ನಿಮಗೆ ದೊರೆಯುವ ವಾರ್ತೆಯ ಮೇಲೆ ನೀವು ಭರವಸ ಇಡಬಹುದೋ?
ಮೇ 10, 1927ರಲ್ಲಿ ಫ್ರೆಂಚ್ ವಾರ್ತಾ ಪತ್ರಿಕೆಯಾದ ಲಾ ಪ್ರೆಸ್ಸಿದ ವಿಶೇಷ ಆವೃತ್ತಿಯು ಪ್ರಕಟಿಸಿತ್ತೇನಂದರೆ ಆಟ್ಲಾಂಟಿಕದಾಚೆ ಮೊದಲನೆ ಯಶಸ್ವಿ ತಡೆರಹಿತ ಹಾರಾಟವು ಇಬ್ಬರು ಫ್ರೆಂಚ್ ವಿಮಾನ ಚಾಲಕರಾದ ನಂಗೆಸ್ಸರ್ ಮತ್ತು ಕೊಲಿಯಿಂದ ಮಾಡಲ್ಪಟ್ಟಿತು. ಮುಖಪುಟದಲ್ಲಿ ಆ ಇಬ್ಬರು ಹಾರಾಟಗಾರರ ಚಿತ್ರಗಳನ್ನು ಮತ್ತು ನ್ಯೂ ಯೋರ್ಕ್ಗೆ ಅವರ ಆಗಮನದ ಕುರಿತು ವಿಶೇಷವಾಗಿ ತೋರಿಸಲಾಯಿತು. ಆದರೆ ಈ ಕಥೆಯು ಕೃತ್ರಿಮವಾಗಿತ್ತು. ನಿಜವಾಗಿ, ವಿಮಾನವು ಕಳೆದುಕೊಳ್ಳಲ್ಪಟ್ಟಿತು ಮತ್ತು ಹಾರಾಟಗಾರರು ಕೊಲ್ಲಲ್ಪಟ್ಟರು.
ಆದಾಗ್ಯೂ, ಪ್ರಾಯಶಃ ಹೆಚ್ಚಿನ ಜನರು ಸಂಶಯ ಪಡುವದಕ್ಕಿಂತಲೂ ಸುಳ್ಳು ವಾರ್ತಾ ವರದಿಗಳು ಹೆಚ್ಚು ಸಾಮಾನ್ಯವಾಗಿವೆ. 1983ರಲ್ಲಿ, ಪ್ರಾಯಶಃ ಹಿಟ್ಲರನ ನಿಕಟವಾದ ಮಾಹಿತಿಗಳು, ವಿಶೇಷವಾಗಿ ಫ್ರಾನ್ಸ್ನಲ್ಲಿ ಮತ್ತು ಪಾಶ್ಚಿಮಾತ್ಯ ಜರ್ಮನಿಯಲ್ಲಿ, ಅತ್ಯಂತ ಪ್ರಾಮುಖ್ಯವಾದ ವಾರ ಪತ್ರಿಕೆಗಳಲ್ಲಿ ಪ್ರಕಟಿಸಲ್ಪಟ್ಟವು. ಅವುಗಳು ಆಧಾರವಿಲ್ಲದ ಕಲ್ಪನೆಯ ಸುದ್ದಿಗಳಾಗಿ ತಿಳಿದು ಬಂತು.
