ಪೋಲೆಂಡ್ ಯೆಹೋವನ ಸಾಕ್ಷಿಗಳ ಅತಿಥೇಯ
ಅಗೋಸ್ತು 1989 ರಲ್ಲಿ ಅಂತರ್ರಾಷ್ಟ್ರೀಯ ಶಾಂತಿ ಮತ್ತು ಐಕ್ಯತೆಯ ಅತಿ ಗಮನಾರ್ಹವಾದ ಪ್ರದರ್ಶನವು ಪೋಲೆಂಡಿನಲ್ಲಿ ಜರಗಿತು. ಯೆಹೋವನ ಸಾಕ್ಷಿಗಳ “ದೇವಭಕ್ತಿ” ಸಮ್ಮೇಲನವು ಪೋಲೆಂಡಿನ ಪೊಜ್ನಾನ್ ಮತ್ತು ಚಾರ್ಜೊವ್ ನಗರಗಳಲ್ಲಿ ಅಗೋಸ್ತ್ 2-4 ರಲ್ಲಿ ಮತ್ತು ವಾರ್ಸೋ ದಲ್ಲಿ ಅಗೋಸ್ತ್ 9-11 ರಲ್ಲಿ ಜರಗಿದ ಸಂದರ್ಭದಲ್ಲಿಯೇ.
ಈ ಅಧಿವೇಶನವು ಇಷ್ಟೊಂದು ವಿಷೇಶತೆಯದ್ದಾಗಿ ಮಾಡಿದ್ದಾದರೂ ಏನು? ಆಧುನಿಕ ದಿನಗಳಲ್ಲಿ ಯೆಹೋವನ ಸಾಕ್ಷಿಗಳು ದೊಡ್ಡ, ಹೆಚ್ಚು ಸಮಯದ ಹಾಗೂ ಅಧಿಕ ಸಂಖ್ಯೆಯ ಜನಾಂಗಗಳನ್ನು ಪ್ರತಿನಿಧಿಸುವ ಸಮ್ಮೇಲನಗಳನ್ನು ನಡಿಸಿರುತ್ತಾರೆ. ಆದರೆ 1,66,000 ಅಧಿಕ ಸಂಖ್ಯೆಯ ವ್ಯಕ್ತಿಗಳು, ಕ್ರೈಸ್ತ ಐಕ್ಯತೆಯಿಂದ ವ್ಯಕ್ತಗೊಂಡ ಇಂತಹ ಉತ್ಸಾಹ ಮತ್ತು ಕ್ರೈಸ್ತ ಪ್ರೀತಿಯು ಅಷ್ಟೊಂದು ರೀತಿಯ ಹಠಾತ್ತನೆ ಪ್ರಕಟನೆಯಿಂದ ಗುರುತಿಸಲ್ಪಟ್ಟದ್ದು ಯಾವುದೇ ಅಧಿವೇಶನದಲ್ಲಿ ಅತಿ ವಿರಳವೆಂದು ನಿಮಗೆ ಹೇಳುವರು.
‘ನೂತನ ಲೋಕ ಮಾತ್ರ ಇದಕ್ಕಿಂತ ಉತ್ತಮ’
ಕಡಿಮೆಪಕ್ಷ 37 ಜನಾಂಗಗಳಿಂದ ಪ್ರತಿನಿಧಿ ತಂಡಗಳೊಂದಿಗೆ ಇನ್ನಿತರ ಅನೇಕರು ಒಬ್ಬೊಬ್ಬರಾಗಿಯೂ ಹಾಜರಿದ್ದರು. ಕಾರ್ಯಕ್ರಮದಲ್ಲಿ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ 5 ಸದಸ್ಯರು ಭಾಗವಹಿಸಿದರು. ಪಶ್ಚಿಮ ಯುರೋಪ್, ಅಮೇರಿಕ ಮತ್ತು ಜಪಾನಿನಿಂದ ಅತಿಥಿಗಳು ಬಂದಿದ್ದು, ಪೋಲೆಂಡಿನಲ್ಲಿ ನಿಭಾಯಿಸಲ್ಪಟ್ಟ ಅತಿ ದೊಡ್ಡ ಅಂತರ್ರಾಷ್ಟ್ರೀಯ ಪ್ರಯಾಣಿಕರನ್ನಾಗಿ ಇದು ಮಾಡಿತ್ತು.
ಸೋವಿಯೆಟ್ ರಶ್ಯಾದಿಂದ ಮತ್ತು ಜೆಕೆಸ್ಲೋವೇಕಿಯದಿಂದ ಹಾಗೂ ಇತರ ಪೂರ್ವ ಯುರೋಪ್ ದೇಶಗಳಿಂದ ಸಾವಿರಾರು ಮಂದಿ ಬಂದಿದ್ದರು. ಅವರು ಕಳೆದ 30 ಯಾ ಹೆಚ್ಚು ವರ್ಷಗಳಿಂದ ಸಾಕ್ಷಿಗಳಾಗಿದ್ದರೂ ಕೂಡ ಇದು ಅವರ ಮೊದಲ ಅಧಿವೇಶನವಾಗಿತ್ತು. ಸೋವಿಯೆಟ್ ರಶ್ಯಾದ ಕಜಕಸ್ಥಾನ್ದ ಪ್ರತಿನಿಧಿಯೊಬ್ಬನಿಂದ ಮೊದಲಬಾರಿ ತಮ್ಮ ಕ್ರೈಸ್ತ ಸಹೋದರರೊಂದಿಗೆ ಜತೆಗೂಡುವದರಿಂದ ಉಂಟಾದ ಭಾವನೆಗಳನ್ನು, ಉತ್ತಮವಾಗಿ ಸಾರಾಂಶಿಸಲ್ಪಟ್ಟು ಹೇಳಲಾಗಿದೆ:
“ಈ ದಿನಕ್ಕಾಗಿ ನಾವು ಅನೇಕ ವರ್ಷಗಳಿಂದ ಕಾದು ನಿಂತಿದ್ದೆವು, ಮತ್ತು ನಾವೀಗ ಈ ಅಂತರ್ರಾಷ್ಟ್ರೀಯ ಅಧಿವೇಶನದಲ್ಲಿದ್ದೇವೆ. ಇವೆಲ್ಲವನ್ನು ನಾವು ಗ್ರಹಿಸಿಕೊಳ್ಳಲೂ, ಎಲ್ಲವನ್ನು ಸ್ವೀಕರಿಸಲೂ ನಮಗೆ ಕಷ್ಟವೆಂದು ಭಾಸವಾಗುತ್ತದೆ. ಇದೊಂದು ಕನಸಿನೋಪಾದಿ ಇದೆ. ನಾವು ನೋಡಿದ ಮತ್ತು ಕೇಳಿದ ಎಲ್ಲವನ್ನು ಮಾತುಗಳಲ್ಲಿ ವ್ಯಕ್ತಪಡಿಸಲು ಅಸಾಧ್ಯವೇ ಸರಿ. ಬೋಗುಣಿಯಾಕಾರದ ವಿಸ್ತಾರವಾದ ಸ್ಟೇಡಿಯಂನಲ್ಲಿ ಜನ ತುಂಬಿರುವದನ್ನು ನೋಡುವಾಗ ಮತ್ತು ಸಂಗೀತವನ್ನು ಕೇಳಿದಾಗ, ನಮ್ಮ ಕಣ್ಣುಗಳು ಕಣ್ಣೀರಿನಿಂದ ತೋಯಿಸಲ್ಪಟ್ಟವು. ನಿಶ್ಚಂಚಲವಾಗಿ ಐಕ್ಯತೆಯಿಂದ ನಾವೆಲ್ಲರೂ ನಿಂತು ಪ್ರಾರ್ಥಿಸಿದಾಗ, ಅದು ನಮ್ಮ ಬೆನ್ನುಗಳಲ್ಲಿ ತಣ್ಣಗಿನ ಕಂಪನವನ್ನೆಬ್ಬಿಸಿತು. ಇದು ಅಷ್ಟೊಂದು ಪವಿತ್ರ ಗಂಭೀರತೆಯದ್ದು, ಐಕ್ಯಮತದ್ದು ಆಗಿತ್ತು. ಈ ವಾರ್ಸೋದ ಅಧಿವೇಶನವು ಎಷ್ಟೊಂದು ಉತ್ಕೃಷ್ಟ ಮತ್ತು ಘನಗಾಂಭೀರ್ಯದ ಘಟನೆಯಾಗಿತ್ತೆಂದರೆ, ಕೇವಲ ನೂತನ ಲೋಕ ಮಾತ್ರ ಅದಕ್ಕಿಂತ ಉತ್ತಮವಾಗಿರಬಲ್ಲದು. ಈ ಆಶ್ಚರ್ಯಕರ ದಿನಗಳನ್ನು ನಾವು ಸದಾ ನೆನಪಿಸುವೆವು.”
