ಧರ್ಮದ ಭವಿಷ್ಯ ಅದರ ಗತಕಾಲದ ನೋಟದಲ್ಲಿ
ಭಾಗ 14: ಸಾ.ಶ.622ರಿಂದ ಮುಂದಕ್ಕೆ ದೇವರ ಚಿತ್ತಕ್ಕೆ ಅಧೀನರಾಗುವುದು
“ಈ ಸಂದೇಶವಾಹಕರಲ್ಲಿ—ಕೆಲವರಿಗೆ ಕೆಲವರ ಮೇಲೆ ನಾವು ಶ್ರೇಷ್ಠತೆಯನ್ನು ಕೊಟ್ಟಿರುತ್ತೇವೆ.”—ಅಲ್ಬಕರ (ಸೂರಾ 2), ಆಯತ್ 253, ಕುರ್ಆನ್*ನಿಂದ
ಸರ್ವಶಕ್ತಿಯಿರುವ, ಪ್ರೀತಿಯ ದೇವರೊಬ್ಬನಲ್ಲಿ ನಂಬಿಕೆಯಿಡುವವರು ಅವನ ಚಿತ್ತಕ್ಕೆ ವಿಧೇಯರಾಗುವ ಔಚಿತ್ಯವನ್ನು ಮನಗಾಣುತ್ತಾರೆ. ದೈವಿಕ ಜ್ಞಾನದೊಂದಿಗೆ ಸಂದೇಶವಾಹಕರ ಮೂಲಕ ಅವನು ಒದಗಿಸಿದ ಮಾರ್ಗದರ್ಶನವನ್ನು ಅವರು ಗಣ್ಯಮಾಡುತ್ತಾರೆ. ಪ್ರಪಂಚದ ಹೆಚ್ಚು ಪ್ರಮುಖ ಧರ್ಮಗಳಲ್ಲಿ ಒಂದು ಈ ಸಂದೇಶವಾಹಕರಲ್ಲಿ ಕೆಲವರನ್ನು ಅಂಗೀಕರಿಸುತ್ತಾರೆ. ಉದಾಹರಣೆಗೆ, 80 ಕೋಟಿಗಿಂತಲೂ ಹೆಚ್ಚು ಇಸ್ಲಾಮಿನ ಅನುಯಾಯಿಗಳು ಯೆಹೂದ್ಯ—ಕ್ರೈಸ್ತ ವ್ಯಕ್ತಿಗಳಾಗಿದ್ದಂತಹ ಆದಾಮ, ನೋಹ. ಅಬ್ರಹಾಮ, ಮೋಶೆ, ದಾವೀದ ಮತ್ತು ಯೇಸುವನ್ನು ದೇವರ ಪ್ರಮುಖ ಪ್ರವಾದಿಗಳೆಂದು ವೀಕ್ಷಿಸುತ್ತಾರೆ. ಆದರೆ ಏಳನೆಯವನು, ಪ್ರವಾದಿ ಮುಹಮ್ಮದ್—ಬೇರೆಲ್ಲಾ ಸಂದೇಶವಾಹಕರಿಗಿಂತಲೂ ಶ್ರೇಷ್ಠತೆಗೇರಿಸಲ್ಪಟ್ಟಿದ್ದಾನೆ ಎಂದು ಅವರು ನಂಬುತ್ತಾರೆ.
ಇಸ್ಲಾಮ್ ಎಂಬ ಹೆಸರು ಅರ್ಥಭರಿತವಾದದ್ದು, ಅದು ಅಧೀನತೆ ಅಥವಾ ಶರಣು ಹೋಗುವುದನ್ನು ಸೂಚಿಸುತ್ತದೆ—ಅದು ಅಲ್ಲಾನ ನಿಯಮ ಮತ್ತು ಚಿತ್ತಕ್ಕೆ. ಈ ರೀತಿಯ ಶರಣು ಇಲ್ಲವೇ ಅಧೀನತೆಗೆ ಒಳಪಡುವ ವ್ಯಕ್ತಿಯನ್ನು “ಮುಸ್ಲಿಮ್” ಎಂದು ಕರೆಯಲಾಗುತ್ತದೆ, ಇದು ಇಸ್ಲಾಮ್ ಶಬ್ದದ ಕರ್ತರಿ ಕೃದಂತ (ನಾಮವಾಚಕ ವಿಶೇಷಣದ ಕ್ರಿಯಾಪದ ಲಕ್ಷಣ) ವಾಗಿರುತ್ತದೆ. ಮುಸ್ಲಿಮರು ಯಾರಿಗೆ ಅಧೀನರಾಗಿರಬೇಕೋ ಅವನೇ ಅಲ್ಲಾಹ್ ಆಗಿರುತ್ತಾನೆ. ವೈಯಕ್ತಿಕ ಹೆಸರಾಗಿ ವೀಕ್ಷಿಸಲ್ಪಡುವ ಅಲ್ಲಾಹ್ ಎಂಬದು ಅಲ್-ಇಲಾಹ್ ಎಂಬ ಅರೇಬಿಕ್ ಶಬ್ದಗಳ ಸಂಕ್ಷಿಪ್ತ ಪದವಾಗಿದ್ದು, “ದೇವರು” (The God) ಎಂದರ್ಥವುಳ್ಳದ್ದು. ಈ ನಾಮವು ಕುರ್ಆನ್ನಲ್ಲಿ ಸುಮಾರು 2,700 ಬಾರಿ ಬರುತ್ತದೆ.
ಇಸ್ಲಾಮಿನ ಅಗ್ರ ಗಾಮಿ ಪ್ರವಾದಿ
ಮುಹಮ್ಮದ್ ಬಿನ್ ಅಬ್ದುಲ್ಲಾಹ್ (ಅಬ್ದುಲ್ಲಾಹ್ರ ಪುತ್ರ), ಇಸ್ಲಾಮಿನ ಸ್ಥಾಪಕರು, ಸಾ.ಶ. 570ನೆಯ ವರ್ಷದಲ್ಲಿ ಸೌದಿ ಅರೇಬಿಯಾದ ಮಕ್ಕಾದಲ್ಲಿ ಜನಿಸಿದರು. ಅವರು ಸ್ಥಳೀಯ ಹಲವು ದೇವರುಗಳ ಉಪಾಸನೆ ಮತ್ತು ಸಂಸ್ಕಾರಗಳಿಂದ ಅತೃಪ್ತರಾಗಿದ್ದರು. ವಾಸ್ತವದಲ್ಲಿ ಅವರಿಗೆ ಯೂದಾಯ ಮತ ಇಲ್ಲವೇ ಕ್ರೈಸ್ತತ್ವದ ಕಡೆಗೆ ಯಾವ ಒಲವೂ ಇರಲಿಲ್ಲ. ಮುಸ್ಲಿಮ್ ಗ್ರಂಥಕರ್ತರಾದ ಹೆಚ್. ಎಮ್. ಬಾಗಿಲ್ ವರ್ಣಿಸುವುದು: “ಯೇಸುವಿನ ಮೂಲ ಬೋಧನೆಗಳಿಂದ ಕ್ರೈಸ್ತತ್ವವು ಬಲುದೂರ ತೊಲಗಿದ್ದರಿಂದ, ಅಲ್ಲಾನು ಆಗ ತನ್ನ ಮೂಲ ಯೋಜನೆಯ ಭಾಗವಾಗಿ ತನ್ನ ಕೊನೆಯ ಪ್ರವಾದಿ, ಮುಹಮ್ಮದ್ರನ್ನು ಈ ಎಲ್ಲಾ ಬದಲಾವಣೆಗಳನ್ನು ಪುನಃಸ್ಥಾಪಿಸಲು ಪುನರುಜ್ಜೀವಕನಾಗಿ ಕಳುಹಿಸಿದನು.”
