ಸಮಸ್ಯೆಗೆ ಕಾರಣ ಆಗುವುದು ಯಾವುದು?
“ಕುಟುಂಬಕ್ಕೆ ತುಂಬಾ ಉಪ್ಪು ಒಳ್ಳೆಯದಲ್ಲ!” ತಾಯಿಯು ಘೋಷಿಸುತ್ತಾಳೆ. “ಆದರೆ ಊಟವು ಖಾರವಿಲ್ಲದ್ದು ಮತ್ತು ಬರೇ ಸಪ್ಪೆ!” ಸೊಸೆಯು ಪಟ್ಟು ಹಿಡಿಯುತ್ತಾಳೆ. ತಾಯಿಯು ಬೆನ್ನು ತಿರುಗಿಸಿದಾಗ, ಸೊಸೆಯು ಒಂದಿಷ್ಟು ಉಪ್ಪು ಸೇರಿಸುತ್ತಾಳೆ.
ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ವಿಷಯಗಳನ್ನು ಮಾಡಲು ಪ್ರಯತ್ನಿಸುವಾಗ, ಇಬ್ಬರೂ ಆನಂದಿಸಲಾಗದಂತಹ ಒಂದು ಊಟವನ್ನು ಮಾಡಬೇಕಾದ ಪ್ರಮೇಯ ಬಂದೊದಗುತ್ತದೆ. ಆದರೆ ಅದರ ಪರಿಣಾಮಗಳಾದರೋ ಅದಕ್ಕಿಂತಲೂ ಹೆಚ್ಚು ಗಂಭೀರತರದ್ದಾಗಬಹುದು. ಅತೆ—ಸೊಸೆಯರ ತಿಕ್ಕಾಟಗಳು ಮಾನಸಿಕ ಮತ್ತು ಭಾವನಾತ್ಮಕ ಹೋರಾಟಗಳಿಗೆ ನಡಿಸಬಹುದು, ಅದು ವರ್ಷಾನುಗಟ್ಟಲೆ ಮುಂದುವರಿಯಬಹುದು.
ಅನೇಕರಿಗೆ ಇಂಥಹ ರೀತಿಯ ತಿಕ್ಕಾಟಗಳು ಹೋಗಲಾಡಿಸಲಸಾಧ್ಯವಾದವುಗಳೆಂದು ತೋರಬಹುದು. “ಆದಾಗ್ಯೂ ಒಂದು ಕುಟುಂಬವು ಎಷ್ಟು ಉತ್ತಮವಾಗಿ ಹೊರಗಡೆಯಲ್ಲಿ ತೋರಬಹುದಾದರೂ. ಅತ್ತೆ ಮತ್ತು ಸೊಸೆಯರ ನಡುವೆ ಘರ್ಷಣೆ ಸಂಭವಿಸುವುದು ಖಂಡಿತ,” ಎಂದು ಬರೆಯುತ್ತಾರೆ ಜಪಾನಿನ ಮಾನಸಿಕ ಆಸ್ಪತ್ರೆ ಸಂಘಟನೆಗಳ ಅಧ್ಯಕ್ಷರಾದ ಡಾ. ಶಿಗೆಟಾ ಸೈಟೊ. ಆದರೆ ಸಮಸ್ಯೆಯು ಕೇವಲ ಪೌರ್ವಾತ್ಯ ದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ.
ಇಟೆಲಿಯ ಎಚ್ಚರ! ಪತ್ರಿಕೆಯ ಬಾತ್ಮೀದಾರ ವರದಿಸುವುದು, “ಮದುವೆಯಾಗಿ ವಧುವಿನ ಇಲ್ಲವೇ ವರನ ಹೆತ್ತವರ ಒಟ್ಟಿಗೆ ವಾಸಿಸಲು ತೆರಳುವುದು ಅನೇಕ ಕುಟುಂಬಗಳಲ್ಲಿ ಸಮಸ್ಯೆಗಳಿಗೆ ಕಾರಣವಾಗಿದೆ, ಮತ್ತು ಅನೇಕ ಎಳೆಯ ಪತ್ನಿಯರು ಭಾದೆಗೊಳಪಡುತ್ತಾರೆ, ಕಾರಣ ಅನೇಕ ಬಾರಿ ಅವಳ ಅತ್ತೆಯ ಮಧ್ಯಪ್ರವೇಶಿಸುವ ಮತ್ತು ಅಧಿಕಾರಯುಕ್ತತೆಯ ಮನೋಭಾವವೇ ಆಗಿರುತ್ತದೆ.”
