ರಕ್ಷಣೋಪಾಯಗಳು ಮತ್ತು ಅಪಾಯಗಳು
ಮಾನವ ಸೋಂಕು ರಕ್ಷಾ ವ್ಯವಸ್ಥೆ ಲಕ್ಷಾಂತರ ಸೂಕ್ಷ್ಮಜೀವಿಗಳು, ನಮ್ಮ ಸುಖಕರವಾಗಿರುವ ಬೆಚ್ಚಗೆನ ಮತ್ತು ತೇವವುಳ್ಳ ಶರೀರವನ್ನು ಆಕ್ರಮಿಸುವ ಉದ್ದೇಶದಿಂದ, ನಮ್ಮನ್ನು ಎಡೆಬಿಡದೆ ಧಾಳಿಮಾಡುತ್ತವೆ. ಅವರು ಪ್ರವೇಶಪಡೆದರೆ, ಅವರಿಗೆ ಒಂದು ದಿಗ್ಭ್ರಾಂತಿಯಾಗಲಿದೆ. ಅವರು ಅಸಂಖ್ಯಾತ ಸಂಕ್ಲಿಷ್ಟಕರವಾದ ಸೋಂಕುರಕ್ಷಾ ವ್ಯವಸ್ಥೆಯಿಂದ—ಅನೇಕ ಪ್ರೋಟೀನುಗಳಿಂದ ನಿಯಂತ್ರಿಸಲ್ಪಟ್ಟ ಲಕ್ಷ, ಲಕ್ಷಾಂತರ ವಿಶೇಷ ರೀತಿಯ ಕಣಗಳನ್ನು ಅವುಗಳು ಎದುರಿಸಬೇಕಾಗುತ್ತದೆ. ಟೈಮ್ ಪತ್ರಿಕೆಯು ಹೇಳುವದು: “ಎಲ್ಲಾ ಅಂಗಗಳ ಸಂಕ್ಲಿಷ್ಟತೆಯಲ್ಲಿ ಅತಿ ಹೆಚ್ಚಾಗಿರುವ ಮಿದುಳಿಗೆ, ಸೋಂಕು ರಕ್ಷಾ ವ್ಯವಸ್ಥೆಯನ್ನು ಹೋಲಿಸಬಹುದಾಗಿದೆ.” ಅನಂತರ ಅದು ಸೋಂಕು ರಕ್ಷಾ ತಜ್ಞನಾದ ವಿಲ್ಯಂ ಪೌಲ್ನನ್ನು ಉಲ್ಲೇಖಿಸಿದ್ದು: “ಸಮಾಚಾರದೊಂದಿಗೆ ವ್ಯವಹರಿಸುವ, ಕಲಿಯವ ಮತ್ತು ಜ್ಞಾಪಕದಲ್ಲಿಡುವ, ಸಮಾಚಾರವನ್ನು ಉತ್ಪಾದಿಸುವ ಮತ್ತು ಸಂಗ್ರಹಿಸಿಡುವ ಮತ್ತು ಬಳಸುವ ಒಂದು ಬೃಹತ್ಗಾತ್ರದ ಸಾಮರ್ಥ್ಯವು ಈ ಸೋಂಕು ರಕ್ಷಾ ವ್ಯವಸ್ಥೆಗೆ ಇದೆ.” ಡಾ. ಸೆಪ್ಟೀನ್ ಶೆರ್ವಿನ್ ಅದಕ್ಕೆ ತನ್ನ ಸ್ತುತಿಯನ್ನು ಕೂಡಿಸುತ್ತಾನೆ: “ಅದೊಂದು ನಂಬಲು ಕಷ್ಟವಾದ ಒಂದು ವ್ಯವಸ್ಥೆಯಾಗಿದೆ. ಹಿಂದೆಂದೂ ದೇಹದಲ್ಲಿರದ ಅಣುಗಳನ್ನು ಅದು ಗುರುತಿಸುತ್ತದೆ. ಅಲ್ಲಿ ಯಾವುದು ಇರಬೇಕು ಮತ್ತು ಅಲ್ಲಿ ಯಾವುದು ಇರಕೂಡದು ಎಂಬದರ ವ್ಯತ್ಯಾಸವನ್ನು ಕೂಡ ಮಾಡಶಕ್ಯವಾಗಿದೆ.” ಮತ್ತು ಅದು ಆಗದಿದ್ದರೆ, ಅಲ್ಲಿ ಒಂದು ಯುದ್ಧ, ಒಂದು ಸಮಗ್ರ ಯುದ್ಧವಾಗುತ್ತದೆ.
