ಜಗತ್ತನ್ನು ಗಮನಿಸುವುದು
ಏಯ್ಡ್ಸ್ ಬಾಧಿತರಿಂದ ಮೊಕದ್ದಮೆ
ಏಯ್ಡ್ಸ್ ಬಾಧಿತರುಗಳು ಆಷ್ಟ್ರೇಲಿಯಾದಲ್ಲಿ ಆಸ್ಪತ್ರೆಗಳ ಮತ್ತು ವೈದ್ಯಕೀಯ ಸಂಸ್ಥೆಗಳ ವಿರುದ್ಧ ಮೊಕದ್ದಮೆಯನ್ನು ಹೂಡಿರುತ್ತಾರೆ. ರಕ್ತ ಪೂರಣದ ಜೊತೆಯಲ್ಲಿ ಸೇರಿರುವ ಅಪಾಯಗಳ ಸಾಕಷ್ಟು ಎಚ್ಚರಿಕೆಯ ಕೊರತೆಯಿಂದಾಗಿ ಇಲ್ಲವೇ ತಾತ್ಸಾರದಿಂದ ತಮಗೆ ಈ ಮಾರಕವಾದ ರೋಗಕ್ಕೆ ತುತ್ತಾಗಿದ್ದೇವೆ ಎಂದು ಈ ರೋಗಕ್ಕೆ ಬಲಿಯಾದವರು ವಾದಿಸುತ್ತಾರೆ. ಇದಲ್ಲದೆ, ರಕ್ತ ಪೂರಣದ ಬದಲಿಯಾಗಿ ದೊರಕುವ ಚಿಕಿತ್ಸೆಗಳ ಕುರಿತಾಗಿ ತಮಗೇನೂ ತಿಳಿಸಲ್ಪಟ್ಟಿಲ್ಲ ಎಂದವರು ಆಪಾದಿಸುತ್ತಾರೆ. ಈ ಹಂತಕ ರೋಗದಿಂದ ಸಾಯುತ್ತಿರುವ 16 ವರ್ಷದ ಹಿಮೊಫಿಲಿಕ್‌ನ ಕುರಿತು ಬಹಳ ಪ್ರಚಾರ ಇಂದಿನ ತನಕ ನೀಡಲಾಗಿದೆ, ಆದರೆ ಇತರ 31 ತುತ್ತಾದವರು ಒಂದು ತಂಡವಾಗಿ ಒಟ್ಟಿಗೆ ಕೋರ್ಟ್ ದಾವೆಯನ್ನು ಹೂಡಿರುತ್ತಾರೆ. 16 ವರ್ಷದವನ ಹೇಳಿಕೆಯನ್ನು ಸುಪ್ರೀಮ್ ಕೋರ್ಟಿನಲ್ಲಿ ಓದಲಾಯಿತು. ಅವನು ಭಾಗಶಃ ಹೇಳಿದ್ದು: “ಅದೊಂದು ಕಥೆ ಪುಸ್ತಕದೋಪಾದಿ ಇದೆ—ಕಥೆ ಪುಸ್ತಕದ ಕೊನೆಯ ಪುಟ ಹರಿದು ಹಾಕಿದಂತೆ ಇದೆ. ಅಲ್ಲಿ ಒಂದು ಸಂತೋಷದ ಅಂತ್ಯವಿಲ್ಲ.” (g90 4/8)
ಸೋವಿಯೆಟ್‌ನಲ್ಲಿ ಧಾರ್ಮಿಕ ಪುನರುಜ್ಜೀವನ
ಅಧ್ಯಕ್ಷ ಮಿಕಾಯೇಲ್ ಗೊರ್ಬಚೆವ್‌ರಿಗನುಸಾರ “ಸೋವಿಯೆಟ್ ಒಕ್ಕೂಟವು ದೀರ್ಘಕಾಲದಿಂದ ಧರ್ಮವನ್ನು ತ್ಯಜಿಸಿದ್ದರಿಂದ ತಪ್ಪುಗೈದಿದೆ ಮತ್ತು ಈಗ ಅದಕ್ಕೆ ನೈತಿಕ ಬಲ ಆವಶ್ಯಕವಾಗಿದೆ,” ಎಂದು ದ ನ್ಯೂ ಯೋರ್ಕ್ ಟೈಮ್ಸ್ ಹೇಳುತ್ತದೆ. ಅವನು ಹೀಗೆ ಹೇಳಿದ್ದಾನೆಂದು ತಿಳಿಸುತ್ತದೆ: “ಧರ್ಮವು ಶತಕಗಳಿಂದ ಉತ್ಪಾದಿಸಿದ ಮತ್ತು ಮೂರ್ತರೂಪಕೊಟ್ಟ ನೈತಿಕ ಮೌಲ್ಯತೆಗಳು ನಮ್ಮ ದೇಶದ ನವೀಕರಿಸುವಿಕೆಯ ಕಾರ್ಯದಲ್ಲಿ ಸಹಾಯ ಮಾಡಶಕ್ತವಾಗಿವೆ. ವಾಸ್ತವದಲ್ಲಿ ಇದು ತಾನೇ ಸಂಭವಿಸುತ್ತಾ ಇದೆ.” ದ ವಾಲ್ ಸ್ಟ್ರೀಟ್ ಜರ್ನಲ್ ಸಹಮತಿಸುವದು: “ವಿಶೇಷವಾಗಿ ಧಾರ್ಮಿಕರೆಂದು ತೋರದ ಜನರಲ್ಲಿಯೂ, ರಾಷ್ಟ್ರದ ನೈತಿಕತೆಯ ಅವನತಿಗಾಗಿ ವಿಷಾಧಿಸುವದು ಜನರೂಢಿಯಲ್ಲಿದೆ ಮತ್ತು ಧರ್ಮವು ಜನರ ಆಫೀಮ್ ಎಂಬ ಮಾರ್ಕ್ಷಿಸ್ಟ್-ಲೆನಿನಿಸ್ಟ್ ದೃಷ್ಟಿಕೋನಕ್ಕಾಗಿ ತೆಗಳುತ್ತಾರೆ.” ಜರ್ನಲ್ ಮುಂದುವರಿಸುವದು, ಬದಲಾವಣೆಯು “ರಾಷ್ಟ್ರವ್ಯಾಪೀ ಚರ್ಚ್ ಪುನರುಜ್ಜೀವನದ ಕಿಡಿಯನ್ನು ಹೊತ್ತಿಸಿರುವುದಾದರೂ, ಪುಸ್ತಕಗಳ ಪುಸ್ತಕದ ಒದಗಿಸುವಿಕೆಯು ಬಹಳವಾಗಿ ಕಡಿಮೆಯಾಗಿದೆ.” ಸೋವಿಯೆಟ್ ಪುಸ್ತಕ ಪ್ರಕಾಶಕರು “ಇನ್ನೂ ಅಧಿಕೃತವಾಗಿ ನಾಸ್ತಿಕತೆಯನ್ನು ಸಾರುವ ಸರಕಾರದಿಂದ” ಹತೋಟಿಯಲ್ಲಿಡಲ್ಪಟ್ಟಿರುವದರಿಂದ, ಬೇಡಿಕೆಗನುಸಾರ ಬೈಬಲುಗಳನ್ನು ಮುದ್ರಿಸುತ್ತಿಲ್ಲ. ಎಲ್ಲಿಯಾದರೂ ಬ್ಲ್ಯಾಕ್ ಮಾರ್ಕೇಟಿನಲ್ಲಿ ಅದನ್ನು ಕಂಡುಕೊಂಡರೆ, ಒಂದಕ್ಕೆ ಸುಮಾರು ರೂ.1800ರಷ್ಟು ($100) ಕೊಡಲು ಸಿದ್ಧರು ಮತ್ತು ಬೈಬಲುಗಳ ಕಳ್ಳತನವೂ ವರದಿಯಾಗಿರುತ್ತದೆ. (g90 3/22)
ಮಾರಕವಾದ ಚಟ
“ಪ್ರತಿ 13 ಸೆಕಂಡುಗಳಿಗೆ ತಂಬಾಕು-ಪ್ರಚೋದಿತ ರೋಗದಿಂದ ಒಬ್ಬನು ಸಾಯುತ್ತಿರುತ್ತಾನೆ,” ವರದಿಸುತ್ತದೆ ಯುಎನ್ ಕ್ರಾನಿಕಲ್. “ಸಾಂಪ್ರದಾಯಿಕ ಅಂದಾಜುಗಳಿಗನುಸಾರ ತಂಬಾಕುವಿನಿಂದ ಮೃತ್ಯುವಿಗೆ ತುತ್ತಾಗುವವರ ಸಂಖ್ಯೆಯು ಪ್ರತಿವರ್ಷ 25 ಲಕ್ಷ ಜನರು.” ಅನೇಕ ದೇಶಗಳಲ್ಲಿ ಹೆಂಗಸರು ತಂಬಾಕು ಸೇವನೆ ಮಾಡುವದು ತೀವ್ರವಾಗಿ ಏರುತ್ತಲಿದೆ. ಶ್ವಾಸಕೋಶದ ಕ್ಯಾನ್ಸರ್ ಮತ್ತು ಇತರ ಉಸಿರಾಟದ ರೋಗಗಳ ಹೊರತಾಗಿ, ಗರ್ಭಧಾರಣೆ ನಿರೋಧಕ ಗುಳಿಗೆಗಳನ್ನು ತೆಗೆದುಕೊಳ್ಳುವ ಹೆಂಗಸು ಧೂಮ್ರಪಾನಿಗಳು ಹೃದಯಾಘಾತ ಮತ್ತು ಲಕ್ವಹೊಡೆತದ ಅಪಾಯಗಳನ್ನು ಎದುರಿಸುತ್ತಾರೆ. ಗರ್ಭಧಾರಣೆಯ ಹೆಂಗಸರು ಅವರ ಮಕ್ಕಳ ಆರೋಗ್ಯವನ್ನೂ ಅಪಾಯಕ್ಕೀಡುಮಾಡುತ್ತಾರೆ. (g90 3/22)
ಯುದ್ಧಕ್ಕೆ ಆಹುತಿ
ಅಮೆರಿಕದಲ್ಲಿರುವ ಲೆಂಟ್ಜ್ ಪೀಸ್ ರಿಸರ್ಚ್ ಲಾಬೊರೆಟರಿನ ವಿಲ್ಯಂ ಎಕ್‌ಹಾರ್ಟ್‌ರಿಂದ ನಡಿಸಲ್ಪಟ್ಟ ಒಂದು ಅಧ್ಯಯನಕ್ಕನುಸಾರ, 1988ರಲ್ಲಿ 45 ಲಕ್ಷ ಜನರು ಯುದ್ಧಕ್ಕೆ ಆಹುತಿಯಾಗಿದ್ದಾರೆ. “ನಾಲ್ಕರಲ್ಲಿ ಮೂರು ಪಾಲು ಪೌರ ನಾಗರಿಕರು, ಅಧಿಕ ಸಂಖ್ಯಾತರು ಬಲುಬೇಗನೆ ಆಶ್ರಯವನ್ನು ಹುಡುಕಲು ಅಸಾಧ್ಯವಾದ ಪ್ರಾಯಸಂದವರು ಮತ್ತು ಮಕ್ಕಳು ಹಾಗೂ ಸುಲಭವಾಗಿ ನ್ಯೂನ ಪೌಷ್ಟಿಕಾಹಾರ ಪಡೆಯುವವರು,” ಎಂದು ನ್ಯಾಷನಲ್ ಕ್ಯಾಥಲಿಕ್ ರಿಪೋರ್ಟರ್‌ನಲ್ಲಿನ ಲೇಖನವು ತಿಳಿಸುತ್ತದೆ. ದಾಖಲೆ ಮಾಡಲ್ಪಟ್ಟ 22 ದೇಶಗಳಲ್ಲಿ 18ರಲ್ಲಿ ಆಂತರಿಕ ಘರ್ಷಣೆಗಳೆಂದು ಲೆಕ್ಕ ಮಾಡಲಾಗಿದೆ. ಆದಾಗ್ಯೂ, ಉತ್ತರ ಆಯರ್ಲೇಂಡ್, ಎಲ್ ಸಾಲ್ವಡೋರ್, ನಿಕಾರಗುವ, ನಮೀಬಿಯ, ಮತ್ತು ದಕ್ಷಿಣ ಆಫ್ರಿಕ ದೇಶಗಳು ಲೆಕ್ಕದಲ್ಲಿ ಹಿಡಿಯಲ್ಪಡಲಿಲ್ಲ, ಯಾಕಂದರೆ ಆ ರಾಷ್ಟ್ರಗಳಲ್ಲಿ ಬಲಿಯಾದವರು ವರ್ಷವಿಡೀ ಒಂದು ಸಾವಿರಕ್ಕಿಂತಲೂ ಕಡಿಮೆ ಆದುದರಿಂದ. 1988ರಲ್ಲಿ ಬುರುಂಡಿ ಮತ್ತು ಉತ್ತರ ಸೊಮಾಲಿಯಾದಲ್ಲಿ ಹೊಸ ಯುದ್ಧಗಳು ಆರಂಭಗೊಂಡವು. (g90 3/22)
ಲಾಟರಿ ವಿಜೇತನು ನಷ್ಟಪಡುತ್ತಾನೆ
