ತಲೆ ಹೇನು ಬಗ್ಯೆ ನೀವು ತಿಳಿದಿರಬೇಕಾದ ವಿಷಯ
ಆಘಾತ, ನಾಚಿಕೆ ಮತ್ತು ದೋಷ ಇವು ತಲೆಹೇನಿರುವ ಮಕ್ಕಳ ಹೆತ್ತವರ ಸಾಮಾನ್ಯ ಪ್ರತಿಕ್ರಿಯೆ. “ಇದು ಕಂಗೆಡಿಸುವಂತಹದ್ದು,” ಎಂದು ಒಬ್ಬ ತಾಯಿಯ ಹೇಳಿಕೆ, “ಯಾಕಂದರೆ ನೀವು ಸ್ವಚ್ಛವಾಗಿಲ್ಲವೆಂದು ಜನರು ಎಣಿಸುತ್ತಾರೆ ಎಂದು ನಿಮಗನಿಸುತ್ತದೆ.”
ಆದರೆ ಒಂದುವೇಳೆ ನಿಮ್ಮ ಮನೆಯವರು ಹೇನನ್ನು ಹೊಂದಿದರೆ ಕಂಗೆಡಲು ಕಾರಣವಿದೆಯೇ?
ಮೂರು ವಿವಿಧತೆಗಳು
ತಲೆಹೇನು ಚಿಕ್ಕ, ರೆಕ್ಕೆಗಳಿಲ್ಲದ ಕೀಟಗಳಾಗಿದ್ದು ಸಾಮಾನ್ಯವಾಗಿ ಹದಿನಾರನೆಯ ಒಂದು ಇಂಚು ಉದ್ದವಿದ್ದು, ಎಳ್ಳಿನ ಬೀಜದಷ್ಟಿರುತ್ತವೆ. ಅವುಗಳು ಬೂದು-ಬಿಳಿಯಿಂದ ಕಂದು ಬಣ್ಣಗಳಲ್ಲಿವೆ. ಒಳ್ಳೆಯ ವ್ಯಕ್ತಿಗಳ ಆರೋಗ್ಯಸೂತ್ರಗಳನ್ನು ಆಚರಿಸುವದಿಲ್ಲವೋ ಅವರಿಗೆ ಹೇನು ಬಾಧಿಸುತ್ತದೆ ಎಂಬ ತಪ್ಪು ಭಾವನೆಯಿಂದ ಈ ಅಪವಾದವು ಉದ್ಭವಿಸುತ್ತದೆ. ಆದರೆ, ನಿಜವಾಗಿ ತಲೆಹೇನು ಸ್ವಚ್ಛವಾದ ಪರಿಸರವನ್ನು ಇಷ್ಟಪಡುತ್ತದೆ, ಆದ್ದರಿಂದ ಯಾರು ಕ್ರಮವಾಗಿ ಸ್ನಾನಮಾಡುತ್ತಾರೋ ಅವರು ಕೂಡಾ ಇವುಗಳನ್ನು ಪಡೆಯಬಹುದು.
ತಲೆಹೇನು ಮಾತ್ರವಲ್ಲದೇ, ಎರಡು ಇತರ ಹೇನಿನ ವಿಧಗಳು ಮನುಷ್ಯನಿಗೆ ಸಾಮಾನ್ಯವಾಗಿವೆ: ಶರೀರದ ಮತ್ತು ಗುಪ್ತಾಂಗಗಳ ಹೇನುಗಳು. ಗುಪ್ತಾಂಗಗಳ ಹೇನುಗಳು ನಿಕಟ ಲೈಂಗಿಕ ಸಂಬಂಧದಿಂದ ರವಾನಿಸಲ್ಪಡುತ್ತವೆ, ಗುಪ್ತಾಂಗದ ಸ್ಥಳದಲ್ಲಿ ಒರಟಾದ ಕೂದಲಿನಲ್ಲಿ, ಕೈಕುಳಿಯ ಕೆಳಗೆ, ಗಡ್ಡಗಳಲ್ಲಿ ಮತ್ತು ಮೀಸೆಗಳಲ್ಲಿ ಮತ್ತು ಆಗಾಗ್ಯೆ ಕಣ್ಣುರೆಪ್ಪೆಗಳಲ್ಲಿ ಕಾಣಸಿಗುತ್ತವೆ. ಇದು ಗಿಡ್ಡವಾಗಿದ್ದು ಚಿಕ್ಕ ಏಡಿಯಂತಿರುತ್ತದೆ. ಹೀಗೆ ಅದಕ್ಕೆ ಏಡಿಹೇನು ಎಂಬ ಅಡ್ಡಹೆಸರಿದೆ.
