ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g00 2/8 ಪು. 30
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—2000
  • ಅನುರೂಪ ಮಾಹಿತಿ
  • ನಮ್ಮ ವಾಚಕರಿಂದ
    ಎಚ್ಚರ!—2000
  • ನಮ್ಮ ವಾಚಕರಿಂದ
    ಎಚ್ಚರ!—1995
  • ನಮ್ಮ ವಾಚಕರಿಂದ
    ಎಚ್ಚರ!—1999
  • ರಕ್ಷಣೋಪಾಯಗಳು ಮತ್ತು ಅಪಾಯಗಳು
    ಎಚ್ಚರ!—1991
ಇನ್ನಷ್ಟು
ಎಚ್ಚರ!—2000
g00 2/8 ಪು. 30

ನಮ್ಮ ವಾಚಕರಿಂದ

ಆಫ್ರಿಕದ ಮಳೆಬಿರುಗಾಳಿ ನಾನು 12 ವರ್ಷ ಪ್ರಾಯದವನಾಗಿದ್ದೇನೆ ಮತ್ತು ನಾನು “ಮಳೆಗಾಳಿಯು ತಂದಿತು ನಾಶ ಆದರೆ ಕ್ರೈಸ್ತತ್ವ ಗೆದ್ದಿತು” (ಏಪ್ರಿಲ್‌ 8, 1999) ಎಂಬ ಲೇಖನಕ್ಕಾಗಿ ನಿಮಗೆ ಉಪಕಾರ ಹೇಳಲು ಬಯಸುತ್ತೇನೆ. ಸಂಕಷ್ಟದಲ್ಲಿ ಸಿಲುಕ್ಕಿದ್ದ ಸಹೋದರರಿಗೆ ಸಹಾಯಮಾಡಿದವರು ನಿಜವಾಗಿಯೂ ಪ್ರಶಂಸೆಗೆ ಅರ್ಹರಾಗಿದ್ದರೆಂದು ನಾನು ನೆನಸಿದೆ! ಇದು, ಜಪಾನಿನಲ್ಲಾದ ಹಾನ್‌ಶೀನ್‌ ಭೂಕಂಪದ ಬಳಿಕ ಇತರರಿಗೆ ನಮ್ಮ ಸಹೋದರರು ಸಹಾಯಮಾಡಿದ ರೀತಿಯನ್ನು ನನ್ನ ನೆನಪಿಗೆ ತಂದಿತು. ಧೈರ್ಯಶಾಲಿಯಾಗಿರುವಂತೆ ಮತ್ತು ಇತರರಿಗೆ ಒಳ್ಳೇದನ್ನು ಮಾಡುವವನಾಗಿರುವಂತೆ ಈ ಲೇಖನವು ನನ್ನನ್ನು ಉತ್ತೇಜಿಸಿತು.

ಆರ್‌. ಕೆ., ಜಪಾನ್‌

ನೀವು ಖರೀದಿಸಲು ಸಾಧ್ಯವಿಲ್ಲದಿರುವ ಇಷ್ಟದ ವಸ್ತುಗಳು “ಯುವ ಜನರು ಪ್ರಶ್ನಿಸುವುದು . . . ನಾನು ಇಷ್ಟಪಡುವ ವಸ್ತುಗಳನ್ನು ನನಗೇಕೆ ಖರೀದಿಸಿಕೊಡುವುದಿಲ್ಲ?” (ಏಪ್ರಿಲ್‌ 8, 1999) ಎಂಬ ಲೇಖನವನ್ನು ನಾನು ಈಗಷ್ಟೇ ಓದಿ ಮುಗಿಸಿದೆ. ಈ ಲೇಖನಕ್ಕಾಗಿ ನಾನು ನಿಮಗೆ ಉಪಕಾರ ಹೇಳಲು ಬಯಸುತ್ತೇನೆ. ಯಾಕೆಂದರೆ, ನಾನು ಇಷ್ಟಪಡುವ ಎಲ್ಲ ವಸ್ತುಗಳನ್ನು ನಾನು ಪಡೆದುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಅದು ನನಗೆ ಮನವರಿಕೆ ಮಾಡಿಕೊಟ್ಟಿತು. ಆದರೆ ಲೇಖನದಲ್ಲಿ ಹೇಳಲಾದಂತೆ, ಯೆಹೋವನು ನಮ್ಮ ಅಗತ್ಯಗಳನ್ನು ತಿಳಿದಿದ್ದಾನೆ ಮತ್ತು ನನ್ನ ಜೀವನವು ತುಂಬ ಸರಳವಾಗಿರುವುದರಿಂದ ನಾನು ಬಹಳ ಸಂತೋಷದಿಂದಿದ್ದೇನೆ.

