ಧರ್ಮದ ಭವಿಷ್ಯ ಅದರ ಗತಕಾಲದ ನೋಟದಲ್ಲಿ
ಭಾಗ 20: 19ನೇ ಶತಕದಿಂದ ಮುಂದಕ್ಕೆ ಪುನಃಸ್ಥಾಪನೆ ಸನ್ನಿಹಿತ!
“ನಿನ್ನ ಸ್ವಂತ ಮೋಂಬತ್ತಿಯನ್ನು ಆರಿಸಿಬಿಡುವುದೇ ದೈವಿಕ ಬೆಳಕನ್ನು ನೋಡುವ ಅತ್ಯುತ್ತಮ ಮಾರ್ಗ.”—ಥಾಮಸ್ ಫುಲರ್, ಇಂಗ್ಲಿಷ್ ವೈದ್ಯ ಮತ್ತು ಲೇಖಕ (1654-1734)
ಹತ್ತೊಂಭತ್ತನೆಯ ಶತಮಾನವನ್ನು ಕ್ರೈಸ್ತ ಇತಿಹಾಸದ ಸಮಯಗಳಲ್ಲಿ ಅತ್ಯಂತ ಚಟುವಟಿಕೆಯ ಸಮಯವೆಂದು ಕರೆಯಲಾಗಿದೆ. ಅದನ್ನು ಆದಿ ಶತಮಾನಗಳೊಂದಿಗೂ ಸುಧಾರಣಾ ವರ್ಷಗಳೊಂದಿಗೂ ಹೋಲಿಸಲಾಗಿದೆ. ಧಾರ್ಮಿಕ ಪ್ರಜ್ಞೆ ಮತ್ತು ಚಟುವಟಿಕೆಯಲ್ಲಿ ಅಷ್ಟೊಂದು ಅಭಿವೃದ್ಧಿಗೆ ಕಾರಣಗಳು ಅನೇಕ ಮತ್ತು ವಿವಿಧ.
ಲೇಖಕ ಕೆನೆತ್ ಎಸ್. ಲಟೂರೆಟ್ 13 ಸಂಬಂಧಿತ ವಿಷಯಗಳನ್ನು ದಾಖಲ್ಮಾಡಿದ್ದಾರೆ. ಇವುಗಳಲ್ಲಿ ಕೆಲವನ್ನು ಹಿಂದಿನ ಪತ್ರಿಕೆಯಲ್ಲಿ ಕೊಡಲಾಗಿದೆ. “ಇಷ್ಟು ಅಲ್ಪಕಾಲದಲ್ಲಿ ಮಾನವ ಸಮಾಜ ಹಿಂದೆಂದೂ ಇಷ್ಟು ಅಗಾಧವಾಗಿಯೂ ಇಷ್ಟು ವಿಧವಿಧವಾಗಿಯೂ ಬದಲಾವಣೆ ಹೊಂದಿದ್ದಿಲ್ಲ” ಎನ್ನುತ್ತಾರೆ ಅವರು.
ಅಮೇರಿಕದಲ್ಲಿ ಧರ್ಮಜಾಗೃತಿಯ ಪುನರುಜ್ಜೀವನ ಸ್ಪಷ್ಟವಾಗಿ ತೋರಿಬಂತು. ದೃಷ್ಟಾಂತಕ್ಕೆ, ಶತಕದಾರಂಭದಲ್ಲಿ ಜನಸಂಖ್ಯೆಯ 10 ಪ್ರತಿಶತಕ್ಕಿಂತಲೂ ಕಡಿಮೆಯಿದ್ದ ಚರ್ಚ್ ಸದಸ್ಯತನವು ಅದರ ಅಂತ್ಯದಲ್ಲಿ ಸುಮಾರು 40 ಪ್ರತಿಶತಕ್ಕೇರಿತು. ಸಂಡೇ ಸ್ಕೂಲುಗಳು—1780ರಲ್ಲಿ ಇಂಗ್ಲೆಂಡಿನಲ್ಲಿ ಪ್ರಾರಂಭ—ಈಗ ಹೆಚ್ಚು ಜನಪ್ರಿಯವಾದವು. ಇದಕ್ಕೆ ಒಂದು ಕಾರಣವು, ಯೂರೋಪಿಗೆ ವ್ಯತಿರಿಕ್ತವಾಗಿ, ಅಮೇರಿಕದಲ್ಲಿ ಚರ್ಚ್ ಮತ್ತು ಸರಕಾರದ ಪ್ರತ್ಯೇಕತೆಯು ಸಾರ್ವಜನಿಕ ಶಾಲೆಗಳಲ್ಲಿ ಧಾರ್ಮಿಕ ಶಿಕ್ಷಣವನ್ನು ನಿಷೇಧಿಸಿತ್ತು. ಇದಲ್ಲದೆ, ಹತ್ತಾರು ಧರ್ಮಪಂಗಡಗಳ ಕಾಲೇಜುಗಳೂ ಪಂಗಡ ಪರಸ್ಪರ ಬೈಬಲ್ ಸೊಸೈಟಿಗಳೂ ಸ್ಥಾಪನೆಗೊಂಡವು. ಮತ್ತು, ಶತಮಾನದ ಪೂರ್ವಾರ್ಧದಲ್ಲಿ ಅಮೇರಿಕದಲ್ಲಿ ಕಡಿಮೆ ಪಕ್ಷ 25 ಥಿಯೊಲಾಜಿಕಲ್ ಸೆಮಿನೆರಿಗಳು ಸ್ಥಾಪಿತವಾದವು.
