ಒಂದು ಬೆಚ್ಚಗಿನ ಅತ್ತೆ-ಸೊಸೆ ಸಂಬಂಧದಲ್ಲಿ ಆನಂದಿಸುವುದು
ಫುಜಿಕೊ, ಲೇಖನದ ಆರಂಭದಲ್ಲಿ ಉಲ್ಲೇಖಿಸಲ್ಪಟ್ಟ ಬೇಗುದಿಗೊಂಡಿದ್ದ ಸೊಸೆಯು, ಕಟ್ಟಕಡೆಗೆ ಅವನ ಹೆತ್ತವರ ವಸತಿಯಿಂದ ಹೊರಗೆ, ಪಕ್ಕದ ಮನೆಗೆ ಹೋಗುವಂತೆ ಗಂಡನನ್ನು ಒತ್ತಾಯಿಸುವುದರಲ್ಲಿ ಯಶಸ್ವಿಯಾಗುತ್ತಾಳೆ. ಆದರೆ ವಿಷಯಗಳೇನೂ ಪ್ರಗತಿಹೊಂದಲಿಲ್ಲ. ಅವರ ಅತ್ತೆ-ಮಾವ ಮಧ್ಯಪ್ರವೇಶಿಸುವುದು ಮುಂದುವರಿಯಿತು ಮತ್ತು ಅವಳ ಖಿನ್ನತೆಯು ಮುಂದುವರಿಯಿತು. ಹೀಗಿರುವಾಗ ಒಬ್ಬ ಅಪರಿಚಿತಳು ಒಂದು ದಿನ ಅವಳ ಭೇಟಿ ಮಾಡಿದಳು.
ಆ ಭೇಟಿಯು ಫುಜಿಕೊಳನ್ನು ಬದಲಾದ ವ್ಯಕ್ತಿತ್ವವನ್ನುಂಟು ಮಾಡುವ ಒಂದು ಮಾರ್ಗದಲ್ಲಿ ತೊಡಗಿಸಿತು ಮತ್ತು ಇದು ಇತರರೊಡಗಿನ ಅವಳ ಸಂಬಂಧದಲ್ಲಿ ಸುಧಾರಣೆ ತಂದಿತು. ಅವಳು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್ ಅಭ್ಯಾಸ ಮಾಡಲು ಆರಂಭಿಸಿದಳು. ಸಮಯಾನಂತರ ಅವಳ ಮನೋಭಾವದಲ್ಲಾದ ಬದಲಾವಣೆ ಎಷ್ಟೆಂದರೆ ‘ಅವಳ ವ್ಯಕ್ತಿತ್ವವನ್ನು ಅಷ್ಟೊಂದು ಬದಲಾಯಿಸಿದ ಆ ಧರ್ಮ ಯಾವುದೆಂದು ಕಾಣಲು’ ಅವಳ ಮಾವನು ಸ್ವತಹ ಆ ಅಭ್ಯಾಸಗಳಲ್ಲಿ ಹಾಜರಾಗಲು ಬಯಸಿದನು.
ಹೊಸ ಬಂಧವನ್ನು ಅಂಗೀಕರಿಸುವುದು
ಶಾಸ್ತ್ರೀಯ ವೈವಾಹಿಕ ಏರ್ಪಾಡಿನ ಕುರಿತಾಗಿ ಬೈಬಲು ಒಂದು ಸ್ಪಷ್ಟ ಚಿತ್ರಣವನ್ನು ಕೊಡುತ್ತದೆ. ದೇವರು ಮೊದಲ ಮಾನವ ಜತೆಯನ್ನು ಸೃಷ್ಟಿಸಿ, ಅವರನ್ನು ಒಟ್ಟಿಗೆ ತಂದಾದ ನಂತರ, ಅವನು ಈ ಸೂತ್ರವನ್ನು ಸ್ಥಾಪಿಸಿದನು: “ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು.” (ಆದಿಕಾಂಡ 2:24) ಆದುದರಿಂದ, ನವ ದಂಪತಿಗಳು ತಾವು ಒಂದು ಹೊಸ ಬಂಧದಲ್ಲಿ ಪ್ರವೇಶಿಸಿದ್ದೇವೆ ಎಂದು ಅಂಗೀಕರಿಸತಕ್ಕದ್ದು. ಅವರು ತಮ್ಮ ಅತ್ತೆ—ಮಾವಂದಿರ ಒಟ್ಟಿಗೆ ಜೀವಿಸುವುದಾದರೂ, ಒಂದು ಸ್ವತಂತ್ರ ಘಟಕದೋಪಾದಿ ಅವರು ಒಬ್ಬರು ಇನ್ನೊಬ್ಬರೊಂದಿಗೆ ಒಟ್ಟಿಗೆ ಅಂಟಿಕೊಂಡಿರತಕ್ಕದ್ದು.