ಹೀಗೆಯೇ, 1980ರಲ್ಲಿ ವಾಷಿಂಗ್ಟನ್ ಪೋಸ್ಟ್ನಲ್ಲಿ ಒಬ್ಬ ಯುವ ಅಮೌಷಧಿ ಚಟಗಾರನ ಬಗ್ಗೆ ಕಥೆಯೊಂದು ಪ್ರಕಾಶಿಸಲ್ಪಟ್ಟಿತು. ಈ ವೃತ್ತಾಂತವು ಅಮೆರಿಕದಲ್ಲಿ ಒಬ್ಬ ಪತ್ರಕಾರನಿಗೆ ಸಿಗುವ ಅತಿ ಶ್ರೇಷ್ಠ ಬಹುಮಾನವಾದ, ಪುಲಿಟರ್ಜ್ ಬಹುಮಾನವನ್ನು ಲೇಖಕಿಗೆ ದೊರಕಿಸಿಕೊಟ್ಟಿತು. ಆದರೆ ಕೊನೆಗೆ, ಆ ಕಥೆಯು ಕಲ್ಪಿತ, ಒಂದು ಕೃತ್ರಿಮವಾಗಿ ಪ್ರಕಟವಾಯಿತು. ಅನ್ವೇಷಕರ ಒತ್ತಡದಿಂದ, ಲೇಖಕಿಯು ತನ್ನ ರಾಜೀನಾಮೆಯನ್ನು ಮಂಡಿಸಿ, ಹೇಳುವದು: “ನಾನು ನನ್ನ ವಾರ್ತಾಪತ್ರಕ್ಕೆ, ನನ್ನ ವೃತ್ತಿಗೆ, ಪುಲಿಟರ್ಜ್ ಸಮಿತಿಗೆ ಮತ್ತು ಸತ್ಯವನ್ನು ಹುಡುಕುವ ಎಲ್ಲರಲ್ಲೂ ಕ್ಷಮೆ ಯಾಚಿಸುತ್ತೇನೆ.”
ಆದರೂ, ಜಗತ್ತಿನಲ್ಲಿ ಏನು ನಡೆಯುತ್ತದೆ ಎನ್ನುವದರ ಕುರಿತು ಸತ್ಯವನ್ನು ಪಡೆಯಲು ಕೇವಲ ಕಲ್ಪಿತ ಕೃತ್ರಿಮ ವಾರ್ತೆಗಳು ಮತ್ತು ಸುಳ್ಳು ವರದಿಗಳು ಮಾತ್ರವೇ ಅಡಚಣೆಗಳಾಗಿರುವದಿಲ್ಲ.
ವಾರ್ತೆಗಳ ಆಯ್ಕೆ ಮತ್ತು ಸಾದರಪಡಿಸುವಿಕೆ
ಪತ್ರಕಾರರು ಮತ್ತು ಸಂಪಾದಕರು ಆಗಿಂದಾಗ್ಯೆ ಜನಸಾಮಾನ್ಯರಿಗೆ ಮೋಹಗೊಳಿಸುವ ವಾರ್ತೆಗಳನ್ನು ಆರಿಸುತ್ತಾರೆ, ಆದರೆ ಅದು ನಿಜವಾಗಿ ಮಹತ್ವದಾಗಿರಲಿಕ್ಕಿಲ್ಲ. ಪ್ರಚಾರ ಸಂಖ್ಯೆಯನ್ನು ಮತ್ತು ಬೆಲೆಯ ವೇಗವನ್ನು ಹೆಚ್ಚಿಸಲು ಯಾವುದು ಬಾವೂದ್ರಕಾರಿ ಮತ್ತು ಕಣ್ನೋಟ ಆಕರ್ಷಿಸುತ್ತದೋ ಅದಕ್ಕೆ ಆದ್ಯತೆಯನ್ನು ಕೊಡಲಾಗುತ್ತದೆ. ಅವುಗಳು ತರುಣರಿಗೆ ಯಾವುದೇ, ವಿಧದ ಪಾತ್ರಾಭಿನಯವನ್ನು ಒದಗಿಸುತ್ತದೆಂಬುದನ್ನು ಗಮನಿಸದೆ, ಮನೋರಂಜನೆಯ ಮತ್ತು ಕ್ರೀಡಾ ಪ್ರಪಂಚದ ತಾರೆಗಳನ್ನು ಮುಖ್ಯವಾಗಿ ತೋರಿಸಲಾಗುತ್ತದೆ. ಆದುದರಿಂದ ಅವರಲ್ಲಿ ಒಬ್ಬನು, ಒಬ್ಬ ಪ್ರೇಮಿಯನ್ನು ತೆಗೆದುಕೊಂಡರೆ, ಮದುವೆಯಾದರೆ ಅಥವಾ ಸತ್ತರೆ, ಇದು ಆಗಾಗ್ಯೆ ವಾರ್ತಾವಿಷಯವಾಗಿ ಬಿತ್ತರಿಸಲ್ಪಡುತ್ತದೆ.
