ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g91 6/8 ಪು. 30
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—1991
  • ಅನುರೂಪ ಮಾಹಿತಿ
  • ಮಾರ್ಟಿನ್‌ ಲೂಥರ್‌ ಆ ಪುರುಷ ಮತ್ತು ಅವನು ಬಿಟ್ಟುಹೋದ ಆಸ್ತಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ತಲೆ ಹೇನು ಬಗ್ಯೆ ನೀವು ತಿಳಿದಿರಬೇಕಾದ ವಿಷಯ
    ಎಚ್ಚರ!—1990
  • 16ನೇ ಭಾಗ: ಸಾ.ಶ. 9-16 ಶತಮಾನ ಸುಧಾರಣೆ ಅತ್ಯಗತ್ಯವಾಗಿದ್ದ ಒಂದು ಧರ್ಮ
    ಎಚ್ಚರ!—1991
ಎಚ್ಚರ!—1991
g91 6/8 ಪು. 30

ನಮ್ಮ ವಾಚಕರಿಂದ

ತಲೇ ಹೇನುಗಳು ಶಾಲೆಯ ದಾದಿಯಾಗಿರುವದರಿಂದ ತಲೇ ಹೇನು ವಿಷಯದಲ್ಲಿ ಕ್ರಮಾನುಗತವಾಗಿ ವ್ಯವಹರಿಸಬೇಕಾಗುತ್ತದೆ. ನಿಮ್ಮ ಲೇಖನದ ಹೆಚ್ಚಿನಾಂಶವನ್ನು ನಾನು ಒಪ್ಪುತ್ತೇನೆ. (ಎಚ್ಚರ! ನವಂಬರ 8, 1990) ತಲೆ ಬೋಳಿಸುವದರ ಮೂಲಕ ಮಗುವೊಂದರ ಚಿಕಿತ್ಸೆ ಮಾಡುವದು ಅತಿ ಹೆಚ್ಚು ಪರಿಣಾಮಕಾರಿ ಎಂದು ನೀವು ದೌರ್ಭಾಗ್ಯವಶಾತ್‌ ಸೂಚಿಸುತ್ತೀರಿ. ಹೇನುಗಳನ್ನು ನಿವಾರಿಸಲು ಮಗುವಿನ ತಲೆ ಬೋಳಿಸುವದು ಒಂದು ನಾಟಕೀಯ ಮತ್ತು ಅನಾವಶ್ಯಕವಾದದ್ದು ಎಂದು ನಾನು ಎಣಿಸುತ್ತೇನೆ. ತಲೆಯ ನೆತ್ತಿಯ ಮೇಲೆ ಚಿಮಿಣಿಎಣ್ಣೆಯನ್ನು ಬಳಸುವದನ್ನೂ ನಾನು ಶಿಫಾರಸು ಮಾಡುವದಿಲ್ಲ. ಅದು ವಿಷವುಳ್ಳದ್ದು ಮತ್ತು ದಹಿಸುವಂತಹದ್ದು, ಮತ್ತು ಖಂಡಿತವಾಗಿ ಒಂದು ಸುಟ್ಟ ಮಗುವಿಗಿಂತ, ನೂರಾರು ತಲೇ ಹೇನುಗಳಿರುವದು ಹೆಚ್ಚು ಉತ್ತಮ.

