ವಾರ್ತೆಗಳಿಗೆ ಹಸಿದಿರುವ ಒಂದು ಶತಮಾನ
ಜನರು ಯಾವಾಗಲೂ ತಮ್ಮ ಸುತ್ತಲೂ ನಡೆಯುತ್ತಿರುವ ಸಂಗತಿಗಳ ವಾರ್ತೆಗಳನ್ನು ಬಯಸುತ್ತಾರೆ. ಸಂಭವಿಸಿದ ಯಾವುದೇ ಎದ್ದು ಕಾಣುವ ಸಂಗತಿಯನ್ನು ಕೂಡಲೇ ತಿಳಿದು ಕೊಳ್ಳುವಂತೆ ಅವರು ಇಚ್ಛಿಸುತ್ತಾರೆ. ಸಾ.ಶ.ಪೂ. 490ರಲ್ಲಿ ಒಬ್ಬ ಪ್ರಸಿದ್ಧ ವಾರ್ತಾವಾಹಕನಾಗಿದ್ದ ಸೈನಿಕನೊಬ್ಬನು, ಪರ್ಸಿಯನ್ ಸೈನ್ಯಗಳ ಸೋಲುವಿಕೆಯನ್ನು ಪ್ರಕಟಿಸಲು ಸುಮಾರು 25 ಮೈಲುಗಳ ಏಥೇನ್ಸ್ಗೆ ಓಡಿದ್ದನು. ಅವನು ಅಲ್ಲಿ ಆಗಮಿಸಿದಾಗ, ಮ್ಯಾರತನ್ನಲ್ಲಿ ಆದ ವಿಜಯವನ್ನು ಪ್ರಕಟಿಸಿದ ನಂತರ, ಸತ್ತನು.
ಇಂದು ಕೇವಲ ಕೆಲವೇ ಗಂಟೆಗಳ ಅಥವಾ ನಿಮಿಷಗಳ ಮೊದಲು ಸಂಭವಿಸಿದ ಜಗವ್ಯಾಪ್ತ ಘಟನೆಗಳ ವಾರ್ತೆಗಳನ್ನು ಸುಮಾರು 60 ಕೋಟಿ ಟೆಲಿವಿಶನ್ಗಳು ಮತ್ತು 140 ಕೋಟಿ ರೇಡಿಯೋಗಳು ಮನೆಯೊಳಗೆ ತರುತ್ತವೆ. ಕೆಲವು ಘಟನೆಗಳನ್ನು, ಅವುಗಳು ಸಂಭವಿಸುತ್ತಿರುವಾಗಲೇ, ಸಜೀವವಾಗಿ ನೋಡಬಹುದು. ಮತ್ತು ಅನೇಕ ನೂರಾರು ಲಕ್ಷ ವಾರ್ತಾಪತ್ರಗಳು, ಹಾಗೂ ಹತ್ತಾರು ಲಕ್ಷ ಪತ್ರಿಕೆಗಳು, ವಾರ್ತೆಗಾಗಿ ಹಸಿದ ಜಗತ್ತನ್ನು ತೃಪ್ತಿ ಪಡಿಸಲು ನೂರಾರು ಭಾಷೆಗಳಲ್ಲಿ ದಿನನಿತ್ಯವೂ ಛಾಪಿಸಲ್ಪಡುತ್ತವೆ.
550 ಕಡಿಮೆ ವರ್ಷಗಳಷ್ಟು ಹಿಂದೆ, ಜೊಹಾನ್ನೆಸ್ ಗುಟೆನ್ಬರ್ಗ್ನ ಚಲಿಸುವ ವಿಧದ ಮುದ್ರಣಾಲಯವು ಮುದ್ರಿತ ವಾರ್ತೆಗಳ ತೀವ್ರ ಹಬ್ಬುವಿಕೆಗೆ ಸಾಧ್ಯಮಾಡಿತು. ಆರಂಭದ ವಾರ್ತಾಕಾಗದಗಳು, ಹೇಗೂ ಸೀಮಿತ ಚಲಾವಣೆಯಲ್ಲಿ ಇದ್ದವು, ಮತ್ತು ಅವುಗಳ ಬೆಲೆಯು ಹೆಚ್ಚಾಗಿದ್ದುದರಿಂದ, ಕೇವಲ ಶ್ರೀಮಂತರು ಮಾತ್ರವೇ ಆಗಾಗ್ಯೆ ಅವುಗಳಿಗಾಗಿ ಖರ್ಚು ಮಾಡಲು ಶಕ್ತರಾಗಿದ್ದರು.
