ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g91 1/8 ಪು. 16
  • ಮಗುವಿನ ಕಣ್ಣುಗಳ ಮೂಲಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಗುವಿನ ಕಣ್ಣುಗಳ ಮೂಲಕ
  • ಎಚ್ಚರ!—1991
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಅವರು ಚಿಕ್ಕ ವಯಸ್ಕರಲ್ಲ
  • ಹಕ್ಕಿನ ಕೇಳಿಕೆಯ ಬದಲು ಪ್ರೋತ್ಸಾಹಿಸಿರಿ ಮತ್ತು ಮಾರ್ಗದರ್ಶಿಸಿರಿ
  • ನಿಮ್ಮ ಮಗುವನ್ನು ಶೈಶವದಿಂದ ತರಬೇತು ಮಾಡಿರಿ
    ಕುಟುಂಬ ಸಂತೋಷದ ರಹಸ್ಯ
  • ಮಕ್ಕಳನ್ನು ಹೊಗಳುವುದು ಹೇಗೆ?
    ಎಚ್ಚರ!—2016
  • ಬೆಳೆಯೋ ಮಕ್ಕಳ ನಂಬಿಕೆ ಬೆಳೆಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ಹೆತ್ತವರೇ, ನಿಮ್ಮ ಅಮೂಲ್ಯ ಸ್ವಾಸ್ತ್ಯವನ್ನು ಸಂರಕ್ಷಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
ಎಚ್ಚರ!—1991
g91 1/8 ಪು. 16

ಮಗುವಿನ ಕಣ್ಣುಗಳ ಮೂಲಕ

ಹೆಚ್ಚಿನ ಹೆತ್ತವರು ಕಡಿಮೆ ಪಕ್ಷ ಒಂದು ಸಂಗತಿಯನ್ನು ಒಪ್ಪುವರು: ಅವರು ಎದುರಿಸಿದ ಅತಿ ದೊಡ್ಡ ಪಂಥಾಹ್ವಾನಗಳಲ್ಲಿ ಮಗುವೊಂದನ್ನು ಯಶಸ್ವೀ ರೀತಿಯಲ್ಲಿ ಪರಿಪಾಲಿಸುವುದು ಒಂದಾಗಿರುತ್ತದೆ. ಇದನ್ನು ಹೇಗೆ ಮಾಡಬಹುದು ಮತ್ತು ಅದರಲ್ಲಿ ಯಶಸ್ವೀ ಪಡೆಯುವುದು ಹೇಗೆ ಎಂದು ಅಸಂಖ್ಯಾತ ಶಬ್ದಗಳು ಬರೆಯಲ್ಪಟ್ಟಿವೆ. ಆದಾಗ್ಯೂ, ಹೆತ್ತವರಾಗಿರಲಿ, ಅಜ್ಜ-ಅಜ್ಜಿಯಂದಿರಾಗಿರಲಿ, ಸಹೋದರ ಅತ್ತೆ-ಮಾವಂದಿರಾಗಿರಲಿ ಇಲ್ಲವೇ ಕೇವಲ ಮಿತ್ರರಾಗಿರಲಿ, ಎಲ್ಲಾ ವಯಸ್ಕರು ಮಾಡ ಸಾಧ್ಯವಿರುವ ಒಂದು ವಿಧಾನವಿದೆ. ಮಕ್ಕಳನ್ನು ತಿಳಿದು ಕೊಳ್ಳುವಾಗ ಮತ್ತು ತರಬೇತಿಯನ್ನೀಯುವಾಗ, ಮಗುವಿನ ಕಣ್ನೋಟದಿಂದ ನೋಡಲು ನೀವು ಪ್ರಯತ್ನಿಸಿದ್ದೀರೋ? ಆ ಚಿಕ್ಕ ಮನಸ್ಸುಗಳಲ್ಲಿ ಏನೆಲ್ಲಾ ದಾಟಿಹೋಗುತ್ತದೆ?

