ಯುವ ಜನರು ಪ್ರಶ್ನಿಸುವುದು. . .
ಯೋಗ್ಯವಾದ ವಸ್ತ್ರಗಳನ್ನು ಆರಿಸುವುದರ ಗುಟ್ಟೇನು?
ಮೈಕ್ನಿಗೆ ಒಳ್ಳೆಯ ಗುಣಮಟ್ಟದ ಬಟ್ಟೆಗಳನ್ನು ಆರಿಸುವುದು ಹೇಗೆ—ಮತ್ತು ಒಳ್ಳೆಯ ಬೆಲೆಗೆ ಪಡೆಯುವುದು ಹೇಗೆ ಎಂದು ತಿಳಿದದೆ. ಕೆಲವೊಮ್ಮೆ ಅವನ ಕುಟುಂಬದ ಸದಸ್ಯರು ಅವರಿಗಾಗಿ ಅವನು ಖರೀದಿಸುವಂತೆ ಅವನನ್ನು ವಿನಂತಿಸುತ್ತಾರೆ ಕೂಡಾ! ಒಂದು ಖರೀದಿಸುವ ವೇಳೆಯಲ್ಲಿ ಅವನು ತನ್ನ ತಾಯಿಗಾಗಿ, ವಿವಾಹಿತ ಸಹೋದರಿಗಾಗಿ, ಮತ್ತು ಎಂಟು ವರ್ಷದ ಸೋದರ-ಸೊಸೆಗೆ ಉಡುಪುಗಳನ್ನು ತೆಗೆದುಕೊಂಡನು ಮತ್ತು ಅವು ಯೋಗ್ಯ ಅಳತೆಯದ್ದೂ ಮತ್ತು ಅವರು ಬಯಸಿದ ವಿನ್ಯಾಸದ್ದೂ ಆಗಿದ್ದವು! ಅವನಲ್ಲಿರುವಾಗ ಒಂದು ಹೊಸ ಸ್ನಾನದ ಉಡುಗೆಯನ್ನು ಅದರ ಕ್ರಮದ ಕ್ರಯದ ನಾಲ್ಕನೆಯ ಒಂದು ಬೆಲೆಗೆ ತನಗಾಗಿ ಖರೀದಿಸಿದನು. ಮೈಕ್ನಿಗೆ ಅದೊಂದು ಕಠಿಣ ಪರೀಕ್ಷೆಯಾಗಿರಲಿಲ್ಲ, ಬದಲು ಒಂದು ನಿಜ ಆನಂದವಾಗಿತ್ತು.
ಖರೀದಿಸುವಿಕೆಯಲ್ಲಿ ಮೈಕ್ನಿಗೆ ಇರುವ ಹುರುಪು ನಿಮ್ಮಲ್ಲಿ ಇರದಿರಬಹುದು. ಆದರೆ ಅನೇಕ ಯುವ ಜನರಂತೆ, ಶಾಲೆಯಲ್ಲಿ, ಕೆಲಸದಲ್ಲಿ ಮತ್ತು ಆಟದಲ್ಲಿ ನೀವು ಅತ್ಯುತ್ತಮವಾಗಿ ತೋರಲು ಪ್ರಾಯಶಃ ಬಯಸುತ್ತಿರಬಹುದು. ಸಮಸ್ಯೆಯು ಏನಂದರೆ, ಯುವಕರಲ್ಲಿ ಒಂದು ನಿರ್ದಿಷ್ಟ ಶೈಲಿಯು ಸೊಗಸುತನವೆಂದು ಪರಿಗಣಿಸುವುದರಿಂದ ಧರಿಸಲು ಅದು ಯೋಗ್ಯ ಸಂಗತಿಯಾಗುವುದಿಲ್ಲ ಅಥವಾ “ಗುಂಪಿನಲ್ಲಿ ಮೆಚ್ಚಿಕೆಯಾದ” ಒಂದನ್ನು ಖರೀದಿಸುವುದು ನಿಮ್ಮ ಹಣದ ಅತ್ಯುತ್ತಮ ಬಳಕೆಯೆಂದು ಕೂಡಾ ಹೇಳಸಾಧ್ಯವಿಲ್ಲ. ಆದುದರಿಂದ ನಿಮ್ಮ ಉಡುಪುಗಳನ್ನು ಆಯ್ಕೆ ಮಾಡುವ ಸ್ವಾತಂತ್ರವನ್ನು ನಿಮ್ಮ ಹೆತ್ತವರು ಅನುಮತಿಸುತ್ತಾರಾದರೆ, ಯೋಗ್ಯವಾದ ಉಡುಪುಗಳನ್ನು ಆರಿಸಲು ಮತ್ತು ಖರೀದಿಸಲು ಇಲ್ಲಿ ಕೆಲವು ಸೂಚನೆಗಳಿವೆ.
