1990ರ “ಶುದ್ಧಭಾಷೆ” ಜಿಲ್ಲಾ ಅಧಿವೇಶನಕ್ಕೆ ಬನ್ನಿರಿ
1 1990ರ ಜಿಲ್ಲಾ ಅಧಿವೇಶನಗಳಿಗೆ “ಶುದ್ಧಭಾಷೆ” ಎಂಬ ಮುಖ್ಯ ವಿಷಯವಿದೆ ಮತ್ತು ಅದಕ್ಕೆ ಹಾಜರಾಗಲು ನಿಮಗೆ ಆಮಂತ್ರಣವಿದೆ. ಭಾರತದಲ್ಲಿ 26 ಅಧಿವೇಶನಗಳು ಏರ್ಪಡಿಸಲ್ಪಟ್ಟಿವೆ. ಅವು ಸಪ್ಟಂಬರ 27 ರಿಂದಾರಂಭಿಸಿ, 1991 ಜನವರಿ 6ರ ತನಕ ನಡಿಯಲಿವೆ. ಭಾಷೆ ಮತ್ತು ತಾರೀಕುಗಳನ್ನು ಕೊಟ್ಟ ಶಹರಗಳ ಪಟ್ಟಿಯು ಮಾರ್ಚ್ 1, 1990 ರಲ್ಲಿ ನಾವು ಕಳುಹಿಸಿದ ಪತ್ರದಲ್ಲಿ ಒದಗಿಸಲಾಗಿದೆ.
2 ಯೆಹೋವನ ಪ್ರವಾದನಾ ಮಾತುಗಳು ಚೆಫನ್ಯ 3:9 ರಲ್ಲಿ ಹೇಳುವುದು: “ಆಗ ಎಲ್ಲರು ಯೆಹೋವನನ್ನು ಹೆಗಲೆಗಲಾಗಿ ಸೇವಿಸಿ ಆತನ ಹೆಸರನ್ನೆತ್ತಿ ಪ್ರಾರ್ಥಿಸುವಂತೆ ಜನಾಂಗಗಳವರಿಗೆ ಶುದ್ಧಭಾಷೆಯನ್ನು ಕೊಡುವೆನು.” ಈ ವರ್ಷದ ಸಮ್ಮೇಲನವು ಆ “ಶುದ್ಧಭಾಷೆ” ಏನೆಂದು ಗುರುತಿಸುತ್ತದೆ ಮಾತ್ರವೇ ಅಲ್ಲ, ಅದನ್ನು ಕಲಿಯುವದೂ ಸರಳವಾಗಿ ಮಾತಾಡುವುದೂ ಏಕೆ ಅಷ್ಟು ಮಹತ್ವದ್ದು ಮತ್ತು ಅದನ್ನುಪಯೋಗಿಸಲು ನಮಗಿರುವ ಶಕ್ತಿಯು ಲೋಕವ್ಯಾಪಕ ಬಾಂಧವ್ಯದ ಒಕ್ಕಟ್ಟನ್ನು ಹೇಗೆ ಬಲಗೊಳಿಸುತ್ತದೆ ಎಂದು ಗಣ್ಯಮಾಡಲು ನಮಗೆ ನೆರವಾಗುತ್ತದೆ.
3 ಬೇಗ ಬನ್ನಿರಿ: ಯೆಹೋವನ ಸಂಸ್ಥೆಯು ಆತನ ಆತ್ಮಿಕ ಮೇಜಲ್ಲಿ ಭೋಜನ ಮಾಡುವಂತೆ ನಮ್ಮನ್ನು ಆಮಂತ್ರಿಸುತ್ತದೆ. ಸಮಯಕ್ಕೆ ಸರಿಯಾಗಿರುವದು ಗೌರವ ಮತ್ತು ಗಣ್ಯತೆಯ ಒಂದು ಸೂಚಕವಾಗಿದೆ. ಕಾರ್ಯಥ, ಕಾರ್ಯಕ್ರಮಕ್ಕೆ ಮುಂಚೆ ನಮ್ಮ ಸೀಟಿನಲ್ಲಿರುದೆಂದೇ ಇದರರ್ಥ. ಕಾರ್ ಪಾರ್ಕಿಂಗ್ಗಾಗಿ ಮತ್ತು ಕುಟುಂಬಕ್ಕೆ ಬೇಕಾದ ಆಸನಗಳನ್ನು ಹುಡುಕುವುದೇ ಮುಂತಾದಕ್ಕೆ ಗಮನಕೊಡಲು ಸಾಕಷ್ಟು ಸಮಯವನ್ನೂ ಇದು ಕೇಳಿಕೊಳ್ಳುತ್ತದೆ.—1 ಕೊರಿ. 14:40.
4 ಕಳೆದ ವರ್ಷದ ಪೊಲೆಂಡ್ ಸಮ್ಮೇಲನಕ್ಕೆ ಹಾಜರಾದವರು ತಮ್ಮ ಸಹೋದರರ ದೇವಭಕ್ತಿ, ಪ್ರೀತಿ ಮತ್ತು ಐಕ್ಯತೆಯಿಂದ ಪ್ರಭಾವಿತರಾದರು. ಅಧಿವೇಶನವು ತರಲಿದ್ದ ಒದಗಿಸುವಿಕೆಗಳಿಗಾಗಿ ಆಳವಾದ ಗಣ್ಯತೆಯು ಪ್ರತ್ಯಕ್ಷ ತೋರಿಬಂತು. ಪ್ರತೀ ಬೆಳಿಗ್ಗೆ ಬೇಗ ಅಧಿವೇಶನದ ಸ್ಥಳದಲ್ಲಿ ಸಹೋದರರು ಬಂದು, ಆರಂಭದ ಸಂಗೀತ ಮತ್ತು ಪ್ರಾರ್ಥನೆಗೆ ಸಿದ್ಧರಾಗಿ ಕೂತಿರುತ್ತಿದ್ದರು. ಸಮಾಪ್ತಿಯ ಸಂಗೀತ ಮತ್ತು ಪ್ರಾರ್ಥನೆಗೂ ಅವರು ಉಳಿದರು ಮತ್ತು ಸಹೋದರರೊಂದಿಗೆ ಸಹವಸಿಸಲಿಕ್ಕಾಗಿ ಕಾರ್ಯಕ್ರಮದ ನಂತರವೂ ತಮ್ಮ ಹೋಗುವಿಕೆಯನ್ನು ನಿಧಾನಿಸುತ್ತಿದ್ದರು.
5 ನಮ್ಮ ಸಹೋದರರ ಕ್ರಮಪಾಲನೆಯು ಆದರ್ಶನೀಯ. ಪೊಜ್ನನ್ ಮತ್ತು ಕೊರ್ಜೊವ್ನ ಮಾಡಿಲ್ಲದ ಸ್ಟೇಡಿಯಮ್ಗಳಲ್ಲಿ ಬಿದ್ದ ಮಳೆಯು ಸಹಾ ಕಾರ್ಯಕ್ರಮದಿಂದ ಅವರ ಲಕ್ಷವನ್ನು ತೆಗೆಯಲಿಲ್ಲ. ಹಾಜರಿದ್ದ ಎಳೆಯವರು, ಚಿಕ್ಕ ಮಕ್ಕಳು ಸಹಾ, ಒಳ್ಳೇ ಶಿಸ್ತಿನಿಂದ ಮೌನವಾಗಿ ಕೂತು, ಕಾರ್ಯಕ್ರಮಕ್ಕೆ ಕಿವಿಗೊಡುತ್ತಿದ್ದರು. ಕುಟುಂಬಗಳು ಒಟ್ಟಾಗಿ ಕೂತಿದ್ದರು. ಯೆಹೋವನ ಮೇಜಿಗೆ ತಮ್ಮ ಆಳವಾದ ಗಣ್ಯತೆ ತೋರಿಸುವುದರಲ್ಲಿ ಅವರು ಮಾದರಿಗಳಾಗಿದ್ದರು. ಅವರ ಮಾದರಿಯಿಂದ ನಾವು ಹೇಗೆ ಪ್ರಯೋಜನ ಪಡೆಯಬಹುದು?
6 ಇತರರ ಒಳ್ಳೇ ಮಾದರಿಯನ್ನು ಅನುಸರಿಸುವುದು ಶಾಸ್ತ್ರೀಯವಾಗಿದೆ. (2 ಥೆಸ. 3:7) ನಮ್ಮ ವೈಯಕ್ತಿಕ ಪರಿಸ್ಥಿತಿಗಳು ಬೇರೆಯಾಗಿದ್ದರೂ, ಸಮ್ಮೇಲನದಿಂದ ನಾವೂ ಹೆಚ್ಚನ್ನು ಪಡೆಯುವಂತೆ ಬಯಸುತ್ತೇವೆ. ಸಮ್ಮೇಲನಕ್ಕೆ ಬರಲು ತಡವಾಗುವದರಿಂದ ಬರುವ ಚಿಂತೆ ಮತ್ತು ನಿರಾಶೆಗಳನ್ನು ತಡೆಯಲು, ಒಂದು ಸಮಂಜಸ ವೇಳೆಯಲ್ಲಿ ಮಲಗುವುದು ಯುಕ್ತವೆಂದು ಅನೇಕ ಕುಟುಂಬಗಳು ಕಂಡಿವೆ. ಕಾಲತಖ್ತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ, ಅವರು ರಾತ್ರಿಗೆ ಒಳ್ಳೇ ನಿದ್ದೆಮಾಡಿ, ಮರುದಿನ ಬೇಗನೇ ಕಾರ್ಯಕ್ಕೆ ತೊಡಗಲು ಸಿದ್ಧರಾಗುವ ಸಂಭವವಿದೆ. ಕಾರ್ಯಕ್ರಮ ನಡಿಯುವಾಗ ಒಳಗೆ ಬರುವುದರಿಂದ ಇದು ತಡೆಯುತ್ತದೆ, ಇದು ಅಪಕರ್ಶಣೆಯು ಮತ್ತು ಈ ಮೊದಲೇ ಕೂತವರಿಗೆ ತೊಂದರೆ ಕೊಟ್ಟಂಥಾಗುವುದು. ಈ ವಿಷಯದಲ್ಲಿ ನಮ್ಮ ವಿಚಾರಪರತೆಯು ಯೆಹೋವನ ಕಡೆಗೆ ನಮಗಿರುವ ಪೂಜ್ಯಭಾವ ಮತ್ತು ಗೌರವ ಮತ್ತು ಸಹೋದರರ ಕಡೆ ನಮಗಿರುವ ಪ್ರೀತಿ ಮತ್ತು ಪರಿಗಣನೆಯ ಸೂಚಕವಾಗಿದೆ.