ಸಿ.ಎಮ್‌., ಇಂಗ್ಲೆಂಡ್‌

ನಾವು ಈ ಹೇಳಿಕೆಗಳನ್ನು ಗಣ್ಯಮಾಡುತ್ತೇವೆ. “ಎಚ್ಚರ!” ವೈದ್ಯಕೀಯ ಚಿಕಿತ್ಸೆಗಳನ್ನು ಶಿಫಾರಸು ಮಾಡುವದಿಲ್ಲ. ಆದರೆ ನಮ್ಮ ಪತ್ರಿಕೆಯು ಲೋಕ ವ್ಯಾಪಕವಾಗಿ ವಿತರಿಸಲ್ಪಡುವದರಿಂದ ಮತ್ತು ಆಧುನಿಕ ಚಿಕಿತ್ಸೆಗಳಿಗೆ ಸಮೀಪವಿರದ ಜನರಿಂದಲೂ ಅದು ಓದಲ್ಪಡುವದರಿಂದ, ಹೇನು ಪೀಡೆಯನ್ನು ಯಶಸ್ವಿಯಾಗಿ ಪರಿಹರಿಸಲಾಗಿದೆ ಎಂದು ಕೆಲವರು ಹೇಳಿರುವ ಗೃಹ ಚಿಕಿತ್ಸೆಗಳನ್ನು ನಾವು ಕೇವಲ ವರದಿಸಿರುತ್ತೇವೆ. ಆದರೂ ಆಧುನಿಕ ವೈದ್ಯಕೀಯ ಅಧಿಕಾರಿಗಳು ಹೇನು ತುಂಬಿದ ಕೂದಲುಗಳನ್ನು ಕತ್ತರಿಸುವದನ್ನು ಶಿಫಾರಸು ಮಾಡುವದಿಲ್ಲ, ಏಕಂದರೆ ಅದು ಮನಶಾಸ್ತ್ರಕ್ಕನುಸಾರ ಹಾನಿಕರ ಮತ್ತು ಅನಾವಶ್ಯಕ ಎಂದು ದೃಷ್ಟಿಸುವದರಿಂದ. ಕೂದಲು ಅತಿ ಉದ್ದವಾಗಿರುವಾಗ ಇಲ್ಲವೆ ಬಾಚಲು ಅಸಾಧ್ಯವಾದ ರೀತಿಯಲ್ಲಿ ಜಡ್ಡುಕಟ್ಟಿರುವದಾದರೆ ಮಾತ್ರವೇ ಅದನ್ನು ಕತ್ತರಿಸಲು ಶಿಫಾರಸು ಮಾಡಲಾಗಿದೆ. ಅದಲ್ಲದೆ, ತಲೆಯ ನೆತ್ತಿಗೆ ಚಿಮಿಣಿಎಣ್ಣೆ ಹಚ್ಚುವದನ್ನು ವೈದ್ಯಕೀಯ ಅಧಿಕಾರಿಗಳು ಇಂದು ಶಿಫಾರಸು ಮಾಡುವದಿಲ್ಲ. ಉದಾಹರಣೆಗೆ, ಯೂನಿವರ್ಸಿಟಿ ಆಫ್‌ ಮಿಯಾಮಿ ಸ್ಕೂಲ್‌ ಆಫ್‌ ಮೆಡಿಸಿನ್‌ನ ಪ್ರೊಫೆಸರ್‌ ಡೇವಿಡ್‌ ಟಪ್ಲಿನ್‌ “ಎಚ್ಚರ!”ಕ್ಕೆ ಈ ಅಭ್ಯಾಸವು ಹಳೆಯ ಪದ್ಧತಿ ಎಂದು ಹೇಳಿದರು.—ಸಂಪಾ.

ಸುರಕ್ಷಿತ ಆಹಾರ ನಾನು ಯೆಹೋವನ ಸಾಕ್ಷಿಗಳ ಸಂಚಾರ ಶುಶ್ರೂಷಕನಾಗಿ ನನ್ನ ಹೆಂಡತಿಯೊಂದಿಗೆ ಸೇವೆ ಸಲ್ಲಿಸುತ್ತಿದ್ದೇನೆ. ನಾವು ನಮ್ಮ ಆತಿಥೇಯರಿಗೆ ಆಹಾರದ ಜಾಗ್ರತೆಯ ಕುರಿತು ತುಂಬಾ ನಿಯಮಗಳನ್ನು ನೀಡಿ ಭಾರ ಹೇರಲು ಬಯಸುವದಿಲ್ಲವಾದ್ದರಿಂದ ನಾವು ಆಹಾರದ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಈ ಲೇಖನವು (ಜುಲೈ 8, 1990) ನಮಗೆ ಎಷ್ಟೊಂದು ಪ್ರಯೋಜನಕಾರಿಯಾಗಿ ಪರಿಣಮಿಸಿದೆ ಎಂದು ನೀವು ಊಹಿಸಬಹುದು! ದೇವರ ಜನರಿಗೆ ಯಾವುದೆಲ್ಲಾ ಒಳ್ಳೆಯದೋ ಅದನ್ನೆಲ್ಲಾ ಯೋಚಿಸುವದಕ್ಕಾಗಿ ನಾವು ನಿಜವಾಗಿ ಉಪಕಾರ ಹೇಳಲು ಬಯಸುತ್ತೇವೆ.