ಹತ್ತಾರು ಸಾವಿರ ಜತೆ ಸಾಕ್ಷಿಗಳನ್ನು ಅಧಿವೇಶನದಲ್ಲಿ ಮೊದಲಾಗಿ ಕಾಣುವಾಗ, ಅನೇಕ ಸಂದರ್ಶಕರು ದೃಶ್ಯವಾಗಿ ಪ್ರೇರಿಸಲ್ಪಟ್ಟರು. ವಾರ್ಸೋದಲ್ಲಿ ಅವರು 5 ನಿಮಿಷಕ್ಕಿಂತಲೂ ಹೆಚ್ಚುಕಾಲ ಇಡೀ ಸ್ಟೇಡಿಯಂನಲ್ಲಿ ಕೈಚಪ್ಪಾಳೆಯ ಅಲೆಯನ್ನು ಬೀಸಿದರು. ಪಶ್ಚಿಮ ಯುರೋಪಿನ ಪ್ರತಿನಿಧಿಯೊಬ್ಬನು ಅಂದದ್ದು: “ಆ ಕ್ಷಣ ಕೆಲವರು ಮಾತ್ರ ಬಿಸಿ ಹವಾಮಾನ, ಯಾ ಗಟ್ಟಿಯಾದ ಬೆಂಚುಗಳು ಯಾ ಮೆದು ಕುರ್ಚಿಗಳಿಗಾಗಿ ಮನೆಗೆ ಹೋಗುವುದನ್ನು ನೆನಸುತ್ತಿದ್ದರು. ಅವರು ಹೆಚ್ಚು ಉಪದೇಶ ಮತ್ತು ಪ್ರೀತಿಯ ಸಹವಾಸವನ್ನು ಬಯಸಿದ್ದರು.”
ತಮ್ಮ ಸ್ವಂತ ದೇಶಗಳಿಂದ ಪ್ರತಿಯೊಂದು ದಿನ ವಿದೇಶದ ಪ್ರತಿನಿಧಿಗಳು ಅನುಭವವನ್ನು ತಿಳಿಸಿದರು. ಅಂತಹ ಕೊನೆಯ 24 ವರದಿಗಳನ್ನು ಸೋವಿಯೆಟ್ ರಶ್ಯಾದಿಂದ ಬಂದ ಒಬ್ಬ ಪ್ರತಿನಿಧಿಯಿಂದ ವಾರ್ಸೋಗಾಗಿ ಅಮಾನತು ಮಾಡಲಾಗಿತ್ತು. ಅವನು ಆರಂಭಿಸಿದ್ದು: “ನಿಮ್ಮ ಮಧ್ಯದಲ್ಲಿರ ಸಾಧ್ಯವಾದದ್ದಕ್ಕಾಗಿ ನಮ್ಮ ಸಂತೋಷವನ್ನು ವ್ಯಕ್ತಪಡಿಸಲು ನಮ್ಮಲ್ಲಿ ಸಾಕಷ್ಟು ಶಬ್ದಗಳಿಲ್ಲ. ನಮ್ಮಲ್ಲಿ ಇಷ್ಟೊಂದು ಮಂದಿ ಇಲ್ಲಿ ಬರಲು ಶಕ್ತರಾದದ್ದಕ್ಕಾಗಿ ನಾವು ಬಹಳ ಗಣ್ಯಮಾಡುತ್ತೇವೆ. ಮತ್ತು ನೀವು ಬಹಳ ಉತ್ತಮ ಅತಿಥೇಯರಾಗಿ ನಮ್ಮನ್ನು ಸ್ವೀಕರಿಸಿದ್ದೀರಿ. ಸಹೋದರರಾದ ನಿಮ್ಮಲ್ಲನೇಕರೊಂದಿಗೆ ನಮಗೆ ವ್ಯಕ್ತಿಗತ ಸಂಬಂಧವಿಟ್ಟುಕೊಳ್ಳಲು ಆದದ್ದಕ್ಕಾಗಿಯೂ ನಾವು ಸಂತೋಷಿಸುತ್ತೇವೆ. ನಮ್ಮಲ್ಲಿ ಕೆಲವರು ಆರು ದಿನ ರೈಲು ಪ್ರಯಾಣ ಮಾಡಿ ಫೆಸಿಫಿಕ್ ಸಾಗರದ ತೀರದಲ್ಲಿರುವ ವ್ಲಡಿವಸ್ಟೊಕ್ನಂತಹ ದೂರದ ಸ್ಥಳದಿಂದ ಬಂದಿರುತ್ತೇವೆ. ಒಂದೇ ಸಮಯದಲ್ಲಿ ನಮ್ಮಲ್ಲನೇಕರು ಬಯಸಿದ್ದರಿಂದ ಟಿಕೇಟುಗಳನ್ನು ಪಡೆಯಲು ತಾಪತ್ರಯ ಕೆಲವರಿಗುಂಟಾಯಿತು, ಯಾಕಂದರೆ ಅಲ್ಲಿ ಇಂತಿಷ್ಟೇ ಆಸನಗಳು ದೊರೆಯುತ್ತಿದ್ದವು. ಆದರೆ ಯೆಹೋವನ ಸಹಾಯದಿಂದ ನಾವದನ್ನು ನಿಭಾಯಿಸಶಕ್ತರಾದೆವು.”
ತಕ್ಕದಾಗಿಯೇ, ಆದಿತ್ಯವಾರದ ತನ್ನ ಸಮಾಪ್ತಿಯ ಹೇಳಿಕೆಗಳಲ್ಲಿ ಆಡಳಿತ ಮಂಡಲಿಯ ಸದಸ್ಯರೊಬ್ಬರು, ಈ ಅಧಿವೇಶನಗಳಿಗೆ ಹಾಜರಾಗಲು ತಮ್ಮ ದೇಶಗಳಿಂದ ಇಷ್ಟೊಂದು ಮಂದಿ ಯೆಹೋವನ ಸಾಕ್ಷಿಗಳು ಹಾಜರಾಗುವಂತೆ ಅನುಮತಿಸಿದ್ದಕ್ಕಾಗಿ ಪೂರ್ವ ಯುರೋಪಿನ ದೇಶಗಳನ್ನು ವಂದಿಸಿದರು.
