ಬೆಂಕಿಯ ಬೆದರಿಕೆಗೆ ಜನಸಮೂಹವು ಒಡ್ಡಲ್ಪಟ್ಟಾಗ
ಬೆಂಕಿಯು ಸಾರ್ವಜನಿಕ ವ್ಯವಸ್ಥಾಪಕರಿಗೆ ಒಂದು ಅಶುಭ ಶಬ್ದವಾಗಿದೆ. ಪ್ರತಿವರ್ಷ ಸಾವಿರಾರು ಮರಣ ಮತ್ತು ವಿಪರೀತ ಹಾನಿಗಳಿಗೆ ಕಾರಣವಾಗುತ್ತದೆ. ಸುತ್ತಲೂ ಆವರಿಸಲ್ಪಟ್ಟ ಒಂದು ಸ್ಥಳದಲ್ಲಿ ಜನಸಂದಣಿ ನೆರೆದಾಗ, ಅಪಾಯವು ವಿಶೇಷವಾಗಿ ತೀವ್ರವಾಗಿರುತ್ತದೆ. ಗಾನಗೋಷ್ಠಿಗಳು, ನಾಟಕಗಳು, ಸಮ್ಮೇಳನಗಳು ಮತ್ತು ಇನ್ನಿತರ ಜನ-ನೆರವಿಗಳ ಮೇಲೆ ಮೇಲ್ವಿಚಾರಣೆ ನಡಿಸುವವರು, ಬೆಂಕಿಯ ಸಂಭಾವ್ಯತೆಯನ್ನು ಕಡಿಮೆಗೊಳಿಸಲು ಏನು ಮಾಡಬಹುದು? ವಸ್ತುಗಳು ಸುರಕ್ಷಿತವಾಗಿರುವಂತೆ ಅಂಥಾ ಒಂದು ಜನಸಂದಣಿಯ ಭಾಗವಾಗಿರುವವರು ಏನನ್ನು ಮಾಡಬಹುದು ಮತ್ತು ನಿಜವಾಗಿ ಬೆಂಕಿ ತಗಲಿದರೆ, ಪಾರಾಗುವ ಅವಕಾಶಗಳನ್ನು ಹೆಚ್ಚಿಸಲು ಏನನ್ನು ಮಾಡಬಹುದು?
ಈ ವಿಷಯಗಳ ಕುರಿತಾಗಿ ಸ್ವಲ್ಪ ಸಮಾಚಾರವನ್ನು ಪಡೆಯಲು ಎಚ್ಚರ! ಆಯರ್ಲೇಂಡಿನ ಒಬ್ಬ ಅಗ್ನಿಶಾಮಕ ಅಧಿಕಾರಿಯನ್ನು ಸಂದರ್ಶನಮಾಡಿತು. ಅವನು ಬೆಂಕಿ ಆರಿಸುವವರನ್ನು ತರಬೇತಿಗೊಳಿಸುತ್ತಾನೆ ಮತ್ತು ಬೆಂಕಿಯೊಂದಿಗೆ ಅವನಿಗೆ ಬಹಳಷ್ಟು ಅನುಭವವಿದೆ.
ಒಂದು ವಿಶೇಷ ಘಟನೆಗೆ ಜನಸಮೂಹಗಳನ್ನು ನಿರೀಕ್ಷಿಸುವಾಗ ಎಲ್ಲವೂ ಸುರಕ್ಷಿತವಾಗಿರುವಂತೆ ಮೇಲ್ವಿಚಾರಣೆ ನಡಿಸುವವರು ಏನು ಮಾಡಬಹುದು?
