜಕೀಯ ಹೂಟ ಹೂಡುವಿಕೆಗಳು ಪೋಪರ ನಿವಾಸ ಸ್ಥಾನವನ್ನು ರೋಮ್ನಿಂದ 1309ರಲ್ಲಿ ಅವಿಗ್ನೊನ್ಗೆ ಸ್ಥಳಾಂತರಿಸುವಂತೆ ನಡಿಸಿತು. 1377ರಲ್ಲಿ ಪುನಃ ಅದು ರೋಮ್ನಲ್ಲಿ ಪುನಃ ಸ್ಥಾಪಿಸಲ್ಪಟ್ಟರೂ, ಹೊಸ ಪೋಪ್, ಉರ್ಬಾನ್ VIನನ್ನು ಆರಿಸುವುದರೊಂದಿಗೆ, ಸ್ವಲ್ಪ ಸಮಯದಲ್ಲಿಯೇ ಇನ್ನಷ್ಟು ತಿಕ್ಕಾಟಕ್ಕೆ ಕಾರಣವಾಯಿತು. ಆದರೆ ಅವನನ್ನು ಆರಿಸಿದಂತಹ ಕಾರ್ಡಿನಲರುಗಳನ ಅದೇ ಗುಂಪು ಒಬ್ಬ ಪ್ರತಿಸ್ಪರ್ಧಿ ಪೋಪ್, ಕ್ಲೆಮೆಂಟ್ VIIರನ್ನು ಕೂಡಾ ಆರಿಸಿತು, ಇವನು ಅವಿಗ್ನೊನ್ನಲ್ಲಿ ವಾಸಿಸಿದನು. 15ನೆಯ ಶತಮಾನದ ಆರಂಭದಲ್ಲಿ, ಸ್ವಲ್ಪ ಸಮಯದ ತನಕ ಮೂವರು ಪೋಪರುಗಳು ಏಕ ಕಾಲದಲ್ಲಿ ಆಳುತ್ತಿದ್ದಾಗ, ವಿಷಯಗಳು ಇನ್ನಷ್ಟು ಗಲಿಬಿಲಿಗೊಂಡವು!
ಪಾಶ್ಚಿಮಾತ್ಯ ಯಾ ಮಹಾ ಛಿದ್ರತೆ (ಸಿಸ್ಹಮ್) ಎಂದು ಹೆಸರು ಪಡೆದಿದ್ದ ಈ ಸನ್ನಿವೇಶವು ಕೊನ್ಸ್ಟಾನ್ಸ್ನ ಕೌನ್ಸಿಲಿನಲ್ಲಿ ಅಂತ್ಯಗೊಂಡಿತು. ಇದು ರಾಜಿನ್ಯಾಯಸ್ಥಾನಗಳನ್ನು ಆರಂಭಿಸಿತು, ಕ್ರೈಸ್ತ ಮಠೀಯ ಸಂಬಂಧಿತ ಅಂತಿಮ ಅಧಿಕಾರವು ಜನರಲ್ ಕೌನ್ಸಿಲ್ಗಳಿಗಿರುತ್ತದೆಯೇ ಹೊರತು ಪೋಪರ ಹುದ್ದೆಗಲ್ಲ ಎಂಬ ಸೂತ್ರ. ಈ ರೀತಿ, 1417ರಲ್ಲಿ ಮಾರ್ಟಿನ್ Vನನ್ನು ಹೊಸ ಪೋಪ್ ಆಗಿ ಕೌನ್ಸಿಲ್ ಅರಿಸಲು ಶಕ್ತವಾಯಿತು. ಇನ್ನೊಮ್ಮೆ ಐಕ್ಯರಾದರೂ ಕೂಡಾ ಚರ್ಚು ಗಂಭೀರವಾಗಿ ಬಲಹೀನವಾಯಿತು. ಗಾಯದ ಮಚ್ಛೆಗಳಾದರೂ, ಪೋಪ್ ಹುದ್ದೆಯು ಯಾವುದೇ ಸುಧಾರಣೆಯ ಅಗತ್ಯವನ್ನು ಕಾಣಲು ನಿರಾಕರಿಸಿತು. ಸೈಂಟ್ ವಡ್ಲಿಮಿರ್ಸ್ ಆರ್ಥಡಕ್ಸ್ ಥಿಯೋಲಾಜಿಕಲ್ ಸೆಮಿನೆರಿಯ ಜೋನ್ ಎಲ್. ಭೂಜಮ್ರರಿಗನುಸಾರ, ಈ ನಿರಾಕರಣೆಯು “ಹದಿನಾರನೆಯ ಶತಮಾನದ ಸುಧಾರಣೆಗೆ ಅಡಿಪಾಯವನ್ನು ಹಾಕಿತು.”