ಮುಹಮ್ಮದ್ ಸಂಸ್ಕಾರ ಮತ್ತು ಸಂಪ್ರದಾಯಗಳಿಗೆ ಅರೆಬಿಕ್ ರುಚಿಯನ್ನು ಕೊಟ್ಟನು. ಯೆರೂಸಲೇಮ್ ಮತ್ತು ಅದರ ದೇವಾಲಯದ ಸ್ಥಳದಲ್ಲಿ ಮಕ್ಕಾ ಮತ್ತು ಅದರ ಪವಿತ್ರ ಸಮಾಧಿ ಕಾಬಾ ಸ್ಥಾನಾಂತರಗೊಂಡಿತು. ಯೆಹೂದ್ಯರಿಗೆ ಶನಿವಾರ, ಕ್ರೈಸ್ತರಿಗೆ ಆದಿತ್ಯವಾರವಾದರೆ, ಅದರ ಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆಗಾಗಿ ಶುಕ್ರವಾರ ಬಂತು. ಮೋಶೆ ಇಲ್ಲವೇ ಯೇಸುವಿನ ಬದಲು, ದೇವರ ಅಗ್ರಗಾಮಿ ಪ್ರವಾದಿಯಾಗಿ ಮುಹಮ್ಮದ್ನನ್ನು ಮುಸ್ಲಿಮರ ವೀಕ್ಷಿಸಲು ಆರಂಭಿಸಿದರು.
ಸುಮಾರು 40 ವರ್ಷದವನಾಗಿದ್ದಾಗ, ದೇವರ ಸಂದೇಶವಾಹಕನಾಗಿ ತನ್ನನ್ನು ಕರೆಯಲಾಗಿದೆ ಎಂದು ಮುಹಮ್ಮದ್ ಘೋಷಿಸಿದನು. ಮೊತ್ತಮೊದಲು ತನ್ನ ನಂಬಿಕೆಯನ್ನು ತನ್ನ ಸಂಬಂಧಿಕರೊಂದಿಗೆ ಮತ್ತು ಗೆಳೆಯರೊಂದಿಗೆ ಅವನು ಹಂಚಿದನು ಕ್ರಮೇಣ, ಅವನ ಅನುಯಾಯಿಗಳ ಒಂದು ಗುಂಪು ಆರಂಭಗೊಂಡಿತು. ಇಸ್ಲಾಮಿಕ್ ಶಕ ನೈಜವಾಗಿ ಆರಂಭಗೊಂಡದ್ದು ಸಾ.ಶ. 622ರಲ್ಲಿ, ಅಂದರೆ ಅವನು ಮಕ್ಕಾದಿಂದ ಮದೀನಾಕ್ಕೆ ವಲಸೆ ಹೋದಾಗ. ಆ ಘಟನೆಯನ್ನು ಹಿಜರಾ ಎಂದು ಕರೆಯಲಾಗುತ್ತದೆ. ಅರೆಬಿಕ್ನಲ್ಲಿ ಅದರ ಅರ್ಥ “ವಲಸೆ ಹೋಗುವಿಕೆ” ಎಂದಾಗಿದೆ. ಈ ರೀತಿ ಮುಸ್ಲಿಮ್ ತಾರೀಕುಗಳಿಗೆ ಎ.ಏಚ್. (Anno Hegirae, ಪಲಾಯನ ಮಾಡಿದ ವರ್ಷ) ಎಂದು ಕೊಡಲಾಗಿದೆ.
ಮದೀನಾದಲ್ಲಿರುವ ಯೆಹೂದ್ಯರನ್ನು ತನ್ನ ಹೊಸ ಮತಕ್ಕೆ ಮತ್ತು ಪ್ರವಾದಿಯೋಪಾದಿ ತನ್ನ ಪಾತ್ರದ ಕಡೆಗೆ ಎಳೆಯಲು ಮುಹಮ್ಮದ್ ಪ್ರಯತ್ನಿಸಿದನು. ಆದರೆ ಮನವೊಲಿಸುವಿಕೆಯು ನಿಷ್ಫಲಗೊಂಡಿತು. ಅವರು ಅವನ ವಿರೋಧವಾಗಿ ಅವನ ಶತ್ರುಗಳೊಂದಿಗೆ ಸೇರಿ, ಮಕ್ಕಾ ಮತ್ತು ಮದೀನಾ ಎರಡೂ ಕಡೆ ಹಂಚಿಕೆ ಹೂಡಿದರು. ಈ ಮಧ್ಯೆ ಯೆಹೂದ್ಯರ ಮುಖ್ಯ ಗುಂಪುಗಳನ್ನು ಹೊರಗಟ್ಟಲಾಯಿತು ಮತ್ತು ಒಂದು ಬುಡಕಟ್ಟು, ಕುರೈಶರನ್ನು, ಅವರ ಪುರುಷರನ್ನು ಹತಿಸುವುದರ ಮೂಲಕ ನಾಶಮಾಡಲಾಯಿತು ಮತ್ತು ಹೆಂಗಸರು, ಮಕ್ಕಳನ್ನು ದಾಸ್ವತಕ್ಕೆ ಒಳಪಡಿಸಲಾಯಿತು.