ಶರೀರದ ಹೇನುಗಳು, ತಲೆಯ ಮತ್ತು ಗುಪ್ತಾಂಗಗಳಲ್ಲಿನ ಹೇನಿನಂತೆ ಜನರ ಮೇಲೆ ಜೀವಿಸುವದಿಲ್ಲ. ಇದು ಚರ್ಮಕ್ಕೆ ಹತ್ತಿರದಲ್ಲಿರುವ ಬಟ್ಟೆಗಳ ಮೇಲೆ ಜೀವಿಸುತ್ತದೆ ಮತ್ತು ಆಹಾರಕ್ಕಾಗಿ ಶರೀರದ ಮೇಲೆ ಹರಿದಾಡುತ್ತವೆ. ಜನನಿಬಿಡ ಮತ್ತು ಸ್ವಚ್ಛವಿಲ್ಲದ ಸ್ಥಿತಿಗಳಿಗೆ ಆಸ್ಪದವಾದ ಜನರೊಳಗೆ ಶರೀರದ ಹೇನುಗಳು ವಿಸ್ತಾರವಾಗಿ ಹಬ್ಬಿರುತ್ತವೆ! ಪ್ರಾಚೀನ ಸಮಯಗಳಲ್ಲಿ ಟೈಫಸ್ ಜ್ವರ, ಟ್ರೆಂಚ್ ಜ್ವರ ಮತ್ತು ಮರುಕಳಿಸುವ ಜ್ವರ ಇವುಗಳೂ ಸೇರಿದ ಹಲವಾರು ರೋಗಗಳ ವಾಹಕವಾಗಿರುತ್ತಿತ್ತು. ಆದರೆ ಇಂದು ಹೇನಿನಿಂದ ಈ ರೋಗಗಳು ಹಬ್ಬುವುದು ವಿರಳ.
ಸಮಸ್ಯೆಯು ಎಷ್ಟು ವಿಸ್ತಾರವಾಗಿದೆ?
ವೈದ್ಯಕೀಯ ವರ್ತಮಾನ ಪತ್ರಿಕೆ ಆರ್ಚಿವ್ಸ್ ಆಫ್ ಡರ್ಮಾಟೊಲೊಜಿ ಹೇಳಿದ್ದು: “ಪೆಡಿಕ್ಯುಲೋಸಿಸ್ ಕಪಿಟಿಸ್ (ತಲೆಹೇನು ತುಂಬಿದ ರೋಗ) ಅಮೆರಿಕದಲ್ಲಿ ವಿಸ್ತಾರವಾಗಿ ಹಬ್ಬಿರುವ ಸಮಸ್ಯೆಯಾಗಿದೆ. ಕೆಲವು ಸ್ಥಳಗಳಲ್ಲಿ ಸಾಂಕ್ರಾಮಿಕ ರೋಗದ ಪ್ರಮಾಣಕ್ಕೆ ಮುಟ್ಟಿದೆ.” ಅಮೆರಿಕದಲ್ಲಿ ವೈಯಕ್ತಿಕವಾಗಿ 6ರಿಂದ 10 ಮಿಲಿಯ ಜನರು ವಾರ್ಷಿಕವಾಗಿ ಬಾಧಿಸಲ್ಪಡುತ್ತಾರೆ ಎಂದು ಆರೋಗ್ಯಸಂಸ್ಥೆಯ ಅಧಿಕಾರಿಗಳು ಅಂದಾಜಿಸಿದ್ದಾರೆ.
ಅಮೆರಿಕದ ರೋಗನಿಯಂತ್ರಣ ಕೇಂದ್ರಗಳಿಂದ ನಡೆಸಲ್ಪಟ್ಟ ಅಧ್ಯಯನದ ಆಧಾರದ ಮೇಲೆ, ಗಮನಾರ್ಹ ಸಂಖ್ಯೆಯ ವಿದ್ಯಾರ್ಥಿಗಳು ತಲೆಹೇನು ಹೊಂದಿದ್ದರು. ವಾಸ್ತವವಾಗಿ ಮಯಾಮಿ ಯೂನಿವರ್ಸಿಟಿಯ ವೈದ್ಯಕೀಯ ಶಾಲೆಯ ಫ್ರೊಫೆಸರ್ ಡೇವಿಡ್ ಟೇಪಲಿರ್ ಹೇಳುವುದು: “ಕೆಲವು ಸ್ಥಳಗಳಲ್ಲಿ ವ್ಯಾಪ್ತಿಯು 40 ಶೇಕಡಾಕ್ಕಿಂತಲೂ ಹೆಚ್ಚಿದೆ.”