ಯೋಗ್ಯ “ಉಡುಪುಗಳನ್ನು” ಆರಿಸುವುದು
ಮೊದಲು, ವಸ್ತ್ರದ ವಿಷಯಕ್ಕೆ ಬರುವಾಗ ಏನಾದರೂ ನಡೆಯುತ್ತದೆ ಎಂಬ ಕಲ್ಪನೆಯನ್ನು ತೊಡೆದು ಹಾಕೋಣ. ನೀವು ವಯಸ್ಕರಾಗುತ್ತಾ ಬರುತ್ತೀರಿ, ಮತ್ತು ಜೀವಿತ ನಡಿಸುವ ಮತ್ತು ಪ್ರಾಯಶಃ ಕುಟುಂಬವೊಂದನ್ನು ಸಲಹುವ ಪ್ರತೀಕ್ಷೆಯು ನಿಮ್ಮ ಮುಂದೆ ಬರುತ್ತಿದೆ. ನೀವು ಎಷ್ಟು ಚೆನ್ನಾಗಿ ಉಡುಪು ಧರಿಸುತ್ತೀರಿ ಎಂಬದು ನಿಮ್ಮ ಉದ್ಯೋಗದ ಪ್ರತೀಕ್ಷೆಯ ಮೇಲೆ ಮಾತ್ರವಲ್ಲ, ಇತರರಿಂದ ನೀವು ಹೇಗೆ ನೋಡಲ್ಪಡುತ್ತೀರಿ ಮತ್ತು ಉಪಚರಿಸಲ್ಪಡುತ್ತೀರಿ ಎಂಬದರ ಮೇಲೂ ಪರಿಣಾಮ ತಟ್ಟುತ್ತದೆ. ಇನ್ನೂ ಪ್ರಾಮುಖ್ಯವಾಗಿ, ಕ್ರೈಸ್ತರಾಗಿರುವ ನಾವು “ನಮ್ಮನ್ನು ಸ್ವತಹ ಮೆಚ್ಚಿಸುವವರಾಗಿರದೆ” ನಾವೇನು ಮಾಡುತ್ತೇವೋ—ಇಲ್ಲವೇ ಧರಿಸುತ್ತೇವೋ—ಅದು ಇತರರ ಮೇಲೆ ಪ್ರಭಾವಿಸುವುದರ ಕುರಿತು ಪರಿಗಣನೆ ಉಳ್ಳವರಾಗಿರಬೇಕು.—ರೋಮಾಪುರ 15:1, NW.
ಜ್ಞಾನೋಕ್ತಿ 25:20ರಲ್ಲಿ “ಚಳಿದಿನದಲ್ಲಿ ಬಟ್ಟೆ ತೆಗೆದ ಹಾಗೆ” ಎಂದು ಮಾತಾಡುತ್ತದೆ. ಎಷ್ಟೊಂದು ಸಮಂಜಸತೆಯದ್ದು! ಅದೇ ರೀತಿ ಸಂದರ್ಭೋಚಿತವಲ್ಲದ ಬಟ್ಟೆಯನ್ನು ಧರಿಸುವುದು ಎಷ್ಟೊಂದು ಅಸಂಬದ್ಧವಾಗಿರುತ್ತದೆ. ತನ್ನ ಪಾತ್ರಕ್ಕೆ ಅನುಗುಣವಾದ ಉಡುಪುಗಳನ್ನು ವೇದಿಕೆಯ ಮೇಲೆ ಒಬ್ಬ ನಟನು ಜಾಗ್ರತೆಯಿಂದ ಆರಿಸುತ್ತಾನೆ. ಮತ್ತು ನೈಜ ಜೀವನದಲ್ಲಿ, ನಾವು ಆಡುವ ಪಾತ್ರಗಳು ಭಿನ್ನಭಿನ್ನವಾದ “ಉಡುಪುಗಳನ್ನು” ಕೇಳಿಕೊಳ್ಳುತ್ತವೆ. ಉದಾಹರಣೆಗೆ, ನೀವು ಒಂದು ಉದ್ಯೋಗದ ಸಂದರ್ಶನಕ್ಕಾಗಿ ಹೋಗುತ್ತೀರೋ? ಆಗ ಒಂದು ವ್ಯವಹಾರಕ್ಕೆ ತಕ್ಕದ್ದಾದ ಬಟ್ಟೆಗಳನ್ನು ಧರಿಸುವುದು ಯುಕ್ತವಾಗಿರಬಹುದು. ನೀವು ಶಾಲೆಗೆ ಹೋಗುತ್ತೀರೋ? ಆಗ ಅನಿಯತವಾಗಿ ಆದರೂ ಶುಭ್ರವಾಗಿ ನೀವು ತೋರುವಂತೆ ಬಯಸಬಹುದು.
