ನೆಲಗಪ್ಪೆ ಅಥವಾ ಕಪ್ಪೆ ವ್ಯತ್ಯಾಸವೇನು?
ಶತಮಾನಗಳಿಂದ ನೆಲಗಪ್ಪೆ ಮತ್ತು ಕಪ್ಪೆಗಳು ಒಂದು ಕೆಟ್ಟ ಖ್ಯಾತಿಯನ್ನು ಹೊಂದಿವೆ. “ಅವು ಗಂತಿಗಳನ್ನು ಉಂಟುಮಾಡುತ್ತವೆ.” “ಮಾಟಗಾತಿಯರು ಜನರನ್ನು ನೆಲಗಪ್ಪೆಗಳು ಮತ್ತು ಕಪ್ಪೆಗಳಾಗಿ ಪರಿವರ್ತಿಸಬಲ್ಲರು.” ಒಬ್ಬ ರಾಜಕುಮಾರಿಯು ಮುತ್ತು ಕೊಟ್ಟಾಗ ಒಬ್ಬ ಸುಂದರ ರಾಜಕುಮಾರನಾಗಿ ಪರಿವರ್ತಿತವಾಗುವ ಒಂದು ಕುರೂಪಿ ಕಪ್ಪೆಯ ಕಥೆಯನ್ನು ಯಾರು ಕೇಳಿಲ್ಲ? ಆದಾಗಲೂ, “ಸೆಸಮಿ ಸ್ಟ್ರೀಟ್”ದಂತಹ ಮಕ್ಕಳ ಟಿವಿ ಕಾರ್ಯಕ್ರಮದಲ್ಲಿ ಮತ್ತು “ಮಪೆಟ್ ಶೋ”ನಲ್ಲಿ ಕರ್ಮಿಟ್ ಕಪ್ಪೆಯ ಜನಪ್ರಿಯತೆಯಂದಿನಿಂದ, ಕಪ್ಪೆಗಳಿಗೆ ಜನರಿಂದ ಹೆಚ್ಚು ಅನುಕೂಲಕರವಾದ ಅಭಿಪ್ರಾಯ ಸಿಗುತ್ತಿದೆ. ಕಪ್ಪೆಗಳ ಮತ್ತು ನೆಲಗಪ್ಪೆಗಳ ಕುರಿತಾದ ಸತ್ಯವೇನು? ಅವು ಹೇಗೆ ಭಿನ್ನವಾಗಿವೆ?
ಶಕ್ಯವೆಂದು ಭಾವಿಸಲಾಗುವ ಯಾವುದೇ ಅಪಾರ್ಥಗಳನ್ನು ನಾವು ಸ್ಪಷ್ಟಪಡಿಸೋಣ—ಗಂತಿಗಳನ್ನು ನೆಲಗಪ್ಪೆಗಳಲ್ಲ, ವೈರಸ್ಗಳು ಉಂಟುಮಾಡುತ್ತವೆ. ಮತ್ತು ಯಕ್ಷಿಣಿಯ ಕಥೆಗಳಂದರೆ ಅಷ್ಟೇ—ಯಕ್ಷಿಣಿಯ ಕಥೆಗಳು, ಕಲ್ಪನಾಕಥೆಗಳು ಮತ್ತು ಮಿಥ್ಯೆ ಆಗಿರುತ್ತವೆ. ಮತ್ತು ಮಾಟಗಾತಿಯರು ಅಸ್ತಿತ್ವದಲ್ಲಿರುವುದಾದರೂ, ಅವರು ಒಬ್ಬ ವ್ಯಕ್ತಿಯನ್ನು ಒಂದು ಕಪ್ಪೆ ಅಥವಾ ನೆಲಗಪ್ಪೆಯಾಗಿ ಬದಲಾಯಿಸಲಾರರು.
ಕಪ್ಪೆಗಳು ಮತ್ತು ನೆಲಗಪ್ಪೆಗಳು ಲೋಕದ ಹೆಚ್ಚಿನ ಭಾಗಗಳಲ್ಲಿ ಕಂಡುಬರುತ್ತವೆ, ಆದರೆ ದಕ್ಷಿಣ ಧ್ರುವದಲ್ಲಿ ಕಪ್ಪೆಗಳಿಲ್ಲ ಮತ್ತು ಉತ್ತರ ಧ್ರುವದಲ್ಲಿ ನೆಲಗಪ್ಪೆಗಳಿಲ್ಲ. ಕಪ್ಪೆಗಳ ಮತ್ತು ನೆಲಗಪ್ಪೆಗಳ ಸುಮಾರು 3,800 ಜಾತಿಗಳಿವೆ, ಅವುಗಳಲ್ಲಿ 300ಕ್ಕಿಂತ ಹೆಚ್ಚು ನೆಲಗಪ್ಪಗಳದ್ದಾಗಿದೆ. ಹಾಗಾದರೆ ಒಂದು ನೆಲಗಪ್ಪೆಯನ್ನು ಒಂದು ಕಪ್ಪೆಯಿಂದ ನೀವು ಹೇಗೆ ಪ್ರತ್ಯೇಕಿಸಬಲ್ಲಿರಿ? ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಉತ್ತರಿಸುವುದು: “ಅತ್ಯಧಿಕ ನಿಜ ನೆಲಗಪ್ಪೆಗಳಿಗೆ ಅತ್ಯಧಿಕ ನಿಜ ಕಪ್ಪೆಗಳಿಗಿಂತ ಹೆಚ್ಚು ಅಗಲವಾದ, ಚಪ್ಪಟೆಯಾದ ಒಂದು ದೇಹ ಮತ್ತು ಹೆಚ್ಚು ಕಪ್ಪಾದ, ಒಣಗಿದ ಚರ್ಮವಿರುತ್ತದೆ. ನಿಜ ನೆಲಗಪ್ಪೆಗಳು ಗಂತಿಗಳಿಂದ ಸಾಮಾನ್ಯವಾಗಿ ಆವರಿಸಲ್ಪಟ್ಟಿರುತ್ತವೆ, ಆದರೆ ನಿಜ ಕಪ್ಪೆಗಳಿಗೆ ನಯವಾದ ಚರ್ಮವಿರುತ್ತದೆ. ಅತ್ಯಧಿಕ ನಿಜ ಕಪ್ಪೆಗಳಂತಿರದೆ, ನಿಜ ನೆಲಗಪ್ಪೆಗಳಲ್ಲಿ ಅಧಿಕಾಂಶವು ನೆಲದ ಮೇಲೆ ಜೀವಿಸುತ್ತವೆ. ವಯಸ್ಕ ಕಪ್ಪೆಗಳು ಕೇವಲ ಸಂತಾನವೃದ್ಧಿಮಾಡಲು ನೀರಿನಲ್ಲಿ ಹೋಗುತ್ತವೆ.” ಕಪ್ಪೆಗಳು ಸಾಮಾನ್ಯವಾಗಿ ನೀರಿನ ಹತ್ತಿರದಲ್ಲಿದ್ದು, ನೀವು ಸಮೀಪಿಸುವುದನ್ನು ಕೇಳಿದಾಗ ಒಳಗೆ ಧುಮುಕಲು ಸಿದ್ಧವಾಗಿರುತ್ತವೆ. ಹೆಚ್ಚಿನ ಕಪ್ಪೆಗಳಿಗೆ ಕೇವಲ ಅವುಗಳ ಮೇಲಿನ ದವಡೆಯ ಮೇಲೆ ಹಲ್ಲುಗಳಿರುತ್ತವೆ. ನೆಲಗಪ್ಪೆಗಳಿಗೆ ಹಲ್ಲುಗಳಿರುವುದಿಲ್ಲ. ಹೀಗಿರುವದರಿಂದ, ಇವೆರಡೂ ತಮ್ಮ ಆಹಾರವನ್ನು ಇಡೀಯಾಗಿ ನುಂಗಿಬಿಡುತ್ತವೆ.
ಅನೇಕ ಕಪ್ಪೆಗಳು ಮತ್ತು ನೆಲಗಪ್ಪೆಗಳು ಶಕ್ತಿಯುತವಾದ ವಿಷಗಳನ್ನು ಉತ್ಪಾದಿಸುತ್ತವೆ. ಕೆಂಪು ಬಣ್ಣದ ಕೊಸ್ಟರೀಕನ್ ಪಾಯಿಸನ್ ಆ್ಯರೋ ಫ್ರಾಗ್ (ಡೆಂಡ್ರೊಬೇಟಿಸ್ ಪ್ಯೂಮಿಲ್ಯೊ) ಒಂದು ಉದಾಹರಣೆಯಾಗಿದೆ. ಕೆಲವು ಕಪ್ಪೆ ವಿಷಗಳು ಒಬ್ಬ ವ್ಯಕ್ತಿಯನ್ನು ಸುಲಭವಾಗಿ ಕೊಲ್ಲಬಲ್ಲವು. ಬಯಾಲೊಜಿ ಎಂಬ ಪುಸ್ತಕವು ತಿಳಿಸುವುದು: “ಉಷ್ಣವಲಯಗಳಲ್ಲಿನ ನಾಡಿಗ ಕುಲಗಳು ತಮ್ಮ ಬಾಣಗಳನ್ನು ಈ ಕಪ್ಪೆಗಳ ಮೇಲೆ ಉಜ್ಜಿಕೊಳ್ಳುವುದರ ಮೂಲಕ ಅನೇಕ ವೇಳೆ ಅವುಗಳನ್ನು ವಿಷಗೊಳಿಸುತ್ತಾರೆ.” ಬೈಬಲ್ ಪುಸ್ತಕವಾದ ಪ್ರಕಟನೆಯಲ್ಲಿ “ಅಶುದ್ಧಾತ್ಮಗಳನ್ನು” ಕಪ್ಪೆಗಳಿಗೆ ಹೋಲಿಸಲಾಗಿದೆ. ಅದು ಹಾಗೆ ಯಾಕೆ? ಯಾಕಂದರೆ ಮೋಶೆಯ ಧರ್ಮಶಾಸ್ತ್ರದಲ್ಲಿ, ಕಪ್ಪೆಗಳು ಆಹಾರಕ್ಕಾಗಿ ಅಶುದ್ಧವಾಗಿದ್ದವು. ನೆಲಗಪ್ಪೆಗಳು ಬೈಬಲಿನಲ್ಲಿ ಪ್ರಸ್ತಾಪಿಸಲ್ಪಟ್ಟಿಲ್ಲ.—ಪ್ರಕಟನೆ 16:13; ಯಾಜಕಕಾಂಡ 11:12.
[ಪುಟ 38 ರಲ್ಲಿರುವ ಚಿತ್ರಗಳು]
ಬಲಗಡೆ: ನೆಲಗಪ್ಪೆ. ಕೆಳಗಡೆ: ಕಪ್ಪೆ