ಶರ್ಕರ ಷಿದ್ಟೊಂದಿಗೆ ಉಪಹಾರ ತಕ್ಕೊಳ್ಳುತ್ತದೆ ಶರ್ಕರ ಪಿಷ್ಟಿದ ಆಹಾರಗಳು ಒಬ್ಬ ವ್ಯಕ್ತಿಯ ದೇಹದಲ್ಲಿ ಉನ್ನತ ಮಟ್ಟದ ಗ್ಲುಕೋಸ್ ಇರುವದಾದರೂ, ಆಲಸ್ಯವನ್ನು ಮತ್ತು ಅನಂತರ ಆಯಾಸವನ್ನು ಉಂಟುಮಾಡುತ್ತವೆ. ಅಧ್ಯಯನಗಳು ಕೇಂದ್ರಿಕೃತವಾಗುವದನ್ನು ತೋರಿಸಿವೆ ಮತ್ತು ಶರ್ಕರ ಪಿಷ್ಟಿದ ಊಟದ ನಂತರ ಟೆಸ್ಟ್ ಸ್ಕೋರುಗಳು ಕುಗ್ಗುತ್ತವೆ. ಮಿತಿಮೀರಿ ಉಣ್ಣುವವರು ಇತರ ಲಘು ಉಪಹಾರಗಳ ಬದಲು ಶರ್ಕರ ಪಿಷ್ಟಿವನ್ನು ಆಶಿಸುತ್ತಾರೆ ಯಾಕಂದರೆ ಅವರು ಸಿಹಿಯನ್ನು ಬಯಸುತ್ತಾರೆ ಆದರೆ ಬ್ರೆಡ್ ಮತ್ತು ಹಿಟ್ಟಿನ ತಯಾರಿಕೆಗಳನ್ನು ಮೆಚ್ಚುತ್ತಾರೆ. ಧೂಮ್ರಪಾನಿಗಳು ಧೂಮ್ರಪಾನ ಸೇವನೆಯನ್ನು ತೊರೆದಾಗ, ಶರ್ಕರ ಪಿಷ್ಟಿಗಳಿಗಾಗಿ ತವಕಪಡುತ್ತಾರೆ, ಮತ್ತು ಅವರು ಸೇವನೆಬಿಟ್ಟಾಗ ದೇಹದ ತೂಕ ಹೆಚ್ಚಾಗಲು ಒಂದು ಕಾರಣ ಅವರು ಹೆಚ್ಚು ಸಿಹಿಯಾದ, ಶರ್ಕರ ಪಿಷ್ಟಿದಿಂದ ತುಂಬಿರುವ ಆಹಾರಗಳನ್ನು ಹೆಚ್ಚಾಗಿ ತಿನ್ನುತ್ತಾರೆ.