ಮಕ್ಕಳು ಚಿಕ್ಕ ವ್ಯಕ್ತಿಗಳಾಗಿದ್ದಾರೆ ಎಂದು ನೆನಪಿಡಿರಿ. ಅವರ ಕುರಿತು ಈ ನೋಟವಿರುವುದು ಅವರಿಂದ ನಾವು ಹೇಗೆ ವೀಕ್ಷಿಸಲ್ಪಡುತ್ತೇವೆ ಎಂದು ತಿಳಿದು ಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ಅವರ ಮುಂದೆ ಗಾತ್ರದಲ್ಲಿ, ಅಧಿಕಾರದಲ್ಲಿ ಮತ್ತು ಶಕ್ತಿಯಲ್ಲಿ ದೊಡ್ಡದಾಗಿ ತೋರುವ ಜನರ ಪ್ರಪಂಚದಲ್ಲಿ ವರು ಚಿಕ್ಕವರಾಗಿ ಜನಿಸಿರುತ್ತಾರೆ. ದಟ್ಟಡಿಯಿಡುವ ಮಗುವಿಗೆ ವಯಸ್ಕರು ಭದ್ರತೆ, ಸಂತೈಸುವಿಕೆ ಮತ್ತು ಸಹಾಯ ನೀಡುವವರಾಗಿ ಇಲ್ಲವೇ ಹಿಂಸಿಸುವ ಬೆದರಿಕೆಯೊಡ್ಡುವವರಾಗಿ ಕಂಡುಬರಬಹುದು.

ಅವರು ಚಿಕ್ಕ ವಯಸ್ಕರಲ್ಲ

ಚಿಕ್ಕ ವಯಸ್ಕರೋಪಾದಿ ಅವರನ್ನು ಸತ್ಕರಿಸುವ ತಪ್ಪನ್ನು ಮಾಡದಂತೆ ಜಾಗ್ರತರಾಗಿರುವುದು ಒಳನೋಟದ ಇನ್ನೊಂದು ಪ್ರಮುಖ ವಿಚಾರವಾಗಿದೆ. ಬಾಲ್ಯತನವು ಜೀವಿತದ ಅತಿ ಸಂತೋಷದ ಸಮಯಗಳಲ್ಲಿ ಒಂದಾಗಿರತಕ್ಕದ್ದು. ಅವುಗಳ ಮೂಲಕ ಅವಸರವಾಗಿ ಧಾವಿಸುವುದರ ಇಲ್ಲವೇ ಪೂರ್ಣವಾಗಿ ಅದನ್ನು ಕಳೆದುಕೊಳ್ಳುವುದರ ಆವಶ್ಯಕತೆಯಿರುವುದಿಲ್ಲ. ಅವರು ಅದರಲ್ಲಿ ಆನಂದಿಸಲಿ. ಹೆತ್ತವರೋಪಾದಿ, ಸಮಯಾನಂತರ ಅವರು ಉತ್ತಮವಾಗಿ ಅಳವಡಿಸಲ್ಪಟ್ಟ ವಯಸ್ಕರಾಗಲು ಆವಶ್ಯಕವಾದ ನೈತಿಕ ಸೂತ್ರಗಳನ್ನು ಅವರಲ್ಲಿ ಬೆಳಸುವಂತೆ ಆ ಸಂದರ್ಭವನ್ನು ಉಪಯೋಗಿಸಬಹುದು.

ಕೂಸುಗಳೊಂದಿಗೆ ವ್ಯವಹರಿಸುವಾಗ ಮಗುವಿನ ಕಣ್ಣುಗಳಿಂದ ವಿಷಯಗಳನ್ನು ವೀಕ್ಷಿಸುವುದರಿಂದ ಅದರ ಮೌಲ್ಯವೇನೂ ನಷ್ಟ ಹೊಂದುವುದಿಲ್ಲ. ಉದಾಹರಣೆಗೆ, ಹತಾಶೆಗೊಂಡ ಹೆತ್ತವರಿಗೆ, ಮಗುವಿನ ಅಳುವಿಕೆಯು ಮಗುವಿಗೆ ಹೊಡೆಯಲು ಇದೊಂದು ಆಮಂತ್ರಣವಾಗಿ ಎಂದೂ ಇರಕೂಡದು. ಅಳುವುದು ಇಲ್ಲವೇ ಕುಂಯ್‌ಗುಟ್ಟುತ್ತಾ ಬಿಕ್ಕುವಿಕೆಯು ಹೊಸತಾಗಿ ಜನಿಸಿದ ಹಸುಳೆಯು ಅದರ ಬೇಡಿಕೆಗಳನ್ನು ವ್ಯಕ್ತ ಪಡಿಸುವ ಒಂದು ಸ್ವಾಭಾವಿಕ ರೀತಿಯಾಗಿರುತ್ತದೆ. ಅದರ ತಾಯಿಯು ಗರ್ಭಾಶಯದ ಸುರಕ್ಷತೆಯಿಂದ ಮಗುವು ಹೊರಬಂದ ಮೇಲೆ, ಅದು ತನ್ನ ದೃಷ್ಟಿಕೋನವನ್ನು ಅಂತಃಕರಣಪೂರ್ವಕ ಅಳುವ ಶಬ್ಧದ ಮೂಲಕ ತಿಳಿಯಪಡಿಸಲು ಶಕ್ತವಾಗಿದೆ!