ಪೌರ್ವಾತ್ಯ ಹಾಗೂ ಪಾಶ್ಚಿಮಾತ್ಯ ದೇಶಗಳಲ್ಲಿ ವಾರ್ತಾಪತ್ರಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಅತ್ತೆ—ಸೊಸೆಯರ ತಿಕ್ಕಾಟಗಳನ್ನು ನಿರ್ವಹಿಸುವ ಕುರಿತಾದ ವೈಯಕ್ತಿಕ ಸಲಹೆಗಳ ಅಂಕಣಗಳು ವಿಫುಲವಾಗಿರುತ್ತವೆ. ಹಾಗಾದರೆ, ಈ ಸಮಸ್ಯೆಗೆ ಕಾರಣವೇನಾಗಿರಬಹುದು?
ತೀರ್ಮಾನಗಳನ್ನು ಯಾರು ಮಾಡುತ್ತಾರೆ?
ಇಬ್ಬರು ಹೆಂಗಸರು ಅಡಿಗೆ ಮನೆಯನ್ನು ಬಳಸುವಾಗ, ಆಗಾಗ್ಯೆ ವಿವಾದವೇನಂದರೆ: ತೀರ್ಮಾನಗಳನ್ನು ಮಾಡುವುದು ಯಾರು? “ನಮ್ಮ ರುಚಿಗಳು ಮತ್ತು ಕ್ರಮವಿಧಾನಗಳು ಭಿನ್ನವಾಗಿವೆ, ಮತ್ತು ಅಸಮ್ಮತಿಯು ಪ್ರತಿಸಾರಿ ಎದ್ದಾಗ ನನ್ನನ್ನು ಕ್ಷೋಭೆಗೊಳಪಡಿಸಲಾಗುತ್ತದೆ,” ಎನ್ನುತ್ತಾಳೆ 12 ವರ್ಷಕ್ಕಿಂತಲೂ ಹೆಚ್ಚು ಸಮಯ ತನ್ನ ಅತ್ತೆಯೊಂದಿಗೆ ಜೀವಿಸಿದ ಸ್ತ್ರೀಯೊಬ್ಬಳು.
“ಮೊದಲ ಹತ್ತು ವರ್ಷಗಳಲ್ಲಿ ನಾವು ಕ್ಷುಲ್ಲಕ ವಿಷಯಗಳ ಮೇಲೆ ಕಾದಾಡಿದೆವು,” ಎಂದು ಒಪ್ಪುತ್ತಾಳೆ ಇನ್ನೊಬ್ಬ ಸೊಸೆ. ಬಟ್ಟೆಯನ್ನು ಹಗ್ಗದ ಮೇಲೆ ಹೇಗೆ ಒಣಗಲು ಹಾಕಬೇಕು ಎಂಬ ಮಹತ್ವವಲ್ಲದ ವಿಷಯಗಳ ಮೇಲೆ ಅಸಮ್ಮತಿಗಳು ಎನ್ನಬಹುದು. ಹೆಂಗಸರು ಕೆಲವೊಮ್ಮೆ ಅದೇ ಮನೆಯಲ್ಲಿ ಜೀವಿಸದೇ ಇದ್ದರೂ ಕೂಡಾ ಸನ್ನಿವೇಶವು ಉಪದ್ರವಕಾರೀಯಾಗಿರಬಲ್ಲದು. ಭೇಟಿಕೊಡುವ ಅತ್ತೆಯೊಬ್ಬಳು “ಈ ರೀತಿಯಲ್ಲಿ ಮಾಂಸದ ತುಂಡು ಬೇಯಿಸಿದರೆ, ನನ್ನ ಮಗನು ಮೆಚ್ಚುವುದಿಲ್ಲ,” ಎಂಬಂಥಹ ಹೇಳಿಕೆಗಳು ಜೀವನ ಪರ್ಯಂತ ಕಡು ಮನೋಭಾವಗಳನ್ನು ಹುಟ್ಟಿಸಬಹುದು. ಇದೆಲ್ಲಾ ತೀರ್ಮಾನಗಳನ್ನು ಮಾಡುವುದು ಯಾರು ಮತ್ತು ಯಾರಿಗಾಗಿ ಎಂಬ ಸಮಾಪ್ತಿಗೆ ನಡಿಸುತ್ತದೆ.
