ಮಾಲಿನ್ಯತೆ ಆದರ ಕಾರಣ ಯಾರು?
“ಈ ದ್ವೀಪವು ಪ್ರಯೋಗ ಪರೀಕ್ಷೆಯ ಕೆಳಗಿರುವ ಸರಕಾರಿ ಆಸ್ತಿ. ಜಮೀನು ನೆರಡಿ ರೋಗ ಪೀಡಿತವಾಗಿದೆ ಮತ್ತು ಅಪಾಯಕಾರಿ. ನಿಲ್ಲೆಡೆಯು ನಿಶಿದ್ಧ.”a ಗ್ರುನಾರ್ಡ್ ದ್ವೀಪದೆದುರಿರುವ ಸ್ಕಾಟಿಷ್ ಭೂಭಾಗದಲ್ಲಿ ಅಂಟಿಸಿರುವ ಈ ನೋಟೀಸು ಭಾವೀ ಸಂದರ್ಶಕರನ್ನು ಎಚ್ಚರಿಸುತ್ತದೆ. ಎರಡನೆಯ ಲೋಕ ಯುದ್ಧದ ಸಮಯದಲ್ಲಿ ಜೀವವಿಜ್ಞಾನ ಶಸ್ತ್ರಗಳ ಪ್ರಾಯೋಗಿಕ ಸ್ಫೋಟನವಾದಂದಿನಿಂದ, ಕಳೆದ 48 ವರ್ಷಗಳಿಂದ, ಈ ಸುಂದರವಾದ ದ್ವೀಪವು ನೆರಡಿರೋಗದ ರೋಗಾಣುಗಳಿಂದ ಕಲುಷಿತವಾಗಿದೆ.
ಗ್ರುನಾರ್ಡ್ ದ್ವೀಪವು ಮಾಲಿನ್ಯದ ಒಂದು ಗರಿಷ್ಠ ಉದಾಹರಣೆಯಾಗಿದೆ. ಆದರೆ ನೆಲಮಾಲಿನ್ಯದ ಕಡಿಮೆಸ್ತರದವುಗಳು ಒಂದು ಸಮಸ್ಯೆಯಾಗಿದ್ದು, ಅದು ಹರಡುತ್ತದೆ ಮತ್ತು ಬೆಳೆಯುತ್ತಿದೆ.
ನೆಲಮಾಲಿನ್ಯತೆಯ ಅಧಿಕತೆ
ನೆಲ ಮಾಲಿನ್ಯತೆಯ ಒಂದು ಕಾರಣ ತಿಪ್ಪೆ. ಉದಾಹರಣೆಗೆ, ನಾಲ್ಕು ಮಂದಿಯ ಸಾಮಾನ್ಯ ಬ್ರಿಟಿಷ್ ಕುಟಂಬವೊಂದು ಪ್ರತಿ ವರ್ಷ 112 ಪೌಂಡ್ ಲೋಹವನ್ನು ಮತ್ತು 90 ಪೌಂಡ್ ಪ್ಲಾಸ್ಟಿಕನ್ನು ತಿಪ್ಪೆಯಾಗಿ ಎಸೆಯುತ್ತದೆಂದು ದ ಟೈಮ್ಸ್ ಆಫ್ ಲಂಡನ್ ವರದಿಸಿದೆ. “ಇವುಗಳಲ್ಲಿ ಹೆಚ್ಚಿನ ತಿಪ್ಪೆಯು ರಸ್ತೆಗಳನ್ನು, ಬೀದಿಬದಿಯ ಹುಲ್ಲಿನ ದಂಡೆಯನ್ನು, ಕಡಲತೀರಗಳನ್ನು ಮತ್ತು ವಿರಾಮ ಸ್ಥಳಗಳನ್ನು ಇನ್ನಷ್ಟು ಅಂದಗೆಡಿಸುವುದು.”
ಫ್ರೆಂಚ್ ಪತ್ರಿಕೆ ಜಿಇವೊ ವರದಿಸಿದ್ದೇನಂದರೆ, ಫ್ರಾನ್ಸಿನ ಮಾರ್ಸಿಲ್ಸ್‌ನ ಹೊರಗಿರುವ ಎಂಟ್ರೆಸ್ಸನ್ ಕಸದಗುಡ್ಡೆಯು ಒಂದು ಸಂದರ್ಭದಲ್ಲಿ 200 ಅಡಿ ಎತ್ತರಕ್ಕೆ ಬೆಳೆದು, 1,45,000 ಗಲ್ ಹಕ್ಕಿಗಳನ್ನು ಆಕರ್ಷಿಸಿತ್ತು. ಕಸದ ಗುಪ್ಪೆಯ ಸುತ್ತಲೂ ಹಾಕಿದ ಸರಿಗೆಯ ಪರಿಧಿ ಬೇಲಿಯು ಸಹಾ ಪ್ಲಾಸ್ಟಿಕ್ ಮತ್ತು ಕಾಗದದ ಕಸಕಡ್ಡಿಗಳನ್ನು ಗಾಳಿಯಲ್ಲಿ ಹಾರಿಹೋಗುವುದರಿಂದ ತಡೆಯಲಿಲ್ಲ. ಫಲಿತಾಂಶವಾಗಿ, ಕಸಕಡ್ಡಿಗಳ ಈ ಸಮಸ್ಯೆಯನ್ನು ಅಡಗಿಸಲು, ಮಗ್ಗಲಿನ 74 ಎಕ್ರೆ ವ್ಯವಸಾಯದ ಭೂಮಿಯನ್ನು ಸ್ಥಳೀಕ ಅಧಿಕಾರಿಗಳು ಖರೀದಿಸಿದರು.