ಯೆಹೋವನ ಸಾಕ್ಷಿಯಾಗಿರುವ ಮಿಲ್ಲಿ ಹಿಂಸಾಚಾರವು ಅಸ್ತಿತ್ವದಲ್ಲಿರುವ ಒಂದು ಶಾಲೆಗೆ ಹಾಜರಾದಳು. ಕ್ರೈಸ್ತ ಕೂಟಗಳಿಗೋ ಎಂಬಂತೆ ಅವಳು ಉಡುಪು ಧರಿಸುವುದಾದಲ್ಲಿ, ಅವಳು ಅಧಿಕವಾಗಿ ಎಲ್ಲರ ಕಣ್ನೋಟಕ್ಕೆ ಬೀಳುತ್ತಿದ್ದಳು. ಆದುದರಿಂದ, ಶಾಲೆಯ ತಾಸುಗಳಲ್ಲಿ ಹಾಳತ ರೀತಿಯ ಜೀನ್ಸ್ಗಳನ್ನು ಧರಿಸುತ್ತಿದ್ದಳು, ಇದು ಅವಳ ಶಾಲೆಯಲ್ಲಿ ಅಂಗೀಕೃತವಾಗಿತು. ಆದರೆ ಶಾಲೆಯ ನಂತರ ಬೈಬಲ್ ಶಿಕ್ಷಣ ಕೆಲಸದಲ್ಲಿ ಅವಳು ತೊಡಗುತ್ತಿದ್ದುದರಿಂದ, ಅವಳು ತನ್ನೊಂದಿಗೆ ಒಂದು ಜತೆ ಉಡುಪನ್ನು ಕೊಂಡೊಯ್ಯುತ್ತಿದ್ದಳು. ಪಾತ್ರದಲ್ಲಿ ವ್ಯತ್ಯಾಸ, ಉಡುಪಿನಲ್ಲಿ ವ್ಯತ್ಯಾಸ.
ಕ್ರೈಸ್ತ ಕೂಟಗಳಲ್ಲಿ ಮತ್ತು ಅವರ ಬಹಿರಂಗ ಸಾರುವ ಕೆಲಸದಲ್ಲಿ ಅವರೇನು ಧರಿಸುತ್ತಾರೋ ಆ ವಿಷಯದಲ್ಲಿ ಯೆಹೋವನ ಸಾಕ್ಷಿಗಳ ಯುವಕರು ನಿರ್ದಿಷ್ಟ ಗಮನ ಕೊಡುತ್ತಾರೆ. ಉದಾಹರಣೆಗೆ, ಜೀನ್ಸ್ ಮತ್ತು “ಸ್ನೀಕರ್ಸ್”, ಶಾಲೆಯಲ್ಲಿ ಒಳ್ಳೆಯ ರೀತಿಯಲ್ಲಿ ಉದ್ದೇಶವನ್ನು ಪೂರೈಸಬಹುದು, ಆದರೆ ವಿಧಿವತ್ತಾದ ಆರಾಧನೆಯಲ್ಲಿ ಸಂದರ್ಭಾನುಸಾರವಲ್ಲದ್ದಾಗಿದೆ; ಅವು ಒಬ್ಬನನ್ನು ದೇವರ ಶುಶ್ರೂಷಕನು ಎಂಬದಾಗಿ ಹೇಳಿ ಕೊಳ್ಳುವುದರಿಂದ ಅಪಕರ್ಶಿಸುತ್ತದೆ.—2 ಕೊರಿಂಥ 6:3 ಹೋಲಿಸಿರಿ.
ಪೂರ್ವಾಚಾರದಂತೆ ಧರಿಸುವುದರ ಮೌಲ್ಯತೆ
ವಸ್ತ್ರಗಳ ವಿಷಯದಲ್ಲಿ ಎಳೆಯ ರುಡಿಯ ವಾದವು ನಿಮ್ಮನ್ನು ಅಚ್ಚರಿಗೊಳಿಸಬಹುದು. ಅವನನ್ನುವುದು: “ಕಳೆದು 50 ವರ್ಷಗಳಿಂದ ಜನರು ವಸ್ತ್ರ ಧರಿಸುವ ವಿಧಾನವನ್ನು ನಾನು ಮೆಚ್ಚುತ್ತೇನೆ.” ನಿರೀಕ್ಷಾರಹಿತತೆಯ ಹಳೆಯ ಶೈಲಿಯೋ? ಎಂದಿಗೂ ಇಲ್ಲ. ‘ಪ್ರಪಂಚದ ತೋರಿಕೆಯು ಬದಲಾಗುತ್ತಾ ಇದೆ’ಯಾದರೂ, ಮೂಲ ಶೈಲಿಗಳು ಬದಲಾಗುವುದು ವಿರಳ ಎಂಬದನ್ನು ರುಡಿ ಕಲಿತಿದ್ದಾನೆ. (1 ಕೊರಿಂಥ 7:31) ಅವನ ನಿಯಮವು: ಯಾವುದೇ ಗುಂಪಿಗೆ ಒಳಪಟ್ಟದ್ದನ್ನು ಧರಿಸದಿರುವುದು, ಅದು ಬೇಗನೆ ಗುಂಪಿನಿಂದ ಹೊರಗೆ ಹೋಗುತ್ತದೆ! “ಈ ರೀತಿ, ನೀವು ಯಾವಾಗಲೂ ಶೈಲಿಯಲ್ಲೇ ಇರುತ್ತೀರಿ,” ಸಲಹೆ ಕೊಡುತ್ತಾನೆ ರುಡಿ.
