ರಾತ್ರಿ-ಪಾಳಿ ಕೆಲಸವನ್ನು ನಿಭಾಯಿಸುವುದು
ರಾತ್ರಿ-ಪಾಳಿ ಕಾರ್ಮಿಕರು ತಮ್ಮ ದಿನಪಾಳಿಯ ಸಹೋದ್ಯೋಗಿಗಳಿಗಿಂತ ಅಧಿಕವಾಗಿ ಜಠರದ ಸಮಸ್ಯೆಗಳನ್ನು, ಹುಣ್ಣು-ವ್ರಣಗಳನ್ನು, ಮಿತಿಮೀರಿ ಮದ್ಯಪಾನವನ್ನು ಮತ್ತು ಅಧಿಕ ವಿವಾಹವಿಚ್ಛೇದಗಳನ್ನು ಅನುಭವಿಸುತ್ತಾರೆ. ನಿದ್ರಿಸುವ ನಮೂನೆಗಳನ್ನು ಬದಲಾಯಿಸಿಕೊಂಡರೆ ಈ ಸಮಸ್ಯೆಗಳಲ್ಲಿ ಕೆಲವನ್ನು ನಿವಾರಿಸಬಹುದೆಂದು ಒಸ್ಟೀನ್ ಸ್ಕೂಲ್ ಆಫ್ ನರ್ಸಿಂಗ್ನಲ್ಲಿನ ಯೂನಿವರ್ಸಿಟಿ ಆಫ್ ಟೆಕ್ಷಾಸ್ನ ದಾಖಲಾತಿ ಪಡೆದ ಮತ್ತು ಸಹಾಯಕ ಶಿಕ್ಷಕರಾಗಿರುವ ಫ್ರೆಡ್ ಜಂಗ್ ಮಾಡಿದ ಸಂಶೋಧನೆಯು ಸೂಚಿಸುತ್ತದೆ.
ಒಂದು ಜೋಡಣೆ ಯಂತ್ರಾಗಾರದಲ್ಲಿನ ಎಂಟು ರಾತ್ರಿ-ಪಾಳಿಯ ಒಂದು ಗುಂಪಿನ ನಿದ್ರಿಸುವ ಅಧ್ಯಯನ ಶ್ರೀ. ಜಂಗ್ ಮಾಡಿದರು. ಈ ಒಂದು ನಮೂನಾ ತಂಡದಲ್ಲಿ ಉತ್ಪಾದನಾ ಕೌಶಲ್ಯತೆಯ ಸ್ತ್ರೀ-ಪುರುಷರು ಇದ್ದರು, ಪಾಳಿ ಕೆಲಸವು ತಾನೇ ಒತ್ತಡಕ್ಕೊಂದು ಕಾರಣವೆಂಬ ತೀರ್ಮಾನಕ್ಕೆ ಬಂದರು.
ದಿನದ ಪಾಳಿಯಲ್ಲಿ ರಾತ್ರಿಗೆ ಮಲಗಲು ಹೋಗುವ ರೂಢಿಗೆ ಬದಲಿಸುವಾಗ ಗತಿವಿಲಂಬದ ಮೂತಿಹಿಂದೆಬೀಳುವಂತಹ ಲಕ್ಷಣಗಳಿಂದ ಜನರು ಬಾಧಿತರಾದರೆಂದು ಅಧ್ಯಯನವು ತೋರಿಸಿತು. ಆದುದರಿಂದ ಕೆಲಸದ ವಾರದಲ್ಲಿ ಉಂಟಾದ ನಿದ್ರಿಸುವ ರೂಢಿಯನ್ನು ವಾರದಲ್ಲಿ ಮುಂದುವರಿಸುವುದು ಅತ್ಯುತ್ತಮವೆಂಬ ತೀರ್ಮಾನಕ್ಕೆ ಜಂಗ್ ಬಂದರು, ಯಾಕಂದರೆ ಹೊಸ ನಿದ್ರಿಸುವ ರೂಢಿಗೆ ಶರೀರದ ಲಯಬದ್ಧತೆಗೆ ಹೊಂದಿಸಿಕೊಳ್ಳಲು ಹಲವಾರು ದಿನಗಳು ತಗಲುತ್ತವೆ.
ಕೆಲಸದ ವಾರದಲ್ಲಿ ಪದ್ಧತಿಯಾಗಿ ಮಲಗಲು ಉಪಯೋಗಿಸುವ ಸಮಯಾವಧಿಯಲ್ಲಿಯೇ ಬಿಡುವಿನ ವಾರದಲ್ಲೂ ಕಡಿಮೆ ಪಕ್ಷ ನಾಲ್ಕು ತಾಸು ಮಲಗುವಂತೆ ಶ್ರೀ. ಜಂಗರವರ ಸಂಶೋಧನೆಯು ಸೂಚಿಸುತ್ತದೆ. ಇದರಿಂದ ಶಾರೀರಿಕ ಲಯಬದ್ಧತೆಗೆ ಸಹಾಯವಾಗುತ್ತದೆ. ಇದೊಂದು ಲಂಗರ ನಿದ್ರೆಯೆಂದು ಅವರು ಕರೆಯುತ್ತಾರೆ. ಪಾಳಿಕಾರ್ಮಿಕರ ಅಳವಡಿಸುವಿಕೆಯ ಮೇಲೆ ಆಹಾರ, ಸಾಮಾಜಿಕ ನಮೂನೆಗಳು, ಮತ್ತು ಬೆಳಕಿಗೆ ಒಡ್ಡಿಕೊಳ್ಳುವಿಕೆಯೂ ಪರಿಣಾಮ ಬೀರುತ್ತವೆ.
ತನ್ನ ಸಂಶೋಧನೆಯ ಸಮಾಚಾರವನ್ನುಪಯೋಗಿಸಿ, ಶ್ರೀ. ಜಂಗ್ ರಾತ್ರಿ-ಪಾಳಿ ಕಾರ್ಮಿಕರಿಗೆ ಹಲವು ಮಾರ್ಗದರ್ಶಿಕೆಗಳನ್ನು ರಚಿಸಿದ್ದಾರೆ:
□✔ ಪ್ರತಿದಿನ ಅದೇ ಸಮಯಾವಧಿಯಲ್ಲಿ, ಸಾಧ್ಯವಿದ್ದಲ್ಲಿ ಬೆಳಿಗ್ಯೆ ತಡವಾಗಿ ಮತ್ತು ಅಪರಾಹ್ನ ಬೇಗ ಮಲಗುವಂತೆ ಪ್ರಯತ್ನಿಸಿರಿ.
□✔ ನಿಮ್ಮ ನಿದ್ರೆಯ ಸಮಯಕ್ಕನುಸಾರ ನಿಮ್ಮ ಚಟುವಟಿಕೆಗಳನ್ನು ಯೋಜಿಸಿರಿ.
□✔ ನಿಮ್ಮ ಮೆಚ್ಚಿನ ಸಮಯದಲ್ಲಿ ನಿಮಗೆ ಯಾವಾಗಲೂ ನಿದ್ರೆಮಾಡಲು ಆಗದಿದ್ದರೆ ಚಿಂತಿಸಬೇಡಿರಿ; ಕ್ರಮವಾಗಿ ಹಗಲಿನ ಕೊಂಚ ನಿದ್ರೆಯಾದರೂ, ಏನೂ ಇಲ್ಲದಿರುವದಕ್ಕಿಂತ ಎಷ್ಟೋ ಲೇಸು.
□✔ ಉಪದ್ರವಗೊಳಿಸುವ ಶಬ್ದಗಳನ್ನು ನಿವಾರಿಸಿರಿ (ಕಿವಿಮುಚ್ಚುವ ಸಾಧನಗಳನ್ನು ಯಾ ಟೆಲಿಪೋನ್ಗೆ ಉತ್ತರಿಸುವ ಸಲಕರಣೆಯೊಂದನ್ನು ಪಡೆಯಿರಿ) ಮತ್ತು ಕತ್ತಲೆ ಕೋಣೆಯೊಂದರಲ್ಲಿ ಮಲಗಿರಿ.
□✔ ನಿಮ್ಮ ದಿನದ ಆರಂಭದಲ್ಲಿ ಹೆಚ್ಚಿನ, ಅಧಿಕ ಸಸಾರಜನಕ ಊಟವನ್ನು ಮಾಡಿರಿ. ಸಸಾರಜನಕವು ಗ್ಲುಕೋಸ್ನ್ನುತ್ಪನ್ನಮಾಡುವ ಶಕ್ತಿಯ ಬಿಡುಗಡೆಯನ್ನು ಕ್ರಮವಾಗಿ ಮಾಡಿ ನಿಮ್ಮ ಜಾಗ್ರತ ನಿರ್ನಾಳ ಗ್ರಂಥಿಗಳನ್ನು ಉದ್ರೇಕಿಸುವುದರಿಂದ ನಿಮ್ಮನ್ನು ಎಚ್ಚರದಲ್ಲಿರಿಸುತ್ತದೆ. ಅನಂತರ ದಿನದ ಮಧ್ಯದಲ್ಲಿ ಮಿತವಾದ ಸಸಾರಜನಕವುಳ್ಳ ಆಹಾರವನ್ನು ತಿನ್ನಿರಿ ಮತ್ತು ಶರ್ಕರಪಿಷ್ಟದ ಲಘು ಆಹಾರವನ್ನು ಹೋಗಲಾಡಿಸಿರಿ. ಇವು ತಾತ್ಕಾಲಿಕ ಬಲಕೊಡಬಹುದಾದರೂ ಒಂದೆರಡು ತಾಸುಗಳ ನಂತರ ನಿಮಗೆ ಆಯಾಸವನ್ನುಂಟುಮಾಡುವುದು. ಶರ್ಕರಪಿಷ್ಟದ್ದನ್ನು ನಿಮ್ಮ ಕೊನೆಯ ಆಹಾರಕ್ಕಾಗಿ ಉಳಿಸಿರಿ. ಇವುಗಳು ಒಂದು ವಿಶ್ರಾಂತಿಕರ ನಿದ್ರೆಗಾಗಿ ನಿಮ್ಮನ್ನು ಅಣಿಗೊಳಿಸುವವು. ಆದಾಗ್ಯೂ, ಮಲಗಲಿಕ್ಕೆ ಹೋಗುವ ತುಸು ಮೊದಲು ತಿನ್ನಬೇಡಿರಿ; ನಿಮ್ಮ ಆಹಾರವನ್ನು ಜೀರ್ಣಿಸಲು ಒಂದೆರಡು ತಾಸುಗಳಾದರೂ ಬೇಕು.
□✔ ನಿದ್ರೆಯನ್ನು ಬರಿಸಲೆಂದು ಮದ್ಯಪಾನ ಮಾಡಬೇಡಿರಿ. ನಿಮ್ಮ ಶರೀರದ ಆರೋಗ್ಯಕ್ಕೆ ಮತ್ತು ಯೋಗ್ಯ ಸ್ವಾಸ್ಥಕ್ಕೆ ಬೇಕಾದ ವಿಧದ ನಿದ್ರೆಯನ್ನು ಅದು ನಿಮ್ಮಿಂದ ಕಸಿದು ಕೊಳ್ಳುತ್ತದೆ.
□✔ ನೀವು ಎಚ್ಚರಗೊಂಡಾಗ, ದೀಪಗಳನ್ನು ಹಾಕಿರಿ; ಇಲ್ಲವೇ ಹೊರಗೆ ಬೆಳಕು ಇದ್ದರೆ, ಆ ಪ್ರಕಾಶಕ್ಕೆ ಹೋಗಿರಿ, ವ್ಯಾಯಾಮ ಮಾಡಿರಿ, ಆಚೀಚೆ ಸುತ್ತಾಡಿರಿ ಮತ್ತು ಜನರೊಂದಿಗೆ ಮಾತಾಡಿರಿ. ಚಟುವಟಿಕೆ ಮತ್ತು ಪ್ರಕಾಶವು ನಿಮ್ಮ ಮಿದುಳನ್ನು ಸಚೇತಕಗೊಳಿಸುತ್ತದೆ ಮತ್ತು ನಿಮ್ಮ ರಾತ್ರಿ-ಪಾಳಿಯ ಕೆಲಸಕ್ಕೆ ನಿಮ್ಮ ದೇಹವನ್ನು ಅಳವಡಿಸಲು ನೆರವಾಗುತ್ತದೆ.
□✔ ನಿಮ್ಮ ಕುರಿತು ನಿಮಗೆ ಸದ್ಭಾವನೆ ಇರಲಿ. ಅನಾರೋಗ್ಯಕರ ವಿಧದಲ್ಲಿ ಜೀವಿಸುವ ಮೂಲಕ ಒತ್ತರವನ್ನು ಇನ್ನಷ್ಟು ಸಂಕೀರ್ಣಗೊಳಿಸಬೇಡಿರಿ. ನಿಮ್ಮ ದಿನಚರಿಯಲ್ಲಿ ಕ್ರಮಭರಿತ ವ್ಯಾಯಾಮ, ಯೋಗ್ಯ ಆಹಾರ ಮತ್ತು ಸಾಕಾಗುವಷ್ಟು ವಿಶ್ರಾಂತಿಕರ ನಿದ್ರೆ ನೀವು ಚಲೋದಾಗಿ ಕ್ರಿಯೆಗೈಯಲು, ಭಾವನೆಪಡೆಯಲು ಹಾಗೂ ಇನ್ನೂ ಚೆನ್ನಾಗಿ ತೋರಲು ಸಹಾಯ ಮಾಡುವುದು.
ಇವೆಲ್ಲಾ ಒಬ್ಬ ಸಂಶೋಧಕನ ಅಭಿಪ್ರಾಯಗಳು. ಸಮಸ್ಯೆಗೆ ಭಿನ್ನ ಪರಿಹಾರಗಳಿಂದ ಇನ್ನಿತರರೂ ಬರಬಹುದು. (g89 8/22)