ಮಾಲಿನ್ಯತೆಯ ಅಂತ್ಯ ಸಮೀಪವಿದೆಯೇ?
ಶುದ್ಧ ಭೂಮಿಯ ಪ್ರತೀಕ್ಷೆಯು ನಿಜವಾಗಿಯೂ ಉಲ್ಲಾಸಕರ. ಆದರೆ ಅದು ವಾಸ್ತವಿಕವೋ? ಒಳ್ಳೆದು, ಕೆಲವು ದೇಶಗಳು ಮಾಲಿನ್ಯತೆಯ ಪರಿಸ್ಥಿತಿಯನ್ನು ಸುಧಾರಿಸಲು ಬಹಳ ಪ್ರಯತ್ನ ಮಾಡುತ್ತಿವೆ. ಮೋಟಾರು ಎಂಜಿನಿನ ನಿಷ್ಕಾಸದ ಸೀಸ ಘಟಕವನ್ನು ನಿಯಂತ್ರಿಸಲು ಮಾಡಲ್ಪಟ್ಟ ಕಠಿಣ ಕಾಯಿದೆಗಳಿಂದಾಗಿ ವಾಯು ಮಾಲಿನ್ಯತೆಯಲ್ಲಿ ಇಳಿತವು ಈಗ ವರದಿಯಾಗಿದೆ. ಇನ್ನು ಕೆಲವು ಕೇತ್ರಗಳಲ್ಲಿ ಔದ್ಯೋಗಿಕ ಮಾಲಿನ್ಯವು ಸಹಾ ಇಳಿತಗೊಂಡಿರುವಂತೆ ತೋರುತ್ತದೆ. ಇದು ಯಾವಾಗಲೂ ಕಟ್ಟುನಿಟ್ಟಿನ ನಿಯಂತ್ರಣಗಳಿಂದಾಗಿಯೇ ಆಗುವುದಲ್ಲ. ಲೋಕದ ಆರ್ಥಿಕ ಅವಸ್ಥೆಯಿಂದಾಗಿ ತರಲ್ಪಟ್ಟ ಉದ್ಯಮಗಳ ಪುನರ್ರಚ್ಚನೆಯ ಪರಿತಾಂಶವಾಗಿಯೂ ಕೆಲವು ಸಾರಿ ಇದು ಆಗುತ್ತದೆ.
ಭೂಮಿ—ತಾನೇ ಶುದ್ಧೀಕರಿಸಿಕೊಳ್ಳಲು ರಚಿಸಲ್ಪಟ್ಟಿದೆಯೇ?
ಅದಲ್ಲದೆ, ನೈಸರ್ಗಿಕ ಶುಚಿಗೊಳಿಸುವಿಕೆಯ ಸೂತ್ರಗಳು ಅಲ್ಲಿ ಕಾರ್ಯನಡಿಸುತ್ತಿವೆ. ಉದಾಹರಣೆಗೆ, ಸಾಗರದಲ್ಲಿ ತೇಲುವ ಸಸ್ಯ ಜೀವರಾಶಿಯು ಸಾಗರದ ಪ್ರಧಾನ ಮಾಲಿನ್ಯ ನಿರೋಧಕಗಳಲ್ಲೊಂದು ಎಂಬದಾಗಿ ಫ್ರಾನ್ಸಿನ ನೈಸ್ನಲ್ಲಿ ಮೆಡಿಕಲ್ ಓಷನೋಗ್ರಫಿ ಕೇಂದ್ರದ ಡಾ. ಔಬರ್ಟ್ ತಿಳಿಸಿರುತ್ತಾರೆ. ಈ ಸೂಕ್ಷ ಜೀವರಾಶಿಗಳು ಸೋಂಕನ್ನು ನಾಶಮಾಡುವ ಪ್ರತಿವಿಷವನ್ನು ಸ್ವಾಭಾವಿಕವಾಗಿ ಹೊರಸೂಸುತ್ತವೆ. ದುರ್ದೈವದಿಂದ, ಅವು ಪೂರ್ತಿ ಮುಳುಗಿಸಲ್ಪಟ್ಟಿವೆ. ಇಟೆಲಿಯಲ್ಲಿ ವೆನಿಸ್ ಮತ್ತು ಸಮೀಪದ ಎಡ್ರಿಯಾಟಿಕ್ ಸಮುದ್ರವು ಪಾಚಿಯಿಂದ ಹೂಳಲ್ಪಟ್ಟಿವೆ. ಬೇಸಗೆಯಲ್ಲಿ ಎಡ್ರಿಯಾಟಿಕ್ನ ಮಾಲಿನ್ಯತೆಯು ಹಳದಿ, ಕಂದು ಮತ್ತು ಬೂದುಬಣ್ಣದ ದುರ್ವಾಸನೆಯ ಅಂಟು ಲೋಳೆಯಂತಹ ಪಾಚಿಯನ್ನು ಉಂಟುಮಾಡಿ, ದಕ್ಷಿಣಕ್ಕೆ ನೂರಾರು ಕಿಲೋಮೀಟರ್ ತನಕ ಹಬ್ಬಿಸುತ್ತದೆ.” (ದಿ ಗ್ಲೋಬ್ ಆ್ಯಂಡ್ ಮೈಲ್, ಟೊರಂಟೊ, ಕೆನಡಾ) ಇದಕ್ಕೆ ನೆರವಾಗುವ ಒಂದು ವಿಷಯವು ಪೋ ನದಿಯ ರೊಚ್ಚುನೀರು. “ಸುಮಾರು 15 ಮಿಲಿಯಕ್ಕಿಂತಲೂ ಹೆಚ್ಚು ಜನರ ಊರ ರೊಚ್ಚು, ಇಟೆಲಿಯ ಅನೇಕ ಮುಖ್ಯ ಕೈಗಾರಿಕೆಗಳ ಕಚಡ . . . ಹಾಗೂ ಐದು ಮಿಲಿಯಕ್ಕಿಂತಲೂ ಹೆಚ್ಚು ಹಂದಿಗಳ ಗೊಬ್ಬರದಿಂದ ಅದು ಕಲುಷಿತ.”
ಮಣ್ಣಿನ ಮಾಲಿನ್ಯತೆಯ ಕುರಿತೇನು? ಅಮೆರಿಕದ ಡಿಪಾರ್ಟ್ಮೆಂಟ್ ಆಫ್ ಎನರ್ಜಿ ಸಂಬಂಧದಲ್ಲಿ ಒಂದು ದೊಡ್ಡ ರಾಸಾಯನಿಕ ಕಂಪೆನಿಯು ಮಾಡಿದ ಸಂಶೋಧನೆಯು ಭೂಮಿಯ ಕೆಳಗೆ ಸುಮಾರು 850 ಅಡಿಯಷ್ಟು ಆಳದ ತನಕವೂ ಅನೇಕ ತರದ ಏಕಾಣುಜೀವಿಗಳು, ಅಣಬೆ ಮತ್ತು ಅಮೀಬದ ಇರುವಿಕೆಯನ್ನು ತೋರಿಸಿದೆ. ಪ್ಲೊರಿಡ ಸ್ಟೇಟ್ ಯುನಿರ್ವಸಿಟಿಯ ಡಾ. ಡೇವಿಡ್ ಬಾಕ್ವೆಲ್ ಹೇಳಿದ್ದು: “ಈ ಆಳದ ಜೀವರಾಶಿಗಳು ನಿಸರ್ಗದ ನೆಲನೀರನ್ನು ಶುದ್ಧೀಕರಿಸುತ್ತಿರಬಹುದು.” ತಳಿಶಾಸ್ತ್ರತಜ್ಞರು ಈ ನೆಲದಾಳದ ಜೀವರಾಶಿಯನ್ನು “ವಿಶಿಷ್ಟ ಮಾಲಿನ್ಯತೆಯನ್ನು ಕರಗಿಸಲು” ಪ್ರಚೋದಿಸ ಶಕ್ತರಾಗಬಹುದು ಎಂದು ಡಾ. ಬಾಕ್ವೆಲ್ ನಿರೀಕ್ಷಿಸುತ್ತಾರೆ.
ಆದರೂ ವಾಸ್ತವದಲ್ಲಿ, ಪ್ರಚಲಿತ ಪರಿಸ್ಥಿತಿಯು ಭೂಮಿಯ ಭೌತಿಕ ಮೈಲಿಗೆಯನ್ನು ತೀವ್ರವಾಗಿ ಅಂತ್ಯಗೊಳಿಸುವಂತೆ ಕಾಣುವುದಿಲ್ಲ. ಆದರೂ ಮಾಲಿನ್ಯತೆಯ ಅಂತ್ಯವು ಸಮೀಪವಿದೆ ಎಂದು ನಾವು ನಿಶ್ಚಯತೆಯಿಂದಿರ ಸಾಧ್ಯವಿದೆ. ಏಕೆ?