ಆದಾಗ್ಯೂ, ತಂದೆತಾಯಿಗಳನ್ನು ಬಿಡುವುದು ಅಂದರೆ ಮದುವೆಯ ನಂತರ ಮಕ್ಕಳು ತಮ್ಮ ಹೆತ್ತವರಿಗೆ ಬೆನ್ನು ತೋರಿಸಬೇಕು ಮತ್ತು ಇನ್ನು ಮುಂದೆ ಗೌರವಿಸುವ ಮತ್ತು ಮಾನ್ಯ ಮಾಡುವ ಆವಶ್ಯಕತೆಯಿಲ್ಲ ಎಂದರ್ಥವಲ್ಲ. “ಮುಪ್ಪಿನಲ್ಲಿಯೂ ತಾಯಿಯನ್ನು ಅಸಡ್ಡೆಮಾಡಬೇಡ,” ಎಂದು ಎಚ್ಚರಿಸುತ್ತದೆ ಬೈಬಲು. (ಜ್ಞಾನೋಕ್ತಿ 23:22) ಆದರೂ, ವಿವಾಹದೊಂದಿಗೆ ಸಂಬಂಧಗಳಲ್ಲಿ ಅಳವಡಿಕೆ ಇರುತ್ತದೆ. ಕುಟುಂಬದ ಪ್ರತಿಯೊಬ್ಬ ಸದಸ್ಯನು ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡರೆ, ಹೆತ್ತವರ ಅನುಭವದಿಂದ ಮತ್ತು ವಿವೇಕದಿಂದ ಎಳೆಯ ದಂಪತಿಗಳು ಪ್ರಯೋಜನ ಪಡೆಯಬಹುದು.
ತನ್ನ ಮಿಶನೆರಿ ಸಂಚಾರದಲ್ಲಿ ಅಪೊಸ್ತಲ ಪೌಲನು ಸಂಗಡ ಕೊಂಡೊಯ್ದ, ಸತ್ಕೀರ್ತಿ ಪಡೆದ ಎಳೆಯ ತಿಮೊಥಿಯು, ಅವನ ಯೆಹೂದ್ಯ ತಾಯಿಯಾದ ಯೂನೀಕೆಯಿಂದ ಪಾಲನೆಪಡೆದಿದ್ದನು. ಆದರೂ, ಅವನ ಅಜ್ಜಿಯಾದ ಲೋವಿಯಳ ಹಸ್ತವೂ ಅವನ ಜೀವನವನ್ನು ರೂಪಿಸುವುದರಲ್ಲಿ ಸೇರಿತ್ತು ಎಂದು ವಿದಿತವಾಗುತ್ತದೆ. (2 ತಿಮೊಥಿ 1:5; 3:15) ತಮ್ಮ ಹೆತ್ತವರಿಂದ ಭಿನ್ನವಾದ ಮಟ್ಟಗಳನ್ನು ಇಡಲು ಮತ್ತು ಮಕ್ಕಳ ತರಬೇತಿಯಲ್ಲಿ ಅಜ್ಜಿಯವರಿಗೂ ಮಧ್ಯಪ್ರವೇಶಿಸಲು ಹಕ್ಕಿದೆ ಎಂದು ಹೇಳುವುದಲ್ಲ. ಮಕ್ಕಳ ತರಬೇತಿಯಲ್ಲಿ ಹಳೆಯ ತಲೆಮಾರಿನವರು ಎಳೆಯವರಿಗೆ ಸಹಾಯವಾಗಬಲ್ಲ ಒಂದು ತಕ್ಕದ್ದಾದ ಕ್ರಮವಿದೆ.—ತೀತನಿಗೆ 2:3-5.
“ನಿಜವಾಗಿ ವಿವೇಕಿಯಾದ ಸ್ತ್ರೀ”
ಮಕ್ಕಳ ತರಬೇತಿಯಂಥಹ ಸೂಕ್ಷ್ಮ ಸಂವೇದಕ ವಿಷಯಗಳಲ್ಲಿ ಎರಡು ತಲೇಮಾರಿನವರು ಸಹಕರಿಸಬೇಕಾದರೆ, ಇಬ್ಬರೂ ವಿವೇಕದಿಂದ ವರ್ತಿಸಬೇಕಾಗುತ್ತದೆ. “ನಿಜವಾಗಿ ವಿವೇಕಿಯಾದ ಸ್ತ್ರೀಯು ತನ್ನ ಮನೆಯನ್ನು ಕಟ್ಟಿಕೊಳ್ಳುವಳು,” ಎಂದನ್ನುತ್ತದೆ ಬೈಬಲು, “ಆದರೆ ಮೂರ್ಖಳು ಅದನ್ನು ಸ್ವಂತ ಕೈಯಿಂದ ಮುರಿದುಬಿಡುವಳು.” (ಜ್ಞಾನೋಕ್ತಿ 14:1, NW) ಸ್ತ್ರೀಯೊಬ್ಬಳು ತನ್ನ ಮನೆಯನ್ನು ಕಟ್ಟಿಕೊಳ್ಳುವುದು ಹೇಗೆ? ಅವಳ ಸೊಸೆ, ಫುಜಿಕೊಳೊಂದಿಗೆ ಅವಳ ಸಂಬಂಧವನ್ನು ಸರಿಪಡಿಸಲು ಮಾತು-ಸಂಸರ್ಗವು ಸಹಾಯ ಮಾಡಿತು ಎಂದು ಟೊಮಿಕೊ ಹೇಳುತ್ತಾಳೆ. “ರಹಸ್ಯ ಮಾತುಕತೆ ಇಲ್ಲದಿರುವಲ್ಲಿ ಯೋಜನೆಗಳು ನಿಷ್ಫಲಗೊಳ್ಳುವವು,” ಎಂದು ಸಲಹೆ ನೀಡುತ್ತದೆ ಬೈಬಲು.—ಜ್ಞಾನೋಕ್ತಿ 15:22,NW.