7 ನಾಲ್ಕು ದಿವಸಗಳ ಅಧಿವೇಶನ: “ಶುದ್ಧಭಾಷೆ” ಜಿಲ್ಲಾ ಅಧಿವೇಶನವು ನಾಲ್ಕು ದಿನಗಳದ್ದಾಗಿದೆ. ಅದು ಗುರುವಾರ ಮಧ್ಯಾಹ್ನ 1:30ಕ್ಕೆ ಆರಂಭಿಸಿ, ಗುರುವಾರ, ಶುಕ್ರವಾರ, ಶನಿವಾರ ಸಂಜೆ ಸುಮಾರು 5:10ಕ್ಕೆ, ಮತ್ತು ಭಾನುವಾರ 4.00ಕ್ಕೆ ಕೊನೆಗೊಳ್ಳುವುದು. ಶುಕ್ರವಾರದಿಂದ ಭಾನುವಾರ ಬೆಳಿಗ್ಗೆ 9:30ಕ್ಕೆ ಕಾರ್ಯಕ್ರಮ ಆರಂಭಿಸುವುದು. ಪ್ರತೀ ದಿನವು ಶುದ್ಧಭಾಷೆಯನ್ನಾಡುವ ಕುರಿತಾದ ಮಹತ್ವದ ಸಮಾಚಾರದಿಂದ ತುಂಬಿರುವುದು. ಅದರಲ್ಲಿ ಭಾಷಣಗಳು, ದೃಶ್ಯಗಳು, ಅನುಭವಗಳು, ಭಾಷಣಮಾಲೆ ಮತ್ತು ಎರಡು ಬೈಬಲ್ ಡ್ರಾಮಾಗಳಿವೆ.
8 ಒಂದು ಕಾರ್ಯಕ್ರಮವನ್ನಾದರೂ ತಪ್ಪದಂತೆ ನಿರ್ಧಾರವನ್ನು ಮಾಡಿರಿ. ಇದಕ್ಕಾಗಿ ನಿಮ್ಮ ಶೆಡ್ಯೂಲಿನಲ್ಲಿ ವೈಯಕ್ತಿಯ ತ್ಯಾಗಗಳನ್ನು ಮತ್ತು ಬದಲಾವಣೆಗಳನ್ನು ಮಾಡಬೇಕಾದೀತು. ಕೆಲವರಿಗೆ ತಮ್ಮ ಮಾಲಿಕರೊಂದಿಗೆ ವಿಶೇಷ ಏರ್ಪಾಡುಗಳನ್ನು ಮಾಡುವದು ಅವಶ್ಯವಾದೀತು. ಎಲ್ಲಾ ಕಾರ್ಯಕ್ರಮಗಳನ್ನು ಹಾಜರಾಗಲು ಅನೇಕರು ಆರ್ಥಿಕ ಸೌಲಭ್ಯವನ್ನು ಕಳಕೊಳ್ಳಲೂ ಸಿದ್ಧರು. ಆದರೂ, ಕಳೆದ ವರ್ಷದ ಪೊಲೆಂಡ್ ಅಧಿವೇಶನಗಳಿಗೆ ಹಾಜರಾಗಲು ನಮ್ಮ ಅನೇಕ ಸಹೋದರರು ಏನೆಲ್ಲಾ ತ್ಯಾಗಮಾಡಿರಬೇಕು ಮತ್ತು ಕಷ್ಟಗಳನ್ನು ಅನುಭವಿಸಿರಬೇಕೆಂದು ಸ್ವಲ್ಪ ಯೋಚಿಸಿರಿ. ಇದು ನಿಮ್ಮನ್ನು ನಿಮ್ಮ ಸಮ್ಮೇಲನದ ಪ್ರತಿಯೊಂದು ಕಾರ್ಯಕ್ರಮಕ್ಕೆ ಹಾಜರಿರಲು ಪ್ರೇರೇಪಿಸದೇ? ಯಾರು ಈ ವಿಷಯವನ್ನು ಪ್ರಾರ್ಥನೆಯಾಗಿ ಮಾಡಿ, ಅದನ್ನು ಹಾಜರಾಗಲು ಹೃದಯ ಪೂರ್ವಕ ಪ್ರಯತ್ನ ಮಾಡುತ್ತಾರೋ ಅವರನ್ನು ಯೆಹೋವನು ನಿಶ್ಚಯವಾಗಿಯೂ ಆಶೀರ್ವದಿಸುವನು.—ಇಬ್ರಿ. 10:24, 25.
9 ಕಳೆದ ವರ್ಷ ಮಿಡ್ವೆಸ್ಟಲ್ಲಿ ಜಿಲ್ಲಾ ಸಮ್ಮೇಲನವನ್ನು ಹಾಜರಾದ ಒಂದು ಕುಟುಂಬವು ಅನುಭವಿಸಿದ ಸಂತೋಷವನ್ನು ಕೇಳಿರಿ: “ನಾವೆಲ್ಲರೂ ಗಣ್ಯಮಾಡಿದ ಒಂದು ಆಶ್ವರ್ಯಕರ ಸದ್ಬೋಧೆಯ ಕಾರ್ಯಕ್ರಮವು ಅದಾಗಿತ್ತು. ನಮ್ಮ ಹೃದಯವನ್ನು ಸ್ವರ್ಶಿಸಿದ ಒಂದು ಮಹತ್ವದ ವಿಷಯವು ಯಾವುದೆಂದರೆ ಹೊಸ ಪ್ರಕಾಶನಗಳನ್ನು ನೀವು ಹೊರಡಿಸಿದ ವಿಧಾನವೇ. ನನ್ನ ಪತ್ನಿ ಮತ್ತು ನಾನು ನಮ್ಮನ್ನು ‘ನಿಜವಾಗಿ ತೆರೆದು’ ಎಷ್ಟೋ ವರ್ಷಗಳಿಂದ ನಾವು ಸಹವಸಿಸುತ್ತಿರುವ ಯಾವುದೇ ಒಂದು ಅಧಿವೇಶನದಲ್ಲಿ ಎಂದಿನಂತೆ ಕೊಟ್ಟದ್ದಕ್ಕಿಂತ ಬಹಳ ಹೆಚ್ಚನ್ನು ಕೊಡುವಂತೆ ಪ್ರೇರಿಸಲ್ಪಟ್ಟೆವು. ಹೀಗೆ ಮಾಡಿದವರು ನಾವೊಬ್ಬರೇ ಅಲ್ಲ. ಆ ಹೊಸ ಏರ್ಪಾಡಿನಲ್ಲಿದ್ದ ಏನೋ ಒಂದು ಸಂಗತಿಯು ಎಂದಿಗಿಂತಲೂ ಹೆಚ್ಚನ್ನು ಮಾಡುವಂತೆ ನಮ್ಮನ್ನು ಪ್ರೇರೇಪಿಸಿತು. ಆದರೆ ನಮ್ಮಲ್ಲಿ ಯಾರೂ ಯೆಹೋವನು ನಮಗಾಗಿ ಮಾಡಿರುವ ಮತ್ತು ಇನ್ನೂ ಮಾಡುತ್ತಿರುವ ಸಂಗತಿಗಳಿಗಾಗಿ ಎಂದಿಗೂ ಸಾಕಷ್ಟನ್ನು ಸಲ್ಲಿಸಲಾರೆವು ನಿಶ್ಚಯ.”
10 ಕಿವಿಗೊಟ್ಟು ಕೇಳಿರಿ: ಕೀರ್ತನೆ 50:7 ರಲ್ಲಿ ಯೆಹೋವನು ಹೇಳುವುದು: “ನಿಮಗೆ ಖಂಡಿತವಾಗಿ ಹೇಳುತ್ತೇನೆ, ಕೇಳಿರಿ.” ಆದ್ದರಿಂದ, ಅಧಿವೇಶನದ ಕಾರ್ಯಕ್ರಮದಲ್ಲಿ ವೇದಿಕೆಯಿಂದ ನೀಡಲ್ಪಡುವ ಸಮಾಚಾರಕ್ಕೆ ಸಂಬಂಧಿಸದ ಯಾವುದೇ ದೃಶ್ಯ ಮತ್ತು ಶಬ್ದಗಳಿಂದ ಅಪಕರ್ಶಿತರಾಗ ಬೇಡಿರಿ. ಶುದ್ಧಭಾಷೆಯನ್ನು ಸರಳವಾಗಿ ಮಾತಾಡುವ ನಮ್ಮ ಅಪೇಕ್ಷೆಯು ಯೆಶಾಯ 55:2 ರಲ್ಲಿರುವ ಯೆಹೋವನ ವಿನಂತಿಗೆ ಪೂರ್ಣ ಅಧೀನರಾಗುವಂತೆ ನಮ್ಮನ್ನು ಪ್ರೇರಿಸಬೇಕು: “ಕಿವಿಗೊಟ್ಟು ನನ್ನ ಮಾತನ್ನು ಕೇಳಿರಿ.”
11 ಈ ಸಮ್ಮೇಲನದಲ್ಲಿ ನೀಡಲ್ಪಡುವ ಸಮಾಚಾರವೆಲ್ಲವೂ ನಮ್ಮ ಆತ್ಮಿಕ ಸುಕ್ಷೇಮಕ್ಕಾಗಿವೆ ಮತ್ತು ಯೆಹೋವನ ಸೇವೆಯಲ್ಲಿ ದೃಢರಾಗಿ ನಿಲ್ಲಲು ಹಾಗೂ ಸಹೋದರರೊಂದಿಗೆ ಐಕ್ಯತೆಯಿಂದಿರಲು ನಾವು ಮಾಡಿರುವ ನಿರ್ಧಾರವನ್ನು ಬಲಗೊಳಿಸುತ್ತದೆ. ಅಧಿವೇಶನವು ಪ್ರಸ್ತುತ ಅಗತ್ಯತೆಗೆ ನಮ್ಮನ್ನು ಸರಿಸಮವಾಗಿ ತಂದು, ಯೆಹೋವನ ಸಂಸ್ಧೆಯೊಂದಿಗೆ ಮುಂದೆ ಸಾಗುವಂತೆ ಸಹಾಯ ಮಾಡುತ್ತದೆ. ಕಿವಿಗೊಡದಿದ್ದರೆ, ನಾವು ಹಿಂದೆಯೇ ಉಳಿಯುವೆವು. ಕಾರ್ಯಕ್ರಮದಿಂದ ಪೂರ್ಣ ಪ್ರಯೋಜನ ಹೊಂದಲು ಮತ್ತು ಅನಂತರ ನಾವು ಕಲಿತ ವಿಷಯಗಳನ್ನು ಕಾರ್ಯರೂಪಕ್ಕೆ ಹಾಕಲು ನಾವು ಪೂರಾ ರೀತಿಯಲ್ಲಿ ಮಗ್ನರಾಗಿರುವ ಅಗತ್ಯವಿದೆ.—ಯಾಕೋ. 1:25.