ಅವರು ತಮ್ಮ ಧರ್ಮಕ್ಕನುಸಾರ ಜೀವಿಸುತ್ತಿದ್ದರೋ?
ಕ್ರೈಸ್ತತ್ವದ ಸ್ಥಾಪಕನು ತನ್ನ ಹಿಂಬಾಲಕರಿಗೆ ಶಿಷ್ಯರನ್ನಾಗಿ ಮಾಡಲು ಉಪದೇಶಿಸಿದನಾದರೂ, ಅದನ್ನು ಮಾಡುವಂತೆ ದೈಹಿಕ ಶಕ್ತಿಯನ್ನು ಉಪಯೋಗಿಸುವಂತೆ ಅವನು ಅವರಿಗೆ ಹೇಳಲಿಲ್ಲ. ವಾಸ್ತವದಲ್ಲಿ, ಅವನು ನಿರ್ದಿಷ್ಟವಾಗಿ ಎಚ್ಚರಿಸಿದ್ದೇನಂದರೆ “ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ಸಾಯುವರು.” ತದ್ರೀತಿಯಲ್ಲಿ, ಮೆಚ್ಚಿಕೆ ತೋರಿಸದ ಸ್ಥಿತಿಯಲ್ಲಿ ಯಾರೇ ಒಬ್ಬನು ಇರುವುದಾದರೆ ಅವನನ್ನು ದೈಹಿಕವಾಗಿ ಹಿಂಸಿಸಬೇಕೆಂದು ಅವನು ಉಪದೇಶಿಸಲಿಲ್ಲ. ಆಚರಿಸಬೇಕಾದ ಕ್ರೈಸ್ತ ಸೂತ್ರವು ಇದಾಗಿತ್ತು: “ಕರ್ತನ ದಾಸನು ಜಗಳವಾಡದೆ ಎಲ್ಲರ ವಿಷಯದಲ್ಲಿ ಸಾಧುವೂ ಬೋಧಿಸುವದರಲ್ಲಿ ಪ್ರವೀಣನೂ ಕೇಡನ್ನು ಸಹಿಸಿಕೊಳ್ಳುವವನೂ ಎದುರಿಸುವವರನ್ನು ನಿಧಾನದಿಂದ ತಿದ್ದುವವನೂ ಆಗಿರಬೇಕು.”—ಮತ್ತಾಯ 26:52; 2 ತಿಮೋತಿ 24, 25.
ಯುದ್ಧದಲ್ಲಿ ಅಕ್ಷರಶಃ ಖಡ್ಗವನ್ನು ಮತ್ತು ರಾಜಕೀಯ ಮತ್ತು ಹಿಂಸೆಯ ಸಾಂಕೇತಿಕ ಖಡ್ಗಗಳನ್ನು ಬಳಸುವುದರ ಮೂಲಕ, ಕ್ರೈಸ್ತ ಧರ್ಮ ರಾಜ್ಯಗಳು, ಯಾವುದರ ಸ್ಥಾಪಕನನ್ನು ಅನುಸರಿಸುತ್ತವೆಂದು ಹೇಳಿಕೊಳ್ಳುತ್ತಾರೆ ಅವನ ನಾಯಕತ್ವವನ್ನು ಅವರು ನಿಖರವಾಗಿ ಅನುಸರಿಸುವುದಿಲ್ಲ. ಈಗಾಗಲೇ ಅನೈಕ್ಯತೆಯಿಂದ ಛಿದ್ರಗೊಂಡಿರುವ ಅದು ಪೂರ್ಣ ಪತನದ ಬೆದರಿಕೆಗೊಳಪಟ್ಟಿದೆ. ರೋಮನ್ ಕಥೊಲಿಸಿಸಂ “ಸುಧಾರಣೆಯ ಅಗತ್ಯ ಜರೂರಿಯಿರುವ ಒಂದು ಧರ್ಮ”ವಾಗಿರುತ್ತದೆ. ಆದರೆ ಸುಧಾರಣೆ ಬರುವುದೋ? ಬರುವುದಾದರೆ, ಯಾವಾಗ? ನಮ್ಮ ಮೇ 8, 1991ರ ಸಂಚಿಕೆಯು ನಮಗೆ ಹೆಚ್ಚು ವಿಷಯಗಳನ್ನು ತಿಳಿಸುವುದು. (g89 8/8)
[ಪುಟ 24 ರಲ್ಲಿರುವ ಚೌಕ/ಚಿತ್ರಗಳು]
ಉತ್ತಮ ಕ್ರೈಸ್ತ ಹೋರಾಟವೋ?
ಕ್ರುಸೇಡುಗಳು ಕ್ರೈಸ್ತರಿಗೆ ಮಾಡಲು ಹೇಳಿದ ಉತ್ತಮ ಹೋರಾಟಗಳೋ?—2 ಕೊರಿಂಥ 10:3, 4; 1 ತಿಮೊಥಿ 1:18.