ಹಕ್ಕಿನ ಕೇಳಿಕೆಯ ಬದಲು ಪ್ರೋತ್ಸಾಹಿಸಿರಿ ಮತ್ತು ಮಾರ್ಗದರ್ಶಿಸಿರಿ

ತಮ್ಮನ್ನು ವ್ಯಕ್ತ ಪಡಿಸಲು ಮಕ್ಕಳು ಪಡುವ ಪ್ರಯತ್ನಗಳನ್ನು ಪ್ರೋತ್ಸಾಹಿಸುವುದು ಒಳ್ಳೆಯದು. ಅವರ ದೃಷ್ಟಿಕೋನವು ಸಮಸ್ಯೆಗಳನ್ನು ಹೊರಪಡಿಸಬಹುದು, ಮತ್ತು ಸ್ಪಷ್ಟವಾಗಿ ಅರ್ಥೈಸಿಕೊಂಡ ಒಂದು ಸಮಸ್ಯೆಯನ್ನು ಪರಿಹರಿಸುವುದು ಹೆಚ್ಚು ಸುಲಭ. ಆದರೆ ಅವರ ಹೇಳುವಿಕೆಗಳಿಗೆ ನಾವು ಹೇಗೆ ಪ್ರತಿವರ್ತಿಸುತ್ತೇವೆ ಎಂಬದು, ಅವರು ತಾವಾಗಿಯೇ ಹೇಗೆ ವ್ಯಕ್ತ ಪಡಿಸುತ್ತಾರೆ ಎಂಬದಷ್ಟೇ ಪ್ರಾಮುಖ್ಯವಾಗಿದೆ. ಪ್ಯಾರೆಂಟ್ಸ್‌ (ಹೆತ್ತವರು) ಎಂಬ ಪತ್ರಿಕೆಯ ಸಹ ಸಂಪಾದಕ, ವೆಂಡೀ ಶ್ಯೂಮಾನ್‌ ನಮ್ಮ ಮಕ್ಕಳೊಂದಿಗೆ ನಾವು ಮಾತಾಡಲು ಹೇಗೆ ಪ್ರಯತ್ನಿಸಿಬೇಕು ಎಂಬುದರ ಮೇಲೆ ಸಲಹೆಯನ್ನಿತ್ತದ್ದು: “ಸಹಾನುಕಂಪವನ್ನು ಮಾತುಗಳಲ್ಲಿ ಬದಲಾಯಿಸುವುದು . . . ಹೆತ್ತವ-ಮಗುವಿನ ಸಂಪರ್ಕಗಳಲ್ಲಿ ಇತ್ತೀಚೆಗಿನ ಅಧ್ಯಯನವು ಒತ್ತಿಹೇಳಿದ ಒಂದು ಕೇಂದ್ರೀಯ ವಿಚಾರವಾಗಿದೆ. ಆದರೆ ಸಹಾನುಕಂಪದ ಭಾಷೆಯಲ್ಲಿ ಅದನ್ನು ಬದಲಾಯಿಸದಿದ್ದರೆ, ಕೇವಲ ಸಹಾನುಭೂತಿ ಇದ್ದರೆ ಸಾಲದು. ಮತ್ತು ಇದು ಹೆಚ್ಚಿನ ಹೆತ್ತವರ ತುಟಿಗಳಲ್ಲಿ ಸ್ವಾಭಾವಿಕವಾಗಿ ಬರುವುದಿಲ್ಲ.”