12 ಕಾರ್ಯಕ್ರಮಕ್ಕೆ ಒಳ್ಳೇ ಗಮನ ಕೊಡುವಂತೆ ಮತ್ತು ನೀಡಲಾದ ಸಮಾಚಾರವನ್ನು ನೆನಪಿನಲ್ಲಿಡುವಂತೆ ನಾವು ಬೇರೇನಾದರೂ ಮಾಡಬಹುದೋ? ಹೌದು, ಮಾಡಬಹುದು. ಅನೇಕ ಸಮ್ಮೇಲನ ಪ್ರತಿನಿಧಿಗಳು ಕಾರ್ಯಕ್ರಮದ ಸಮಯ ನೋಟ್ಸ್ ಬರೆಯುವ ಸುಹವ್ಯಾಸವನ್ನು ಬೆಳೆಸಿದ್ದಾರೆ. ಸಮ್ಮೇಲನಕ್ಕೆ ಹಾಜರಾಗುವಾಗ ಬೈಬಲ್ ಮತ್ತು ಸಂಗೀತ ಪುಸ್ತಕ ಹಾಗೂ ನೋಟ್ಸ್ ಬರೆಯಲು ತಕ್ಕದಾದ ಸಲಕರಣೆ, ಇವೇ ನಮ್ಮ ಸಾಮಾನ್ಯ ಸಾಧನಗಳು. ನೋಟ್ಸ್ ಬರೆಯುವುದನ್ನು ನಕಾರಾತ್ಮಕವಾಗಿ ನೀವು ನೋಡಿದಾದ್ದರೆ, “ಶುದ್ಧ ಭಾಷೆ” ಅಧಿವೇಶನದಲ್ಲಿ ಅದನ್ನೇಕೆ ಪ್ರಯತ್ನಿಸಿ ನೋಡಬಾರದು? ನಿಮ್ಮ ಗಮನವನ್ನು ಭಾಷಣದ ಕಡೆಗೆ ಕೇಂದ್ರೀಕರಿಸಲು ಮತ್ತು ನಿಮ್ಮ ಮನಸ್ಸು ಅತ್ತಿತ್ತ ಅಲೆದಾಡದಂತೆ ತಡೆಯಲು ಅದನ್ನು ಸುವಿಧಾನವಾಗಿ ನೀವು ಕಾಣುವಿರಿ.
13 ಉದ್ದವೂ ವಿಸ್ತಾರವೂ ಆದ ನೋಟ್ಸ್ನ್ನು ಬರೆಯುವ ಅಗತ್ಯವಿಲ್ಲ. ಸಾಮಾನ್ಯವಾಗಿ ಮುಖ್ಯ ವಿಷಯದ ಮೇಲೆ ಒಂದೆರಡು ವಾಕ್ಯ ಬರೆದಿಟ್ಟರೆ ಸಾಕು. ಸೇವಾ ಕೂಟದಲ್ಲಿ ಸಮ್ಮೇಲನ ಕಾರ್ಯಕ್ರಮದ ಒಂದು ಅರ್ಥಭರಿತ ಪರಾಮರ್ಶೆ ನಡಿಸಲು ನೀಟಾಗಿ ಬರೆದ ನೋಟ್ಸನ್ನು ಹಿರಿಯರು ಉಪಯುಕ್ತವಾಗಿ ಕಾಣುವರು. ಅಲ್ಲದೆ, ಸಮ್ಮೇಲನದಲ್ಲಿ ನೀಡಲಾದ ಬೇರೆ ಅನೇಕ ವಿಷಯಗಳನ್ನು ತಮ್ಮ ಕಲಿಸುವ ಮತ್ತು ಕುರಿಪಾಲನೆಯ ಕಾರ್ಯದಲ್ಲಿ ಜತೆಗೂಡಿಸಲು ಅವರು ಬಯಸಬಹುದು.
14 ಸಂಗೀತ ಮತ್ತು ಪ್ರಾರ್ಥನೆ: ಯೆಹೋವನ ಸ್ತುತಿಯನ್ನು ಹಾಡುವ ಮೂಲಕ ನಾವು ಆತನನ್ನು ಗೌರವಿಸುತ್ತೇವೆ. ಯಥಾರ್ಥವಾದ ಪ್ರಾರ್ಥನೆಯ ಮೂಲಕ ಆತನ ಜನರು ಅವನನ್ನು ಗೋಚರಿಸುವಾಗಲೂ ಆತನು ಮೆಚ್ಚುತ್ತಾನೆ. (ಜ್ಞಾನೋ. 15:8ಬಿ) ಸಂಗೀತದಲ್ಲಿ ಮತ್ತು ಪ್ರಾರ್ಥನೆಯಲ್ಲಿ ಯೆಹೋವನನ್ನು ಸ್ತುತಿಸುವರೇ ನಮ್ಮ ಸಾವಿರಾರು ಸಹೋದರ ಮತ್ತು ಸಹೋದರಿಯರೊಂದಿಗೆ ಕೂಡಿಬರುವ ಅಸದೃಶ ಸಂದರ್ಭವನ್ನು ಜಿಲ್ಲಾ ಅಧಿವೇಶನವು ನಮಗೆ ಕೊಡುತ್ತದೆ. ಆದರೂ, ನಮ್ಮ ಆರಾಧನೆಯ ಈ ಮಹತ್ವದ ಭಾಗಕ್ಕೆ ಕೆಲವರು ಅಲ್ಪ ಗೌರವ ಕೊಡುತ್ತಾರೆ. ಹೇಗೆ? ಸಮ್ಮೇಲನ ಸುರುವಾದ ಮೇಲೆ ಅಥವಾ ಸಂಗೀತ ಮತ್ತು ಪ್ರಾರ್ಥನೆಯಾದ ಬಳಿಕ ಅನಾವಶ್ಯಕ ತಡವಾಗಿ ಬರುವ ಮೂಲಕವೇ. ಇನ್ನು ಕೆಲವರು ಕಾರ್ಯಕ್ರಮದ ಅಂತ್ಯದಲ್ಲಿ ಸಂಗೀತವಾಗುವಾಗ ಮತ್ತು ಪ್ರಾರ್ಥನೆಗೆ ಮುಂಚೆ ಹೋಗಿಬಿಡುತ್ತಾರೆ. ಏಕೆ? ಅಪರೂಪ ಸಂದರ್ಭದಲ್ಲಿ ಇದನ್ನು ಮಾಡಲು ಸಕಾರಣವಿದ್ದೀತು. ಆದರೆ, ತಮ್ಮ ಕಾರ್ಗಳಿಗೆ, ಬಸ್ಸ್ಟೇಂಡಿಗೆ ಯಾ ಊಟಕ್ಕೆ ಬೇಗ ಮುಟ್ಟಲಿಕ್ಕಾಗಿ ಕೆಲವರು ಸಂಗೀತ ಮತ್ತು ಪ್ರಾರ್ಥನೆಯಲ್ಲಿ ಒಳಗೂಡುವ ತಮ್ಮ ಸುಯೋಗವನ್ನು ತಪ್ಪಿಸುವಾಗ ಯೆಹೋವನ ಮೇಜಿಗೆ ಯೋಗ್ಯ ಗೌರವ ಮತ್ತು ಗಣ್ಯತೆ ತೋರಿಸಲ್ಪಡುತ್ತದೋ?—ಮತ್ತಾ.6:33.
15 ವೈಯಕ್ತಿಕ ಅನುಕೂಲತೆಯನ್ನು ನೋಡುವಲ್ಲಿ, ನಾನು-ಮೊದಲು ಎಂಬ ಲೌಕಿಕ ಭಾವನೆ ಹಾಗೂ ದುರಾಶೆ ಮತ್ತು ಸ್ವಾರ್ಥವೆಂಬ ಭಕ್ತಿಹೀನ ಪ್ರವೃತಿಯು ನಮ್ಮ ಅತ್ಮಿಕ ಪ್ರಗತಿಯನ್ನು ಕುಂಠಿಸದಂತೆ ನಾವು ಜಾಗ್ರತೆ ವಹಿಸಬೇಕು. ಕಳೆದ ವರ್ಷ ಪೊಲೆಂಡ್ ಸಮ್ಮೇಳನದಲ್ಲಿ ನಮ್ಮ ಸಹೋದರರು ತೋರಿಸಿದ ಅದೇ ಗಣ್ಯತೆಯ ಆತ್ಮವನ್ನು ನಾವು ತೋರಿಸುವಂತಾಗಲಿ, ಮತ್ತು ನಾವು ಅವರೊಂದಿಗೆ ಹೆಗಲೆಗಲಾಗಿ ನಡೆದು ನಮ್ಮ ಆರಾಧನೆಯ ಅಷ್ಟು ಉನ್ನತ ಭಾಗವಾದ ಪ್ರಾರ್ಥನೆ ಮತ್ತು ಯೆಹೋವನ ಸ್ತುತಿಗಾನಕ್ಕೆ ನಾವು ತಕ್ಕದಾದ ಗೌರವವನ್ನು ತೋರಿಸುವಂತಾಗಲಿ.—ಕೀರ್ತ. 69:30.
16 ನಮ್ಮ ಕ್ರೈಸ್ತ ವರ್ತನೆಗಳು: ಅಧಿವೇಶನಗಳಲ್ಲಿ ನಮ್ಮ ಕ್ರಿಸ್ತೀಯ ವರ್ತನೆ ಮತ್ತು ತೋರ್ಕೆಯು ಯೆಹೋವನ ಸಾಕ್ಷಿಗಳಾದ ನಮಗೆ ಸತ್ಕೀರ್ತಿಯನ್ನು ಗಳಿಸಿದೆ. ನಾವು ಯೆಹೋವನ ನಮ್ಮ ಭಕ್ತಿಯನ್ನು ಗಂಭೀರವಾಗಿ ತಕ್ಕೊಳ್ಳುವುದರಿಂದ ಮತ್ತು ಸಮ್ಮೇಲನದ ಹಾಜರಿಯನ್ನು ಬರೇ ಒಂದು ಸಮಾಜಿಕ ಗೋಷ್ಟಿಯಾಗಿ ನೋಡದಿರುವದರಿಂದ ವಿಷಯವು ಹಾಗಿದೆ. ಅಂಥ ವಿಶೇಷ ಸಂದರ್ಭಗಳಿಗೆ ಒಟ್ಟು ಸೇರುವಾಗ, ಕ್ರೈಸ್ತ ಗಾಂಭೀರ್ಯ ಮತ್ತು ಆತ್ಮಿಕ ಮನೋಭಾವವನ್ನು ಇಟ್ಟುಕೊಂಡು ಎಲ್ಲಾ ಸಮಯದಲ್ಲಿ ನಮ್ಮನ್ನು ಶುಶ್ರೂಷಕರಾಗಿ ನಡಿಸಿಕೊಳ್ಳಬೇಕು.—1ಕೊರಿ. 10:31-33.