ಕೊನೆಗೆ, ಮಕ್ಕಾವನ್ನು ಶಾಂತಿಯುತವಾಗಿ ಎ.ಏಚ್. 8ರಲ್ಲಿ (ಸಾ.ಶ.630) ವಶಪಡಿಸಿಕೊಳ್ಳಲಾಯಿತು, ಹಾಗೆಯೇ ಅರೇಬಿಯಾದ ಹೆಚ್ಚಿನ ಭೂಭಾಗವನ್ನು ವಶಪಡಿಸಿಕೊಳ್ಳಲಾಯಿತು. ಮುಹಮ್ಮದ್ನ ಮರಣದ ಕೆಲವು ದಶಕಗಳ ನಂತರ, ಉತ್ತರಾಧಿಕಾರದ ವಿವಾದವು ಉತ್ಪನ್ನವಾದಾಗ, ಅಲ್ಲಿ ಆಂತರಿಕ ಕಾದಾಟ ಉಂಟಾಯಿತು, ಇದರಿಂದ ಇಸ್ಲಾಮೇತರ ಸಮಾಜಗುಂಪುಗಳೊಂದಿಗೆ ಮತ್ತು ಕಲ್ಪನೆಗಳೊಂದಿಗೆ ಬಹಳಷ್ಟು ಸೇರಿಸಿಕೊಳ್ಳುವ ಪ್ರವೃತ್ತಿಯನ್ನು ಸ್ವೀಕರಿಸಲಾಯಿತು.
ಧರ್ಮಕ್ಕಿಂತಲೂ ಹೆಚ್ಚಿನದ್ದು
ಇಸ್ಲಾಮ್ನಲ್ಲಿ ಸಮಗ್ರ ಜೀವಿತಮಾರ್ಗವು ಸೇರಿದ್ದು, ರಾಜ್ಯ, ಅದರ ನಿಯಮಗಳು, ಅದರ ಸಾಮಾಜಿಕ ಸಂಘಟನೆಗಳು ಮತ್ತು ಅದರ ಸಂಸ್ಕೃತಿ ಕೂಡಾ ಒಳಗೂಡಿರುವುದರಿಂದ, ಅದು ಕೇವಲ ಒಂದು ಧರ್ಮವಾಗಿರುವುದಿಲ್ಲ. ಅರ್ಲಿ ಇಸ್ಲಾಮ್ ಪುಸ್ತಕವು, ಸುಮಾರು 600 ವರ್ಷಗಳಷ್ಟು ಕಾಲದಿಂದ “ಇಸ್ಲಾಮ್ ಒಂದು ಮಹಾ ಪಂಥಾಹ್ವಾನದ ಧರ್ಮವೂ, ಅದರ ಬಲಾಢ್ಯವಾದ ರಾಜಕೀಯ ಶಕ್ತಿಯೂ ಮತ್ತು ಅತಿ ಮಹತ್ತಾದ ಸಂಸ್ಕೃತಿಯೂ” ಆಗಿತ್ತೆಂದು ಹೇಳಲು ಕಾರಣವನ್ನು ಇದು ವಿವರಿಸುತ್ತದೆ.
ಮುಹಮ್ಮದ್ ಮರಣಾನಂತರದ ಒಂದೇ ಶತಕದಲ್ಲಿ, ರೋಮನ್ ಸಾಮ್ರಾಜ್ಯ ತನ್ನ ಉಚ್ಛಬಿಂದುವಲ್ಲಿದ್ದದ್ದಕ್ಕಿಂತ ದೊಡ್ಡದಾಗಿದ್ದ ಅರೇಬಿಕ್ ಸಾಮ್ರಾಜ್ಯವು, ಭಾರತದಿಂದ ಹಿಡಿದು ಉತ್ತರ ಆಫ್ರಿಕಾ ಸೇರಿಸಿ ಸ್ಪೇಯ್ನ್ ತನಕ ಹರಡಿ, ಪಾಶ್ಚಿಮಾತ್ಯ ನಾಗರಿಕತೆಯನ್ನು ಸಮೃದ್ಧಿಗೊಳಿಸುವ ಸಂಶೋಧನೆಗಳನ್ನು ದಾಟಿಸಲು ನೆರವಾಯಿತು. ಅದು ಕಾನೂನು, ಗಣಿತಶಾಸ್ತ್ರ, ಖಗೋಳ ವಿಜ್ಞಾನ, ಇತಿಹಾಸ, ಸಾಹಿತ್ಯ, ಭೂಗೋಳಶಾಸ್ತ್ರ, ತತ್ವಶಾಸ್ತ್ರ, ವಾಸ್ತುಶಿಲ್ಪಾಶಾಸ್ತ್ರ, ವೈದ್ಯಕೀಯ, ಸಂಗೀತ ಮತ್ತು ಸಮಾಜ ವಿಜ್ಞಾನ ರಂಗಗಳಲ್ಲಿ ಮಹತ್ತಾದ ನೆರವನ್ನಿತ್ತಿತ್ತು.
ಉಲ್ಕೆಯಂತೆ ಬಲುಬೇಗನೇ ಉರಿದು ಹೋಯಿತು
“ಮುಹಮ್ಮದ್ನ ಸಾರುವಿಕೆಯ ನೇರ ಉತ್ಪಾದನೆಯೇ ಅರಬ್ ಯುದ್ಧವಿಜಯಗಳು,” ಎಂದು ದ ಕಾಲಿನ್ಸ್ ಅಟ್ಲಾಸ್ ಆಫ್ ವರ್ಲ್ಡ್ ಹಿಸ್ಟರಿ ಹೇಳುತ್ತದೆ. ಇಸ್ಲಾಮಿಕ್ ಹಬ್ಬುವಿಕೆಗೆ ಇತರ ಸಂಗತಿಗಳೂ ಸಹಾಯಕೊಟ್ಟಿವೆ ಎಂಬುದು ಸತ್ಯ. ಉದಾಹರಣೆಗೆ, ಬೈಜಿಂಟೀನ್ನ ಕ್ರೈಸ್ತರ ಮತ್ತು ಪರ್ಸಿಯಾದ ಜೊರೋಸ್ಟ್ರೀಯನರ ನಡುವಣ ಧಾರ್ಮಿಕ ಸಂಘರ್ಷಣೆಗಳು, ಅರಬರ ಮುನ್ನಡೆಗೆ ಇಬ್ಬರನ್ನೂ ಕುರುಡುಮಾಡಿದ್ದವು.
ವಿಸ್ತಾರವಾಗಿ ಚದರಿರುವ ಒಂದು ಸಾಮ್ರಾಜ್ಯವನ್ನು ಧರ್ಮದ ಮೂಲಕ ಒಟ್ಟಾಗಿಡಲು ಪ್ರಯತ್ನಿಸುವುದು ಏನೂ ಹೊಸತಲ್ಲ. ಆದರೆ “ಕೊರ್ಆನ್ನಲ್ಲಿ ಅಂತಿಮ ಮತ್ತು ಅಲ್ಲಗಳೆಯಲಾಗದ ಸತ್ಯವಿದೆ ಎಂದು ಮುಸ್ಲಿಮರು ಮನವರಿಕೆ ಹೊಂದಿದ್ದರು” ಎಂದು ಗ್ರಂಥಕರ್ತ ಡೆಸ್ಮೊಂಡ್ ಸ್ಟುವರ್ಟ್ ವಿವರಿಸುತ್ತಾರೆ. ಅವರು ಸಂತುಷ್ಟಿತರಾದರು, “ಯಾವುದು ಅರ್ಹವಾದದ್ದೋ ಅದನ್ನು ತಿಳಿದುಕೊಂಡಾಯಿತು ಮತ್ತು ಮುಸ್ಲಿಮೇತರ ವಿಚಾರಗಳು ಯಾವುದೇ ಲೆಕ್ಕಕ್ಕೆ ಬಾರದವುಗಳು ಎಂದು ನಂಬಿದರು.” ಬದಲಾವಣೆಗಳನ್ನು “ನಿಷ್ಠುರವಾಗಿ ಪ್ರತಿಭಟಿಸಲಾಯಿತು.”
ತತ್ಪರಿಣಾಮವಾಗಿ, 11ನೆಯ ಶತಮಾನದೊಳಗೆ, ಸಾಮ್ರಾಜ್ಯವು ಈಗಾಗಲೇ ಕುಸಿಯಲಾರಂಭಗೊಂಡಿತ್ತು. “ರಾತ್ರಿಯ ಆಕಾಶದಲ್ಲಿ ಉಲ್ಕಾರೇಖೆ ಮಿನುಗಿ . . . ಬಲುಬೇಗನೇ ಉರಿದುಹೋಗುವದಕ್ಕೆ” ಸ್ಟುವರ್ಟ್ ಅದನ್ನು ಹೋಲಿಸಿದ್ದಾನೆ. ಆದಕಾರಣ, ಸಹೋದರತ್ವದ ಪ್ರಜ್ಞೆಯನ್ನು ನಿರ್ಮಿಸಿದ ಮತ್ತು ದೇವರನ್ನು ವೈಯಕ್ತಿಕವಾಗಿ ಸಮೀಪಿಸಲು ತುಲನಾತ್ಮಕವಾಗಿ ಸುಲಭ ದಾರಿಯನ್ನು ತೋರಿಸಿದ ಈ ಧರ್ಮವು, ತಾನು ಒಮ್ಮೆ ನಿರ್ಮಿಸಲು ನೆರವಾದ ಅದೇ ಸಾಮ್ರಾಜ್ಯವನ್ನು ಕೆಳಗೆ ತರಲೂ ನೆರವಾಯಿತು. ಅದರ ಏಳುವಿಕೆಯು ಎಷ್ಟೊಂದು ಶೀಘ್ರವಾಗಿ ಆಗಿತ್ತೋ, ಅದರ ಪತನವೂ ಕೂಡಾ ಫಕ್ಕನೇ ಆಯಿತು. ಸಾಮ್ರಾಜ್ಯವು ಗತಿಸಿಹೋಯಿತು, ಆದರೆ ಅದರ ಧರ್ಮವು ಜೀವಂತವಾಗಿ ಉಳಿಯಿತು.a
ನಿಜವಾಗಿ ಅಧೀನನಾಗುವುದರಲ್ಲಿ ದೇವರಿಗೆ, ಅವನ ಆಜ್ಞೆಗಳಿಗೆ ಮತ್ತು ಅವನ ಪ್ರತಿನಿಧಿಗಳಿಗೆ ವಿಧೇಯರಾಗುವುದು ಸೇರಿರುತ್ತದೆ. ಅರೇಬಿಯಾದಲ್ಲಿ ಅರಬ್ ಕುಲಗಳನ್ನು ಐಕ್ಯಗೊಳಿಸುವುದರಲ್ಲಿ ಮುಹಮ್ಮದ್ ಯಶಸ್ವಿಯಾದನು, ತನ್ನ ಮತ್ತು ಕುರ್ಆನ್ ಮೇಲೆ ಕೇಂದ್ರಿತವಾದ ಇಸ್ಲಾಮಿಕ್ ಸಮಾಜವೊಂದನ್ನು (ಉಮ್ಮಾ) ಸ್ಥಾಪಿಸಲಾಯಿತು. ಅದೊಂದು ಧಾರ್ಮಿಕ ರಾಷ್ಟ್ರವಾಗಿತ್ತು, ಒಬ್ಬ ನಾಯಕನ ಕೆಳಗೆ ಎಲ್ಲರನ್ನೂ ಸಹೋದರರನ್ನಾಗಿ ಮಾಡಲು ಶರಣಾಗುವಿಕೆ ಅಲ್ಲಿ ನೆರವಾಯಿತು. ಅರಬ್ ಕುಲಗಳ ಶತ್ರುಗಳ ವಿರುದ್ಧ ಖಡ್ಗವನ್ನುಪಯೋಗಿಸಲು ಇಸ್ಲಾಮ್ ಒಪ್ಪಿಗೆಯನ್ನಿತ್ತಿತ್ತು. ಈ ಖಡ್ಗವು ಅವರ ಸಾಮ್ರಾಜ್ಯವನ್ನು ಮತ್ತು ಧರ್ಮವನ್ನು ವಿಸ್ತರಿಸಲು ಸಹಾಯಮಾಡಿತು. ಮುಹಮ್ಮದ್ ಸತ್ತಾಗ, ಹಿಂಸಾತ್ಮಕ ಭಿನ್ನತೆಗಳು ತಲೆದೋರಿದವು. ಮೊದಲ ಹಂತದಲ್ಲಿ ಅವುಗಳು ರಾಜಕೀಯಕ್ಕೆ ಸಂಬಂಧಿಸಿದ್ದಾಗಿದ್ದು, ಖಲೀಫಾ, ಒಬ್ಬ ನಾಯಕನನ್ನು ಆರಿಸುವುದರ ಕುರಿತಾಗಿ ಪ್ರಶ್ನೆ ಎದ್ದಿತ್ತು. ಅವರ ಸಹೋದರರೊಂದಿಗೆ ಕಾದಾಡಲು ಅದು ಅನೇಕರ ಖಡ್ಗಗಳನ್ನು ಹೊರತಂದಿತು. ಸರಕಾರದೊಂದಿಗೆ ಧರ್ಮವು ವಿಲೀನಗೊಂಡಿರುವುದು ಸಮಾಜವನ್ನು ಒಡೆಯಲು ಕಾರಣವಾಯಿತು. “ಶರಣಾಗುವಿಕೆ”ಯು ಒಬ್ಬ ನಾಯಕನ ಕೆಳಗೆ ಜನರನ್ನು ಐಕ್ಯಗೊಳಿಸಲಿಲ್ಲ.
ಇಸ್ಲಾಮಿನ 72 ಮತಪಂಥಗಳು ಬೆಳೆಯುವವು ಎಂದು ಮುಹಮ್ಮದ್ನು ಮುನ್ನೋಡಿದ್ದನು ಎಂದು ಸಂಪ್ರದಾಯವು ಹೇಳುತ್ತದೆ. ಆದರೆ ಕೆಲವು ಅಧಿಕಾರಿಗಳು ಕೆಲವು ನೂರು ಪಂಥಗಳ ಕುರಿತು ಮಾತಾಡುತ್ತಾರೆ.