ಮೊದಲ ಹೆಜ್ಜೆ ಏನಂದರೆ ನೀವು ಉಪಯೋಗಿಸಲು ಅಪೇಕ್ಷಿಸುವ ಕಟ್ಟಡವು ಸುರಕ್ಷಿತವಾಗಿದೆಯೆಂದು ಖಚಿತಪಡಿಸುವದು. ಅಗತ್ಯ ಬಿದ್ದರೆ, ಬೇಗನೆ ಹೊರಬೀಳಲು ಕಟ್ಟಡದಲ್ಲಿರುವವರೆಲ್ಲರಿಗೆ ಸಾಕಷ್ಟು ಮಾರ್ಗಾವಕಾಶಗಳಿರಬೇಕು. ಅಲ್ಲದೇ, ಪ್ರತಿಯೊಂದು ಮಾರ್ಗವು ಸ್ಪಷ್ಟವಾಗಿ ಗುರುತಿಸಲ್ಪಡಬೇಕು ಮತ್ತು ಯಾವುದೇ ಅಡಚಣೆಗಳು ಇರಬಾರದು. ಎಲ್ಲಾ ಮೊಗಶಾಲೆಗಳನ್ನು ಮತ್ತು ಮೆಟ್ಟಿಲಸಾಲುಗಳನ್ನು ಎಲ್ಲಾ ಸಮಯಗಳಲ್ಲಿ ತಡೆರಹಿತವಾಗಿರುವಂತೆ ಇಡಬೇಕು. ತುರ್ತು ಪರಿಸ್ಥಿತಿಯ ದ್ವಾರಗಳು ಹೊರಮುಖವಾಗಿ ಮತ್ತು ಸುಲಭವಾಗಿ ತೆರೆಯಬೇಕು.
ಭದ್ರ ಪಡಿಸಲಾದ ಅಸನಗಳಿಲ್ಲದ ಕಟ್ಟಡಗಳಿಗೆ ಆಸನಗಳ ವ್ಯವಸ್ಥೆಯ ಒಂದು ಪಂಥಾಹ್ವಾನವಾಗಿ ಎದುರುಬರಬಹುದು. ಸ್ಥಳೀಯ ಬೆಂಕಿಯ ಕಾನೂನುಗಳಿಗೆ ಅನುಗುಣವಾಗಿ ಕುರ್ಚಿಗಳನ್ನು ಇಡುವದು ತುಂಬಾ ಪ್ರಾಮುಖ್ಯವಾಗಿದೆ. ತುರ್ತು ಸಂದರ್ಭದಲ್ಲಿ ಏನನ್ನು ಮಾಡಬೇಕೆಂದು ಸಹಚರರಿಗೆ ಮತ್ತು ದ್ವಾರಪಾಲಕರಿಗೆ ತಿಳಿದದೆ ಎಂದು ಖಚಿತ ಪಡಿಸಿರಿ. ಸಂರಕ್ಷಣೆಗಾಗಿ ಜವಾಬ್ದಾರರಾಗಿರುವವರು ಎಲ್ಲಾ ಅಗ್ನಿ ಶಾಮಕಗಳು ಎಲ್ಲಿ ಇವೆ ಮತ್ತು ಅದನ್ನು ಹೇಗೆ ಉಪಯೋಗಿಸಬೇಕೆಂದು ತಿಳಿದಿರಬೇಕು. ಬೆಂಕಿಯು ಹಬ್ಬಿದ ನಂತರ, ಸೂಚನೆಗಳನ್ನು ಓದುವದರಿಂದ ತಡವಾಗುತ್ತದೆ. ಇದನ್ನು ಮನಸ್ಸಿನಲ್ಲಿಡಿರಿ, ಏನಂದರೆ ಹೊರ ಹೊರಡಿಸುವ ಕಾರ್ಯ ವಿಧಾನಗಳನ್ನು ಆರಂಭಿಸಿದ ನಂತರ ಅಗ್ನಿ ಶಾಮಕ ಕಚೇರಿಗೆ ಕರೇ ಕಳುಹಿಸುವದಕ್ಕೆ ಪ್ರಥಮ ಪ್ರಾಧಾನ್ಯತೆ ಸಿಗಬೇಕು.
ಸುರಕ್ಷತೆಯನ್ನು ಉತ್ತಮಗೊಳಿಸಲು ಅಂಥ ಘಟನೆಗಳಲ್ಲಿ ಹಾಜರಿರುವವರು ಏನಾದರೂ ಮಾಡುವ ಸಾಧ್ಯತೆ ಇದೆಯೋ?