ಐಕ್ಯತೆಯ ಒಂದು ಸಹೋದರತ್ವ
ಪೋಲಿಶ್ ಅಧಿವೇಶನಗಳ ತನ್ನ ಅನುಭವಗಳನ್ನು ವಿವರಿಸುತ್ತಾ ಒಬ್ಬಳು ಸಾಕ್ಷಿ ಹೇಳಿದ್ದು: “ಅದು ವಿಪರ್ಯಸ್ತವಾದ ಬಾಬೇಲಿನಂತಿತ್ತು.” ಜನರು ವಿವಿಧ ಭಾಷೆಗಳನ್ನಾಡಲು ಆರಂಭಿಸಿದಾಗ, ಬಾಬೆಲ್ ಗೋಪುರದಲ್ಲಿ ಅನೈಕ್ಯತೆ ಮತ್ತು ಗಲಿಬಿಲಿಯು ತಲೆದೋರಿದಲ್ಲಿ, ಇಲ್ಲಿ ಯೋಚನೆ, ನಡತೆ ಮತ್ತು ಕ್ರಿಯೆಗಳಲ್ಲಿ, ಭಾಷೆಯ ಸಮಸ್ಯೆ ಇದ್ದರೂ, ಐಕ್ಯತೆಯು ಅದ್ಭುತ ರೀತಿಯಲ್ಲಿ ತೋರಿಬರುತ್ತಿತ್ತು.—ಆದಿಕಾಂಡ 11:1-9.
ವಿಭಿನ್ನ ರಾಷ್ಟ್ರೀಯತೆಗಳ ಜತೆ ವಿಶ್ವಾಸಿಗಳಲ್ಲಿದ್ದ ಈ ಐಕ್ಯತೆಯು ಹೊರಗಿನವರಿಂದ ಗಮನಿಸಲ್ಪಡದೇ ಹೋಗಲಿಲ್ಲ. ಸ್ಟಾಂಡರ್ ಮೊಡಿಶ್ ಅವಲೋಕಿಸಿದ್ದು: “ವಾರ್ಸೋ ವಿಮಾನ ನಿಲ್ದಾಣಕ್ಕೆ ಬಂದ ವಿಮಾನ ಯಾತ್ರಿಕರಲ್ಲಿ ಗಲಿಬಿಲಿಗೊಳ್ಳದೆ ಇದ್ದವರು ಯಾ ಗುಂಪಿನಲ್ಲಿ ಕಳಕೊಂಡೆವೆಂಬ ಭಾವನೆಯಿಲ್ಲದವರು ಕೇವಲ ಯೆಹೋವನ ಸಾಕ್ಷಿಗಳು ಮಾತ್ರ. ಜತೆ ವಿಶ್ವಾಸಿಗಳು ಅನೇಕ ಭಾಷೆಗಳಲ್ಲಿ ಸಿದ್ಧಪಡಿಸಿದ ಪ್ರಕಟನೆಗಳೊಂದಿಗಿದ್ದರು, ವಿಚಾರ ನೀಡುವ ಡೆಸ್ಕುಗಳು ಮತ್ತು ಸೂಚಕ ಫಲಕಗಳು ಮತ್ತು ನಗರಕ್ಕೆ ಸಾರಿಗೆಯನ್ನು ಒದಗಿಸಿದ್ದರು.”
ಸುಮಾರು 20 ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಹತ್ತಾರು ಸಾವಿರಾರು ಮಂದಿ ಏಕ ಸ್ವರದಲ್ಲಿ ಹಾಡಿದಾಗ, ಅಧಿವೇಶನದ ಹಾಡುವಿಕೆ ಗಮನಾರ್ಹವಾಗಿತ್ತು. ಎಲ್ಲರೂ ಪ್ರೀತಿ ಮತ್ತು ಐಕ್ಯತೆ ಆತ್ಮದಲ್ಲಿ ಒಂದೇ ವಿಚಾರವನ್ನು ವ್ಯಕ್ತಪಡಿಸುತ್ತಿದ್ದರು. ಅಲ್ಲದೇ, ವಾರ್ಸೋದ ಕಾರ್ಯಕ್ರಮದ ಕೆಲವು ಭಾಗಗಳನ್ನು 16 ಭಾಷೆಗಳಲ್ಲಿ (ಪೊಜ್ನಾನಿನಲ್ಲಿ 13 ಮತ್ತು ಚಾರ್ಜೊವ್ನಲ್ಲಿ 15) ತರ್ಜುಮೆ ಮಾಡಲಾಯಿತು. ಪೋಲೆಂಡ್ ಇಂತಹದನ್ನು ಎಂದೂ ಕಂಡಿರಲಿಲ್ಲ.
ಈ 16 ಭಾಷಾಂತರಗಾರರು, ಅವರ ನಿರ್ದಿಷ್ಟ ಭಾಷಾಗುಂಪಿನ ಎದುರುಗಡೆ ಕ್ಷೇತ್ರದಲ್ಲಿ ನಿಂತಿದ್ದರು. ವೇದಿಕೆಯಿಂದ ಭಾಷಣಕರ್ತನು ಮಾತಾಡಿದಾಗ, ಸ್ಟೇಡಿಯಂನ ಆ ನಿರ್ದಿಷ್ಟ ವಿಭಾಗದಲ್ಲಿರುವ ಸಭಿಕರಿಗೆ ಭಾಷಾಂತರಗಾರನು ಭಾಷಾಂತರಿಸುತ್ತಿದ್ದನು. ದ್ವನಿವರ್ಧಕಗಳು ಒಂದು ನಿರ್ದಿಷ್ಟ ಭಾಷಾ ವಿಭಾಗಕ್ಕೆ ನೇರವಾಗಿ ಅಳವಡಿಸಿದ್ದರಿಂದ ಇತರ ಭಾಷೆಗಳ ತರ್ಜುಮೆಯಿಂದ ಅನಾವಶ್ಯಕ ತೊಂದರೆಗೊಳಿಸಲ್ಪಡಲಿಲ್ಲ.
ಗಂಭೀರವಾದ ಆರ್ಥಿಕ ಸಮಸ್ಯೆಗಳು ಪೋಲೆಂಡಿನಲ್ಲಿರುವುದಾದರೂ, ಪೋಲಿಶ್ ಸಹೋದರರರಿಂದ ಸಾವಿರಾರು ಸಂದರ್ಶಕರಿಗೆ ಖಾಸಗೀ ವಸತಿ ಸೌಕರ್ಯವು ಒದಗಿಸಲ್ಪಟ್ಟಿತು. ಪೊಜ್ನಾನಿನಲ್ಲಿ 16 ಸಾವಿರ ಮಂದಿಗೆ, ವಾರ್ಸೋದಲ್ಲಿ 21,000 ಮಂದಿಗೆ ಮತ್ತು ಚಾರ್ಜೊನ್ನಲ್ಲಿ 30,000 ಮಂದಿಗೆ ಸಹೋದರರಿಂದಲೇ ವಸತಿ ನೀಡಲ್ಪಟ್ಟಿತು. ಒಂದು ಕುಟುಂಬವು 18 ಮಂದಿಗೆ ನಿಲ್ಲಿಸಿ, 21 ಮಂದಿಗೆ ಆಹಾರ ಒದಗಿಸಿತು. 146 ಸಾಕ್ಷಿಗಳಿರುವ ಒಂದು ಸಭೆಯು 1,276 ಮಂದಿಗೆ ವಸತಿ ಸೌಕರ್ಯ ಒದಗಿಸಿತು!