ಮಾರ್ಚ್ 1988ರಲ್ಲಿ ಕೊನೆಗೊಂಡ ಯುರೋಪಿಯನ್ ಪರಿಸರ ವರ್ಷದ ಸಂಘಟನೆಯಲ್ಲಿ, ಇಇಸಿ ಕಮಿಶನರರಾದ ಸ್ಟೇನ್ಲಿ ಕ್ಲಿಂಟನ್ ಡೇವಿಸ್‌ರವರು, ಮಾಲಿನ್ಯತೆಯ ಸಮಸ್ಯಾ ಪಟ್ಟಿಯನ್ನು “ಅತ್ಯಂತ ದೊಡ್ಡದಾಗಿ” ಕಂಡದ್ದರಲ್ಲಿ ಏನೂ ಆಶ್ಚರ್ಯವಿಲ್ಲ.b ಫಲಿತಾಂಶವಾಗಿ, ಕಸದ ತಿಪ್ಪೆಯ ಪುನಃ ಬಳಕೆಯನ್ನು ಪ್ರೋತ್ಸಾಹಿಸಲು ಒಂದು ಚಟುವಟಿಕೆಯನ್ನು ಯೋಜಿಸಿ, ಪ್ರತಿ ವರ್ಷ 220 ಕೋಟಿ ಟನ್ನು ಸಾಮಾಜಿಕ ತಿಪ್ಪೆಯ 80 ಸೇಕಡಾವನ್ನು ಪುನಃ ಪರಿವರ್ತಿಸುವ ಗುರಿಯನ್ನಿಡಲಾಯಿತು.
ಕಸದ ತಿಪ್ಪೆಯ ಮಾಲಿನ್ಯತೆಯು ಪಶ್ಚಿಮ ಯುರೋಪಿಗೇ ಮೀಸಲಲ್ಲ. ಅದೊಂದು ಜಾಗತಿಕ ಸಂಗತಿಯಾಗಿದೆ. ನ್ಯೂ ಸಯಂಟಿಸ್ಟ್ ಪತ್ರಿಕೆಗನುಸಾರ ಅತಿದೂರದ ದಕ್ಷಿಣ ಧ್ರುವ ಪ್ರದೇಶವನ್ನೂ ಶುದ್ಧೀಕರಿಸುವ ಅಗತ್ಯ ಉಂಟಾಗಿದೆಯಂತೆ. ಆಸ್ಟ್ರೇಲಿಯನ್ ಸಂಶೋಧಕ ತಜ್ಞರು, ತಾವು ತಳವೂರಿದ ಜಾಗದಲ್ಲಿ ಬಿಸುಟಲಾಗಿದ್ದ ಸುಮಾರು 40 ಟನ್ನುಗಳಿಗಿಂತಲೂ ಹೆಚ್ಚು ಹಳೆತ ಯಂತ್ರ ಮತ್ತು ಕಟ್ಟಡ ಸಾಮಗ್ರಿಗಳನ್ನು ಒಟ್ಟುಗೂಡಿಸಿದರು. ದಿ ನ್ಯೂಯೋರ್ಕ್ ಟೈಮ್ಸ್ (ದಶಂಬರ 19, 1989) ವರದಿಸುವದೇನಂದರೆ, ಅಂಟಾರ್ಕಟಿಕದ ಮೆಕ್ಮರ್ಡೊ ಠಾಣೆಯಲ್ಲಿ ಅಮೆರಿಕನರು ಮೂವತ್ತು ವರ್ಷಗಳಿಂದ ಸಂಚಯಗೊಂಡ ತಿಪ್ಪೆಯನ್ನು ಸ್ವಚ್ಛಮಾಡುತ್ತಲಿದ್ದಾರೆ, 80 ಅಡಿ ಆಳದ ನೀರಿನಲ್ಲಿ ಮುಳುಗಿರುವ 77,000 ಪೌಂಡ್ ಭಾರದ ಟ್ರೇಕ್ಟರು ಕೂಡಾ ಅದರಲ್ಲಿ ಸೇರಿದೆಯಂತೆ.
ಹೌದು, ಒಣನೆಲದಲ್ಲಿ ಮಾಲಿನ್ಯತೆ ಮತ್ತು ಹೊಲೆಗಲಸು ತುಂಬಿಹೋಗಿದೆ. ಆದರೆ, ಭೂಮಿಯ ಜಲದ ಕುರಿತೇನು?
ಕೊಳೆ ನೀರು—ಜೀವಕ್ಕೆ ಅಯೋಗ್ಯ
“ಬ್ರಿಟನಿನ ನದಿಗಳು ಸುಮಾರು ಕಾಲು ಶತಮಾನಕ್ಕಿಂತಲೂ ಹೆಚ್ಚು ಸಮಯದಿಂದ ಮೊತ್ತಮೊದಲಾಗಿ ಹೆಚ್ಚು ಕೊಳೆಯಾಗುತ್ತಾ ಬರುತ್ತಿವೆ” ಎಂದು ಓಬ್ಸರ್‌ವರ್ ವರದಿ ಮಾಡಿದೆ. “ಕ್ಯಾಟೆಗಟ್ [ಸ್ವೀಡನ್ ಮತ್ತು ಡೆನ್ಮಾರ್ಕ್ ನಡುವಣ ಸಮುದ್ರ] ಸಾಯುತ್ತಾ ಇದೆ. ಅದೆಷ್ಟು ಮಲಿನತೆ ಮತ್ತು ಆಮ್ಲಜನಕಹೀನ ವಾಗಿದೆಯೆಂದರೆ ಮತ್ಸ್ಯ ಜೀವಿಗಳನ್ನು ಪೋಷಿಸಲು ತೀವ್ರ ಶಕ್ತಿಹೀನವಾಗುತ್ತಿದೆ” ಎಂದು ಹೇಳಿದೆ ದ ಟೈಮ್ಸ್ ಆಫ್ ಲಂಡನ್. “ಪೋಲೆಂಡಿನ ನದಿಗಳು ತೀವ್ರಗತಿಯಲ್ಲಿ ತೆರೆದ ಚರಂಡಿಗಳಾಗುತ್ತಾ ಇವೆ ಮತ್ತು ಯಾವ ಸುಧಾರಣೆಯೂ ಕಾಣಬರುತ್ತಿಲ್ಲ.”—ದ ಗಾರ್ಡಿಯನ್.