ಇನ್ನೊಂದು ಮಾತಿನಲ್ಲಿ, ಮಗುವು ಅಗೌರವ ತೋರಿಸಿದರೆ ಯಾ ಆಘಾತವನ್ನುಂಟುಮಾಡುವ ಯಾವುದನ್ನಾದರೂ ಮಾಡಿದರೆ, ಮತ್ತು ಸರಿಪಡಿಸುವಿಕೆಯು ಆವಶ್ಯಕವಾದರೆ, ಅವರ ಕೋಪ ಇಲ್ಲವೇ ಹತಾಶೆಯನ್ನು ತೋರಿಸುವುದಕ್ಕೆ ಸಮಾನವಾದ ಮನೋಭಾವ ಅಥವಾ ಸ್ವರದ ಏರಿಳಿತ ಇರದಂತೆ ನಾವು ಶ್ರಮಪಟ್ಟು ಪ್ರಯತ್ನಿಸ ಬೇಕು. ಮಾಡುವುದಕ್ಕಿಂತ ಹೇಳುವುದು ಸುಲಭ ಎಂಬುದನೋ ಸತ್ಯ. ಆದರೆ ನೆನಪಿಡಿರಿ, “ಮೂರ್ಖ” ಇಲ್ಲವೇ “ಯಾವುದನ್ನೂ ನೀನು ಸರಿಯಾಗಿ ಎಂದೂ ಮಾಡಶಕ್ಯನಲ್ಲ” ಎಂಬಂತಹ ಕಟುವಾದ ಇಲ್ಲವೇ ತುಚ್ಛೀಕರಿಸುವ ಉತ್ತರಗಳು ಈಗಾಗಲೇ ಕಷ್ಟಕರವಾಗಿರುವ ಸನ್ನಿವೇಶವನ್ನು ಎಂದಿಗೂ ಪ್ರಗತಿಗೊಳಿಸುವುದಿಲ್ಲ.

ಶ್ಲಾಘನೆಮಾಡುವ ಮೂಲಕ ಸಹಾನುಭೂತಿಯನ್ನು ತೋರಿಸ ಸಾಧ್ಯವಿದೆ ಎಂದು ಅನೇಕ ಹೆತ್ತವರು, ವಿಶೇಷವಾಗಿ ಬುದ್ಧಿವಾದ ಹೇಳುವಾಗ ನಿರ್ಧಾರಾತ್ಮಕ ಫಲಿತಾಂಶಗಳನ್ನು ತರಸಾಧ್ಯವಿದೆ ಎಂದು ಕಂಡುಕೊಂಡಿದ್ದಾರೆ. ಇಲ್ಲಿಯೂ ಮಗುವಿನ ಕಣ್ನೋಟದಿಂದ ನೋಡಲು ಪುನಃ ಒಂದು ಅವಕಾಶವಿರುತ್ತದೆ. ಗುಪ್ತ ಹೇತುವಿನ ಇಲ್ಲವೇ ಅಂತರಾಳದಿಂದ ಅಂತಹ ಪ್ರಶಂಸೆ ಬಂದಿರುವುದಿಲ್ಲ ಎಂದು ಅಧಿಕಾಂಶ ಮಕ್ಕಳು ತಿಳಿದಿರುತ್ತಾರೆ. ಆದಕಾರಣ, ನಮ್ಮ ಮಕ್ಕಳ ಶ್ಲಾಘನೆ ಮಾಡುವಾಗ, ನಮ್ಮ ಪ್ರಶಂಸೆಯು ಅಪ್ಪಟವೂ, ಅರ್ಹವಾದದ್ದೂ ಆಗಿರುವಂತೆ ಖಚಿತಮಾಡಿರಿ.