ಈ ಮಧ್ಯೆ, ಪ್ರಾಟೆಸ್ಟಂಟ್ ಧರ್ಮ ಭೂವ್ಯಾಪಕವಾಗಿ ಪ್ರಚಾರ ಮನೋಭಾವವುಳ್ಳದಾಗ್ದುತ್ತಿತ್ತು. ಬ್ರಿಟಿಷ್ ಮೋಚಿ ಮತ್ತು ಉಪಾಧ್ಯಾಯ ವಿಲ್ಯಂ ಕ್ಯಾರಿ, ಎನ್ ಇನ್ಕಾಯ್ವರಿ ಇಂಟು ದಿ ಆಬ್ಲಿಗೇಶನ್ಸ್ ಆಫ್ ಕ್ರಿಶ್ಚನ್ಸ್ ಟು ಯೂಸ್ ಮೀನ್ಸ್ ಫಾರ್ ದ ಕನ್ವರ್ಶನ್ ಆಫ್ ದ ಹೀದನ್ಸ್ ಎಂಬ ಪುಸ್ತಕವನ್ನು ಪ್ರಕಟಿಸಿ 1792ರಲ್ಲಿ ಇದರಲ್ಲಿ ಮುಂದಾಳುತ್ವ ವಹಿಸಿದ್ದರು. ಭಾರತದಲ್ಲಿ ಮಿಶನೆರಿಗಳಾಗಿ ಸೇವೆ ಮಾಡುತ್ತಿದ್ದಾಗ ಕ್ಯಾರಿ ಮತ್ತು ಅವರ ಒಡನಾಡಿಗಳು ಬೈಬಲನ್ನು ಪೂರ್ಣ ಯಾ ಅಂಶವಾಗಿ, 40ಕ್ಕೂ ಹೆಚ್ಚು ಭಾರತದ ಹಾಗೂ ಏಷ್ಯಾದ ಇತರ ಭಾಷೆಗಳಲ್ಲಿ ಭಾಷಾಂತರಿಸಿದರು. ಬೈಬಲ್ ವಿತರಣೆ ಮಾಡುವುದರಲ್ಲಿ ಈ ಆದಿ ಮಿಶನೆರಿಗಳಲ್ಲಿ ಕೆಲವರು ಮಾಡಿರುವ ಕೆಲಸ ಪ್ರಶಂಸನೀಯ.
ಗತ ಶತಮಾನದಲ್ಲಿ, ಸಂಬಂಧಸೂಚಕವಾಗಿ ಹೊಸವಿಜ್ಞಾನವಾಗಿದ್ದ ಬೈಬಲ್ ಸಂಬಂಧವಾದ ಪ್ರಾಚೀನ ಶೋಧನ ಶಾಸ್ತ್ರವು ಗಣ್ಯತೆ ಪಡೆಯಿತು. 1799ರಲ್ಲಿ, ಫ್ರೆಂಚ್ ಸೈನಿಕರು ಈಜಿಪ್ಟಿನಲ್ಲಿ, ಈಗ ರೊಸೆಟ ಸ್ಟೋನ್ ಎಂದು ಕರೆಯಲಾಗುವ ಕಪ್ಪು ಅಗ್ನಿಶಿಲೆಯನ್ನು ಕಂಡುಹಿಡಿದರು. ಅದರಲ್ಲಿ ಒಂದೇ ಸ್ಮಾರಕ ಲೇಖನವನ್ನು ಮೂರು ಬಾರಿ, ಎರಡು ಸಲ ಈಜಿಪ್ಟಿನ ಎರಡು ರೂಪದ ಚಿತ್ರಲಿಪಿಗಳಲ್ಲಿ ಮತ್ತು ಒಮ್ಮೆ ಗ್ರೀಕ್ನಲ್ಲಿ ಕೆತ್ತಲಾಗಿತ್ತು. ಈಜಿಪ್ಶಿಯನ್ ಚಿತ್ರಲಿಪಿಗಳ ಅರ್ಥ ಕಂಡುಹಿಡಿಯಲು ಇದು ಹೀಗೆ ಅಮೂಲ್ಯವಾಗಿ ಪರಿಣಮಿಸಿತು. ಇದಾಗಿ ಸ್ವಲ್ಪದರಲ್ಲಿ, ಅಸ್ಸಿರಿಯನ್ ಬೆಣೆಲಿಪಿಗಳ ಅರ್ಥವನ್ನೂ ಕಂಡುಹಿಡಿಯಲಾಯಿತು. ಇದಾಗಿ ಸ್ವಲ್ಪದರಲ್ಲಿ ಅಸ್ಸಿರಿಯ ಮತ್ತು ಈಜಿಪ್ಟಿನಲ್ಲಿ ಭೂಶೋಧನೆಗಳು ಪ್ರಾರಂಭವಾದಾಗ ದೊರೆತ ವಸ್ತುಗಳನ್ನು ಹೊಸಾರ್ಥದಲ್ಲಿ ನೋಡಲಾಯಿತು. ಅನೇಕ ಬೈಬಲ್ ವೃತ್ತಾಂತಗಳು ಅತಿ ಚಿಕ್ಕ ವಿಷಯಗಳಲ್ಲಿಯೂ ಸತ್ಯವೆಂದು ಕಂಡುಬಂದವು.