1986ನೇ ವರ್ಷದ ನವಂಬರವು ಕಂಡ ಒಂದು ಮಾಲಿನ್ಯತೆಯ ಆಪತ್ತನ್ನು “ಪಶ್ಚಿಮ ಯುರೋಪಿನ ಅತ್ಯಂತ ಮಹತ್ತಾದ ಹಾಗೂ ಆಕರ್ಷಕ ಜಲದಾರಿಯ ಮಾನಹರಣ” ಎಂಬದಾಗಿ ಲಂಡನಿನ ಡೈಲೀ ಟೆಲಿಗ್ರಾಫ್ ವರ್ಣಿಸಿದೆ. ಸ್ವಿಟ್ಸರ್ಲೆಂಡ್‌ನ ಬಾಸೆಲ್‌ನಲ್ಲಿ ರಾಸಾಯನಿಕ ಕಾರ್ಖಾನೆಗೆ ಹಿಡಿದ ದೊಡ್ಡ ಬೆಂಕಿಯನ್ನು ಆರಿಸಲು ಆಗ್ನಿಶಾಮಕ ದಳವನ್ನು ಕರೆಯಲಾಯಿತು. ತಿಳಿಯದೆಯೇ, ಅವರು ನೀರು ಹಾಯಿಸಿದಾಗ ಸುಮಾರು 10ರಿಂದ 30 ಟನ್ನುಗಳಷ್ಟು ರಾಸಾಯನಿಕ ಮತ್ತು ಕೀಟನಾಶಕ ದ್ರವವನ್ನು ರೈನ್ ನದಿಯೊಳಗೆ ಸಾಗಿಸಿ, “ನೀರಿನ ಉದ್ಯಮದ ಒಂದು ಚೆರ್ನಾಬಿಲ್”ನ್ನೇ ಉಂಟುಮಾಡಿದರು. ಈ ಘಟನೆ ವಾರ್ತಾಪತ್ರದ ಮೇಲ್ಪಂಕ್ತಿಯನ್ನು ಹೊಡೆದಿತ್ತು. ಆದರೆ ಸಾಮಾನ್ಯವಾಗಿ ವರದಿಸದ ವಿಷಯವೇನಂದರೆ, ವಿಷಕಾರಕ ಹಿಪ್ಪೆಯು ಕಡಿಮೆ ಗಮನಾರ್ಹಕ ಪ್ರಮಾಣದಲ್ಲಿ ಕ್ರಮವಾಗಿ ರೈನ್‌ನದಿಯೊಳಗೆ ಸುರಿಸಲ್ಪಡುವ ನಿಜಸಂಗತಿಯೇ.
ಜಲವಾಹಿ ಮಾಲಿನ್ಯತೆಯು ಅದರ ಮೂಲದ ಪರಿಸರಕ್ಕೇ ಸೀಮಿತವಲ್ಲ. ಅನೇಕ ಮೈಲು ದೂರದಲ್ಲೂ ಅದರ ಪರಿಣಾಮವು ಮಾರಕವಾಗಬಲ್ಲದು. ಉತ್ತರ ಸಾಗರಕ್ಕೆ ಹರಿಯುವ ಯುರೋಪಿನ ನದಿಗಳು ಪೈಂಟ್, ಟೂತ್‌ಪೇಸ್ಟ್, ಸ್ವಚ್ಛಕಾರಕಗಳು, ವಿಷಕಾರಕ ಹಿಪ್ಪೆ ಮತ್ತು ಗೊಬ್ಬರವನ್ನು ಎಷ್ಟು ದೊಡ್ಡ ಪ್ರಮಾಣದಲ್ಲಿ ಸಾಗಿಸುತ್ತವೆಯೆಂದರೆ ಮೀನುಗಾರಿಕೆಯ ಸಂಶೋಧನೆ ನಡಿಸುವ ಡಚ್ ಸಂಸ್ಥೆಯು, ಈಗ, ಉತ್ತರ ಸಾಗರದ ಚಟ್ಟೆಮೀನನ್ನು ತಿನ್ನಲು ಅನುಚಿತವೆಂದು ಚೀಟುಹಚ್ಚಿದೆ. ಆಳವಿಲ್ಲದ ಕ್ಷೇತ್ರಗಳಲ್ಲರುವ ಚಪ್ಪಟೆಮೀನಿನಲ್ಲಿ 40 ಸೇಕಡಾ ತ್ವಚೆವ್ಯಾಧಿ ಅಥವಾ ಕೇನ್ಸರ್‌ಕಾರಕ ಗಡ್ಡೆಗಳಿವೆ ಎಂದು ಸಮೀಕ್ಷೆಯು ತೋರಿಸುತ್ತದೆ.
ಇಂಥಹ ಕಲುಷೀಕರಣಕ್ಕೆ ದೋಷಿ ಯಾರು? ಕೈಗಾರಿಕೆಯ ಕಡೆಗೆ ಹೆಚ್ಚಿನವರು ಕೈ ತೋರಿಸುತ್ತಾರೆ. ಲಾಭಕ್ಕಾಗಿ ಅವರಿಗಿರುವ ದುರಾಸೆಯು ಪರಿಸರದ ಕಡೆಗಿರುವ ಚಿಂತೆಗಿಂತ ಎಷ್ಟೋ ಪಾಲು ಹೆಚ್ಚು. ರೈತರು ಸಹಾ ತಮ್ಮ ಭೂಮಿಯ ಸಮೀಪದ ತೊರೆಗಳ ಮತ್ತು ನದಿಗಳ ಮಾಲಿನ್ಯತೆಗೆ ದೋಷಿಗಳಾಗಿದ್ದಾರೆ. ಸೋರುಪ್ಪು ಗೊಬ್ಬರದ ಅವರ ಸತತ ಪ್ರಯೋಗವು ಪ್ರದೇಶದ ಕಾದಿಟ್ಟ ಹಸಿರುಮೇವನ್ನು ಈಗ ಮಾರಕವಾಗಿ ಮಾಡಬಲ್ಲದು.
ಜನರು ಸಹಾ ನದಿಗಳನ್ನು, ಹರಕು ಮುರುಕುಗಳನ್ನು ಎಸೆದುಬಿಡುವ ಜಾಗವಾಗಿ ಉಪಯೋಗಿಸುತ್ತಾರೆ. ಇಂಗ್ಲೆಂಡಿನ ಪಡುವಲಲ್ಲಿ ಒಂದು ಜಲಾನಯನವಿರುವ ಮರ್ಸೇ ನದಿಯು, ಯುರೋಪಿನಲ್ಲಿ ಅತ್ಯಂತ ಕೊಳಕು ಎಂದು ಹೇಳಲ್ಪಡುತ್ತಿದೆ. “ಬುದ್ಧಿಹೀನರು ಮತ್ತು ಅರಿವಿಲ್ಲದವರು ಮಾತ್ರವೇ ಮರ್ಸೇಯಲ್ಲಿ ಈಜಾಡುವವರು” ಎಂದು ಲಿವರ್‌ಪೂಲ್‌ನ ಡೈಲೀ ಪೋಸ್ಟ್ ಹೇಳಿದೆ. ಅದು ಕೂಡಿಸಿದ್ದು: “ಈ ನದಿಯಲ್ಲಿ ಬಿದ್ದುಬಿಡುವಷ್ಟು ಯಾವನೇ ದುರ್ಭಾಗ್ಯನು ಅಸ್ವಸ್ಥನಾಗಿ ಅಸ್ಪತ್ರೆಗೆ ಒಯ್ಯಲ್ಪಡದಿರಲಾರನು.”