ಈ ಸಮಸ್ಯೆಗೆ ನಿರ್ದೇಶಿಸುತ್ತಾ, ಒಶಾನೊಮಿಜು ಹೆಂಗಸರ ವಿಶ್ವವಿದ್ಯಾಲಯದಲ್ಲಿ ಮನೆವಾರ್ತೆಯ ವಿಷಯದ ಸಹಾಯಕ ಪ್ರಾಧ್ಯಾಪಕ ಟಾಕಕೋ ಸೊಡೆಯೀ ಹೇಳುವುದು: “ಒಬ್ಬನು ಮಗನ ಮತ್ತು ಸೊಸೆಯ ಹತ್ತರ ಜೀವಿಸಲಿ ಅಥವಾ ಮಗಳು ಮತ್ತು ಅಳಿಯನೊಂದಿಗಿರಲಿ, ಒಂದೇ ಮನೆಯಲ್ಲಿ ಇಬ್ಬರು ಪತ್ನಿಯರು ಒಬ್ಬರು ಇನ್ನೊಬ್ಬರೊಂದಿಗೆ ಹತೋಟಿಗಾಗಿ ಸ್ಪರ್ಧಿಸುವಾಗ ಮನೆವಾರ್ತೆಯನ್ನು ಬೆಂಬಲಿಸುವುದು ಅಸಾಧ್ಯ. ಒಂದೇ ಪ್ರತ್ಯೇಕ ವಾಸಿಸುವ ಸ್ಥಳಾವಕಾಶವಿರಬೇಕು ಇಲ್ಲವೇ ಒಬ್ಬಳು ಮನೆ ನಡಿಸುವಾಕೆ ಮತ್ತು ಇನ್ನೊಬ್ಬಳು ಸಹಾಯಕ ಮನೆನಡಿಸುವಾಕೆ ಆಗಿರಬೇಕು.” ಎರಡು ಸಂತತಿಯವರು ಹಿರಿಯವಳ ದೈಹಿಕ ಮತ್ತು ಮಾನಸಿಕ ಸ್ಥಿತಿ ಮತ್ತು ಎಳೆಯವಳ ಅನುಭವ ಇಲ್ಲವೇ ಅನುಭವದ ಕೊರತೆಯ ಆಧಾರದ ಮೇಲೆ ಆಧರಿತವಾಗಿರುವ ಒಂದು ಸಮಂಜಸತೆಯ ತಿಳುವಳಿಕೆಗೆ ಬರಬೇಕು.
ಏಕಾಂತತೆಯ ವಿಷಯ
ಎರಡು ಯಾ ಹೆಚ್ಚು ಸಂತತಿಯವರು ಒಂದೇ ಸ್ಥಳದಲ್ಲಿ ವಾಸಿಸುವಾಗ, ಕೆಲವೊಂದು ಮಟ್ಟಿಗೆ ಕುಟುಂಬ ಸದಸ್ಯರು ತಮ್ಮ ಏಕಾಂತತೆಯನ್ನು ತ್ಯಾಗಮಾಡಬೇಕಾಗುತ್ತದೆ. ಇದರಲ್ಲಿಯೂ ಕೂಡಾ, ಪ್ರತಿಯೊಂದು ಸದಸ್ಯನಿಗೆ ಭಿನ್ನ ಭಿನ್ನವಾದ ಮಟ್ಟಗಳಿರಬಹುದು. ಒಂದು ಯುವ ದಂಪತಿಯು ಹೆಚ್ಚು ಏಕಾಂತತೆಯನ್ನು ಬಯಸುವಾಗ, ವಯಸ್ಸಾದವರು ಹೆಚ್ಚು ಸಹವಾಸಕ್ಕಾಗಿ ತೃಷೆಯುಳ್ಳವರಾಗಿರಬಹುದು.