ಮಾತು-ಸಂಸರ್ಗವೆಂದರೆ ಇತರರ ಭಾವನೆಗಳನ್ನು ಪರಿಗಣಿಸದೆ, ನಿಮ್ಮ ಮನಸ್ಸಿನಲ್ಲಿ ಇರುವುದನ್ನೆಲ್ಲಾ ಥಟ್ಟನೇ ಬಾಯಿಗೆ ಬಂದಂತೆ ಆಡಿಬಿಡುವುದು ಎಂಬರ್ಥವಲ್ಲ. ಇಲ್ಲಿಯೇ ವಿವೇಕವು ತನ್ನ ಪಾತ್ರವನ್ನು ಆಡುತ್ತದೆ. ಬೇರೆಯವರು ಏನು ಹೇಳಲಿಕ್ಕಿದ್ದಾರೋ ಅದನ್ನು “ವಿವೇಕಿಯಾದ ವ್ಯಕ್ತಿಯು ಆಲಿಸುವನು.” ಕೆಲವೊಮ್ಮೆ ನಿಮ್ಮ ಅತ್ತೆ-ಮಾವನಿಗೆ ಯಾ ಸೊಸೆ-ಅಳಿಯನಿಗೆ ಏನೋ ಒಂದು ವಿಷಯ ಹೇಳಲಿಕ್ಕೆ ಇರಬಹುದು, ಆದರೆ ಅವರು ಅದನ್ನು ವ್ಯಕ್ತಪಡಿಸಲು ಸ್ವತಹ ಶಂಕಿಸುತ್ತಿರಬಹುದು. ವಿವೇಚನಾಪರರಾಗಿರ್ರಿ ಮತ್ತು ‘ಅವರ ಯೋಚನೆಗಳನ್ನು ಮೇಲಕ್ಕೆ ಸೇದಿರಿ.’ ಅನಂತರ ನೀವು ಮಾತಾಡುವ ಮೊದಲು ‘ಧ್ಯಾನಿಸಿರಿ.’—ಜ್ಞಾನೋಕ್ತಿ 1:5; 15:28; 20:5,NW.
ಉಚಿತ ಸಮಯವು ಅತಿ ಪ್ರಾಮುಖ್ಯ. “ಸಮಯೋಚಿತವಾದ ಮಾತುಗಳು ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣುಗಳಿಗೆ ಸಮಾನ,” ಎಂದು ಬೈಬಲಿನ ಒಂದು ಗಾದೆಯು ಹೇಳುತ್ತದೆ. (ಜ್ಞಾನೋಕ್ತಿ 25:11) ಟೊಕಿಕೊ ಮತ್ತು ಅವಳ ಸೊಸೆಯು ಹೇಳುವುದೇನಂದರೆ ತಪ್ಪಾದ ರೀತಿಯಲ್ಲಿ ತಮಗೆ ನೋವುಂಟುಮಾಡಿದ ವಿಷಯದ ಅವರ ಅಭಿಪ್ರಾಯಗಳನ್ನು ವ್ಯಕ್ತ ಮಾಡುವ ಮೊದಲು ಅವರು ಯೋಗ್ಯವಾದ ಸಮಯಕ್ಕಾಗಿ ಕಾಯುತ್ತಾರೆ. “ನನ್ನ ಸೊಸೆಗೆ ಏನಾದರೂ ಸೂಚಿಸಲು ನಾನು ಬಯಸುವಾಗ, ಮಾತಾಡುವ ಮೊದಲು ನಾನು ಆಲೋಚಿಸಲು ಪ್ರಯತ್ನಿಸುತ್ತೇನೆ,” ಹೇಳುತ್ತಾಳೆ ಟೊಕಿಕೊ. “ನಾನು ಸಂಗತಿಗಳನ್ನು ಮನಸ್ಸಿನಲ್ಲಿ ಇಟ್ಟು ಕೊಂಡು ಅವಳು ಒಳ್ಳೆಯ ಮನೋಸ್ಥಿತಿಯಲ್ಲಿದ್ದಾಗ ಮತ್ತು ಹಸಿವೆಯಿಂದ ಇಲ್ಲದಿರುವಾಗ ಮಾತಾಡುತ್ತೇನೆ. ನೀವು ನೋಡಿ, ಹಸಿದಿರುವಾಗ, ರೇಗುವುದು ಬಹು ಸುಲಭ.”
ವಿವೇಕಿಯಾದ ಹೆಂಗಸು ಅವಳ ವಿವಾಹ-ಸಂಬಂಧಿಗಳ ಕುರಿತಾಗಿ ಕೆಟ್ಟದ್ದನ್ನಾಡುವುದನ್ನು ತಡೆಹಿಡಿಯುತ್ತಾಳೆ. “ನಾವು ಅತ್ತೆಯಂದಿರಾಗಿರಲಿ, ಯಾ ಸೊಸೆಯರಾಗಿರಲಿ, ಬೇರೆ ವ್ಯಕ್ತಿಯ ಕುರಿತು ನಾವೇನನ್ನಾದರೂ ಕೆಟ್ಟದ್ದನ್ನು ಮಾತಾಡಿದರೆ, ಅದು ಅವರಿಗೆ ಕ್ರಮೇಣ ತಿಳಿದು ಬರುತ್ತದೆ,” ಎಂದು 30 ವರ್ಷ ಅವಳ ಅತ್ತೆಯೊಂದಿಗೆ ಜೀವಿಸಿದ್ದ ಜಪಾನಿನ ಲೇಖಕಿ ಸುಮೀ ಟನಾಕ ಹೇಳುತ್ತಾಳೆ. ಬದಲಿಗೆ, ವಿವಾಹ-ಸಂಬಂಧಿಗಳ ಬಗ್ಯೆ ನೇರವಾಗಿ ಯಾ ಪರೋಕ್ಷವಾಗಿ ಒಳ್ಳೇಯದನ್ನೇ ಮಾತಾಡುವುದನ್ನು ಅವಳು ಸಮರ್ಥಿಸುತ್ತಾಳೆ,
ನಿಮ್ಮ ಪ್ರಯತ್ನಗಳಿಗೆ ಅತ್ತೆ-ಮಾವ ಯಾ ಸೊಸೆ-ಅಳಿಯ ಪ್ರತಿಕ್ರಿಯಿಸದಿದ್ದರೆ, ಆಗ ಏನು?