ಹಸಿ ರೊಚ್ಚು ಸಹಾ ಕಡಲ ಮಾಲಿನ್ಯತೆಯ ವಸ್ತುಗಳಲ್ಲಿ ಪ್ರಧಾನವಾಗಿ ನಿಂತದೆ. ಒಂದು ಜನಪ್ರಿಯ ಆಂಗ್ಲ ರಜಾ ಕಡಲತೀರದ ಕಡಲನೀರು, “ಸಾಧಾರಣ ಗೃಹಸ್ನಾನದ ನೀರಲ್ಲಿ ಒಂದು ಕಪ್ಪ್ ಹಸಿ ರೊಚ್ಚಿನ” ಪ್ರಮಾಣದಷ್ಟು ಕಲುಷಿತವಾಗಿದೆ ಎಂದು ವರದಿಯಾಗಿದೆ. ಇದು ಇಸಿಸಿ ಪರಿಮಿತಿಗಿಂತ ನಾಲ್ಕು ಪಾಲಷ್ಟು ಹೆಚ್ಚು ಕಲುಷಿತ.
ಇದಲ್ಲದೆ ಇನ್ನೊಂದು ಅಪಾಯವೂ ಇದೆ: ಇದು ಆಕಾಶದಿಂದ ಬೀಳುವಂಥಾದ್ದು.
ಆಮ್ಲ ವೃಷ್ಟಿ—ಪೀಡಕ ಬೆದರಿಕೆ
ಒಂದಾನೊಂದು ಸಮಯದಲ್ಲಿ ಇಂಗ್ಲೆಂಡಿನ ಜನರು ಗಾಳಿಯನ್ನು—ದಟ್ಟ ಮಂಜನ್ನು ಉಸಿರಾಡುವ ಕಾರಣ ಸಾಯುತ್ತಿದ್ದರು. ಇಂದು ಅಂಥಹ ಮಾಲಿನ್ಯತೆಯಿಂದಾಗುವ ಸಾವು ಅಪೂರ್ವ. 1952ರಲ್ಲಿ ಸುಮಾರು 4,000 ಮಂದಿಯನ್ನು ಕೊಂದ ಲಂಡನಿನ ಮಂಜು ಈಗ ಒಂದು ಬೆದರಿಕೆಯಾಗಿಲ್ಲ. ಮಂಜಿಗೆ ನೆರವಾದ ಕೆಲವು ಇದ್ದಲು ಸುಡುವ ಕಾರ್ಖಾನೆಗಳನ್ನು ಗ್ರಾಮೀಣ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು ಮತ್ತು ಎತ್ತರವಾದ ಹೊಗೆನಳಿಗೆಗಳನ್ನು, ಮತ್ತು ಅತಿ ಮಾರಕ ಅನಿಲಗಳ ಬಹಳಷ್ಟು ಪ್ರಮಾಣವನ್ನು ವಿಸರ್ಜಿಸಲು ಕೆಲವು ಸಲ ಮಾರ್ಜಕಗಳಿಂದಲೂ ಸಜ್ಜುಗೊಳಿಸಲಾಯಿತು.
ಆದರೂ ವಾತಾವರಣದ ಮಾಲಿನ್ಯತೆಯನ್ನು ಇದು ನಿಲ್ಲಿಸಿರುವುದಿಲ್ಲ. ಎತ್ತರದ ಹೊಗೆ ಕೊಳವೆಗಳು ಸಮೀಪದ ಕ್ಷೇತ್ರದ ಮೇಲೆ ಬರುವ ಅಪಾಯವನ್ನು ತೆಗೆದು ಹಾಕಿರಬಹುದು. ಆದರೆ ಪ್ರಬಲ ಮಾರುತಗಳು ಮಾಲಿನ್ಯವನ್ನು ಬಹು ದೂರಕ್ಕೆ—ಕೆಲವೊಮ್ಮೆ ಬೇರೆ ದೇಶಗಳಿಗೂ ಸಾಗಿಸುತ್ತವೆ. ಫಲಿತಾಂಶವಾಗಿ, ಸ್ಕೇಂಡಿನೇವಿಯ, ಬ್ರಿಟಿಷ್ ಮಾಲಿನ್ಯತೆಯ ಪೀಡೆಯನ್ನು ಅನುಭವಿಸುತ್ತದೆ, ಮತ್ತು ಅನೇಕರು ಬ್ರಿಟನನ್ನು “ಯುರೋಪಿನ ಕೊಳಕು ಮುದುಕ” ಎಂಬದಾಗಿ ನಿರ್ದೇಶಿಸುತ್ತಾರೆ. ತದ್ರೀತಿಯಲ್ಲಿ, ಅಮೆರಿಕದ ನಡುಪಶ್ಚಿಮ ಉದ್ಯಮಗಳು ಕೆನಡಾದ ಬಹಳಷ್ಟು ಆಮ್ಲ ವೃಷ್ಟಿಯ ಸಮಸ್ಯೆಗೆ ಕಾರಣವಾಗಿವೆ.