ನೈತಿಕ ಮಾಲಿನ್ಯತೆಯನ್ನು ತೆಗೆಯುವುದು
ಈ ಭೂಗ್ರಹವು ಮಾನವ ಕುಲಕ್ಕಾಗಿ ಒಂದು ಶುದ್ಧ ಬೀಡಾಗಿ ಇರಬೇಕಾದರೆ ಅದರ ನಿವಾಸಿಗಳು ಸಹಾ ನೈತಿಕವಾಗಿ ಹಾಗೂ ದೈಹಿಕವಾಗಿ ಶುದ್ಧರಾಗಿರಬೇಕು. ಮಾನವರು ತಮ್ಮ ಮೂಲಭೂತ ಸ್ವಾರ್ಥಸಾಧನೆಯನ್ನು ತೊರೆದು ನಿಸ್ವಾರ್ಥ ಗುಣಗಳನ್ನು ಬೆಳೆಸಬೇಕು. ತಮ್ಮ ಜೊತೆ ಮಾನವರಿಗೂ ತಮ್ಮ ನೆರೆಕರೆಯ ಪಶುಗಳಿಗೂ ಪರಿಗಣನೆಯನ್ನು ತೋರಿಸಬೇಕು. ಇದನ್ನು ಮಾಡ ಸಾಧ್ಯವೋ?
ಇದು ಸಾಧ್ಯವಿದೆಂದು ದಶಮಾನಗಳಿಂದ ಯೆಹೋವನ ಸಾಕ್ಷಿಗಳು ಕಂಡಿದ್ದಾರೆ. ಬೈಬಲಿನ ವ್ಯಕ್ತಿತ್ವ-ರೂಪಕ ಶಕ್ತಿಯನ್ನು ಅವರು ಪರೀಕ್ಷೆಗೆ ಹಾಕಿದ್ದಾರೆ ಮತ್ತು ಈ ಗ್ರಂಥಕ್ಕೆ ಜನರನ್ನು ಬದಲಾಯಿಸುವ ಶಕ್ತಿ ಇದೆಂಬದನ್ನು ಕಂಡಿದ್ದಾರೆ, ಪರಿಸರಕ್ಕೆ ಉಪಯುಕ್ತವಾದ ಪ್ರಭಾವಗಳೊಂದಿಗೆ. ಉದಾಹರಣೆಗೆ, ಯೆಹೋವನ ಸಾಕ್ಷಿಗಳ ದೊಡ್ಡ ಅಧಿವೇಶನಗಳಿಗೆ ಹಾಜರಾಗುವ ಗುಂಪುಗಳ ಕ್ರಮಪರತೆ ಮತ್ತು ಶುಚಿತ್ವದ ಕುರಿತು ಸ್ಟೇಡಿಯಂ ಅಧಿಕಾರಿಗಳು ಉತ್ಸಾಹ ವ್ಯಕ್ತಪಡಿಸುತ್ತಾರೆ. ‘ಸಾಕ್ಷಿಗಳ ಪ್ರವೇಶದಲ್ಲಿದ್ದದಕ್ಕಿಂತ ಅವರು ಬಿಟ್ಟುಹೋಗುವಾಗ ಸ್ಟೇಡಿಯಂ ಹೆಚ್ಚು ಶುಚಿಯಾಗುತ್ತದೆ’ ಎಂದವರ ಬಾರಿಬಾರಿಯ ಹೇಳಿಕೆ.
ಪೋರ್ಚುಗಲ್ನ ಲಿಸ್ಬನ್ನಲ್ಲಿ ಕ್ರೀಡಾ ವಿಭಾಗದ ಸಿಬ್ಬಂಧಿಯೊಬ್ಬನು ಒಬ್ಬ ಯೆಹೋವನ ಸಾಕ್ಷಿಗೆ ವಿವರಿಸಿದ್ದು: “ನಿಮ್ಮ ಕುರಿತು ನನ್ನ ಅಭಿಪ್ರಾಯವೇನು ಎಂದು ಜನರು ನನ್ನನ್ನು ಕೇಳುವಾಗ, ನಾನು ಸುಳ್ಳು ಹೇಳಲಾರೆ. ಯೆಹೋವನ ಸಾಕ್ಷಿಗಳಲ್ಲಿ ಅತ್ಯಂತ ಸ್ವದರ್ತನೆ, ಶುದ್ಧತೆ ಮತ್ತು ಸಂಫಟನೆಯು ಇದೆ. . . . ಒಂದು ವಸ್ತು ಕೊಳೆಯಾದರೆ, 99ನ್ನೂ ಶುಚಿಮಾಡುತ್ತೀರಿ.!”