ತಜ್ಞರು ಒಪ್ಪುತ್ತಾರೆ. ಸಲಹೆಗಾರ್ತಿ ಅಮೆಲಿಯ ಫೇಟ್, ಉದಾಹರಣೆಗೆ, ಹೇಳುವುದು, ಪೂರ್ವಾಚಾರ ಧರಿಸುವಿಕೆಗಳು “ಉತ್ತಮ ಬಂಡವಾಳ ಹೂಡುವಿಕೆಗಳು.” ಅವು ಬೇಗನೇ ಬಳಕೆಯಿಂದ ಹೊರತಾಗುವುದಿಲ್ಲ, ಯಾಕಂದರೆ ನೋಟವು ಅಷ್ಟೊಂದು ನಿಖರವಾಗಿರುವುದಿಲ್ಲ. ಅದರೊಂದಿಗೆ ಲಾಭಾಂಶ (ಬೋನಸ್)ವಾಗಿ ಪೂರ್ವಾಚಾರ ಶೈಲಿಯವುಗಳನ್ನು ನಿಮ್ಮ ಬಟ್ಟೆಯ ಸಂಗ್ರಹದಲ್ಲಿರುವವುಗಳೊಂದಿಗೆ ಸರಿ ಹೊಂದಿಸುವುದು ಸಾಮಾನ್ಯವಾಗಿ ಸುಲಭವೇ.
ಕೆಲವು ಆಧುನಿಕ ಶೈಲಿಗಳು ಕ್ರೈಸ್ತರಿಗೆ ಅನುಚಿತವಾಗಿವೆ. ಬೇರೆ ಕೆಲವು ಸದಭಿರುಚಿಯವುಗಳು. ನಿಮ್ಮ ಹೆತ್ತವರು ಸಮ್ಮತಿಸುವುದಾದರೆ, ಒಂದು ಸೊಗಸುಗಾರಿಕೆಯ ವಸ್ತು ನೋಡಲು ಮಾತ್ರ ಉತ್ತಮವಲ್ಲ, ನಿಮ್ಮ ಉಡುಪಿನ ಕಪಾಟಿನಲ್ಲಿರುವ ಇತರ ವಸ್ತುಗಳೊಂದಿಗೆ ಹೊಂದಿಕೆಯಾಗುವುದಾದರೆ, ಅದನ್ನು ಧರಿಸಲು ಬಯಸಬಹುದು. ಆದರೆ ಫ್ಯಾಶನಿನ ಗುಲಾಮನಾಗುವುದರ ಕುರಿತು ಜಾಗ್ರತೆಯಿಂದಿರ್ರಿ.! ಫ್ಯಾಶನ್ ಸಲಹೆಗಾರ್ತಿ ಕರೊಲ್ ಜೇಕ್ಸನ್ ಅವಲೋಕಿಸುವುದು: “ಪ್ರಚಲಿತ ಪ್ರವೃತ್ತಿ ನಿಮಗೆ ಉಚಿತವಾಗಿಲ್ಲವಾದರೂ ನೀವು ‘ಗುಂಪಿನ ಮೆಚ್ಚಿಕೆಯಲ್ಲಿರಲು’ ಫ್ಯಾಶನ್ ಪ್ರವೃತ್ತಿಯನ್ನು ಅನುಸರಿಸುವುದಾದರೆ, ನಿಮ್ಮನ್ನು ನೀವೇ ವಂಚಿಸಿ ಕೊಳ್ಳುತ್ತೀರಿ.”
ಉಡುಪಿನಲ್ಲಿ ಪೂರ್ವಾಚಾರ ಪ್ರಿಯರಾಗಿರುವುದರಿಂದ ಇತರ ಪ್ರಯೋಜನಗಳೂ ಇವೆ. ಇದು ಶಾಲೆಯಲ್ಲಿ ಮತ್ತು ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳವನ್ನು ನಿರುತ್ತೇಜನಗೊಳಿಸುತ್ತದೆ ಎಂದು ಕೆಲವು ಯುವ ಹೆಂಗಸರು ಕಂಡುಕೊಂಡಿದ್ದಾರೆ. ಅಲ್ಲದೇ, ಒಂದು ಸಂಪ್ರದಾಯಸ್ಥ ಶೈಲಿಗೆ ಯುವಕನೊಬ್ಬನು ಅಂಟಿಕೊಂಡಿರುವುದನ್ನು ಕಾಣುವಾಗ, ಈತನು ಪ್ರೌಢತೆ, ಸ್ಥಿರತೆಯುಳ್ಳವನೂ ಪ್ರತಿಯೊಂದು ಹುಚ್ಚುಗೀಳು ಯಾ ಶೈಲಿಗೆ ಬಾಗುವವನಲ್ಲ ಎಂದೂ ಇತರರಿಂದ ಗಮನಿಸಲ್ಪಡುವ ಸಾಧ್ಯತೆಗಳು ಹೆಚ್ಚು.