ಉತ್ತಮ ರೀತಿಯಲ್ಲಿ ವಾರ್ತೆಗಳ ಆವರಿಸುವಿಕೆ
ಟೆಲಿವಿಶನ್, ರೇಡಿಯೋ ಮತ್ತು ವಾರ್ತಾ ಪತ್ರಿಕೆಗಳ ವರದಿಗಳು ಅಧಿಕಾಂಶ ವಾಸ್ತವವೂ ನಿಷ್ಪಕ್ಷವಾತವೂ ಆಗಿದ್ದವು. ಅದರ ಮುಖ್ಯ ಶೀರ್ಷಿಕೆಯಲ್ಲಿ “ಯೆಹೋವನ ಸಾಕ್ಷಿಗಳು ತಮ್ಮ ಧರ್ಮವನ್ನು 212 ದೇಶಗಳಲ್ಲಿ ಆಚರಿಸುತ್ತವೆ” ಎನ್ನುತ್ತಾ ಪೋಲಿಶ್ ಪ್ರಕಾಶನ ಸ್ಟಾಂಡರ್ ಮೊಡಿಶ್ ಅದರ ಲೇಖನದಲ್ಲಿ “ಸುಸಂಗತ” “ಶಿಸ್ತುಬದ್ಧತೆ” “ನಯ ಸಭ್ಯತೆ” ಮತ್ತು “ಶ್ರಮೆಯ ದುಡಿಮೆ” ಎಂಬಂತ ಉಪನಾಮಗಳನ್ನುಪಯೋಗಿಸಿ ಅವರನ್ನು ಹೊಗಳಿತು. ವಾರ್ಸೋ ಸ್ಟೇಡಿಯಂ ಕುರಿತು ಅದು ಅಂದದ್ದು: “ಒಂದೇ ಒಂದು ಸಿಗರೇಟಿನ ತುಂಡಾಗಲಿ, ಅಂಕೆಯಲ್ಲಿಲ್ಲದ ಮಗುವಿನಿಂದ ಒಂದು ಪೇಪರ್ ತುಂಡಾಗಲಿ ಇರಲಿಲ್ಲ. ಯೆಹೋವನ ಸಾಕ್ಷಿಗಳು ಹೊಗೆಬತ್ತಿ ಸೇದುವುದಿಲ್ಲ ಮತ್ತು ಅವರ ಮಕ್ಕಳು ಅಂಕೆಯಲ್ಲಿಲ್ಲದವರಲ್ಲ.”
ಜೈಸೀ ವಾರ್ಸಾವಿ ವಾರ್ತಾಪತ್ರವು, ಇಡೀ ವರ್ಷ ಅಧಿವೇಶನದ ತಯಾರಿಗಳು ಜ್ಯಾರಿಯಲ್ಲಿದ್ದವೆಂದು ಹೇಳುತ್ತಾ, ಅಂದದ್ದು: “ಇತರ ಸಂಗತಿಗಳೊಂದಿಗೆ, ಎಲ್ಲಿ ಅಧಿವೇಶನಗಳು ಜರಗಿದವೋ ಅಲ್ಲಿಯ ಸ್ಟೇಡಿಯಂಗಳು ಪುನ: ಪರಿಸ್ಥಿತಿಗೆ ತರಲ್ಪಟ್ಟವು.”
ಎಕ್ಸ್ಪ್ರೆಸ್ ವಿಯಜೊರ್ನಿ ವಾರ್ತಾಪತ್ರಿಕೆ ವರದಿಮಾಡಿದ್ದು: “ಅವಲೋಕಿಸುವವರೆಲ್ಲರಿಗೆ ತೋಚಿದ್ದು ಏನಂದರೆ ಸ್ಟೇಡಿಯಂ ನಲ್ಲಿ ನೆಲೆಸಿದ್ದ ಶಿಸ್ತು ಬದ್ಧತೆ. ನೇಮಿತ ಸ್ಥಳಗಳಲ್ಲಿ ಕಚಡಗಳನ್ನು ಬಿಸಾಡುವುದು, ತಾತ್ಕಾಲಿಕವಾದರೂ ಸ್ವಚ್ಛ ಪಾಯಿಖಾನೆಗಳು, ಅನೇಕ ಸಮಾಚಾರ ನಿಲುವುಗಳು—ಅಲ್ಲಿದ್ದದ್ದೆಲ್ಲಾ ಅಚ್ಚರಿಯನ್ನುಂಟುಮಾಡುತ್ತಿತ್ತು.” ಇದನ್ನು ಪೂರೈಸಲು ವಾರ್ಸೋ ಸ್ಟೇಡಿಯಂನ್ನು ಅಣಿಗೊಳಿಸಲು ಮತ್ತು ಶೃಂಗರಿಸಲು 3,500 ಕ್ಕಿಂತಲೂ ಹೆಚ್ಚಿನವರು ತಮ್ಮ ಸಮಯವನ್ನು ವ್ಯಯಿಸಿದ್ದರು.
ವಾರ್ತಾ ಪತ್ರಿಕೆಯ ಕೆಲವು ಪ್ರತಿನಿಧಿಗಳೊಂದಿಗೆ ಸಂದರ್ಶನ ನಡಿಸಿ, ಅವರಿಗೆ ಕೇಳಿದ್ದು: “ವಾರ್ಸೋ ಸಮ್ಮೇಲನ ನಿಮಗೆ ಯಾವ ಅರ್ಥದಲ್ಲಿರುತ್ತದೆ?” ಪೋಲಿಶ್ ಸಾಕ್ಷಿಯೊಬ್ಬನು ಅಂದದ್ದು: “ಒಂದು ಧಾರ್ಮಿಕ ಸಂಘಟನೆಯಾಗಿ ಯೆಹೋವನ ಸಾಕ್ಷಿಗಳು ಅಧಿಕೃತವಾಗಿ ಮನ್ನಣೆ ಪಡೆದಂತಹ ಜೆಕಸ್ಲೋವಾಕಿಯ ಮತ್ತು ಸೋವಿಯೆಟ್ ರಶ್ಯಾ ದೇಶಗಳ ನಮ್ಮ ಸಹೋದರರನ್ನು ನಾನು ಭೇಟಿಯಾಗಶಕ್ತನಾಗಿರುವದೇ ನನ್ನಲ್ಲಿ ಪ್ರೇರಣೆಯನ್ನುಂಟು ಮಾಡಿದೆ.”