ಖಂಡಿತವಾಗಿಯೂ, ಹೌದು! ಅಪರಿಚಿತ ಆವರಣಗಳಲ್ಲಿ ಜನರು ಹೆಚ್ಚು ಸುಲಭವಾಗಿ ಹೆದರುತ್ತಾರೆ. ಆದುದರಿಂದ ಜನನೆರವಿಯು ನಡೆಯಲಿರುವ ಕಟ್ಟಡದ ಸರ್ವ ಸಾಮಾನ್ಯ ನಕ್ಷೆಯ ಪರಿಚಯ ನೀವು ಮಾಡಿಕೊಳ್ಳಿರಿ. ಹೊರಹೋಗುವ ಮತ್ತು ತುರ್ತು ಪರಿಸ್ಥಿತಿಯ ಬಾಗಲುಗಳು ಎಲ್ಲಿ ಇವೆ ಎಂಬುದನ್ನು ಗಮನಿಸಿರಿ. ಗಾಬರಿಗೊಳ್ಳಬೇಡಿರಿ. ಶಿಸ್ತನ್ನು ಪಾಲಿಸಿರಿ. ಕೊಡಲ್ಪಟ್ಟ ಯಾವುದೇ ಮಾರ್ಗದರ್ಶನೆಗಳನ್ನು ಜಾಗ್ರತೆಯಿಂದ ಕೇಳಿರಿ ಮತ್ತು ಅವುಗಳನ್ನು ಪರಿಪಾಲಿಸಿರಿ. ಕಟ್ಟಡವನ್ನು ಖಾಲಿ ಮಾಡುವಾಗ, ವೇಗವಾಗಿ ನಡೆಯಿರಿ. ಆದರೆ ಓಡ ಬೇಡಿರಿ ಅಥವಾ ದೂಡಬೇಡಿರಿ.
ಬೇಗನೆ ಹೊರ ಬೀಳುವ ಅಗತ್ಯವನ್ನು ನಾನು ಹೆಚ್ಚು ಒತ್ತಿ ಹೇಳಲು ಸಾಧ್ಯವಿಲ್ಲ. ಬೆಂಕಿ ಎಷ್ಟು ಬೇಗ ಹರಡುತ್ತದೆ ಎಂದು ಹೆಚ್ಚಿನ ಜನರು ಗ್ರಹಿಸುವದಿಲ್ಲ. ಪ್ರಾಯಸ್ಥ ಮತ್ತು ನಿರ್ಬಲರಿಗೆ ಕಷ್ಟವಾಗುತ್ತದೆ ಎಂದು ನಿಮಗೆ ಕಂಡರೆ, ಅವರಿಗೆ ಸಹಾಯ ನೀಡಿರಿ. ಒಮ್ಮೆ ಕಟ್ಟಡದ ಹೊರಗೆ ಬಂದ ನಂತರ, ನಿಮ್ಮ ಹಿಂದೆ ಬರುವವರ ದಾರಿಗೆ ಅಡ್ಡಿಯಾಗದಂತೆ ಆ ಬಾಗಲುಗಳಿಂದ ದೂರಕ್ಕೆ ಹೋಗಿರಿ. ಮತ್ತು ನೀವು ಹೊರಬಂದ ಮೇಲೆ ಅದು ಸುರಕ್ಷಿತವಾಗಿದೆ ಎಂದು ಘೋಷಿಸಲ್ಪಡುವ ತನಕ ಆ ಕಟ್ಟಡವನ್ನು ಪುನಃ ಪ್ರವೇಶಿಸಲು ಎಂದೂ ಪ್ರಯತ್ನಿಸ ಬೇಡಿರಿ.
ಹೆತ್ತವರಿಗಾಗಿ ನಿಮ್ಮ ಹತ್ತಿರ ಯಾವ ಸಲಹೆಗಳಿವೆ?