ಯೆಹೋವನ ಸಾಕ್ಷಿಗಳ ಶಾರೀರಿಕ ಶುದ್ಧತೆಯ ಒತ್ತಾಯವು ಅವರ ಉತ್ಕೃಷ್ಟ ನೈತಿಕ ತತ್ವಗಳಿಗೆ ಸಂಬಂಧಿಸಿದೆ. ಯಾವ ತತ್ವಗಳು? ದೇವರ ಲಿಖಿತವಾಕ್ಯವಾದ ಬೈಬಲಿನಲ್ಲಿ ತೋರಿಸಲ್ಪಟ್ಟವುಗಳೇ. ಹಿಂಜರಿಯುವವರ ಕುರಿತು, ದೇವರ ಮಾರ್ಗಗಳು ‘ಅವರ ಮಾರ್ಗಗಳಿಗಿಂತ ಆತನ ಆಲೋಚನೆಗಳು ಅವರ ಆಲೋಚನೆಗಳಿಗಿಂತ ಉನ್ನತವಾಗಿವೆ’ ಎಂದು ಬೈಬಲ್ ಹೇಳುತ್ತದೆ. (ಯೆಶಾಯ 55:7-9) ಆದರೂ, ದೇವರ ಮಾರ್ಗಗಳನ್ನು ನಾವು ಕಲಿಯಬಹುದು ಯಾಕಂದರೆ ದೇವರು ತಾನೇ ತನ್ನ ನಿಯಮಗಳನ್ನು ಅವುಗಳಿಂದ ಜೀವಿಸಲು ಇಷ್ಟೈಸುವವರಿಗೆ ದೊರಕಿಸುತ್ತಾನೆ. ಈ ದೈವಿಕ ಶಿಕ್ಷಣವು ನಮ್ಮ ಭವಿಷ್ಯತ್ತಿಗಾಗಿ ಅತ್ಯಾವಶ್ಯಕ.
ಮಿಲ್ಯಾಂತರ ಸಾಕ್ಷಿಗಳು ಇಂದು ಈ ಶುದ್ಧ ನೈತಿಕ ಮಟ್ಟಗಳಿಂದ ಜೀವಿಸಲು ಪರಿಶ್ರಮ ಪಡುತ್ತಾರೆ ಮತ್ತು ಅವರು ಬಹಳಷ್ಟು ಪ್ರಯೋಜನ ಪಡೆಯುತ್ತಾರೆ. ಹೆಚ್ಚಿನವರಿಗಾದರೋ ಇದಕ್ಕಾಗಿ, ತಮ್ಮ ಸ್ವಭಾವಗಳಲ್ಲಿ ಮತ್ತು ಜೀವನಕ್ರಮಗಳಲ್ಲಿ ಮಹಾ ಬದಲಾವಣೆಯನ್ನು ಮಾಡುವದಕ್ಕಿತ್ತು.
ಅಮಲೌಷಧ, ಪೆಟ್ಟುಗಳು ಮತ್ತು ಜಯ
ಇಂಗ್ಲೆಂಡಿನ ಪಾತಕ-ಪೀಡಿತ ಕ್ಷೇತ್ರದಲ್ಲಿ ವಾಸಿಸುವ ಒಂದು ಕುಟುಂಬದ 13 ಸದಸ್ಯರಲ್ಲಿ ಒಬ್ಬಳಾದ ಮಾರೀಯಳನ್ನು ತಕ್ಕೊಳ್ಳಿರಿ.