17 ಆದರೂ, ಅಧಿವೇಶನಗಳಿಗೆ ಹಾಜರಾಗುವ ಕೆಲವರು ತಮ್ಮ ಮನೋಭಾವ, ಉಡುಪು, ಮಾತುಕತೆ ಮತ್ತು ನಡತೆಯಲ್ಲಿ ಅಯುಕ್ತವಾಗಿ ಅಕ್ರಮರಾಗಿರುವದು ಕಂಡುಬಂದಿದೆ. ಸ್ಥಳಿಕ ಸಭೆಯಲ್ಲಿ ಯಾ ಒಂದು ಅಧಿವೇಶನದಲ್ಲಿ ಇಂಥ ವಿಷಯಗಳು ತೋರಿಬರುವಾಗ ಏನು ಮಾಡಬೇಕು? ಅದನ್ನು ತಿದ್ದುವ ನೋಟದಲ್ಲಿ ಆತ್ಮಿಕ ಯೋಗ್ಯತೆಯುಳ್ಳವರು ಪ್ರೀತಿಯುಳ್ಳ ಸೂಚನೆ ಕೊಡಬೇಕು. (ಗಲಾ. 6:1; ಎಫೆ. 4:11, 12) ಶುದ್ಧಭಾಷೆಯನ್ನಾಡುವುದು ನಮ್ಮನ್ನು ನಮ್ಮ ಸತ್ಕೀರ್ತಿ ಮತ್ತು ನಡವಳಿಕೆಯ ಉಚ್ಛಮಟ್ಟವನ್ನು ಎತ್ತಿಹಿಡಿಯಲು ಪ್ರೇರಿಸಬೇಕು.
18 ಅಧಿವೇಶನವೂಂದನ್ನು ಸಂದರ್ಶಿಸಿದ ಒಬ್ಬನು ಕಾಣಿಕೆ ಪೆಟ್ಟಿಗೆಯೊಳಗೆ ಹೀಗೆ ಬರೆದು ಹಾಕಿದ್ದನು: “ನಿಮ್ಮ ಕಾರ್ಯಕ್ರಮವನ್ನು ನಾನು ಬಹಳವಾಗಿ ಆನಂದಿಸಿದೆ. ನಾನೀಗ ಒಬ್ಬ ಸಹೋದರನೊಂದಿಗೆ ಬೈಬಲಭ್ಯಾಸ ಮಾಡಲಿರುವೆ. ನಿಮ್ಮ ಯಾವುದೇ ಸಮ್ಮೇಳನಕ್ಕೆ ಇದು ನನ್ನ ಮೊದಲ ಹಾಜರಿ. ಶನಿವಾರ ಮಾತ್ರ ಬರಲು ನಾನು ಯೋಜಿಸಿದ್ದೆ ಯಾಕಂದರೆ ಭಾನುವಾರ ನನ್ನ ಚರ್ಚ್ ದಿವಸ. ಆದರೆ ನಾನೆಷ್ಟು ಪ್ರಭಾವಿತನಾದೆನೆಂದರೆ, ಇವತ್ತು ಕೂಡಾ ಬಂದೆ ಮತ್ತು ನನ್ನೊಂದಿಗೆ ನನ್ನ ಇಡೀ ಕುಟುಂಬವನ್ನೂ ತಂದೆನು. ಆದರೆ ಭಾಷಕನು ಭಾಷಣವೀಯುವಾಗ ದೊಡ್ಡವರು ಗಟ್ಟಿಯಾಗಿ ಮಾತಾಡುತ್ತಿದ್ದದ್ದು ನನ್ನನ್ನು ನಿರಾಶೆಗೊಳಿಸಿತು.”
19 ಕೆಲವು ಸಮ್ಮೇಲನಗಳಲ್ಲಿ ಹಲವು ಹದಿಹರೆಯದವರು ಸಭಾಂಗಣದ ಉಪ್ಪರಿಗೆಯಲ್ಲಿ ಅಥವಾ ತೀರಾ ಮೂಲೆಯಲ್ಲಿ ಕೂತು ಕಾಗ್ದ ತುಂಡುಗಳನ್ನು ದಾಟಿಸುವುದು, ಪಿಸುಗುಟುತ್ತಾ ಇರುವುದು ಮತ್ತು ಸಾಮಾನ್ಯವಾಗಿ ಕಾರ್ಯಕ್ರಮಕ್ಕೆ ಯಾವ ಗಮನವನ್ನೂ ಕೊಡದಿರುವುದು ಕಂಡುಬಂದಿದೆ. ಈ ರೀತಿಯ ನಡವಳಿಕೆಯು ಅವರಿಗಿನ್ನೂ ಹೆತ್ತವರ ಮೇಲ್ವಿಚಾರಣೆ ಬೇಕು ಮತ್ತು ಅವರು ಕುಟುಂಬದೊಂದಿಗೆ ಕೂತಿರಬೇಕೆಂದು ಸೂಚಿಸುತ್ತದೆ. ಜವಾಬ್ದಾರಿ ಹೆತ್ತವರು ಈ ವಿಷಯಗಳಿಗೆ ಗಮನಕೊಟ್ಟು ತಮ್ಮ ಮಕ್ಕಳಿಗೆ ಬೇಕಾದ ಮಾರ್ಗದರ್ಶನೆ ನೀಡಬೇಕು. (ಎಫೆ. 6:4) ಕಾರ್ಯಕ್ರಮ ನಡಿಯುವಾಗ ಕಿವಿಗೊಡುವ ಸಮಯ, ಮಾತಾಡುವ ಸಮಯವಲ್ಲವೆಂದು ಸಹೋದರರು, ಸಹೋದರಿಯರು ಮತ್ತು ಮಕ್ಕಳು ಗಣ್ಯಮಾಡಬೇಕು.—ಧರ್ಮೋ. 31:12.
20 ಪರಿಗಣನೆ ಮತ್ತು ಸಭ್ಯತೆಯನ್ನು ತೋರಿಸಬೇಕಾದ ಇನ್ನೊಂದು ಸ್ಥಳವು ನಾವು ಉಳುಕೊಳ್ಳುವ ಜಾಗವೇ. ಸಮಂಜಸ ದರಗಳಲ್ಲಿ ನಾವು ಒಳ್ಳೇ ಹೋಟೇಲು ರೂಮ್ಗಳನ್ನು ಪಡೆಯುತ್ತಿದ್ದೇವೆ. ಇದನ್ನು ನಾವು ಗಣ್ಯಮಾಡಿ, ಹೋಟೆಲ್ ಸಿಬ್ಬಂಧಿಗಳಿಗೆ ಪರಿಗಣನೆ, ನಯವಿನಯ ತೋರಿಸಬೇಕೇ ಹೊರತು ತೀರಾ ತಗಾದೆ ಮಾಡುವವರಾಗಬಾರದು. (ಗಲಾ. 6:10) ಹೋಟೇಲುಗಳಲ್ಲಿ ಯೋಗ್ಯ ನಡತೆ ತೋರಿಸುವಂತೆ ಒಳ್ಳೇ ಸೂಚನೆಗಳು ಕೊಡಲ್ಪಟ್ಟಿವೆ. ಅನೇಕರು ಒಳ್ಳೇ ಪ್ರತಿಕ್ರಿಯೆ ತೋರಿಸಿದ್ದಾರೆ ಮತ್ತು ಹೋಟೆಲ್ ಸಿಬ್ಬಂಧಿಗಳೊಡನೆ ಪೂರ್ಣವಾಗಿ ಸಹಕರಿಸಲು ಯಥಾರ್ಥವಾಗಿ ಪ್ರಯತ್ನಿಸುತ್ತಾರೆ.
21 ಕಳೆದ ವರ್ಷದ ಜಿಲ್ಲಾ ಅಧಿವೇಶನವನ್ನು ಹಾಜರಾದ ಸಹೋದರಿಯೊಬ್ಬಳಿಗೆ ಅವಳ ಹೋಟೆಲ್ ರೂಮನ್ನು ಶುಚಿಮಾಡಿದ್ದ ದಾಸಿಯಿಂದ ಈ ಪತ್ರ ಬಂತು: “ನೀವು ಬಿಟ್ಟು ಹೋದ ವಹಿ ಮತ್ತು ಟಿಪ್ ಗಾಗಿ ನಾನು ಅಭಾರಿ. . . . ನಿಮಗೆ ಉಪಕಾರ ಏಕೆಂದರೆ ನಾನೀಗ ಬೈಬಲ್ ಅಧ್ಯಯನ ಮಾಡುತ್ತಿದ್ದೇನೆ ಮತ್ತು ನಮ್ಮ ತಂದೆಯಾದ ಯೆಹೋವನನ್ನು ಮತ್ತು ಆತನ ಒಬ್ಬನೇ ಮಗನಾದ ಯೇಸು ಕ್ರಿಸ್ತನನ್ನು ಗಣ್ಯಮಾಡಲು ಕಲಿಯತ್ತಿದ್ದೇನೆ. . . ನಮ್ಮ ಹೊಟೇಲಲ್ಲಿ ಉಳಿಯಲು ನೀವು ಆನಂದಿಸಿದಿರೆಂದು ಕೇಳಿ ಸಂತೋಷ. ಮುಂದಿನ ಅಧಿವೇಶನದಲ್ಲಿ ನಿಮ್ಮನ್ನು ನೋಡಲು ನಿರೀಕ್ಷಿಸುತ್ತೇನೆ.” ಆ ದಾಸಿಯು “ವಹಿ” ಮತ್ತು “ಟಿಪ್” ಶಬ್ದಗಳ ಕೆಳಗೆ ಅಡಿಗೆರೆ ಹಾಕಿದಳ್ದು.
22 ನಮ್ಮ ಸಹೋದರರಲ್ಲಿ ಹೆಚ್ಚಿನವರು ದೇವರ ನಾಮಕ್ಕೆ ಗೌರವವನ್ನು ತರುತ್ತಾರಾದರೂ, ಅಧಿವೇಶನವನ್ನು ಹಾಜರಾಗುವ ಕೆಲವು ಕುಟುಂಬಗಳು ದೂರಿಗೆ ಕಾರಣವನ್ನು ಕೊಟ್ಟಿವೆ. ಉದಾಹರಣೆಗೆ, ಮಕ್ಕಳೂ ಕೂಡಿ ನಾಲ್ಕು ಅಥವಾ ಐದು ಮಂದಿ ಮಾತ್ರವೇ ಇರಬಹುದಾದ ರೂಮನ್ನು ಬಾಡಿಗೆಗೆ ಹಿಡಿದ ಮೇಲೆ, ಕೆಲವರು ಹತ್ತು ಮಂದಿಯಷ್ಟನ್ನು ಒಳಗೆ ತುಂಬಿಸಿದ್ದು ತೀರಾ ಅಪ್ರಾಮಾಣಿಕತೆ. ತಮಗೆ ಸ್ಥಳಮಾಡಲು ಅವರು ಮಂಚದಿಂದ ಹಾಸಿಗೆಗಳನ್ನು ತೆಗೆದು ನೆಲದ ಮೇಲೆ ಹಾಸಿದರು. ಹೀಗೆ ಕೆಲವರು ಹಾಸಿಗೆಯಲ್ಲಿ ಮಲಗಿದಾಗ ಇನ್ನು ಕೆಲವರು ಬರೀ ಮಂಚದ ಮೇಲೆ ಮಲಗಿದರು. ಅನಂತರ ಅಧಿಕ ಹೊದಿಕೆ ಶೀಟುಗಳಿಗಾಗಿ ಸಿಬ್ಬಂಧಿಗೆ ವಿನಂತಿಸಲಾಯಿತು.