ಆರ್‌.ಪಿ., ವೆನಜುವೆಲಾ

ಕೆಟಭ್ಟಾಷೆ “ಯುವ ಜನರು ಪ್ರಶ್ನಿಸುವದು . . . ಕೆಟಭ್ಟಾಷೆ ಬಳಸುವದನ್ನು ನಾನು ಹೇಗೆ ತಡೆಯಬಲ್ಲೆ?” ಎಂಬ ಲೇಖನವು (ಫೆಬ್ರವರಿ 8, 1991) ತಕ್ಕ ಸಮಯದಲ್ಲಿ ಬಂದಿದೆ! ಕ್ರೈಸ್ತತ್ವವನ್ನು ವಿರೋಧಿಸುವ ಒಬ್ಬ ವಿವಾಹಸಂಗಾತಿಯನ್ನು ಪಡೆದ ನಾನು, ಕೆಲವೊಮ್ಮೆ ನಾನು ನನ್ನ ನಾಲಿಗೆಯನ್ನು ಮಾತ್ರ ಹತೋಟಿಯಲ್ಲಿಡುವದನ್ನು ಮಾಡಬಲ್ಲೆ. ಕೆಟ್ಟಭಾಷೆ ಬಳಸುವ ಯೋಚನೆಗಳು ನಾನು ಲಜ್ಜಿತಳಾಗುವಂತೆ ಮತ್ತು ದೇವರ ಪ್ರೀತಿಗೆ ಅಯೋಗ್ಯಳಾಗಿದ್ದೇನೆ ಎಂಬ ಭಾವನೆಯುಂಟಾಗಲು ಕಾರಣವಾಯಿತು. ಕೆಟ್ಟಭಾಷೆಯ ಶೋಧನೆಯನ್ನು ಪ್ರತಿಭಟಿಸಲು ನನಗೆ ಬೇಕಾದ ಮಾರ್ಗದರ್ಶನವನ್ನು ಈ ಅದ್ಭುತವಾದ ಲೇಖನವು ನೀಡಿತು.

ಸಿ.ಡಿ., ಅಮೆರಿಕ

ಬಲಾತ್ಕಾರ ಸಂಭೋಗ ಹೋಗಲಾಡಿಸುವದು ನಿಮ್ಮ ಲೇಖನದಲ್ಲಿ (ನವಂಬರ 8, 1990) ಉದ್ಧರಿಸಲ್ಪಟ್ಟ ಸ್ತ್ರೀಯು, ಅವಳು “ಯೆಹೋವನ ಸಹಾಯದಿಂದ ಬಲಾತ್ಕಾರ ಸಂಭೋಗವನ್ನು ಹೋಗಲಾಡಿಸಲು ಶಕ್ತಳಾದಳು” ಎಂದು ಹೇಳುತ್ತಾಳೆ. ಯಾರು ಬಲಾತ್ಕಾರ ಸಂಭೋಗಕ್ಕೆ ಈಡಾಗಿದ್ದಾರೋ ಅವರಿಗೆ ದೇವರ ಸಹಾಯವಿಲ್ಲ ಎಂದು ಇದರ ಅರ್ಥವೋ? ಅವನು ಒಬ್ಬರಿಗೆ ಸಹಾಯ ಮಾಡಿ, ಇನ್ನೊಬ್ಬ ವ್ಯಕ್ತಿಗೆ ಯಾಕೆ ಸಹಾಯ ಮಾಡುವದಿಲ್ಲ?

ವಿ.ಆರ್‌., ಅಮೆರಿಕ

ಹಾನಿಯಿಂದ ದೇವರು ತನ್ನ ಜನರನ್ನು ಅದ್ಭುತಕರವಾಗಿ ರಕ್ಷಿಸುತ್ತಾನೆ ಎಂದು ಬೈಬಲು ಹೇಳುವದಿಲ್ಲ. ದೇವರ ನಂಬಿಗಸ್ತ ಸೇವಕರು ಬಲಾತ್ಕಾರ ಸಂಭೋಗಕ್ಕೆ ಈಡಾಗಬಹುದು ಎಂದು ಇಸ್ರಾಯೇಲ್ಯರಿಗೆ ದೇವರು ಕೊಟ್ಟ ನಿಯಮವು ತೋರಿಸುತ್ತದೆ. (ಧರ್ಮೋಪದೇಶಕಾಂಡ 22:23-27) ಆದಾಗ್ಯೂ, ದೇವರು ನಮಗೆ, ನಾವು ಅದನ್ನು ಅನ್ವಯಿಸುವದಾದರೆ ಕಾರ್ಯಸಾಧ್ಯವಾಗಿರುವ ಶಾಸ್ತ್ರೀಯ ಮಾರ್ಗದರ್ಶನವನ್ನು ನೀಡಿದ್ದಾನೆ. ಮತ್ತು ಬೈಬಲಾಧರಿತ ಸಲಹೆಯು ಈ ಪ್ರಶ್ನೆಯಲ್ಲಿ ಒಳಗೂಡಿರುವ ಸ್ತ್ರೀಗೆ ಬಲಾತ್ಕಾರ ಸಂಭೋಗವನ್ನು ತಡೆಯುವುದರಲ್ಲಿ ಒಂದು ಭದ್ರತೆಯಾಗಿ ರುಜುವಾಯಿತು. ಯೋಗ್ಯವಾಗಿಯೇ, ಈ ಸಹಾಯಕಾರೀ ಸಮಾಚಾರವನ್ನು ಒದಗಿಸಿದ್ದಕ್ಕಾಗಿ ಅವಳು ದೇವರಿಗೆ ಉಪಕಾರಿಯಾಗಿದಾಳ್ದೆ.—ಸಂಪಾ.