ಸೋವಿಯೆಟ್ ರಶ್ಯಾದ ಸಾಕ್ಷಿಯೊಬ್ಬನು ಹೀಗಂದದ್ದು ಉಲ್ಲೇಖಿಸಲ್ಪಟ್ಟಿತ್ತು: “ನನ್ನ ಜೀವನದ ಅತಿ ಮಹತ್ತಾದ ಅನುಭವ ಇದು ಎಂದು ನನ್ನೆಣಿಕೆ. . . . ಲೋಕದಲ್ಲೆಲ್ಲೂ ಇರುವ ನನ್ನ ಸಹೋದರರಲ್ಲಿ ಇಷ್ಟು ಮಂದಿಯನ್ನು ಭೇಟಿಯಾಗಲು ನಾನು ಶಕ್ತನಾದೆ. ಅಷ್ಟಲ್ಲದೆ, ಕೂಟಗಳನ್ನು ಅತ್ಯುತ್ತಮವಾಗಿ ಸಂಸ್ಥಾಪಿಸಲಾಗಿತ್ತು. ಭಾಷಣಗಳು 16 ಭಾಷೆಗಳಲ್ಲಿ ಭಾಷಾಂತರಿಸಲ್ಪಟ್ಟವು. ನಮ್ಮ ಪೋಲಿಶ್ ಸಹೋದರು ನಮ್ಮ ಅತಿಥೇಯರಾಗಿದ್ದರು—ನಿಜವಾಗಿಯೂ ಎಲ್ಲವೂ ಅದ್ಭುತವೇ ಸೈ.”
ಜೈಸೀ ವಾರ್ಸಾವಿ ಗಮನಿಸಿದ್ದು: “ವಾರ್ಸಾವಿನಲ್ಲಿ ಯೆಹೋವನ ಸಾಕ್ಷಿಗಳ ಲೋಕ ಅಧಿವೇಶನವು ಈಗ ಸಮಾಪ್ತಿಯಾಗಿದೆ. . . . ನಮಗೆ ತಿಳಿದಿರುವಂತೆ, ಪೋಲೆಂಡಿನಲ್ಲಿರುವ ಯೆಹೋವನ ಸಾಕ್ಷಿಗಳ ಧಾರ್ಮಿಕ ಸಂಘಟನೆಯು ಈಗ—ಅದರ ವಿಶ್ವಾಸಿಗಳ ಸಂಖ್ಯೆ 80 ಸಾವಿರಕ್ಕಿಂತಲೂ ಹೆಚ್ಚಾಗಿದೆa ಎಂದು ಕೆಲವು ತಿಂಗಳ ಹಿಂದೆ ದಾಖಲೆಯಾಗಿದೆ—ಇಂತಹ ಸಮ್ಮೇಲನಗಳನ್ನು ನಿಯೋಜಿಸಿದೆ. ಈ ಮೊದಲು ಕಾನೂನು ರೀತ್ಯ ಧಾರ್ಮಿಕ ಗುಂಪಾಗಿದ್ದ ಇದು, ಮೇ 12 ರಿಂದ ಕಾನೂನುಬದ್ಧ ಮಾನ್ಯತೆಯಿಂದ ಸಂತೋಷಿಸುತ್ತದೆ.”
ಈ ಪತ್ರಿಕೆಯು ಯೆಹೋವನ ಸಾಕ್ಷಿಗಳ ಅಧಿವೇಶನಗಳು “ಐಕ್ಯತೆಯ ಒಂದು ವ್ಯಕ್ತಪಡಿಸುವಿಕೆ” ಎಂದು ಹೇಳುತ್ತಾ ಅಂದದ್ದು: “ಶಿಸ್ತುಬದ್ಧತೆ, ಶಾಂತಿಯುಕ್ತತೆ, ಮತ್ತು ಸ್ವಚ್ಛತೆಯ ವಿಷಯದಲ್ಲಿ, ಅಧಿವೇಶನದಲ್ಲಿ ಭಾಗವಹಿಸಿದವರು ಅನುಕರಣೀಯ ಮಾದರಿಗಳಾಗಿದ್ದರು.”
ದೀಕ್ಷಾಸ್ನಾನ
ಪೋಲಿಶ್ ಭಾಷೆ ಗೊತ್ತಿರಲಿ, ಯಾ ಗೊತ್ತಿಲ್ಲದಿರಲಿ, ಪ್ರತಿಯೊಬ್ಬನು ದೀಕ್ಷಾಸ್ನಾನದ ರೊಮಾಂಚಗೊಳಿಸುವ ಪ್ರದರ್ಶನದಿಂದ ಪುಳಕಿತಗೊಂಡನು. ವಾರ್ಸೋದಲ್ಲಿ ದೀಕ್ಷಾಸ್ನಾನದ ಅಭ್ಯರ್ಥಿಗಳು ಕೂತುಕೊಳ್ಳುವಂತೆ ವೇದಿಕೆಯ ನೇರಮುಂದೆ ಆಟದ ಅಂಗಣದಲ್ಲಿ ಕುರ್ಚಿಗಳನ್ನು ಅಳವಡಿಸಲಾಗಿತ್ತು. ಆದರೆ ಬೆಳಗ್ಗಿನ ಕಾರ್ಯಕ್ರಮದ ಸಮಯ ಅಭ್ಯರ್ಥಿಗಳ ಗುಂಪು ಬೆಳೆಯಲಾರಂಭಿಸಿದಂತೆ ಹೆಚ್ಚೆಚ್ಚು ಕುರ್ಚಿಗಳನ್ನು ಅಂಗಣದಲ್ಲಿ ಇಡತೊಡಗಿದರು. ಆದರೆ ದೀಕ್ಷಾಸ್ನಾನದ ಭಾಷಣ ಆರಂಭವಾದಾಗ, ದೊಡ್ಡ ಪ್ರಮಾಣದ ಸಭಿಕರು ಶಾಂತರಾದರು. ಅವರೆಂದೂ ಮರೆಯದೇ ಇರುವದನ್ನು ಅವರೀಗ ಅನುಭವಿಸಲಿದ್ದರು. ಭಾಷಣಕರ್ತನು ದೀಕ್ಷಾಸ್ನಾನದ ಅಭ್ಯರ್ಥಿಗಳನ್ನು ಸುಸ್ವಾಗತಿಸಿದಂತೆ, ಹಠಾತ್ತನೇ ಇಡೀ ಸಭಿಕ ಸಮೂಹವು ಕೈಚಪ್ಪಾಳೆ ಹೊಡೆಯಲಾರಂಭಿಸಿತು, ಅನಂತರ ಮೊದಲೇ ಸಿದ್ಧಪಡಿಸಿದಂತೆ ತೋರಿದರೂ, ವಾಸ್ತವದಲ್ಲಿ ದೇವರಾತ್ಮದಿಂದ ಪ್ರಚೋದಿಸಲ್ಪಟ್ಟ, ಹೃದಯ ತುಂಬಿತುಳುಕುವುದರಿಂದಾಗಿ, ತಮ್ಮನ್ನು ಆವರಿಸಿದ, ಮಿತಿಮೀರಿದ ಸಭಿಕರನ್ನು, ಅಭ್ಯರ್ಥಿಗಳು ಉತ್ಸಾಹದಿಂದ, ತಮ್ಮ ಕೈಗಳನ್ನು ಅಲ್ಲಾಡಿಸುತ್ತಾ ಪ್ರತಿವಂದನೆ ಸಲ್ಲಿಸಿದರು.