ಬೇಗನೆ, ಮುದ್ರಣಾಲಯಲದ ಸ್ವಾತಂತ್ರ್ಯವು ಒಂದು ವಾದವಾಗಿ ಪರಿಣಮಿಸಿತು. ಉದಾಹರಣೆಗಾಗಿ, ರೆನೌಡೊಟ್ನ ಗ್ಯಾಜೆಟ್ ಎಂಬುದು ಫ್ರಾನ್ಸಿನ ರಾಜನ ಸಮ್ಮತಿಯೊಂದಿಗೆ, 17ನೆಯ ಶತಕದಲ್ಲಿ ಪ್ರಕಾಶಿಸಲ್ಪಟ್ಟಿತು, ಮತ್ತು ಮುದ್ರಿತವಾದ ಹೆಚ್ಚಿನ ವಾರ್ತೆಯು ಸರಕಾರದ ನಿರ್ದೇಶನದ ಕೆಳಗೆ ಇತ್ತು. ಆ ಸಮಯದ ಕೆಲವು ಪತ್ರಿಕೋದ್ಯಮಿಗಳು ಅವರ ದೇಶದ ಅಧಿಕಾರಿಗಳನ್ನು ಪ್ರತಿಭಟಿಸಲು ಧೈರ್ಯಗೊಂಡರು.
ಇಂದು ವಾರ್ತೆಗಳಿಗಾಗಿ ಹುಡುಕಾಟ
ವಿಶೇಷವಾಗಿ ಯೂರೋಪಿನಲ್ಲಿ ಮತ್ತು ಉತ್ತರ ಅಮೆರಿಕದಲ್ಲಿ, ಪ್ರಾಮುಖ್ಯವಾಗಿ ಮುದ್ರಣಾಲಯಗಳ ಯಾಂತ್ರಿಕತೆ ಮತ್ತು ದೈನಂದಿನ ವಾರ್ತಾ ಪತ್ರಿಕೆಗಳ ಅಧಿಕ ಚಲಾವಣೆಯು, 19ನೆಯ ಶತಮಾನದ ಕೊನೆಯಲ್ಲಿ ವಾರ್ತಾಮಾಧ್ಯಮಗಳ ಸ್ಫೋಟನವನ್ನು ತಂದಿತು.
ವಿದೇಶಗಳಿಗೆ ವಾರ್ತೆಗಳನ್ನು ಹಬ್ಬಲು ಕೂಡಲೇ ಹೊಸ ತಂತ್ರಜ್ಞಾನಗಳು ನಿರ್ದಿಷ್ಟವಾಗಿ ರೇಡಿಯೋವನ್ನು ಉಪಯೋಗಿಸಲಾಯಿತು. ಉದಾಹರಣೆಗಾಗಿ, 1970ರಲ್ಲಿ, ರಶ್ಯಾದ ಕ್ರಾಂತಿಯ ಸಮಯದಲ್ಲಿ ಯುದ್ಧನಾವೆ ಅರೋರಾದ ರೇಡಿಯೋ ನಿಸ್ತಂತುಗಳ ಯಂತ್ರ ಸಲಕರಣೆಯು ಪೆಟ್ರೊಗ್ರಾಡ್ನ (ಈಗ ಲೆನಿನ್ಗ್ರಾಡ್) ನಿವಾಸಿಗಳಿಗೆ ದಂಗೆಯೇಳುವಂತೆ ಪ್ರೇರಿಸಿತ್ತು.
ಎರಡನೆಯ ಜಾಗತಿಕ ಯುದ್ಧದ ಸಮಯದಲ್ಲಿ, ರೇಡಿಯೋವು ನಾಝೀ ಜರ್ಮನಿಗೆ ಉತ್ಕ್ರಾಂತಿಗಾಗಿ ಒಂದು ಶಕ್ತಿಯುತ ಸಾಧನವಾಗಿ ಪರಿಣಮಿಸಿತು. ಆ ಯುದ್ಧದ ಸಮಯದಲ್ಲಿ ಲಂಡನ್ನಲ್ಲಿರುವ ಬಿ.ಬಿ.ಸಿ. (ಬ್ರಿಟಿಶ್ ಬ್ರಾಡ್ಕಾಸ್ಟಿಂಗ್ ಕಾರ್ಪೋರೇಶನ್) ಯೂರೋಪಿನ ಹೆಚ್ಚಿನ ಭಾಗಗಳಿಗೆ ಮತ್ತು ಜಗತ್ತಿಗೆ ಒಕ್ಕೂಟ ಸೇನೆಗಳ ಸಂದೇಶವನ್ನು ಪ್ರಸಾರ ಮಾಡಿತು.
ಆದಾಗ್ಯೂ, ಟೆಲಿವಿಶನ್ನನ್ನು ಎರಡನೆಯ ಜಾಗತಿಕ ಯುದ್ಧದ ಮೊದಲೇ ಪ್ರಯೋಗಿಸಿದ್ದರೂ, ಯುದ್ಧದ ಕಾರಣದಿಂದ ಅದರ ಪ್ರಗತಿಯು ಕುಂದಿತು. ಹೇಗೂ, ಅದು ಕೂಡಲೇ ವಾರ್ತಾ ಮಾಧ್ಯಮವಾಗಿ ವಿಕಸಿತಗೊಂಡಿತು. ಇಂದು, ಟೆಲಿವಿಶನ್ನ ವಾರ್ತಾ ಕಾರ್ಯಕ್ರಮಗಳು ನೂರಾರು ಲಕ್ಷ ಜನರಿಂದ ವೀಕ್ಷಿಸಲ್ಪಡುತ್ತದೆ.