ಕ್ಷಮಿಸುವವರಾಗಿರ್ರಿ
ನಮ್ಮ ಅತ್ತೆ-ಮಾವ ಯಾ ಸೊಸೆ-ಅಳಿಯ ಹೇಳಿದ ಇಲ್ಲವೆ ಮಾಡಿದ ಸಂಗತಿಗಳಿಂದ ಉದ್ಭವಿಸುವ ಗಂಭೀರ ಸಮಸ್ಯೆಗಳು, ಒಂದು ವೇಳೆ ಅದನ್ನೇ ಇತರರು ಹೇಳಿದರೆ ಯಾ ಮಾಡಿದರೆ ಸಮಸ್ಯೆಗೆ ಕಾರಣವಾಗುವುದಿಲ್ಲ. ನಾವೆಲ್ಲರೂ ಪಾಪಿಗಳಾಗಿರುವುದರಿಂದ ಮತ್ತು “ಮಾತಿನಲ್ಲಿ ತಪ್ಪುವುದರಿಂದ,” ಕೆಲವೊಮ್ಮೆ ನಾವು ‘ಕತ್ತಿ ತಿವಿದ ಹಾಗೆ ದುಡುಕಿ ಮಾತಾಡುವುದುಂಟು.’ (ಯಾಕೋಬ 3:2; ಜ್ಞಾನೋಕ್ತಿ 12:18) ಆದರೂ ವಿಚಾರಮಾಡದೇ ಹೇಳಿದ ಪ್ರತಿಯೊಂದು ಮಾತುಗಳಿಗೆ ಬೇಸರಿಸಿ ಕೊಳ್ಳುವುದು ವಿವೇಕತನವಲ್ಲ.
ಅತ್ತೆ-ಮಾವ ಯಾ ಸೊಸೆ-ಅಳಿಯ ಸಮಸ್ಯೆಗಳನ್ನು ಯಶಸ್ವೀಯಾಗಿ ನಿಭಾಯಿಸಿದವರು ಬೈಬಲಿನ ಈ ಸಲಹೆಗೆ ಕಿವಿ ಕೊಟ್ಟಿರುತ್ತಾರೆ: “ಮತ್ತೊಬ್ಬನ ಮೇಲೆ ತಪ್ಪು ಹೊರಿಸುವುದಕ್ಕೆ ಕಾರಣವಿದ್ದರೂ ತಪ್ಪು ಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ.” (ಕೊಲೊಸ್ಸೆಯವರಿಗೆ 3:13) ನಿಜ, ವಿಶೇಷವಾಗಿ ದೂರುವಿಕೆಗೆ ಒಂದು ಕಾರಣವಿರುವಾಗ, ನಮ್ಮ ಅತ್ತೆ-ಮಾವ ಯಾ ಸೊಸೆ-ಅಳಿಯರನ್ನು ಸೈರಿಸಿಕೊಂಡು ಅವರನ್ನು ಕ್ಷಮಿಸುವುದು ಅಷ್ಟೇನೂ ಸುಲಭವಲ್ಲ. ಆದರೆ ಹಾಗೆ ಮಾಡಲು ನಮಗೆ ಒಂದು ಬಲವಾದ ಉತ್ತೇಜಕವೇನಂದರೆ ಆ ಮೂಲಕ ನಮ್ಮ ತಪ್ಪುಗಳಿಗೆ ದೇವರಿಂದ ತಾನೇ ನಮಗೆ ಕ್ಷಮಾಪಣೆ ದೊರಕುತ್ತದೆ ಎಂಬ ಆಶ್ವಾಸನೆ ಇದೆ.—ಮತ್ತಾಯ 6:14, 15.
ಬೌದ್ಧ, ಟೌವೊ, ಕನ್ಫೂಶಿಯನ್ ಮತ್ತು ಶಿಂಟೊ ಮತಗಳನ್ನು ಸಾಂಪ್ರದಾಯಿಕವಾಗಿ ಅನುಸರಿಸುವ ಜನರಿರುವ ಪೌರ್ವಾತ್ಯ ದೇಶಗಳಲ್ಲಿ ಕೂಡಾ, ಬೈಬಲನ್ನು ಅಭ್ಯಾಸಿಸುವ ಮತ್ತು ದಯಾಪರತೆಯ ನಿರ್ಮಾಣಿಕನ ಸತ್ಯತೆಯನ್ನು ಗಣ್ಯಮಾಡುವ ಅನೇಕರು ಇದ್ದಾರೆ. ದುಸ್ತರವೆಂದು ಭಾವಿಸಲ್ಪಟ್ಟಿದ್ದ ಕಹಿ ಮನೋಭಾವವನ್ನು ತೊಲಗಿಸಲು ಅಂತಹ ಗಣ್ಯತೆಯು ಅವರಿಗೆ ನೆರವಾಗಿದೆ.