ಉದಾಹರಣೆಗೆ, ಟೊಕೀಯೊದಲ್ಲಿ ಜೀವಿಸುತ್ತಿದ್ದ ಸೊಸೆಯೊಬ್ಬಳು, ತನ್ನ ಅತ್ತೆಯು ದಂಪತಿಗಳ ಏಕಾಂತತೆಯನ್ನು ಆಕ್ರಮಿಸುತ್ತಾಳೆಂದು ಎಣಿಸಿದಳು. ಹೇಗೆ? ಅವಳ ಮತ್ತು ಅವಳ ಗಂಡನ ಸ್ವಂತ ವಸ್ತ್ರಗಳನ್ನು ತೆಗೆದುಕೊಂಡು, ಅದನ್ನು ತೊಳೆದು, ಒಣಗಿಸಿ, ಮಡಚಿ ಜೋಪಾಸನವಾಗಿ ಇಡುವುದು ಆಗಿತ್ತು. ಅವಳ ಅತ್ತೆಯು ಅವರ ಸ್ವಂತ ವಿಷಯಗಳನ್ನು ಮಾಡುವುದು ಸರಿಯಲ್ಲ ಎಂದೆಣಿಸಿದಳು. ಇನ್ನೊಂದು ಪಕ್ಕದಲ್ಲಿ, ಅವಳ ಅತ್ತೆಯು, ಟೊಕಿಕೊ, ಅವಳ ಸೊಸೆ ಮನೆಯಲ್ಲಿ ಓರಣವಾಗಿ ಎಲ್ಲವನ್ನೂ ಇಡುವಾಗ, ಹಲವಾರು ವರ್ಷಗಳಿಂದ ನೆಚ್ಚಿಕೆಯಿಂದ ಟೊಕಿಕೊ ಇಟ್ಟಿದ್ದ ವಸ್ತುಗಳನ್ನು ಬಿಸಾಡುವದನ್ನು ನೋಡಿ ಸಂಕಟ ಪಟ್ಟಳು.
ಏಕಾಂತತೆಯ ಮೇಲಿನ ಧಾಳಿಯು ಕೆಲವೊಮ್ಮೆ ಅತಿರೇಕದ್ದಾಗಿರಲೂ ಬಹುದು. ಟೋಮ್ ಮತ್ತು ಅವನ ಹೆಂಡತಿಯು ಅವನ ವಯಸ್ಸಾದ ತಾಯಿಯ ಜಾಗ್ರತೆ ವಹಿಸುತ್ತಿದ್ದರು, ಈ ತಾಯಿಯು ನಡುರಾತ್ರಿಯಲ್ಲಿ ಇವರು ಮಲಗುವ ಕೋಣೆಗೆ ಆಗಮಿಸುತ್ತಿದ್ದುದರಿಂದ ಅವರಿಗೆ ಉಪದ್ರವವಾಗುತ್ತಿತ್ತು. ಅವಳ ಕಾರಣ? “ಟೋಮ್ ಚೆನ್ನಾಗಿದ್ದಾನೋ ಎಂದು ನೋಡಲು ನಾನು ಬಯಸುತ್ತಿದ್ದೆ,” ಎನ್ನುವುದು ತಾಯಿಯ ಉತ್ತರ. ಈ ಸಮಸ್ಯೆಯು, ಅವರು ಎರಡು ಮಾಳಿಗೆಯ ಮನೆಗೆ ತೆರಳಿ, ತಾಯಿಯು ಮಾಳಿಗೆ ಹತ್ತಿ ಮೇಲೆ ಬರುವುದನ್ನು ನಿಷೇಧಿಸುವ ತನಕ ಬಗೆಹರಿಯಲಿಲ್ಲ.
ಆದರೂ ಅನೇಕ ಕುಟುಂಬಗಳಲ್ಲಿ ಮೂರನೆಯ ಸಂತತಿಯು ಮನೆಯಲ್ಲಿ ಬರಲು ಆರಂಭಿಸಿದಾಗ ಸಮಸ್ಯೆಗಳು ನಿಜವಾಗಿಯೂ ತೀವ್ರಗೊಳ್ಳುತ್ತವೆ.
ಮಕ್ಕಳೊಂದಿಗೆ ವ್ಯವಹರಿಸುವುದು
ಈಗಿನ ಕಾಲದಲ್ಲಿ ಮಕ್ಕಳ ಆರೈಕೆಯ ಸಲಹೆಗಳಿಗಾಗಿ ವಿವಿಧ ಪುಸ್ತಕಗಳನ್ನು ಎಳೆಯ ತಾಯಂದಿರು ನೋಡುವುದು ಸಾಮಾನ್ಯವಾಗಿರುತ್ತದೆ. ಇನ್ನೊಂದು ಕಡೆಯಲ್ಲಿ, ಅಜ್ಜಿಯು ಮಕ್ಕಳ ಆರೈಕೆಯಲ್ಲಿ ತನ್ನ ಅನುಭವಗಳ ವರ್ಷಗಳೊಂದಿಗೆ, ಸಲಹೆ ಕೊಡಲು ತಾನು ಅತ್ಯಂತ ಅರ್ಹಳು ಎಂದು ಸ್ವಾಭಾವಿಕವಾಗಿ ಭಾವಿಸುತ್ತಾಳೆ. ಆದಾಗ್ಯೂ, ಆ ಸಲಹೆಯು ಕೆಲವೊಮ್ಮೆ ಠೀಕೆಯಾಗಿ ನೋಡಲ್ಪಡುತ್ತದೆ ಮತ್ತು ತಿಕ್ಕಾಟವು ಅದರ ಫಲಿತಾಂಶವಾಗಿರುತ್ತದೆ.