ಆದರೂ, ಪೀಡೆಯು ಅತಿವ್ಯಾಪ್ತಿಯು ಅಮೆರಿಕಕ್ಕೆ ಮಾತ್ರ ಸೀಮಿತವಾಗಿಲ್ಲ. ಸಾಯನ್ಸ್ ಪತ್ರಿಕೆ ಡಿಸ್ಕವರ್ ವರದಿಮಾಡುವುದು: “ಕೆನಡಾ ಮತ್ತು ಚಿಲಿಯಿಂದ, ಇಂಗ್ಲೆಂಡಿನಿಂದ, ಫ್ರಾನ್ಸ್, ಇಟೆಲಿ, ಪೂರ್ವ ಜರ್ಮನಿ, ಸೋವಿಯೆಟ್ ಯೂನಿಯನ್, ಆಸ್ಟ್ರೇಲಿಯಾದಿಂದ ಕೂಡಾ ಕೆಲವು ಶಾಲೆಗಳಲ್ಲಿ ಮಕ್ಕಳಿಗೆ 50 ಶೇಕಡಾ ಅಥವಾ ಹೆಚ್ಚು ತಲೆಹೇನಿನಿಂದ ಬಾಧಿಸಲ್ಪಟ್ಟ ವರದಿ ಬರುತ್ತದೆ.”
ಅವುಗಳು ಹೇಗೆ ರವಾನಿಸಲ್ಪಡುತ್ತವೆ?
ಹೇನು ಹಾರಲು ಅಥವಾ ನೆಗೆಯಲು ಸಾಧ್ಯವಿಲ್ಲದಿದ್ದರಿಂದ ಅವುಗಳು ಪೀಡಿಸಲ್ಪಟ್ಟ ವ್ಯಕ್ತಿಯೊಂದಿಗೆ, ನೇರವಾದ ಸಂಬಂಧದಿಂದ, ಸಾಮಾನ್ಯವಾಗಿ ತಲೆಯಿಂದ ತಲೆಯ ಸಂಪರ್ಕದಿಂದ ಪ್ರಥಮವಾಗಿ ಒಯ್ಯಲ್ಪಡುತ್ತವೆ. ಪೆನ್ಸಿಲ್ವೆನಿಯಾದ ಕ್ಲಾಸ್ರೂಮ್ಗಳಲ್ಲಿ ನಡೆಸಿದ ಸಂಶೋಧನೆಯು ಎಲ್ಲಾ ಬಾಧಿಸುವಿಕೆಗಳಲ್ಲಿ ಶೇಕಡಾ 73 ಈ ರೀತಿಯಲ್ಲಿ ಸಂಭವಿಸಿತು ಎಂದು ಪ್ರಕಟಿಸಿತು. ಸಂಖ್ಯೆಯು ಅತೀ ಹೆಚ್ಚಿದೆ ಎಂದು ಕೆಲವರು ಭಾವಿಸುತ್ತಾರೆ. ಡೆನಿಸ್ ವೈಟ್ ಡೈರೆಕ್ಟರ್ ಆಫ್ ದಿ ಅತ್ರೊಪೊಡ್-ಜನಿತ ರೋಗ ಕಾರ್ಯಕ್ರಮ, ನ್ಯೂಯೋರ್ಕ್ ಸ್ಟೇಟ್ ಡಿಪಾರ್ಟ್ಮೆಂಟ್ ಆಫ್ ಹೆಲ್ತ್, ಹೇಳುವುದು: “ನೇರವಾದ ಸಂಬಂಧವು ಎಲ್ಲಾ ಬಾಧಿಸುವಿಕೆಗಳಿಗಿಂತ 90 ಶೇಕಡಾದಷ್ಟು ಕಾರಣವಾಗಿದೆ.”
ಬಾಚಣಿಗೆ, ಟೊಪ್ಪಿ, ತಲೆಯ ಸ್ಕಾರ್ಫ್, ಹ್ಯಾಟ್, ತಲೇಪಟ್ಟಿ, ಟವಲ್, ಸ್ಟೀರಿಯೋ ತಲೇಪೋನ್ಸ್, ಈಜುವ ಕ್ಯಾಪ್ ಮತ್ತು ಇನ್ನಿತರ ವೈಯಕ್ತಿಕ ವಸ್ತುಗಳನ್ನು ಬಳಸುವುದರಿಂದ ಬಾಧಿಸಲ್ಪಟ್ಟವನ ತಲೇಹೇನನ್ನು ನೀವು ಹೊಂದುವ ಇತರ ರೀತಿಗಳಾಗಿವೆ. ಯಾಕಂದರೆ ಹೇನುಗಳು ಅತಿಥೇಯನಿಂದ ದೂರವಾಗಿ 20 ಗಂಟೆಗಳಷ್ಟು (48 ಎಂದು ಕೆಲವರ ವಾದ) ಜೀವಿಸುವ ಸಾಮರ್ಥ್ಯ ಹೊಂದಿವೆ.