ಉದಾಹರಣೆಗೆ, ಟಾಮ್ಮಿಯು ಎಳೆಯ ಸ್ತ್ರೀಯಾಗಿದ್ದು ಒಬ್ಬ ಪೂರ್ಣ ಸಮಯದ ಸುವಾರ್ತಿಕಳಾಗಿದ್ದಾಳೆ. ಅವಳು ಜೀವಿಸುವ ಪ್ರದೇಶದಲ್ಲಿ ಬಟ್ಟೆಯಂಚನ್ನು ಎತ್ತರದಲ್ಲಿಡುವುದು ಒಂದು ಗೀಳು ಆಗಿರುವುದಾದರೂ, ಅವಳನ್ನುವುದು: “ನನಗೆ ಮೊಣಕಾಲಿನ ಸ್ವಲ್ಪ ಕೆಳಗೆ ಇಡುವುದು ತೃಪ್ತಿದಾಯಕ ಉದ್ದವಾಗಿದೆ.” ಇದು ಕ್ರೈಸ್ತ ಹಾಳತಕ್ಕೆ ಹೊಂದಿಕೆಯಲ್ಲದೆ. (1 ತಿಮೊಥಿ 2:9) ಲೋಕವ್ಯಾಪಕವಾಗಿ ಸಭ್ಯತೆಯ ಮಟ್ಟವು ಭಿನ್ನವಾಗಿರುತ್ತದೆ ಎಂಬುದು ಸತ್ಯ. ಮತ್ತು ಒಂದು ನಿರ್ದಿಷ್ಟ ಶೈಲಿಯು ಯುಕ್ತವೋ ಅಲ್ಲವೋ ಎಂಬ ವಿಷಯದಲ್ಲಿ ನಿಮಗೆ ಸಂದೇಹವಿರುವುದಾದರೆ, ನಿಮ್ಮ ಹೆತ್ತವರೊಡನೆ ಅಥವಾ ಪ್ರಾಯಸ್ಥ ಮಿತ್ರರೊಡನೆ ಅದರ ಕುರಿತು ಮಾತಾಡಿರಿ.
ಕುಶಲತೆಯ ಖರೀದಿಸುವಿಕೆ
“ಕೌಶಲ್ಯತೆಯಿಂದಲೇ ಯುದ್ಧವನ್ನು ನಡಿಸು” ಎಂದು ಬೈಬಲ್ ಜ್ಞಾನೋಕ್ತಿ 20:18(NW)ರಲ್ಲಿ ಸಲಹೆ ನೀಡುತ್ತದೆ. ಕೌಶಲ್ಯತೆಯು ಖರೀದಿಸುವಿಕೆಯಂತಹ ಐಹಿಕ ವಿಷಯಗಳಲ್ಲೂ ಆವಶ್ಯಕವಾಗಿದೆ. ಉದಾಹರಣೆಗೆ, ನಿಮ್ಮನ್ನು ಉಬ್ಬಿಸುವ ಬಟ್ಟೆಗಳನ್ನು ಕಂಡುಕೊಳ್ಳಲು ನಿಮಗೆ ಕಷ್ಟವಾಗುತ್ತದೋ? ಒಂದು ಸಾರ್ವಜನಿಕ ಪುಸ್ತಕ ಸಂಗ್ರಹಾಲಯಕ್ಕೆ ನೀವು ಹೋಗಿ, ಸ್ವಲ್ಪ ಸಂಶೋಧನೆ ಮಾಡುವುದಾದರೆ ಕೌಶಲ್ಯತೆಯನ್ನು ನೀವು ಪಡೆಯಬಹುದು. ಬೇರೆ ಬೇರೆ ಕತ್ತರಿಸುವಿಕೆಗಳ, ಬಣ್ಣಗಳ ಮತ್ತು ಮುಖದ ಆಕಾರ, ಕುತ್ತಿಗೆಯ ಉದ್ದ, ಲಕ್ಷಣ ಮತ್ತು ಇನ್ನಿತರ ಸಮಸ್ಯೆಗಳ ಪರಿಹಾರಕ್ಕಾಗಿ ಭಿನ್ನಭಿನ್ನ ಬಟ್ಟೆಗಳ ಶೈಲಿಗಳ ಮೇಲೆ ನಿಮಗೆ ಸಹಾಯ ಮಾಡಬಹುದಾದ ಪುಸ್ತಕಗಳು ಮತ್ತು ಲೇಖನಗಳು ಅಲ್ಲಿವೆ.