ತಮ್ಮ ಸ್ವಂತ ಮೋಂಬತ್ತಿಗಳನ್ನು ಉರಿಸುವುದು
ಧರ್ಮಾಭಿರುಚಿ ವೃದ್ಧಿಯಾದಂತೆ ಭಾವೀ ಸುಧಾರಕರ ಸಂಖ್ಯೆಯೂ ಹೆಚ್ಚಿತು. ಆದರೆ ಇವರೆಲ್ಲರೂ ಯಥಾರ್ಥವಂತರಾಗಿರಲಿಲ್ಲವೆಂದು ವ್ಯಕ್ತವಾಯಿತು. ಮೇಲೆ ಹೇಳಿರುವ ಲೇಖಕ ಕೆನೆತ್ ಎಸ್. ಲಟೂರೆಟ್ ಮುಚ್ಚುಮರೆಯಿಲ್ಲದೆ ಒಪ್ಪುವಂತೆ, ಹೊಸ ಧರ್ಮಪಂಗಡಗಳಲ್ಲಿ ಕೆಲವು “ಅಸೂಯೆ, ಜಗಳ ಮತ್ತು ವೈಯಕ್ತಿಕ ಹೆಬ್ಬಯಕೆಗಳಿಂದ ಹುಟ್ಟಿದವು.” ಆದರೆ, ವೈಯಕ್ತಿಕ ಹೆಬ್ಬಯಕೆಯೆಂಬ ಮೋಂಬತ್ತಿ ಉರಿಸುವ ಸುಧಾರಕರು ಸತ್ಯಾರಾಧನೆಯನ್ನು ಪುನಃಸ್ಥಾಪಿಸಲು ದೇವರ ಆಯ್ಕೆ ಎಂದು ಹೇಳಸಾಧ್ಯವಿಲ್ಲ.
ಈ ವೈಯಕ್ತಿಕ ಮೋಂಬತ್ತಿಗಳ ಗಲಿಬಿಲಿಯ ಮಿನುಗಿನಲ್ಲಿ ದೇವಶಾಸ್ತ್ರೀಯ ವಿಚಾರಗಳೂ ಗಲಿಬಿಲಿಗೊಂಡವು. ಮುಖ್ಯವಾಗಿ ಜರ್ಮನ್ ವಿಶ್ವವಿದ್ಯಾಲಯಗಳ ಉತ್ಪನ್ನವಾದ ಪ್ರೌಢ ವಿಮರ್ಶೆಯು “ಪ್ರೌಢ” ವೈಜ್ಞಾನಿಕ ವಿಚಾರಗಳ ಬೆಳಕಿನಲ್ಲಿ ಶಾಸ್ತ್ರಗಳನ್ನು ಪುನಃ ಅರ್ಥವಿವರಣೆ ಮಾಡಿತು. ಈ ಪ್ರೌಢ ವಿಮರ್ಶಕರು ಬೈಬಲನ್ನು ಯೆಹೂದಿ ಧರ್ಮಾನುಭವದ ದಾಖಲೆಗಿಂತ ತುಸು ಶ್ರೇಷ್ಠವೆಂಬಂತೆ ಕಂಡರು. ರಕ್ಷಣಾಮಾರ್ಗವನ್ನು ನಿರ್ಧರಿಸಲು ಬೈಬಲಿನ ಪ್ರಮಾಣ ಅವಶ್ಯವೆಂಬ ವಿಷಯವನ್ನೂ ಅದು ಸಮರ್ಥಿಸುವ ನೈತಿಕ ಮಟ್ಟಗಳ ವಿವೇಕವನ್ನೂ ಅವರು ವಿವಾದಕ್ಕೊಳಪಡಿಸಿದರು.
ಈ ಪ್ರೌಢ ವಿಮರ್ಶೆ, ವಿಶೇಷವಾಗಿ ಪ್ರಾಟೆಸ್ಟಂಟ್ ಪಾದ್ರಿಗಳಿಂದ ಸಿದ್ಧ ಬೆಂಬಲವನ್ನು ಪಡೆಯಿತು. ಒಂದು ವರದಿಗನುಸಾರ, 1897ರೊಳಗೆ ಜರ್ಮನಿಯ 20 ಪ್ರಾಟೆಸ್ಟಂಟ್ ದೇವಶಾಸ್ತ್ರದ ವಿಶ್ವವಿದ್ಯಾಲಯಗಳ ಶಾಖಾ ಸದಸ್ಯರುಗಳಲ್ಲಿ ಒಬ್ಬರಾಗಲಿ ಬೈಬಲಿನ ಪ್ರಥಮ ಐದು ಪಸ್ತಕಗಳ ಯಾ ಯೆಶಾಯ ಪುಸ್ತಕದ ಬರಹಗಾರರ ಬಗ್ಗೆ ಸಾಂಪ್ರದಾಯಿಕ ಅಭಿಪ್ರಾಯವುಳ್ಳವರಾಗಿರಲಿಲ್ಲ.
ಹಲವು ವರುಷಗಳಾದ ಮೇಲೆ, 1902ರಲ್ಲಿ, ಸ್ಕಾಟ್ಲೆಂಡಿನ ಪ್ರೆಸ್ಬಿಟೇರಿಯನ್ ಚರ್ಚುಗಳ ಜನರಲ್ ಎಸೆಂಬ್ಲಿಗಳ ಒಂದು ಪರಿಷತ್ತಿನಲ್ಲಿ ಈ ಪ್ರೌಢ ವಿಮರ್ಶೆಯ ಮೇಲೆ ಒಂದು ವಿವಾದವೆದ್ದು ಬಂತು. ಎಡಿನ್ಬರ್ಗ್ ಈವ್ನಿಂಗ್ ನ್ಯೂಸ್ ವರದಿಸಿದ್ದು: “ಪ್ರೌಢ ವಿಮರ್ಶೆಗನುಸಾರ, . . . ಬೈಬಲು ಕಟ್ಟುಕಥೆಗಳ ಒಂದು ಸಂಗ್ರಹ. ಇದರಿಂದ ಒಬ್ಬ ಉಪನ್ಯಾಸಕನು, ಹೇಗೆ ‘ಈಸೊಪನ ಕಲ್ಪನಾಕಥೆ’ ಗಳಿಂದ ಒಬ್ಬ ನುರಿತ ನೀತಿಜ್ಞನು ನೈತಿಕ ಬೋಧನೆಗಳ ಕೆಲವು ಕಾಳುಗಳನ್ನು ಹೆಕ್ಕಬಹುದೊ ಹಾಗೆಯೆ ಇದರಿಂದಲೂ ಹೆಕ್ಕಬಹುದು.” ಆದರೆ ಆ ಪತ್ರಿಕೆ ಬಳಿಕ ಗಮನಿಸಿದ್ದು: “ಶ್ರಮಿಕ ವರ್ಗದವರು ಮೂರ್ಖರಲ್ಲ. ಯಾರು ತಾವೇ ಮಾನಸಿಕ ಮೊಬ್ಬಿನಲ್ಲಿ ಜೀವಿಸುತ್ತಿದ್ದಾರೊ ಅಂಥ ವ್ಯಕ್ತಿಗಳನ್ನಾಲಿಸಲು ಅವರು ಚರ್ಚಿಗೆ ಹೋಗರು.”