ಇಂದು ಹೇನುಗಳು ಇಷ್ಟು ವಿಸ್ತಾರವಾಗಿ ಹಬ್ಬಿದ ಇನ್ನೊಂದು ಕಾರಣವು ಹಲವು ಹೆತ್ತವರು ಈ ಸಮಸ್ಯೆಯನ್ನು ನಿವಾರಿಸಲು ಕ್ರಿಯೆಗೈಯುವುದಿಲ್ಲ. ಡೆಬೊರಾ ಅಲ್ಟಾಸ್ಕುಲರ್, ಎಕ್ಷ್ಕೂಟಿವ್ ಡೈರೆಕ್ಟರ್ ಆಫ್ ನ್ಯಾಶನಲ್ ಪೆಡಿಕ್ಯೂಲಸಿಸ್ ಎಸೊಸಿಯೇಶನ್, ಹೇಳುವುದು: “ಸಮಯವನ್ನು ತೆಗೆದುಕೊಳ್ಳಲು ಮತ್ತು ‘ಮೊಟ್ಟೆ’ಗಳಿಗಾಗಿ (ಹೇನಿನ ಮೊಟ್ಟೆ) ತಮ್ಮ ಮಕ್ಕಳ ಕೂದಲನ್ನು ಪರೀಕ್ಷಿಸಲು ಪ್ರಯತ್ನವನ್ನು ಮಾಡಲಿಕ್ಕೆ ಆಗಿಂದಾಗ್ಯೆ ಜನರು ನೆನಪಿಸದಷ್ಟು ಕಾರ್ಯಮಗ್ನರಾಗಿರುತ್ತಾರೆ.” ಖೇದಕರ ಸತ್ಯವೇನಂದರೆ 1980ರ ದಶಕದಲ್ಲಿ ಹೇನಿನಿಂದ ಬಾಧಿಸಲ್ಪಡುವಿಕೆಯು ತಿರಸ್ಕಾರ ಮತ್ತು ನಿರ್ಲಕ್ಷ್ಯದ ಫಲಿತಾಂಶವಾಗಿದೆ.
ನಿಮ್ಮ ಕುಟುಂಬವನ್ನು ರಕ್ಷಿಸುವುದು
ಹೇನಿನ ಪೀಡನೆಯ ಪ್ರಥಮ ಚಿಹ್ನೆಯು ತುರಿಕೆಯಾಗಿದೆ. ತಲೆಯ ಹೇನುಗಳ ಕಚ್ಚುವಿಕೆಯು ನೆತ್ತಿಗೆ ಕಿರುಕುಳವಾಗಿದೆ, ತುರಿಸುವಿಕೆ ಮತ್ತು ಆಗಾಗ ಕೆಂಬಣ್ಣಕ್ಕೆ ಕಾರಣವಾಗಿದೆ. ಒಂದು ವೇಳೆ ನಿಮ್ಮ ಮಗುವು ಆಗಾಗ್ಯೆ ಅವನ ತಲೆಯನ್ನು ಪರಚಿದರೆ ಸಂಶಯಪಡಿರಿ. ಜಾಗ್ರತೆಯ ಪರೀಕ್ಷಣೆಗೆ ಪ್ರಕಾಶಮಯ ದೀಪ ಮತ್ತು ಸೂಕ್ಷ್ಮದರ್ಶಕ ಅವಶ್ಯವಾಗಿದೆ. ಹೇನುಗಳು ತೀರ ಚಲಿಸುವ ಮತ್ತು ಬೇಗನೇ ಕಂಡುಹಿಡಿಯುವಿಕೆಯನ್ನು ತಪ್ಪಿಸುವುದರಿಂದ, ನೆತ್ತಿಯ ಹತ್ತಿರದ ಕೂದಲಿಗೆ ಭದ್ರವಾಗಿ ತಾಗಿರುವ ಮೊಟ್ಟೆಗಳನ್ನು (ನಿಟ್ಸ್) ನೋಡಿರಿ. ಮೊಟ್ಟೆಯು ತಿಳಿಹಳದಿಯಿಂದ ಕಂದುಬಣ್ಣದಲ್ಲಿ ಹರಡಿರುತ್ತದೆ.. ಹೇನುಗಳ ಪೀಡನೆಗೆ ಸಾಮಾನ್ಯವಾಗಿ ತಪ್ಪಿಸಿಕೊಂಡ ಸುಮಾರು 12 ಸ್ಥಿತಿಗಳನ್ನು ಚರ್ಮವೈದ್ಯರು ಗುರುತಿಸಿದ್ದಾರೆ. ಆದ್ದರಿಂದ, ತಲೆಯ ಸೂಕ್ಷ್ಮ ಪರೀಕ್ಷಣೆಗೆ ಸೂಕ್ಷ್ಮ ದರ್ಶಕವನ್ನು ಉಪಯೋಗಿಸಿರಿ. ಕಿವಿಗಳ ಮತ್ತು ಕುತ್ತಿಗೆಯ ಹಿಂಭಾಗದ ಸುತ್ತಲೂ ಗಮನವನ್ನು ಕೇಂದ್ರೀಕರಿಸಿರಿ.