23 ಅಡಿಗೆ ನಿಶೇಧದ ನಿಯಮವನ್ನು ಕೆಲವರು ಉಲ್ಲಂಘಿಸಿದ ಕಾರಣ ಕೆಲವು ಹೊಟೇಲುಗಳು ಯೆಹೋವನ ಸಾಕ್ಷಿಗಳಿಗೆ ತಮ್ಮ ರೂಮನ್ನು ಬಾಡಿಗೆಗೆ ಕೊಡಲು ಹಿಂಜರಿಯುತ್ತಾರೆ. ಇನ್ನೊಂದು ದೂರು ಏನಂದರೆ ಸಹೋದರರು ರೂಮನ್ನು ಅಂದಗೆಟ್ಟ ಸ್ಥಿತಿಯಲ್ಲಿ ಬಿಟ್ಟುಹೋಗಿರುವುದೇ. ಶುದ್ಧತೆ ಮತ್ತು ಪರಿಗಣನೆಯು ನಮ್ಮ ಉಡುಪು ಮತ್ತು ನಡತೆಯಲ್ಲಿ ತೋರಿಬರಬೇಕು ಮಾತ್ರವಲ್ಲ ಇತರರ ಸೊತ್ತುಗಳನ್ನು ನಾವು ಬಳಸುವ ರೀತಿಯಲ್ಲೂ. ಬಾಡಿಗೆಯ ಕೋಣೆಯನ್ನು ಶುಚಿಯಾಗಿ ಮತ್ತು ನೀಟಾಗಿ ಬಿಟ್ಟುಹೋಗದಿರುವುದಕ್ಕೆ ಏನಾದರೂ ಕಾರಣವಿದೆಯೇ? ಪರಿಗಣನೆಯಿಲ್ಲದ ನಮ್ಮ ವರ್ತನೆಯು ಒಳ್ಳೇ ಹೆಸರನ್ನು ಹಾಳುಮಾಡುತ್ತದೆ. ಮುಂದಿನ ಜಿಲ್ಲಾ ಸಮ್ಮೇಲನಗಳಲ್ಲಿ ನಾವೆಲ್ಲರೂ ನಮ್ಮನ್ನು, “ನಮ್ಮ ರಕ್ಷಕನಾದ ದೇವರ ಉಪದೇಶಕ್ಕೆ ಅಲಂಕಾರವಾಗಿರು” ವಂತೆ ನಡಿಸಿಕೊಳ್ಳೋಣ.—ತೀತ 2:10
24 ಹೆತ್ತವರಿಗಾಗಿ: “ಶುದ್ಧಭಾಷೆ” ಜಿಲ್ಲಾ ಅಧಿವೇಶನಕ್ಕೆ ಆಮಂತ್ರಿಸಲ್ಪಟ್ಟವರಲ್ಲಿ ಎಳೆಯ ಮಕ್ಕಳೂ ಹದಿಹರೆಯದವರೂ ಸೇರಿದ್ದಾರೆ. ಅವರೂ ಶುದ್ಧಭಾಷೆಯನ್ನು ಸರಳವಾಗಿ ಆಡಬೇಕು. ಎಲ್ಲಾ ಕ್ರೈಸ್ತ ಕೂಟಗಳಲ್ಲಿ ಕಿವಿಗೊಟ್ಟು ಕೇಳಲು ಕಲಿತಿರುವ ಮತ್ತು ಸಮ್ಮೇಳನ ಕಾರ್ಯಕ್ರಮದಲ್ಲಿ ತೀರಾ ಆಸಕ್ತರಾದ ಎಳೆಯರನ್ನು ಕಾಣುವುದು ಅದೆಷ್ಟು ಉತ್ತಮ! (ಕೀರ್ತ. 148:12, 13) ಆದರೆ ಹೆತ್ತವರ ಮಾದರಿ ಮತ್ತು ಮೇಲ್ವಿಚಾರದ ಮೇಲೆ ಬಹಳಹೆಚ್ಚು ಆತುಕೊಂಡಿದೆ. ಅನೇಕ ಚಿಕ್ಕವರು ನೋಟ್ಸ್ ಬರೆಯುವ ಒಳ್ಳೇ ತರಬೇತನ್ನು ಪಡೆದಿದ್ದಾರೆ. ಹೆತ್ತವರಾದ ನೀವು ನಿಮ್ಮ ಮಕ್ಕಳಿಗೆ ನೋಟ್ಸ್ ಬರೆಯುವ ವಿಧಾನವನ್ನು ಇನ್ನೂ ಕಲಿಸದಿದ್ದರೆ, ಸಮ್ಮೇಲನಕ್ಕೆ ಮುಂಚೆ ಉಳಿದಿರುವ ಸಮಯದಲ್ಲಿ ಹಾಗೇಕೆ ಮಾಡಬಾರದು? ಅತಿ ಚಿಕ್ಕವರೂ ಭಾಷಕರು ಹೇಳುವ ಶಾಸ್ತ್ರವಚನಗಳನ್ನು ಮತ್ತು ಸಂಬಂಧಿತ ಮುಖ್ಯ ಶಬ್ದಗಳನ್ನು ಬರೆಯಬಲ್ಲರು. ಕೆಲವು ಹೆತ್ತವರು ತಮ್ಮ ಉಳುಕೊಳ್ಳುವ ಜಾಗಕ್ಕೆ ಯಾ ಮನೆಗೆ ಹಿಂದಿರುವಾಗ ದಿನದ ಕಾರ್ಯಕ್ರಮದ ಮುಖ್ಯಾಂಶವನ್ನು ಪರಾಮರ್ಶಿಸಲು ಏರ್ಪಡಿಸುತ್ತಾರೆ.
25 ಮಕ್ಕಳಲ್ಲಿ ಹುಡುಗಾಟದ ಸಹಜ ಪ್ರವೃತಿ ಇರುವುದನ್ನು ಹೆಚ್ಚಿನ ಹೆತ್ತವರು ಗಣ್ಯಮಾಡುತ್ತಾರೆ ನಿಶ್ಚಯ. ಅವರಿಗೆ ಜೀವಿತದ ಅನುಭವವಿಲ್ಲ, ಅಬಲರು. ಆದ್ದರಿಂದ ಗಮನ ಕೊಡುವುದು ಹೇಗೆ ಮತ್ತು ಕೂಟಗಳಲ್ಲಿ ತಮ್ಮ ಹೇಗೆ ನಡಿಸಿಕೊಳ್ಳಬೇಕೆಂದು ಅವರಿಗೆ ಕಲಿಸುವ ಅಗತ್ಯವಿದೆ. ಇದು ಹೆತ್ತವರಿಂದ ಒಳ್ಳೇ ಮೇಲ್ವಿಚಾರವನ್ನು ಕೇಳಿಕೊಳ್ಳುತ್ತದೆ. ಕೆಲವು ಹೆತ್ತವರು ಈ ಕ್ಷೇತ್ರದಲ್ಲಿ ಉದಾಸೀನತೆ ತೋರಿಸುತ್ತಾರೆ. ಯೆಹೋವನಿಗೆ ಪ್ರಾರ್ಥನೆಯ ಸಮಯದಲ್ಲಿ ಕೆಲವು ಹೆತ್ತವರು ಯೋಗ್ಯ ಭಯಭಕ್ತಿ ತೋರಿಸುತ್ತಾರಾದರೂ, ಅವರ ಮಕ್ಕಳು ಆಡುತ್ತಾ ಇತರರನ್ನು ಅಪಕರ್ಶಿಸುತ್ತಾ ಇರುತ್ತಾರೆ. ಪ್ರಾರ್ಥನೆಯ ಸಮಯದಲ್ಲೂ ತಮ್ಮ ಮಕ್ಕಳು ಏನು ಮಾಡುತ್ತಾರೆಂದು ಹೆತ್ತವರಿಗೆ ಗೊತ್ತಿರಬೇಕು. ಅಲ್ಲದೆ, ಕಾರ್ಯಕ್ರಮದ ಸಮಯದಲ್ಲಿ ಅವರು ತಮ್ಮ ಸೀಟು ಬಿಟ್ಟು ಹೋಗುವಾಗ ಏನುಮಾಡುತ್ತಾರೆ? ಸಮ್ಮೇಲನದ ಕಾರ್ಯಕ್ರಮದ ಸಮಯದಲ್ಲಿ ಮತ್ತು ಅನಂತರ ಮಕ್ಕಳು ಮೇಲ್ವಿಚಾರವಿಲ್ಲದೇ ಬಿಡಲ್ಪಡುತ್ತಾರೋ?—ಜ್ಞಾನೋ. 29:15.