“ಪ್ರೀತಿಯು ಎಂದಿಗೂ ಬಿದ್ದು ಹೋಗುವುದಿಲ್ಲ”
ಒಂದು ಆನಂದದ ಅತ್ತೆ-ಮಾವ—ಸೊಸೆ-ಅಳಿಯಂದಿರ ಸಂಬಂಧಕ್ಕೆ ದೃಢವಾದ ಬುನಾದಿ ಇರಬೇಕಾಗಿದೆ. ಹಂಗಿನ ಪ್ರಜ್ಞೆಯುಳ್ಳವರಾಗಿ ಪ್ರಾಯ ಸಂದ ಇಲ್ಲವೇ ರೋಗಿಯಾದ ಅತ್ತೆ-ಮಾವಂದಿರಿಗೆ ಸಹಾಯ ಕೊಟ್ಟು ನೋಡಿ ಕೊಳ್ಳುವುದು, ಯಾವಾಗಲೂ ಒಂದು ಉತ್ತಮ ಸಂಬಂಧಕ್ಕೆ ಕಾರಣವಾಗುವುದಿಲ್ಲ. ಅವಳ ಅತ್ತೆಯು ಕ್ಯಾನ್ಸರಿನಿಂದ ಸಾಯಲಿದ್ದಾಗ ಹಾರುಕೊ ಇದನ್ನು ಕಲಿತಳು. ಅವಳು ಅತ್ತೆಯ ಶುಶ್ರೂಷೆ ಮಾಡುತ್ತಾ ಅವಳ ದಿನದ ಅಧಿಕ ಭಾಗವನ್ನು ಅವಳು ಆಸ್ಪತ್ರೆಯಲ್ಲಿ ಕಳೆಯುತ್ತಿದ್ದಳು, ಮತ್ತು ಇದಕ್ಕೆ ಹೊರತಾಗಿಯೂ, ಅವಳ ಸ್ವಂತ ಕುಟುಂಬದ ಆರೈಕೆಯನ್ನು ಕೂಡಾ ನೋಡಿಕೊಳ್ಳಲಿಕ್ಕೆ ಇತ್ತು. ಅವಳು ಎಷ್ಟೊಂದು ಒತ್ತಡದಲ್ಲಿದ್ದಳೆಂದರೆ ಅವಳ ಅಧಿಕಾಂಶ ಕೂದಲುಗಳು ಉದುರಿಹೋದವು.
ಒಂದು ದಿನ ಅವಳ ಅತ್ತೆಯ ಉಗುರುಗಳನ್ನು ಕತ್ತರಿಸುವಾಗ, ಅವಳು ತಿಳಿಯದೇ ಉಗುರುಕಣ್ಣನ್ನು ಕತ್ತರಿಸಿದಳು. “ನೀನು ನಿಜವಾಗಿಯೂ ನನ್ನ ಲಕ್ಷ್ಯಮಾಡುವುದಿಲ್ಲ!” ಸಿಡಿಗುಟ್ಟಿದಳು ಅತ್ತೆ.
ಈ ಗಣ್ಯತೆಹೀನ ನುಡಿಗಳಿಂದ ತಲ್ಲಣಗೊಂಡು, ಹಾರುಕೊ ಅವಳ ಕಣ್ಣೀರನ್ನು ತಡೆಹಿಡಿಯಲು ಶಕ್ತಳಾಗಲಿಲ್ಲ. ಅನಂತರ ಈ ಮಾತುಗಳು ಅಷ್ಟೊಂದು ಅವಳಿಗೆ ಯಾತನೆ ಕೊಟ್ಟದ್ದು ಯಾಕೆಂದು ತಿಳಿದಳು, ಕಾರಣ ಅವಳು ತನ್ನ ಅತ್ತೆಗೆ ಮಾಡುತ್ತಿದ್ದ ಎಲ್ಲಾ ಸಂಗತಿಗಳು ಅವಳೆಡೆಗಿನ ಹಂಗಿನ ಪ್ರಜ್ಞೆಯ ಕಾರಣದಿಂದಾಗಿ. ಅವಳ ಸೇವೆಯ ಪ್ರಚೋದಕ ಶಕ್ತಿಯು ಈಗ ಪ್ರೀತಿಯಾಗಿರಬೇಕೆಂದು ನಿರ್ಣಯಿಸಿದಳು. (ಎಫೆಸದವರಿಗೆ 5:1, 2) ಇದು ಅವಳ ಘಾಸಿಗೊಂಡ ಭಾವನೆಗಳ ಮೇಲೆ ಹತೋಟಿ ತರಲು ಸಾಧ್ಯಮಾಡಿತು ಮತ್ತು ಅವಳ ಅತ್ತೆಯು ಸಾಯುವ ತನಕ ಅವಳೊಂದಿಗೆ ಪುನಃಸ್ಥಾಪಿತ ಸಂಬಂಧವನ್ನು ತಂದಿತು.