ವಾಯು ಮಾಲಿನ್ಯತೆಯಿಂದಾಗುವ ಆಮ್ಲ ವೃಷ್ಟಿಗೆ ಮುಖ್ಯ ಜವಾಬ್ದಾರಿಯು ಗಂಧಕಾಮ್ಲವೆಂಬ ಆರೋಪವನ್ನು ತಜ್ಞರು ವರ್ಷಗಳಿಂದ ಹೊರಿಸಿದ್ದಾರೆ. 1985ರಲ್ಲಿ ಆಮ್ಲ ವೃಷ್ಟಿಯ ಕುರಿತಾದ ಕೆನಡಾ-ಅಮೆರಿಕ ಕಾರ್ಯಕಲಾಪಗಳ ಅಮೆರಿಕನ್ ಅಧ್ಯಕ್ಷ ನಿಯೋಗಿ ಡ್ರೂ ಲೂವಿಸ್ ಹೇಳಿದ್ದು: “ಗಂಧಕಾಮ್ಲಗಳು ಆಮ್ಲವೃಷ್ಟಿಗೆ ಕಾರಣವಲ್ಲವೆಂದು ಹೇಳುವುದು ಧೂಮ್ರಪಾನವು ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಲ್ಲವೆಂದು ಹೇಳುವುದಕ್ಕೆ ಸಮಾನ.” ಗಂಧಕಾಮ್ಲ ಭಸ್ಮವು ನೀರಿನ ತೇವದ ಸಂಪರ್ಕಕ್ಕೆ ಬಂದಾಗ, ಅದು ಸಲ್ಪ್ಯೂರಿಕಾಮ್ಲವನ್ನುಂಟುಮಾಡಿ, ಮಳೆಯನ್ನು ಆಮ್ಲೀಕರಣ ಮಾಡುತ್ತದೆ ಅಥವಾ ಮೋಡಗಳ ಸಣ್ಣಹನಿಗಳಲ್ಲಿ ಶೇಕರಿಸುತ್ತದೆ. ಮತ್ತು ಹೀಗೆ, ಒಳನಾಡಿನ ಅರಣ್ಯಗಳನ್ನು ಮಾರಕ ತೇವದಿಂದ ನೆನೆಸಬಹುದು.
ಆಮ್ಲವೃಷ್ಟಿಯ ಬೀಳುವಾಗ ಅಥವಾ ಅದಕ್ಕಿಂತಲೂ ಕೆಟ್ಟದ್ದಾಗಿ ಆಮ್ಲಹಿಮವು ಕರಗುವಾಗ, ಕೆಳಗಿನ ಮಣ್ಣಿನ ಮೇಲೆ ಪರಿಣಾಮವಾಗುತ್ತದೆ. 1927ರ ತಮ್ಮ ಅಧ್ಯಯನವನ್ನು ಪುನರಾವರ್ತಿಸಿದ ಸ್ವೀಡಿಶ್ ವಿಜ್ಞಾನಿಗಳು ತೀರ್ಮಾನಿಸಿದ್ದೇನಂದರೆ, ಸುಮಾರು 28 ಇಂಚು ಆಳದ ಅರಣ್ಯದ ಮಣ್ಣಿನಲ್ಲಿ ಆಮ್ಲತೆಯು ಹತ್ತು ಪಾಲಷ್ಟು ಏರಿದೆ ಎಂಬದಾಗಿ. ಈ ರಾಸಾಯನಿಕ ಬದಲಾವಣೆಯು, ಪ್ರಾಮುಖ್ಯ ಖನಿಜಗಳಾದ ಕ್ಯಾಲ್ಸಿಯಂ ಮತ್ತು ಮೆಗ್ನೇಸಿಯಂ ಮುಂತಾದವನ್ನು ಸಸ್ಯಗಳು ಹೀರುವುದನ್ನು ಗಂಭೀರವಾಗಿ ಕುಂಠಿತಗೊಳಿಸುತ್ತದೆ.
ಇವೆಲ್ಲವೂ ಮನುಷ್ಯನ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಪೂರ್ವದಲ್ಲಿ ಜೀವಿಗಳಿಂದ ಸಮೃದ್ಧವಿದ್ದ ಕೊಳಗಳು ಮತ್ತು ನದಿಗಳು ಆಮ್ಲೀಕರಣಗೊಂಡು ನಿರ್ಜೀವವಾಗುವಾಗ ಅವನು ಕಷ್ಟ ಅನುಭವಿಸುತ್ತಾನೆ. ಅದಲ್ಲದೆ, ಕೊಳಗಳಲ್ಲಾಗಲಿ ಮಣ್ಣಿನಲ್ಲಾಗಲಿ, ನೀರಿನ ಆಮ್ಲತೆಯು ಹೆಚ್ಚುವಾಗ ಅಲ್ಯೂಮಿನಿಯಂ ಕರಗಿಹೋಗುತ್ತದೆ ಎಂದು ನಾರ್ವೇಜಿಯನ್ ವಿಜ್ಞಾನಿಗಳು ತಮ್ಮ ಅಧ್ಯಯನದಿಂದ ತೀರ್ಮಾನಿಸಿದ್ದಾರೆ. ಇದು ಆರೋಗ್ಯಕ್ಕೆ ಹಾನಿ ನಿಶ್ಚಯ. “ಮರಣಗಳ ಸಂಖ್ಯೆಯ ಹೆಚ್ಚುವಿಕೆ ಮತ್ತು ನೀರಿನಲ್ಲಿ ಅಲ್ಯೂಮಿನಿಯಂನ ಅಧಿಕ ಸಾಂದ್ರತೆಗಳ ನಡುವೆ ಒಂದು ಸ್ಪಷ್ಟವಾದ ಸಂಬಂಧವಿದೆ” ಎಂದು ವಿಜ್ಞಾನಿಗಳು ಗಮನಿಸಿದ್ದಾರೆ. ಆಲ್ಜೈಮರ್ ರೋಗ ಮತ್ತು ವೃದ್ಧರ ಇತರ ರೋಗಗಳ ನಡುವಣ ಸಂಭವನೀಯ ಸಂಬಂಧವು ಭಯಕ್ಕೆ ಕಾರಣವಾಗುತ್ತಲಿದೆ.
ಬ್ರಿಟನಿನ ಮರ್ಸೇ ನದಿ ಮತ್ತು ಫ್ರಾನ್ಸಿನ ಎಂಟ್ರೆಸ್ಸೆನ್ ತಿಪ್ಪೇಗುಂಡಿಯಂಥ ಕೇತ್ರಗಳಲ್ಲಿ ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನಗಳನ್ನು ಮಾಡಲಾಗಿದೆ ನಿಜ. ಆದರೂ, ಇಂಥಹ ಸಮಸ್ಯೆಗಳು ಹೋಗಿ ಬಿಡಲಾರವು. ಅವು ಭೂಮಿಯಲ್ಲೆಲ್ಲೂ ಪುನಃ ಗೋಚರಿಸುತ್ತವೆ. ಆದರೆ ಇನ್ನೂ ಮತ್ತೊಂದು ರೀತಿಯ ಮಾಲಿನ್ಯತೆ ಇದೆ—ಅದು ಅದೃಶ್ಯವಾದದ್ದು.