ಖ್ಯಾತ ಮಕ್ಕಳ ಮನೋಶಾಸ್ತ್ರಜ್ಞನಾದ ಡಾ. ಹೈಮ್‌ ಜಿ. ಜಿನೊಟ್‌, ಬಿಟ್ವಿನ್‌ ಪ್ಯಾರೆಂಟ್ಸ್‌ ಆ್ಯಂಡ್ಸ್‌ ಚೈಲ್ಡ್‌ (ಹೆತ್ತವರು ಮತ್ತು ಮಕ್ಕಳ ನಡುವೆ) ತನ್ನ ಪುಸ್ತಕದಲ್ಲಿ ವ್ಯಕ್ತಿತ್ವವನ್ನು ಹೊಗಳುವುದರ ಬದಲು, ಮಾಡಿದ ಸಾಧನೆಗಳನ್ನು ಹೆತ್ತವರು ಪ್ರಶಂಸಿಸತಕ್ಕದ್ದು. ಉದಾಹರಣೆಗೆ, ನಿಮ್ಮ ಮಗನು ಒಂದು ಪುಸ್ತಕದ ಬೀರು ರಚಿಸಿದ ನಂತರ ಹೆಮ್ಮೆಯಿಂದ ಬಂದು ನಿಮಗೆ ತೋರಿಸುವಾಗ, ನಿಮ್ಮ ಹೇಳಿಕೆಯು, ‘ಈ ಪುಸ್ತಕದ ಬೀರು ನೋಡಲು ಆಕರ್ಷಕವಾಗಿರುವುದು ಮಾತ್ರವಲ್ಲ, ವ್ಯಾವಹಾರಿಕವೂ ಆಗಿದೆ’ ಎಂದು ಹೇಳಿದರೆ ಅವನ ಆತ್ಮವಿಶ್ವಾಸವನ್ನು ಕಟ್ಟುತ್ತದೆ. ಯಾಕೆ? ನೀವು ಅವನು ಮಾಡಿದ ಸಾಧನೆಯನ್ನು ಪ್ರಶಂಸಿಸುತ್ತೀರಿ. ಆದುದರಿಂದ ನಿಮ್ಮ ಮಗುವಿನ ಕುರಿತಾದ ಹೊಗಳುವಿಕೆಯಲ್ಲಿ ವಾಸ್ತವತೆಯುಳ್ಳವರಾಗಿರ್ರಿ. ಆದಾಗ್ಯೂ, ‘ನೀನೊಬ್ಬ ಒಳ್ಳೆಯ ಬಡಗಿ,’ ಎಂಬ ಹೇಳಿಕೆಯು ಇದನ್ನು ಮಾಡಲಿಕ್ಕಿಲ್ಲ ಯಾಕಂದರೆ ನೀವು ವ್ಯಕ್ತಿಯೋಪಾದಿ ಅವನ ಮೇಲೆ ಕೇಂದ್ರೀಕರಿಸುತ್ತೀರಿ.

ಡಾ. ಜಿನೊಟ್‌ ಅವಲೋಕಿಸುವುದು: “ಪ್ರಶಂಸೆಯು ಮಗುವಿನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಅವನಲ್ಲಿ ಭದ್ರತೆಯ ಭಾವನೆಯನ್ನುಂಟುಮಾಡುತ್ತದೆ ಎಂದು ಅನೇಕ ಜನರು ನಂಬುತ್ತಾರೆ. ವಾಸ್ತವದಲ್ಲಿ, ಶಾಲಘನೆಯು ಅವನಲ್ಲಿ ಉದ್ರೇಕ ಮತ್ತು ತಪ್ಪು ವರ್ತನೆಗೆ ಕಾರಣವಾಗಬಹುದು . . . ‘ನೀನು ಎಷ್ಟೊಂದು ಉತ್ತಮ ಹುಡುಗ’ ಎಂದು ಹೆತ್ತವರು ಮಗುವಿಗೆ ಹೇಳುವಾಗ, ಅವನದನ್ನು ಸ್ವೀಕರಿಸಲು ಸಮರ್ಥನಾಗಿರಲಿಕ್ಕಿಲ್ಲ, ಕಾರಣ ಅವನ ಕುರಿತಾದ ಅವನ ಸ್ವಂತ ಚಿತ್ರಣವು ಬೇರೆಯೇ ಆಗಿದ್ದಿರಬಹುದು . . . ಮಗುವಿನ ವ್ಯಕ್ತಿತ್ವದ ಗುಣಗಳ ಕುರಿತಾಗಿ ಪ್ರಶಂಸೆಯು ಇರುವುದರ ಬದಲು, ಅವನ ಪ್ರಯತ್ನಗಳ ಮತ್ತು ಸಾಧನೆಗಳ ಕುರಿತಾಗಿ ಇರಬೇಕು . . . ಪ್ರಶಂಸೆಯಲ್ಲಿ ಎರಡು ಭಾಗಗಳಿವೆ: ನಮ್ಮ ಮಾತುಗಳು ಮತ್ತು ಮಗುವಿನ ಊಹನೆಯ ತರ್ಕಸರಣಿಗಳು. ಮಗುವಿನ ಪ್ರಯತ್ನ, ಕೆಲಸ, ಸಾಧನೆ, ಸಹಾಯ, ಪರಿಗಣನೆಯನ್ನು ನಾವು ಮೆಚ್ಚುತ್ತೇವೆ ಎಂದು ನಮ್ಮ ಮಾತುಗಳು ಸ್ಪಷ್ಟವಾಗಿ ತಿಳಿಸಬೇಕು.”