ಒಂದು ವೇಳೆ ಹೇನು ಅಥವಾ ಮೊಟ್ಟೆಗಳು ಸಿಕ್ಕಿದರೆ, ನಿರ್ದಿಷ್ಟ ಶಾಂಪೂ, ಕ್ರೀಮ್ ಅಥವಾ ಲೋಷನ್ (ಹೇನು ಕೊಲ್ಲುವ ದ್ರಾವಣ) ನೊಂದಿಗೆ ಚಿಕಿತ್ಸೆಯು ಹೇನನ್ನು ಕೊಲ್ಲುವುದು. ಅವುಗಳ ಹಬ್ಬುವಿಕೆಯನ್ನು ತಡೆಯಲು, ಒಂದೇ ಸಮಯದಲ್ಲಿ ಪೀಡಿಸಲ್ಪಟ್ಟ ಪ್ರತಿಯೊಬ್ಬನೂ ಚಿಕಿತ್ಸೆಯನ್ನು ಹೊಂದಬೇಕು. ಆದ್ದರಿಂದ ಚಿಕಿತ್ಸೆಯನ್ನು ಪ್ರಾರಂಭಿಸುವ ಮೊದಲು ಇಡೀ ಕುಟುಂಬವನ್ನು ಪರೀಕ್ಷಿಸಿರಿ.
ಹೇನು ಕೊಲ್ಲುವ ದ್ರಾವಣ ಕೂದಲಿಗೆ ತಾಗಿರುವ ಮೊಟ್ಟೆಗಳನ್ನು ಯಾವಾಗಲೂ ನಾಶಪಡಿಸುವುದಿಲ್ಲ. ಯಾವುದೇ ಉಳಿದ ಮೊಟ್ಟೆಗಳು 7ರಿಂದ 10 ದಿನಗಳೊಳಗೆ ಮರಿಗಳಾಗುತ್ತವೆ. ಆದ್ದರಿಂದ ಎರಡನೆಯ ಬಾರಿ ಹೇನು ಕೊಲ್ಲುವ ದ್ರಾವಣದ ಚಿಕಿತ್ಸೆಯು ಉಳಿದಿರುವ ಹೇನುಗಳನ್ನು ಕೊಲ್ಲಲು ಅವಶ್ಯಕವಾಗಿದೆ. ಆದಾಗ್ಯೂ ಗಮನಿಸಬೇಕಾದ ವಿಷಯ: ಹೇನು ಕೊಲ್ಲುವ ಎಲ್ಲಾ ದ್ರಾವಣಗಳು ಸ್ವಲ್ಪ ಪ್ರಮಾಣದಲ್ಲಿ ಕೀಟನಾಶಕವನ್ನು ಹೊಂದಿರುತ್ತವೆ, ಒಂದು ವೇಳೆ ಅಯೋಗ್ಯವಾಗಿ ಉಪಯೋಗಿಸಿದರೆ, ಗಂಭೀರ ಇತರ ಪರಿಣಾಮಗಳನ್ನು ಉಂಟುಮಾಡಬಹುದು. ಆದುದರಿಂದ ಉತ್ಪಾದಕರ ಸೂಚನೆಗಳನ್ನು ಜಾಗ್ರತೆಯಿಂದ ಅನುಸರಿಸಿರಿ.