ಟೆಲಿವಿಶನ್ ವಾರ್ತೆಗಳು ಸಾಮಾನ್ಯವಾಗಿ ದೃಷ್ಟಿಗೆ ಆಕರ್ಷಕವಾಗಿರುವ ವಿಷಯಗಳನ್ನು ವೈಶಿಷ್ಟಮಯವಾಗಿ ಮಾಡುತ್ತವೆ. ಒಂದು ಪ್ರಧಾನ ಟೆಲಿವಿಶನ್ ಪ್ರಸರಣ ಸಂಸ್ಥೆಯ ಪ್ರಮುಖನು ಟೀವೀ ಗೈಡ್ ಪತ್ರಿಕೆಯಲ್ಲಿ ಪ್ರಕಟಿಸಿದಂತೆ, “ಪ್ರತಿಯೊಂದು ಕಥೆಯಲ್ಲಿ ವೀಕ್ಷಕರಿಗೆ ಮರುಳುಗೊಳಿಸಲು, ಶಕ್ತಿ ಪ್ರದರ್ಶನ, ಬಾವೋದ್ರೇಕ ಕ್ಷಣಗಳು—ಪ್ರಸರಣದಲ್ಲಿ ಅವನಿಗೆ ಬೇಕಾಗಿದ್ದ ‘ಕ್ಷಣಗಳು’ ಎಂದು ತಿಳಿಸಿದನು.” ನಿಶ್ಚಯವಾಗಿ, ಜನಸಾಮಾನ್ಯರ ಶಿಕ್ಷಣಕ್ಕಿಂತಲೂ ಸಾಮಾನ್ಯವಾಗಿ ವೀಕ್ಷಕರನ್ನು ಆಕರ್ಷಿಸುವದೇ ಹೆಚ್ಚಿನ ಹಂಬಲವಾಗಿದೆ.
ಘಟನೆಗಳನ್ನು ವರ್ಣಿಸಿದ ವಿಧಾನವು ಪೂರ್ಣ ಚಿತ್ರಣವನ್ನು ಒದಗಿಸಲು ತಪ್ಪಬಹುದು. ಉದಾಹರಣೆಗಾಗಿ, ಫ್ರೆಂಚ್ ದೈನಿಕ ದ ಲೀ ಮೊಂಡೇಯ ವಾರದ ಪುರವಣಿ ಹೇಳಿದ್ದು, “ಮೂರು ಟೆಲಿವಿಶನ್ ಸೆಟ್ಟುಗಳು (ಫ್ರಾನ್ಸ್ನಲ್ಲಿ) ಕೇವಲ 15 ದಿನಗಳಲ್ಲಿ ಸ್ಫೋಟನಗೊಂಡವು.” ಇದನ್ನು ತುಸು ಅಸಾಮಾನ್ಯವಾಗಿ ನೀಡಿದ್ದರೂ, 15 ದಿನಗಳ ಅವಧಿಯಲ್ಲಿ ಟೆಲಿವಿಶನ್ ಸೆಟ್ಟುಗಳ ಸ್ಫೋಟನೆಗಳ ಸಂಖ್ಯೆಯು ಸಾಮಾನ್ಯವಾದುದಕ್ಕಿಂತ ನಿಶ್ಚಯವಾಗಿಯೂ ಚಿಕ್ಕದ್ದಾಗಿತ್ತು.
ಹಾಗೂ, ಪ್ರಮುಖ ವಾರ್ತೆಗಳು ಕೆಲವೊಮ್ಮೆ ಪಕ್ಷಪಾತದ ವಿಧಾನಗಳಲ್ಲಿ ಸಾದರ ಪಡಿಸಲ್ಪಡುತ್ತವೆ. ಪೆರೇಡ್ ಮ್ಯಾಗಜೀನ್ ಪ್ರಕಟಿಸಿತ್ತೇನಂದರೆ ಅಧಿಕಾರಿಗಳು ಮತ್ತು ರಾಜಕಾರಣಿಗಳು ಆಗಿಂದಾಗ್ಯೆ “ಮಾಧ್ಯಮದ ಮೂಲಕ ಅವರ ಮೋಸಗಳು ನಿಮ್ಮ ಆಲೋಚನೆಗಳನ್ನು ಪ್ರಭಾವಿಸುವಂತೆ ತಪ್ಪಾಭಿಪ್ರಾಯದ ವಾರ್ತೆಗಳನ್ನು ಬಿತ್ತರಿಸುತ್ತಾರೆ. ಪೂರ್ಣ ಸತ್ಯದ ಬದಲಿಗೆ ಆರಿಸಿರುವ ನಿಜತ್ವಗಳಲ್ಲಿ ಅವರು ವ್ಯವಹರಿಸುತ್ತಾರೆ.”