ದೊಡ್ಡ ಗುಂಪುಗಳಲ್ಲಿ ಹೆತ್ತವರು ಯಾವಾಗಲೂ ತಮ್ಮ ಚಿಕ್ಕ ಮಕ್ಕಳನ್ನು ತಮ್ಮೊಂದಿಗೆ ಇಡಬೇಕು ಅಥವಾ ಒಬ್ಬ ಹಿರಿಯ, ಜವಾಬ್ದಾರ ವ್ಯಕ್ತಿಯ ಸ್ವಾಧೀನದಲ್ಲಿರುವಂತೆ ಖಚಿತಮಾಡಿ ಕೊಳ್ಳಿರಿ. ಬೆಂಕಿಯ ಒಂದು ತುರ್ತು ಪರಿಸ್ಥಿತಿಯಲ್ಲಿ, ತಳಮಳಿಸುತ್ತಿರುವ ಹೆತ್ತವರು ಗುಂಪಿನಲ್ಲಿ ತಮ್ಮ ಕಾಣೆಯಾದ ಮಕ್ಕಳಿಗಾಗಿ ಹುಡುಕಾಡುವದು ಎಲ್ಲಾ ರೀತಿಯ ತೊಂದರೆಗಳಿಗೆ ಕಾರಣವಾಗಬಹುದು.
ಬೆಂಕಿಯ ಅಪಾಯವು ಕೇವಲ ಅದರ ಕಡು ಉಷ್ಣತೆಗೆ ಸೀಮಿತವಾಗಿದೆಯೋ?
ಇಲ್ಲ. ಬೆಂಕಿಯಲ್ಲಿ ಹೆಚ್ಚಾಗಿ ಹೊಗೆ ಮತ್ತು ವಿಷಗಾಳಿಯೇ ಕೊಲ್ಲುತ್ತದೆ. ಕಡಿಮೆ ಮಾರಕ ಕೇಂದ್ರಿಕೃತ ಬೆಂಕಿಗಳಲ್ಲಿ, ಅಧಿಕವಾಗಿ ಕಾದಿರುವ ಅನಿಲಗಳು, ಅವುಗಳನ್ನು ಉಸಿರಾಟದ ಮೂಲಕ ಸೇವಿಸುವದರಿಂದ, ನಮ್ಮ ಉಸಿರಾಟದ ಅಂಗಗಳನ್ನು ಮತ್ತು ನರವ್ಯೂಹ ವ್ಯವಸ್ಥೆಯನ್ನು ಆಕ್ರಮಣಗೈಯುತ್ತವೆ. ಇದು ಜನರನ್ನು ಒಂದು ವಿಚಾರಹೀನ ರೀತಿಯಲ್ಲಿ ನಡೆಯಲು ಕಾರಣವಾಗಬಹುದು. ಹೆಚ್ಚು ಹೊಗೆ ಇರುವಾಗ, ನಿಮ್ಮ ಮೂಗು ಮತ್ತು ಬಾಯಿಯನ್ನು ಒಂದು ಕರವಸ್ತ್ರದಿಂದ ಮುಚ್ಚಿರಿ. ಇದು ವಿಷಕಾರಿ ಅನಿಲಗಳಿಂದ ರಕ್ಷಿಸುವದಿಲ್ಲ. ಆದರೆ ಓಕರಿಕೆಯನ್ನು ತರುವ ಹೊಗೆಯ ದೊಡ್ಡ ಪದಾರ್ಥಗಳಿಂದ ನಿಮ್ಮನ್ನು ದೂರವಿರಿಸಲು ಸಹಾಯ ಮಾಡುತ್ತದೆ.