ಇತ್ತೀಚೆಗಿನ ದಶಕಗಳಲ್ಲಿ ಮುದ್ರಣಾಲಯವು ಹಲವು ವಿಶಿಷ್ಟ ಪತ್ರಿಕೆಗಳನ್ನು ತಯಾರಿಸಲು ಆರಂಭಿಸಿದೆ, ಎರಡನೆಯ ಲೋಕಯುದ್ಧದ ನಂತರ, ವಿಮರ್ಶಿಸಲಾದ ವಾರ್ತೆಗಳನ್ನು ವಾರಪತ್ರಿಕೆಗಳು ಪ್ರಕಾಶಿಸಿದವು. ಎಳೆಯವರ, ಸ್ತ್ರೀಯರ, ನಿವೃತ್ತರ, ಕ್ರೀಡಾಪಟುಗಳ ಮತ್ತು ಕೈಯಾಳುಗಳ ಪೂರೈಕೆಗಳನ್ನು ಮಾಡುವ ಪತ್ರಿಕೆಗಳು, ಅದರೊಟ್ಟಿಗೆ ವಾರದ ಟೆಲಿವಿಶನ್ ಪರಾಮರ್ಶೆಗಳು ಹೊರತಾಗಿಯೂ, ಅಧಿಕ ಮಾರಾಟದಲ್ಲಿ ಆನಂದಿಸುತ್ತಿವೆ. ಫ್ರಾನ್ಸಿನಲ್ಲಿ, ಉದಾಹರಣೆಗಾಗಿ, ಸುಮಾರು 200 ಹೊಸ ಪತ್ರಿಕೆಗಳು ಪ್ರತಿವರ್ಷ ಕಾಣಿಸಿಕೊಳ್ಳುತ್ತವೆ.
ಭವಿಷ್ಯತ್ತಿನಲ್ಲಿ ವಾರ್ತೆಗಳು
ಈಗಾಗಲೇ ಅಂಕೆ-ಸಂಖ್ಯೆಗಳ ಮಾಹಿತಿ ಬ್ಯಾಂಕುಗಳಿಗೆ ವಿಡಿಯೋ ಪ್ರದರ್ಶನದ ಕೊನೆಗಳಿಗೆ ಟೆಲಿಕಮ್ಯೂನಿಕೇಶನ್ (ದೂರವಾಣಿ ಸಂಪರ್ಕ) ಜೋಡಣೆಗಳ ಮೂಲಕ ಸಂಪರ್ಕವಿಟ್ಟುಕೊಳ್ಳುವಂತೆ ಸಾಧ್ಯವಾಗಿದೆ. ತಂತಿ ಮತ್ತು ಉಪಗ್ರಹ ವಿಧಾನಗಳು ಈಗ ಕೆಲವು ಟೆಲಿವಿಶನ್ ವಾಹಕಗಳನ್ನು (ಅಮೆರಿಕದಲ್ಲಿರುವಂತೆ) ಒದಗಿಸುವದರಿಂದ ಹಗಲು ರಾತ್ರಿ ವಾರ್ತೆಗಳನ್ನು ಪ್ರಕಟಿಸುತ್ತವೆ ಮತ್ತು ಭವಿಷ್ಯದಲ್ಲಿ ಅಂತರ್-ರಾಷ್ಟ್ರೀಯ ನೆಲೆಯಲ್ಲಿ ಇನ್ನಷ್ಟನ್ನು ತರುವದನ್ನು ಮುಂತಿಳಿಸಿವೆ. ಈ ರೀತಿ, 20-ನೆಯ ಶತಮಾನವನ್ನು ಯೋಗ್ಯವಾಗಿಯೇ ಒಂದು ವಾರ್ತೆಗಳಿಗಾಗಿ ಹಸಿದಿರುವ ಶತಮಾನವೆಂದು ಕರೆಯಬಹುದು. ಆದರೆ, ಈ ವಾರ್ತೆಯು ಯಾವಾಗಲೂ ನಂಬಲರ್ಹವಾಗಿರುತ್ತದೋ? ಸುದ್ದಿಸಮಾಚಾರಗಳ ವಿವಿಧ ಸೇವೆಗಳು ಪ್ರಾಮಾಣಿಕ, ಬಣ್ಣಕಟ್ಟದ ವಾಸ್ತವಿಕ ವಾರ್ತೆಗಳ ಖಾತರಿಯನ್ನು ಕೊಡುತ್ತವೂ? (g90 8/22)
[ಪುಟ 4 ರಲ್ಲಿರುವಚಿತ್ರ]
ಗುಟೆನ್ಬರ್ಗ್ನ ಚಲಿಸುವ ವಿಧಾನದ ಮುದ್ರಣಾಲಯದ ಶೋಧವು ವಾರ್ತೆಗಳನ್ನು ಮತ್ತು ಯೋಚನೆಗಳನ್ನು ಹರಡಿಸುವ ಒಂದು ಹೆಜ್ಜೆಯಾಗಿತ್ತು