ಕುಟುಂಬದ ಅನೈಕ್ಯತೆಯನ್ನು ಶಮನಗೊಳಿಸಲು ಬೈಬಲಿನಲ್ಲಿ ವಿವರಿಸಲಾದ ಪ್ರೀತಿಯು ಖಂಡಿತವಾಗಿ ಒಂದು ಕೀಲಿಕೈಯಾಗಿದೆ. ಇದರ ಕುರಿತು ಅಪೊಸ್ತಲ ಪೌಲನು ಹೇಳಿದ್ದನ್ನು ಓದಿರಿ ಮತ್ತು ಇದರೊಂದಿಗೆ ನೀವು ಸಮ್ಮತಿಸುತ್ತೀರೋ ಇಲ್ಲವೋ ಎಂದು ನೋಡಿರಿ. “ಪ್ರೀತಿಯು ಬಹು ತಾಳ್ಮೆಯುಳ್ಳದ್ದು ಮತ್ತು ದಯೆ ತೋರಿಸುವುದು,” ಎಂದು ಅವನು ಬರೆದನು. “ಪ್ರೀತಿಯು ಹೊಟ್ಟೆಕಿಚ್ಚುಪಡುವುದಿಲ್ಲ, ಹೊಗಳಿಕೊಳ್ಳುವುದಿಲ್ಲ, ಉಬ್ಬಿಕೊಳ್ಳುವುದಿಲ್ಲ; ಮರ್ಯಾದೆಗೆಟ್ಟು ನಡೆಯುವುದಿಲ್ಲ, ಸ್ವಪ್ರಯೋಜನವನ್ನು ಚಿಂತಿಸುವುದಿಲ್ಲ, ಸಿಟ್ಟುಗೊಳ್ಳುವುದಿಲ್ಲ, ಅಪಕಾರವನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದಿಲ್ಲ; ಅನ್ಯಾಯವನ್ನು ನೋಡಿ ಸಂತೋಷ ಪಡದೆ ಸತ್ಯಕ್ಕೆ ಜಯವಾಗುವಲ್ಲಿ ಸಂತೋಷ ಪಡುತ್ತದೆ; ಎಲ್ಲವನ್ನೂ ಅಡಗಿಸಿಕೊಳ್ಳುತ್ತದೆ, ಎಲ್ಲವನ್ನೂ ನಂಬುತ್ತದೆ, ಎಲ್ಲವನ್ನೂ ನಿರೀಕ್ಷಿಸುತ್ತದೆ, ಎಲ್ಲವನ್ನೂ ಸಹಿಸಿಕೊಳ್ಳುತ್ತದೆ.” ಆದುದರಿಂದ ಇದನ್ನು ಪೌಲನು ಕೂಡಿಸಿದ್ದರಲ್ಲಿ ಏನೂ ಆಶ್ಚರ್ಯವಿಲ್ಲ: “ಪ್ರೀತಿಯು ಎಂದಿಗೂ ಬಿದ್ದು ಹೋಗುವುದಿಲ್ಲ.” (1 ಕೊರಿಂಥದವರಿಗೆ 13:4-8) ಅಂತಹ ಪ್ರೀತಿಯನ್ನು ನೀವು ಹೇಗೆ ಬೆಳೆಸಿಕೊಳ್ಳ ಬಹುದು?
ದೇವರ ಆತ್ಮನ “ಫಲಗಳ” ಭಾಗವಾಗಿ “ಪ್ರೀತಿಯು” ಇದೆ ಎಂದು ಬೈಬಲು ಪಟ್ಟಿಮಾಡಿದೆ. (ಗಲಾತ್ಯದವರಿಗೆ 5:22, 23) ಆದಕಾರಣ ನಿಮ್ಮ ಸ್ವಂತ ಪ್ರಯತ್ನಗಳೊಂದಿಗೆ ಕೂಡಿಸಿ, ಅಂತಹ ವಿಧದ ಪ್ರೀತಿಯನ್ನು ನೀವು ಬೆಳಸಬೇಕಾದರೆ ದೇವರ ಆತ್ಮವು ಇರುವುದು ಅತ್ಯಾವಶ್ಯಕ. ಇದರೊಂದಿಗೆ, ಬೈಬಲಿನ ದೇವರಾದ ಯೆಹೋವನಿಗೆ ಅವನಲ್ಲಿದ್ದಂತಹ ಪ್ರೀತಿಯನ್ನು ನಿಮ್ಮ ವ್ಯಕ್ತಿತ್ವದಲ್ಲಿ ಕೂಡಿಸಲು ಸಹಾಯ ಮಾಡುವಂತೆ ನೀವು ವಿನಂತಿಸಬಹುದು. (1 ಯೋಹಾನ 4:8) ಅದರ ಅರ್ಥ, ಅವನ ವಾಕ್ಯವಾದ ಬೈಬಲನ್ನು ನೀವು ಅಭ್ಯಾಸಿಸಿ, ಅವನ ಕುರಿತು ನೀವು ಕಲಿಯುವುದನ್ನು ಇದು ಕೇಳಿಕೊಳ್ಳುತ್ತದೆ. ಫುಜಿಕೊ ಮತ್ತು ಇತರ ಅನೇಕರಿಗೆ ಮಾಡಿದಂತೆ, ನಿಮಗೆ ನೆರವಾಗಲು ಯೆಹೋವನ ಸಾಕ್ಷಿಗಳು ಅತಿ ಸಂತೋಷ ಪಡುತ್ತಾರೆ.
ಬೈಬಲಿನಿಂದ ನೀವೇನು ಕಲಿಯುತ್ತೀರೋ ಅದನ್ನು ನೀವು ಅನ್ವಯಿಸುವುದರಿಂದ, ದೇವರೊಂದಿಗೆ ಮಾತ್ರವಲ್ಲ, ನಿಮ್ಮ ಸುತ್ತಲಿರುವ ಪ್ರತಿಯೊಬ್ಬರೊಂದಿಗೆ, ನಿಮ್ಮ ಅತ್ತೆ-ಮಾವ—ಸೊಸೆ-ಅಳಿಯಂದಿರೊಂದಿಗೂ ಸಹ ನಿಮ್ಮ ಸಂಬಂಧವು ಪ್ರಗತಿಯಾಗುವುದನ್ನು ನೀವು ಕಾಣುವಿರಿ. ಬೈಬಲು ವಾಗ್ದಾನಿಸಿದ್ದನ್ನು, ವಿಶೇಷವಾಗಿ “ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯನ್ನು” ನೀವು ಅನುಭವಿಸುವಿರಿ.—ಫಿಲಿಪ್ಪಿಯವರಿಗೆ 4:6, 7.