“ನನ್ನ ಕುಟುಂಬವು ಪುಂಡತನಕ್ಕೆ ಹೆಸರುವಾಸಿ, ನಾನು ಕೂಡ ಉಳಿದವರಂತೆ ಹಿಂಸಕಳೆಂಬ ಖ್ಯಾತಿಪಡೆದಿದ್ದೆ. 15 ವಯಸ್ಸಲ್ಲಿ ನನಗೆ ಗರ್ಭಸ್ರಾವವಾಗಿತ್ತು. ಎರಡು ವರ್ಷದ ನಂತರ, ನನ್ನ ಮಗಳು ಹುಟ್ಟಿದಳು ಮತ್ತು ಅವಳ ಪರಾಮರಿಕೆಗಾಗಿ ನಾನೇ ಬಿಡಲ್ಪಟ್ಟೆ. ನನ್ನ ನಲ್ಲನು [ತಿದ್ದುಪಡಿಯ] ಶಾಲೆಯಲ್ಲಿ ಹಾಕಲ್ಪಟ್ಟನು. ಅವನು ಅಲ್ಲಿಂದ ಪರಾರಿಯಾದನು, ಮತ್ತು ನಾನು ಪುನ: ಗರ್ಭಿಣಿಯಾದೆ. ಈ ಗರ್ಭವನ್ನು ತೆಗೆಯಲು ನಾನೆಲ್ಲಾ ಪ್ರಯತ್ನಗಳನ್ನು ಮಾಡಿದೆ ಮತ್ತು ಕೊನೆಗೆ ಸಫಲಗೊಂಡೆ ಆದರೆ, ಹೆಚ್ಚುಕಡಿಮೆ ಜೀವವನ್ನೇ ಕಳಕೊಳ್ಳುತ್ತಲಿದ್ದೆ.
“ನನ್ನ ನಲ್ಲನು ಮಾರಿವಾನ ಸೇದ ತೊಡಗಿದ, ನಾನು ಪುನಃ ಬಸುರಿಯಾಗಿದ್ದರೂ, ನನ್ನನ್ನು ಕಟುವಾಗಿ ಹಿಂಸಿಸ ಸುರುಮಾಡಿದ. ನಾನು ಸಹಾ ಹೊಗೆಸೊಪ್ಪನ್ನು ಸೇದುವದರಲ್ಲಿ ಮತ್ತು ಮಾರುವದರಲ್ಲಿ ತೊಡಗಿದೆ. ಇಷ್ಟರಲ್ಲಿ, ವೇಶ್ಯೆಗಳಿಂದ ತುಂಬಿದ ಮನೆಯೇ ನನ್ನ ಬಿಡಾರವಾಯಿತು. ಅವರ ಮಕ್ಕಳನ್ನು ಅವರಿಗಾಗಿ ನಾನು ನೋಡಿಕೊಳ್ಳುತ್ತಿದ್ದೆ.
“ಇನ್ನೊಬ್ಬ ಹುಡುಗನಲ್ಲಿ ನಾನು ಆಸಕ್ತಳಾದಾಗ ನನ್ನ ಮೊದಲನೆಯ ನಲ್ಲನು ಅವನಿಗೆ ಎಂಟು ಬಾರಿ ಚೂರಿ ಹಾಕಿ ಆ ಸಂಬಂಧವನ್ನು ಅಂತ್ಯಗೊಳಿಸಿದ. ಅವನನ್ನು ಪುನ: ದಸ್ತಗಿರಿ ಮಾಡಲಾಯಿತು. ಅವನಿಗೆ ಬಿಡುಗಡೆಯಾದ ಮೇಲೆ ನಾವು ಮದುವೆಯಾದೆವು ಮತ್ತು ಇಬ್ಬರೂ ಅಮಲೌಷಧಿಯ ರಂಪನ್ನು ಜೋರಾಗಿ ಹೊಡೆದೆವು.”
ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿದ ನಂತರ ಮತ್ತು ಅವರೊಂದಿಗೆ ಬೈಬಲಭ್ಯಾಸ ಮಾಡಿದ ಮೇಲೆ ಈ ಯುವತಿಯು, ಕ್ರೈಸ್ತ ಕೂಟಗಳಿಗೆ ಹಾಜರಾಗ ತೊಡಗಿದಳು ಮತ್ತು ಕ್ರಮೇಣ, ಒಂದು ಬದಲಾವಣೆ ಸಂಭವಿಸಿತು. ಮಾರೀಯಳು ವಿವರಿಸುವುದು:
“ಧೂಮ್ರಪಾನ ಮತ್ತು ಅಮಲೌಷಧಿ ಸೇವನೆ ತಪ್ಪೆಂದು ನಾನು ಮನಗಾಣ ತೊಡಗಿದೆ. ನಾನು ಇದೆಲ್ಲವನ್ನು ನಿಲ್ಲಿಸುತ್ತೇನೆಂದು ನನ್ನ ಗಂಡನಿಗೆ ಹೇಳಿದಾಗ ಅವನು ತನ್ನ ಮಾರಿವಾನ ಸಿಗರೇಟಿನ ಹೊಗೆಯನ್ನು ನನ್ನ ಮುಖಕ್ಕೆ ಊದಿ, ಅಮಲೌಷಧಿ ಸೇವನೆಯನ್ನು ಪುನಃ ಆರಂಭಿಸುವಂತೆ ಸೆಳೆಯಲು ಪ್ರಯತ್ನಿಸುತ್ತಿದ್ದ. ನಾನು ಪುನಃ ಗರ್ಭಿಣಿಯಾದೆ. ಸ್ವಲ್ಪ ಸಮಯದೊಳಗೆ ನನ್ನ ಗಂಡನು, ಇಡೀ ರಾತ್ರಿಯನ್ನು ಮನೆಯಿಂದ ಹೊರಗೆ ಕಳೆಯಲಾರಂಭಿಸಿದ.