ಇದು ಹೆಚ್ಚಿನ ವಾರ್ತಾ ವ್ಯಾಖ್ಯಾನಗಾರರನ್ನು ಪೀಡಿಸುತ್ತದೆ. ಫ್ರೆಂಚ್ ಎನ್ಸೈಕ್ಲೊಪಿಡಿಯಾ ಯುನಿವರ್ಸಾಲಿಸ್ ಹೇಳುವದು: “1980ರ ಅಂತ್ಯದಂದಿನಿಂದ ಪ್ರಾಮುಖ್ಯವಾದ ಮಾಧ್ಯಮ ಮತ್ತು ಟೆಲಿವಿಶನ್, ಎಲ್ಲಾ ಕಡೆಗಳಿಂದಲೂ ಉದ್ಯೋಗಸ್ಥರಿಂದ, ಜನಸಾಮಾನ್ಯರಿಂದ, ಬೀದಿಮನುಷ್ಯನಿಂದ ಮತ್ತು ಸಾರ್ವಜನಿಕ ಗಣ್ಯವ್ಯಕ್ತಿಗಳಿಂದ, ಏನು ಹೇಳಲ್ಪಟ್ಟಿದೆಯೋ ಮತ್ತು ಏನನ್ನು ಹೇಳದೆ ಬಿಡಲ್ಪಟ್ಟಿದೆಯೋ, ಹೇಳಿದ ವಿಧಾನಗಳಿಗಾಗಿ ಮತ್ತು ಅನೇಕ ವ್ಯಂಗಸೂಚನೆಗಳಿಗಾಗಿ ಖಂಡಿಸಲ್ಪಟ್ಟಿದೆ.”
ವಾರ್ತೆಗಳ ಮುಕ್ತ ವಿನಿಮಯವು ಜಗವ್ಯಾಪ್ತ ಪ್ರಮಾಣದಲ್ಲಿಯೂ ಕೂಡಾ ಒಂದು ಸಮಸ್ಯೆಯಾಗಿದೆ ಮತ್ತು ಯುನೆಸ್ಕೊ (ಸಂಯುಕ್ತ ರಾಷ್ಟ್ರಗಳ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ)ದಲ್ಲಿ ಒಂದು ಉದ್ರೇಕದ ಚರ್ಚೆಯ ವಿಷಯವಾಗಿತ್ತು. ದುರಂತಗಳು ಅಥವಾ ಗಂಭೀರ ರಾಜಕೀಯ ಸಮಸ್ಯೆಗಳು ಸಂಭವಿಸಿದಾಗ ಮಾತ್ರವೇ ಅವುಗಳನ್ನು ವಾರ್ತೆಗಳಲ್ಲಿ ಉಲ್ಲೇಖಿಸಲಾಗುತ್ತದೆ ಎಂಬ ಪ್ರಗತಿಶೀಲ ದೇಶಗಳು ದೂರಿದವು. ಇದನ್ನು ಹೇಳಿದ ಬಳಿಕ ಕೆಲವು ಪಾಶ್ಚಿಮಾತ್ಯ ಮುದ್ರಣಾಲಯ ಸಂಘಗಳು ದಕ್ಷಿಣ ವಲಯದಲ್ಲಿರುವದಕ್ಕಿಂತಲೂ ಉತ್ತರವಲಯದ ರಾಷ್ಟ್ರಗಳ ಕುರಿತು ಹೆಚ್ಚಿನ ಸಂದೇಶಗಳನ್ನು ನೀಡುತ್ತವೆ, ಫ್ರೆಂಚ್ನ ದೈನಿಕ ಲೀ ಮೊಂಡೇಯ ಒಂದು ಲೇಖನವು ಸೇರಿಸಿದ್ದು: “ಇದು ಪ್ರಗತಿ ಹೊಂದುತ್ತಿರುವ ರಾಷ್ಟ್ರಗಳಂತೆಯೇ ಉದ್ಯಮ ಶೀಲ ರಾಷ್ಟ್ರಗಳಲ್ಲಿ ಜನಸಾಮಾನ್ಯರ ಅಭಿಪ್ರಾಯಕ್ಕೆ ಗಂಭೀರ ಅಸಮತೋಲನ ಉದ್ಭವಿಸುವಂತೆ ಕಾರಣವಾಗಿದೆ.”