ಕೆಲವು ದಿನಗಳ ಬಳಿಕ ಬಂದ ಇನ್ನೊಂದು ಲೇಖನ ಇನ್ನೂ ಹೆಚ್ಚು ಒರಟಾಗಿತ್ತು. ಅದು ಹೇಳಿದ್ದು: “ನಯವಾಗಿ ಮಾತಾಡುವುದರಿಂದ ಉಪಯೋಗವಿಲ್ಲ. ಪ್ರಾಟೆಸ್ಟಂಟ್ ಚರ್ಚು ಒಂದು ಸಂಘಟಿತ ಕಪಟವಾಗಿದೆ. ಅದರ ನಾಯಕರುಗಳು ಶುದ್ಧ ಠಕ್ಕರು. ಸಂಗತಿ ಎಷ್ಟಕ್ಕೆ ತಲುಪಿದೆಯೆಂದರೆ, ಇಂದು ‘ಏಜ್ ಆಫ್ ರೀಸನ್’ ಗ್ರಂಥದ ಲೇಖಕರು ಜೀವಿಸಿರುತ್ತಿದ್ದರೆ ಅವರನ್ನು ನಾಸ್ತಿಕ ಟಾಮ್ ಪೆಯ್ನ್ ಎಂದು ಅಪಹಾಸ್ಯ ಮಾಡಿ ಕರೆಯದೆ ರೆವೆರೆಂಡ್ ಥಾಮಸ್ ಪೆಯ್ನ್, ಡಿ.ಡಿ., ಹಿಬ್ರು ಮತ್ತು ಓಲ್ಡ್ ಟೆಸ್ಟಮೆಂಟ್ ಎಕ್ಸಿಜೀಸಿಸ್ನ ಪ್ರೊಫೆಸರ್, ಯುನೊಯಿಟೆಡ್ ಫ್ರೀ ಕಾಲೇಜ್, ಗ್ಲಾಸ್ಗೊ, ಎಂದು ಕರೆಯುತ್ತಿದ್ದರು. ಪ್ರಾಟೆಸ್ಟಂಟ್ ಉಪದೇಶ ವೇದಿಕೆಯಿಂದ ಸಾರಲು . . . [ಮತ್ತು] ಥಿಯಾಲಜಿಯ ಪ್ರೊಫೆಸರರಾಗಿ ಉತ್ತಮ ವೇತನ ಪಡೆಯಲು ಅವರಿಗೆ ಯಾವ ಕಷ್ಟವೂ ಇರುತ್ತಿರಲಿಲ್ಲ.”
ಧಾರ್ಮಿಕ ಮರುಹೊಡೆತ
ಪ್ರಾಟೆಸ್ಟಂಟ್ ಮತ ಆದಿಯಿಂದಲೂ ವೈಯಕ್ತಿಕ ಪರಿವರ್ತನೆ ಮತ್ತು ಕ್ರೈಸ್ತ ಅನುಭವಗಳಿಗೆ ಪ್ರಾಮುಖ್ಯತೆ ಕೊಟ್ಟು, ಶಾಸ್ತ್ರವನ್ನೇ ಮುಖ್ಯ ಆಧಾರವನ್ನಾಗಿ ಮಾಡಿ, ಮತ ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಕಡಿಮೆ ಬೆಲೆಯದ್ದಾಗಿ ಮಾಡಿತು.
1830 ಮತ್ತು 1840ಗಳಲ್ಲಿ, ಅನೇಕ ಪ್ರಾಟೆಸ್ಟಂಟ್ ಉಪದೇಶಿಗಳು ಕ್ರಿಸ್ತನ ದ್ವಿತೀಯಾಗಮನದ ಸನ್ನಿಹಿತ್ಯವನ್ನು ಮತ್ತು ಅದರೊಂದಿಗೆ ಸಹಸ್ರ ವರ್ಷಗಳ ಧರ್ಮಯುಗವನ್ನು ಸಾರತೊಡಗಿದರು. ನ್ಯೂಯಾರ್ಕಿನ ರೈತ, ವಿಲ್ಯಂ ಮಿಲರ್, ಈ ಎರಡನೆಯ ಬರೋಣವು 1843ರಲ್ಲಿ ನಡೆಯಬಹುದೆಂದು ಹೇಳಿದರು. ಈ ಸಹಸ್ರ ಸಂವತ್ಸರ ನಂಬಿಕೆಯ ಚಳವಳಿ, ಶೃದ್ಧಾಭಕ್ತಿಯ ಹೆಚ್ಚು ಪ್ರಮುಖವೂ ಆಕ್ರಮಣಕಾರಕವೂ ಆದ ವೇದ ಪ್ರಾಮಾಣ್ಯವಾದವೆಂದು ಕರೆಯಲಾದ ಒಂದು ವಾದವು ಸ್ಥಾಪನೆಗೊಳ್ಳುವಂತೆ ಸಹಾಯ ಮಾಡಿತು.