“ಎಂಟು ತಿಂಗಳ ತರುವಾಯ ಅವನು ತನ್ನೆಲ್ಲಾ ವಸ್ತುಗಳನ್ನು ಮನೆಯಿಂದ ಒಯ್ದು, ನನ್ನನ್ನು ಬಿಟ್ಟುಬಿಟ್ಟ. ಅದನ್ನು ಸಹಿಸಿಕೊಳ್ಳಲು ಸಹಾಯಕ್ಕಾಗಿ ನಾನು ಯೆಹೋವನನ್ನು ಬೇಡಿದೆ, ಆತನು ಉತ್ತರ ಕೊಟ್ಟನು. ಅನಂತರ, ಮೂರು ತಿಂಗಳಾದ ಮೇಲೆ, ನನ್ನ ಗಂಡ ಹಿಂತಿರುಗಿದ. ಯಾವುದು ಯೋಗ್ಯವೋ ಅದನ್ನು ಮಾಡುವಂತೆ ಬಲಕ್ಕಾಗಿ ನಾನು ಬೇಡಿದೆ. ನನ್ನ ವಿವಾಹದ ಸಾಫಲ್ಯಕ್ಕಾಗಿ ನಾನು ಪುನಃ ಪ್ರಯತ್ನಿಸಿದೆ. ಆದರೆ ಆರು ತಿಂಗಳೊಳಗೇ, ನನ್ನ ಗಂಡನ ಹಿಂಸಾಚಾರದ ಫಲವಾಗಿ ಕಣ್ಣಿಗಾದ ಗಾಯಕ್ಕೆ 14 ಟಾಕುಗಳು ಬಿದ್ದವು. ಅಮಲೌಷಧಿಯಿನ್ನೂ ಅವನ ಪ್ರಥಮ ಪ್ರೇಮವಾಗಿತ್ತು. ಇಡೀ ವಠಾರದಲ್ಲಿ ನಮ್ಮ ಮನೆ ಮಾದಕ ದ್ರವ್ಯದ ಮಂಡಿಯಾಯಿತು. ಅವನ ‘ಮಿತ್ರರು’, ಹೆಚ್ಚಿನವರು ಅಮಲೌಷಧ ಮತ್ತರಾಗಿ ಮನೆಯಲ್ಲಿ ತುಂಬುತ್ತಿದ್ದರು.
“ಯೆಹೋವನ ಸಹಾಯದಿಂದ ನಾನು ಧೈರ್ಯ ತಕ್ಕೊಂಡು, ಆ ಪುರುಷರನ್ನು ಎದುರಿಸಿದೆ. ಮಾದಕೌಷದ ಸೇವಿಸ ಬಯಸುವದಾದರೆ ಅವರು ಹೊರಗೆ ಹೋಗುವಂತೆ ವಿನಯದಿಂದ ಕೇಳಿಕೊಂಡೆ. ನನ್ನ ಗಂಡನು ಇದನ್ನು ಕೇಳಿದಾಗ ಕ್ರೋಧಿತನಾದ, ನನ್ನನ್ನು ಅಡಿಗೆಮನೆಗೆ ಕರೆದು ನನ್ನ ತಲೆಯನ್ನು ಗೋಡೆಗೆ ಬಲವಾಗಿ ಅಪ್ಪಳಿಸ ತೊಡಗಿದ. ಮಕ್ಕಳಿಗಾಗಿ ನಾನು ಚಿಂತಿಸುತ್ತೇನೆ ಮತ್ತು ಅವರು ಹಿತಕರವಾದ ಪರಿಸರದಲ್ಲಿ ಶುಚಿರುಚಿಯಿಂದ ಬೆಳೆಯುವ ಸಂಧಿಯನ್ನು ಕೊಡ ಬಯಸುತ್ತೇನೆಂದು ಹೇಳಲು ನಾನು ಹೋರಾಡಿದೆ. ನನ್ನ ಗಂಡನು ಆವೇಶದಿಂದ ತನ್ನ ಮಿತ್ರರ ಕಡೆ ತಿರುಗಿ ಧಾವಿಸಿದನು. ನಾನು ಪ್ರಾರ್ಥಿಸುತ್ತಾ, ಕಾದು ಕುಳಿತೆನು. ಅವ ಪುನಃ ಅಡಿಗೆ ಮನೆಗೆ ಬಂದ, ನನ್ನನ್ನು ಕೊಲ್ಲುತ್ತಾನೋ ಏನೋ ಎಂದೆಣಿಸಿದೆ ನಾನು.