ಸಿ. ಕೆ., ಕೆನಡ

ಐವರು ಪುತ್ರರು “ನನ್ನ ಐವರು ಪುತ್ರರಿಗಾಗಿ ಯೆಹೋವನಿಗೆ ಕೃತಜ್ಞತೆಗಳು” (ಏಪ್ರಿಲ್‌ 8, 1999) ಎಂಬ ಲೇಖನವನ್ನು ನಾನು ತುಂಬ ಆಸಕ್ತಿದಾಯಕವಾದದ್ದಾಗಿ ಕಂಡುಕೊಂಡೆ. ಏಕೆಂದರೆ, ಹೆಲೆನ್‌ ಸಾಲ್ಸ್‌ಬರಿ ಮತ್ತು ನನ್ನ ತಾಯಿಯ ಮಧ್ಯೆ ಅನೇಕ ಹೋಲಿಕೆಗಳು ಇದ್ದವು. ಇಬ್ಬರೂ ಒಂದೇ ವರ್ಷದಲ್ಲಿ ದೀಕ್ಷಾಸ್ನಾನವನ್ನು ಪಡೆದುಕೊಂಡಿದ್ದರು. ನಮ್ಮ ಕುಟುಂಬವು ಆರ್ಥಿಕವಾಗಿ ತೊಂದರೆಗೊಳಗಾಗಿದ್ದಾಗ, ಅಂದರೆ ನನ್ನ ತಂದೆಯ ಕಂಪೆನಿಯು ದಿವಾಳಿಯಾದಾಗ, ಹೆಲೆನ್‌ಳಂತೆ ನನ್ನ ತಾಯಿಯೂ ಸಹ ಮನೆಯಲ್ಲೇ ಉಳಿದುಕೊಂಡು ನಮ್ಮ ಪರಾಮರಿಕೆಯನ್ನು ಮಾಡಿದರು. ಹೆಲೆನ್‌ಳಂತೆಯೇ ನನ್ನ ತಾಯಿ ಸಹ ಪಯನೀಯರರಾಗಿ, ಅಂದರೆ ಪೂರ್ಣ ಸಮಯದ ಸೌವಾರ್ತಿಕಳಾಗಿ ಸೇವೆ ಮಾಡಿದರು ಮತ್ತು ಕ್ಷೇತ್ರದಲ್ಲಿ ಅವರಿಗೆ ಸಿಕ್ಕಿದ ಆಸಕ್ತಿದಾಯಕ ಅನುಭವಗಳನ್ನು ಯಾವಾಗಲೂ ನಮಗೆ ಹೇಳುತ್ತಿದ್ದರು. ಇದು ನಾನು ಪಯನೀಯರ್‌ ಸೇವೆಯನ್ನು ತುಂಬ ಇಷ್ಟಪಡುವಂತೆ ಮಾಡಿತು. ಈಗ ನನಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ ಮತ್ತು ನನ್ನ ತಾಯಿ ನಮಗೋಸ್ಕರ ಎಷ್ಟು ಪರಿಶ್ರಮಪಟ್ಟರೆಂಬುದು ಈಗ ನನಗೆ ಅರ್ಥವಾಗುತ್ತದೆ.

ಎಮ್‌. ಎಸ್‌., ಜಪಾನ್‌

ಈ ಲೇಖನಕ್ಕಾಗಿ ನಿಮಗೆ ತುಂಬ ಉಪಕಾರಗಳು. ಒಬ್ಬ ತಂದೆಯಾಗಿ ನಾನು ಬೈಬಲಿನ ಸಲಹೆಯನ್ನು ಅನುಸರಿಸಲು ಪ್ರಯತ್ನಿಸುತ್ತೇನೆ, ಆದರೆ ನಾನು ಸಾಕಷ್ಟನ್ನು ಮಾಡುತ್ತಿಲ್ಲ ಎಂದು ನನಗೆ ಅನೇಕ ಸಲ ಅನಿಸುತ್ತದೆ. ಸಾಲ್ಸ್‌ಬರಿ ಕುಟುಂಬದ ಅನುಭವವು, ನಾನು ನನ್ನ ಪ್ರಯತ್ನವನ್ನು ಮುಂದುವರಿಸುತ್ತಾ ಇರುವಂತೆ ನನ್ನನ್ನು ಬಲಪಡಿಸಿತು.

ಆರ್‌. ಎಮ್‌. ಆರ್‌., ಬ್ರೆಸಿಲ್‌

ಇಷ್ಟಪಡುವ ವಸ್ತುಗಳು ನಾನು 12 ವರ್ಷ ಪ್ರಾಯದ ಹುಡುಗಿ. “ಯುವ ಜನರು ಪ್ರಶ್ನಿಸುವುದು . . . ನಾನು ಇಷ್ಟಪಡುವ ವಸ್ತುಗಳನ್ನು ನನಗೇಕೆ ಖರೀದಿಸಿಕೊಡುವುದಿಲ್ಲ?” (ಏಪ್ರಿಲ್‌ 8, 1999) ಎಂಬ ಲೇಖನಕ್ಕಾಗಿ ನಾನು ನಿಮಗೆ ಉಪಕಾರ ಹೇಳಲು ಬಯಸುತ್ತೇನೆ. ನಾನು ಒಂದು ಸೈಕಲ್‌ ಮತ್ತು ಒಂದು ಗಿಟಾರ್‌ ಅನ್ನು ಇಷ್ಟಪಡುತ್ತೇನೆ. ಆದರೆ, ನನ್ನ ತಂದೆಗೆ ಅದನ್ನು ಖರೀದಿಸಿ ಕೊಡಲು ಸಾಧ್ಯವಿಲ್ಲ. ಇದು ನನ್ನನ್ನು ನಿರಾಶೆಗೊಳಿಸುತ್ತದೆ. ಹೀಗಿದ್ದರೂ, ನಿಮ್ಮ ಲೇಖನವು ನನಗೆ ನಿಜವಾಗಿಯೂ ಉತ್ತೇಜನವನ್ನು ಕೊಟ್ಟಿತು. ಒಬ್ಬ ತಂದೆಯಿಂದ ಕೊಡಲ್ಪಡುವಂತಹ ಸಲಹೆಯನ್ನು ಈ ಲೇಖನದಲ್ಲಿ ಪ್ರಕಾಶಿಸಿದ್ದಕ್ಕೆ ನಾನು ನಿಮಗೆ ಉಪಕಾರ ಸಲ್ಲಿಸುತ್ತೇನೆ.

ಸಿ. ಯು., ನೈಜಿರೀಯ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