ಟಾಕಕೊ ತನ್ನ ಎಳೆಯ ಮಗನನ್ನು ಶಿಸ್ತುಗೊಳಿಸುವಾಗ ಈ ಸಮಸ್ಯೆಯನ್ನು ಅವಳು ವ್ಯವಹರಿಸಬೇಕಾಗಿ ಬಂತು. ಅವಳ ಗಂಡನ ತಾಯಿ ಮತ್ತು ಅಜ್ಜಿಯು ಅವಳನ್ನು ತಡೆಯಲು ಅವಳ ಕೋಣೆಗೆ ಧಾವಿಸಿ ಬಂದು, ಅಳುವ ಮಗುವಿಗಿಂತ ಹೆಚ್ಚು ಗಟ್ಟಿಯಾಗಿ ಚೀರಾಡ ತೊಡಗಿದರು. ಬೆದರಿಕೆಗೊಳಪಟ್ಟಿದ್ದೇನೆಂದು ಭಾವಿಸಿ, ಟಾಕಕೊ ಅವಳ ಮಗನಿಗೆ ಶಿಸ್ತುಮಾಡುವುದನ್ನೇ ನಿಲ್ಲಿಸಿದಳು. ನಂತರ, ಶಿಸ್ತು ಕೊಡುವುದರ ಪ್ರಾಮುಖ್ಯತೆಯನ್ನು ಅರಿತವಳಾಗಿ, ಅವಳು ಪುನಃ ಅಂತಹ ತರಬೇತಿಯನ್ನು ಕೊಡುವುದನ್ನು ಆರಂಭಿಸಿದಳು.—ಜ್ಞಾನೋಕ್ತಿ 23:13; ಇಬ್ರಿಯರಿಗೆ 12:11.
ಯೊಕೊಹಾಮದಲ್ಲಿ ವಾಸಿಸುತ್ತಿರುವ ತಾಯಿಯೊಬ್ಬಳು ಮಕ್ಕಳು ಜನಿಸಿದ ನಂತರ, ಅವಳ ಅತ್ತೆಯೊಂದಿಗೆ ಕಾದಾಡಬೇಕಾಗಿ ಬಂತು. ಊಟದ ನಡುವೆ ಅಜ್ಜಿಯು ಮಕ್ಕಳಿಗೆ ತಿಂಡಿತಿನಸು ಕೊಟ್ಟದ್ದರಿಂದ ತಾಯಿಯು ಕೋಪಿಷ್ಠಳಾದಳು ಯಾಕಂದರೆ ಅವರ ಊಟ ಉಣ್ಣುವ ಸಮಯದಲ್ಲಿ ಅವರು ಹೊಟ್ಟೆ ತುಂಬಿದವರಾಗಿರುತ್ತಿದ್ದರು.
ಈ ಸಮಸ್ಯೆಯ ಕುರಿತು ಮಾತಾಡುತ್ತಾ, ಡಾ. ಸೈಟೊ ಹೇಳುವುದು: “[ಅಜ್ಜ—ಅಜ್ಜಿಯಂದಿರು] ತಮ್ಮ ಮೊಮ್ಮಕ್ಕಳಿಗೆ ಸಿಹಿತಿಂಡಿಗಳನ್ನು ಮತ್ತು ಖರ್ಚಿಗೆ ಹಣವನ್ನು ಕೊಡುತ್ತಾರೆ. ಅವರು ಎಳೆಯರ ಸ್ವಾರ್ಥದ ಆಶೆಗಳಿಗನುಸಾರ ಸ್ವಚ್ಛಂದತೆಯಿಂದ ಬಿಡುತ್ತಾರೆ. ಸಂಕ್ಷಿಪ್ತವಾಗಿ, ಅವರು ತಮ್ಮ ಮೊಮ್ಮಕ್ಕಳನ್ನು ಕೊನೆಯಿಲ್ಲದ ರೀತಿಯಲ್ಲಿ ಹಾಳು ಮಾಡುತ್ತಾರೆ.” ಮಕ್ಕಳ ತರಬೇತಿಯಲ್ಲಿ ಯಾವುದೇ ರಿಯಾಯತಿ ಇಲ್ಲ ಎಂದು ಎಳೆಯ ತಾಯಂದಿರು ಸ್ಪಷ್ಟ ಪಡಿಸಬೇಕೆಂದು ಅವನು ಸಲಹೆ ನೀಡುತ್ತಾನೆ.