ಇವುಗಳಲ್ಲಿ ಪ್ರಮುಖ ವಿಭಾಗಗಳು ಶಿಯಾ ಮತ್ತು ಸುನ್ನಿ. ಪ್ರತಿಯೊಂದರಲ್ಲಿ ತಮ್ಮದೇ ಆದ ಹಲವಾರು ಉಪಪಂಥಗಳು ಕೂಡಿವೆ. ಪ್ರತಿ 100 ಮುಸ್ಲಿಮರಲ್ಲಿ, ಸುಮಾರು 83ರಷ್ಟು ಸುನ್ನಿ ಮತ್ತು 15ರಷ್ಟು ಶಿಯಾಟ್ಗಳಾಗಿದ್ದಾರೆ. ಇತರ ಗುಂಪುಗಳು ಡ್ರುಜ್, ಕಪ್ಪು ಮುಸ್ಲಿಮರು, ಮತ್ತು ಬೌದ್ಧಮತ, ಹಿಂದೂಮತ ಮತ್ತು ಸ್ಥಳೀಕ ಮತಗಳೊಂದಿಗೆ ಇಸ್ಲಾಮ್ನ್ನು ಮಿಶ್ರಗೊಳಿಸುವ ಇಂಡೊನೇಶಿಯಾದ ಅಬಾಂಗನ್ಸ್—ಹೀಗೆ ವಿವಿಧ ಪಂಗಡಗಳಿವೆ.
ಶಿಯಾಟ್ ಅಲ್ಪಸಂಖ್ಯಾಕರ ಒಂದು ಲಕ್ಷಣ, ಧರ್ಮ ಮತ್ತು ಕುರಾನ್ನಲ್ಲಿ ಒಂದು ಗೋಪ್ಯವಾದ, ರಹಸ್ಯವಾದ ಅರ್ಥಗಳಿವೆ ಎಂದು ನಂಬುವಿಕೆಯೇ. ಆದರೆ ಶಿಯಾಟ್ ಪಂಥವು ವಾಸ್ತವಾಗಿ ಮೇಲೆ ಬಂದದ್ದು ಉತ್ತರಾಧಿಕಾರತ್ವದ ಪ್ರಶ್ನೆಯ ಮೇಲೆ. ಶಿಯಾಟ್ಸ್ (ಶಬ್ದದ ಅರ್ಥ “ಪಕ್ಷಾವಲಂಬಿಗಳು” ಇದಕ್ಕೆ “ಆಲಿಯ ಪಕ್ಷಾವಲಂಬಿಗಳು” ಎಂದು ಸೂಚಿತವಾಗಿದೆ)ನವರು ದೊರೆತನದ ಹಕ್ಕಿನ ಸೂತ್ರವನ್ನು ಪ್ರತಿಪಾದಿಸುತ್ತಾರೆ, ಅಂದರೆ “ಮುಹಮ್ಮದ್ನ ರಕ್ತ ಸಂಬಂಧಿ ಮತ್ತು ಅಳಿಯನಾದ ಆಲಿ ಮತ್ತು ಆಲಿಯ ಸಂತತಿಯವರಿಗೆ ಮಾತ್ರ” ರಾಜ್ಯವಾಳುವ ಹಕ್ಕು ನಿರ್ಬಂಧಿತವಾಗಿದೆ ಎಂದು ವಾದಿಸುವವರಾಗಿದ್ದಾರೆ.
ಆಲಿ ಮತ್ತು ಅವನ ಸಂತತಿಯವರು ಇಮಾಮ್ಗಳಾಗಿದ್ದು, ಸಂಪೂರ್ಣ ಆತ್ಮಿಕ ಅಧಿಕಾರವುಳ್ಳ ನಾಯಕರಾಗಿದ್ದರು. ಎಷ್ಟೊಂದು ಇಮಾಮ್ಗಳಿದ್ದರೆಂಬುದರಲ್ಲಿ ಸಹಮತವಿರಲಿಲ್ಲ, ಆದರೆ 12 ಶಿಯಾ ಎಂದು ಕರೆಯಲ್ಪಡುವ ಶಿಯಾಟ್ನ ಅತಿ ದೊಡ್ಡ ಗುಂಪು, ಅಲ್ಲಿ ಯಾವಾಗಲೂ 12 ಮಂದಿ ಇದ್ದರು ಎಂದು ನಂಬುತ್ತಾರೆ. ಸಾ.ಶ. 878ರಲ್ಲಿ 12ನೆಯ ಇಮಾಮ್ನು “ಗೋಪ್ಯವಾದನು,” ಅಂದರೆ ನ್ಯಾಯದ ಒಂದು ಇಸ್ಲಾಮಿಕ್ ಸರಕಾರವನ್ನು ಸ್ಥಾಪಿಸಲು ತಾನು ಲೋಕದ ಅಂತ್ಯದಲ್ಲಿ ಬರುತ್ತೇನೆ ಒಂದು ವಾಗ್ಧಾನಿಸಿದ ನಂತರ ಅದೃಶ್ಯನಾದನು.
ಶಿಯಾಟ್ ಮುಸ್ಲಿಮ್ರು ವಾರ್ಷಿಕವಾಗಿ ಮುಹಮ್ಮದ್ನ ಮೊಮ್ಮಗನಾದ ಹುಸೈನ್ನ ಆತ್ಮಾಹುತಿಯನ್ನು ಆಚರಿಸುತ್ತಾರೆ. ಗ್ರಂಥಕರ್ತ ರಹ್ಮಾನ್ ಹೇಳುವುದು: “ಈ ಘಟನೆಯ ಪ್ರಾತಿನಿಧಿತ್ಯ ಅಭಿನಯವನ್ನು ಬಾಲ್ಯದಿಂದಲೇ ಮೂಡಿಸುವುದರಿಂದ, ಶಿಯಾ ಮುಸ್ಲಿಮ್ನೊಬ್ಬನು ಒಂದು ಆದರ್ಶಮಯ ಆತ್ಮಾರ್ಪಣೆಯಿಂದ ಉಂಟಾಗುವ ವಿಪತ್ತು ಮತ್ತು ಅನ್ಯಾಯದ ಕಡೆಗೆ ಒಂದು ಗಾಢವಾದ ಪ್ರಜ್ಞೆಯನ್ನು ಬೆಳೆಸುತ್ತಾನೆ.”
ಅನೈಕ್ಯತೆಯ ರುಜುವಾತು?