ಓಸೋನ್—ಅದೃಶ್ಯ ಶತ್ರು
ಕಾರ್ಖಾನೆಗಳಲ್ಲಿ ಅಥವಾ ಮನೆಗಳ ಕುಲುಮೆಗಳಲ್ಲಿ ಪಳೆಯುಳಿಕೆಯ ಸೌದೆಗಳನ್ನು ಉರಿಸುವಿಕೆಯು ಗಂಧಕಾಮ್ಲಗಳನ್ನಲ್ಲದೆ ಬೇರೆ ಮಾಲಿನ್ಯತೆಗಳನ್ನು ಉತ್ಪನ್ನಮಾಡುತ್ತದೆ. ಇದರಲ್ಲಿ ನೈಟ್ರೋಜನ್ ಮತ್ತು ದಹಿಸದ ಹೈಡ್ರೋಕಾರ್ಬನ್ ಆಕ್ಸೈಡುಗಳು ಸೇರಿವೆ.
ವಾಯು ಮಾಲಿನ್ಯತೆಯ ಅಧಿಕಾಧಿಕ ದೋಷವನ್ನು ವೈಜ್ಞಾನಿಕ ಅಭಿಪ್ರಾಯಗಳು ಈಗ ಈ ನೈಟ್ರೋಜನ್ ಆಕ್ಸೈಡುಗಳ ಮೇಲೆ ಹೊರಿಸುತ್ತವೆ. ಸೂರ್ಯನ ಬೆಳಕಿನ ಸಂಪರ್ಕದ ಕೆಳಗೆ ಅವು ಒಂದು ಮಾರಕ ಅನಿಲವಾದ ಓಸೋನನ್ನು ಉತ್ಪಾದಿಸಲು ಸಹಾಯ ಮಾಡುತ್ತವೆ. “ಅಮೆರಿಕದಲ್ಲಿ ಸಸ್ಯಜೀವದ ಮೇಲೆ ಪರಿಣಾಮಬೀರುವ ಅತ್ಯಂತ ಮಹತ್ವದ ವಾಯು ಮಾಲಿನ್ಯತೆ ಒಸೋನ್‌ನಿಂದಾಗುತ್ತದೆ,” ಎಂಬದಾಗಿ ಅಮೆರಿಕದ ಪರಿಸಾರಿಕ ರಕ್ಷಣೆಯ ಕಾರ್ಯಭಾರಿ ಡೇವಿಡ್ ಟಿಂಜೀ ಹೇಳಿದರು. ಇದು ತನ್ನ ದೇಶಕ್ಕೆ 1986ರಲ್ಲಿ 1,000 ಮಿಲಿಯ ಡಾಲರ್ ವೆಚ್ಚವನ್ನು ಮಾಡಿಸಿತು ಎಂದು ಅವರು ಅಂದಾಜಿಸಿದರು. ಆಗ ಯುರೋಪಿನ ನಷ್ಟವು ವಾರ್ಷಿಕವಾಗಿ 400 ಮಿಲಿಯ ಡಾಲರ್ ಎಂದು ಲೆಕ್ಕಮಾಡಲಾಗಿತ್ತು.
ಹೀಗೆ, ಆಮ್ಲವೃಷ್ಟಿಯು ಜಲಮಾರ್ಗಗಳನ್ನು ಕೊಲ್ಲುತ್ತಿರುವಾಗ, ಕೊನೆಯದಾಗಿ, ಮೋಟಾರು ಎಂಜಿನಿನ ನಿಷ್ಕಾಸಕ್ಕೆ ಸಂಬಂಧಿಸಿದ ಅನಿಲವೆಂದು ಅನೇಕರು ನೆನಸುವ ಒಸೋನ್, ವೃಕ್ಷಗಳ ಸಾವಿಗೆ ಆಮ್ಲವೃಷ್ಟಿಗಿಂತಲೂ ಹೆಚ್ಚು ಕಾರಣೀಭೂತವಾಗಿದೆ. ದಿ ಎಕಾನಮಿಸ್ಟ್ ಹೇಳಿದ್ದು: “ಮರಗಳು [ಜರ್ಮನಿಯಲ್ಲಿ] ಅಕಾಲ ಹತ್ಯಗೊಳ್ಳುವುದು ಆಮ್ಲ ವೃಷ್ಟಿಯಿಂದಾಗಿ ಅಲ್ಲ, ಓಸೋನಿಂದಾಗಿ. ಮಾರಕ ಹೊಡೆತವು ಹಿಮಗಡ್ಡೆ, ಆಮ್ಲ ಮಂಜು ಅಥವಾ ವ್ಯಾಧಿಯಿಂದ ಬಿದ್ದರೂ ವೃಕ್ಷಗಳನ್ನು ಬೇಧ್ಯವಾಗಿ ಮಾಡುವಂಥಾದ್ದು ಓಸೋನೇ.” ಮತ್ತು ಯುರೋಪಿನಲ್ಲಿ ಏನು ಸಂಭವಿಸುತ್ತದೋ ಅದು ಬೇರೆ ಖಂಡಗಳ ಪರಿಸ್ಥಿತಿಗಳ ಪ್ರತಿಬಿಂಬಕವು. “ಕ್ಯಾಲಿಫೋರ್ನಿಯದ ನೇಶನಲ್ ಪಾರ್ಕಿನ ವೃಕ್ಷಗಳು ಲಾಸೇಂಜಲಿಸ್‌ನಷ್ಟು ದೂರದಿಂದ ಬರುವ ವಾಯು ಮಾಲಿನ್ಯತೆಯಿಂದಾಗಿ ನಷ್ಟಗೊಳ್ಳುತ್ತಿವೆ,” ಎಂದು ನ್ಯೂ ಸಯಂಟಿಸ್ಟ್ ವರದಿಮಾಡಿದೆ.