ಮೊದಲನೆಯ ಕ್ರುಸೇಡ್ನಲ್ಲಿ (1096-99) ಯೆರೂಸಲೇಮನ್ನು ಪುನಃ ವಶಪಡಿಸಿಕೊಳ್ಳಲಾಯಿತು ಮತ್ತು ಪೂರ್ವದಲ್ಲಿ ನಾಲ್ಕು ಲ್ಯಾಟಿನ್ ಪ್ರಾಂತ್ಯಗಳನ್ನು ಸ್ಥಾಪಿಸಲಾಯಿತು: ಯೆರೂಸಲೇಮ್ ರಾಜ್ಯ, ಇಡಿಸ್ಸಾದ ನಗರ, ಅಂತಿಯೋಕ್ಯದ ಸಂಸ್ಥಾನ ಮತ್ತು ಟ್ರಿಪೊಲಿಯ ನಗರ. ಯೆರೂಸಲೇಮನ್ನು ವಶಪಡಿಸುವಿಕೆಯ ಕುರಿತು ಇತಿಹಾಸಗಾರ ಎಚ್. ಜಿ. ವೆಲ್ಸ್ರಿಂದ ಉಲ್ಲೇಖಿಸಲ್ಪಟ್ಟ ಒಂದು ಅಧಿಕಾರಿ ಹೇಳುವುದು: “ನರಹತ್ಯೆಯ ಭಯಂಕರ; ವಶಹೊಂದಿದವರ ರಕ್ತವು ರಸ್ತೆಯಲ್ಲಿ ಹರಿಯಿತು, ಎಷ್ಟೆಂದರೆ ಮನುಷ್ಯರು ಸವಾರಿಮಾಡುವಾಗ ರಕ್ತವು ಎರಚಲ್ಪಡುತ್ತಿತ್ತು. ರಾತ್ರಿಯಾದ ಮೇಲೆ ‘ಅಧಿಕ ಆನಂದದಿಂದ ಅಳುವುದಕ್ಕಾಗಿ’ ಕ್ರುಸೇಡರುಗಳು ಅವರ ದ್ರಾಕ್ಷೆಯ ತೊಟ್ಟಿಯ ತುಳಿತದ ನಂತರ, ಅವರು ಕ್ರಿಸ್ತನ ಸಮಾಧಿಗುಹೆಗೆ ಬಂದು ತಮ್ಮ ರಕ್ತ-ಪ್ರೋಕ್ಷಿತ ಹಸ್ತಗಳನ್ನು ಪ್ರಾರ್ಥನೆಯಲ್ಲಿ ಜೋಡಿಸುತ್ತಿದ್ದರು.”
ಎರಡನೆಯ ಕ್ರುಸೇಡ್ (1147-49) 1144ರಲ್ಲಿ ಸಿರಿಯಾದ ಮುಸ್ಲಿಮರಿಗೆ ಇಡಿಸ್ಸಾದ ನಗರವು ನಷ್ಟ ಹೊಂದಿದ್ದರಿಂದ ಇದು ಆರಂಭಿಸಲ್ಪಟ್ಟಿತು; ಕ್ರೈಸ್ತಧರ್ಮದ “ನಾಸ್ತಿಕರನ್ನು” ಯಶಸ್ವಿಯಾಗಿ ಮುಸ್ಲಿಮರು ಹಿಂದಕ್ಕಟ್ಟುವುದರ ಮೂಲಕ ಅಂತ್ಯಗೊಂಡಿತು.
ಮೂರನೆಯ ಕ್ರುಸೇಡ್ (1189-92), ಮುಸ್ಲಿಮರು ಯೆರೂಸಲೇಮನ್ನು ಪುನಃ ವಶಮಾಡಿಕೊಂಡಾದ ನಂತರ ಆರಂಭಗೊಂಡಿತು. ಇದರ ಮುಂದಾಳುವಾಗಿ ಇಂಗ್ಲೆಂಡಿನ “ಸಿಂಹಹೃದಯದ” ರಿಚರ್ಡ್ I ಇದ್ದನು. ಇದು ಬೇಗನೆ “ಪ್ರತ್ಯೇಕ ಭಾಗಗಳಾಗಿ ಒಡೆಯಿತು,” ಎನ್ನುತ್ತದೆ ದ ಎನ್ಸೈಕ್ಲೊಪಿಡಿಯಾ ಆಫ್ ರಿಲಿಜನ್, “ತಿಕ್ಕಾಟ, ಜಗಳ ಮತ್ತು ಸಹಕಾರದ ಕೊರತೆಯಿಂದ.”