ನೀವು ಖರೀದಿಸುವ ಬಟ್ಟೆಗಳ ಗುಣಮಟ್ಟದ ಕುರಿತಾಗಿ ಏನು? ಭೂಮಿಯಲ್ಲಿರುವಾಗ ಯೇಸು ಕ್ರಿಸ್ತನು ಪ್ರಾಪಂಚಿಕವಾಗಿ ಬಹಳ ಬಡವನಾಗಿದ್ದರೂ ಕೂಡಾ, ಅವನು ಧರಿಸಿದ್ದ ಉಡುಪು ಎಷ್ಟು ಬೆಲೆಬಾಳುವಂತಹದ್ದಾಗಿತ್ತೆಂದರೆ, ಅವನ ಹಂತಕರು, ಯಾರದನ್ನು ಪಡೆಯಬೇಕು ಎನ್ನುವುದರ ಬಗ್ಯೆ ಚೀಟುಹಾಕಿದರು. (ಯೋಹಾನ 19:23, 24) ತದ್ರೀತಿಯಲ್ಲಿ, ನಿಮ್ಮ ಹಣನಿಧಿಯು ಮಿತವಾಗಿರುವುದಾದರೂ ಮತ್ತು ಖರೀದಿಸುವ ಮೊದಲು ನೀವು ಸ್ವಲ್ಪ ಉಳಿತಾಯ ಮಾಡಬೇಕಾಗಿ ಬಂದರೂ, ನೀವು ಕೂಡಾ ಉತ್ತಮ ಗುಣಮಟ್ಟದ ಬಟ್ಟೆಗಾಗಿ ಪ್ರಯತ್ನಿಸತಕ್ಕದ್ದು. ದೀರ್ಘಕಾಲದ ನೋಟದಲ್ಲಿ, ಹೆಚ್ಚು ಬೆಲೆಯ ಗುಣಮಟ್ಟದ ಬಟ್ಟೆಗಳು ನಿಮಗೆ ಹೆಚ್ಚಿನ ವರುಷಗಳ ಉಪಯೋಗವನ್ನು ಕೊಟ್ಟು, ಕೊಂಚ ಸಮಯದ “ಉಳಿತಾಯ”ಕ್ಕಿಂತ ಹೆಚ್ಚು ಕಡಿಮೆ ಕ್ರಯದ್ದಾಗಿರಬಹುದು.
ಉತ್ತಮ ಗುಣಮಟ್ಟದ ದೃಷ್ಟಿಯೊಂದನ್ನು ನೀವು ಬೆಳೆಸಿಕೊಳ್ಳುವುದು ಹೇಗೆ? ಉತ್ತಮ ಗುಣಮಟ್ಟದ ಬಟ್ಟೆಗಳಲ್ಲಿ ಪ್ರಸಿದ್ಧಿಯಾಗಿರುವ ಕ್ರಯ ಹೆಚ್ಚಿರುವ ಕೆಲವು ಅಂಗಡಿಗಳಲ್ಲಿ ಅಲ್ಲಿ ಇಲ್ಲಿ ಹುಡುಕುತ್ತಾ ಪ್ರಯತ್ನಿಸಿರಿ. ಒಳ್ಳೆಯ ಬಟ್ಟೆಗಳ ನೋಟ ಮತ್ತು ಸ್ಪರ್ಶದ ಭಾವನೆಯನ್ನು ತಿಳಿದು ಕೊಳ್ಳಿರಿ. ಎಲಿಗೆನ್ಸ್ ಪುಸ್ತಕದಲ್ಲಿ ಹೇಳುವುದು: “ಕೇವಲ ಹೆಸರಿನಿಂದ ವಂಚಿತರಾಗಬೇಡಿರಿ; ಬಟ್ಟೆಯು ತನ್ನದೇ ಗುಣಮಟ್ಟದಿಂದ ನಿಲ್ಲತಕ್ಕದ್ದು . . . ಮುದ್ರಣಾಧಿಕಾರ ಮಂಜೂರಾತಿ ಏನಿದ್ದರೂ, ನಿಕೃಷ್ಟ ಗುಣಮಟ್ಟದ್ದು ಏನೂ ಉಳಿತಾಯದ್ದಲ್ಲ.” ಬಟ್ಟೆಯನುನ ಮುಟ್ಟಿ ನೋಡಿರಿ. ಅದರ ಕೊಲರ್, ಅಂಚು ಮತ್ತು ಗುಂಡಿಗಳ ತೂತುಗಳನ್ನು ಪರೀಕ್ಷಿಸಿರಿ. ಗಟ್ಟಿಯಾಗಿರಲು ಪುನಃ ಹೊಲಿದಿದ್ದಾರೋ ಎಂದು ನೋಡಿರಿ.