“ಆದರೂ ಅಂದಿನಿಂದ, ವಿಷಯಗಳು ಬಹಳಷ್ಟು ಶಮನಗೊಂಡವು. ಅನಂತರ ನಾವು ಸ್ಥಾಳಾಂತರ ಮಾಡಿದೆವು. ಮಾದಕ ವ್ಯಸನಿಗಳು ನಮ್ಮನ್ನು ನೋಡಲು ಬಂದಾಗ ಮುಂಚಿನಂತೆ ಶಪಿಸುವುದೂ ತಮ್ಮ ಅನೈತಿಕ ಜೀವಿತಗಳ ಕುರಿತು ಕೊಚ್ಚಿಕೊಳ್ಳುವುದೂ ಇರಲಿಲ್ಲ. ನಮ್ಮೆಡೆಗೆ ಅವರಿಗೆ ಗೌರವವಿದ್ದಂತೆ ಕಂಡಿತು.”
ಶುದ್ಧ ನೈತಿಕತೆ ಮತ್ತು ಮಾಲಿನ್ಯರಹಿತ ಜೀವಿತಕ್ಕಾಗಿ ಮಾರೀಯಳ ನಿಲುವು ಅವಳ ಗಂಡನ ಹೃದಯವನ್ನು ಸ್ಪರ್ಶಿಸಿತು ಮತ್ತು ಅವನೂ ಅನಂತರ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸ ಮಾಡಿದನು. ಮಾರೀಯ ಮತ್ತು ಅವಳ ಪತಿ ಇಬ್ಬರೂ ಈಗ ಯೆಹೋವನ ಸ್ನಾನಿತ ಸಾಕ್ಷಿಗಳು, ಬೈಬಲಿನ ಜ್ಞಾನದ ಸಹಾಯದಿಂದ ಇತರರು ತಮ್ಮ ಜೀವಿತಗಳನ್ನು ಶುದ್ಧಪಡಿಸಿಕೊಳ್ಳುವಂತೆ ಸಹಾಯ ಮಾಡುವುದರಲ್ಲಿ ಕಾರ್ಯಮಗ್ನರಾಗಿದ್ದಾರೆ. ಮಾರೀಯ ಅನ್ನುವುದು:
“ನನ್ನ ಗಂಡನು ಒಂದು ಪ್ರಾರ್ಥನೆ ಮಾಡುವಾಗ, ಅಥವಾ ಯೆಹೋವನಿಗಾಗಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸುವುದನ್ನು ಕೇಳುವಾಗ ನನ್ನ ಹೃದಯವೆಷ್ಟು ಸ್ಪಂದಿಸುತ್ತದೆ! ಅವನ ತೋರಿಕೆಯಲ್ಲಿ ಆದ ಬದಲಾವಣೆಯು ಅವನ ಹಿಂದಣ ಮಿತ್ರರನ್ನು ಅಚ್ಚಿರಿಗೊಳಿಸುತ್ತದೆ. ಈಗ ನಮ್ಮ ಕುಟುಂಬವು ನಿಜವಾಗಿಯೂ ಒಕ್ಕಟ್ಟಿನಲ್ಲಿದೆ. ನಾನೆಂದೂ ಇಷ್ಟು ಸಂತೋಷಿತಳಿರಲಿಲ್ಲ, ಮತ್ತು ಈ ಭ್ರಷ್ಟ ವ್ಯವಸ್ಥೆಯಿಂದ ನಮ್ಮನ್ನು ಹೊರ ತೆಗೆದದ್ದಕ್ಕಾಗಿ ಯೆಹೋವನಿಗೆ ಉಪಕಾರ ಹೇಳುವುದನ್ನು ನಾನೆಂದೂ ನಿಲ್ಲಿಸಿರುವುದಿಲ್ಲ.”