ದೇಹದ ತೂಕ ಹೆಚ್ಚಾಗುವದರಿಂದ ಅಪಾಯಗಳು ಮಧ್ಯ ವಯಸ್ಸಿನ ಮತ್ತು ಎಳೆಯ ಸ್ತ್ರೀಯರು ಯಾವುದೇ ಮಟ್ಟದಲ್ಲಿ ಹೆಚ್ಚು ತೂಕವನ್ನು ಪಡೆಯುವದೆಂದರೆ, ಹೃದಯ ರೋಗದ ಅಪಾಯಗಳನ್ನು ಹೆಚ್ಚಿಸುವದೇ ಆಗಿದೆ. 30 ರಿಂದ 55 ವರ್ಷ ಪ್ರಾಯದ 1,16,000 ನರ್ಸುಗಳ ಎಂಟು ವರ್ಷಗಳ ಅಧ್ಯಯನದಿಂದ ಇದು ತಿಳಿದುಬಂದಿದೆ. ಹೃದ್ರೋಗದ ಎಪ್ಪತ್ತು ಶೇಕಡಾ ಬೊಜ್ಜು ಬೆಳೆದ ಸ್ತ್ರೀಯರಲ್ಲಿ ಮತ್ತು ಸಾಮಾನ್ಯವಾಗಿ ಎಲ್ಲಾ ಸ್ತ್ರೀಯರ 40 ಶೇಕಡ ಅಧಿಕ ತೂಕದ ಕಾರಣವಾಗಿರುತ್ತದೆ. ಇದರ ಕುರಿತು ನ್ಯೂ ಯೋರ್ಕ್ ಟೈಮ್ಸ್ನ ವಾರ್ತಾವರದಿಯು ಮುಂದರಿಸಿದ್ದು: “ಪುರುಷರ ಮೊದಲಿನ ಅಧ್ಯಯನಗಳು ಮಿತವಾಗಿ ಅಧಿಕ ತೂಕವುಳ್ಳವರಾಗುವದು ಹೃದ್ರೋಗದ ಅಪಾಯಗಳನ್ನು ಏರಿಸುವದನ್ನು ಸೂಚಿಸಿತ್ತು. ಆದರೆ ಮಧ್ಯ ವಯಸ್ಸಿನ ಸ್ತ್ರೀಯರಲ್ಲಿ ಸ್ವಲ್ಪವೇ ತೂಕ ಏರಿದರೆ ಕೂಡ ಅಪಾಯದ ಸೂಚನೆಯನ್ನು ದಾಖಲುಮಾಡಲಾಗಿದೆ ಎನ್ನುತ್ತಾರೆ ಡಾ. ಚಾರ್ಲ್ಸ್ ಏಚ್. ಹೆನ್ನಕೆನ್ಸ್, ಬೊಸ್ಟನ್ನ ಬ್ರಿಗಾಮ್ ಮತ್ತು ಸ್ತ್ರೀಯರ ಆಸ್ಪತ್ರೆಯ ಸಾಂಕ್ರಾಮಿಕ ರೋಗ ಶಾಸ್ತ್ರಜ್ಞ ಮತ್ತು ಅಧ್ಯಯನದ ಗ್ರಂರ್ಥಕರ್ತನೂ ಆಗಿದ್ದಾನೆ. ಫಲಿತಾಂಶಗಳು ತೋರಿಸಿವೆಯೇನಂದರೆ ‘ಸಿಗರೇಟು ಸೇದುವದು ಮತ್ತು ಅಧಿಕ ಸರಾಯಿಯನ್ನು ಕುಡಿಯುವದು ಬೊಜ್ಜುತನದೊಂದಿಗೆ ಇದ್ದು, ಅಮೆರಿಕದಲ್ಲಿ ಅಧಿಕ ರೋಗ ವ್ಯಾಪನೆಗೆ ಮತ್ತು ಮರಣಕ್ಕೆ ಪ್ರಮುಖ ಕಾರಣ’ ಎಂದು ಅವನು ಹೇಳಿದನು.”
ಹಸುಗೂಸು ಮರಣಗಳು ಧೂಮ್ರಪಾನದೊಂದಿಗೆ ಜೋಡಿಸಲ್ಪಟ್ಟಿವೆ ಮೂರು ವರ್ಷಗಳ ಅಧ್ಯಯನದ ನಂತರ, ಸ್ವೀಡನ್ನಲ್ಲಿ ಇಬ್ಬರು ವೈದ್ಯರು ಸಿಡ್ಸ್ (SIDS) ಎಂದು ಕರೆಯಲ್ಪಡುವ ಫಕ್ಕನೆ ಮಗುವು ಸಾಯುವದರೊಂದಿಗೆ ಧೂಮ್ರಪಾನ ಮಾಡುವಿಕೆಯು ಜೋಡಿಸಲ್ಪಟ್ಟಿದೆ ಎಂದು ಕಂಡುಹಿಡಿದರು. ಈ ಶಬ್ದವು ಒಂದರಿಂದ ಆರು ತಿಂಗಳು ಹಸುಗೂಸುಗಳ ಅಜ್ಞಾತ ಕಾರಣಗಳಿಂದಾಗುವ ಮರಣಗಳಿಗೆ ಕೊಟ್ಟದ್ದಾಗಿರುತ್ತದೆ. ಡಾ. ಬೆಂಗ್ಟ್ ಮತ್ತು ಡಾ. ಸೆನ್ವ್ ಕ್ನಾಟ್ಟಿಂಗಿಯುಸ್ ಸ್ವೀಡನ್ನಲ್ಲಿ ಜೀವಂತ ಹುಟ್ಟಿದ 2,80,000 ಅಂಕೆಸಂಖ್ಯೆಗಳನ್ನು ಸಂಸ್ಕರಿಸಿದರು. ಈ ಗುಂಪಿನಲ್ಲಿ, 190 ಮಂದಿ ಸಿಡ್ಸ್ನಿಂದ ಸತ್ತರು, ಮತ್ತು ಇದರಲ್ಲಿ 50 ಮರಣಗಳಿಗೆ ಕಾರಣ ತಾಯಂದಿರ ಧೂಮ್ರಪಾನ ಸೇದುವಿಕೆಯೆಂದು ಡಾಕ್ಟರುಗಳು ಆಪಾದಿಸಿದರು. ಗರ್ಭಧಾರಣೆಯ ಸಮಯದಲ್ಲಿ ಹಾಳತದಲ್ಲಿ ಧೂಮ್ರಪಾನ ಮಾಡಿದ—ದಿನವೊಂದಕ್ಕೆ ಒಂದರಿಂದ ಒಂಬತ್ತು ಸಿಗರೇಟುಗಳನ್ನು ಸೇದುವ—ತಾಯಂದಿರುಗಳು ಸೇದದೇ ಇರುವ ತಾಯಂದಿರುಗಳಿಗಿಂತ ತಮ್ಮ ಹಸುಗೂಸುಗಳನ್ನು ಸಿಡ್ಸ್ ಮೂಲಕ ಕಳೆದುಕೊಳ್ಳುವ ಸಂಭವಗಳು ಇಮ್ಮಡಿಯಾಗಿವೆ. ಅತಿಯಾಗಿ ಸೇದುವ—ದಿನವೊಂದಕ್ಕೆ ಹತ್ತರಿಂದ ಮತ್ತು ಇನ್ನು ಹೆಚ್ಚು ಸಿಗರೇಟುಗಳನ್ನು—ಸೇದುವವರಲ್ಲಿ ಅಪಾಯವು ಮೂರು ಪಟ್ಟು ಇರುತ್ತದೆ. ಡಾ. ಹಗ್ಲಂಡ್ ಹೇಳಿದ್ದು: “ತಡೆಗಟ್ಟುವ ಬಿಂದುವಿನಿಂದ ಮಾತಾಡುವದಾದರೆ, ಧೂಮ್ರ ಪಾನವು ಸಿಡ್ಸ್ನ ಅತಿ ಪ್ರಮುಖ ಕಾರಣವಾಗಿದೆ.” ಆದಾಗ್ಯೂ, ಅವನಂದದ್ದು ಏನಂದರೆ ಇತರ ಸಾಮಾಜಿಕ-ಆರ್ಥಿಕ ವಾಸ್ತವಾಂಶಗಳು ಇದರಲ್ಲಿ ಸೇರಿರಬಹುದು: ತಾಯಿಯ ವಯಸ್ಸು, ಸಮಾಜದಲ್ಲಿ ಅಂತಸ್ತು, ಮತ್ತು ತಾಯಿ ಮತ್ತು ಮಗುವಿನೊಂದಿಗೆ ತಂದೆಯು ವಾಸಿಸುತ್ತಾನೋ ಎಂಬದು. ದ ನ್ಯೂ ಯೋರ್ಕ್ ಟೈಮ್ಸ್ ವರದಿಯು ಕೊನೆಗೊಳಿಸಿದ್ದು: “ಸಿಡ್ಸ್ನ ಆಕಸ್ಮಿಕತೆಗಳು ಸ್ಕೆಂಡೀನೆವಿಯನ್ ದೇಶಗಳಲ್ಲಿ, ಅಮೆರಿಕದಂತಹ ಕೈಗಾರಿಕಾ ದೇಶಗಳಿಗಿಂತ ಕಡಿಮೆ ಎಂದು ಅಧ್ಯಯನವು ತೋರಿಸಿದೆ.”