ಮೈಕ್ (ಮೇಲೆ ಹೆಸರಿಸಲ್ಪಟ್ಟವನು) ಉತ್ತಮ ಗುಣಮಟ್ಟದ ಒಂದು ದೃಷ್ಟಿಯನ್ನು ಬೆಳೆಸಿಕೊಂಡಿದ್ದಾನೆ. ಈ ರೀತಿ, ಸ್ನಾನದ ಉಡುಪಿನ ಉಳಿತಾಯ ಖರೀದಿಸುವಿಕೆಯು ನಿಜವಾದ ಉಳಿತಾಯವೆಂದು ಅವನು ತಿಳಿದಿದ್ದನು! ಆದಾಗ್ಯೂ, ಅಮೆಲಿಯ ಫೇಟ್ಟ್ ಎಚ್ಚರಿಸುವುದು, “‘ಉಳಿತಾಯ’ ಮಾರಾಟದಿಂದ ವಂಚಿಸಲ್ಪಡದಿರ್ರಿ.” ಪೂರ್ಣ ಕ್ರಯದ ಒಂದು ಉಣ್ಣೆಯ ಕವಚ ಬಟ್ಟೆ (ಸ್ವೇಟರ್) ನಿಮ್ಮ ಬಟ್ಟೆಯ ಕಪಾಟಿನಲ್ಲಿ ಹಲವಾರು ಇತರ ವಸ್ತ್ರಗಳೊಂದಿಗೆ ಹೆಚ್ಚು ರೀತಿಯಲ್ಲಿ ಬಳಸ ಶಕ್ತರಾಗಿರುವುದಾದರೆ “ಉಳಿತಾಯ” ಸ್ವೇಟರ್ ಏನೂ ಅಲದ್ದಾಗಿದೆ. ಜ್ಞಾನೋಕ್ತಿ 21:5 ಹೇಳುವುದು: “ಆತುರ ಪಡುವವರಿಗೆಲ್ಲಾ ಕೊರತೆಯೇ.” ನೀವು ಅವತರದಲ್ಲಿರುವಾಗ ಖರೀದಿಸುವುದನ್ನು ಹೋಗಲಾಡಿಸಿರಿ. ಅಂಗಡಿಗಳು ಜನನಿಬಿಡತೆಯಿಲ್ಲದಾಗ ಖರೀದಿ ಮಾಡಿರಿ. ನೀವೇನು ನೋಡುತ್ತೀರೋ ಅದನ್ನು ಮೊದಲೇ ತಿಳಿದಿರ್ರಿ. ವಸ್ತ್ರ, ಶೈಲಿ, ಬಣ್ಣ ಮತ್ತು ನೀವು ತೆರುವ ಕ್ರಯದ ಕುರಿತು ಎಷ್ಟು ಅಧಿಕ ನಿಮ್ಮ ಮನಸ್ಸಿನಲ್ಲಿ ಇದೆಯೋ, ನಿಮಗೆ ಅಗತ್ಯವಿಲ್ಲದ ಯಾವುದನ್ನೋ ಖರೀದಿಸುವಂತೆ ನೀವು ದಾರಿಬಿಟ್ಟು ಹೋಗುವಂತಹ ಸಂಭಾವ್ಯತೆಗಳು ಕಡಿಮೆ.
ನಿಮ್ಮ ನಿರ್ದಿಷ್ಟ ಅಗತ್ಯತೆಗಳನ್ನು ಹೇಳುವುದಾದರೆ, ಅಂಗಡಿಯ ಗುಮಾಸ್ತರು ಬಹಳಷ್ಟು ಸಹಾಯಕರರಾಗಿರಬಲ್ಲರು. (ಅವನ ಕುಟುಂಬದ ಹೆಂಗಸರಿಗೆ ಉಡುಪುಗಳನ್ನು ಖರೀದಿಸಲು ಮೈಕ್ನಿಗೆ ಶಕ್ಯವಾದದ್ದು ಮಾರಾಟಮಾಡುವ ಹೆಂಗಸಿನ ಸಹಾಯದಿಂದಲೇ.) ನಿಮ್ಮ ಉತ್ತಮ ತೀರ್ಮಾನಕ್ಕಿಂತ, ಮಾರಾಟಗಾರರು ನಿಮ್ಮನ್ನು ಉಬ್ಬಿಸಲು ಬಿಡಬೇಡಿರಿ. “ಮೂಢನು ಯಾವ ಮಾತನ್ನಾದರೂ ನಂಬುವನು; ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.”—ಜ್ಞಾನೋಕ್ತಿ 14:15.
ನೀವು ಖರೀದಿ ಮಾಡುವಾಗ ತಕ್ಕದ್ದಾಗಿ ಬಟ್ಟೆಗಳನ್ನು ಧರಿಸಿರಿ ಮತ್ತು ತಲೇ ಬಾಚಿರಿ. ಒಂದು T—ಶರ್ಟಿನ ಮೇಲೆ ಸೂಟಿನ ಕೋಟು ಹಾಕಿ ನೋಡಿ, ಎಷ್ಟು ಚೆನ್ನಾಗಿದೆ ಎಂದು ನೀವು ಹೇಗೆ ಹೇಳ ಬಲ್ಲರಿ? “ಸ್ನೀಕರ್ಸ್” ಧರಿಸಿಕೊಂಡು, ಒಂದು ಮೇಲುಡುಪು ಯಾ ಬಟ್ಟೆಯು ಉಬ್ಬಿಸುತ್ತದೋ ಎಂದು ನೀವು ಹೇಗೆ ತೀರ್ಮಾನಿಸ ಬಲ್ಲಿರಿ? ನೀವು ನಿಕೃಷ್ಟ ರೀತಿಯಲ್ಲಿ ಬಟ್ಟೆಗಳನ್ನು ಧರಿಸುವುದಾದರೆ, ಮಾರಾಟಗಾರರು “ನೀವು ಶೈಲಿಯ ಬಗ್ಯೆ ಮಿತ ರುಚಿಯುಳ್ಳವರೂ, ಮತ್ತು⁄ಯಾ ಖರ್ಚು ಮಾಡಲು ಹಣವಿಲ್ಲದವರು ಎಂದು ಭಾವಿಸುವ ಪ್ರವೃತ್ತಿಯವರಾಗುತ್ತಾರೆ” ಮತ್ತು ಅವರು ಬೇರೆ ಗಿರಾಕಿಗಳ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಾರೆ ಎಂದು ಕೂಡಾ ಒಬ್ಬ ಲೇಖಕನು ಆಪಾದಿಸುತ್ತಾನೆ.