ವೇದ ಪ್ರಾಮಾಣ್ಯವಾದವು ಅಧಿಕಾಂಶ ಸಂದೇಹವಾದ, ಸ್ವತಂತ್ರ ವಿಚಾರ, ವಿಚಾರ ವಾದ ಮತ್ತು ಉದಾರಾಭಿಪ್ರಾಯದ ಪ್ರಾಟೆಸ್ಟಂಟ್ ಮತ ಪೋಷಿಸಿದ್ದ ನೈತಿಕ ಸಡಿಲುತನದ ವಿರುದ್ಧ ಬಂದ ಮರುಹೊಡೆತವಾಗಿತ್ತು. ಇದು ಕೊನೆಗೆ ತನ್ನ ಹೆಸರನ್ನು, 1909ರಿಂದ 1912ರ ತನಕ ಮೂಡಿ ಬೈಬಲ್ ಇನ್ಸ್ಟಿಟ್ಯೂಟ್ ಹೊರಡಿಸಿದ ದ ಫಂಡಮೆಂಟಲ್ಸ್ ಎಂಬ ಪುಸ್ತಕಮಾಲೆಯಿಂದ ಆಯ್ದುಕೊಂಡಿತು.
ವೇದ ಪ್ರಾಮಾಣ್ಯವಾದವು, ವಿಶೇಷವಾಗಿ ಅಮೇರಿಕದಲ್ಲಿ, ತನ್ನ ಕಾರ್ಯಸಾಧಕವಾದ ರೇಡಿಯೊ ಮತ್ತು ಟೀವೀ ಸೇವೆ, ಅದರ ಬೈಬಲ್ ಸಂಘಗಳು ಮತ್ತು ಹೆಚ್ಚು ಜಾಹೀರಾಗಿರುವ ರಿವೈವಲ್ ಕೂಟಗಳಿಂದ ಪ್ರಸಿದ್ಧವಾಗಿದೆ. ಆದರೆ ಇತ್ತೀಚೆಗೆ, ಅದರ ಕೀರ್ತಿ ಅದರ ಕೆಲವು ಪ್ರಮುಖ ನಾಯಕರುಗಳ ಆರ್ಥಿಕ ಹಾಗೂ ಲೈಂಗಿಕ ತಪ್ಪು ನಡೆವಳಿಕೆಗಳಿಂದ ಕುಂದಿಹೋಗಿಯದೆ. ವಿಶೇಷವಾಗಿ 1979ರಲ್ಲಿ ರಚಿಸಲ್ಪಟ್ಟು ಇತ್ತೀಚೆಗೆ ರದ್ದಾಗಿರುವ ಮಾರಲ್ ಮೆಜಾರಿಟಿ ಸಂಘದ ಮೂಲಕ ಅದರ ಹೆಚ್ಚಿದ ರಾಜಕೀಯ ಚಟುವಟಿಕೆಯ ಕಾರಣದಿಂದಲೂ ಅದು ಟೀಕೆಗೊಳಗಾಗಿದೆ.
ಈ ವೇದಪ್ರಾಮಾಣ್ಯವಾದವು ಬೈಬಲನ್ನು ಸಮರ್ಥಿಸುವಂತೆ ವಾದಿಸುತ್ತದಾದರೂ ನಿಜವಾಗಿ ಅದು ಬೈಬಲಿನ ಅಧಿಕಾರವನ್ನು ಶಿಥಿಲಗೊಳಿಸಿದೆ. ಅದು ಇದನ್ನು ಮಾಡಿರುವ ಒಂದು ವಿಧವು ಅಕ್ಷರಶಃ ಅರ್ಥಮಾಡಬಾರದ ವಚನಗಳನ್ನು ಹಾಗೆ ಅರ್ಥವಿವರಣೆ ಮಾಡಿಯೆ. ಇದರ ಒಂದು ದೃಷ್ಟಾಂತವು, ಆದಿಕಾಂಡದ ವೃತ್ತಾಂತಕ್ಕನುಸಾರವಾಗಿ, ಈ ಭೂಮಿ 6 ಅಕ್ಷರಾರ್ಥದ 24 ತಾಸುಗಳ ದಿನಗಳಲ್ಲಿ ಸೃಷ್ಟಿಸಲ್ಪಟ್ಟಿತು ಎಂಬ ವಾದವೇ. ಇವು ಹೆಚ್ಚು ಸಮಯಾವಧಿಯ ಸಾಂಕೇತಿಕ ದಿವಸಗಳೆಂಬುದು ವ್ಯಕ್ತ. (ಆದಿಕಾಂಡ 2:3,4; 2 ಪೇತ್ರ 3:8 ಹೋಲಿಸಿ.) ವೇದಪ್ರಾಮಾಣ್ಯವಾದವು ಬೈಬಲನ್ನು ಶಿಥಿಲಗೊಳಿಸುವ ಇತರ ವಿಧಗಳು, ನರಕಾಗ್ನಿಯಲ್ಲಿ ನಿತ್ಯ ಯಾತನೆಯೇ ಮುಂತಾದ ಅಶಾಸ್ತ್ರೀಯ ತತ್ವಗಳನ್ನು ಕಲಿಸಿ ಮತ್ತು ಹಲವು ಬಾರಿ, ಶಾಸ್ತ್ರವು ಅವಶ್ಯಪಡದ ಅಂದರೆ ಮದ್ಯಪಾನೀಯಗಳನ್ನು ಕುಡಿಯಬಾರದು, ಸ್ತ್ರೀಯರು ಅಲಂಕಾರ ಮಾಡಿಕೊಳ್ಳಬಾರದು ಎಂಬ ನಡೆವಳಿಕೆಯ ಮಟ್ಟವನ್ನು ಬೆಳೆಸಿಯೇ. ಈ ವಿಧಗಳಲ್ಲಿ ವೇದಪ್ರಾಮಾಣ್ಯವಾದವು ಜನರು ಬೈಬಲಿನ ಸಂದೇಶವನ್ನು ಅದು ಮುಗ್ಧವೂ ನ್ಯಾಯಸಮ್ಮತವಲ್ಲದ್ದೂ ಅಶಾಸ್ತ್ರೀಯವೂ ಆಗಿದೆಯೆಂದು ಹೇಳಿ ಅದನ್ನು ನಿರಾಕರಿಸುವಂತೆ ಮಾಡಿಯದೆ.