ಒತ್ತಡದ ಗುಂಪುಗಳು
ವಾರ್ತಾ ಸಂಪಾದಕರ ಮೇಲೆ ಜಾಹೀರಾತುಗಾರರು ಪ್ರಯೋಗಿಸುವ ಒತ್ತಡವು ಜನಸಾಮಾನ್ಯರು ಪಡೆಯುತ್ತಿರುವ ವಾರ್ತೆಗಳನ್ನು ಇನ್ನಷ್ಟು ಪ್ರಭಾವಿಸುತ್ತದೆ. 1940ರಲ್ಲಿ, ಸಂಗೀತವನ್ನು ಸರಿಹೊಂದಿಸಲು ಗೀಟಾರ್ನ ಉಪಯೋಗದ ಪ್ರಯೋಜನಗಳನ್ನು ತೋರಿಸುವ ಒಂದು ಲೇಖನವನ್ನು ಪ್ರಕಾಶಿಸಿದರ್ದಿಂದ ಅಮೆರಿಕದ ಪತ್ರಿಕೆಯು ಪಿಯಾನೋ ಉತ್ಪಾದಕರಿಂದ ಜಾಹೀರಾತಗಳನ್ನು ಕಳಗೊಂಡರು. ಪಿಯಾನೋದ ಅತ್ಯಂತ ಉನ್ನತ ಮಟ್ಟದ ಹೊಗಳುವಿಕೆಯನ್ನು ಆ ಪತ್ರಿಕೆಯ ಸಂಪಾದಕೀಯದಲ್ಲಿ ನಂತರ ಪ್ರಕಾಶಿಸಲಾಯಿತು! ಹೀಗೆ, ಯಾವುದಕ್ಕೆ ಸಿಗರೇಟಿನ ಜಾಹೀರಾತುಗಳು ಆದಾಯದ ಒಂದು ಪ್ರಮುಖ ಮೂಲವಾಗಿದೆಯೋ, ಆ ಪತ್ರಿಕೆಗಳ ಸಂಖ್ಯೆಯನ್ನು ಗಮನಿಸಿದ್ದಲ್ಲಿ, ಸೇದುವಿಕೆಯ ಅಪಾಯವನ್ನು ಬಹಿರಂಗಪಡಿಸುವ ಲೇಖನಗಳ ಸಂಬಂಧಿತ ಮಟ್ಟದ ಕೊರತೆಯು ಆಶ್ವರ್ಯವನ್ನು ಉಂಟುಮಾಡಬಾರದು.
ಇನ್ನೊಂದು ಒತ್ತಡದ ಪಂಗಡವು ವಾಚಕರನ್ನು ಅಥವಾ ವೀಕ್ಷಕರನ್ನು ಒಳಗೊಂಡ ಕ್ಷೇತ್ರವಾಗಿದೆ. ಜನಪ್ರಿಯ ಫ್ರೆಂಚ್ ರೇಡಿಯೋ ಕೇಂದ್ರದ ಮಾಜಿ ನಿರ್ದೇಶಕರಾಗಿದ್ದ ರೆಮಂಡ್ ಕ್ಯಾಸನ್ಟ್ಸ್ ವಿವರಿಸಿದ್ದೇನಂದರೆ, ಆಲಿಸುವವರು ಅತಿ ಸಂಪ್ರದಾಯ ನಿಷ್ಠರಾಗಿರುತ್ತಾರೆ, ಆದುದರಿಂದ ಅವರನ್ನು ಮನಗುಂದಿಸದಂತೆ ಜಾಗ್ರತೆಯನ್ನು ವಹಿಸಬೇಕು. ಹಾಗಾದರೆ ಇದು, ಎಲ್ಲಿ ಒಂದು ಧರ್ಮವು ಪ್ರಾಬಲ್ಯವಾಗಿದೆಯೋ, ಅದರ ರುಚಿಸದ ವಾಸ್ತವಾಂಶಗಳ ಕುರಿತು ಆ ದೇಶದಲ್ಲಿ ಸುಮ್ಮನಾಗಿರುವದು ಇಲ್ಲವೆ ಸೌಮ್ಯವಾಗಿರುವದು ಆಶ್ಚರ್ಯವಾಗಿ ತೋರುತ್ತದೊ?