ಈ ಲೇಖನಗಳಲ್ಲಿ ಉಲ್ಲೇಖಿಸಲಾದ ಫುಜಿಕೊ ಮತ್ತು ಇನ್ನಿತರರು ಅಂತಹ ಶಾಂತಿಯಲ್ಲಿ ಆನಂದಿಸಲು ಶಕ್ತರಾದರು—ತದ್ರೀತಿ ನೀವೂ ಕೂಡಾ. ಹೌದು, ಯೆಹೋವನ ಕಡೆಗೆ ನೋಡುತ್ತಾ, ಅವನ ವಾಕ್ಯವಾದ ಬೈಬಲಿನ ಸಲಹೆಗಳನ್ನು ಅನ್ವಯಿಸಿ ಕೊಂಡು, ನೀವೂ ನಿಮ್ಮ ಅತ್ತೆ-ಮಾವ—ಸೊಸೆ-ಅಳಿಯಂದಿರೊಂದಿಗೆ ಒಂದು ಬೆಚ್ಚಗಿನ ಸಂಬಂಧವನ್ನು ಕಟ್ಟಬಹುದು ಮತ್ತು ಕಾಪಾಡಿಕೊಳ್ಳಬಹುದು. (g90 2/22)
[ಪುಟ 8ರಲ್ಲಿರುವಚೌಕ]
ಗಂಡನು—ಶಾಂತಿಕರ್ತನೋ ಯಾ ಶಾಂತಿಭಂಜಕನೋ?
ಎರಡು ಯಾ ಮೂರು ತಲೆಮಾರಿನವರು ಒಂದು ಸೂರಿನ ಕೆಳಗೆ ವಾಸಿಸುವಾಗ, ಕೌಟುಂಬಿಕ ಶಾಂತಿಯನ್ನು ಕಾಪಾಡುವುದರಲ್ಲಿ ಗಂಡನ ಪಾತ್ರವನ್ನು ಅಲಕ್ಷಿಸಲಾಗುವುದಿಲ್ಲ. ತನ್ನ ಜವಾಬ್ದಾರಿಯನ್ನು ಜಾರಿಸಿಕೊಳ್ಳುವ ಒಬ್ಬ ಸಾಂಕೇತಿಕ ಗಂಡನ ಕುರಿತಾಗಿ ಕ್ಯಿಯುಶು ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಟೊಹ್ರು ಅರಿಚಿ, ಕುಟುಂಬ ಸಮಾಜ ಶಾಸ್ತ್ರದ ತಜ್ಞನು ಬರೆಯುವುದು:
“ದಂಪತಿಗಳು (ತಾಯಿಯೊಂದಿಗೆ) ಜೀವಿಸುವಾಗ, ತಾಯಿಯು ಅವಳ ಮಗನ ಆವಶ್ಯಕತೆಯನ್ನು ಗ್ರಹಿಸುತ್ತಾಳೆ, ಮತ್ತು ಅಂತಹ ಆವಶ್ಯಕತೆಗಳನ್ನು ಅರಿತುಕೊಂಡಾಗ, ಅವಳ ಮಗನಿಗಾಗಿ ಉದ್ದೇಶರಹಿತವಾಗಿಯೇ ಪೂರೈಸುತ್ತಾಳೆ. ಯಾವುದೇ ಆತಂಕವಿಲ್ಲದೇ ಅಂತಹ ಪೂರೈಸುವಿಕೆಗಳನ್ನು ಮಗನು ಸ್ವೀಕರಿಸುತ್ತಾನೆ. ಆದರೆ ಅವನ ಹೆಂಡತಿಯ ಸನ್ನಿವೇಶವನ್ನು ಸ್ವಲ್ಪ ಯೋಚಿಸಿ, ತಾಯಿಯನ್ನು ಅವಳ ಸ್ಥಾನದಲ್ಲಿಟ್ಟು, ತಾಯಿಯು ಮಧ್ಯಪ್ರವೇಶಿಸುವುದನ್ನು ಸ್ವಲ್ಪ ಯೋಚಿಸಿದರೆ, ಸಮಸ್ಯೆಯು ಪರಿಹರಿಸಲ್ಪಡುತ್ತದೆ. ವಿಷಾದಕರವಾಗಿ, ಮತ್ತು ಆಗಾಗ್ಯೆ ಮಗನು ಇದನ್ನು ಅರ್ಥಮಾಡಿ ಕೊಳ್ಳುವುದಿಲ್ಲ.”