ಅಭ್ಯರ್ಥಿಗಳಿಗೆ ಸಾಮಾನ್ಯವಾಗಿ ಕೇಳುವ ಎರಡು ಪ್ರಶ್ನೆಗಳಿಗೆ ಉತ್ತರವಾಗಿ ಅಭ್ಯರ್ಥಿಗಳ ನಂಬಿಕೆಯ ಬಹಿರಂಗ ಘೋಷಣೆಯು ಸ್ಪಷ್ಟವಾಗಿಯೂ ದೃಢತೆಯಿಂದಲೂ ಧ್ವನಿಸಲ್ಪಟ್ಟಿತು. ಮತ್ತು ಸಮರ್ಪಣೆಯ ಈ ಹೆಜ್ಜೆಗೆ ಅವರಲ್ಲಿ ಅನೇಕರು ಅನೇಕ ಕಷ್ಟ, ಶೋಧನೆಗಳನ್ನು ಜಯಿಸಿ ಬಂದವರಾಗಿದ್ದರು. ಪ್ರಾರ್ಥನೆಯ ನಂತರ, ಅಭ್ಯರ್ಥಿಗಳು ಎರಡು ಗುಂಪುಗಳಾಗಿ ಸ್ಟೇಡಿಯಂ ಹೊರನಡಿಯುತ್ತಿರುವಾಗವಾಗ ಸಭಿಕರು “ದೇವರಿಗೆ ನಾವು ಸಮರ್ಪಿತರು” ಎಂಬ ಸಂಗೀತವನ್ನು ಹಾಡಿದರು. ಅಂಗಣದಿಂದ ಒಂದು ಸುರಂಗದ ಮೂಲಕ ಸಹೋದರರು ಉಡುಪು ಬದಲಾಯಿಸುವ ಕೋಣೆಗಳಿಗೆ ನಡೆದಾಗ, ಸಹೋದರಿಯರು ಇನ್ನೊಂದು ಸುರಂಗದ ಮೂಲಕ ಅವರ ಕೋಣೆಗಳಿಗೆ ತಲಪಿದರು. ಎಟೆಂಡೆಂಟ್ಸ್ ಮತ್ತು ಸ್ನಾನಕೊಡುವವರೆಲ್ಲರೂ ಬಿಳಿ ಉಡುಪು ಧರಿಸಿದವರಾಗಿದ್ದು, ತಮ್ಮ ತಮ್ಮ ಸ್ಥಾನದಲ್ಲಿ ನಿಂತಾಗ, ಕೂಡಲೇ ಸಭ್ಯತೆಯ ಈಜು ಉಡುಗೆಗಳನ್ನು ಧರಿಸಿದ ಅಭ್ಯರ್ಥಿಗಳು ಪುನ: ಅಂಗಣದಲ್ಲಿ ಸಿದ್ಧಪಡಿಸಿದ 12 ದೀಕ್ಷಾಸ್ನಾನದ ಕೊಳಕ್ಕಾಗಿ—ಅಂಗಣದ ಒಂದು ಪಕ್ಕದಲ್ಲಿ 6 ಸಹೋದರಿಯರಿಗಾಗಿ, ಇನ್ನೊಂದು ಪಕ್ಕದಲ್ಲಿ 6 ಸಹೋದರರಿಗಾಗಿ—ಬರಲಾರಂಭಿಸಿದರು.
ವಾರ್ಸೋದಲ್ಲಿ 1,905 ಜನರು ಸ್ನಾನಪಡೆಯುವಾಗ 45 ನಿಮಿಷಗಳ ತನಕ ಉತ್ಸಾಹದ ಕೈಚಪ್ಪಾಳೆಗಳು ಮುಂದರಿದವು. (ಇದರ ಮೊದಲ ವಾರದಲ್ಲಿ ಪೋಜ್ನಾನಿನಲ್ಲಿ 1,525 ಮತ್ತು ಕಟೋವಿಸ್ನಲ್ಲಿ 2,663, ಒಟ್ಟಿಗೆ 6,093 ದೀಕ್ಷಾಸ್ನಾನಗಳು ಯಾ ಅತ್ಯುನ್ನತ ಹಾಜರಿಯ 3.7 ಸೇಕಡಾ ಜನರು.) ತಮ್ಮ ಗಾಲು ಕುರ್ಚಿಗಳಿಂದ ಇಬ್ಬರು ಹೆಳವರಾದ ಸಹೋದರರನ್ನು ದೀಕ್ಷಾಸ್ನಾನಕ್ಕೆ ಮೊದಲು ಪ್ರೀತಿಯಿಂದ ಎತ್ತಿದರು, ಮತ್ತು ಅವರಲ್ಲೊಬ್ಬನನ್ನು ಸ್ನಾನದ ಭಾಷಣ ಕೇಳಲು ಎತ್ತುಹಾಸಿಗೆಯಲ್ಲಿ ಅಂಗಣಕ್ಕೆ ತಂದಿದ್ದರು.
“ಪರಮೋಚ್ಛ ಶಿಖರ”
‘ಇದೆಲ್ಲವೂ ಬಹಳಷ್ಟು ಭಾವಾನಾತ್ಮಕ’ ಎಂದು ನೀವನ್ನಬಹುದು. ಒಳ್ಳೇದು, ಅದು ಆಗಿತ್ತು! ಅದರೆ ಅದು ಕ್ರೈಸ್ತ ಧರ್ಮದ ಪುನರುಜ್ಜೀವನದಲ್ಲಿ ಕಾಣುವಂತಹ ತರದ ಉದ್ವೇಗವಲ್ಲ. ಪೋಲಿಶ್ ಅಧಿವೇಶನಗಾರರ ಭಾವಾವೇಶವು ದೇವರ ವಾಕ್ಯದ ಸ್ಪಷ್ಟ ಜ್ಞಾನದ ಮೇಲೆ ಆಧರಿಸಿದ್ದರಿಂದ, ಅನಂತರ ದೇವರನ್ನು ಇನ್ನೂ ಉತ್ತಮವಾಗಿ ಸೇವಿಸಲು ಹಾಜರಿದ್ದವರು ತಯಾರಿಸಲ್ಪಟ್ಟರು. ಈ ಉದ್ವೇಗ ದಶಕಗಳ ವಿರೋಧದ ಅರಿವಿನಿಂದ ಉದ್ಬವಿಸಿದ್ದು, ನೆರೆಕರೆಯ ದೇಶಗಳ ತಮ್ಮ ಜತೆವಿಶ್ವಾಸಿಗಳೊಂದಿಗೆ ಕೊನೆಗೂ ಪೋಲೆಂಡಿನ ಸಾಕ್ಷಿಗಳು ಸ್ವಚ್ಛಂಧವಾಗಿ ಒಟ್ಟುಸೇರಶಕ್ತರಾದ್ದರಿಂದಲೇ. ಈ ಭಾವಾವೇಶವು, ನಿಮ್ಮ ಪಕ್ಕದಲ್ಲಿ ಕೂತಿರುವ ಪ್ರತಿನಿಧಿಯು ಪ್ರಾಯಶ: ಹಿಂದೆಂದೂ ಒಂದು ಅಧಿವೇಶನದಲ್ಲಿ ಹಾಜರಾಗಿರಲಿಲ್ಲ, ಅದು ಇಷ್ಟೊಂದು ದೊಡ್ಡ ಗಾತ್ರದ ಸಮ್ಮೇಲನದಲ್ಲಿ ಎಂಬದನ್ನು ತಿಳಿದ ಸಂತೋಷದಿಂದ ಬಂದದ್ದಾಗಿದೆ. ಯೆಹೋವನ ಸಾಕ್ಷಿಗಳು ಸತ್ಯದ ಜೀವಂತ ದೇವರನ್ನು ಆರಾಧಿಸುವ ಅಂತರ್ರಾಷ್ಟ್ರೀಯ ಸಹೋದರತ್ವದ ಒಂದು ಅಲ್ಲಗಳೆಯಲಾರದ, ದೃಶ್ಯ ಸಾಕ್ಷದಿಂದ ಬಂದಂತಹ ಭಾವಾವೇಶವಾಗಿತ್ತು.