26 ಕೆಲವು ಸಂದರ್ಭಗಳಲ್ಲಿ ಹೆತ್ತವರು ರೂಮಲ್ಲಿ, ಹೊರಗೆ ಊಟದಲ್ಲಿ ಅಥವಾ ಬೇರೆ ಚಟುವಟಿಕೆಯಲ್ಲಿ ಮಗ್ನರಾಗಿರುವಾಗ ಮಕ್ಕಳು ಹೋಟೆಲ್ ಲಾಬಿಯಲ್ಲಿ ಮತ್ತು ವಠಾರದಲ್ಲಿ ಮೇಲ್ವಿಚಾರವಿಲ್ಲದೆ ಬಿಡಲ್ಪಡುತ್ತಾರೆ. ಇದು ಯೋಗ್ಯವಲ್ಲ. ಕೆಲವು ಮಕ್ಕಳು ಶಿಸ್ತುರಹಿತ ಹಾಗೂ ಒರಟು ವರ್ತನೆ ತೋರಿಸಿದ್ದಾರೆ ಮತ್ತು ಅವರನ್ನು ನಯವಾಗಿ ತಿದ್ದಲು ಪ್ರಯತ್ನಿಸಿದ ಪ್ರಾಯದ ಸಹೋದರ ಮತ್ತು ಸಹೋದರಿಯರಿಗೆ ಅವಮರ್ಯಾದೆಯನ್ನೂ ತೋರಿಸಿದ್ದಾರೆ. ಕ್ರೈಸ್ತರಿಗೆ ಅನುಚಿತವಾದ ಅಂತಹ ಒರಟು ನಡವಳಿಕೆಯು, ಮನೆಯಲ್ಲಿ ಹೆಚ್ಚಾಗಿ ಸೇಚ್ಛಾಚಾರ ಮತ್ತು ಗೈರುಶಿಸ್ತಿನ ಫಲಿಶಾಂಶವು. ಅದನ್ನು ನಿಶ್ಚಯವಾಗಿ ಸರಿಪಡಿಸಲೇ ಬೇಕು. ಎಲ್ಲಾ ಕ್ರೈಸ್ತ ಹೆತ್ತವರು ತಮ್ಮ ಮಕ್ಕಳನ್ನು “ಯೆಹೋವನ ಶಿಸ್ತಿನಲ್ಲಿ ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ ಬೆಳಸುವಾಗ” ಎಲ್ಲಾ ಸಮಯದಲ್ಲಿ ನಿಕಟ ಮೇಲ್ವಿಚಾರವನ್ನು ನಡಿಸಬೇಕು.—ಎಫೆ. 6:4.
27 ನಿಮ್ಮ ಪೂರ್ಣ ಸಹಕಾರವು ಗಣ್ಯಮಾಡಲ್ಪಡುತ್ತದೆ: ಅಧಿವೇಶನಕ್ಕೆ ಹಾಜರಾಗುವ ಎಲ್ಲರಿಗೆ ಸಾಕಷ್ಟು ಆಸನ, ಸಾಹಿತ್ಯ, ಆಹಾರ ಮತ್ತು ಇತರ ಒದಗಿಸುವಿಕೆಗಳು ದೊರೆಯುವಂತೆ ಗಮನಾರ್ಹ ಯೋಜನೆ ಮತ್ತು ಕೆಲಸವು ಮಾಡಲ್ಪಟ್ಟಿದೆ. ಈ ಏರ್ಪಾಡುಗಳನ್ನು ಕಾರ್ಯಸಾಧಕಗೊಳಿಸಲು ಒಂದು ವಿಶಿಷ್ಟ ಅಧಿವೇಶನಕ್ಕೆ ನಿರ್ದಿಷ್ಟ ಸಭೆಗಳು ನೇಮಿಸಲ್ಪಟ್ಟಿವೆ. ಜನಸಂದಣಿಯನ್ನು ಕಡಿಮೆಗೊಳಿಸಲು ನಿಮ್ಮ ಪೂರ್ಣ ಸಹಕಾರವು ಅತ್ಯಗತ್ಯ. ಕೆಲವುಸಾರಿ ನಿರ್ದಿಷ್ಟ ಸ್ಥಿತಿಗತಿಗಳು ಕೆಲವರಿಗೆ ಇನ್ನೊಂದು ಕ್ಷೇತ್ರದ ಅಧಿವೇಶನವನ್ನು ಹಾಜರಾಗುವುದನ್ನು ಅವಶ್ಯಮಾಡೀತು. ಆದರೂ, ಹೆಚ್ಚಿನವರು ತಮ್ಮ ನೇಮಿತ ಕೇತ್ರದ ಅಧಿವೇಶನವನ್ನು ಹಾಜರಾಗ ಶಕ್ತರಾಗಬೇಕು.—1 ಕೊರಿ. 13:5; ಫಿಲಿ. 2:4.
28 ಸೀಟುಗಳನ್ನು ಕಾದಿರಿಸುವ ವಿಷಯದಲ್ಲಿ ನಿಮ್ಮ ಪೂರ್ಣ ಸಹಕಾರವು ಬೇಕು. ನಿಮ್ಮ ಕುಟುಂಬ ಸದಸ್ಯರಿಗಾಗಿ ಮತ್ತು ನಿಮ್ಮೊಂದಿಗೆ ಪ್ರಯಾಣಿಸುವವರಿಗಾಗಿ ಮಾತ್ರವೇ ಸೀಟುಗಳನ್ನು ಕಾದಿರಿಸಬಹುದು ಎಂಬದನ್ನು ನೆನಪಿನಲ್ಲಿಡಿರಿ. ಬೇರೆಯವರಿಗಾಗಿ ದಯವಿಟ್ಟು ಸೀಟು ರಿಸರ್ವ್ ಮಾಡಬೇಡಿರಿ. ಕೆಲವುಸಾರಿ ಬೇಡವಾದರೂ ಸೀಟುಗಳನ್ನು ಕಾದಿರಿಸಲಾಗುತ್ತದೆ. ಇದು ಪ್ರೀತಿಹೀನತೆ, ಮತ್ತು ದೊರೆಯುವ ಸೀಟುಗಳಿಗಾಗಿ ಹುಡುಕುವ ಎಟೆಂಡೆಂಟರಿಗೆ ಮತ್ತು ಇತರರಿಗೆ ತಪ್ಪು ಭಾವನೆ ಕೊಡುತ್ತದೆ. ಬೈಬಲ್ ಸೂಚನೆಗೆ ಹೊಂದಿಕೆಯಲ್ಲಿ, ಸಹೋದರ ಪ್ರೀತಿಯನ್ನು ತೋರಿಸಲು ನಾವು ಪ್ರಯಾಸಪಟ್ಟು, ಸೀಟು ಕಾದಿರಿಸುವ ಬಗ್ಗೆ ನೇಮಿತ ಏರ್ಪಾಡಿನೊಂದಿಗೆ ಪೂರ್ಣವಾಗಿ ಸಹಕರಿಸಬೇಕು.—2 ಪೇತ್ರ 1:5-8.
29 ಅಧಿವೇಶನದ ಸ್ಥಳಕ್ಕೆ ವೈಯಕ್ತಿಕ ಐಟಂ ತರುವ ವಿಷಯದಲ್ಲಿ ಒಳ್ಳೇ ತೀರ್ಮಾನ ಮಾಡುವಂತೆ ಸೂಚಿಸಲಾಗಿದೆ. ಹಿಂದೆ ಕೆಲವರು ಸೀಟಿನಡಿಯಲ್ಲಿ ಇಡಲಾರದಷ್ಟು ದೊಡ್ಡ ಕೂಲರ್ಗಳನ್ನು ಮತ್ತು ಬೇರೆ ದೊಡ್ಡ ವಸ್ತುಗಳನ್ನು ತಂದದುಂಟು. ಇವನ್ನು ನಡುದಾರಿಯಲ್ಲಿ ಯಾ ಸೀಟುಗಳ ಮೇಲೆ ಇಡಲಾಗುತಿತ್ತು. ಇದರಿಂದಾಗಿ ಬೇರೆಯವರ ಸೀಟು ಅಪಹರಣವಾಗುತಿತ್ತು, ಮತ್ತು ಕೆಲವು ಸಾರಿ ಬೆಂಕಿ ಮತ್ತು ಇತರ ಸುರಕ್ಷೆಯ ನಿಯಮಗಳ ಉಲ್ಲಂಘನೆ ಆಗುತಿತ್ತು. ಅಂತಹ ವಿಷಯಗಳಲ್ಲಿ ನಾವು ಪರಿಗಣನೆ ತೋರಿಸಬೇಕಾದ ಅಗತ್ಯವಿದೆ.
30 ಅಧಿವೇಶನದ ಸ್ಥಳದಲ್ಲಿ ವೀಡಿಯೋ ಕ್ಯಾಮೆರಾ ಮತ್ತು ಆಡಿಯೋ ರೆಕಾರ್ಡಿಂಗ್ ಉಪಕರಣದ ಪ್ರಯೋಗಕ್ಕಾಗಿ ಅನುಮತಿ ಇದೆ. ಆದರೂ, ಅಂತಹ ಉಪಕರಣವನ್ನು ಬಳಸುವವರು ಬೇರೆಯವರನ್ನು ಅಪಕರ್ಶಿಸದಂತೆ ಯಾ ತೊಂದರೆ ಮಾಡದಂತೆ ಜಾಗ್ರತೆ ವಹಿಸಬೇಕು. ಆಸನಗಳ ನಡುವಿನ ದಾರಿಯಲ್ಲಿ ಯಾ ದ್ವಾರದಲ್ಲಿ ಅವನ್ನಿಡಬಾರದು. ಅಂಥ ಉಪಕರಣ ಯಾವುದನ್ನೂ ಪಬ್ಲಿಕ್ ಎಡ್ರೆಸ್ ಸಿಸ್ಟಮ್ಗೆ ಯಾ ಎಲೆಕಿಕ್ಟ್ರಲ್ ಹೊರಗಂಡಿಗೆ ಕನೆಕ್ಟ್ ಮಾಡಬಾರದು. ಫ್ಲಡ್ಲೈಟ್ಸ್ಗೆ ಅನುಮತಿ ಇಲ್ಲ. ಮೇಲಿನ ಸೂಚನೆಗಳಲ್ಲಿ ಯಾವುದನ್ನಾದರೂ ಮೀರಿ ಅಪಕರ್ಶಣೆ ಮಾಡುವ ಯಾವನಾದರೂ, ಅದು ಅವನ ಗಮನಕ್ಕೆ ತರಲ್ಪಟ್ಟಾಗ ತಡವಿಲ್ಲದೆ ವಿಷಯವನ್ನು ಸರಿಪಡಿಸಬೇಕು. ಎಟೆಂಡೆಂಟರು ಮತ್ತು ಮೇಲ್ವಿಚಾರ ಮಾಡುವ ಇತರರು ಮಾರ್ಗದರ್ಶಕಗಳ ಯಾವುದೇ ಉಲ್ಲಂಘನೆಯನ್ನು ಸರಿಪಡಿಸಲು ಎಚ್ಚರವಿರಬೇಕು ಮತ್ತು ಅಂಥ ಉಪಕರಣವನ್ನು ಬಳಸುವವರಿಂದ ಪೂರ್ಣ ಸಹಕಾರವನ್ನು ಪಡೆಯಬೇಕು.