ನಾಲ್ಕನೆಯ ಕ್ರುಸೇಡ್ (1202-4) ಹಣದ ಕೊರತೆಯ ಕಾರಣ ಐಗುಪ್ತದಿಂದ ಕಾನ್ಸ್ಟಂಟಿನೋಪಲ್ಗೆ ಮಾರ್ಗ ಬದಲಾಯಿಸಲ್ಪಟ್ಟಿತು; ಬೈಜಿಂಟೀನನ ಅರಸುತನಕ್ಕೆ ಸುಳ್ಳು ಹಕ್ಕುದಾರನಾದ ದೇಶಭೃಷ್ಟ ಅಲೆಕ್ಸಿಯುಸನು ಪುನಃ ಸಿಂಹಾಸನರೂಢನಾಗಲು ಸಹಾಯಮಾಡಿದರೆ, ಹಣ ಸಹಾಯದ ಆಶ್ವಾಸನೆ. “[ಫಲಿತಾಂಶವಾಗಿ] ಕ್ರುಸೇಡರುಗಳು ಕಾನ್ಸ್ಟಂಟಿನೋಪಲ್ನ್ನು ಸೂರೆಗೈದದ್ದನ್ನು ಆರ್ಥಡಕ್ಸ್ ಪೌರಾತ್ಯವು ಎಂದಿಗೂ ಕ್ಷಮಿಸಲಿಲ್ಲ ಯಾ ಮರೆಯಲಿಲ್ಲ,” ಎನ್ನುತ್ತದೆ ದ ಎನ್ಸೈಕ್ಲೊಪೀಡಿಯಾ ಆಫ್ ರಿಲಿಜನ್, ಅದಕ್ಕೆ ಕೂಡಿಸಿದ್ದು: “ಛಿದ್ರತೆಯ ಸ್ಥಾಪನೆಗೆ ಯಾವುದೇ ಒಂದು ನಿರ್ದಿಷ್ಟ ತಾರೀಕನ್ನು ಉಲ್ಲೇಖಿಸಬೇಕಾದರೆ, ಮನಶಾಸ್ತ್ರದ ದೃಷ್ಟಿಕೋನದಲ್ಲಿ—ಅತ್ಯಂತ ತಕ್ಕದ್ದಾದ ವರ್ಷ 1204.”
ಮಕ್ಕಳ ಕ್ರುಸೇಡ್ (1212) ಅವರ ನಿಗದಿತ ಸ್ಥಳಕ್ಕೆ ತಲುಪುವ ಮೊದಲೇ ಸಾವಿರಾರು ಜರ್ಮನ್ ಮತ್ತು ಫ್ರೆಂಚ್ ಮಕ್ಕಳ ಮೃತ್ಯುವನ್ನು ತಂದಿತು.
ಐದನೆಯ ಕ್ರುಸೇಡ್ (1217-21) ಪೋಪರ ಅಧಿಕಾರದ ಕೆಳಗಿನ ಕಡೆಯದ್ದು, ಇದು ಲೋಪಗಳಿರುವ ನಾಯಕತ್ವ ಮತ್ತು ವೈದಿಕರ ಮಧ್ಯಪ್ರವೇಶದ ಕಾರಣ ಅಪಜಯಗೊಂಡಿತು.
ಆರನೆಯ ಕ್ರುಸೇಡ್ (1228-29) ಪೋಪ್ ಗ್ರೆಗರಿ IXರಿಂದ ಮೊದಲೇ ಬಹಿಷ್ಕೃರಿಸಲ್ಪಟ್ಟ ಹೊಹನ್ಸೌಫ್ಟನ್ನ ಚಕ್ರವರ್ತಿ ಫ್ರೆಡರಿಕ್ IIನಿಂದ ನಡಿಸಲ್ಪಟ್ಟಿತ್ತು.
ಏಳನೆಯ ಮತ್ತು ಎಂಟನೆಯ ಕ್ರುಸೇಡ್ಗಳು (1248-54 ಮತ್ತು 1270-72) ಫ್ರಾನ್ಸಿನ ಲೂಯಿಸ್ IXನಿಂದ ನಡಿಸಲ್ಪಟ್ಟಿತು, ಆದರೆ ಉತ್ತರ ಆಫ್ರಿಕದಲ್ಲಿ ಅವನ ಮರಣದ ನಂತರ ಬಿದ್ದುಹೋಯಿತು.
[ಪುಟ 23 ರಲ್ಲಿರುವಚಿತ್ರ]
ಜರ್ಮನಿಯ ವರ್ಮ್ಸ್ನಲ್ಲಿರುವ ಯೆಹೂದ್ಯರ ಸಮಾಧಿ—ಮೊದಲ ಕ್ರುಸೇಡಿನ ಒಂದು ಜ್ಞಾಪಕ