“ಒಂಭತ್ತನೆಯ ಶತಮಾನದಲ್ಲಿ ಗ್ರೀಕ್ ತತ್ವಜ್ಞಾನ ಮತ್ತು ತರ್ಕವಾದದ ಪ್ರಸ್ತಾಪನೆಯು” ದ ಕೊಲಂಬಿಯ ಹಿಸ್ಟರಿ ಆಫ್ ದ ವರ್ಲ್ಡ್ ಹೇಳುವುದು, “ವಿಶಿಷ್ಠವಾದ ಒಂದು ಇಸ್ಲಾಮಿಕ್ ತತ್ವಜ್ಞಾನಕ್ಕೆ (ಫಾಲ್ಸಫಾ) ದಾರಿ ತೆರೆಯಿತು, ಇದು ಇಸ್ಲಾಮಿನ ತರ್ಕ ಸಮ್ಮತವಾದದ ಮೇಲೆ ಮತ್ತು ದೇವತಾಶಾಸ್ತ್ರಜ್ಞಾನದ ಮೇಲೆ ಬಹುದೂರವ್ಯಾಪ್ತಿಯ ಪ್ರಭಾವವನ್ನು ಹಾಕಿತು. . . . ಸಮಯ ಗತಿಸಿದಷ್ಟಕ್ಕೇ ಒಂದು ಧರ್ಮದೋಪಾದಿ ಮತ್ತು ಜೀವಿತಮಾರ್ಗದೋಪಾದಿ ಇಸ್ಲಾಮ್ ಸ್ವತಃ ಅದರ ಐಕ್ಯತೆಗೆ ಪರಿಣಾಮವನ್ನು ತರುವ ಮಹತ್ತಾದ ಬದಲಾವಣೆಗಳಿಗೆ ಒಳಗಾಯಿತು.”
ಉದಾಹರಣೆಗಾಗಿ, ಸೂಫಿಸಮ್, ಇಸ್ಲಾಮಿಕ್ ಅತೀಂದ್ರಿಯವಾದಿತ್ವದ ಪಾಶ್ಚಿಮಾತ್ಯ ಶಬ್ದ, ಎಂಟನೆಯ ಮತ್ತು ಒಂಭತ್ತನೆಯ ಶತಮಾನದಲ್ಲಿ ಒಂದು ಸಾಮೂಹಿಕ ಧಾರ್ಮಿಕ ಚಳುವಳಿಯಾಗಿ ವೇಗವಾಗಿ ಬೆಳೆಯುತ್ತಾ ಮೇಲಕ್ಕೆ ತೋರಿಬಂತು. 12ನೆಯ ಶತಮಾನದೊಳಗೆ ಸೂಫಿ ಕ್ರಮಾವಳಿ ಯಾ ಸಹೋದರತ್ವಗಳು ವ್ಯಾಪಕವಾಗಿ ಹಬ್ಬಿದವು. ಸೂಫಿ ಮಠಗಳು ಪ್ರಾಮುಖ್ಯತೆಯಲ್ಲಿ ಮಸೀದಿಗಳನ್ನು ಹಿನ್ನೆಲೆಗೆ ಹಾಕುವಷ್ಟು ಮುಂದುವರಿದವು. ಸೂಫಿಸಮ್ನಲ್ಲಿ ವ್ಯವಹಾರದಲ್ಲಿದ್ದ ಅಚಾರಗಳು—ಸ್ವತಃ ಕೇಂದ್ರೀಕೃತ ಇಲ್ಲವೇ ಭ್ರಮಾವೇಶದ ನರ್ತನದಿಂದ ಬರುವ ಸ್ವ-ವಶೀಕರಣ, ಕೆಲವು ಸೂತ್ರಗಳನ್ನು ಗಟ್ಟಿಯಾಗಿ ಮಂತ್ರದೋಪಾದಿ ಪಠನಮಾಡುವುದು, ಅದ್ಭುತಗಳಲ್ಲಿ ನಂಬಿಕೆ ಮತ್ತು ಸಂತರ ಆರಾಧನೆ—ಇವೆಲ್ಲಾ ಕಂಡುಬಂದವು.
ಸೂಫಿಗಳು ಸ್ಥಳೀಕ ಪದ್ಧತಿಗಳು ಮತ್ತು ನಂಬಿಕೆಗಳೊಂದಿಗೆ ಒಪ್ಪಂದ ಮಾಡಿಕೊಂಡರು. ತುರ್ಕಿಯರು ತಮ್ಮ ಭೂತ, ಪ್ರೇತ ಮತ್ತು ಉಪದೇವತೆಗಳ ಮಾಂತ್ರಿಕ ಶಕ್ತಿಯ ಮತಾಚಾರಗಳನ್ನು ಇಟ್ಟುಕೊಂಡರು. ಆಫ್ರಿಕಾನರು ಮದ್ದಿನ ಮಾಂತ್ರಿಕವೈದ್ಯರನ್ನು, ಭಾರತದವರು ಹಿಂದೂ ಮತ್ತು ಅದರ ಪೂರ್ವದ ಸಂತರು ಮತ್ತು ದೇವ-ದೇವತೆಗಳನ್ನು ಮತ್ತು ಇಂಡೊನೇಶಿಯರು—ದ ನ್ಯೂ ಎನ್ಸೈಕ್ಲೋಪಿಡಿಯಾ ಬ್ರಿಟಾನಿಕ ಹೇಳುವಂತೆ—ಅವರ “ಕೆಳಭಾಗದಲ್ಲಿ ಇಸ್ಲಾಮಿನ ಪೂರ್ವದ ನೋಟ ಮತ್ತು ಮೇಲ್ಪದರಿನಲ್ಲಿ ಇಸ್ಲಾಮಿಕ್ ಆಚಾರಗಳನ್ನು ಇಟ್ಟರು.”