31 ಫುಡ್ ಸರ್ವಿಸ್: ಸೊಸೈಟಿಯು ಊಟದ ಏರ್ಪಾಡುಗಳನ್ನು ಅಳವಡಿಸಿ, ಸುಲಭವಾಗಿ ಮಾಡಲು ಯೋಜಿಸಿದೆ. ಪ್ರತಿಯೊಬ್ಬರ ಪ್ರಯೋಜನಕ್ಕಾಗಿ ಕೆಲಸವನ್ನು ಹಗುರವಾಗಿ ಮತ್ತು ಹೆಚ್ಚು ತ್ವರಿತವಾಗಿ ಮಾಡುವ ಈ ಒದಗಿಸುವಿಕೆ ಎಷ್ಟು ಉತ್ತಮ! ನಿಸ್ಸಂದೇಹವಾಗಿ ದೇವರ ಸಂಸ್ಥೆಯಿಂದ ಈ ಒದಗಿಸುವಿಕೆ ನಮ್ಮನ್ನು ಕೃತಜ್ಞತೆಯಿಂದ ತುಂಬಿಸಿ, ನಮ್ಮ ಗಣ್ಯತೆಯನ್ನು ವ್ಯಾವಹಾರಿಕ ರೀತಿಯಲ್ಲಿ ವ್ಯಕ್ತಪಡಿಸುವಂತೆ ಪ್ರೇರಿಸುವುದು.—ಜ್ಞಾನೋ. 11:25.
32 ನಿಶ್ಚಯವಾಗಿಯೂ ಯೆಹೋವನ ಜನರು ಪ್ರತೀ ವರ್ಷ ಇಂತಹ ಉತ್ತಮ ಸೌಕರ್ಯವಿರುವಲ್ಲಿ ಕೂಡಿಬರುವುದನ್ನು ಮತ್ತು ತಯಾರಿಸಲ್ಪಟ್ಟ ಅತ್ಯುತ್ತಮ ಆತ್ಮಿಕ ಕಾರ್ಯಕ್ರಮದಲ್ಲಿ ಆನಂದಿಸುವುದನ್ನು ಗಣ್ಯಮಾಡುತ್ತಾರೆ. ಇಂಥಾ ಸಮ್ಮೇಲಗಳಲ್ಲಿ ಒದಗಿಸಲಾಗುವ ಬೇರೆ ಅನೇಕ ಸೇವೆಗಳನ್ನೂ ಸೌಲಭ್ಯಗಳನ್ನೂ ನಾವು ಗಣ್ಯಮಾಡುತ್ತೇವೆ. ಸೊಸೈಟಿಗೆ ಬಹು ಮೇಲ್ವಿಚಾರ ಮತ್ತು ಗಮನಾರ್ಹ ಖರ್ಚುಗಳಾದರೂ, ತಕ್ಕದಾದ ಆಸನಗಳು, ಬೆಲೆಬಾಳುವ ಸೌಂಡ್ ಸಿಸ್ಟಮ್ನ ಪ್ರಯೋಗ, ಕಾರ್ಯಸಾಧಕ ಫುಡ್ ಸರ್ವಿಸ್ ಮತ್ತು ಬೇರೆ ಹಲವಾರು ಏರ್ಪಾಡು ಮತ್ತು ಸೇವೆಗಳನ್ನು ನಿರ್ವಹಿಸುವ ಮೂಲಕ, ಸಮ್ಮೇಳನ ಹಾಜರಿಯನ್ನು ಆನಂದಕರವೂ ಆತ್ಮಿಕವಾಗಿ ಚೈತನ್ಯಕರವೂ ಆಗಿ ಮಾಡುತ್ತದೆ.
33 ಈ ಖರ್ಚುಗಳು ಸೊಸೈಟಿಯ ಲೋಕ ವ್ಯಾಪಕ ಕಾರ್ಯಕ್ಕಾಗಿ ನೀವು ಕೊಡುವ ಸ್ವಯಂ ದಾನಗಳಿಂದ ನಿರ್ವಹಿಸಲ್ಪಡುತ್ತವೆ. ನಿಮ್ಮ ಅನುಕೂಲಕ್ಕಾಗಿ, ಸಮ್ಮೇಲನ ಸೌಕರ್ಯದಲ್ಲೆಲ್ಲಾ ಸ್ಪಷ್ಟವಾಗಿ ಗುರುತಿಸಿರುವ ಕಾಣಿಕೆ ಪೆಟ್ಟಿಗೆಗಳು ಇಡಲ್ಪಡುತ್ತವೆ. ಎಲ್ಲಾ ಕಾಣಿಕೆಗಳನ್ನು ಬಹಳವಾಗಿ ಗಣ್ಯಮಾಡಲಾಗುತ್ತದೆ. ಮತ್ತು ಈ ರೀತಿಯಲ್ಲಿ ರಾಜ್ಯದಭಿರುಚಿಗಾಗಿ ನಿಮ್ಮ ಐಕ್ಯತೆಯ ಮತ್ತು ಉದಾರವಾದ ಬೆಂಬಲಕ್ಕಾಗಿ ಸೊಸೈಟಿಯು ಮುಂಚಿತವಾಗಿಯೇ ನಿಮಗೆ ಉಪಕಾರ ಹೇಳಲಿಚ್ಚಿಸುತ್ತದೆ. ಇಲ್ಲಿ ತಿಳಿಸಲಾದ ವಿಷಯಗಳ ಬಗ್ಗೆ ಎಲ್ಲರೂ ತಮ್ಮ ವೈಯಕ್ತಿಕ ಜವಾಬ್ದಾರಿಕೆಯನ್ನು ಅರಿತುಕೊಂಡು, ತಮ್ಮ ಪರಿಸ್ಥಿತಿಗಳು ಅನುಮತಿಸುವ ಮಟ್ಟಿಗೆ ಪಾಲಿಗರಾಗುವ ಮೂಲಕ ಪೂರ್ಣ ಸಹಕಾರ ನೀಡುವರೆಂಬ ಭರವಸ ನಮಗಿದೆ.—ಲೂಕ 6:38.
34 “ಶುದ್ಧಭಾಷೆ” ಜಿಲ್ಲಾ ಅಧಿವೇಶನಕ್ಕೆ ಬನ್ನಿರಿ: “ಶುದ್ಧಭಾಷೆ” ಜಿಲ್ಲಾ ಅಧಿವೇಶನಕ್ಕೆ ಹಾಜರಾಗುವ ಮೂಲಕ ಮತ್ತು ಕಾರ್ಯಕ್ರಮಕ್ಕೆ ನಿಕಟ ಗಮನ ಕೊಡುವ ಮೂಲಕ, ಯೆಹೋವನು ನಮಗೇಕೆ ಶುದ್ಧ ಭಾಷೆಯನ್ನು ಕೊಟ್ಟಿದ್ದಾನೆ, ಮತ್ತು ನಮ್ಮ ಸಹೋದರರೊಂದಿಗಿನ ಐಕ್ಯತೆಗೆ ತಡೆಯಾಗ ಬಹುದಾದ ಯಾವುದೇ ಸ್ವಾರ್ಥಪರ ಸ್ವಭಾವಗಳ ವಿರುದ್ಧ ನಾವು ಏಕೆ ಯಾವಾಗಲೂ ಎಚ್ಚರವಿರಬೇಕು ಎಂಬದನ್ನು ಇನ್ನೂ ಅಧಿಕವಾಗಿ ಗಣ್ಯಮಾಡುವಿರಿ. ಆರಂಭದ ಸಂಗೀತಕ್ಕಾಗಿ ಮತ್ತು ಭಾನುವಾರ ಸಂಜೆ ಸಮಾಪ್ತಿ ಪ್ರಾರ್ಥನೆಯ ತನಕದ ಎಲ್ಲಾ ಕಾರ್ಯಕ್ರಮಕ್ಕಾಗಿ ಅಲ್ಲಿ ಹಾಜರಿರಲು ಈಗಲೇ ಯೋಜನೆ ಮಾಡಿರಿ.
[Box on page 6]
ಜಿಲ್ಲಾ ಅಧಿವೇಶನ ಜ್ಞಾಪಕಪಟ್ಟಿ
ರೂಮಿಂಗ್: ಅಧಿವೇಶನದಿಂದ ಒದಗಿಸಲ್ಪಡುವ ವಸತಿಗಳನ್ನು ಬಳಸುವುದರಲ್ಲಿ ನಿಮ್ಮ ಸಹಕಾರವು ಬಹಳವಾಗಿ ಗಣ್ಯಮಾಡಲ್ಪಡುತ್ತದೆ. ನಿಮ್ಮ ರಿಸರ್ವೇಶನ್ ಕ್ಯಾನ್ಸಲ್ ಮಾಡುವುದು ಅವಶ್ಯವೆಂದು ಕಂಡರೆ, ನೇರವಾಗಿ ಹೊಟೇಲಿಗೆ ಬರೆಯಿರಿ ಅಥವಾ ಫೋನ್ಮಾಡಿ. ಇದನ್ನು ಸಾಕಷ್ಟು ಮುಂಚಿತವಾಗಿ ತಿಳಿಸಿದ್ದಲ್ಲಿ ರೂಮನ್ನು ಬೇರೆಯವರಿಗೆ ದೊರಕಿಸಿ ಕೊಡಲು ಸಾಧ್ಯವಾಗುವುದು.
ದೀಕ್ಷಾಸ್ನಾನ: ಶನಿವಾರ ಬೆಳಿಗ್ಗೆ ಕಾರ್ಯಕ್ರಮ ಆರಂಭಿಸುವ ಮುಂಚೆ ದೀಕ್ಷಾಸ್ನಾನ ಅಭ್ಯರ್ಥಿಗಳು ನೇಮಿತ ವಿಭಾಗದಲ್ಲಿ ತಮ್ಮ ಆಸನಗಳಲ್ಲಿ ಕೂತಿರಬೇಕು. ದೀಕ್ಷಾಸ್ನಾನವಾಗಲು ಯೋಜಿಸುವ ಪ್ರತಿಯೊಬ್ಬನು ಸಭ್ಯವಾದ ಸ್ನಾನದ ಬಟ್ಟೆ ಮತ್ತು ಟವಲನ್ನು ತರಬೇಕು. ದೀಕ್ಷಾಸ್ನಾನದ ಭಾಷಣ ಮತ್ತು ಭಾಷಕದಿಂದ ಪ್ರಾರ್ಥನೆಯ ನಂತರ, ಕಾರ್ಯಕ್ರಮ ಅಧ್ಯಕ್ಷನು ದೀಕ್ಷಾಸ್ನಾನ ಅಭ್ಯರ್ಥಿಗಳಿಗೆ ಸಂಕ್ಷಿಪ್ತ ಸೂಚನೆಗಳನ್ನು ಕೊಟ್ಟು, ಅನಂತರ ಸಂಗೀತವನ್ನು ತಿಳಿಸುತ್ತಾನೆ. ಕಡೇ ಶ್ಲೋಕದ ಆರಂಭದಲ್ಲಿ, ಎಟೆಂಡೆಂಟರು ಸ್ನಾನದ ಅಭ್ಯರ್ಥಿಗಳನ್ನು ದೀಕ್ಷಾಸ್ನಾನದ ಸ್ಥಳಕ್ಕೆ ಅಥವಾ ಅವರನ್ನು ಅಲ್ಲಿಗೆ ಒಯ್ಯುವ ವಾಹನಕ್ಕೆ ನಡಿಸುವರು, ಉಳಿದ ಸಭಿಕರು ಸಂಗೀತ ಹಾಡಿ ಮುಗಿಸುವರು. ದೀಕ್ಷಾಸ್ನಾನವು ಒಬ್ಬನ ಸಮರ್ಪಣೆಯ ಸೂಚಕವಾಗಿರುವುದರಿಂದ ಅದು ಆ ವ್ಯಕ್ತಿ ಮತ್ತು ಯೆಹೋವನ ನಡುವಣ ಒಂದು ಆಪ್ತ ಮತ್ತು ವೈಯಕ್ತಿಕ ವಿಷಯವು. ಹೀಗಿರಲಾಗಿ, ಇಬ್ಬರು ಯಾ ಹೆಚ್ಚು ಸ್ನಾನ ಅಭ್ಯರ್ಥಿಗಳು ಅಪ್ಪಿಕೊಂಡು ಅಥವಾ ಕೈಗಳನ್ನು ಹಿಡಿದುಕೊಂಡು ಸ್ನಾನ ತಕ್ಕೊಳ್ಳುವ ಪಾರ್ಟನರ್ ದೀಕ್ಷಾಸ್ನಾನಗಳೆಂಬ ಏರ್ಪಾಡಿಗೆ ಇಲ್ಲಿ ಒದಗಿಸುವಿಕೆ ಇಲ್ಲ.