ಕಾಲನಿಯಮನದ ಸಂಗತಿ
ಬೇಕಾಗಿದ್ದುದು ಪುನಃಸ್ಥಾಪನೆ, ಸತ್ಯಾರಾಧನೆಯ ಪುನಃಸ್ಥಾಪನೆಯೆಂಬುದು ಸ್ಪಷ್ಟ. ಆದರೆ ಪ್ರಸಂಗಿ 3:1 (NW) ಹೇಳುವಂತೆ, “ಪ್ರತಿಯೊಂದಕ್ಕೂ ಒಂದು ನಿಯಮಿತ ಸಮಯವಿದೆ.”
ಒಂದನೆಯ ಶತಮಾನದಲ್ಲಿ, ಯೇಸು ಕ್ರೈಸ್ತತ್ವದ ರೂಪದಲ್ಲಿ ಸತ್ಯಾರಾಧನೆಯನ್ನು ಪುನರುಜ್ಜೀವಿಸಿದನು. ಆದರೂ ಧರ್ಮಭ್ರಷ್ಟತೆ ಆಗಲಿದೆ ಎಂದು ಅವನು ಪ್ರವಾದಿಸಿದನು. ಸತ್ಯ ಕ್ರೈಸ್ತರು ಗೋಧಿಯಂತೆ, ಮತ್ತು ಸುಳ್ಳು ಕ್ರೈಸ್ತರು ಹಣಜಿಯಂತೆ, “ಸುಗ್ಗೀಕಾಲದ ತನಕ ಎರಡೂ ಕೂಡ” ಬೆಳೆಯುವವೆಂದು ಅವನಂದನು. ಆ ಸಮಯದಲ್ಲಿ, ದೇವದೂತರು “ಹಣಜಿಯನ್ನು ಆರಿಸಿ ತೆಗೆದು . . . ಸುಡು” ವರು ಮತ್ತು ಸತ್ಯಕ್ರೈಸ್ತರು ದೇವರ ಅನುಗ್ರಹದ ಪಕ್ಷಕ್ಕೆ ಕೂಡಿಸಲ್ಪಡುವರು. (ಮತ್ತಾಯ 13:24-30, 37-43) 19ನೆಯ ಶತಕದ ಉತ್ತರಾರ್ಧದಲ್ಲಿ, ಸತ್ಯಾರಾಧನೆಯ ಪುನಃಸ್ಥಾಪನೆಯ ನಿಯಮಿತ ಸಮಯ ಬಾಗಿಲಲ್ಲಿತ್ತು.
ಚಾರ್ಲ್ಸ್ ಟೇಸ್ ರಸೆಲ್, 1852ರಲ್ಲಿ, ಪೆನ್ಸಿಲೇನ್ವಿಯದ ಪಿಟ್ಸ್ಬರ್ಗಿನಲ್ಲಿ ಜನಿಸಿದರು. ಚಿಕ್ಕ ಹುಡುಗನಾಗಿದ್ದಾಗಲೂ ಅವರು ಬೈಬಲಿನಲ್ಲಿ ತುಂಬ ಕಾಳಜಿ ತೋರಿಸಿದರು. ತನ್ನ ವಯಸ್ಸಿನ 20ಗಳ ಮೊದಲಲ್ಲಿ, ಕುಟುಂಬ ವ್ಯಾಪಾರದಿಂದ ತನ್ನ ಸಮಯವನ್ನೆಲ್ಲ ಸಾರುವುದಕ್ಕೆ ಮೀಸಲಾಗಿಟ್ಟರು. 1916ರಲ್ಲಿ, ಅವರ 64ನೇ ವಯಸ್ಸಿನಲ್ಲಿ ಸತ್ತಾಗ, ಅವರು 30,000 ಉಪನ್ಯಾಸಗಳನ್ನು ಕೊಟ್ಟಿದ್ದರೆಂದೂ 50,000ಕ್ಕೂ ಹೆಚ್ಚು ಪುಟಗಳಿರುವ ಪುಸ್ತಕಗಳನ್ನು ಬರೆದರೆಂದೂ ವರದಿಯಿದೆ.