ಇತ್ತೀಚೆಗಿನ ಸಮಯಗಳಲ್ಲಿ ಶಿಯಾಟ್ ಇಸ್ಲಾಮ್ನಿಂದ 19ನೆಯ ಶತಮಾನದ ಮಧ್ಯಭಾಗದಲ್ಲಿ ಇರಾನಿನಲ್ಲಿ ಎದ್ದು ಬಂದ ಒಂದು ಗಮನಾರ್ಹ ಪಂಗಡ ಬಹಾಯ್ ಧರ್ಮವಾಗಿದೆ. ಇನ್ನೊಂದು ಸುನ್ನಿ ಪಂಥದಿಂದ ಉಗಮವಾದ ಅಹ್ಮದೀಯಾ, ಇದು 19ನೆಯ ಶತಮಾನದ ಅಂತ್ಯಭಾಗದಲ್ಲಿ ಭಾರತದಲ್ಲಿ ಬೆಳೆದ ಒಂದು ಪಂಗಡ. ಆಗ ಮಿರ್ಜಾ ಗುಲಾಮ್ ಅಹ್ಮದ್ ಎಂಬದವನು ತನ್ನನ್ನು ಪ್ರವಾದಿಯೆಂದು ಘೋಷಿಸಿಕೊಂಡು, ತಾನು ಮುಹಮ್ಮದ್ನ ಸಾಕ್ಷಾತ್ಕಾರವೆಂದೂ, ಪುನರಾಗಮಿಸಿದ ಯೇಸುವೆಂದೂ, ಹಿಂದೂ ಕೃಷ್ಣನ ಅವತಾರವೆಂದೂ ವಾದಿಸಿದನು. ಯೇಸುವು ಗೊಲ್ಗೊಥಾದಲ್ಲಿ ಮರಣವನ್ನು ತಪ್ಪಿಸಿಕೊಂಡು ಭಾರತಕ್ಕೆ ಓಡಿಬಂದಿದ್ದನೆಂದೂ ಮತ್ತು 120ನೇ ವಯಸ್ಸಲ್ಲಿ ಅವನ ಮರಣದ ತನಕ ಅಲ್ಲಿ ಜೀವಿಸಿದ್ದನೆಂದೂ ಅವನು ಕಲಿಸಿದನು.
ಕುರ್ಆನ್ ಮೇಲಣ ವ್ಯಾಖ್ಯಾನದಲ್ಲಿ ಮುಸ್ಲಿಮ್ ಗ್ರಂಥಕರ್ತ ಎಸ್. ಅಬುಲ್ ಆಲಾ ಮೌದುದಿ ಹೇಳುವುದು: “ಅಲ್ಬಕರ ಪ್ರಕಟನೆಯಾಗುವ ಸಮಯದಲ್ಲಿ (ಈ ಲೇಖನದ ಆರಂಭದಲ್ಲಿ ಉಲ್ಲೇಖಿಸಿದ ಸೂರಾ), ಎಲ್ಲಾ ತರಹದ ಮೋಸಗಾರರು ಪ್ರತ್ಯಕ್ಷವಾಗಲು ಆರಂಭಿಸಿದ್ದರು.” ಇದರಲ್ಲಿ “ಮುಸ್ಲಿಮರು, ಮುನಾಫಿಕ್ (ಕಪಟಾಚಾರಿಗಳು) . . . ಇಸ್ಲಾಮ್ನ ಸತ್ಯತೆಯ ಬಗ್ಯೆ ಬುದ್ಧಿಮತ್ತೆಯಿಂದ ಖಾತ್ರಿ ಪಡೆದಿದ್ದರೂ ತಮ್ಮ ಮೊದಲ ಸಂಪ್ರದಾಯಗಳನ್ನು ಬಿಟ್ಟುಬಿಡಲು ಸಾಕಷ್ಟು ನೈತಿಕ ಧೈರ್ಯವಿಲ್ಲದವರು” ಸೇರಿರುತ್ತಾರೆ.
ಆದುದರಿಂದ ಆರಂಭದಿಂದಲೇ, ಮುಹಮ್ಮದ್ ಉದ್ದೇಶಿಸಿದ ಮಾರ್ಗದಲ್ಲಿ ಅಲ್ಲಾಹ್ನಿಗೆ ಅಧೀನರಾಗಲು ಅನೇಕ ಅನುಯಾಯಿಗಳು ತಪ್ಪಿದರು. ಆದರೆ ಇತರರು ಅಧೀನರಾದರು. ಅವರು ನೀಡಿದ ಪಂಥಾಹ್ವಾನವನ್ನು ನೀಗಿಸಲು, ಕ್ರೈಸ್ತ ಪ್ರಪಂಚವೇನೂ “ಖಡ್ಗದ ಬಳಸುವಿಕೆಗೆ ಇಳಿದವರಲ್ಲಿ” ಕಡಿಮೆಯವರಲ್ಲವೆಂಬದು ಎಪ್ರಿಲ್ 8ರ ನಮ್ಮ ಸಂಚಿಕೆಯಲ್ಲಿ ವಿವರಿಸಲ್ಪಡುವುದು.(g89 7/22)
[ಅಧ್ಯಯನ ಪ್ರಶ್ನೆಗಳು]
*“ಕುರ್ಆನ್” (ಅಂದರೆ “ಪಠಣ, ಓದು” ಎಂದರ್ಥ) ಈ ರೀತಿ ಬರೆಯುವುದನ್ನು ಮುಸ್ಲಿಮ್ ಲೇಖಕರು ಮೆಚ್ಚುತ್ತಾರೆ, ಪಾಶ್ಚಿಮಾತ್ಯ ವಿಧದ “ಕೊರಾನ್” ಬದಲು ನಾವು ಇಲ್ಲಿ ಅದನ್ನೇ ಬಳಸುತ್ತೇವೆ.
a ಇಸ್ಲಾಮ್ ಒಂದು ಅರಬ್ ಧರ್ಮವೆಂದು ಕಟ್ಟುನಿಟ್ಟಾಗಿ ಹೇಳುವ ಸಾಮಾನ್ಯ ನೋಟವು ಸರಿಯಲ್ಲ. ಇಂದಿನ ಹೆಚ್ಚಿನ ಮುಸ್ಲಿಮರು ಅರಬೇತರರಾಗಿದ್ದಾರೆ. ಇಂಡೊನೇಶಿಯಾವು ಅತಿ ಹೆಚ್ಚು ಜನಸಂಖ್ಯೆಯ ಮುಸ್ಲಿಮ್ ದೇಶವಾಗಿದ್ದು, ಅಲ್ಲಿ 15 ಕೋಟಿಯಷ್ಟೂ ಅನುಯಾಯಿಗಳಿದ್ದಾರೆ.