ವಾತ್ಸಲ್ಯಕ್ಕಾಗಿ ಸ್ಪರ್ಧಿಸುವುದು
ಅತ್ತೆಯಂದಿರ ಮತ್ತು ಸೊಸೆಯಂದಿರ ಈ ತಿಕ್ಕಾಟದಲ್ಲಿ ಯಾವುದೋ ಒಂದು ಅವಿಚಾರದ ಸಂಗತಿಯಿರುತ್ತದೆ. “ಮನಃಶಾಸ್ತ್ರೀಯವಾಗಿ ಮಾತಾಡುವುದಾದರೆ,” ವಿವರಿಸುವುದು ಡಾ. ಸೈಟೊ, “ತನ್ನಿಂದ ತನ್ನ ಮಗನನ್ನು ಸೊಸೆಯು ಸೆಳೆದು ಕೊಂಡಿದ್ದಾಳೆ ಎಂದು ತಾಯಿಯು ಭಾವಿಸುತ್ತಾಳೆ. ಅವಳು ಅಂತಹ ಯೋಚನೆಯನ್ನು ಬಹಿರಂಗವಾಗಿ ವ್ಯಕ್ತಪಡಿಸುವುದಿಲ್ಲವೆಂಬುದು ಸತ್ಯ, ಯಾಕಂದರೆ ಅದು ಕೂಡಾ ಬಾಲಿಶತನವಾಗುತ್ತದೆ. ಆದರೆ, ಅವಳ ಮಗನ ವಾತ್ಸಲ್ಯವು ಅವಳಿಂದ ದೋಚಲ್ಪಟ್ಟಿದೆ ಎಂಬ ಕಲ್ಪನೆಯು ಅವಳ ಸುಪ್ತ ಪ್ರಜ್ಞೆಯಲ್ಲಿ ಆಳವಾಗಿ ಬೇರೂರಿರುತ್ತದೆ.” ಇದರ ಫಲಿತಾಂಶವು, ಅವರ ನಡುವೆ ನೇರವಾದ ಸ್ಪರ್ಧೆಯು ಇಲ್ಲದಿರುವುದಾದರೂ, ವಿಷಮವಾದ ಸಂಬಂಧ ಇರುತ್ತದೆ.
ಕುಟುಂಬದ ಪರಿಮಾಣವು ಕುಗ್ಗುತ್ತಿರುವಂತೆ ಈ ಪ್ರವೃತ್ತಿಯು ಬಿಗುಪುಕೊಳ್ಳುವಂತೆ ಭಾಸವಾಗುತ್ತದೆ. ಕೆಲವೇ ಮಕ್ಕಳ ಜಾಗ್ರತೆ ವಹಿಸಲಿರುವುದರಿಂದ, ತಾಯಿಯು ಹೆಚ್ಚು ನಿಕಟ ಸಂಬಂಧವನ್ನು ಅನುಭವಿಸುತ್ತಾಳೆ. ಅವಳ ಮಗನೊಂದಿಗೆ ಹಲವಾರು ವರ್ಷ ಜೀವಿಸಿದ ನಂತರ, ಅವಳಿಗೆ ಅವನ ಇಷ್ಟಗಳು ಮತ್ತು ಇಷ್ಟವಿಲ್ಲದಿರುವಿಕೆಗಳು ಏನೆಂದು ತಿಳಿದಿರುತ್ತವೆ. ಹೊಸ ವಧುವು ತನ್ನ ಗಂಡನನ್ನು ಮೆಚ್ಚಿಸಲು ಉತ್ಸುಕಳಾಗಿದ್ದರೂ, ಕಡಿಮೆ ಪಕ್ಷ ಆರಂಭದಲ್ಲಿ ಅವಳಿಗೆ ಈ ಆಪ್ತ ಜ್ಞಾನದ ಕೊರತೆಯಿರುತ್ತದೆ. ಆದುದರಿಂದ, ಒಂದು ಸ್ಪರ್ಧಾತ್ಮಕ ಆತ್ಮವು ಸುಲಭವಾಗಿ ಉದ್ಭವಿಸಬಹುದು, ತಾಯಿ ಮತ್ತು ಸೊಸೆಯು ಅದೇ ಒಬ್ಬ ಮನುಷ್ಯನ ವಾತ್ಸಲ್ಯಗಳಿಗಾಗಿ ಸ್ಪರ್ಧಿಸುವುದು.