ಬೈಬಲನ್ನು ವರ್ಧಿಸುವುದರಲ್ಲಿ ಇತರರು ಮಾಡಿದ್ದ ಪ್ರಶಂಸನೀಯ ಕೆಲಸವನ್ನು ರಸೆಲ್ ಒಪ್ಪಿದರೂ ಬೈಬಲಿನ ಭಾಷಾಂತರ, ಮುದ್ರಣ ಮತ್ತು ವಿತರಣೆ ಮಾತ್ರ ಸಾಲದೆಂದು ಗ್ರಹಿಸಿದರು. ಹೀಗೆ, 1879ರಲ್ಲಿ, ಅವರು ಇಂದು ಕಾವಲಿನ ಬುರುಜು ಎಂದು ಪ್ರಸಿದ್ಧವಾಗಿರುವ ಪತ್ರಿಕೆಯನ್ನು ಪ್ರಕಟಿಸಲಾರಂಭಿಸಿದರು. ಅದರ ಪ್ರಥಮ ಸಂಚಿಕೆ ಹೇಳಿದ್ದು: “ನಾವು, ಯಾವುದಾದರೊಂದು ಪ್ರಶ್ನೆಯ ಕುರಿತು ಶಾಸ್ತ್ರ ಏನನ್ನುತ್ತದೆ ಎಂದು ಕೇಳುವ ಬದಲು, ನನ್ನ ಚರ್ಚು ಏನನ್ನುತ್ತದೆ ಎಂದು ಕೇಳುವ ಪ್ರವೃತ್ತಿಯುಳ್ಳವರಾಗಿದ್ದೇವೆ. ದೇವತಾಶಾಸ್ತ್ರವನ್ನು ತುಂಬ ಅಧ್ಯಯನ ಮಾಡಲಾದರೂ ಬೈಬಲನ್ನು ಸಾಕಷ್ಟು ಮಾಡಲಾಗುವುದಿಲ್ಲ. ಆದುದರಿಂದ, ‘ಶಾಸ್ತ್ರಗಳಿಗೆ ನಮ್ಮನ್ನು ವಿವೇಕಿಗಳಾಗಿ ಮಾಡುವ ಶಕ್ತಿ ಇದೆ’ ಮತ್ತು ‘ಕರ್ತನ ಸಾಕ್ಷಿ ವಿವೇಕಿಗಳನ್ನು ನಿಶ್ಚಯವಾಗಿ ಸಾಮಾನ್ಯರನ್ನಾಗಿ ಮಾಡುತ್ತದೆ’ ಎಂಬೀ ವಿಚಾರದಿಂದ ನಾವು ಪರೀಕ್ಷಿಸೋಣ.”
ಇಂದು, 112 ವರ್ಷ, ಯಾವ ಅವಿಚ್ಫಿನ್ನತೆಯೂ ಇಲ್ಲದೆ ಪ್ರಕಟಿಸಲ್ಪಟ್ಟಿರುವ ಕಾವಲಿನ ಬುರುಜು (ಈಗ 111 ಭಾಷೆಗಳಲ್ಲಿ ಪ್ರತಿ ಸಂಚಿಕೆಯ ಚಲಾವಣೆ 1 ಕೋಟಿ 50 ಲಕ್ಷ) ದೇವರ ವಾಕ್ಯವನ್ನು ಪರೀಕ್ಷಿಸುತ್ತಾ ಮುಂದುವರಿಯುತ್ತಿದೆ. ಮಿಲ್ಯಾಂತರ ಜನರು, ಅದು ಅಧ್ಯಯನ, ತಿಳುವಳಿಕೆ ಮತ್ತು ಬೈಬಲ್ ಬೋಧನೆಗಳ ಅನ್ವಯದಲ್ಲಿ ಒದಗಿಸುವ ಸಹಾಯವನ್ನು ಗಣ್ಯ ಮಾಡಲು ಕಲಿತಿದ್ದಾರೆ.
ರಸೆಲ್, ದೇವರನ್ನು ಸಮೀಪಿಸುವ ಪ್ರತ್ಯೇಕ ಮಾರ್ಗವನ್ನು ಸಾರದೆ ಮತ್ತು ದೈವಿಕ ದರ್ಶನ ಹಾಗೂ ಪ್ರಕಟನೆಗಳು ತನಗೆ ದೊರಕಿವೆ ಎಂದು ಹೇಳಿಕೊಳ್ಳದೆ, ಗುಪ್ತ ಪುಸ್ತಕಗಳಿಂದ ಯಾ ಇತರ ವಿಧಗಳಿಂದ ರಹಸ್ಯ ಸಂದೇಶಗಳನ್ನು ಕಂಡುಹಿಡಿಯದೆ ಮತ್ತು ದೈಹಿಕ ರೋಗಿಗಳನ್ನು ತಾನು ವಾಸಿಮಾಡಶಕ್ತನೆಂದು ವಾದಿಸದೆ, ಹೀಗೆ, ತನ್ನ ಸುಧಾರಣಾ ಮನಸ್ಸಿನ ಸಮಕಾಲೀನರಿಗೆ ಬೇರೆಯಾಗಿದ್ದರು. ಇದಲ್ಲದೆ, ತಾನು ಬೈಬಲನ್ನು ವಿವರಣೆ ಮಾಡಬಲ್ಲೆ ಎಂದು ಅವರು ವಾದಿಸಲಿಲ್ಲ. ದೈವಿಕ ಹಸ್ತಗಳಲ್ಲಿ ಸಿದ್ಧ ಉಪಕರಣವಾಗಿದ್ದ ಅವರು, “ತನ್ನ ಸ್ವಂತ ಮೋಂಬತ್ತಿ” ಯನ್ನು ದೈವಿಕ ಬೆಳಕಿಗಿಂತ ಹೆಚ್ಚು ಬೆಳಗಿಸುವ ಸರ್ವ ಶೋಧನೆಗಳನ್ನು ನಿರೋಧಿಸಿದರು.