ಮಾಧ್ಯಮದಲ್ಲಿ ಅವರ ಅಭಿಪ್ರಾಯಗಳಿಗೆ ಹೆಚ್ಚಿನ ಗಮನವನ್ನು ಕೊಡುವದಿಲ್ಲ ಎಂದು ಎಣಿಸುವ ಉಗ್ರಗಾಮಿ ಪಂಗಡಗಳಿಂದ ಯಾ ವ್ಯಕ್ತಿಗಳಿಂದಲೂ ಕೂಡಾ ಒತ್ತಡಗಳು ಹೇರಲ್ಪಡುತ್ತವೆ. ಕೆಲವು ವರ್ಷಗಳ ಹಿಂದೆ ಇಟೆಲಿಯ ಮಾಜಿ ಪ್ರಧಾನ ಮಂತ್ರಿಯಾಗಿದ್ದ ಆಲ್ಡೊ ಮೊರೊರನ್ನು ಭಯೋತ್ಪಾದಕರು ಅಪಹರಿಸಿದಾಗ, ಅವರ ಕೇಳಿಕೆಗಳ ಪೂರ್ಣ ಆವರಿಸುವಿಕೆಯನ್ನು ಟೆಲಿವಿಶನ್ನಲ್ಲಿ, ರೇಡಿಯೋದಲ್ಲಿ ಮತ್ತು ಇಟೆಲಿಯ ವಾರ್ತಾಪತ್ರದಲ್ಲಿ ಕೊಡಬೇಕೆಂದು ಆಗ್ರಹಿಸಿದರು. ಅದೇ ರೀತಿಯಲ್ಲಿ ವಿಮಾನಗಳನ್ನು ಅಪಹರಿಸುವ ಮತ್ತು ಒತ್ತೆಯಾಗಿ ಜನರನ್ನು ತೆಗೆದುಕೊಳ್ಳುವ ಭಯೋತ್ಪಾದಕರು ಟೀವೀಯಲ್ಲಿ ಶೀರ್ಷಿಕೆಯ ವಾರ್ತೆಗಳನ್ನು ಉಂಟುಮಾಡುತ್ತಾರೆ ಮತ್ತು ಅವರು ಅಪೇಕ್ಷಿಸುವ ಖ್ಯಾತಿಯನ್ನು ಹೀಗೆ ಪಡೆದು ಕೊಳ್ಳುತ್ತಾರೆ.
ನೆಲೆಗೊಂಡ ವ್ಯವಸ್ಥೆಗಳನ್ನು ಮತ್ತು ಅಭಿಪ್ರಾಯಗಳನ್ನು ಶಾಶ್ವತಗೊಳಿಸುವ ಅನುವರ್ತಿಗಳೆಂದು ವಾರ್ತಾಗಾರರನ್ನು ಕೆಲವೊಮ್ಮೆ ಆಪಾದಿಸಲಾಗಿದೆ. ಆದರೆ ವಾಚಕರನ್ನು ಅಥವಾ ಆಲಿಸುವವರನ್ನು ಗಳಿಸಲು ಹುಡುಕುವ ಒಂದು ಸಂಸ್ಥೆಯು, ಅವರು ಸೇವೆ ಸಲ್ಲಿಸುವ ಅಧಿಕಾಂಶ ಜನರಿಗೆ ವಿರುದ್ಧವಾಗಿ ಮನೋಭಾವ ಮತ್ತು ಅಭಿಪ್ರಾಯಗಳನ್ನು ಪ್ರಸರಿಸುವದೆಂದು ನಾವು ನಿರೀಕ್ಷಿಸಬಹುದೋ?