ಇದನ್ನು ಸಂಕ್ಷಿಪ್ತವಾಗಿ ಪಶ್ಚಿಮ ಯುರೋಪಿನ ಒಬ್ಬ ಪ್ರತಿನಿಧಿ ಅಂದದ್ದು: “1952 ರಿಂದ ಪ್ರತಿಯೊಂದು ಅಧಿವೇಶನದಲ್ಲಿ ಹಾಜರಿದ್ದರೂ ವಾತಾವರಣ, ಉತ್ಸುಕತೆ, ಆನಂದ, ಪ್ರೀತಿ, ಗಣ್ಯತೆ ಮತ್ತು ಕೃತಜ್ಞತೆಯಲ್ಲಿ ಇದು ಪರಮೋಚ್ಛ ಶಿಖರವಾಗಿತ್ತು.”
ಆದಿತ್ಯವಾರದ ಕೊನೆಯ ಪ್ರಾರ್ಥನೆಯ ಸಮಯದಲ್ಲಿ ವಾರ್ಸೋದಲ್ಲಿ ಭಾವಾವೇಶವು ತುತ್ತತುದಿಗೇರಿತ್ತು ಎನ್ನುವದರಲ್ಲಿ ಸಂದೇಹವಿಲ್ಲ. ಸಾವಿರಾರು ಜನರು ಅದರ ಶಬ್ದಗಳನ್ನು ತಿಳುಕೊಳ್ಳ ಶಕ್ತರಲ್ಲದಿದ್ದರೂ, ಪ್ರತಿಯೊಬ್ಬರು ಅದರ ಆತ್ಮ, ಪ್ರೀತಿ, ಸಮರ್ಪಣೆ, ಮಹಿಮೆ, ಸಾರ್ವಭೌಮ ಪ್ರಭುವಾದ ಯೆಹೋವನ ಹೃದಯ ಪೂರ್ವಕ ಅಂಗೀಕಾರ ಮತ್ತು ಯೆಹೋವನ ಕೆಲಸದಲ್ಲಿ ಮುಂದರಿಯಲು ದೃಢನಿರ್ಧಾರ, ಇದೆಲ್ಲವೂ ಹೇಳಲ್ಪಟ್ಟದ್ದನ್ನು ಅರಿತುಕೊಂಡರು. ತಮ್ಮ ದೇವರಿಗೆ 60,000 ದಷ್ಟು ತಲೆಗಳು ಬಾಗಿ ಭಯಭಕ್ತಿಯನ್ನುಂಟುಮಾಡುವ ನಿಶಬ್ದತೆಯಲ್ಲಿ ಪ್ರಾರ್ಥಿಸುವಾಗ, ಗಣ್ಯತೆಯ ಆನಂದದ ಬಿಕ್ಕುವಿಕೆಯ ತಪ್ಪಾಗದ ಧ್ವನಿಯು ಮಾತ್ರ ಕೆಲವೆಡೇ ಶಬ್ದ ತರುತ್ತಿತ್ತು. ಪ್ರಾರ್ಥನೆ ಅಂತ್ಯಗೊಂಡಾಗ, ತನ್ನ ಹೃದಯದಾಳದಿಂದ “ಆಮೆನ್” ಎಂದು ಹೇಳಲು ಯಾವುದೇ ಕಷ್ಟವಿರಲಿಲ್ಲ. ತದನಂತರ ಒಮ್ಮಿಂದೊಮ್ಮೆಲೇ, ಸುಮಾರು 11 ನಿಮಿಷಕ್ಕಿಂತಲೂ ಹೆಚ್ಚು ಸಮಯ ಸೇರಿದ ಸಮೂಹದಿಂದ ಚಪ್ಪಾಳೆಯು ಪ್ರತಿಧ್ವನಿಸಲ್ಪಡುತ್ತಿತ್ತು.
ಪೋಲೆಂಡಿನಲ್ಲಿ ಮಾಡಲ್ಪಟ್ಟ ದೇವಪ್ರಭುತ್ವ ಇತಿಹಾಸದ ಸಾಕ್ಷಿಗಳಾಗಿ 1,66,000 ಹೆಚ್ಚು ಮಂದಿ ಇದ್ದರು. ಕೊನೆಯ ನಾಶನದಲ್ಲಿ ಸೈತಾನನ ದುಷ್ಟ ವ್ಯವಸ್ಥೆಯು ಧೂಳೀಪಟವಾಗುವ ಮೊದಲು, ಇನ್ನಷ್ಟು ಇತಿಹಾಸವು ಮಾಡಲ್ಪಡಲಿದೆ. ಯೆಹೋವನ ಸಾರ್ವಭೌಮತೆಯ ಸಮರ್ಥನೆಯಿಂದ ತುತ್ತತುದಿಗೇರಲ್ಪಡುವಾಗ ಬೆರಗುಗೊಳಿಸುವ, ಆಶ್ಚರ್ಯಗೊಳಿಸುವ, ತಲ್ಲಣಗೊಳಿಸುವ ಇತಿಹಾಸ ಅದಾಗಲಿರುವದು. ಮತ್ತು ನೀವು ಆರಿಸುವದಾದರೆ, ಆ ಇತಿಹಾಸದ ಭಾಗವಾಗಿ ನೀವು ಪಾರಾಗಬಹುದು. ನೀವು ಪಾರಾಗುವಿರೋ? (g89 12/22)
[ಅಧ್ಯಯನ ಪ್ರಶ್ನೆಗಳು]
a ಇದು ವಾರ್ತಾಪತ್ರಿಕೆಯ ಅಂದಾಜು ಲೆಕ್ಕ
[ಪುಟ 21ರಲ್ಲಿರುವಚೌಕ]
ಐತಿಹಾಸಿಕ ಮೈಲುಗಲ್ಲುಗಳು
1928 ಪೋಲೆಂಡಿನ 300 ಸಾಕ್ಷಿಗಳು ಅವರ ಮೊದಲ ಚಿಕ್ಕ ಸಮ್ಮೇಲನಗಳನ್ನು ನಡಿಸಿದರು.
1939 ಮೊದಲನೆ ಲೋಕಯುದ್ಧವು ಆರಂಭಗೊಂಡಾಗ 1,100 ಸಾಕ್ಷಿಗಳು ಸಾರುತ್ತಿದ್ದರು; ಅನೇಕರು ಸೆರೆಮನೆಗೆ ಹಾಕಲ್ಪಟ್ಟರು, ಮತ್ತು ಕೆಲವರು ಕೂಟ ಶಿಬಿರಗಳಲ್ಲಿ ಸತ್ತರು.
1945 ಎರಡನೆಯ ಲೋಕ ಯುದ್ಧದ ಮುಕ್ತಾಯದಲ್ಲಿ ಸಾಕ್ಷಿಗಳ ಸಂಖ್ಯೆಯು ಇಮ್ಮಡಿಗಿಂತಲೂ ಹೆಚ್ಚು ಅಂದರೆ 2,500 ಆಗಿತ್ತು.