This paragraph is missing in archives
ನೈತಿಕ ಮಾಲಿನ್ಯತೆ
ಜನರ ತೋರಿಕೆಯಿಂದಾಗಿ ಮೋಸಹೋಗುವುದು ಸುಲಭ. ಯೇಸು ಕ್ರಿಸ್ತನು ಇದನ್ನು ಸಚಿತ್ರವಾಗಿ ದೃಷ್ಟಾಂತಿಸಿದ್ದಾನೆ. ತನ್ನ ದಿನಗಳ ಧಾರ್ಮಿಕ ಮುಖಂಡರನ್ನು ಉದ್ದೇಶಿಸುತ್ತಾ, ಅವನಂದದ್ದು: “ಅಯ್ಯೋ, . . . ನೀವು ಸುಣ್ಣಹಚ್ಚಿದ ಸಮಾಧಿಗಳಿಗೆ ಹೋಲಿಕೆಯಾಗಿದ್ದೀರಿ. ಇವು ಹೊರಗೆ ಚಂದವಾಗಿ ಕಾಣುತ್ತವೆ. ಒಳಗೆ ನೋಡಿದರೆ . . . ಎಲ್ಲಾ ಹೊಲಸಿನಿಂದ ತುಂಬಿರುತ್ತದೆ.” (ಮತ್ತಾಯ 23:27) ಹೌದು, ವ್ಯಕ್ತಿಯೊಬ್ಬನು ಹೊರಗೆ ನೀಟಾಗಿ, ಆಕರ್ಷಕನಾಗಿಯೂ ತೋರಬಹುದು. ಆದರೆ ಅವನ ಮಾತು ಮತ್ತು ನಡತೆಯು ಅವನ ನಿಜವಾದ ಕೀಳು ವ್ಯಕ್ತಿತ್ವವನ್ನು ಪ್ರಕಟಿಸಬಲ್ಲದು. ಅಂತಹ ನೈತಿಕ ಮಾಲಿನ್ಯತೆಯು ಇಂದು ವಿಸ್ತಾರವಾಗಿ ಹಬ್ಬಿರುವುದು ವಿಶಾಧಕರ.
ನೈತಿಕ ಮಾಲಿನ್ಯದಲ್ಲಿ ಮಾದಕೌಷಧದ ದುರುಪಯೋಗವೂ ಸೇರಿದೆ. ಇದು ಎಂದಿಗಿಂತಲೂ ಹೆಚ್ಚು ವಿಸ್ತಾರ್ಯವಾಗಿ ಹಬ್ಬುತ್ತಾ ಇದೆ. ಪಾಪ್ ಗಾಯಕರು, ನಾಟಕ ಮತ್ತು ಚಲನ ಚಿತ್ರದ ತಾರೆಗಳು ಮತ್ತು ಸನ್ಮಾನ್ಯರಾಗಿ ಕಾಣುವ ವ್ಯಾಪಾರಸ್ಥರು ಸಹಾ ಮಾದಕೌಷಧದಲ್ಲಿ ತಮ್ಮ ಆತುಕೊಳ್ಳುವಿಕೆಯ ಕಾರಣ ಅಪಕೀರ್ತಿಗೆ ಗುರಿಯಾಗಿದ್ದಾರೆ. ನೈತಿಕ ಮಲಿನತೆಯಲ್ಲಿ ಲೈಂಗಿಕ ಅನೈತಿಕತೆಯೂ ಸೇರಿದೆ. ಇದು ಒಡೆದ ಕುಟುಂಬಗಳಿಗೆ, ವಿಚ್ಛೇದನೆಗೆ, ಗರ್ಭಪಾತಗಳಿಗೆ ಹಾಗೂ ಲೈಂಗಿಕವಾಹೀ ರೋಗಗಳ ಹಬ್ಬುವಿಕೆಗೆ, ಭಯಂಕರ ಜಾಡ್ಯವಾದ ಏಯ್ಡ್ಸ್‌ಗೂ ಕಾರಣವಾಗಬಲ್ಲದು.
ಈ ನೈತಿಕ ಮಾಲಿನ್ಯತೆಯ ಮೂಲದಲ್ಲಿ ನೆಲೆಸಿದೆ ಸ್ವಾರ್ಥತೆ. ಮಾನವ ಕುಲವನ್ನು ಬಾಧಿಸುವ ಶಾರೀರಿಕ ಮಲಿನತೆಯ ಮೂಲದಲ್ಲೂ ಇದು ಇದೆ. ಬ್ರೆಸೀಲ್‌ನ ಸಾವೂ ಪೌಲೋ ರಾಜ್ಯದಲ್ಲಿ ಏಯ್ಡ್ಸ್ ಔಷಧೋಪಚಾರದಲ್ಲಿ ಕೂಡಿರುವ ತೆರೆಜ ಕ್ಲೈಮೆನ್, ಸಮಸ್ಯೆಯನ್ನು ಗುರುತಿಸಿದಳು: “[ಏಯ್ಡ್ಸ್‌ನಿಂದ] ಸುರಕ್ಷೆ ಪಡೆಯಲು, ಹೆಚ್ಚು ಅಪಾಯ-ಸಂಭವ ಗುಂಪುಗಳ ಮಧ್ಯೆ ನಡವಳಿಕೆಗಳ ಬದಲಾವಣೆ ಆಗಬೇಕು, ಆದರೆ ಅದನ್ನು ಮಾಡುವುದು ಕಷ್ಟ.” ಅಧಿಕ ಸಂಖ್ಯಾತ ಜನರು, ತಮ್ಮ ಕ್ರಿಯೆಗಳು ಇತರರ ಮೇಲೆ ಹೇಗೆ ಪರಿಣಮಿಸುತ್ತವೆಂದು ಪರಿಗಣಿಸುವ ಬದಲಿಗೆ ತಾವು ಏನು ಮಾಡಲು ಬಯಸುತ್ತಾರೋ ಅದನ್ನೇ ಮಾಡಲು ಪಟ್ಟುಹಿಡಿಯುತ್ತಾರೆ. ಫಲಿತಾಂಶವಾಗಿ ಸಾಹಿತ್ಯ, ಮನೋರಂಜನೆ ಮತ್ತು ವಾಸ್ತವಿಕವಾಗಿ ಇಡೀ ಮಾನವ ಸಂಸ್ಕೃತಿಯೇ ನೈತಿಕ ಮಾಲಿನ್ಯದಿಂದ ಸೋಸಿಹೋಗಿದೆ.