“ಸತ್ಯದ ಸೇವಕನನ್ನಲ್ಲ, ಸತ್ಯವನ್ನು ಸನ್ಮಾನಿಸಿ ಘೋಷಿಸಬೇಕು” ಎಂದು ರಸೆಲ್ 1900ರಲ್ಲಿ ಬರೆಯುತ್ತಾ ಮತ್ತೆ ಹೇಳಿದ್ದು: “ಸಕಲ ಸತ್ಯ ದೇವರಿಂದ ಬರುತ್ತದೆ ಮತ್ತು ತನ್ನ ಇಚ್ಫೆಯಂತೆ ಆತನು, ಒಬ್ಬ ಯಾ ಇನ್ನೊಬ್ಬ ಸೇವಕನು ಅದನ್ನು ಸಾರುವಂತೆ ಉಪಯೋಗಿಸುತ್ತಾನೆ ಎಂಬುದನ್ನು ಮರೆತು ಸತ್ಯಕ್ಕೆ ಕೊಡುವ ಪ್ರಶಸ್ತಿಯನ್ನು ಅದರ ಉಪದೇಶಿಗೆ ಕೊಡುವ ಪ್ರವೃತ್ತಿ ತುಂಬಾ ಇದೆ.” ವಾಚ್ಟವರ್ ಪ್ರಕಟನೆಗಳ ಹಾಗೂ ನ್ಯೂ ವರ್ಲ್ಡ್ ಬೈಬಲ್ ಟ್ರಾನ್ಸ್ಲೇಶನ್ ಕಮಿಟಿಯ ಸದಸ್ಯರು ಅನಾಮಧೇಯರಾಗಿ ಉಳಿಯಲು ನಿರ್ಧರಿಸಿರುವುದಕ್ಕೆ ಪ್ರಧಾನ ಕಾರಣ ಇದೇ.
ದೇವರ ಅರಸನು ಸಿಂಹಾಸನವೇರಿಸಲ್ಪಟ್ಟದ್ದು!
ಒಂದನೆಯ ಶತಮಾನದಲ್ಲಿ, ಸ್ನಾನಿಕ ಯೋಹಾನನು ದೇವರ ನಿಯಮಿತ ರಾಜನಾಗಿ ಯೇಸು ತೋರಿಬರಲಿದ್ದುದನ್ನು ಪ್ರಕಟಿಸಿದನು. 19ನೆಯ ಶತಮಾನದಲ್ಲಿ, ಈ ರಾಜನು ಸ್ವರ್ಗೀಯ ಅಧಿಕಾರದಲ್ಲಿ ತೋರಿಬರುವ ಸನ್ನಿಹಿತ್ಯವನ್ನು ಸಾರುವ ಸಮಯ ಬಂತು. ಸೈಅನ್ಸ್ ವಾಚ್ ಟವರ್ ತನ್ನ 1880ರ ಮಾರ್ಚ್ ಸಂಚಿಕೆಯಲ್ಲಿ ತಿಳಿಸಿದ್ದು: “‘ಯೆಹೂದ್ಯೇತರರ ಸಮಯಗಳು’ 1914ರ ವರೆಗೆ ಚಾಚುತ್ತವೆ, ಮತ್ತು ಅದುವರೆಗೆ ಸ್ವರ್ಗೀಯ ರಾಜ್ಯಕ್ಕೆ ಪೂರ್ಣ ಪ್ರಭುತ್ವವಿರುವುದಿಲ್ಲ.”
ಹೀಗೆ, ಇಂದು ಯೆಹೋವನ ಸಾಕ್ಷಿಗಳೆಂದು ಪ್ರಸಿದ್ಧರಾಗಿರುವ ಗುಂಪು, ನೂರಕ್ಕೂ ಹೆಚ್ಚು ವರ್ಷಗಳಿಗೆ ಹಿಂದೆ, 1914ನೇ ವರ್ಷವು ದೇವರ ರಾಜ್ಯದ ಪ್ರಾರಂಭವನ್ನು ಸೂಚಿಸುವ ವರ್ಷವೆಂದು ಸಾರ್ವಜನಿಕ ದಾಖಲೆಯ ರೂಪದಲ್ಲಿ ತಿಳಿಸಿತು. ದೇವರ ರಾಜನ ಸಿಂಹಾಸನಾರೋಹಣವು ಸುಳ್ಳು ಧರ್ಮವು ಇನ್ನು ಮುಂದೆ ದೈವಿಕ ಬೆಳಕನ್ನು ಮಬ್ಬಾಗಿಸದಂತೆ ಅದರ ಮಿನುಗುವ ಮೋಂಬತಿಯ್ತ ಅಂತಿಮ ನಂದಿಸುವಿಕೆಗೆ ಪ್ರಥಮ ಹೆಜ್ಜೆಯಾಗಿತ್ತು.
ಹತ್ತೊಂಭತ್ತನೆಯ ಶತಕ ಅಂತ್ಯಗೊಂಡಾಗ, ತಾನು ದೇವರ ಸೇವಕನೆಂದು ಗುರುತಿಸಿಕೊಳ್ಳಲು ಕ್ರೈಸ್ತ ಪ್ರಪಂಚದ ಧರ್ಮಕ್ಕೆ ಯಾವ ಉಡುಪೂ ಇರಲಿಲ್ಲ. ಅದು ದೇವರು ತ್ಯಜಿಸಲು ಅರ್ಹವಾಗಿತ್ತು. ಅದರ ನ್ಯಾಯತೀರ್ಪಿನ ಸಮಯ ಸಮೀಪಿಸುತ್ತಿತ್ತು. ಇದರ ಬಗ್ಗೆ ಹೆಚ್ಚನ್ನು ನಮ್ಮ ಮುಂದಿನ ಸಂಚಿಕೆಯಲ್ಲಿ ಕಲಿಯಿರಿ. (g89 10/22)
[ಪುಟ 18 ರಲ್ಲಿರುವಚಿತ್ರ]
ರೊಸೆಟ ಅಗ್ನಿಶಿಲೆ ಬೈಬಲಿನ ಸತ್ಯವನ್ನು ದೃಢಪಡಿಸಲು ಸಹಾಯ ಮಾಡಿಯದೆ
Box on page : Three paragraphs are missing in archives
[ಕೃಪೆ]
Courtesyof the Trustees of the British Museum