ಒಂದು ವೇಳೆ ಹೇನು ಕೊಲ್ಲುವ ದ್ರಾವಣ ನಿಮ್ಮ ಕ್ಷೇತ್ರದಲ್ಲಿ ಸಿಕ್ಕದಿದ್ದರೆ ಪರ್ಯಾಯ ವಿಧಾನಗಳ ಚಿಕಿತ್ಸೆಯನ್ನು ಉಪಯೋಗಿಸಬಹುದು. ಒಳ್ಳೆಯ ಹಲ್ಲುಗಳಿರುವ ನಿರ್ದಿಷ್ಟ ಬಾಚಣಿಗೆಯೊಂದಿಗೆ ಹೇನಿನ ಮೊಟ್ಟೆಯನ್ನು ತೆಗೆಯುವಂತೆ ಹಲವು ಅಧಿಕಾರಿಗಳು ಶಿಫಾರಸು ಮಾಡಿದ್ದಾರೆ. ಇದಕ್ಕೆ ಕೂಡಿಸಿ, ವೈದ್ಯಕೀಯ ಪಠ್ಯಪುಸ್ತಕ, ಕ್ಲಿನಿಕಲ್ ಡರ್ಮಾಟೊಲೊಜಿ: ಎ ಕಲರ್ ಗೈಡ್ಟು ಡಯಾಗ್ನೊಸಿಸ್ ಆ್ಯಂಡ್ ಥೆರಾಪಿ ಸೂಚಿಸಿದ್ದು: “15 ನಿಮಿಷ ಕೂದಲಿಗೆ ಹುಳಿಒದ್ದೆಬಟ್ಟೆ ಹಚ್ಚುವುದರಿಂದ ಕೂದಲಿನ ಬುಡದಲ್ಲಿ ಹಿಡಿದಿದ್ದ ಮೊಟ್ಟೆಗಳನ್ನು ನಾಶಮಾಡಬಹುದು.”
ಇನ್ನೂ ಹೆಚ್ಚು ಪರಿಣಾಮಕಾರಿಯು ತಲೆಯನ್ನು ಕ್ಷೌರಮಾಡುವುದು. ಸ್ವಲ್ಪ ಪ್ರಮಾಣದಲ್ಲಿ ಚಿಮಣಿಎಣ್ಣೆಯನ್ನು 10ರಿಂದ 15 ನಿಮಿಷ ನೆತ್ತಿಗೆ ಹಚ್ಚುವುದರಿಂದ ಹೇನನ್ನು ಮತ್ತು ಮೊಟ್ಟೆಗಳನ್ನು ನಾಶಪಡಿಸಬಹುದು ಎಂದು ಕೆಲವರು ಕಂಡುಕೊಂಡಿದ್ದಾರೆ. ಚಿಮಣಿಎಣ್ಣೆಯು ತುರಿಕೆಗೆ ಕಾರಣವಾಗ ಬಹುದು ಮತ್ತು ಕಣ್ಣುಗಳಲ್ಲಿ ಹೋದರೆ, ನೋವನ್ನುಂಟುಮಾಡಸಾಧ್ಯವಿರುವುದರಿಂದ ಜಾಗ್ರತೆಯಿಂದ ಬಳಸಬೇಕಾಗಿದೆ. ಒಳಸೇವಿಸಿದರೆ ಚಿಮಣಿಎಣ್ಣೆಯು ವಿಷಪೂರಿತವಾಗಸಾಧ್ಯವಿದೆ. ಮತ್ತು ಒಂದುವೇಳೆ ಜ್ವಾಲೆಯ ಹತ್ತಿರ ಇದ್ದರೆ ಬೆಂಕಿಯು ತಗಲಲೂಬಹುದು.
ಹಾಸಿಗೆಯ ಸಾಮಾನುಗಳ, ಬಟ್ಟೆಗಳ ಮತ್ತು ಇತರ ವೈಯಕ್ತಿಕ ಸರಕುಗಳ ಸಂಸ್ಕರಣೆಯೂ ಅತೀ ಮಹತ್ವದ್ದಾಗಿದೆ. ಅವುಗಳನ್ನು ತೊಳೆಯಿರಿ ಮತ್ತು ನಂತರ ಮೊಟ್ಟೆಗಳೊಂದಿಗೆ ಹೇನನ್ನು ಕೊಲ್ಲಲು ಅವುಗಳನ್ನು 20 ನಿಮಿಷವಾದರೂ ಶಾಕದಿಂದ ಒಣಗಿಸುವ ಯಂತ್ರದಿಂದ ಒಣಗಿಸಿರಿ. ನಿರ್ವಾತ ರೀತಿಯ ಹಾಸಿಗೆಗಳು, ಮೆತ್ತನೆಯ ಪೀಠೋಪಕರಣಗಳು ಮತ್ತು ಇತರ ವಸ್ತುಗಳು ಎಲ್ಲಾ ಜೀವಂತ ಮೊಟ್ಟೆಗಳನ್ನು ಅಥವಾ ಹೇನನ್ನು ತೆಗೆಯುವುದಕ್ಕಾಗಿ ಅವುಗಳನ್ನು ತೊಳೆಯಲಿಕ್ಕಾಗುವದಿಲ್ಲ. ಸಂಸ್ಕರಣೆಯು ಒಂದು ಕಷ್ಟಕರ ಕಾರ್ಯವಿಧಾನ, ಆದರೆ ಇದು ನಿಮ್ಮ ಕುಟುಂಬದಲ್ಲಿ ಹೇನಿನ ಶಾಶ್ವತೆಯನ್ನು ತಡೆಗಟ್ಟಲು ಅವಶ್ಯಕವಾಗಿದೆ.