1946 ಜೂನ್ನಲ್ಲಿ 1,500 ಮಂದಿ ಲುಬ್ಲಿನ್ ಹತ್ತಿರದ ಸಮ್ಮೇಲನಕ್ಕೆ ಹಾಜರಾದರು; 298 ದೀಕ್ಷಾಸ್ನಾನ ಹೊಂದಿದರು. ಸಪ್ಟಂಬರದಲ್ಲಿ ಚಾರ್ಜೊವ್ ಸಮ್ಮೇಳನಕ್ಕೆ 5,600 ಮಂದಿ ಹಾಜರಾದರು.
1947 ಕ್ರಾಕೊನ್ ಅಧಿವೇಶನವೊಂದಕ್ಕೆ 7,000 ಹಾಜರಿದ್ದರು; 476 ದೀಕ್ಷಾಸ್ನಾನಗಳು. ಸಾರುವ ಕಾರ್ಯವನ್ನು ಸಂಸ್ಥಾಪಿಸಲು ನೆರವಾಗುವರೇ ಇಬ್ಬರು ಗಿಲ್ಯಾದ್ ಪದವೀದರರು ಆಗಮಿಸುತ್ತಾರೆ.
1950 ಮಾರ್ಚ್ನಲ್ಲಿ ಸಾಕ್ಷಿಗಳ ಅತ್ಯುನ್ನತ ಸಂಖ್ಯೆ 18,000. ಜ್ಞಾಪಕಾಚರಣೆಗೆ 24,000 ಮಂದಿ ಹಾಜರಾದರು. ಜುಲೈಯಲ್ಲಿ ಕಾರ್ಯವು ನಿಷೇಧಿಸಲ್ಪಟ್ಟಿತು, ವೈಯಕ್ತಿಕ ಮನೆಗಳಲ್ಲಿ ಚಿಕ್ಕ ಚಿಕ್ಕ ಕೂಟಗಳನ್ನು ನಡಿಸುವ ಅವಶ್ಯಕತೆ ಉಂಟಾಯಿತು.
1968 ಒಂದು ದಿನದ ಜಿಲ್ಲಾ ಅಧಿವೇಶನಗಳು 100 ವ 200 ಹಾಜರಿಯೊಂದಿಗೆ ಕಾಡುಗಳಲ್ಲಿ ಮೊದಲಾಗಿ ನಡಿಸಲ್ಪಟ್ಟವು, ಕೊನೆಗೆ 1000 ಮಂದಿ ಹಾಜರಿದ್ದರು.
1980 ಪೋಲೆಂಡಿನ ಸುಮಾರು 2000 ದಷ್ಟು ಸಾಕ್ಷಿಗಳು ಆಷ್ಟ್ರಿಯಾದ ವಿಯೆನ್ನಾಕ್ಕೆ ಜಿಲ್ಲಾ ಅಧಿವೇಶನಕ್ಕಾಗಿ ಪಯಣಿಸಿದರು.
1981 ಪೋಲಿಶ್ ಸಹೋದರರಿಗಾಗಿ 1980 ರಲ್ಲಿ ಜರಗಿದ್ದಕ್ಕಿಂತ ದೊಡ್ಡದಾದ ಅಧಿವೇಶನವೊಂದು ವಿಯೆನ್ನಾದಲ್ಲಿ ನಡೆಯಿತು.
1982 ಒಂದು ದಿನದ ಸಮ್ಮೇಲನಗಳಿಗಾಗಿ ಹೋಲ್ ಮತ್ತು ಸ್ಟೇಡಿಯಂಗಳನ್ನು ಬಾಡಿಗೆಗೆ ತೆಗೆದುಕೊಳ್ಳಲು ಪೋಲಿಶ್ ಸರಕಾರವು ಸಾಕ್ಷಿಗಳಿಗೆ ಅನುಮತಿ ಕೊಡುತ್ತದೆ.
1985 ಪೋಲೆಂಡಿನಲ್ಲಿ ಜರಗಿದ ಮೂರು ದಿನಗಳ ಜಿಲ್ಲಾ ಸಮ್ಮೇಲನಗಳಿಗೆ 94,000 ಕ್ಕಿಂತಲೂ ಹೆಚ್ಚು ಮಂದಿ ಹಾಜರಾದರು. ಆಡಳಿತ ಮಂಡಲಿಯ 4 ಸದಸ್ಯರನ್ನು ಸೇರಿಸಿ, ನೂರಾರು ಅತಿಥಿಗಳು 16 ದೇಶಗಳಿಂದ ಬಂದಿದ್ದರು.
1989 “ದೇವಭಕ್ತಿ” ಜಿಲ್ಲಾ ಅಧಿವೇಶನಗಳು ನಡೆದಾಗ ಮೂರು ಸ್ಟೇಡಿಯಂಗಳಲ್ಲಿ ಮಿತಿಮೀರಿ ಸಂಖ್ಯೆಯಲ್ಲಿ ಹಾಜರಾದರು, ಆಡಳಿತ ಮಂಡಲಿಯ ಐವರು ಹಾಜರಿದ್ದರು. ಜುಮ್ಲಾ ಹಾಜರಿಯು 1,66,518 ಮತ್ತು 6,093 ದೀಕ್ಷಾಸ್ನಾನಗಳು. ಪೋಲಿಶ್ನಲ್ಲಿ ಎರಡು ಟ್ರೇಕ್ಟ್ಗಳು ಬಿಡುಗಡೆಯಾದವು: ವಾಟ್ ಡು ಜೆಹೋವಸ್ ವಿಟ್ನೆಸಸ್ ಬಿಲೀವ್? ಮತ್ತು ವೈ ಕ್ಯಾನ್ ಯು ಟ್ರಸ್ಟ್ ದಿ ಬೈಬಲ್, ಹಾಗೂ ಷುಡ್ ಯು ಬಿಲೀವ್ ಇನ್ ಟ್ರಿನಿಟಿ? ಎಂಬ 32 ಪುಟದ ಬ್ರೊಷರ್.
[ಪುಟ 23 ರಲ್ಲಿರುವಚಿತ್ರ]
ವಾರ್ಸೋವಿನಲ್ಲಿ ದೀಕ್ಷಾಸ್ನಾನದ ಅಭ್ಯರ್ಥಿಗಳು ವೇದಿಕೆಯ ಮುಂದೆ ಕುಳಿತಿರುವುದು ಮತ್ತು ಜನಸಮೂಹವು ಅವರ ದೀಕ್ಷಾಸ್ನಾನವನ್ನು ವೀಕ್ಷಿಸುವುದು
[ಪುಟ 25 ರಲ್ಲಿರುವಚಿತ್ರ]
ಸೋವಿಯೆಟ್ ರಶ್ಯಾದ ಪ್ರತಿನಿಧಿಗಳಿಗಾಗಿ ಚಾರ್ಜೊವ್ನಲ್ಲಿ ಕಾದಿರಿಸಿದ ವಿಭಾಗದ ಒಂದು ದೃಶ್ಯ, ಮತ್ತು ಪೊಜ್ನಾನಿಗೆ ರಶ್ಯಾದ ಸಾಕ್ಷಿಗಳನ್ನು ತಂದ ಕೆಲವು ಬಸ್ಸುಗಳು