ಶ್ಲಾಘನೆಯ ಈ ಯೋಗ್ಯವಾದ ಸಲಹೆಯು ಉದಾರತೆ ತೋರಿಸುವುದರ ಕುರಿತಾದ ದೇವಪ್ರೇರಿತ ಸಲಹೆಯೊಂದಿಗೆ ಸಹಮತದಲ್ಲಿದೆ, ಅದನ್ನು ಜ್ಞಾನೋಕ್ತಿ 3:27ರಲ್ಲಿ ಕಂಡುಕೊಳ್ಳುತ್ತೇವೆ: “ಉಪಕಾರ ಮಾಡುವುದಕ್ಕೆ ನಿನ್ನ ಕೈಲಾದಾಗ ಹೊಂದತಕ್ಕವರಿಗೆ ಅದನ್ನು ತಪ್ಪಿಸಬೇಡ.”—ನ್ಯೂ ಇಂಟರ್‌ನ್ಯಾಶನಲ್‌ ವರ್ಶನ್‌.

ಯಾವುದೇ ಉತ್ತಮ ಬುದ್ಧಿವಾದವನ್ನು ಯಾ ವಿವೇಕದ ಸಲಹೆಯನ್ನು ನಾವು ಕೇಳಲಿ, ಒಬ್ಬ ಮಗನನ್ನು ಇಲ್ಲವೇ ಮಗಳನ್ನು ಬೆಳೆಸುವ, ಕೆಲವರು ಕರೆಯುವ 20-ವರ್ಷಗಳ ಕಾರ್ಯಕ್ರಮಕ್ಕೆ ಒಂದು ಸೀಳುದಾರಿ ಇಲ್ಲ ಎಂದು ಸತ್ಯವಾಗಿಯೇ ಹೇಳಸಾಧ್ಯವಿದೆ. ಇದಕ್ಕೆ ತಾಳ್ಮೆ, ಪ್ರೀತಿ, ತಿಳುವಳಿಕೆ ಮತ್ತು ಪರಿಗಣನೆಯು ಆವಶ್ಯಕವಾಗಿದೆ. ಆದರೆ ನಿಮ್ಮ ಎಳೆಯನೊಬ್ಬನ ನಡತೆಯನ್ನು ನೋಡಲು ಮತ್ತು ತಿಳುಕೊಳ್ಳಲು “ಮಗುವಿನ ಕಣ್ಣುಗಳ ಮೂಲಕ” ನೋಡಲು ಕಲಿಯುವುದು ಯಶಸ್ವೀನೆಡೆಗೆ ಒಂದು ಮಹತ್ತಾದ ಸಹಾಯವಾಗಿದೆ.

“ಮಗನು ವಿವೇಕಿಯಾದರೆ ತಂದೆಗೆ ಸಂತೋಷ,” ಎಂದು ವಿವೇಕಿಯಾದ ರಾಜ ಸೊಲೊಮೋನನು ಬರೆದನು. (ಜ್ಞಾನೋಕ್ತಿ 10:1,NW) ನಿಮ್ಮ ಮಗುವಿನ ಆಲೋಚನಾ ವಿಧದ ಮತ್ತು ದೃಷ್ಟಿಕೋನದ ಪ್ರಗತಿಕರವಾದ ತಿಳುವಳಿಕೆಯು, ತತ್ಸಮಾನವಾದ ಸಂತೋಷದ ಅನುಭವವನ್ನು ಗಳಿಸುವುದರಲ್ಲಿ ನಿಮಗೆ ನೆರವಾಗಲಿ. (g90 1/22)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