ತನ್ನ ಕುಟುಂಬದಲ್ಲಿ ಶಾಂತಿಯನ್ನು ಇಟ್ಟುಕೊಳ್ಳಲು ಹಾಗಾದರೆ, ಗಂಡನು ಹೇಗೆ ಒಂದು ಕ್ರಿಯಾತ್ಮಕ ಪಾತ್ರವನ್ನು ವಹಿಸಿಕೊಳ್ಳಬಹುದು? ಮಿಟ್ಸುಹಾರು ಹೇಳುವುದು, ಅವನ ಕುಟುಂಬದಲ್ಲಿ ಬೈಬಲಿನ ಸೂತ್ರಗಳನ್ನು ಅವನು ಅನ್ವಯಿಸಿಕೊಂಡದ್ದರಿಂದ ಸಹಾಯವಾಯಿತು. “ಅವನು ಪ್ರಾಯಕ್ಕೆ ಬಂದಿದ್ದಾನಾದರೂ, ತಾಯಿ ಮತ್ತು ಮಗನ ನಡುವಿನ ಬಂಧವು ಅತೀ ಬಲವಾಗಿರುತ್ತದೆ,” ಎಂದವನು ಒಪ್ಪುತ್ತಾನೆ, “ಆದುದರಿಂದ ಮಗನು ‘ತನ್ನ ತಂದೆತಾಯಿಗಳನ್ನು ಬಿಟ್ಟು, ಅವನ ಹೆಂಡತಿಯೊಂದಿಗೆ ಸೇರಿಕೊಳ್ಳಲು’ ಪ್ರಜ್ಞಾಪೂರ್ವಕ ಪ್ರಯತ್ನಗಳನ್ನು ಮಾಡತಕ್ಕದ್ದು.’” ಮಗುವಿನ ಪಾಲನೆ-ಪೋಷಣೆ ಮತ್ತು ತರಬೇತಿಗೆ ಸಂಬಂಧಿಸಿದ ವಿಷಯಗಳನ್ನು ಕೇವಲ ತನ್ನ ಹೆಂಡತಿಯೊಂದಿಗೆ ಮಾತಾಡುವ ಸೂತ್ರವನ್ನು ಅನ್ವಯಿಸಿದನು ಮತ್ತು ಮನೆವಾರ್ತೆಯ ಕೆಲಸಗಳ ಬಗ್ಯೆ ಅವನು ತನ್ನ ಹೆಂಡತಿಯನ್ನು ತಾಯಿಯೊಂದಿಗೆ ಹೋಲಿಸಲಿಲ್ಲ. “ಈಗ,” ಅವನು ಮುಂದುವರಿಸುವುದು, “ನಾವು ಮತ್ತು ನಮ್ಮ ಹೆತ್ತವರು ಪರಸ್ಪರ ಗೌರವಿಸುತ್ತೇವೆ. ಎಲ್ಲಿ ಮಧ್ಯ ಪ್ರವೇಶಮಾಡುವಿಕೆಯು ಮುನಿಸುವಿಕೆಗೆ ನಡಿಸುತ್ತದೆ ಮತ್ತು ಎಲ್ಲಿ ಸಹಾಯ ಮತ್ತು ಸಹಕಾರವು ಗಣ್ಯಮಾಡಲ್ಪಡುತ್ತದೆ ಎಂದು ನಮ್ಮಲ್ಲಿ ಪ್ರತಿಯೊಬ್ಬನು ತಿಳಿದಿದ್ದಾನೋ.
‘ತನ್ನ ಹೆಂಡತಿಯೊಂದಿಗೆ ಸೇರಿಕೊಂಡಿರುವುದರ’ ಒಟ್ಟಿಗೆ, ಅವನ ತಾಯಿ ಮತ್ತು ಹೆಂಡತಿಯ ನಡುವೆ ಗಂಡನು ಮಧ್ಯಸ್ಥನಾಗಿರತಕ್ಕದ್ದು. (ಆದಿಕಾಂಡ 2:24) ಅವನು ಕಿವಿಗೊಟ್ಟು ಆಲಿಸುವವನಾಗಿರಬೇಕು ಮತ್ತು ಅವರ ಹೃದಯವನ್ನು ತೋಡಿಕೊಳ್ಳಲು ಅವಕಾಶವನ್ನೀಯಬೇಕು. (ಜ್ಞಾನೋಕ್ತಿ 20:5) ಜಾಣತನದಿಂದ ಸನ್ನಿವೇಶಗಳನ್ನು ನಿಭಾಯಿಸಲು ಕಲಿತ ಗಂಡನು, ತನ್ನ ಹೆಂಡತಿಯು ಹೇಗೆ ಭಾವಿಸುತ್ತಾಳೆಂದು ಮೊದಲು ಕಂಡುಕೊಳ್ಳುತ್ತಾನೆ. ಅನಂತರ, ಅವನ ಹೆಂಡತಿಯ ಹಾಜರಿಯಲ್ಲಿ ಒಳಗೂಡಿರುವ ವಿವಾದಗಳನ್ನು ಅವನ ತಾಯಿಯೊಂದಿಗೆ ಮಾತಾಡುತ್ತಾನೆ. ಈ ರೀತಿಯಲ್ಲಿ ಶಾಂತಿಕರ್ತನೋಪಾದಿ ತನ್ನ ಪಾತ್ರವನ್ನು ಅವನು ನಿರ್ವಹಿಸುವಾಗ, ಅವನು ಪ್ರೀತಿಸುವ ಇಬ್ಬರು ಹೆಂಗಸರ ನಡುವೆ ಮನೆಯಲ್ಲಿ ಆಹ್ಲಾದಕರ ಸಂಬಂಧಗಳನ್ನು ಉತ್ಪಾದಿಸಲು ಮಗನು ಸಹಾಯಮಾಡಶಕ್ತನು.
[ಪುಟ 9 ರಲ್ಲಿರುವಚಿತ್ರ]
ಆಲಿಸುವ ಕಿವಿಗಳುಳ್ಳವರಾಗಿರಿ ಮತ್ತು ಮಾತು-ಸಂಸರ್ಗವಿರಲಿ
[ಪುಟ 10 ರಲ್ಲಿರುವಚಿತ್ರ]
ಪ್ರೀತಿ, ಹಂಗಿನ ಒಂದು ಭಾವನೆಯಲ್ಲ, ಉತ್ತಮ ಸಂಬಂಧವನ್ನು ಕಟ್ಟುತ್ತದೆ