ಪಯನೀಯರ ಐಡೆಂಟಿಫಿಕೇಶನ್: ಎಲ್ಲಾ ಕ್ರಮದ ಮತ್ತು ವಿಶೇಷ ಪಯನೀಯರರು, ಹಾಗೂ ಸಂಚಾರ ಮೇಲ್ವಿಚಾರಕರು ತಮ್ಮ ವಾಚ್ಟವರ್ ಐಡೆಂಟಿಫಿಕೇಶನ್ ಎಂಡ್ ಎಸೈನ್ಮೆಂಟ್ ಕಾರ್ಡನ್ನು (ಎಸ್-202) ಅಧಿವೇಶನಕ್ಕೆ ತರಬೇಕು. ಪಯನೀಯರರು ಜಿಲ್ಲಾ ಅಧಿವೇಶನಕ್ಕೆ ಹಾಜರಾಗುವ ಸಮಯದಲ್ಲಿ ಕಡಿಮೆಪಕ್ಷ ಆರುತಿಂಗಳು ಲಿಸ್ಟಿನಲ್ಲಿದ್ದರೆ, ತಮ್ಮ ಐಡಿ ಕಾರ್ಡನ್ನು ತೋರಿಸುವ ಮೂಲಕ 60 ರೂಪಾಯಿಯ ಅಧಿವೇಶನ ಫುಡ್ ಟೆಕೆಟ್ಸ್ನ್ನು ಪಡೆಯುವರು, ಇದು ಒಂದು ಅಧಿವೇಶನಕ್ಕೆ ಮಾತ್ರವೇ ಸಿಗುವುದು. ಆದ್ದರಿಂದ ಈ ಕಾರ್ಡನ್ನು ಹಣದಂತೆ ಜೋಪಾಸನೆ ಮಾಡಿರಿ. ಸಮ್ಮೇಲನದಲ್ಲಿ ಹೊಸ ಕಾರ್ಡು ಸಿಗಲಾರದು. ಪಯನೀಯರಿಗೆ ಪಯನೀಯರ ದರದಲ್ಲಿ ಲಿಟ್ರೇಚರ್ ಬುಕ್ರೂಮಲ್ಲಿ ಮಾತ್ರ ಸಿಗುತ್ತದೆ, ತಮ್ಮ ವಾಚ್ಟವರ್ ಐಡಿ ಕಾರ್ಡ್ ತೋರಿಸಿದ ಮೇಲೆ. ಬೆತೆಲ್ ಸೇವೆಯಲ್ಲಿರುವವರು ಬೆತೆಲ್ ಐಡಿ ಕಾರ್ಡ್ ತೋರಿಸುವ ಮೂಲಕ ಇವೇ ಸೌಲಭ್ಯಗಳನ್ನು ಪಡೆಯಬಹುದು.
ವಾಲಂಟಿಯರ್ ಸರ್ವಿಸ್: ಜಿಲ್ಲಾ ಅಧಿವೇಶನದ ಸುಗಮ ಸಾಗುವಿಕೆಗಾಗಿ ವಾಲಂಟಿಯರ್ ಸಹಾಯವು ಅಗತ್ಯ. ಅಧಿವೇಶನದಲ್ಲಿ ಕೇವಲ ಅಂಶಿಕವಾಗಿ ನೀವು ಕೆಲ್ಸಮಾಡಶಕ್ತರಾದರೂ ಸಹಾ, ನಿಮ್ಮ ಸೇವೆಯು ಗಣ್ಯಮಾಡಲ್ಪಡುತ್ತದೆ. ನೀವು ಸಹಾಯ ಕೊಡಬಲ್ಲಿರಾದರೆ, ಅಧಿವೇಶನಕ್ಕೆ ಬಂದಾಗ ದಯವಿಟ್ಟು ವಾಲಂಟಿಯರ್ ಸರ್ವಿಸ್ ವಿಭಾಗಕ್ಕೆ ವರದಿಮಾಡಿರಿ.
ಲೇಪೆಲ್ ಕಾರ್ಡ್ಸ್: ವಿಶಿಷ್ಟವಾಗಿ ರಚಿಸಲ್ಪಟ್ಟ ಲೇಪೆಲ್ ಬ್ಯಾಡ್ಚ್ಗಳನ್ನು ಅಧಿವೇಶನದಲ್ಲಿ ಮತ್ತು ಅಧಿವೇಶನ ಸ್ಥಳಕ್ಕೆ ಆಚೆಈಚೆ ಪಯಣಿಸುವಾಗ ದಯವಿಟ್ಟು ಧರಿಸಿರಿ. ಲ್ಯಾಪೆಲ್ ಕಾರ್ಡ್ಗಳನ್ನು ನಿಮ್ಮ ಸಭೆಯ ಮೂಲಕ ಪಡೆಯಬೇಕು, ಅವು ಅಧಿವೇಶನಗಳಲ್ಲಿ ದೊರೆಯವು. ಲ್ಯಾಪೆಲ್ ಬ್ಯಾಡ್ಜ್ ಹೋಲರ್ಡ್ಸ್ಗಾಗಿ ಸಭೆಯಿಂದ ಆರ್ಡರ್ ಮಾಡಬೇಕು, ಆದರೆ ಲ್ಯಾಪೆಲ್ ಕಾರ್ಡ್ಗಳನ್ನು ಸೊಸೈಟಿಯು ಸಭೆಗಳಿಗೆ ರವಾನಿಸುವದು. ಹೋಲರ್ಡಿನ ಬೆಲೆ 1 ರೂಪಾಯಿ ಮತ್ತು ಕಾರ್ಡಿಗೆ 20 ಪೈಸೆ.
ಎಚ್ಚರಿಕೆ: ನೀವೆಲ್ಲೇ ಪಾರ್ಕ್ಮಾಡಿರಿ, ನಿಮ್ಮ ವಾಹನಕ್ಕೆ ಎಲ್ಲಾ ಸಮಯ ಬೀಗವಿರಬೇಕು ಮತ್ತು ಯಾವುದನ್ನಾದರೂ ಹೊರಗೆ ಕಾಣುವಂತೆ ಎಂದಿಗೂ ಇಡಬೇಡಿರಿ. ನಿಮ್ಮ ವಸ್ತುಗಳನ್ನು ಸಾಧ್ಯವಿದ್ದರೆ ಟ್ರಂಕ್ ಒಳಗೆ ಬೀಗ ಹಾಕಿಡಿ. ಹಾಗೂ ದೊಡ್ಡ ಜನಸಂದಣಿಯಿಂದ ಆಕರ್ಶಿತರಾಗುವ ಕಳ್ಳರು ಮತ್ತು ಜೇಬುಗಳ್ಳರ ವಿಷಯ ಎಚ್ಚರದಿಂದಿರ್ರಿ. ಸಮ್ಮೇಳನ ಸೀಟುಗಳ ಮೇಲೂ ಬೆಲೆಯುಳ್ಳ ಏನನ್ನಾದರೂ ಬಿಟ್ಟುಹೋಗಬಾರದು. ದಯವಿಟ್ಟು ಎಚ್ಚರಿಕೆ ವಹಿಸಿರಿ.
ಕೆಲವು ಹೊಟೇಲುಗಳು ಅನೈತಿಕ ಟೀವೀ ಚಲನ ಚಿತ್ರಗಳನ್ನು ಅಥವಾ ಹೊಲಸು ಚಿತ್ರಗಳನ್ನೂ ಸುಲಭವಾಗಿ ಒದಗಿಸುತ್ತವೆಂದು ವರದಿಯಾಗಿದೆ. ಇಂತಹ ವಸತಿ ಗೃಹಗಳಲ್ಲಿ ಮಕ್ಕಳು ಮೇಲ್ವಿಚಾರ ರಹಿತವಾಗಿ ಟೀವೀ ನೋಡುವುದನ್ನು ವಿಸರ್ಜಿಸುವ ಅಗತ್ಯವನ್ನು ಇದು ಒತ್ತಿಹೇಳುತ್ತದೆ.
[Box on page 6]
ನಿಮ್ಮ ಗಾಯನ ಪ್ರ್ಯಾಕ್ಟಿಸ್ಗಾಗಿ ಅಧಿವೇಶನ ಸಂಗೀತ ನಂಬ್ರಗಳು
ಬೆಳಿಗ್ಗೆ ಮಧ್ಯಾಹ್ನ
ಗುರುವಾರ 148 (74)*
78 (104)
217 (119)
ಶುಕ್ರವಾರ 160 (88) 69 (9)
191 (18) 164 (73)
211 (68) 111 (91)
ಶನಿವಾರ 91 (31) 33 (13)
144 (78) 200 (108)
202 (82) 79 (59)
ಭಾನುವಾರ 155 (23) 42 (85)
61 (90) 161 (87)
31 (11) 45 (110)
* ಆವರಣದೊಳಗೆ ತೋರಿಸಲ್ಪಟ್ಟ ಸಂಗೀತ ನಂಬ್ರಗಳು ಕೇರಳಕ್ಕೆ ಮಾತ್ರವೇ ಯಾಕಂದರೆ ಅಲ್ಲಿ 1966 ರ ಸಂಗೀತಪುಸ್ತಕ ಉಪಯೋಗಿಸಲ್ಪಡುವುದು. ಇತರ ಸಂಗೀತಗಳು 1984 ರ ಸಂಗೀತಪುಸ್ತಕ ದವುಗಳು.