ಆದಾಗ್ಯೂ, ಹೇನಿನ ಪೀಡೆಯು ಅಂಟದಂತೆ ಇರಲು ಸಾಧ್ಯವಿಲ್ಲದಿದ್ದರೂ, ಕೆಲವು ಸಾಮಾನ್ಯ ಸೂತ್ರಗಳನ್ನು ಪಾಲಿಸುವುದಾದರೆ ಅವುಗಳನ್ನು ಪಡೆಯುವ ಸಂಭವಗಳನ್ನು ನೀವು ಕಡಿಮೆಗೊಳಿಸಸಾಧ್ಯವಿದೆ. ಹೇನು ಸುಲಭವಾಗಿ ರವಾನಿಸಲ್ಪಡುವ ಸಾಧ್ಯತೆಗಳಾದ ಬಾಚಣಿಗೆ, ಬ್ರಷ್ ಮತ್ತು ಇತರ ವೈಯಕ್ತಿಕ ವಸ್ತುಗಳ ಬಳಸುವಿಕೆಯನ್ನು ತಡೆಯುವಂತೆ ನಿಮ್ಮ ಮಕ್ಕಳಿಗೆ ಉತ್ತೇಜಿಸಿರಿ. ಸಾಧ್ಯವಿದ್ದರೆ, ನಿಮ್ಮ ಮಕ್ಕಳು ಬೇರೆ ಬೇರೆ ಹಾಸಿಗೆಗಳಲ್ಲಿ ಮಲಗುವಂತೆ ಮಾಡಿರಿ. ಹೆಣೆಯುವಂತೆ ಉದ್ದವಾದ ಕೂದಲುಗಳನ್ನು ಅಥವಾ ತಲೆಯಿಂದ ತಲೆಯ ಸಂಪರ್ಕವನ್ನು ಕಡಿಮೆಗೊಳಿಸುವಂತೆ ಸಹಾಯವಾಗಲು ಚಿಕ್ಕ ಜಡೆಯನ್ನಿಡಿರಿ. ಮತ್ತು ಕೊನೆಯದಾಗಿ ಒಂದು ವೇಳೆ ನಿಮ್ಮ ಮಗುವು ಹೇನನ್ನು ಪಡೆದರೆ, ಭಯಪಡಬೇಡಿರಿ. ಹೇನು ತುಂಬಿದ ರೋಗದಿಂದ ಗಂಭೀರಬಾಧೆಪಡುವುದು ವಿರಳ. ಇದು ಹೆಚ್ಚು ಸಾಮಾನ್ಯ ಕೂಡಾ ಆಗಿದೆ ಮತ್ತು ಪಟ್ಟಣದಲ್ಲಿ ಉತ್ತಮವಾಗಿ ಇಡಲ್ಪಟ್ಟ ಗುಟ್ಟಾಗಿದೆ. (g89 8/22)
[ಪುಟ 28ರಲ್ಲಿರುವಚೌಕ]
ದೀರ್ಘಕಾಲದ ಒಂದು ಸಮಸ್ಯೆ
ಸಾವಿರಾರು ವರ್ಷಗಳಿಂದ ತಲೆಹೇನು ಮನುಷ್ಯನನ್ನು ಪೀಡಿಸುತ್ತದೆ. ನವಂಬರ 15, 1988ರ ದ ಮೆಡಿಕಲ್ ಪೋಸ್ಟ್ ಪ್ರಕಟಿಸುವುದು: “ಹೇನುಗಳು ಈಜಿಪ್ಟಿನ ರಕ್ಷಿತಶವದ, ಪೆರುವಿನ ಪೂರ್ವ ಕೊಲಂಬಿಯಾದ ಇಂಡಿಯಾನರು, ಆಗ್ನೇಯ ಅಮೆರಿಕದ ಪೂರ್ವ ಐತಿಹಾಸಿಕ ಇಂಡಿಯಾನರು, ಅವರ ಕೂದಲುಗಳಿಗೆ ತಾಗಿಕೊಂಡಿರುವುದು ಕಂಡುಹಿಡಿಯಲ್ಪಟ್ಟಿದೆ.