ವಿಚಾರಶೀಲ ಜನರಿಗೆ ಸದ್ಯದ ಹೆಚ್ಚಿನ ಶಾರೀರಿಕ ಮತ್ತು ನೈತಿಕ ಶುದ್ಧೀಕರಣದ ಪ್ರಯತ್ನಗಳು ಕೇವಲ ಮರೆಮಾಚುವಿಕೆಗಿಂತ ಹೆಚ್ಚೇನೂ ಆಗಿ ತೋರುವುದಿಲ್ಲ. ಹಾಗಾದರೆ, ಶಾರೀರಿಕವಾಗಿ ಹಾಗೂ ನೈತಿಕವಾಗಿ ಶುದ್ಧವಾಗಿರುವ ಒಂದು ಭೂಮಿಗಾಗಿ ನಂಬಲರ್ಹವಾದ ನಿರೀಕ್ಷೆ ಇದೆಯೋ ಎಂದು ನೀವು ಯೋಚಿಸಬಹುದು. ಆಶಾಭಂಗ ಪಡೆಯದಿರ್ರಿ. ಮಾಲಿನ್ಯತೆಯ ಅಂತ್ಯ ಸಮೀಪವದೆಯೆಂದು ಬೈಬಲು ನಮಗೆ ತಿಳಿಸುತ್ತದೆ. (g90 5/8)
[ಅಧ್ಯಯನ ಪ್ರಶ್ನೆಗಳು]
a ಮನುಷ್ಯನಲ್ಲಿ ಚರ್ಮ ಗಡ್ಡೆಯನ್ನುಂಟುಮಾಡುವ, ಅಥವಾ ಪುಪ್ಪುಸ ರೋಗಕ್ಕೆ ಪ್ರಾಣಿಗಳ ವೃಣಕಾರಕ ನೆರಡಿಯು ಕಾರಣವಾಗಿರುತ್ತದೆ.
b ಇಇಸಿ ಯುರೋಪಿಯನ್ ಇಕಾನಮಿಕ್ ಕಮ್ಯೂನಿಟಿ ಅಥವಾ ಕಾಮನ್ ಮಾರ್ಕೆಟನ್ನು ಪ್ರತಿನಿಧಿಸುತ್ತದೆ.
[ಪುಟ 7 ರಲ್ಲಿರುವ ಚೌಕ/ಚಿತ್ರಗಳು]
ಕಾಲದ ಪಾಳುಗೆಡವಿಗಿಂತಲೂ ಹೆಚ್ಚು ಕೆಟ್ಟದ್ದು
ನೈಸರ್ಗಿಕ ವಾಯುಸ್ಥಿತಿಗೆ ಒಡ್ಡಿ ವರುಷಗಳಾದ ಮೇಲೆ, ಈ ಕೊರೆದ ಕಲ್ಲಿನ ಮುಖವು ಸತ್ತವನ ಬರಿಯ ಪಡಿಯಚ್ಚನ್ನು ನೀಡಿದೆ. ವಾಯು ಮಾಲಿನ್ಯದಿಂದ ತುಕ್ಕುಹಿಡಿಯೋಣವು ಕಾಲದ ಪಾಳುಗೆಡವಿಗಿಂತಲೂ ಅತಿ ಕೆಟ್ಟದ್ದು. ಭೂಮಿಯಲ್ಲೆಲ್ಲಾ ಇರುವ ಹಳೇ ಕಟ್ಟಡಗಳು, ತಮ್ಮ ಮೇಲೆ ಸುರಿಸಲ್ಪಡುವ ಆಮ್ಲ ವೃಷ್ಟಿಯಿಂದಾಗಿ ತುಕ್ಕುಹಿಡಿದು ಸವೆತವನ್ನು ಅನುಭವಿಸುತ್ತವೆ, ಅಮೆರಿಕದ ಸೆನೆಕಡ್ಟಿ ಸಿಟಿ ಹೋಲ್ ಕಟ್ಟಡದಿಂದ ಹಿಡಿದು ಇಟೆಲಿಯ ವೆನಿಸ್‌ನ ಪ್ರಖ್ಯಾತ ಮಂದಿರಗಳ ತನಕ ರೋಮಿನ ಸ್ಮಾರಕ ಸ್ತಂಭಗಳು, ಸ್ಪರ್ಶಕ್ಕೇ ಮುರಿದು ಬೀಳುತ್ತಿವೆಯೆಂದು ವರದಿ. ಗ್ರೀಸಿನ ಪ್ರಸಿದ್ಧ ಪಾರ್ಥೆನನ್ ಹಿಂದಣ 2000 ವರ್ಷಗಳಿಗಿಂತ ಕಳೆದ 30 ವರ್ಷಗಳಲ್ಲಿ ಹೆಚ್ಚು ಹಾಳಾಗಿ ಹೋಗಿದೆಯೆಂದು ನಂಬಲಾಗಿದೆ. ಇಂಥ ನಷ್ಟವು ಉಷ್ಣತೆ, ಗಾಳಿ, ಮತ್ತು ತೇವವು ಸೇರಿರುವ ವಾತಾವರಣದ ಸ್ಥಿತಿಗತಿಯ ಮಿಶ್ರಣದಿಂದ ಹಾಗೂ ಕಟ್ಟಡದ ಗೋಡೆಗಳಲ್ಲರುವ ಏಕಾಣುಜೀವಿಗಳಿಂದಲೂ ಸಂಘಟಿತಗೊಳ್ಳುತ್ತದೆ. ನಿರ್ಜೀವ ವಸ್ತುಗಳ ಮೇಲೆ ಇಷ್ಟು ಪರಿಣಾಮ ಬೀಳುವಾಗ, ಸಜೀವ ಜೀವಿಗಳ ಮೇಲೆ ಮಾಲಿನ್ಯತೆಯ ಪರಿಣಾಮವು ಎಷ್ಟಾಗಿರಬೇಕು?
[ಚಿತ್ರ]
ಲಂಡನಿನ ಒಂದು ಕಥಿಡ್ರಲ್ ಮೇಲಿನ ಕೆತ್ತನೆಚಿತ್ರ