“ನಾನು ಯಾವಾಗ ಏನು ಬಯಸುತ್ತೇನೋ ಅದನ್ನು ಆಗ ನಾನು ಖರೀದಿಸಬಲ್ಲೆನು,” ಅನ್ನುತ್ತಾನೆ ಸುಮಾರು ಹದಿಮೂರುವರೆ ಕೋಟಿ ರೂಪಾಯಿಗಳಷ್ಟು ($7.6 ಮಿಲಿಯ) 1986ರ ಕೆನಡಿಯನ್ ಲಾಟರಿ ಜಾಕ್‌ಪೊಟ್ ವಿಜೇತ ಜೀನ್-ಗೈ ಲವಿಗ್ಯೂರ್, “ಆದರೆ ನಾನೇನೂ ಬೇರೆ ಯಾರಿಗಿಂತಲೂ ಹೆಚ್ಚೇನೂ ಸಂತೋಷಿಯಾಗಿಲ್ಲ.” ಮೊಂಟ್ರಿಯಲ್‌ನ ಮಾಜೀ ನಿರುದ್ಯೋಗಿಯಾಗಿದ್ದವನು ಹೇಳಿದ್ದೇನಂದರೆ ಕೋಟ್ಯಾಧಿಪತಿಯಾದುದರಿಂದ “ನನ್ನಲ್ಲೇನೂ ಬದಲಾವಣೆಯಾಗಲಿಲ್ಲ, ಆದರೆ ನನ್ನ ಸುತ್ತಲೂ ಇದ್ದದ್ದೆಲ್ಲಾ ಬದಲಾವಣೆಗೊಂಡಿದೆ.” ಈಗ ಅವನ ಕುಟುಂಬ ಮತ್ತು ಹಳೆಯ ಮಿತ್ರರು ಅವನನ್ನು ತೊರೆದಿರುತ್ತಾರೆ, ಯಾಕಂದರೆ ಅವನು ಹೇಳುವಂತೆ, “ಅವರಿಗೆ ಬೇಕಾಗುವಷ್ಟು ಹಣ ನಾನು ಕೊಡಲಿಲ್ಲ.” (g90 3/22)
2,500-ವರ್ಷ-ಹಳೆಯ ಒಗಟು
ಬೆಬಿಲೋನಿನ ಅಲೌಕಿಕವಾದ ತೂಗುದೋಟ(ಹ್ಯಾಂಗಿಂಗ್ ಗಾರ್ಡನ್ಸ್)ಗಳಿಗೆ ಅರಸನಾದ ನೆಬೂಕದ್ನೆಚ್ಚರನು ಹೇಗೆ ನೀರೆರೆಯುತ್ತಿದ್ದನು? ಇರಾಕಿನ ಅಧ್ಯಕ್ಷನಾದ ಸದ್ದಾಂ ಹುಸೇನ್ ಅದನ್ನು ತಿಳಿಯಲು ಬಯಸುತ್ತಾನೆಂದು ನ್ಯೂ ಯೋರ್ಕ್ ಪೋಸ್ಟ್ ಹೇಳುತ್ತದೆ. ಎಷ್ಟೆಂದರೆ, ಏಳು ಹಂತಗಳ ಅಂತಸ್ತಿನ ಪೌರಾಣಿಕ ತೋಟಗಳಿಗೆ ನೀರು ಎರೆಯುವ ಒಂದು ಅತಿ ಹೆಚ್ಚು ಸಾಧ್ಯತೆಯಿರುವ ವ್ಯವಸ್ಥೆಯೊಂದಿಗೆ ಬರುವ ಯಾವನಿಗೂ ಸುಮಾರು ಎರಡೂವರೆ ಕೋಟಿ ರೂ.ಗಳ ಬಹುಮಾನವನ್ನು ಅವನು ನೀಡಲು ತಯಾರಿದ್ದಾನೆ. ಆದಾಗ್ಯೂ, ಆಧುನಿಕ ತಾಂತ್ರಿಕತೆಯನ್ನು ಈ ವ್ಯವಸ್ಥೆಯಲ್ಲಿ ಅಳವಡಿಸಲಿಕ್ಕೆ ಸಾಧ್ಯವಿಲ್ಲ, ಸಾ. ಶ. ಪೂ. ಆರನೇ ಶತಮಾನದಲ್ಲಿ ಉಪಯೋಗಿಸಿದ ಅದೇ ವ್ಯವಸ್ಥೆಯಾಗಿರತಕ್ಕದ್ದು. ಇರಾಕಿ ಸರಕಾರವು, ಸುಮಾರು 365 ಅಡಿಗಳಷ್ಟು ಎತ್ತರವಾಗಿರಬಹುದಾದ ಈ ತೋಟಗಳ ಅನುರೂಪ ನಕಲನ್ನು ಮಾಡಲು ಬಯಸುತ್ತದೆ. ಈ ಸ್ಪರ್ಧೆಯು ಕೇವಲ ಇರಾಕಿಯರಿಗೆ ಮಾತ್ರ ತೆರೆದಿರುತ್ತದೆ. (g90 3/22)