“ಅನಂತರ ಈಗ ರಾಜವೈಭವ, ಸ್ಥಾನಮಾನ ಅಥವಾ ಧಾರ್ಮಿಕ ವರ್ಗಗಳಿಗೆ ಕೊಂಚವೇ ಗೌರವ ಹೇನಿಗೆ ಇದೆ.
“ಅವುಗಳು ಗಣನೀಯ ಪ್ರಮಾಣದಲ್ಲಿ ಹೆರೋದನ ಅರಮನೆಯಲ್ಲಿರುವ, ಮಸಾಡದ ಸುತ್ತಲಿನ ಪ್ರಾಚೀನ ನೆಲಸುನಾಡಿಗರ, ಬೈಬಲಿನ ಅತೀ ಪುರಾತನಹಸ್ತ ಪ್ರತಿಯಾದ ಸತ್ತ ಸಮುದ್ರದ ಸುರುಳಿಗಳು ದೊರೆತ ಕುಮ್ರಾನ್ ಗುಹೆಗಳಲ್ಲಿ ದೊರಕಿದ ಬಾಚಣಿಗೆಗಳಲ್ಲಿ ಮತ್ತು ಕೂದಲುಗಳ ನಮೂನೆಗಳಲ್ಲಿ ಇವೆ.”
ಸಾವಿರಾರು ವರ್ಷಗಳ ಹಿಂದೆ ಉಪಯೋಗಿಸಿದ ಹೇನಿನ ಮೊಟ್ಟೆಗಳನ್ನು ತೆಗೆಯುವ ಬಾಚಣಿಗೆಗಳು ಸುಸ್ಪಷ್ಟವಾಗಿ ಇಂದು ಉಪಯೋಗಿಸುವವುಗಳಿಗೆ ಸಮಾನವಾಗಿವೆ. ಬಾಚಣಿಗೆಗಳು ಸಾಮಾನ್ಯವಾಗಿ ಮರದಿಂದ ಮಾಡಿದವುಗಳಾಗಿದ್ದರೆ, ಮೆಗಿದ್ದೋವಿನ ಪ್ರಾಚೀನ ಅರಮನೆಯಲ್ಲಿ ದಂತದ ಬಾಚಣಿಗೆಗಳು ದೊರೆತವು. ಮ್ಯೂಸಿಯಂ ಸಂಗ್ರಹಗಳಲ್ಲಿ ಮೊಟ್ಟೆಗಳ ಬಾಚಣಿಗೆಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸಿದಾಗ ಅವುಗಳ ಮೇಲೆ ಹಲವು ಹೇನು ಮತ್ತು ಮೊಟ್ಟೆಗಳು ಕಂಡು ಬಂದವು.
ಹಿಬ್ರೂ ಯೂನಿವರ್ಸಿಟಿ, ಹಡಾಸ್ಸ ವೈದ್ಯಕೀಯ ಶಾಲೆಯ ಡಾ.ಕೊಸ್ಟಾ ಮಮ್ಕೊಗ್ಲು ಗಮನಿಸಿದ್ದು: “ಬಾಚಣಿಗೆಗಳ ಮೇಲಿನ ಹೇನು ಮತ್ತು ಮೊಟ್ಟೆಗಳ ಸಂಖ್ಯೆಯನ್ನು ಗಮನಿಸಿದರೆ, ಇವುಗಳು ಸ್ಪಷ್ಟವಾಗಿ ಹೆಚ್ಚು ಪರಿಣಾಮಕಾರಿಯಾಗಿ ಹೇನು ತೆಗೆಯುವ ಸಾಧನಗಳಾಗಿದದ್ದವು ಎಂಬದು ವಿದಿತವಾಗುತ್ತದೆ.”
[ಪುಟ 29 ರಲ್ಲಿರುವಚಿತ್ರ]
ತಲೆ ಹೇನು (ಬಹಳ ದೊಡ್ಡದಾಗಿ ಚಿತ್ರಿಸಲಾಗಿದೆ)
[ಕೃಪೆ]
Photo by courtesy of Beecham Products U.S.A.