ಒಂದು ದುರಂತದ ಬದಲಾವಣೆ
ಕನ್ಫೂಸಿಯಸನ ತತ್ವದ ಕೆಳಗೆ, ಪ್ರಾಚೀನ ಕಾಲದಲ್ಲಿ ಜಪಾನಿನಲ್ಲಿ ಕುಟುಂಬ ತಿಕ್ಕಾಟ ಸಂಭವಿಸಿದರೆ ಸೊಸೆಯನ್ನು ದೂರಕ್ಕೆ ಕಳುಹಿಸಲಾಗುತ್ತಿತ್ತು—ವಿಚ್ಛೇದನ ಮಾಡಿದ ನಂತರ. ಮತ್ತು ಅದು ವಿಷಯದ ಅಂತ್ಯವಾಗಿತ್ತು. ಆದಾಗ್ಯೂ ಇಂದು, ಸನ್ನಿವೇಶವು ಭಿನ್ನವಾಗಿರುತ್ತದೆ.
ಎರಡನೆಯ ಮಹಾಯುದ್ಧದ ನಂತರ, ಕುಟುಂಬದ ಹಣದ ತಿಜೋರಿಯ ಹತೋಟಿಯು ಎಳೆಯ ಸಂತತಿಯ ಕೈಯಲ್ಲಿ ಬಂದಿರುತ್ತದೆ ಮತ್ತು ಹಳೇ ತಲೆಮಾರಿನವರು ತಮ್ಮ ಪ್ರಭಾವ ಮತ್ತು ಅಧಿಕಾರವನ್ನು ಕಳೆದು ಕೊಳ್ಳುತ್ತಾ ಇದ್ದಾರೆ. ಕ್ರಮೇಣ ಹೀಗೆ, ಸನ್ನಿವೇಶವು ತಿರುವುಮುರುವುಗೊಂಡಿತು. ಈಗ ವಯಸ್ಕರಾದ ಹೆತ್ತವರು ಆಸ್ಪತ್ರೆಗಳಲ್ಲಿ ಮತ್ತು ಸಂಘಸಂಸ್ಥೆಗಳಲ್ಲಿ ಬಿಡಲ್ಪಟ್ಟರು. ಪ್ರಾಯ ಸಂದವರಿಗೆ ಗೌರವವನ್ನೀಯುವುದು ಒಂದು ಸಾಮಾನ್ಯವಾಗಿದ್ದ ಸಮಾಜದಲ್ಲಿ ಈ ದುಃಸ್ಥಿತಿಯನ್ನು ಕಾಣುವುದು ಎಂತಹ ಒಂದು ದುರಂತ!
ವಯಸ್ಕರನ್ನು ಈ ರೀತಿ ಮೂಲೆಗೆ ದಬ್ಬುವುದನ್ನು ಹೇಗೆ ವಿಪರ್ಯಸ್ತಗೊಳಿಸಬಹುದು? ಒಂದೇ ಛಾವಣಿಯ ಕೆಳಗೆ ಇಬ್ಬರು ಸ್ತ್ರೀಯರು ಶಾಂತಿಯಿಂದ ಜೀವಿಸುವ ಯಾವುದಾದರೊಂದು ಮಾರ್ಗವಿದೆಯೇ? (g90 2/22)
[ಪುಟ 7 ರಲ್ಲಿರುವಚಿತ್ರ]
ತೀರ್ಮಾನಗಳನ್ನು ಮಾಡುವುದು ಯಾರು ಎಂಬ ವಿಷಯದಲ್ಲಿ ಒಂದು ಸಮಂಜಸತೆಯ ಒಪ್ಪಂದಕ್ಕೆ ಬರಲೇ ಬೇಕು