ಕೊನೆಯಲ್ಲಿ, ಖರೀದಿಸುವಾಗ ಒಮ್ಮೊಮ್ಮೆ “ಒಬ್ಬರಿಗಿಂತಲೂ ಇಬ್ಬರು ಲೇಸು” ಎಂದು ನೀವು ಕಂಡು ಕೊಳ್ಳಬಹುದು. (ಪ್ರಸಂಗಿ 4:9) ಒಬ್ಬ ಮಿತ್ರನೋ, ಯಾ ಹೆತ್ತವನೊಬ್ಬನೋ ಬಟ್ಟೆಯೊಂದು ಹಿಂದಿನಿಂದ ಹೇಗೆ ತೋರುತ್ತದೆ, ಸಡಿಲವಾಗಿದೆಯೋ, ಬಿಗುಪಾಗಿದೆಯೋ ಯಾ ಬೇರೆ ಯಾವುದೇ ರೀತಿಯಲ್ಲಿ ಅಸಭ್ಯತೆಯದ್ದೋ ಎಂದು ಹೇಳಶಕ್ತರು.
ಅತಿ ಪ್ರಾಮುಖ್ಯ ಸಂಗತಿಗಳು
ಫಿಲಿಪ್ಪಿಯ 1:10(NW)ರಲ್ಲಿ “ಅತಿ ಉತ್ತಮ ಸಂಗತಿಗಳು ಯಾವವೆಂದು ಖಚಿತಮಾಡಿ ಕೊಳ್ಳುವಂತೆ” ಕ್ರೈಸ್ತರನ್ನು ಎಚ್ಚರಿಸಲಾಗಿದೆ. ಜೀವಿತದಲ್ಲಿ ನಿಜವಾದ ಪ್ರಾಮುಖ್ಯ ಸಂಗತಿಗಳು ಉಡುಪುಗಳ ಮೇಲಲ್ಲ—ದೇವರ ಜ್ಞಾನವಿರುವುದರ ಸುತ್ತಲೂ ಕೇಂದ್ರಿತವಾಗಿರುತ್ತವೆ. ಹೇಳಲು ವಿಷಾಧವಾಗುತ್ತದೆ, ಕೆಲವು ಯುವಕರು ನಿಖರತೆಯಿಂದ ಉಡುಪು ಧರಿಸುತ್ತಾರೆ, ಆದರೆ ಅವರ ನಂಬಿಕೆಯ ಕುರಿತು ಬಹಿರಂಗ ಘೋಷಣೆ ಮಾಡುವುದರಲ್ಲಿ ಅವರಿಗಿರುವ ಸಾಮರ್ಥ್ಯದಲ್ಲಿ ಎಚ್ಚರಗೇಡಿ ಸೋಮಾರಿಗಳಾಗಿರುತ್ತಾರೆ.
ಆದುದರಿಂದ, ನಿಪುಣ ಖರೀದಿಸುವವನಾಗಿರುವುದು ಮತ್ತು ನಿಮ್ಮ ಆರ್ಥಿಕತೆಯು ಅನುಮತಿಸುವಷ್ಟು ಯೋಗ್ಯವಾಗಿ ಕಾಣಲು ಪ್ರಯತ್ನಿಸುವುದು ಒಳ್ಳೆಯದಾದರೂ, ಪಕ್ವತೆಯ ಕ್ರೈಸ್ತನಾಗುವಂತೆ ಕೇಂದ್ರೀಕರಿಸಿರಿ. ಆ ಪಾತ್ರಕ್ಕನುಸಾರ ಜೀವಿಸಲು ಕಲಿಯಿರಿ, ಮತ್ತು ಅದಕ್ಕೆ ತಕ್ಕ ಉಡುಪು ಸ್ವಾಭಾವಿಕವಾಗಿ ಬರುತ್ತದೆ. (g89 10/8)
[ಪುಟ 10 ರಲ್ಲಿರುವಚಿತ್ರ]
ಒಲವುಳ್ಳ ಉಡುಪುಗಳು ಶೈಲಿಗಳಿಂದ ಬೇಗನೆ ಹೋಗುತ್ತವೆ. ವಿವಿಧ ಉಪಯೋಗಗಳ ಪೂರ್ವಾಚಾರದ ಶೈಲಿಗಳು ಬಹುಕಾಲ ಬಾಳುವವು