ಹೊಗೆಯು ತುಂಬಾ ದಟ್ಟವಾಗಿದ್ದರೆ, ದಿಕ್ಕು ತೋರದೆ ಭ್ರಾಂತಿಗೊಳಗಾಗದಂತೆ ಒಂದು ಗೋಡೆಯ ಹತ್ತಿರ ನಿಲ್ಲಿರಿ. ನಿಮಗೆ ಒಂದು ಗೋಡೆ ಕಾಣದಿದ್ದರೆ, ಅಥವಾ ಅರಿವಾಗದಿದ್ದರೆ, ನೀವು ಗೋಡೆಯೊಂದಕ್ಕೆ ಬರುವ ತನಕ ಒಂದೇ ದಿಕ್ಕಿನಲ್ಲಿ ನಡೆಯುತ್ತಾ ಹೋಗಿರಿ; ಅನಂತರ ನೀವು ಒಂದು ಬಾಗಲು ಅಥವಾ ಕಿಟಕಿಗೆ ಬರುವ ತನಕ ಅದನ್ನು ಅನುಸರಿಸಿರಿ. ಹಾಗೆಯೇ ನೆನಪಿಡಿರಿ ಏನಂದರೆ ಒಂದು ಹೊಗೆ ತುಂಬಿದ ಕೋಣೆಯಲ್ಲಿ, ನೆಲದ ಹತ್ತಿರ ಹೆಚ್ಚು ಸೇವಿಸಬಹುದಾದ ಗಾಳಿ ಇರುತ್ತದೆ, ಮತ್ತು ಅಲ್ಲಿಂದ ನಿಮಗೆ ಹೆಚ್ಚು ಒಳ್ಳೆಯದಾಗಿ ಸಹಾ ಕಾಣುವುದು.
ವ್ಯಕ್ತಿಯೊಬ್ಬನ ಬಟ್ಟೆಗಳಿಗೆ ಬೆಂಕಿ ತಗಲಿದರೆ ಏನು ಮಾಡಬಹುದು?
ಓಡುವದರಿಂದ ನೀವು ಹೆಚ್ಚು ಕೇಡನ್ನು ಮಾಡಿಕೊಳ್ಳುತ್ತೀರಿ, ಇದು ಜ್ವಾಲೆಗಳನ್ನು ಕೇವಲ ಹೆಚ್ಚಿಸುತ್ತದೆ. ಅದರ ಬದಲು, ನೆಲಕ್ಕೆ ಬಿದ್ದು, ಹೊರಳಾಡಿರಿ. ಇದು ಜ್ವಾಲೆಗಳನ್ನು ನಿಮ್ಮ ಮುಖದಿಂದ ದೂರವಿಡುತ್ತದೆ ಮತ್ತು ಆಶಾಜನಕವಾಗಿ ಬೆಂಕಿಯನ್ನು ನಂದಿಸಬಹುದು.
ನಮ್ಮ ವಾಚಕರಿಗೆ ಏನಾದರೂ ಕೊನೆಯ ಮಾತು ಇದೆಯೋ?
ನೀವು ಎಂದೂ ಒಂದು ಬೆಂಕಿಯಲ್ಲಿ ಸಿಕ್ಕಿಕೊಳ್ಳಬಾರದೆಂದು ಆಶಿಸುತ್ತೇನೆ. ಅದು ಒಂದು ದಿಗಿಲುಗೊಳಿಸುವ ಅನುಭವವಾಗಿದೆ. ಆದರೆ ನೀವು ಒಂದು ಬೆಂಕಿಯಲ್ಲಿ ಸಿಕ್ಕಿಕೊಂಡರೆ, ಈ ಕೆಲವು ನಿಯಮಗಳು ಸಹಾಯಕಾರಿಯಾಗಿ ಪರಿಣಮಿಸಬಹುದು. ಮತ್ತು ನೆನಪಿಡಿರಿ, ಬೆಂಕಿಯ ಅಪಾಯವನ್ನು ಗಂಭೀರವಾಗಿ ಪರಿಗಣಿಸಿರಿ, ಅದನ್ನು ಲಘುವಾಗಿ ಯಾ ತಮಾಷೆಯಾಗಿ ಎಣಿಸಬೇಡಿರಿ. ಅದು ಹಾಗಿರುವದಿಲ್ಲ. (g90 5/22)
[ಪುಟ 20ರಲ್ಲಿರುವಚೌಕ]
ಒಂದು ಹೋಟೇಲಿನಲ್ಲಿ ತಂಗಿರುವಾಗ, ರಾತ್ರಿ ಮಲಗುವ ಮುಂಚೆ, ನೀವು ಯಾವಾಗಲೂ ಅತಿ ಸಮೀಪದ ತುರ್ತು ಬಾಗಿಲು ಎಲ್ಲಿದೆ ಎಂದು ಕಂಡುಕೊಳ್ಳುತ್ತೀರೋ?