ಒಂದು ಸಂಬಂಧಿತ ಸಮಸ್ಯೆಯು ಏನಾಗಿದೆಯೆಂದರೆ ಹೆಚ್ಚಿನ ರಾಷ್ಟ್ರಗಳಲ್ಲಿನ ಬೆಲೆಯೇರಿಕೆಯು ದಿನಪತ್ರಿಕೆಗಳು ವಿಲೀನಗೊಳ್ಳುವಂತೆ ಕಾರಣವಾಗಿದರ್ದಿಂದ, ವಾಸ್ತವವಾದ “ಮುದ್ರಣಾಲಯ ಸಾಮ್ರಾಜ್ಯಗಳು” ಚಿಕ್ಕ ಗುಂಪುಗಳ ಇಲ್ಲವೇ ಒಬ್ಬ ವ್ಯಕ್ತಿಯ ಹಸ್ತದಡಿ ಬಂದಿರುತ್ತವೆ. ಒಂದುವೇಳೆ ಮಾಲಿಕರ ಸಂಖ್ಯೆಯು ನಿರಂತರವಾಗಿ ಕಡಿಮೆಯಾದರೆ, ಇದು ಪ್ರಕಾಶಿಸಲ್ಪಟ್ಟ ಅಭಿಪ್ರಾಯಗಳ ವೈವಿಧ್ಯತೆಗಳನ್ನು ಸೀಮಿತಗೊಳಿಸಬಹುದು.
ಜನಸಾಮಾನ್ಯರ ಮೇಲೆ ಪ್ರಭಾವ
ವಾರ್ತಾ ಮಾಧ್ಯಮಗಳು ಸಾಮಾಜಿಕ ಮೂಲ್ಯತೆಗಳನ್ನು ರೂಪಿತಗೊಳಿಸಲು ಕೂಡಾ ನೆರವಾಗಿವೆ ಎಂಬುದರಲ್ಲಿ ಪ್ರಶ್ನೆಯಿಲ್ಲ. ಕೆಲವೇ ವರ್ಷಗಳ ಹಿಂದೆ ತಿರಸ್ಕರಿಸಲ್ಪಟ್ಟ ನೈತಿಕ ದರ್ಜೆಗಳನ್ನು ಮತ್ತು ಜೀವನ ಶೈಲಿಗಳನ್ನು ಸ್ವೀಕಾರಾರ್ಹವಾದ ರೀತಿಯಲ್ಲಿ ಪರಿಚಯಿಸುವದರಿಂದ ಇವನ್ನು ಮಾಡುತ್ತದೆ.
ಉದಾಹರಣೆಗಾಗಿ, 1980ರ ಆರಂಭದಲ್ಲಿ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾದ ಮಧ್ಯ ಪ್ರಾಯದ ಮನುಷ್ಯನು ಸಾನ್-ಫ್ರಾನ್ಸಿಸ್ಕೊದಿಂದ ದೂರದಲ್ಲಿರದ ಕ್ಯಾಲಿಫೊರ್ನಿಯಾದಲ್ಲಿ ಜೀವಿಸುತ್ತಿದ್ದ ತನ್ನ ತಂದೆಯೊಂದಿಗೆ ಸಲಿಂಗ ಕಾಮದ ಕುರಿತು ಚರ್ಚಿಸಿದನು. ಅವನ ಜೀವನದ ಆರಂಭದಲ್ಲಿಯೇ, ಸಲಿಂಗ ಕಾಮದ ನಡತೆಯು ದಿಗ್ಭಮ್ರೆಗೊಳಿಸಿದೆ ಎಂಬ ತನ್ನ ಮನೋಭಾವವನ್ನು ತಂದೆಯು ತನ್ನ ಮಗನಿಗೆ ತಿಳಿಯಪಡಿಸಿದನು. ಆದರೆ, ನಂತರ, ದಶಕಗಳ ಬಳಿಕ, ವಾರ್ತಾ ಮಾಧ್ಯಮಗಳಿಂದ ಪ್ರಭಾವಿತನಾಗಿ, ಸಲಿಂಗ ಕಾಮವು ಜೀವನ ಶೈಲಿಯ ಒಂದು ಸ್ವೀಕಾರಾರ್ಹವಾದ ಪರ್ಯಾಯ ಸಂಗತಿಯಾಗಿದೆ ಎಂದು ಪ್ರಾಯಸ್ಥ ತಂದೆಯು ಪ್ರತಿಪಾದಿಸಿದನು.