ನೈತಿಕ ಮಾಲಿನ್ಯತೆಯನ್ನು ಹೋರಾಡುವುದರಲ್ಲಿ ಅಂಥ ಸಾಫಲ್ಯವು ದೇವರ ವಾಕ್ಯಕ್ಕಿರುವ ಶಕ್ತಿಯನ್ನು ಪ್ರದರ್ಶಿಸುತ್ತದೆ. ಅದಲ್ಲದೆ ಎಲ್ಲಾ ತರದ ಮಾಲಿನ್ಯತೆಯನ್ನು ಶೀಘ್ರದಲ್ಲೇ ಅಂತ್ಯಗೊಳಿಸುವ ನಿರೀಕ್ಷೆಯನ್ನೂ ಅದು ಕೊಡುತ್ತದೆ. ಇದರ ಕುರಿತು ಬೈಬಲು ಅನ್ನುವದೇನು?
ಶುದ್ಧಭೂಮಿ—ಖಂಡಿತವಾಗಿ
ಪ್ರಚಲಿತ ವ್ಯವಸ್ಥೆಯ “ಕಡೇ ದಿನಗಳಲ್ಲಿ” ನಾವು ಜೀವಿಸುತ್ತಿದ್ದೇವೆಂದು ಬೈಬಲಿನ ಜಾಗರೂಕ ಅಭ್ಯಾಸವು ತೋರಿಸುತ್ತದೆ. (2 ತಿಮೊಥಿ 3:1-5) ವಾತಾವರಣದ ಸ್ಥಿತಿಗತಿಯು ಇದನ್ನು ರುಜುಪಡಿಸುವ ಕೇವಲ ಒಂದು ಪುರಾವೆಯು. ಶುದ್ಧಭೂಮಿಯ ನಮ್ಮ ನಿರೀಕ್ಷೆಯ ವಿಷಯಕ್ಕೆ ಇದು ಯಾವ ಅರ್ಥದಲ್ಲಿದೆ?
ದೇವರು ಬೇಗನೇ ಮಾನವ ಕಾರ್ಯಾದಿಗಳಲ್ಲಿ ಹಸ್ತಕ್ಷೇಪ ಮಾಡಲಿರುವನೆಂದು ಇದರರ್ಥ. ನಮ್ಮ ಭೂಗ್ರಹದ ಎಲ್ಲಾ ನೈತಿಕ ಮತ್ತು ದೈಹಿಕ ಮಾಲಿನ್ಯತೆಗಳನ್ನು ನಿರ್ಮೂಲ ಮಾಡಲು ಆತನು ಬೇಗನೇ ಪ್ರಬಲ ಕಾರ್ಯ ಕೈಕೊಳ್ಳುವನು. ಪ್ರಕಟನೆ ಪುಸ್ತಕದಲ್ಲಿ ಆತನು, “ಲೋಕನಾಶಕರನ್ನು ನಾಶಮಾಡುವ”ನೆಂದು ವಾಗ್ದಾನಿಸಿದ್ದಾನೆ.—ಪ್ರಕಟನೆ 11:18.
ಒಂದು ಶುದ್ಧಾವಾದ, ಮಾಲಿನ್ಯರಹಿತ ಭೂಮಿಯನ್ನು ತರಲು ಶಕ್ತಿ ಇರುವುದು ನಿಜವಾಗಿ ದೇವರಿಗೆ ಮಾತ್ರ. ಅದನ್ನೇ ಮಾಡಲು ಆತನು ನಿಶ್ಚೈಸಿದ್ದಾನೆಂದು ತಿಳಿಯುವುದು ರೋಮಾಂಚಕರ. ಭವಿಷ್ಯದಲ್ಲಿ ಬೇಗನೇ ಆತನು ಕ್ರಿಯೆಗೈಯುವಾಗ, ಅದು ಆತನನ್ನುವಂತೆಯೇ, ಹೀಗಿರುವುದು: “ಇಗೋ, ಎಲ್ಲವನ್ನು ಹೊಸದು ಮಾಡುತ್ತೇನೆ.” (ಪ್ರಕಟನೆ 21:5) ಅನಂತರ ಕೊನೆಗೆ, ನಮ್ಮ ಭೂಮಿಯು ಶುದ್ಧರೂ ಉದಾತ್ತರೂ ಆದ ಜನರಿಗೆ ಯುಕ್ತವಾದ ಬೀಡಾಗಿರುವುದು, ಅವರು ಅದರ ಸಮೃದ್ಧಿಯಲ್ಲಿ ಸದಾ ಆನಂದಿಸುವರು. (g90 5/8)