ಧೂಮ್ರಪಾನ “ಮೃತ್ಯುವು ಮಾರಾಟಕ್ಕಿದೆ” ಎಂಬ ಸಂಚಿಕೆಯ (ಸಪ್ಟಂಬರ 8, 1990) ಮುಖಪುಟವು ಜನರ ಗಮನವನ್ನು ನಿಜವಾಗಿಯೂ ಸೆಳೆದಿದೆ. ಎಡೆಬಿಡದೆ ಧೂಮ್ರಪಾನಿಯಾಗಿರುವ ಒಬ್ಬ ಪ್ರಾಯಸ್ಥ ಹೆಂಗಸನ್ನು ನಾನು ಕ್ರಮವಾಗಿ ಭೇಟಿ ಮಾಡುತ್ತೇನೆ. ಅವಳು ತುಂಬಾ ವರ್ಷಗಳಿಂದ ಎಚ್ಚರ!ದ ಚಂದಾದಾರಳಾಗಿರುವುದಾದರೂ, ಅವಳು ಲೇಖನಗಳನ್ನು ಓದುವದು ಬಹಳ ಅಪರೂಪ. ಇತ್ತೀಚಿಗೆ ನಾನು ಅವಳ ಭೇಟಿಮಾಡಿದೆನು ಮತ್ತು ಅವಳ ಮನೆಯಲ್ಲಿ ಕೊನೆಗೂ ನಾನು ಉಸಿರಾಡಲು ಶಕ್ತನಾಗಿದ್ದೆನು. ಹೌದು, ಅವಳು ಧೂಮ್ರಪಾನ ಮಾಡುವದನ್ನು ತ್ಯಜಿಸಲು ಪ್ರಯತ್ನಿಸುತ್ತಿದ್ದಳು. ಅವಳು ಆ ಸಂಚಿಕೆಯನ್ನು ನೋಡಿದಾಗ, ಮೊದಲ ಪುಟದಿಂದ ಕೊನೆಯ ಪುಟದ ತನಕ ಓದಿದಳು ಮತ್ತು ಈಗ ಬೈಬಲನ್ನು ಅಭ್ಯಾಸಿಸಲು ಮತ್ತು ರಾಜ್ಯ ಸಭಾಗೃಹಕ್ಕೆ ಬರಲು ಬಯಸುತ್ತಾಳೆ. ನಮ್ಮ ಪತ್ರಿಕೆಗಳು ಕಣ್ಣಿಗೆ ಆಕರ್ಷಣೆಯದ್ದಾಗಿರುವದಕ್ಕಾಗಿ ನಿಮಗೆ ಉಪಕಾರಗಳು!

ಸಿ.ಪಿ., ಅಮೆರಿಕ

ಮಿತ್ರರಾಗಿ ಉಳಿಯುವದು “ಯುವ ಜನರು ಪ್ರಶ್ನಿಸುವದು . . . ಮಿತ್ರರಾಗಿ ಉಳಿಯುವದು ಅಷ್ಟೊಂದು ಕಷ್ಟಕರವೇಕೆ?”ಎಂಬ ಲೇಖನವು (ಮಾರ್ಚ್‌ 8, 1991) ನಾನು ಎಷ್ಟರ ಮಟ್ಟಿಗೆ ನನ್ನ ಮಿತ್ರತ್ವಗಳನ್ನು ಅದುಮಿಹಿಡಿದಿದ್ದೆ ಎಂದು ತಿಳಿಯುವಂತೆ ಮಾಡಿತು. ನನ್ನ ಮಿತ್ರರೊಡನೆ ಇತರರು ಮಾತಾಡಿದರೂ ನಾನು ಮತ್ಸರ ಪಡುತ್ತಿದ್ದೆನು! ಈಗ ನಾನು ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದೇನೆ. ಈ ಪತ್ರಿಕೆಯ ಈ ಬಹುಮೂಲ್ಯ ವಿಭಾಗವು ಎಂದಿಗೂ ನಿಲ್ಲಿಸಲ್ಪಡಲಿಕ್ಕಿಲ್ಲ ಎಂದು ನಾನು ನಿರೀಕ್ಷಿಸುತ್ತೇನೆ.

ಜಿ.ಝಡ್‌., ಬ್ರೇಝಿಲ್‌

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