ದಿ ಎನ್ಸೈಕ್ಲೊಪಿಡಿಯಾ ಆಫ್ ಸೊಶಿಯಾಲಜಿ (ಫ್ರೆಂಚ್) ಪ್ರತಿಪಾದಿಸುವದು: “ರೇಡಿಯೋ ಮತ್ತು ಟೆಲಿವಿಶನ್ಗಳು ಉತ್ತಮ ರೀತಿಯಲ್ಲಿ . . . ಹೊಸ ವಿಚಾರಗಳನ್ನು, ನಾವಿನ್ಯತೆಗಳನ್ನು ಅಥವಾ ತೊಂದರೆಗಳನ್ನುಂಟು ಮಾಡುವ ವೃತ್ತಿಯನ್ನು ಪ್ರೋತ್ಸಾಹಿಸುವದು. ಭಾವೋದ್ರೇಕತೆಯ ಸಮಾಚಾರಗಳಿಗೆ ಅಭಿರುಚಿಯ ಕಾರಣದಿಂದ, ಆರಂಭದಿಂದಲೇ ಈ ಮಾಧ್ಯಮಗಳು ಅವುಗಳನ್ನು ಮೇಲಕ್ಕೆತ್ತುತ್ತವೆ ಮತ್ತು ಅವುಗಳ ಪ್ರಾಮುಖ್ಯತೆಯ ಅತಿಶಯೋಕ್ತಿಯನ್ನು ಉಂಟುಮಾಡುತ್ತವೆ.”
ಒಂದು ವೇಳೆ, ನಮಗೆ ನಮ್ಮ ಮೌಲ್ಯತೆಗಳು ಮಾಧ್ಯಮದಿಂದ ರೂಪಿಸಲ್ಪಡುವಂತೆ ಇಷ್ಟವಿಲ್ಲದಿದ್ದರೆ, ಏನು ಮಾಡಸಾಧ್ಯವಿದೆ? ನಾವು ಬೈಬಲಿನಲ್ಲಿರುವ ವಿವೇಕಯುಕ್ತ ಸಲಹೆಯನ್ನು ಅನುಸರಿಸಬಹುದು. ಯಾಕಂದರೆ ಅದರ ದರ್ಜೆಗಳು ಮತ್ತು ನಿಯಮಗಳು ಯಾವುದೇ ಸಮಯದಲ್ಲಿ ಯಾವುದೇ ಸಮಾಜಕ್ಕೆ ಉಪಯಕ್ತವಾಗಿ ಉಳಿದಿವೆ. ಇದಕ್ಕೂ ಹೆಚ್ಚಾಗಿ, ದೇವರ ದರ್ಜೆಗಳಿಗೆ ಹೊಂದಿಕೊಳ್ಳುವದು ಎಷ್ಟು ಪ್ರಾಮುಖ್ಯ ಮತ್ತು ಆಧುನಿಕ ಜಗತ್ತಿನ ಸಾಮಾನ್ಯ ವಿಚಾರಗಳಿಂದ ಅಲ್ಲ ಎಂದು ತಿಳಿಯಲು ಅವುಗಳು ನಮಗೆ ಸಹಾಯಮಾಡುತ್ತವೆ.—ಯೆಶಾಯ 48:17; ರೋಮಾಪುರ 12:2; ಎಫೆಸ 4:22-24.
ಇದಕ್ಕೆ ಸೇರಿಸಿ, ಮಾಧ್ಯಮಗಳಿಗೆ ಸಾಮಾನ್ಯವಾಗಿ ತಪ್ಪಿಸಿಹೋದ ವಾರ್ತೆಗಳ ಪ್ರಾಮುಖ್ಯವಾದ ರೂಪವನ್ನು ಶಾಸ್ತ್ರವಚನಗಳು ವಿವರಿಸುತ್ತವೆ. ಈ ರೂಪವನ್ನು ನಾವು ಇನ್ನೊಂದು ಲೇಖನದಲ್ಲಿ ಪರೀಕ್ಷಿಸೋಣ. (g90 8/22)
[ಪುಟ 7 ರಲ್ಲಿರುವಚಿತ್ರ]
ಉಗ್ರಗಾಮಿ ಚಳವಳಿಗಳು ಅವರು ಬಯಸುವ ಪ್ರಚಾರವನ್ನು ಪಡೆಯುತ್ತಾರೆ
[ಕೃಪೆ]
Photo ANSA