[ಪುಟ 22ರಲ್ಲಿರುವಚೌಕ]
ಇಸ್ಲಾಮ್ನ್ನು ಹೆಚ್ಚು ಅರ್ಥವತ್ತಾಗಿ ತಿಳಿಯಲು ಸಹಾಯವಾಗುವಂತೆ
ಶಹಾದಾಹ್ ಎಂದು ಕರೆಯಲ್ಪಡುವ ವಿಶ್ವಾಸದ ಅರಿಕೆಗಳನ್ನು ಕಡಿಮೆ ಪಕ್ಷ ದಿನವೊಂದರಲ್ಲಿ ಒಮ್ಮೆಯಾದರೂ ಮುಸ್ಲಿಮ್ರು ಬಹಿರಂಗವಾಗಿ ಮಾಡಬೇಕೆಂದು ಇಸ್ಲಾಮ್ನ ಐದು ಸ್ತಂಭಗಳು ಅಪೇಕ್ಷಿಸುತ್ತವೆ—“ದೇವನೊಬ್ಬನು ಬಿಟ್ಟು ಬೇರೆ ದೇವರುಗಳಿಲ್ಲ; ಮುಹಮ್ಮದ್ ದೇವರ ಪ್ರವಾದಿ”; ದಿನವೊಂದಕ್ಕೆ ಐದು ಬಾರಿ ಪ್ರಾರ್ಥನೆ ಮಾಡುವುದು; ಜಕಾತ್ ಕೊಡುವುದು, ಒಂದು ಹಂಗಿಗನುಸಾರ ಕೊಡುವ ಕರ, ಈಗ ಅದನ್ನು ಸಾಮಾನ್ಯವಾಗಿ ಸ್ವ-ಇಚ್ಛೆಯಿಂದ ಸಂಗ್ರಹಿಸಲಾಗುತ್ತದೆ; ಒಂಭತ್ತನೆಯ ತಿಂಗಳಾದ ರಮಾದಾನ್ನಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತಮಾನದ ತನಕ ಉಪವಾಸ ಆಚರಣೆ; ಮತ್ತು ಆರ್ಥಿಕವಾಗಿ ಸಮರ್ಥನಿದ್ದಲ್ಲಿ, ಕಡಿಮೆ ಪಕ್ಷ ಒಮ್ಮೆಯಾದರೂ, ಹಜ್ಜ್ (ಪವಿತ್ರ ಯಾತ್ರೆ) ಮಕ್ಕಾಕ್ಕೆ ಮಾಡುವುದು.
“ಜಿಹಾದ್” (“ಪವಿತ್ರ ಯುದ್ಧ” ಯಾ “ಪವಿತ್ರ ಕಾದಾಟ”) ಇದು ಖಾರ್ಜಿ ಪಂಥೀಯರಿಂದ—ಸಾಮಾನ್ಯ ಮುಸ್ಲಿಮ್ರಿಂದಲ್ಲ—ಆರನೆಯ ಸ್ತಂಭವೆಂದು ಎಣಿಸಲ್ಪಡುತ್ತದೆ. ಅದರ ಉದ್ದೇಶವು, ದ ನ್ಯೂ ಎನ್ಸೈಕ್ಲೊಪೀಡಿಯಾ ಬ್ರಿಟಾನಿಕ ಹೇಳುವಂತೆ, “ಇಸ್ಲಾಮಿಗೆ ವ್ಯಕ್ತಿಗಳನ್ನು ಮತಾಂತರಿಸುವುದಲ್ಲ, ಬದಲಿಗೆ ಇಸ್ಲಾಮಿನ ಸೂತ್ರಗಳಿಗನುಸಾರವಾಗಿ ಸಮಾಜದ ಸಾಮೂಹಿಕ ವ್ಯವಹಾರಗಳ ಮೇಲೆ ರಾಜಕೀಯ ಹತೋಟಿಯನ್ನು ಪಡೆಯುವುದೇ ಆಗಿರುತ್ತದೆ.” ಕುರ್ಆನ್ ಅಂತಹ “ಪವಿತ್ರ ಯುದ್ಧಕ್ಕೆ” ಅನುಮತಿ ನೀಡುತ್ತದೆ, ಅದು ಹೇಳುವುದು: “ಯಾರ ಹತ್ಯೆಯನ್ನು ಅಲ್ಲಾಹನು ನಿಷಿದ್ಧಗೊಳಿಸಿರುತ್ತಾನೋ, ಅವನನ್ನು ನ್ಯಾಯಕ್ಕಾಗಿ ಹೊರತು ಕೊಲ್ಲದಿರಿ.”—ಸೂರಾ 17:33.
ಇಸ್ಲಾಮಿಕ್ ಬೋಧನೆ ಮತ್ತು ನಿಯಮಗಳಿಗೆ ಮುಖ್ಯ ಮೂಲವು ಕುರ್ಆನ್, ಸುಮಾರು ಕಾಲು ಶತಮಾನದ ಸಮಯಾವಧಿಯಲ್ಲಿ ಬರೆಯಲ್ಪಟ್ಟದ್ದಾಗಿದೆ; ಸುನ್ನಾಹ್ (ಸಂಪ್ರದಾಯಗಳು); ಇಜಾಮಾ (ಸಾಮೂಹಿಕ ಒಮ್ಮತ); ಕಿಯಾಸ್ (ವೈಯಕ್ತಿಕ ವಿಚಾರ). ಇಸ್ಲಾಮಿಕ್ ಕಾನೂನು ಸಂಗ್ರಹಗಳು, ಶರೀಯಾವು, ಮುಸ್ಲಿಮರ ಧಾರ್ಮಿಕ, ರಾಜಕೀಯ, ಸಾಮಾಜಿಕ, ಗೃಹಸಂಬಂಧಿ ಮತ್ತು ವೈಯಕ್ತಿಕ ಜೀವನವನ್ನು ಸಮಗ್ರವಾಗಿ ವ್ಯವಹರಿಸುತ್ತದೆ, ಇದನ್ನು ಸಾ.ಶ. ಎಂಟನೆಯ ಮತ್ತು ಒಂಭತ್ತನೆಯ ಶತಮಾನಗಳಲ್ಲಿ ಕ್ರಮಬದ್ಧವಾಗಿ ಜೋಡಿಸಲಾಯಿತು.
ಮಕ್ಕಾ, ಮದೀನಾ ಮತ್ತು ಯೆರೂಸಲೇಮ್, ಅದೇ ಕ್ರಮಕ್ಕನುಸಾರವಾಗಿ ಇಸ್ಲಾಮಿನ ಅತಿ ಪವಿತ್ರ ಸ್ಥಳಗಳು: ಮಕ್ಕಾ ಅದರ ಕಾಬಾದ ಪವಿತ್ರಸ್ಥಾನದ ಕಾರಣ, ಸಂಪ್ರದಾಯಕ್ಕನುಸಾರ ಇದನ್ನು ಅಬ್ರಹಾಮನು ನಿರ್ಮಾಣಮಾಡಿದ್ದನು; ಮದೀನಾ, ಮುಹಮ್ಮದನ ಮಸೀದಿಯು ಇರುವುದರಿಂದ; ಮತ್ತು ಯೆರೂಸಲೇಮ್, ಯಾಕಂದರೆ ಮುಹಮ್ಮದನು ತನ್ನ ಸ್ವರ್ಗಾರೋಹಣವನ್ನು ಅಲ್ಲಿಂದ ಮಾಡಿದ್ದನೆಂದು ಸಂಪ್ರದಾಯವು ಹೇಳುತ್ತದೆ.
[ಪುಟ 23 ರಲ್ಲಿರುವಚಿತ್ರ]
(For fully formatted text, see publication)
ಅದರ ಉಚ್ಛಬಿಂದುವಿನಿಂದ ನೋಡುವಾಗ ಇಸ್ಲಾಮಿಕ್ ಸಾಮ್ರಾಜ್ಯವು